Police Bhavan Kalaburagi

Police Bhavan Kalaburagi

Saturday, July 31, 2021

BIDAR DISTRICT DAILY CRIME UPDATE 31-07-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 31-07-2021

 

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 132/2021, ಕಲಂ. 379 ಐಪಿಸಿ :-

ದಿನಾಂಕ 30-07-2021 ರಂದು 1030 ಗಂಟೆಗೆ ಫಿರ್ಯಾದಿ ಜಗನ್ನಾಥ ತಂದೆ ಮಾದಪ್ಪಾ ಸಾಗರ ವಯ: 63 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಹೌಸಿಂಗ ಬೋರ್ಡ ಕಾಲೋನಿ ಹುಮನಾಬಾದ ರವರು ತಮ್ಮ ಮನೆಯಿಂದ ಹ್ಯಾಂಡವಾಶ ಖರೀದಿ ಮಾಡುವ ಕುರಿತು ಹುಮನಾಬಾದ ಅಂಬೇಡ್ಕರ ಚೌಕ ಹತ್ತಿರ ಇರುವ ಒಂದು ಅಂಗಡಿಗೆ 1100 ಗಂಟೆಗೆ ಬಂದು ತನ್ನ ಹಿರೋ ಸ್ಪ್ಲೆಂಡರ್ ಪ್ಲಸ್ ಮೋಟಾರ ಸೈಕಲ ನಂ. ಕೆಎ-32/ಇ.ಕ್ಯೂ-0493, ಚಾಸಿಸ್ ನಂ. MBLHAR082HHC45733, ಇಂಜಿನ್ ನಂ. HA10AGHHCA9777, ಬಣ್ಣ: ಸಿಲ್ವರ್, ಮಾದರಿ 2017 ಹಾಗೂ ಅ.ಕಿ 33,000/- ರೂ. ನೇದನ್ನು ನಿಲ್ಲಿಸಿ ಅಂಗಡಿಯಲ್ಲಿ ಹೋಗಿ ಹ್ಯಾಂಡವಾಶ ಖರೀದಿ ಮಾಡಿಕೊಂಡು ಮರಳಿ ಬಂದು ತಾನು ನಿಲ್ಲಿಸಿದ ತನ್ನ ಮೋಟಾರ ಸೈಕಲ  ನೋಡಲು ಅದು ಇರಲಿಲ್ಲ, ಫಿರ್ಯಾದಿಯು ಗಾಬರಿಯಾಗಿ ಎಲ್ಲಾಕಡೆಗೆ ಹುಡಕಾಡಿ ನೋಡಲು ಎಲ್ಲಿಯೂ ಪತ್ತೆಯಾಗಿರುವುದಿಲ್ಲ, ಸದರಿ ಮೋಟಾರ ಸೈಕಲನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಅರ್ಜಿ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

 

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 85/2021, ಕಲಂ. 32, 34 ಕೆ.ಇ ಕಾಯ್ದೆ :-

ದಿನಾಂಕ 30-07-2021 ರಂದು ಹಳ್ಳಿ ಶಿವಾರದಲ್ಲಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಸಾಯಿ ಪ್ಯಾರೇಡೈಸ ಲಾಡ್ಜಿನ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕುಳಿತು ಸರಕಾರದಿಂದ ಯಾವುದೇ ಪರವಾನಗಿ ಇಲ್ಲದೇ ಅನಧೀಕೃತವಾಗಿ ತಮ್ಮ ಹತ್ತಿರ ಸರಾಯಿ ಇಟ್ಟಿಕೊಂಡು ಸಾರಾಯಿ ಮಾರಾಟ ಮಾಡುತ್ತಿದ್ದಾರೆಂದು ಕೀರಣ ಪಿ,ಎಸ, (ಕಾಸು) ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಖಾನಾಪೂರ ಕ್ರಾಸ ಹತ್ತಿರ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲು ಸಾಯಿ ಪ್ಯಾರೆಡೈಸ್ ಲಾಡ್ಜಿನ ಹತ್ತಿರ ರಾಷ್ಟ್ರೀಯ ಹೆದ್ದಾರಿ 65 ನೇದರ ಪಕ್ಕದಲ್ಲಿ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಆರೋಪಿತರಾದ 1) ಸಂಜುಕುಮಾರ ತಂದೆ ಸಿದ್ದಣ್ಣಾ ಚಿನ್ನಕೇರೆ ವಯ: 38 ವರ್ಷ, ಜಾತಿ: ಕುರುಬ, ಸಾ: ಧೂಮ್ಮನಸೂರ, ತಾ: ಹುಮನಾಬಾದ  ಹಾಗೂ 2) ಜೀತು ತಂದೆ ಶಿವಾಜಿ ಮಾಚನಾಳೆ  ವಯ: 27 ವರ್ಷ, ಜಾತಿ: ಮರಾಠಾ, ಸಾ: ಗುಂಡೂರು, ತಾ: ಬಸವಕಲ್ಯಾಣ ಇವರಿಬ್ಬರು ಒಂದು ಮೋಟಾರ ಸೈಕಲ ಮೇಲೆ ಕಾಟನಿನಲ್ಲಿ ಸರಾಯಿ ಇಟ್ಟುಕೊಂಡು ಜನರಿಗೆ ಮಾರಾಟ ಮಾಡುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ ಸದರಿ ಆರೋಪಿತರ ಮೇಲೆ ದಾಳಿ ಮಾಡಿ ಅವರಿಗೆ ಹಿಡಿದು ಅವರ ವಶದಲ್ಲಿದ್ದ ಕಾಟನಗಳಲ್ಲಿನ ಸರಾಯಿಯನ್ನು ಪರಿಶೀಲಿಸಿ ನೋಡಲು ಅದರಲ್ಲಿ 1) ಕಿಂಗ್ ಫಿಶರ್ ಪ್ರೀಮಿಯಂ ಬಿಯರ್ 650 ಎಮ್.ಎಲ್ ವುಳ್ಳ 09 ಬಾಟಲಗಳು ಬೆಲೆ 1,440/- ರೂ., 2) ಕಿಂಗ್ ಫಿಶರ್ ಸ್ಟ್ರಾಂಗ್ ಬಿಯರ್ 650 ಎಮ್.ಎಲ್ ವುಳ್ಳ 10 ಬಾಟಲಗಳು ಬೆಲೆ 1,600/- ರೂ. & 3) ಒರಿಜಿನಲ್ ಚಾಯಿಸ್ 90 ಎಮ್.ಎಲ್ ವುಳ್ಳ 35 ಟೇಟ್ರಾ ಪ್ಯಾಕೇಟಗಳು ಬೆಲೆ 1,229/- ರೂ. ಇದ್ದು, ಸದರಿ ಮೋಟಾರ ಸೈಕಲ್ ಸ್ಲೆಂಡರ ಪ್ಲಸ್ ಕೆಎ-39/ಆರ್-0024 ಅ.ಕಿ 25,000/- ರೂ. ಇರುತ್ತದೆ, ನಂತರ ಸದರಿ ಆರೋಪಿತರಿಗೆ ಪುನಃ ನಿಮ್ಮ ಹತ್ತಿರ ಸರಕಾರದಿಂದ ಮಾರಾಟ ಮಾಡಲು ಪರವಾನಗಿ ಪಡೆದಿರುವ ಬಗ್ಗೆ ವಿಚಾರಣೆ ಮಾಡಲು ತಮ್ಮ ಹತ್ತಿರ ಯಾವುದೇ ಪರವಾನಗಿ ಇರುವುದಿಲ್ಲ ನಾವು ಇದೇ ಮೋಟಾರ ಸೈಕಲ ಮೇಲೆ ಸರಾಯಿ ತೆಗೆದುಕೊಂಡು ಬಂದು ಅನಧೀಕೃತವಾಗಿ ಸರಾಯಿ ಮಾರಾಟ ಮಾಡುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದರಿಂದ,  ಲ್ಲಾ ಸರಾಯಿ ಬಾಟಲಗಳನ್ನು ಹಾಗೂ ಮೋಟಾರ್ ಸೈಕಲನ್ನು ತಾಬೆಗೆ ತೆಗದುಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Friday, July 30, 2021

BIDAR DISTRICT DAILY CRIME UPDATE 30-07-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 30-07-2021

 

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 83/2021, ಕಲಂ. 379 ಐಪಿಸಿ :-

ದಿನಾಂಕ 29-07-2021 ರಂದು 1245 ಗಂಟೆಯಿಂದ 0110 ಗಂಟೆಯ ಅವಧಿಯಲ್ಲಿ ಬೀದರ ನಗರದ ದೇವಿ ಕಾಲೋನಿಯಲ್ಲಿ ನಿಲ್ಲಿಸಿದ ಫಿರ್ಯಾದಿ ರಾಜು ತಂದೆ ಶ್ರೀನಿವಾಸರಾವ ಸಾ: ಗುರುನಾನಕ ಕಾಲೋನಿ ಬೀದರ ರವರ ಇನ್ನೊವಾ ಕಾರಿನ ಡೊರಿನ ಗಾಜನ್ನು ಒಡೆದು ಕಾರಿನಲ್ಲಿಟ್ಟಿದ್ದ 1) 45 ಗ್ರಾಂ ತೂಕದ ಎರಡು ಬಂಗಾರದ ಬಳೆ .ಕಿ 1,80,000/- ರೂ., 2) 40 ಗ್ರಾಂ ತೂಕದ ಒಂದು ಬಂಗಾರದ ಕೊರಳಲ್ಲಿನ ಚೈನ .ಕಿ 1,60,000/- ರೂ., 3) 25 ಗ್ರಾಂ ತೂಕದ ಒಂದು ಬಂಗಾರದ ನೆಕ್ಲೆಸ್ .ಕಿ 1,00,000/- ರೂ., 4) 5 ಗ್ರಾಂ ತೂಕದ ಒಂದು ಬಂಗಾರದ ಸುತ್ತುಂಗುರ .ಕಿ 20,000/- ರೂ., 5) 70 ಗ್ರಾಂ ಬಂಗಾರದ ಕಡಗ .ಕಿ 2,80,000/- ರೂ., 6) 2 ಕಿ.ಗ್ರಾಂ ಬೆಳ್ಳಿಯ ಸಾಮಾನುಗಳು .ಕಿ 1,00,000/- ರೂ. ಹೀಗೆ ಒಟ್ಟು 18.5 ಗ್ರಾಂ ಬಂಗಾರದ ಆಭರಣ ಹಾಗೂ 2 ಕಿಲೊ ಗ್ರಾಂ ಬೆಳ್ಳಿಯ ಸಾಮಾನುಗಳು (ಎರಡು ತಟ್ಟೆಗಳು, ಎರಡು ಸಮಯಗಳು, ಎರಡು ಕುಂಕುಮ ಡಬ್ಬಿ, ಮೂರು ಗ್ಲಾಸ, ಎರಡು ಚಿಕ್ಕ ದೀಪ, ಒಂದು ಹೂವಿನ ಬುಟ್ಟಿ, ಒಂದು ಅತರದಾನ) ಎಲ್ಲಾ ಸೇರಿ ಅಂದಾಜು 8,40,000/- ರೂ. ಬೆಲೆವುಳ್ಳದನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 84/2021, ಕಲಂ. 336 ಜೊತೆ 34 ಐಪಿಸಿ :-

ದಿನಾಂಕ 29-07-2021 ರಂದು ಮಂಠಾಳ ಕ್ರಾಸ ನಾಟಕರ ಧಾಬಾ ಹತ್ತಿರ ಮಾನವ ಜೀವಕ್ಕೆ ಹಾಗೂ ದೈಹಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ರೀತಿಯಲ್ಲಿ ಬೈಯೋ ಡೀಸಲ್ ಒಂದು ವಾಹನದಿಂದ ಮತ್ತೊಂದು ವಾಹನಕ್ಕೆ ಹಾಕುತ್ತಿದ್ದಾರೆಂದು ಕೀರಣ ಪಿ.ಎಸ. (ಕಾಸು) ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಮಂಠಾಳ ಕ್ರಾಸ್ ಹತ್ತಿರ ಇರುವ ನಾಟಕರ ಧಾಬಾದ ಹತ್ತಿರ ಹೋಗಿ ನೋಡಲು ಧಾಬಾದ ಹಿಂದುಗಡೆ ಒಂದು ಟ್ಯಾಂಕರ ಇದ್ದು, ಒಂದು ಅಪ್ಪಿ ಆಟೋ, ಒಂದು ಬುಲೇರೋ ವಾಹನಗಳು ಇದ್ದು ಅಲ್ಲಿ 5-6 ಜನರು ಟ್ಯಾಂಕರನಿಂದ ಬುಲೇರೋ ವಾಹನದಲ್ಲಿದ್ದ ಡಿಸೇಲ ತಗೆಯುವ ಮಷೀನ ಸಹಾಯದಿಂದ ಆಟೋದಲ್ಲಿರುವ ಕ್ಯಾನಗಳಲ್ಲಿ ಬೈಯೋ ಡಿಸೇಲ್ ಹಾಕುವದನ್ನು ನೋಡಿ ಖಚಿಸಿ ಪಡಿಸಿಕೊಂಡು ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ ಹೆಸರು ವಿಚಾರಿಸಲಾಗಿ 1) ಅಮೂಲ ತಂದೆ ಗೋಪಾಲ ನರಹರಿ ವಯ: 30 ವರ್ಷ, ಜಾತಿ: ರೆಡ್ಡಿ, ಸಾ: ಚಂಡಕಾಪೂರ, 2) ಅಕ್ರಮಶೇಕ ತಂದೆ ಜಾನಿಮಿಯ್ಯಾ ಮೋಹಿರಿಲ್ ವಯ: 45 ವರ್ಷ, ಜಾತಿ: ಮುಸ್ಲಿಂ, 3) ಮಹೇಬೂಬ ತಂದೆ ಅಜ್ಗರಮಿಯ್ಯಾ ಶೇಕ ವಯ: 41 ವರ್ಷ, ಜಾತಿ: ಮುಸ್ಲಿಂ, 4) ಮಹೇಮೂದ ತಂದೆ ಗಫೂರ ಪಟೇಲ ವಯ: 45 ವರ್ಷ, ಜಾತಿ: ಮುಸ್ಲಿಂ, 5) ಭದ್ರೋದ್ದಿನ ತಂದೆ ಅಬ್ಬಾಸ ಅಲಿ ಜಮಾದಾರ ವಯ: 43 ವರ್ಷ, ಜಾತಿ: ಮುಸ್ಲಿಂ 4 ಜನ ಸಾ: ಖಡಕವಾಡಿ ಮಂಠಾಳ ಅಂತಾ ತಿಳಿಸಿದರು ನಂತರ ಅಮೂಲ ಇತನಿಗೆ ಟ್ಯಾಂಕರ ಮಾಲಿಕರು ಯಾರು ಮತ್ತು ಇದರಲ್ಲಿಗ ಎಷ್ಟು ಡಿಸೇಲ ಇರುತ್ತದೆ ಮತ್ತು ಬೈಯೋ ಡಿಸೇಲಿಗೆ ಸಂಬಂಧಿಸಿದ ದಾಖಲಾತಿಗಳು ಹಾಜರುಪಡಿಸುವಂತೆ ಸೂಚಿಸಿದಾಗ ಅಮೂಲ ಇತನು ತಿಳಿಸಿದ್ದೆನೆಂದರೆ ಬೈಯೋ ಡಿಸೇಲ ಟ್ಯಾಂಕರದ ಮಾಲಿಕರು ಭೀಮಾಶಂಕರ ಲೊಡ್ಡೆ ಸಾ: ಮಂಠಾಳ ರವರು ಇರುತ್ತಾರೆ ಮತ್ತು ಟ್ಯಾಂಕರನಲ್ಲಿ ಅಂದಾಜು 5000-6000 ಲೀಟರ ಮಧ್ಯದಲ್ಲಿ ಇರಬಹುದು ಹಾಗೂ ಬೈಯೋ ಡಿಸೇಲ ಸಂಬಂಧಪಟ್ಟ ದಾಖಲಾತಿಗಳು ಭೀಮಾಶಂಕರ ರವರ ಹತ್ತಿರ ಇರುತ್ತವೆ ಅಂತಾ ತಿಳಿಸಿದರು, ನಂತರ ಬೈಯೋ ಡಿಸೇಲ್ ಇದ್ದ ಟ್ಯಾಂಕರ್ ನಂ. ಎಮ್.ಹೆಚ್-46 ಎಫ್-2975 ಅದರಲ್ಲಿ 5500 ಲೀಟರ ಬೈಯೋ ಡಿಸೇಲ್ ಅ.ಕಿ 3,68,500/- ರೂ ಹಾಗೂ ಲಾರಿ ಅ.ಕಿ 12,00,000/- ರೂ ಮತ್ತು ಬುಲೇರೋ ವಾಹನದ ನಂ. ಕೆಎ-33/9906 ನೇದನ್ನು ಪರಿಶೀಲಸಿ ನೋಡಲಾಗಿ ಒಂದು ಡಿಸೇಲ ತೆಗೆಯುವ ಮಷೀನ ಮತ್ತು ನಾಲ್ಕು ಖಾಲಿ ಕ್ಯಾನಗಳು ಇದ್ದವು, ಸದರಿ ಬುಲೇರೊ ವಾಹನದ ಅ.ಕಿ 3,00,000/- ರೂ ಮತ್ತು ಡಿಸೇಲ್ ತಗೆಯುವ ಮಸೀನಿನ ಅ.ಕಿ 40,000/- ರೂ. ಹಾಗೂ ಅಪ್ಪಿ ಆಟೋವನ್ನು ಪರೀಶಿಲನೆ ಮಾಡಿ ನೋಡಲಾಗಿ ಆಟೋದ ನಂ. ಕೆಎ-38/9572 ಅ.ಕಿ 1,00,000/- ರೂ ಮತ್ತು ಅದರಲ್ಲಿ ಒಟ್ಟು 12 ಕ್ಯಾನಗಳು ಇದ್ದು ಅ.ಕಿ 23,450/- ರೂ. ಉಳಿದ ಐದು ಕ್ಯಾನಗಳು ಮತ್ತು ಬುಲೆರೋ ವಾಹನದಲ್ಲಿ 4 ಖಾಲಿ ಕ್ಯಾನಗಳ ಅ.ಕಿ 900/- ರೂ. ಇರುತ್ತದೆ, ಕಾರಣ ಆರೋಪಿತರು ಬೈಯೋ ಡಿಸೇಲನ್ನು ಒಂದು ವಾಹನದಿಂದ ಮತ್ತೊಂದು ವಾಹನಕ್ಕೆ ಯಾವುದೇ ಸುರಕ್ಷತೆ ಕ್ರಮಕೈಗೊಳ್ಳದೇ ಮಾನವ ಜೀವಕ್ಕೆ ಹಾಗೂ ದೈಹಿಕ ಸುರಕ್ಷತೆಗೆ ಅಪಾಯ ಮಾಡುವ ರಿತಿಯಲ್ಲಿ ಬೈಯೋ ಡಿಸೇಲ ಹಾಕುತ್ತಿರುವುದರಿಂದ ಸದರಿ ಎಲ್ಲಾ ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 135/2021, ಕಲಂ. 498(ಎ), 323, 324, 504, 506 ಐಪಿಸಿ :-

ಫಿರ್ಯಾದಿ ಅಶ್ವಿನಿ ಗಂಡ ಸಂತೋಷ ಜಮದಾರ ವಯ: 20 ವರ್ಷ, ಜಾತಿ: ಕೊಳಿ, ಸಾ: ವಳಂಡಿ, ಸದ್ಯ: ಬಸವನಗರ ಭಾಲ್ಕಿ ರವರಿಗೆ 2 ವರ್ಷದ ಹಿಂದೆ ಸಚಿನ ತಂದೆ ಸಂತೋಷ ಜಮದಾರ ಸಾ: ವಳಂಡಿ, ತಾ: ಉದಗೀರ ಇವನಿಗೆ ಕೊಟ್ಟು ಮದುವೆ ಮಾಡಿ ಕೊಟ್ಟಿರುತ್ತಾರೆ, ಮದುವೆ ಆದ ಮೆಲೆ ಒಂದು ವರ್ಷ ಚೆನ್ನಾಗಿದ್ದು, ಸದ್ಯ 10 ತಿಂಗಳ ಒಬ್ಬ ಗಂಡು ಮಗನಿರುತ್ತಾನೆ, ಗಂಡ ಆಗಾಗ ಫಿರ್ಯಾದಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ ಕಿರುಕುಳ ಕೊಟ್ಟು ಕೈಯಿಂದ ಹೊಡೆ ಬಡೆ ಮಾಡುತ್ತಿರುತ್ತಾನೆ, ಹಾಗೆಯೇ ನೀನು ಚೆನ್ನಾಗಿಲ್ಲಾ, ಅಡಿಗೆ ಮಾಡಲು ಬರುವುದಿಲ್ಲ ಅಂತಾ ತವರು ಮನೆಗೆ  ಕಳುಹಿಸಿ ಕೊಟ್ಟಿರುತ್ತಾನೆ. ಈಗ ಫಿರ್ಯಾದಿಯು ಒಂದು ತಿಂಗಳಿಂದ ತನ್ನ ತವರು ಮನೆ ಬಸವನಗರ ಕಲವಾಡಿಯಲ್ಲಿ ಬಂದು ವಾಸವಾಗಿದ್ದು ಇರುತ್ತದೆ, ಹೀಗಿರುವಾಗ ದಿನಾಂಕ 16-07-2021 ರಂದು ಫಿರ್ಯಾದಿಯು ಬಸವನಗರ ಮನೆಯಲ್ಲಿರುವಾಗ ಗಂಡ ಸಚಿನ ಇತನು ತವರು ಮನೆಗೆ ಬಂದು ಜಗಳ ತೆಗೆದು ಬೈಯುತ್ತಿರುವಾಗ ಫಿರ್ಯಾದಿಯ ತಂದೆಯವರು ಎಕೆ? ಬೈಯುತ್ತಿದಿ ಅಂತಾ ಕೇಳಲು ನೀನು ಏನು ಕೇಳತ್ತಿ ಅಂತಾ ಅವಾಚ್ಯವಾಗಿ ಬೈದು ಬಡಿಗೆಯಿಂದ ತಂದೆಗೆ ಎಡಗೈ ಮೇಲೆ ಹೋಡೆದು ಗಾಯ ಮಾಡಿದಾಗ ಫಿರ್ಯಾದಿ ಹಾಗೂ ಫಿರ್ಯಾದಿಯ ತಾಯಿ ಶಕುಂತಲಾ ಜಗಳ ನೋಡಿ ಬಿಡಿಸಿಕೊಂಡಿದ್ದು ಇರುತ್ತದೆ, ನಂತರ ತಂದೆಯು ಭಾಲ್ಕಿ ಸರ್ಕಾರಿ ಆಸ್ಪತ್ರೆಗೆ ಬಂದು ಪ್ರಥಮ ಚಿಕಿತ್ಸೆ ಪಡೆದು ನಂತರ ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದ್ದು ಇರುತ್ತದೆ, ನಂತರ ದಿನಾಂಕ 29-07-2021 ರಂದು ಗಂಡ ಬಸವನಗರ ಕಲವಾಡಿಗೆ ಬಂದು ನಿಮ್ಮಪ್ಪನಿಗೆ ಹೊಡೆದಿರುತ್ತೇನೆ ಇಂದು ನಿನಗೆ ಕೊಂದು ಬಿಡುತ್ತೇನೆ ಅಂತ ಕೂದಲು ಹಿಡಿದು ಕೈಯಿಂದ ಹೊಡೆಯುತ್ತಿರುವಾಗ ತಂದೆ ಹಾಗೂ ಅಣ್ಣ ಹಾಗೂ ಮನೆ ಪಕ್ಕದ ಮನೆಯವರು ಹಾಗೂ ಅಣ್ಣನ ಸ್ನೇಹಿತರು ಮತ್ತು ನಿತೇಶ ತಂದೆ ಸೂರ್ಯಕಾಂತ ಕಾಟೆ ಸಾ: ಹಳೇ ಭಾಲ್ಕಿ  ರವರು ಜಗಳ ನೋಡಿ ಬಿಡಿಸಿಕೊಂಡಿರುತ್ತಾರೆ, ಗಂಡ ಸಚೀನ ಇವನು ಮನೆಯಿಂದ ಹೋಗುವಾಗ ನಿನ್ನನ್ನು ಕೊಲೆ ಮಾಡದೇ ಬಿದುವುದಿಲ್ಲಾ ಅಂತ ಜೀವ ಬೇದರಿಕೆ ಹಾಕಿ ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.