Police Bhavan Kalaburagi

Police Bhavan Kalaburagi

Monday, April 20, 2020

BIDAR DISTRICT DAILY CRIME UPDATE 20-04-2020



ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 20-04-2020

ಮಾರ್ಕೇಟ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 24/2020 ಕಲಂ 379 ಐಪಿಸಿ :-

ದಿನಾಂಕ 19-04-2020 ರಂದು 1130 ಗಂಟೆಗೆ ಶ್ರೀ ಶರಣಪ್ಪಾ ತಂದೆ ವೈಜಿನಾಥ ಜೊನ್ನಿಕೇರಿ ಸಾ;ಅಕ್ಕಮಹಾದೇವಿ ಕಾಲೋನಿ ಹಾರೂರಗೇರಿ ಬೀದರ ರವರು ನೀಡಿದ ದೂರಿನ ಸಾರಾಂಶವೆನೆಂದರೆ ಇವರು ತಮ್ಮ ಸ್ಪ್ಲೆಂಟರ್ ದ್ವಿಚಕ್ರವಾಹನದ ಮೇಲೆ ದಿನಾಂಕ 09-03-2020 ರಂದು ಸಾಯಂಕಾಲ 1700 ಗಂಟೆಯ ಸುಮಾರಿಗೆ ಬೀದರ ನಗರಸಭೆ ಕಛೇರಿಗೆ ಹೋಗಿ   ದ್ವಿಚಕ್ರವಾಹನವನ್ನು ಕಛೇರಿಯ ಆವರಣದಲ್ಲಿರುವ ವಾಹನಗಳು ನಿಲ್ಲಿಸುವ ಸ್ಥಳದಲ್ಲಿ ದ್ವಿಚಕ್ರವಾಹನ ನಿಲ್ಲಿಸಿ ಕಛೇರಿಗೆ ಹೋಗಿ  ಮರಳಿ ಸಾಯಂಕಾಲ 1715 ಗಂಟೆಯ ಸುಮಾರಿಗೆ ಕಛೇರಿಯಿಂದ ಹೊರಗೆ ಬಂದು ನೋಡಲಾಗಿ,   ದ್ವಿಚಕ್ರವಾಹನ ಇರಲಿಲ್ಲಾ.   ದ್ವಿಚಕ್ರವಾಹನವನ್ನು ದಿನಾಂಕ 09-03-2020 ರಂದು 1700 ಗಂಟೆಯಿಂದ 1715 ಗಂಟೆಯ ಅವಧಿಯಲ್ಲಿ ಯಾರೂ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು  ಕಳವು ಅದ ದ್ವಿಚಕ್ರವಾಹನದ ವಿವರ ಈ ಕೆಳಗಿನಂತೆ ಇರುತ್ತದೆ. 1) ಹಿರೊ ಸ್ಪಲೆಂಡರ್ ಪ್ಲಸ್ ದ್ವಿಚಕ್ರವಾಹನ.ನಂ.ಕೆ.ಎ-38-ಯು-1758 2) ಚೆಸ್ಸಿ.ನಂ. ಎಮ್ಬಿಎಲ್ಎಚ್ಎ10ಸಿಜಿಜಿಹೆಚ್ಎಮ್24409 3) ಇಂಜಿನ್.ನಂ. ಹೆಚ್ಎ10ಇಆರ್ಜಿಎಚ್ಎಮ್25730 ಕಪ್ಪು ಬಣ್ಣದು ಇರುತ್ತದೆ ಅಂತಾ ದಿ: 19-04-2020 ರಂದು ಠಾಣೆಗೆ ಹಾಜರಾಗಿ ದೂರು ನಿಡಿದ್ದರಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.


ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 48/2020 ಕಲಂ 87 ಕೆಪಿ ಕಾಯ್ದೆ :-

ದಿನಾಂಕ:19/04/2020 ರಂದು 10:00 ಗಂಟೆಗೆ ನಾನು ಸುನೀಲ್ಕುಮಾರ ಪಿ.ಎಸ್.ಐ (ಕಾ & ಸೂ) ಬಸವಕಲ್ಯಾಣ ನಗರ ಠಾಣೆಯಲ್ಲಿರುವಾಗ ಬಸವಕಲ್ಯಾಣ ನಗರದ ತ್ರೀಪೂರಾಂತ ಎಸ್.ಬಿ ಐ ಬ್ಯಾಂಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಗುಂಪಾಗಿ ಕುಳಿತು ಕೊಂಡು ಹಣ ಹಚ್ಚಿ ಪಣ ತೋಟ್ಟು ಇಸ್ಪಿಟ್ ಎಲೆಗಳ ಅಂದರ ಬಾಹರ್ ನಸಿಬಿನ ಜೂಜಾಟವನ್ನು ಆಡುತ್ತಿದ್ದಾರೆ ಎಂದು ಪೋನ್ ಮುಖಾಂತರ ಖಚಿತ ಭಾತ್ಮಿಯನ್ನು ತಿಳಿದು ಬಂದ ಮೇರೆಗೆ  ಸಿಬ್ಬಂದಿ ಮತ್ತು ಪಂಚರೊಂದಿಗೆ ಬಸವಕಲ್ಯಾಣ ನಗರದ ತ್ರೀಪೂರಾಂತ ಎಸ್.ಬಿ.ಐ ಬ್ಯಾಂಕ್ ಹಿಂದುಗಡೆ ರ ಸಾರ್ವಜನಿಕ ಸ್ಥಳಕ್ಕೆ ಹೋಗಿ ನೋಡಿದಾಗ  7 ಜನರು ಗುಂಪಾಗಿ ಕುಳಿತು ಇಸ್ಪಿಟ್ ಎಲೆಗಳ ಅಂದರ ಬಾಹರ ನಸೀಬಿನ ಜೂಜಾಟವನ್ನು ಹಣ ಹಚ್ಚಿ ಪಣ ತೊಟ್ಟು ಆಡುತ್ತಿರುವುದನ್ನು ನೋಡಿ ನಡೆದು ಕೊಂಡು ಹೋಗಿ ಸಮಯ 12:00 ಗಂಟೆಗೆ   ದಾಳಿಮಾಡಿ ಹಿಡಿದುಕೊಂಡು ಸಾಲಾಗಿ ನಿಲ್ಲಿಸಿ ಮೊದಲನೆಯವನಿಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು1] ಪ್ರವೀಣ ತಂದೆ ಸೂರ್ಯಕಾಂತ ಲಾಡೆ ವಯಸ್ಸು:24ವರ್ಷ ಜಾತಿ:ಎಸ್ಸಿ ಮಾದಿಗಾ ಉ:ಕೂಲಿಕೆಲಸ ಸಾ:ಧರ್ಮಪ್ರಕಾಶಗಲ್ಲಿ ಬಸವಕಲ್ಯಾಣ ಎಂದು ತಿಳಿಸಿದಾಗ ಇವನ ಅಂಗ ಶೋಧನೆ ಮಾಡಲು ಅವನ ಅಧೀನದಿಂದ ನಗದು ಹಣ 3100/-ರೂ ಸಿಕ್ಕ್ಕಿರುತ್ತವೆ,2] ಎರಡನೆಯವನಿಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ತೌಶಿಫ್ ತಂದೆ ಅಬ್ದುಲ್ಖಾದರ ಸೋಫವಾಲೆ ವಯಸ್ಸು:21ವರ್ಷ ಜಾತಿ:ಮುಸ್ಲಿಂ ಉ:ಕೂಲಿಕೆಲಸ ಸಾ:ಪಾಶಪೂರ ಬಸವಕಲ್ಯಾಣ ಎಂದು ತಿಳಿಸಿದಾಗ ಇವನ ಅಂಗ ಶೋಧನೆ ಮಾಡಲು ಅವನ ಅಧಿನದಿಂದ ನಗದು ಹಣ 2300/-ರೂ ಸಿಕ್ಕ್ಕಿರುತ್ತವೆ,3] ಮೂರನೆಯವನಿಗೆ ಹೆಸರುಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಗಣೇಶ ತಂದೆ ಭಾಸ್ಕರರಾವ ಭೋಸ್ಲೆ ವಯಸ್ಸು:31ವರ್ಷ ಜಾತಿ:ಮರಾಠ ಉ:ವ್ಯಾಪಾರ ಸಾ:ಸವರ್ೋದಯ ಕಾಲೋನಿ ಬಸವಕಲ್ಯಾಣ ಎಂದು ತಿಳಿಸಿದಾಗ ಇವನ ಅಂಗ ಶೋಧನೆ ಮಾಡಲು ಅವನ ಅಧೀನದಿಂದ ನಗದು ಹಣ 3000/-ರೂ ಸಿಕ್ಕ್ಕಿರುತ್ತವೆ, 4]ನಾಲ್ಕನೆಯವನಿಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಮಂಜುನಾಥ ತಂದೆ ವೆಂಕಟರಾವ ವಲ್ಲೇಪೂರೆ ವಯಸ್ಸು:33ವರ್ಷ ಜಾತಿ:ಎಸ್.ಸಿ ವಡ್ಡರ ಉ:ವ್ಯಾಪಾರ ಸಾ:ನಿಟ್ಟೂರ ತಾ:ಭಾಲ್ಕಿ ಸದ್ಯ:ಆದರ್ಶ ಕಾಲೋನಿ ಬಸವಕಲ್ಯಾಣ ಎಂದು ತಿಳಿಸಿದಾಗ ಇವನ ಅಂಗ ಶೋಧನೆ ಮಾಡಲು ಅವನ ಅಧೀನದಿಂದ ನಗದು ಹಣ 3200/-ರೂ ಸಿಕ್ಕ್ಕಿರುತ್ತವೆ,5] ಐದನೆಯವನಿಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಸುರೇಶ ತಂದೆ ಮಲ್ಲಣ್ಣಾ ರಾಂಪೂರೆ ವಯಸ್ಸು:42ವರ್ಷ ಜಾತಿ:ಲಿಂಗಾಯತ್ ಉ;ಎಲೇಕ್ಟ್ರಿಷನ್ ಕೆಲಸ ಸಾ:ಲಾಲತಾಲಬ ಬಸವಕಲ್ಯಾಣ ಎಂದು ತಿಳಿಸಿದಾಗ ಇವನ ಅಂಗ ಶೋಧನೆ ಮಾಡಲು ಅವನ ಅಧೀನದಿಂದ ನಗದು ಹಣ 2900/-ರೂ ಸಿಕ್ಕ್ಕಿರುತ್ತವೆ 6]ಆರನೆಯವನಿಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಉಮರ ತಂದೆ ಗನಿ ಮಾಮು ವಯಸ್ಸು:24ವರ್ಷ ಜಾತಿ:ಮುಸ್ಲಿಂ ಉ:ವಿ ಕೂಲಿಕೆಲಸ ಸಾ:ಕಾಟೆವಾಡಿ ಬಸವಕಲ್ಯಾಣ ಎಂದು ತಿಳಿಸಿದಾಗ ಇವನ ಅಂಗ ಶೋಧನೆ ಮಾಡಲು ಅವನ ಅಧೀನದಿಂದ ನಗದು ಹಣ 2500/-ರೂ ಸಿಕ್ಕ್ಕಿರುತ್ತವೆ ಮತ್ತು 7] ಏಳನಿಯವನಿಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಸುನೀಲ್ ತಂದೆ ಸಂಗಮನಾಥ ವಕಾರೆ ವಯಸ್ಸು:28ವರ್ಷ ಜಾತಿ:ಲಿಂಗಾಯತ್ ಉ:ಕೂಲಿಕೆಲಸ ಸಾ:ಹಿರೆಮಠ ಕಾಲೋನಿ ಬಸವಕಲ್ಯಾಣ ಎಂದು ತಿಳಿಸಿದಾಗ ಇವನ ಅಂಗ ಶೋಧನೆ ಮಾಡಲು ಅವನ ಅಧೀನದಿಂದ ನಗದು ಹಣ 2300/-ರೂ ಸಿಕ್ಕ್ಕಿರುತ್ತವೆ ಹಾಗು ಅಪರಾಧ ಸ್ಥಳದಲ್ಲಿ ಪರಿಶಿಲಿಸಿ ನೋಡಲು ನಗದು ಹಣ 3,300/-ರೂ ಮತ್ತು 52 ಇಸ್ಪಿಟ್ ಎಲೆಗಳು ಸಿಕ್ಕಿರುತ್ತವೆ. ಸದರಿ ಅಪರಾಧ ಸ್ಥಳದಲ್ಲಿ ಸಿಕ್ಕಿರುವ ಮತ್ತು ಆರೋಪಿತರ ಆಧೀನದಲ್ಲಿ ಸಿಕ್ಕಿರುವ ಒಟ್ಟು ನಗದು ಹಣ 22,600/- ರೂ ಮತ್ತು 52 ಇಸ್ಪಿಟ್ ಎಲೆಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 49/2020 ಕಲಂ 32, 34 ಕೆಇ ಕಾಯ್ದೆ ಜೊತೆ 273 ಐಪಿಸಿ :-

ದಿನಾಂಕ:19/04/2020 ರಂದು 14:00 ಗಂಟೆಗೆ  ನಾನು ಪಿ.ಎಸ.ಐ [ಕಾ&ಸು] ಪೊಲೀಸ್ ಠಾಣೆಯಲ್ಲಿರುವಾಗ ಭಾತ್ಮಿದಾರರಿಂದ ಪೋನ್ ಮುಖಾಂತರ ಖಚಿತ ಭಾತ್ಮಿ ತಿಳಿದುಬಂದಿದ್ದೆನೆಂದರೆ ಬಸವಕಲ್ಯಾಣ ನಗರದ ಲಾಲತಲಾಬ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ತಮ್ಮಗಳ ಹತ್ತಿರ ಕಳ್ಳಭಟ್ಟಿ ಸರಾಯಿವುಳ್ಳ ಕ್ಯಾನ್ಗಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಅನಧಿಕೃತವಾಗಿ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದಾನೆ ಎಂದು ಪೋನ್ ಮುಖಾಂತರ ಖಚಿತ ಭಾತ್ಮಿಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ನೋಡಿದಾಗ ಭಾತ್ಮಿಯಂತೆ ಇಬ್ಬರು ವ್ಯಕ್ತಿಗಳ ತಮ್ಮ ಹತ್ತಿರ ಎರಡು ಪ್ಲಾಸ್ಟಿಕ್ ಕ್ಯಾನಗಳು ಇಟ್ಟುಕೊಂಡು ಕುಳಿತಿದ್ದು ದಾಳಿ ಮಾಡಿ  ಆರೋಪಿತ ಅಜಗರ ತಮದೆ ಖಾಸಿಮಸಾಬ ಆಪದಾರ ವಯಸ್ಸು//30 ವರ್ಷ ಜಾತಿ//ಮುಸ್ಲಿಂ ಉ//ಸಾ-ಮಿಲ್ದಲ್ಲಿ ಕೆಲಸ ಸಾ//ಅಲ್ಲಾನಗರ ಬಸವಕಲ್ಯಾಣ  ಇತನ ಹತ್ತಿರವಿದ್ದ ಅನಧಿಕೃತವಾಗಿ ಸಾರ್ವಜನಿಕರಿಗೆ ಮಾರಾಟ ಮಾಡಲು ಇಟ್ಟುಕೊಂಡಿದ್ದ  5 ಲೀಟರ ಗಾತ್ರದ ಪ್ಲಾಸ್ಟಿಕ್ ಕ್ಯಾನಗಳಲ್ಲಿ ಕಳ್ಳಭಟ್ಟಿ ಸರಾಯಿ ಅಂದಾಜು 10 ಲೀಟರ್ ಇರುತ್ತದೆ ಅದರ ಅಂದಾಜು ಕಿಮ್ಮತ್ತು 3000/-ರೂ ನೇದ್ದನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.





ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 50/2020 ಕಲಂ  87 ಕೆ.ಪಿ ಎಕ್ಟ ಜೊತೆ 269 ಐ.ಪಿ.ಸಿ :-
ದಿನಾಂಕ:19/04/2020 ರಂದು 1700 ಗಂಟೆಗೆ ನಾನು ಸುನೀಲ್ಕುಮಾರ ಪಿ.ಎಸ್.ಐ (ಕಾ & ಸೂ) ಬಸವಕಲ್ಯಾಣ ನಗರ ಠಾಣೆಯಲ್ಲಿರುವಾಗ ಬಸವಕಲ್ಯಾಣ ನಗರದ  ಫಂಕ್ಷನ ಹಾಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸರ್ಕಾರದ ಆದೇಶದಂತೆ ಲಾಕ್-ಡೌನ್ ಇದ್ದು ಕೊರೊನಾ ಸೊಂಕು ಹರಡುವ ಬಗ್ಗೆ ನೀರ್ಲಕ್ಷ ವಹಿಸಿ ಕೆಲವು ಜನರು ಗುಂಪಾಗಿ ಕುಳಿತು ಕೊಂಡು ಹಣ ಹಚ್ಚಿ ಪಣ ತೋಟ್ಟು ಇಸ್ಪಿಟ್ ಎಲೆಗಳ ಅಂದರ ಬಾಹರ್ ನಸಿಬಿನ ಜೂಜಾಟವನ್ನು ಆಡುತ್ತಿದ್ದಾರೆ ಎಂದು ಪೋನ್ ಮುಖಾಂತರ ಖಚಿತ ಭಾತ್ಮಿ ಮೇರೆಗೆ ಸಿಬ್ಬಂದಿಯೊಂದಿಗೆ ಬಸವಕಲ್ಯಾಣ ನಗರದ ವಷರ್ಾ ಫಂಕ್ಷನ ಹಾಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 6 ಜನರು ಗುಂಪಾಗಿ ಕುಳಿತುಕೊಂಡು ಕೊರೊನಾ ಸೋಂಕು ಹರಡುವ ಬಗ್ಗೆ ನೀರ್ಲಕ್ಷ ವಹಿಸಿ ಇಸ್ಪಿಟ್ ಎಲೆಗಳ ಅಂದರ ಬಾಹರ ನಸೀಬಿನ ಜೂಜಾಟವನ್ನು ಹಣ ಹಚ್ಚಿ ಪಣ ತೊಟ್ಟು ಆಡುತಿದ್ದಾಗ ಅವರುಗಳ ಮೇಲೆ ದಾಳಿ ಮಾಡಿ 1] ಆನಂದ ತಂದೆ ಶರಣಯ್ಯಾ ಮಠಮತಿ ವಯಸ್ಸು//29 ವರ್ಷ  ಇವನ ಅಧೀನದಿಂದ ನಗದು ಹಣ 300/-ರೂ ಸಿಕ್ಕ್ಕಿರುತ್ತವೆ, 2]   ಈಶ್ವರ ತಂದೆ ಗುಲಾಬರಾವ ತ್ರೀಮುಖೆ ವಯಸ್ಸು//30 ವರ್ಷ ಇವನ ಅಧಿನದಿಂದ ನಗದು ಹಣ 500/-ರೂ ಸಿಕ್ಕ್ಕಿರುತ್ತವೆ,3]  ಮೋತಿರಾಮ ತಂದೆ ಶಂಕರರಾವ ನಾಯ್ಕ ವಯಸ್ಸು//32 ವರ್ಷ ಇವನ ಅಧಿನದಿಂದ ನಗದು ಹಣ 600/-ರೂ ಸಿಕ್ಕ್ಕಿರುತ್ತವೆ, 4 ಹೆಸರು ಅಂಬರೀಶ ತಂದೆ ಪರಮೇಶ್ವರ ರಾವ ಸಿಂಧೆ ವಯಸ್ಸು//32 ವರ್ಷ ಇವನ ಅಧಿನದಿಂದ ನಗದು ಹಣ 900/-ರೂ ಸಿಕ್ಕ್ಕಿರುತ್ತವೆ,5] ಮಹೇಶ ತಂದೆ ರಾಮಚಂದರ ರಾಠೋಡ್ ವಯಸ್ಸು//34 ವರ್ಷ ಇವನ ಅಧಿನದಿಂದ ನಗದು ಹಣ 1000/-ರೂ ಸಿಕ್ಕ್ಕಿರುತ್ತವೆ ಮತ್ತು 6]  ದತ್ತಾತ್ರಿ ತಂದೆ ಪರಮೇಶ್ವರರಾವ ಸಿಂಧೆ ವಯಸ್ಸು//28 ವರ್ಷ ಇವನ ಅಧಿನದಿಂದ ನಗದು ಹಣ 800/-ರೂ ಸಿಕ್ಕ್ಕಿರುತ್ತವೆ ಹಾಗು ಅಪರಾಧ ಸ್ಥಳದಲ್ಲಿ ಪರಿಶಿಲಿಸಿ ನೋಡಲು ನಗದು ಹಣ 2200/-ರೂ ಮತ್ತು 52 ಇಸ್ಪಿಟ್ ಎಲೆಗಳು ಸಿಕ್ಕಿರುತ್ತವೆ.ಸದರಿ ಅಪರಾಧ ಸ್ಥಳದಲ್ಲಿ ಸಿಕ್ಕಿರುವ ಮತ್ತು ಆರೋಪಿತರ ಆಧೀನದಲ್ಲಿ ಸಿಕ್ಕಿರುವ ಒಟ್ಟು ನಗದು ಹಣ 6300/- ರೂ ಮತ್ತು 52 ಇಸ್ಪಿಟ್ ಎಲೆಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
  



Sunday, April 19, 2020

KALABURAGI DISTRICT PRESS NOTE


                                                  : ಪತ್ರಿಕಾ ಪ್ರಕಟಣೆ :                                                                   
  (ದಿನಾಂಕ: 19.04.2020)
          ದೇಶದಲ್ಲಿ ಮಹಾಮಾರಿ ಕೋವಿಡ್-19 ಕೊರೊನಾ ಸಾಂಕ್ರಾಮಿಕ ರೋಗ ಹರಡುತ್ತಿದ್ದು ಮುಂಜಾಗ್ರತಾ ಕ್ರಮವಾಗಿ ಸನ್ಮಾನ್ಯ ಪ್ರಧಾನ ಮಂತ್ರಿಗಳು ದೇಶದ್ಯಾಂತ ಲಾಕ್ಡೌನ ಘೋಷಣೆ ಮಾಡಿದ್ದು ಈ ದಿಶೆಯಲ್ಲಿ (ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯದ ವ್ಯಾಪ್ತಿ ಹೊರತು ಪಡಿಸಿ) ಕಲಬುರಗಿ ಜಿಲ್ಲೆಯ ಆಳಂದ, ಅಫಜಲಪೂರ, ಜೇವರ್ಗಿ,  ಚಿತ್ತಾಪೂರ, ಶಹಾಬಾದ, ಸೇಡಂ, ಮತ್ತು ಚಿಂಚೋಳಿ ತಾಲ್ಲೂಕಾಗಳ ವ್ಯಾಪ್ತಿಯಲ್ಲಿ ಲಾಕ್ಡೌನನ್ನು ಉಲ್ಲಂಘಿಸಿದವರ ವಿರುದ್ದ ಜಿಲ್ಲೆಯ ವಿವಿದ ಪೊಲೀಸ ಠಾಣೆಗಳಲ್ಲಿ ಇಲ್ಲಿಯವರೆಗೆ  ಒಟ್ಟು 38 ಲಾಕ್ಡೌನ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿಕೊಂಡು ಆ ಪ್ರಕರಣಗಳಿಗೆ ಸಂಭಂದಿಸಿದಂತೆ 122 ಜನರನ್ನು ದಸ್ತಗಿರಿಗೊಳಿಸಲಾಗಿರುತ್ತದೆ ಹಾಗೂ ಲಾಕ್ಡೌನ ಉಲ್ಲಂಘನೆ ಪ್ರಕರಣಗಳಲ್ಲಿ ಭಾಗಿಯಾದ 118 ಜನರ ವಿರುದ್ದ ರೌಡಿ ಶೀಟ ತೆರೆಯಲಾಗಿದೆ. ಅಲ್ಲದೆ ಲಾಕ್ಡೌನ ಉಲ್ಲಂಘಿಸಿ ರಸ್ತೆಯಲ್ಲಿ ಅನಾವಶ್ಯಕವಾಗಿ ಸಂಚರಿಸುತ್ತಿದ್ದ 659 ವಾಹನಗಳನ್ನು ವಶಕ್ಕೆ ಪಡೆದುಕೊಂಡು 92,700-00 ರೂ. ದಂಡ ವಿಧಿಸಲಾಗಿದೆ.

                                                                                                ಸಹಿ/-
                                                                                        ಪೊಲೀಸ ಅಧೀಕ್ಷಕರು,
                                                                                              ಕಲಬುರಗಿ
ಗೆ,
ಸಂಪಾದಕರು
ಕಲಬುರಗಿ ನಗರದ ಎಲ್ಲಾ ಪತ್ರಿಕೆಗಳು.

Saturday, April 18, 2020

BIDAR DISTRICT DAILY CRIME UPDATE 18-04-2020



ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ : 18-04-2020
ಗಾಂಧಿಗಂಜ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 65/2020 ಕಲಂ 87 ಕೆಪಿ ಕಾಯ್ದೆ :-

ದಿನಾಂಕ 17/04/2020 ರಂದು 1700 ಗಂಟೆಗೆ ಪಿಎಎಸ್ಐ ರವರಿಗೆ ಗಾಂಧಿಗಂಜದಲ್ಲಿರುವ ಎ.ಪಿ.ಎಮ್.ಸಿ ಯಲ್ಲಿ. ಕೃಷಿ ಉತ್ಪನ ಮಾರುಕಟ್ಟೆ ಕಛೇರಿಯ ಹತ್ತಿರ ಕೃಷಿ ಉತ್ಪನ ಮಾರುಕಟ್ಟೆ ಗೋದಾಮ ಮುಂದೆ ಖುಲ್ಲಾ ಜಾಗೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಪಕ್ಕದಲ್ಲಿ ಇಸ್ಪಟ್ ಜೂಜಾಟ್ ಆಡುತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ 1745 ಗಂಟೆಗೆ ದಾಳಿ ಮಾಡಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ ಜನರ ಅಂಗ ಜಡ್ತಿ ಮಾಡಲಾಗಿ 1) ಗುಂಡು ತಂದೆ ಪ್ರಭು ಜಾಂತಿಕರ ವಯ 34 ವರ್ಷ ಜಾತಿ ಲಿಂಗಾಯತ ಸಾ: ವಿದ್ಯಾನಗರ ಕಾಲೋನಿ ಬೀದರ ಇವನ ಹತ್ತಿರ ನಗದು ಹಣ ರೂ: 1,200-00 (2) ವಿದ್ಯಾನಂದ ತಂದೆ ಸನಮುಖಯ್ಯಾ ಸ್ವಾಮಿ ವಯ 40 ವರ್ಷ ಸಾ: ವಿದ್ಯಾನಗರ ಕಾಲೋನಿ ಬೀದರ ಇವನ ಬಳಿ ನಗದು ಹಣ ರೂ: 900-00 (3) ನಾಗರಾಜ ತಂದೆ ರಾಜಕುಮಾರ ಕಾಡವಾದೆ ವಯ 30 ವರ್ಷ ಜಾತಿ ಲಿಂಗಾಯತ ಬಸವನಗರ ಬೀದರ ಇವನ ಬಳಿ ನಗದು ಹಣ ರೂ: 1,300-00 (4) ಶಿವಕುಮರ ತಂದೆ ಶಂಕರಪ್ಪ ಫತ್ತೆಪುರ ವಯ 32 ವರ್ಷ ಲಿಂಗಾಯತ ವಿದ್ಯಾನಗರ ಕಾಲೋನಿ ಬೀದರ ಇವನ ಬಳಿ ನಗದು ಹಣ ರೂ 1,000-00 (5) ಶಿವಶರಣಪ್ಪಾ ತಂದೆ ಅಣ್ಣರಾವ ಪಾಟೀಲ ವಯ 42 ವರ್ಷ ಜಾತಿ ಲಿಂಗಾಯತ ಸಾ: ಹೌಸಿಂಗ ಬೊರ್ಡ ಕಾಲೋನಿ ಬೀದರ  ಇವನ ಬಳಿ ನಗದು ಹಣ ರೂ: 950-00 ಮತ್ತು (6) ಭಿಮರಾವ ತಂದೆ ಗೋಪಾಲರಾವ ವಯ 42 ಜಾತಿ ಮರಾಠ ಸಾ: ಹಾರೂರಗೇರಿ ಬೀದರ ಇವನ ಬಳಿ ನಗದು ಹಣ ರೂ: 1,020-00 ಎಲ್ಲರ ಮದ್ಯದಲ್ಲಿದ್ದ ನಗದು ಹಣ ರು: 1,950-00 ಹಿಗೆ ಎಲ್ಲಾ ಒಟ್ಟು 8,320-00 ಮತ್ತು 52 ಇಸ್ಪಿಟ ಎಲೆಗಳು ಮತ್ತು 8,320-00 ರೂಪಾಯಿ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಹುಲಸೂರ ಪೊಲೀಸ್ ಠಾಣೆ  ಅಪರಾಧ ಸಂಖ್ಯೆ 24/2020 ಕಲಂ 32, 34 ಕೆ.ಇ. ಕಾಯ್ದೆ :-

ದಿನಾಂಕ 17/04/2020 ರಂದು ಮುಂಜಾನೆ 1150 ಗಂಟೆಗೆ ಠಾಣೆಯಲ್ಲಿರುವಾಗ ಫೋನ ಮೂಲಕ ಖಚಿತ ಮಾಹಿತಿ ಬಂದಿದ್ದೆನೆಂದರೆ, ಆನಂದವಾಡಿ ಶಿವಾರದಲ್ಲಿ ವಿಜಯಕುಮಾರ ಪಾಟೀಲ ರವರ ಹೊಲದ ಹತ್ತಿರ ಒಬ್ಬ ವ್ಯಕ್ತಿ ಕಳ್ಳಭಟ್ಟಿ ಸಾರಾಯಿ ತನ್ನ ಅಧಿನದಲ್ಲಿಟ್ಟುಕೊಂಡು ಮಾರಾಟ ಮಾಡಲು ಸಾಗಾಟ ಮಾಡುತಿದ್ದಾನೆಂದು ಖಚಿತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ನೋಡಲು ವಿಜಯಕುಮಾರ ಪಾಟೀಲ್ ರವರ ಹೊಲದ ಹತ್ತಿರ ಆನಂದವಾಡಿ- ಮಿರಕಲ್ ರಸ್ತೆಯ ಹತ್ತಿರ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಒಂದು ಬಿಳಿ ಪ್ಲಾಸ್ಟಿಕ್ ಡಬ್ಬಿ ಇಟ್ಟುಕೊಂಡು ನಿಂತಿರುವುದನ್ನು ಖಚಿತ ಪಡಿಸಿಕೊಂಡು ಇಂದು 1300 ಗಂಟೆಗೆ ಪಂಚರ ಸಮಕ್ಷಮದಲ್ಲಿ ಅವನ ಮೇಲೆ ದಾಳಿ ಮಾಡಿ ಹಿಡಿದುಕೊಂಡು ಆತನ ಹೆಸರು ಮತ್ತು ವಿಳಾಸ ವಿಚಾರಿಸಲು ತಿಳಿಸಿದ್ದೆನೆಂದರೆ,  ಆನಂದ ತಂದೆ ವಿಶ್ವಂಬರ ಪುಂಡೆ ವಯ 23 ವರ್ಷ, ಜಾತಿ ಮಾದಿಗ ಉ: ಕೂಲಿ ಕೆಲಸ ಸಾ: ಗುತ್ತಿ ಅಂತ ತಿಳಿಸಿರುತ್ತಾನೆ. ಮುಂದುವರೆದು ನಾನು ನಿನ್ನ ಹತ್ತಿರವಿರುವ ಪ್ಲಾಸ್ಟಿಕ ಡಬ್ಬಿಯಲ್ಲಿ ಎನು ಇದೆ ಅಂತ ವಿಚಾರಿಸಲಾಗಿ ಪ್ಲಾಸ್ಟಿಕ್ ಡಬ್ಬಿಯಲ್ಲಿ ಕಳ್ಳಭಟ್ಟಿ ಸಾರಾಯಿ ಇರುವುದಾಗಿ ತಿಳಿಸಿರುತ್ತಾನೆ.   ಅವನ ಹತ್ತಿರವಿದ್ದ ಒಂದು ಪ್ಲಾಸ್ಟಿಕ್ ಡಬ್ಬಿಯಲ್ಲಿನ ಅಂದಾಜು 5 ಲೀಟರ ಕಳ್ಳಭಟ್ಟಿ ಸಾರಾಯಿ ಅಂದಾಜು ಕಿಮ್ಮತ್ತು 500/- ರೂಪಾಯಿಗಳು  ಬೆಲೆ ಉಳ್ಳದು ಪಂಚರ ಸಮಕ್ಷಮ ಡಬ್ಬಿಯ ಸಮೇತ ಕಳ್ಳಭಟ್ಟಿ ಸಾರಾಯಿ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

Thursday, April 16, 2020

BIDAR DISTRICT DAILY CRIME UPDATE 16-04-2020


                        
ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 16-04-2020

ಹುಮನಾಬಾದ ಪೊಲೀಸ ಠಾಣೆ ಅಪರಾಧ ಸಂಖ್ಯೆ 49/2020 ಕಲಂ 504,506,298 ಐಪಿಸಿ ಮತ್ತು ಕಲಂ 3 (1) (ಅರ)(ಎಸ)(ಯು) ಎಸ.ಸಿ/ಎಸ.ಟಿ ಎಕ್ಟ :- 

ದಿನಾಂಕ 15/04/2020 ರಂದು 1330 ಗಂಟೆಗೆ ಫಿಯರ್ಾದಿ ಪುಂಡಲಿಕ ತಂದೆ ಕಾಶೆಪ್ಪಾ ಆಮ್ಲೆ ಸಾ. ಸೋನಕೆರಾ ರವರು ಠಾಣೆಗೆ ಹಾಜರಾಗಿ   ಲಿಖಿತ ದೂರು ನೀಡಿದರ ಸಾರಾಂಶವೆನೆಂದರೆ ದಿನಾಂಕ 14/04/2020 ರಂದು ಸಾಯಂಕಾಲ 4.00 ಗಂಟೆಯಸುಮಾರಿಗೆ   ಓಣೆಯ ಸಂಜು ತಂದೆ ಮಾರುತಿ,  ಮಹೇಶ ತಂದೆ ಭೀಮಶಾ ಮಹಾದೇವ ತಂದೆ ತುಕಾರಾಮ ಪೂಜಾರಿ ಮತ್ತು ತುರಾರಾಮ ತಂದೆ ಭೀಮಶಾ ಮೊಹಿ ಮತ್ತು ಫಿರ್ಯಾದಿಯು ಟಿಕ್ ಟಾಕ್ ದಲ್ಲಿ ಒಬ್ಬನು ವಿಡಿಯೋ ಮೂಲಕ ಅವಾಚ್ಯವಾಗಿ ನಿಂದನೆ ಮಾಡಿ  ಜೀವದ ಬೇಧರಿಕೆ ಹಾಕಿ ಜಾತಿ ನಿಂಧನೆ ಮಾಡಿರುತ್ತಾನೆ. ಈ ವಿಡಿಯೋಮಾಡಿದ ವ್ಯಕ್ತಿಯ ಮುಖಾ ಕಾಣಿಸದೇ ಹಾಗೆ ದಿಲ್ ಚಿನ್ಹೆ ಹಾಕಿದ್ದು ಆತನ ಮೈ ಮೇಲಿನ ಬಟ್ಟೆ  ಮತ್ತು ಕೇಳಗಿನ ಭಾಗವನ್ನು ಮತ್ತು ವಿಡಿಯೋದಲ್ಲಿ ಕಾಣಿಸುತ್ತಿರುವ ಹೊಲ ನೋಡಲಾಗಿ ಈ ವ್ಯಕ್ತಿಯು ನಮ್ಮ ಪಕ್ಕದ ಗ್ರಾಮದ ನಿವಾಸಿಯಾದ ತಮ್ಮರೆಡ್ಡಿ ತಂದೆ ಹಣಮಂತರೆಡ್ಡಿ ಅಣೂರೆ ಮು, ಜಾಮಾನಗರ ಘಾಟಬೋರಳ ಈತನೇ ಇರುತರ್ತಾನೆ ಇವನು ಟಿಕಟಾಕ ಮಾಡುವಾಗ ಉಪಯೋಗಿಸಿದ ಹಾಗೂ ಕಾಣಿಸುತ್ತಿರುವ ಯುಜರ್ ಐಡಿ @ 341948825729922 ಇರುತ್ತದೆ. ಈ ವಿಷಯ ಸಾಮಾಜಿಕ ಜಾಲತಾಣಗಲ್ಲಿ ವೈರಲ ಅಗಿರುತ್ತದೆ ಪ್ರಯುಕ್ತ ಪರಶಿಷ್ಟ ಜಾತಿಯಲ್ಲಿ ಬರುವ ಹೊಲಿಯ ಕೋಮಿನ ಜನರ ಭಾವನೆಗಳಿಗೆ ನೋವು ಉಂಟುಮಾಡಿ ಒಂದುಕೋಮಿಗೆ ಜೀವ ಬೇಧರಿಕೆ ಹಾಕಿ ಸಮಾಜಿಕ ಸಮಾರಸ್ಯಕ್ಕೆ ನೋವು ಉಂಟು ಮಾಢಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 26/2020 ಕಲಂ 32, 34, 38(ಎ) ಕೆ ಇ ಎಕ್ಟ ಮತ್ತು ಕಲಂ 273 ಐಪಿಸಿ :-

 ದಿನಾಂಕ 15-04-2020 ರಂದು 2030 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿ ಇದ್ದಾಗ ಮಾಹಿತಿ ಬಂದಿದೇನೆಂದರೆ ರಾಮತೀರ್ಥ(ಕೆ) ಗ್ರಾಮದ ರಸ್ತೆ ಮುಖಾಂತರ ಬಸವಕಲ್ಯಾಣಕ್ಕೆ ಎರಡು ಮೋಟಾರ ಸೈಕಲ ಮೇಲೆ 4 ಜನ ವ್ಯಕ್ತಿಗಳು ಕಳ್ಳ ಭಟ್ಟೆ ಸರಾಯಿಯನ್ನು ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದಾರೆ ಅಂತಾ ಭಾತ್ಮಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಮೊರಖಂಡಿ ಶಿವಾರದಲ್ಲಿ ಇರುವ  ಮೊರಖಂಡಿ ರಾಮತೀರ್ಥ(ಕೆ)  ರಸ್ತೆ ಮೇಲೆ ಇರುವ ಕೊಂಗೆವಾಡಿ ಗ್ರಾಮದ ಬಸ್ಸ ನಿಲ್ದಾಣ ಹತ್ತಿರ 2130 ಗಂಟೆಗೆ ತಲುಪಿ ಜೀಪಿನಿಂದ ಎಲ್ಲರೂ ಕೆಳಗೆ ಇಳಿದು ರೋಡಿನ ಮೇಲೆ ನಿಂತಿರುತ್ತೇವೆ ರಾಮತೀರ್ಥ(ಕೆ) ಗ್ರಾಮದ ಕಡೆಯಿಂದ 2135 ಗಂಟೆಗೆ ಎರಡು ಮೋಟಾರ ಸೈಕಲ ಮೇಲೆ ಬಂದಾಗ   ಕೈ ಸನ್ನೆ ಮಾಡಿ ಎರಡು ಮೋಟಾರ ಸೈಕಲಗಳು ನಿಲ್ಲಿಸಿದಾಗ ಪೊಲೀಸ್ ಜೀಪಿನ ಬೆಳಕಿನಲ್ಲಿ ಎರಡು ಮೋಟಾರ ಸೈಕಲ ಮೇಲೆ ಇದ್ದವರನ್ನು ಪರಿಶೀಲಿಸಿ ನೋಡಲು ಒಂದು ಮೋಟಾರ ಸೈಕಲ ಮೇಲೆ ಇಬ್ಬರು ಜನರು ಇದ್ದು ಮೋಟಾರ ಸೈಕಲ ಹಿಂದೆ ಕುಳಿತವವನು ಒಂದು ಪ್ಲಾಸ್ಟೀಕ ಕ್ಯಾನನನ್ನು ಹಿಡಿದುಕೊಂಡಿರುತ್ತಾನೆ. ಮೋಟಾರ ಸೈಕಲ ಚಲಾಯಿಸುತ್ತಿದ್ದ ವ್ಯಕ್ತಿಗೆ ಆತನ ಹೆಸರು ವಿಚಾರಿಸಲು ಆತನು ತನ್ನ ಹೆಸರು ಪವನ ತಂದೆ ದತ್ತು ಬೊಸ್ಲೆ ವಯ 24 ವರ್ಷ ಜಾತಿ ಮರಾಠಾ ಉದ್ಯೋಗ ಕೂಲಿ ಕೆಲಸ ಸಾ : ಖಾನಾಪೂರ(ಕೆ) ಅಂತಾ ತಿಳಿಸಿದನು. ಮೋಟಾರ ಸೈಕಲ ಮೇಲೆ ಹಿಂದೆ ಪ್ಲಾಸ್ಟೀಕ ಕ್ಯಾನ ಹಿಡಿದುಕೊಂಡು ಕುಂತಿದ ವ್ಯಕ್ತಿಗೆ ಆತನ ಹೆಸರು ವಿಚಾರಿಸಲು ಆತನು ತನ್ನ ಹೆಸರು ವಾಮನ ತಂದೆ ಮಲ್ಲಪ್ಪಾ ಗಾಯಕವಾಡ ವಯ 54 ವರ್ಷ ಜಾತಿ ಎಸ್ ಸಿ ಮಾದಿಗ ಉದ್ಯೋಗ ಕೂಲಿ ಕೆಲಸ ಸಾ : ಖಾನಾಪೂರ(ಕೆ) ಗ್ರಾಮ ಅಂತಾ ತಿಳಿಸಿದನು. ಇಬ್ಬರಿಗೆ ಈ ಪ್ಲಾಸ್ಟೀಕ ಕ್ಯಾನದಲ್ಲಿ ಎನಿದೆ ಅಂತಾ ವಿಚಾರಿಸಿದಾಗ ಇದರಲ್ಲಿ ಕಳ್ಳಭಟ್ಟಿ ಸರಾಯಿ 5 ಲೀಟರದಷ್ಟು ಇರುತ್ತದೆ. ಅಂದಾಜು ಕಿಮ್ಮತ್ತು 500/- ರೂಪಾಯಿ ಆಗುತ್ತದೆ ಅಂತಾ ತಿಳಿಸಿದನು. ಇವರು ಚಲಾಯಿಸಿಕೊಂಡು ಬಂದ ಮೋಟಾರ ಸೈಕಲ ನೋಡಲು ಇದು ಹಿರೊ ಹೊಂಡಾ ಫ್ಯಾಶನ ಪ್ರೋ ಮೋಟಾರ ಸೈಕಲ ನಂಬರ ಕೆಎ-39-ಜೆ-2735 ನೇದ್ದು ಇದ್ದು ಅ : ಕಿ : 20,000/- ರೂಪಾಯಿ ಇರುತ್ತದೆ. ನಂತರ ಇನ್ನೊಬ್ಬ ಮೋಟಾರ ಸೈಕಲ ಸವಾರನಿಗೆ ಹೆಸರು ವಿಚಾರಿಸಲು ಆತನು ತನ್ನ ಹೆಸರು ಗಣಪತಿ ತಂದೆ ವಿಶ್ವನಾಥ ಬೊಕ್ಕೆ ವಯ 25 ವರ್ಷ ಜಾತಿ ಕಬ್ಬಲಿಗ ಉದ್ಯೋಗ ಕೂಲಿ ಕೆಲಸ ಸಾ : ಪಂಚಾಯತ ಕಟ್ಟಾ ತ್ರೀಪೂರಾಂತ ಬಸವಕಲ್ಯಾಣ ಅಂತಾ ತಿಳಿಸಿದನು ಮೋಟಾರ ಸೈಕಲ ಮೇಲೆ ಹಿಂದೆ ಪ್ಲಾಸ್ಟೀಕ ಕ್ಯಾನ ಹಿಡಿದುಕೊಂಡು ಕುಂತಿದ ವ್ಯಕ್ತಿಗೆ ಆತನ ಹೆಸರು ವಿಚಾರಿಸಲು ಆತನು ತನ್ನ ಹೆಸರು ಗುಂಡಪ್ಪಾ ತಂದೆ ಬಂಡೆಪ್ಪಾ ಹಿರಲೆ ವಯ 39 ವರ್ಷ ಜಾತಿ ಕಬ್ಬಲಿಗ ಉದ್ಯೋಗ ಒಕ್ಕಲುತನ ಸಾ : ಪಂಚಾಯತ ಕಟ್ಟಾ ತ್ರೀಪೂರಾಂತ ಬಸವಕಲ್ಯಾಣ ಅಂತಾ ತಿಳಿಸಿದನು. ಇಬ್ಬರಿಗೆ ಈ ಪ್ಲಾಸ್ಟೀಕ ಕ್ಯಾನದಲ್ಲಿ ಎನಿದೆ ಅಂತಾ ವಿಚಾರಿಸಿದಾಗ ಇವರಿಬ್ಬರು ಈ ಕ್ಯಾನದಲ್ಲಿ ಕಳ್ಳಭಟ್ಟಿ ಸರಾಯಿ 5 ಲೀಟರದಷ್ಟು ಇರುತ್ತದೆ. ಅಂದಾಜು ಕಿಮ್ಮತ್ತು 500/- ರೂಪಾಯಿ ಆಗುತ್ತದೆ ಅಂತಾ ತಿಳಿಸಿದರು. ಇವರು ಚಲಾಯಿಸಿಕೊಂಡು ಬಂದ ಮೋಟಾರ ಸೈಕಲ ನೋಡಲು ಇದು ಹಿರೊ ಸ್ಪ್ಲೇಂಡರ್ ಪ್ಲಸ್ ಮೋಟಾರ ಸೈಕಲ ನಂಬರ ಕೆಎ-56-ಜೆ-5575  ನೇದ್ದು ಇದ್ದು ಅ : ಕಿ : 40,000/- ರೂಪಾಯಿ ನೇದ್ದನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ  101/2020 ಕಲಂ 87 ಕೆಪಿ ಕಾಯ್ದೆ :-
ದಿನಾಂಕ: 15-04-2020 ರಂದು 14:00 ಗಂಟೆಗೆ ಪಿಎಸ್ಐ ರವರು  ಠಾಣೆಯಲ್ಲಿದ್ದಾಗ ಭಾಲ್ಕಿಯ ಬೀರದೇವಗಲ್ಲಿಯ ಕಾರಂಜಾ ಆಫೀಸ್ ಹತ್ತಿರ ಕೆಲವು ಜನರು ಸಾರ್ವಜನೀಕ ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು ಪರೆಲ ಎಂಬ ನಸೀಬಿನ ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ  ಮೇರೆಗೆ ಸಿಬ್ಬಂದಿ ಮತ್ತು ಪಂಚರೊಂದಿಗೆ ಹೋಗಿ ದಾಳಿ ಮಾಡಿ   1) ವಿಜಯಕುಮಾರ ತಂದೆ ಲಕ್ಷ್ಮಿಣರಾವ ಕಾಂಬಳೆ ವಯ: 36 ವರ್ಷ, ಜಾತಿ: ಸಮಗಾರ ಉ: ಚಪ್ಪಲಿ ಅಂಗಡಿ ಸಾ: ಬೀರದೇವಗಲ್ಲಿ ಭಾಲ್ಕಿ ಅಂತಾ ತಿಳಿಸಿದ್ದು ಸದರಿಯವನ ಕೈಯಲ್ಲಿ 3 ಇಸ್ಪೇಟ ಎಲೆಗಳು ಹಾಗೂ 550=00 ರೂ ಇದ್ದವು, 2) ಅವಿನಾಥ ತಂದೆ ತಂದೆ ಲಕ್ಷ್ಮಿಣರಾವ ಕಾಂಬಳೆ ವಯ: 49 ವರ್ಷ, ಜಾತಿ: ಸಮಗಾರ ಉ: ಡ್ರೈವರ ಕೆಲಸ ಸಾ: ಬೀರದೇವಗಲ್ಲಿ ಭಾಲ್ಕಿ ಅಂತಾ ತಿಳಿಸಿದ್ದು ಸದರಿಯವನ ಕೈಯಲ್ಲಿ 3 ಇಸ್ಪೇಟ ಎಲೆಗಳು ಹಾಗೂ 950=00 ರೂ ಇದ್ದವು, 3) ದಿಲೀಪ ತಂದೆ ವಿಶ್ವನಾಥ ಮಡಿವಾಳ ವಯ: 30 ವರ್ಷ, ಜಾತಿ: ಅಗಸೂರ ಉ: ಲಾಂಡ್ರಿ ಕೆಲಸ ಸಾ: ಬೀರದೇವಗಲ್ಲಿ ಭಾಲ್ಕಿ ಅಂತಾ ತಿಳಿಸಿದ್ದು ಸದರಿಯವನ ಕೈಯಲ್ಲಿ 3 ಇಸ್ಪೇಟ ಎಲೆಗಳು ಹಾಗೂ 550=00 ರೂ ಇದ್ದವು, 4) ಮಾರುತಿ ತಂದೆ ಮಾಳಪ್ಪಾ ಹಳ್ಳೆ ವಯ: 44 ವರ್ಷ, ಜಾತಿ: ಕುರುಬ ಉ: ಕಿರಾಣಿ ಅಂಗಡಿ ಸಾ: ಬೀರದೇವಗಲ್ಲಿ ಭಾಲ್ಕಿ ಅಂತಾ ತಿಳಿಸಿದ್ದು ಸದರಿಯವನ ಕೈಯಲ್ಲಿ 3 ಇಸ್ಪೇಟ ಎಲೆಗಳು ಹಾಗೂ 350 ರೂ ಇದ್ದವು, 5) ಪ್ರವೀಣ ತಂದೆ ಕಿಶನರಾವ ನೌಬಾದೆ ವಯ: 32 ವರ್ಷ, ಜಾತಿ: ಎಸ್.ಸಿ. ಮಾದಿಗ ಉ: ಖಾಸಗಿ ಕಾಲೇಜದಲ್ಲಿ ಲೆಕ್ಚರ ಕೆಲಸ ಸಾ: ಬೀರದೇಗಲ್ಲಿ ಭಾಲ್ಕಿ ಅಂತಾ ತಿಳಿಸಿದ್ದು ಸದರಿಯವನ ಕೈಯಲ್ಲಿ 3 ಇಸ್ಪೇಟ ಎಲೆಗಳು ಹಾಗೂ 200=00 ರೂ ಇದ್ದವು 6) ರಾಜಕುಮಾರ ತಂದೆ ಗಣಪತಿ ಮಳಚಾಪೂರ ವಯ: 50 ವರ್ಷ, ಜಾತಿ: ಕುರುಬ ಉ: ಹೋಟೆಲದಲ್ಲಿ ಕೆಲಸ ಸಾ: ಬೀದರದೇವಗಲ್ಲಿ ಭಾಲ್ಕಿ. ಅಂತಾ ತಿಳಿಸಿದ್ದು ಸದರಿಯವನ ಕೈಯಲ್ಲಿ 3 ಇಸ್ಪೇಟ ಎಲೆಗಳು ಹಾಗೂ 150=00 ರೂ ಇದ್ದವು 7) ನಾಗೇಶ ತಂದೆ ವಿಶ್ವನಾಥ ಮಡಿವಾಳ ವಯ: 28 ವರ್ಷ, ಜಾತಿ: ಅಗಸೂರ ಉ: ಇಸ್ತ್ರಿ ದೂಕಾನ ಸಾ: ಬೀರದೇವಗಲ್ಲಿ ಭಾಲ್ಕಿ ಅಂತಾ ತಿಳಿಸಿದ್ದು ಸದರಿಯವನ ಕೈಯಲ್ಲಿ 3 ಇಸ್ಪೇಟ ಎಲೆಗಳು ಹಾಗೂ 200 ರೂ ಇದ್ದವು, 8) ಮಾಳಗೊಂಡ ತಂದೆ ಗೊವಿಂದ ಮೇತ್ರೆ ವಯ: 21 ವರ್ಷ, ಜಾತಿ: ಕುರುಬ ಉ: ಡಿ.ಜೆ ಸೌಂಡ್ ಸಿಸ್ಟೆಮ್ ಅಂಗಡಿ ಸಾ: ಬೀರದೇವಗಲ್ಲಿ ಭಾಲ್ಕಿ ಅಂತಾ ತಿಳಿಸಿದ್ದು ಸದರಿಯವನ ಕೈಯಲ್ಲಿ 3 ಇಸ್ಪೇಟ ಎಲೆಗಳು ಹಾಗೂ 150 ರೂ ಇದ್ದವು ಹಾಗು ಎಲ್ಲರ ಮಧ್ಯದಲ್ಲಿ ಜೂಜಾಟದಲ್ಲಿ ತೋಡಗಿಸಿದ ನಗದು ಹಣ 3,450=00 ರೂ ಹಾಗೂ ಮತ್ತು 28 ಇಸ್ಪೆಟ ಎಲೆಗಳು ಇದ್ದವು ಸದರಿಯವರಿಗೆ  ವಿಚಾರಣೆ ಮಾಡಲು ಎಲ್ಲರೂ ಸೆರಿ ಹಣವನ್ನು ಪಣಕ್ಕೆ ಇಟ್ಟು ಪರೆಲ ಎಂಬ ನಶಿಬಿನ ಇಸ್ಪೇಟ ಜೂಜಾಟ ಆಡುತಿದ್ದ ಬಗ್ಗೆ ಒಪ್ಪಿ ಕೊಂಡಿದರಿಂದ ಸದರಿಯವರು ಇಸ್ಪೆಟ ಜೂಜಾಟದಲ್ಲಿ ತೋಡಗಿಸಿದ ಒಟ್ಟು ನಗದು ಹಣ 6,550=00 ರೂ ಹಾಗು 52 ಇಸ್ಪೇಟ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.