Police Bhavan Kalaburagi

Police Bhavan Kalaburagi

Thursday, July 9, 2020

BIDAR DISTRICT DAILY CRIME UPDATE 09-07-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 09-07-2020

ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 78/2020 ಕಲಂ 471, 420 ಐಪಿಸಿ :-

ದಿನಾಂಕ 08/07/2020 ರಂದು 1330 ಗಂಟೆಗೆ ಮಾನ್ಯ ಪೊಲೀಸ ಅಧೀಕ್ಷಕರು ಬೀದರ ರವರು ನೀಡಿದ ಜ್ಞಾಪನ ಪತ್ರ ಸಂ.ಅಪರಾಧ-1/ಇತರೆ/ಬೀ/2020 ದಿನಾಂಕ 10/06/2020 ನೇದ್ದರಲ್ಲಿ ಸದಸ್ಯ ಕಾರ್ಯದರ್ಶಿಗಳು ಹಾಗೂ ಮುಖ್ಯ ಆಡಳಿತಾಧಿಕಾರಿಗಳು , ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಆನಂದರಾವ ವೃತ್ತ ಬೆಂಗಳೂರು, ರವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಶುಶ್ರುಕರ ನೇಮಕಾತಿ ಕುರಿತು ಭ್ಯರ್ಥಿಯಾದ ಮಂಜುನಾಥ ತಂದೆ ರೆವಣಪ್ಪ ಪ್ಲಾಟ ನಂ. 42, ಸಾಯಿ ನಗರ ಕಾಲೋನಿ ನೌಬಾದ ಈತನು ಅಂಗವಿಕಲತೆಯ ಬಗ್ಗೆ ಸುಳ್ಳು ವೈದ್ಯಕೀಯ ದಾಖಲಾತಿ ಸಲ್ಲಿಸಿ ಅಂಗವಿಕಲ ಮೀಸಲಾತಿ ಅಡಿಯಲ್ಲಿ ಶುಶ್ರುಕರ ಹುದ್ದೆಗೆ ಆಯ್ಕೆಯಾಗಿದ್ದು ಇರುತ್ತದೆ. ಸದರಿಯವನ ಮೇಲೆ ಕಾನೂನು ಕ್ರಮ ಕೈಕೊಳ್ಳುವಂತೆ ಸದಸ್ಯ ಕಾರ್ಯದರ್ಶಿಗಳು ಹಾಗೂ ಮುಖ್ಯ ಆಡಳಿತಾಧಿಕಾರಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಬೇಂಗಳೂರು ರವರು ಕೋರಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ. 

ಜನವಾಡ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 40/2020 ಕಲಂ 454, 457, 380 ಐಪಿಸಿ :-

ದಿನಾಂಕ 08/07/2020 ರಂದು 1500 ಗಂಟೆಗೆ ಶ್ರೀಮತಿ  ಮಂಜುರಾಣಿ ಗಂಡ ಪ್ರಫೂಲ ಕ್ರೀಷ್ಣಫರ್ ಮುಖ್ಯೋಪದ್ಯಾಯರು ಸರಕಾರಿ ಹಿರಿಯ ಪ್ರಾಥಮೀಕ ಶಾಲೆ ಚಿಮಕೋಡ ತಾ|| ಜಿ|| ಬೀದರ ರವರು ಖುದ್ದಾಗಿ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದರ ಸಾರಾಂಶವೆನೆಂದರೆ ದಿನಾಂಕ 27/06/2020 ರಂದು ಶಾಲೆ ಮುಗಿಸಿಕೊಂಡು ದಿನಾಂಕ 29/6/2020 ರಂದು ಸೊಮವಾರ ಬೆಳಿಗ್ಗೆ 9: 45 ಗಂಟೆಯ ಸುಮಾರಿಗೆ   ಶಾಲೆಯ ಸಹ ಶೀಕ್ಷಕರಾದ ಶ್ರೀ ರಾಮಲು ಹಾಗು ಫಿರ್ಯಾದಿಯು ಶಾಲೆಗೆ ಹೊಗಿದ್ದಾಗ ಶಾಲೆಯ ಕಂಪ್ಯುಟರ ಕೋಣೆಯ ಬಾಗಿಲಿಗೆ ಹಾಕಿದ್ದ ಬೀಗ ಒಡೆದು   ಕೋಣೆಯಲ್ಲಿದ್ದ ಸಿ.ಎನ್.ಟಿ.206ಬಿಓಎನಎಮ್ ಮತ್ತು ಸಿ.ಎನ್.ಟಿ.205ಬಿಒಆರ್.ಸಿ. ಸಂಖ್ಯೆಯ 18’ 5” ಮಾನಿಟರ್ ಗಳು ಒಂದು ಬ್ಯಾಟರಿ ಮತ್ತು ಒಂದು ಪ್ಲಾಸ್ಟಿಕ್ ಚೆರ್ ಕಳುವಾಗಿರುತ್ತವೆ.   ಸದರಿ ಕಂಪ್ಯೂಟರಗಳು ಸಿದ್ದಾರ್ಥ ಇನಫೋಟೆಕ್ ಪೈ.ಲಿ. ಬೆಂಗಳೂರು ರವರಿಂದ ದಿನಾಂಕ 17/04/2012 ರಂದು  ನಮ್ಮ ಶಾಲೆಗೆ ಸರಬರಾಜು ಆಗಿರುತ್ತವೆ. ಸರಬರಾಜು ಆದ ಕಂಪ್ಯೂಟರ ಮಾನಿಟರ್  ಸಿಪಿಯು  ಬ್ಯಾಟರಿ ಸೇರಿ ಅಂದಿನ ಬೇಲೆ  26,444.75/- ರೂ ಗಳು ಆಗುತ್ತವೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.



Wednesday, July 8, 2020

BIDAR DISTRICT DAILY CRIME UPDATE 08-07-2020



ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 08-07-2020

ಗಾಂಧಿಗಂಜ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 103/2020 ಕಲಂ 379 ಐಪಿಸಿ :-

ದಿನಾಂಕ 07/07/2020 ರಂದು 1300 ಗಂಟೆಗೆ ಫಿರ್ಯಾದಿ ಶ್ರೀ ಅನಿಲಕುಮಾರ ತಂದೆ ಬಸವರಾಜ ಬಿರಾದಾರ ವಯ 44 ವರ್ಷ,  ಉ-ಜೆಸ್ಕಾಂ ಶಾಖಾಧಿಕಾರಿ  ಯುನಿಟ ನಂ 03 ಬೀದರ ಉಪ ವಿಭಾಗ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆದರೆ ಬೀದರ ತಾಲುಕಿನ ಚಿಟ್ಟಾವಾಡಿ ಗ್ರಾಮ ಶಿವಾರದಲ್ಲಿ ಇರುವ ಚಿಟ್ಟಾವಾಡಿ ಹೌಸಿಂಗ ಬೊರ್ಡ ಖಾಲಿ ನಿವೆಶನ ಬಡಾವಣೆಯಲ್ಲಿ ಜೆಸಕಾಂ ಇಲಾಖೆಗೆ ಸೇರಿದ ವಿದ್ಯುತ ಸರಬರಾಜು ಕುರಿತು ಟ್ರಾಂಸಫಾರಂಗಳು ಅಳವಡಿಸಿದ್ದು ಇರುತ್ತದೆ. ದಿನಾಂಕ 28/06/2020 ರಂದು ಪಿರ್ಯಾದಿಯವರು ಸದರಿ ಎರಿಯಾದಲ್ಲಿ ವಿದ್ಯುತ ಸರಬರಾಜು ಪರಿಶಿಲನೆ ಹಾಗು ಲೈನ ಫಾಲ್ಟ ಪರಿಶಿಲಿಸಲು  ಹೊಗಿದ್ದು ಸದರಿ ಟ್ರಾಂಸಫಾರಂ ಗಳ ರಿಡಿಂಗ ಚೇಕ ಮಾಡಿರುತ್ತಾರೆ.  ಪುನಃ ದಿನಾಂಕ 06/07/2020 ರಂದು  ಮುಂಜಾನೆ 1000 ಗಂಟೆಯ ಸುಮಾರಿಗೆ ಪರಿಶೀಲನೆ ಹಾಗು ರಿಡಿಂಗ ಚೇಕ ಮಾಡಲು ಹೊದಾಗ ಅಲ್ಲಿ ಸದರಿ ಟ್ರಾಂಸಫಾರಂಗಳು ಕೇಳಗೆ ಬಿದ್ದಿದು ನೊಡಿ ಪರಿಶಿಲಿಸಿದಾಗ  ಟ್ರಾಂಸಫಾರಂ ಗಳಲ್ಲಿನ ಅಲುಮಿನಿಯಮ ಕಾಯಿಲ ಹಾಗು ಆಯಿಲ ಕಳವು ಆಗಿದ ಬಗ್ಗೆ ತಿಳಿದು   ಮೇಲಾಧೀಕಾರಿಗಳಿಗೆ ಈ ವಿಷಯ ತಿಳಿಸಿರುತ್ತೆನೆ,  ಅಂದಾಜು 90300=00 ರೂಪಾಯಿ ಬೆಲೆ ಬಾಳುವ ಆಯಿಲ ಮತ್ತು ಅಲುಮಿನಿಯಮ ಕಾಯಿಲ ಯಾರೊ ಕಳ್ಳರು ದಿನಾಂಕ.28-06-2020 ರಂದು 1800 ಗಂಟೆಯಿಂದ ದಿ, 06/07/2020 ರಂದು 1000 ಗಂಟೆಯ ಅವಧಿಯಲ್ಲಿ ಕಳವು ಮಾಡಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಗಾಂಧಿಗಂಜ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 104/2020 ಕಲಂ 78(3) ಕೆ.ಪಿ. ಕಾಯ್ದೆ :-
ದಿನಾಂಕ 07/07/2020 ರಂದು  ಬೀದರ ಜಹಿರಾಬಾದ ರೋಡಿಗೆ ಇರುವ ಶಹಾರ  ಹನುಮಾನ ಮಂದಿರದ ಹತ್ತಿರ   ಒಬ್ಬ ವ್ಯಕ್ತಿ 1ರೂಪಾಯಿಗೆ  100ರೂಪಾಯಿ ಕೊಡವುದಾಗಿ ಕುಗುತ್ತಾ ಮಟಕಾ ಚಿಟಿ ಬರೆದುಕೊಳ್ಳೂತ್ತಿದ್ದುದನ್ನು ದೃಡಪಡಿಸಿಕೊಂಡು ಪಿಎಸ್ಐ ರವರು ಸಿಬ್ಬಂದಿಯೊಂದಿಗೆ ಮಟಕಾ ಚಿಟಿ ಬರೆದುಕೊಳ್ಳುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ನಡೆಯಿಸಿ  ಅವನ ಹೆಸರು ವಿಚಾರಿಸಲು ಅವನು ತನ್ನ ಹೆಸರು ಬಸವರಾಜ ತಂದೆ ಶರಣಪ್ಪಾ ಮಂಡಪ್ಪನೋರ ವಯ 28 ವರ್ಷ ಸಾ: ಲಾಡಗೇರಿ ಅಂತಾ ತಿಳಿಸಿದಾಗ ಅವನ ಆಂಗ ಝಡ್ತಿ ಮಾಡಲು ಅವನ ಬಳಿ ನಗದು ಹಣ 2,200/- ಮತ್ತು 3 ಮಟಕ ಚೀಟಿಗಳು ಹಾಗೂ ಒಂದು ಬಾಲ ಪೆನ್ನು ಅವನಿಂದ ವಶ ಪಡಿಸಿಕೊಂಡಿದ್ದು ಇರುತ್ತದೆ ನಂತರ ಅವನಿಗೆ ವಿಚಾರಿಸಲು ಅವನು ತಾನು ಬರೆದುಕೊಂಡು ಮಟಕಾ ಚಿಟಿ ಮತ್ತು ಹಣವನ್ನು ಬೀದರ ನಗರದ  ಲಾಡಗೇರಿ ಓಣಿಯ ರಮೇಶ ತಂದೆ ಮೊಹನರಾವ ಜಮಾದಾರ 30 ವರ್ಷ ಜಾತಿ ಕಬ್ಬಲಿಗೆರ ಉ: ಕೂಲಿ ಕೆಲಸ ಸಾ: ಲಾಡಗೇರಿ ಇತನಿಗೆ ನಿಡುತ್ತೇನೆ ಅಂತಾ ತಿಳಿಸಿದ ಇರುತ್ತದೆ. ಅವನ ಬಳಿ ಇದ್ದ ನಗದು ಹಣ ಮತ್ತು ಮಟಕಾ ಚೀಟಿ ಹಾಗೂ ಬಾಲ ಪೆನ್ನನ್ನು  ನಗದು ಹಣ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ. 


ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 89/2020 ಕಲಂ 78(3) ಕೆಪಿ ಕಾಯ್ದೆ :-
ದಿನಾಂಕ:07/07/2020 ರಂದು 10:30 ಗಂಟೆಗೆ ನಾನು ಸುನೀಲ್ ಕುಮಾರ ಪಿ.ಎಸ. [ಕಾ&ಸು] ಪೊಲೀಸ್ ಠಾಣೆಯಲ್ಲಿರುವಾಗ ಬಸವ ಕಲ್ಯಾಣ ನಗರದ ಸದಾನಂದ ಮಠದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 80/-ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣಪಡೆದು ನಸಿಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಗುಪ್ತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಬಸವಕಲ್ಯಾಣ ನಗರದ ಸದಾನಂದ ಮಠದಿಂದ ದಿಂದ 50 ಅಡಿ ಅಂತರದಲ್ಲಿ ಜೀಪ್ ನಿಲ್ಲಿಸಿ ಮರೆಯಾಗಿ ನಿಂತು ನೋಡಲು ಭಾತ್ಮಿಯಂತೆ ಸದಾನಂದ ಮಠದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಗೆ 1 ರೂಪಾಯಿಗೆ 80/-ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದು ಕೊಳ್ಳುವುದನ್ನು ನೋಡಿ ಸಮಯ 12:30 ಗಂಟೆಗೆ ಎಲ್ಲರು ಒಮ್ಮಲೆ ದಾಳಿಮಾಡಿದಾಗ ಮಲ್ಲಿಕಾರ್ಜುನ ಸಿಪಿಸಿ-1043 ರವರು ಹಿಡಿದು ಕೊಂಡಿದಾಗ  ಪಿ.ಎಸ್. [ಕಾ&ಸು] ಸದರಿ ವ್ಯಕ್ತಿಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಮಹ್ಮದ ಸಾಕೀಬ ತಂದೆ ಸಲಿಮೋದ್ದಿನ ಮಠವಾಲೆ ವಯಸ್ಸು//26 ವರ್ಷ ಜಾತಿ//ಮುಸ್ಲಿಂ //ಗೋಲ್ಡಸ್ಮಿತ್ ಸಾ//ಖಿಲ್ಲಾಗಲ್ಲಿ ಬಸವಕಲ್ಯಾಣ ಎಂದು ತಿಳಿಸಿದಾಗ ಅವನ ಅಂಗ ಶೋಧನೆ ಮಾಡಲು ಅವನ ಹತ್ತಿರ ನಗದು ಹಣ 102500/-ರೂ,ಮತ್ತು 02 ಮಟಕಾ ಚೀಟಿ ಹಾಗು ಒಂದು ಬಾಲ್ ಪೆನ್ ನೇದವುಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

Tuesday, July 7, 2020

BIDAR DISTRICT DAILY CRIME UPDATE 07-07-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 07-07-2020

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 76/2020 ಕಲಂ 379 ಐಪಿಸಿ :-

ದಿನಾಂಕ 06/07/2020  ರಂದು 1915 ಗಂಟೆಗೆ ಫಿರ್ಯಾದಿ  ಶ್ರೀ. ನರಸಿಂಹ ಮೈಸೂರ ತಂದೆ ನಾರಾಯಣರಾವ ಮೈಸೂರ ವಯ:35 ವರ್ಷ ಜಾತಿ:ಪದ್ಮಶಾಲಿ(ನೇಕಾರ) ಉ:ಖಾಸಗಿ ನೌಕರಿ  ಸಾ/ವಿದ್ಯಾನಗರ ಕಾಲೋನಿ 11 ನೇ ಕ್ರಾಸ  ಬೀದರ  ರವರು ಠಾಣೆಗೆ ಹಾಜರಾಗಿ ತನ್ನದೊಂದು ಕನ್ನಡದಲ್ಲಿ ಲಿಖಿತ  ದೂರನ್ನು ಸಲ್ಲಿಸಿದ್ದು ಸ್ವೀಕರಿಸಿಕೊಂಡಿದ್ದು, ದೂರಿನ ಸಾರಾಂಶವೇನಂದರೆ, ಫಿರ್ಯಾದಿಯು ಲಾಹೋಟಿ ಷೋರೂಮನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ ಅಂತ ಕೆಲಸ ಮಾಡಿಕೊಂಡು  ಉಪಜೀವಿಸಿಕೊಂಡಿದ್ದು  2017  ನೇ ಸಾಲಿನಲ್ಲಿ ಒಂದು  ಹೊಂಡಾ ಶೈನ  ಮೋಟರ ಸೈಕಲ  ನಂ ಕೆಎ38ಯು4888 ನೇದ್ದನ್ನು  ಖರಿದಿಸಿದ್ದು ಇರುತ್ತದೆ.     ಹೀಗಿರುವಾಗ ದಿನಾಂಕ 23/06/2020  ರಂದು ಬೆಳಿಗ್ಗೆ 11:00 ಎ.ಎಮ. ಗಂಟೆಗೆ ತನ್ನ ಮೊಟರ ಸೈಕಲನ್ನು ಪ್ರತಾಪನಗರ ದಲ್ಲಿರುವ ಲಾಹೋಟಿ ಷೋರೂಮಿನ ಮುಂದೆ ನಿಲ್ಲಿಸಿ ಷೋರೂಮನಲ್ಲಿ ಕೆಲಸಕ್ಕಾಗಿ ಹೋಗಿದ್ದು, 11:30 ಗಂಟೆಯ ಸಮಯಕ್ಕೆ ಷೊರೂಮಿನಿಂದ ಹೊರಗೆ ಬಂದು ನೋಡುವಷ್ಟರಲ್ಲಿ    ಮೊಟರ ಸೈಕಲ ನಿಲ್ಲಿಸಿದ ಜಾಗದಲ್ಲಿ ಇರಲಿಲ್ಲ.      ಕಳುವಾದ ಮೊಟರ ಸೈಕಲನ್ನು ಎಲ್ಲಾ ಕಡೆಗೆ ಹುಡುಕಾಡಿ, ಸಿಗದಿದ್ದಾಗ  ಠಾಣೆಗೆ ಬಂದು ದೂರು ನೀಡಲು ತಡವಾಗಿರುತ್ತದೆ. ಮೋ.ಸೈಕಲನ ಅಂ.ಕಿ. 30,000/- ಇರುತ್ತದೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 88/2020 ಕಲಂ 78(3) ಕೆಪಿ ಕಾಯ್ದೆ :-

ದಿನಾಂಕ:06/07/2020 ರಂದು 11:30 ಗಂಟೆಗೆ ಪಿಎಸ್ಐ ರವರು ಪೊಲೀಸ್ ಠಾಣೆಯಲ್ಲಿರುವಾಗ ಬಸವ ಕಲ್ಯಾಣ ನಗರದ ಮುಂಡೆಪಾಳಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 80/-ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣಪಡೆದು ನಸಿಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಎಂಬ ಮಾಹಿತಿ ಬಂದಿದರ ಮೇರೆಗೆ ಸಿಬ್ಬಂದಿಯೊಂದಿಗೆ  ಹೋಗಿ ನೋಡಿದಾಗ ಮುಂಡೆಪಾಳಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಗೆ 1 ರೂಪಾಯಿಗೆ 80/-ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದು ಕೊಳ್ಳುವುದನ್ನು ನೋಡಿ ಸಮಯ 16:00 ಗಂಟೆಗೆ   ದಾಳಿಮಾಡಿ ತಾಜ ತಂದೆ ಸುಲ್ತಾನಸಾಬ ಸೈಯದ ವಯಸ್ಸು//22 ವರ್ಷ ಜಾತಿ//ಮುಸ್ಲಿಂ //ಕೂಲಿಕೆಲಸ ಸಾ//ರೀಕ್ಷಾ ಕಾಲೋನಿ ಬಸವಕಲ್ಯಾಣ ಇತನನ್ನು ಹಿಡಿದು ಅವನ ಅಂಗ ಶೋಧನೆ ಮಾಡಲು ಅವನ ಹತ್ತಿರ ನಗದು ಹಣ 1250/-ರೂ,ಮತ್ತು 02 ಮಟಕಾ ಚೀಟಿ ಹಾಗು ಒಂದು ಬಾಲ್ ಪೆನ್ ಸಿಕ್ಕಿರುತ್ತದೆ. ನೇದ್ದವುಗಳು ಒಂದು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಕೊಂಡು ತನಿಖೆ ಕೈಗೋಳ್ಳಲಾಗಿದೆ.

ಕಮಲನಗರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 08/2020 ಕಲಂ 174 ಸಿಆರ್.ಪಿ.ಸಿ:-

ದಿನಾಂಕ 6-7-2020 ರಂದು 0900 ಗಂಟೆಗೆ ಶ್ರೀ ದೇವಿದಾಸ ತಂದೆ ಧನಾಜಿ ಜಟಗೋಂಡ ವಯ 50 ವರ್ಷ ಜಾ// ಕುರುಬ ಉ// ಓಕ್ಕಲುತನ ಸಾ//ಸಂಗನಾಳ ರವರು ಠಾಣೆಗೆ ಹಾಜರಾಗಿ   ಲಿಖತ ದೂರು ಅರ್ಜಿ ಸಲ್ಲಿಸಿದರ ಸಾರಾಂಶವೆನೆಂದರೆ ಇವರ ತಮ್ಮ ಲಕ್ಷ್ಮಣ ತಂದೆ ಧನಾಜಿ ಜಟಗೊಂಡ ವಯ// 35 ವರ್ಷ ಸಾ// ಸಂಗನಾಳ ಗ್ರಾಮದ ನಿವಾಸಿಯಾಗಿದ್ದು ಇವರಿಗೆ 3 ಎಕ್ಕರೆ 15 ಗುಂಟೆ  ಜಮೀನು ಇದ್ದು ಓಕ್ಕಲುತನ ಕೆಲಸ ಮಾಡಿಕೊಂಡು ಇರುತ್ತಾನೆ. ಎರಡು ಸಲ ಸೋಯಾಬೀನ  ಬೀಜ ಬಿತ್ತಿದ್ದರು ಮಳಕೆ ಎಳಲಿಲ್ಲ ಬ್ಯಾಂಕೀನ ಸಾಲ ಕೂಡ ಆಗಿದೆ ಸಾಲ ಹೇಗೆ ತಿರಿಸುವುದು ಹೆಂಡತಿ ಮಕ್ಕಳಿಗೆ ಹೇಗೆ ಸಾಕುವುದು ಅಂತ ಮನಸ್ಸಿನಲ್ಲಿ ವಿಚಾರ ಮಾಡುತ್ತಾ ಆಗಾಗ  ಫಿರ್ಯಾದಿಗೆ ಸಿಕ್ಕಾಗ ತಿಳಿಸಿತ್ತಾ ಇದ್ದನ್ನು . ಈ ಮೇಲಿನ ವಿಷಯಕ್ಕೆ ಮನ ನೊಂದು  ದಿನಾಂಕ 5-7-2020 ರಂದು 1600 ಗಂಟೆ ಸೂಮಾರಿಗೆ ತನ್ನ ಮನೆಯಲ್ಲಿ ಯಾರು ಇಲ್ಲದಿದ್ದಾಗ 4 ಪಿ.ಎಮ. ಗಂಟೆಗೆ ವಿಷ ಕುಡಿದಿದರಿಂದ ಚಿಕಿತ್ಸೆ ಕುರಿತು ಔರಾದ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೊಗಿದ್ದು ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆ ಕರಿತು ಬೀದರ ಜೀಲ್ಲಾ ಆಸ್ಪತ್ರೆಗೆ ಕಳಸಿದ್ದು. ಬೀದರ ಜೀಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಚಿಕಿತ್ಸೆ ಫಲಕಾರಿ ಆಗದೆ   ದಿನಾಂಕ 6/7/2020 ರಂದು ನಸುಕಿನ ಜಾವ 0330 ಗಂಟೆಗೆ ಮೃತ್ತ ಪಟ್ಟಿದ್ದು ಇರುತ್ತದೆ. ಫಿರ್ಯಾದಿ ತಮ್ಮ ಲಕ್ಷ್ಮಣ ಬ್ಯಾಂಕೀನ ಸಾಲ ಹಾಗೂ ತನ್ನ ಹೋಲದಲ್ಲಿ ಎರಡು ಸಲ ಸೋಯಾಬೀನ ಬೀಜ ಬಿತ್ತಿದ್ದರು ಕೂಡ ಏಳಲೀಲ್ಲ ಮತ್ತು 125000/- ರೂ. ಬ್ಯಾಂಕ್ ಸಾಲ ಕೂಡ ಆಗಿದೆ ಎಂದು  ಮನನೊಂದು ವಿಷ ಕುಡಿದು ಆತ್ಮ ಹತ್ಯೆ  ಮಾಡಿಕೊಂಡಿರುತ್ತಾನೆ. ಇತನ ಮರಣ ಬಗ್ಗೆ ಯಾರ ಮೆಲೆಯು ಯಾವದೇ ಸಂಶಯ ಇರುವುದಿಲ್ಲ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.