Police Bhavan Kalaburagi

Police Bhavan Kalaburagi

Monday, August 3, 2020

BIDAR DISTRICT DAILY CRIME UPDATE 03-08-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 03-08-2020

ಜನವಾಡಾ ಪೊಲೀಸ್ ಠಾಣೆ ಯು.ಡಿ.ಆರ್ ನಂ. 13/2020, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 02-08-2020 ರಂದು ಫಿರ್ಯಾದಿ ಚಂದ್ರಕಾಂತ ತಂದೆ ಶ್ಯಾಮು ರಾಠೋಡ್ ವಯ: 45 ವರ್ಷ, ಜಾತಿ: ಲಂಬಾಣಿ, ಸಾ: ಖಾನಾಪೂರ, ತಾ: ಭಾಲ್ಕಿ, ಜಿ: ಬೀದರ ರವರ ಮಗನಾದ ಗಣೇಶ ತಂದೆ ಚಂದ್ರಕಾಂತ ರಾಠೋಡ್ ವಯ: 14 ವರ್ಷ ಇತನು ತಮ್ಮ ತಾಂಡಾದ ಗೆಳೆಯರಾದ ಗುರುನಾಥ ತಂದೆ ಪರಶುರಾಮ ಚೌಹಾಣ ಮತ್ತು ಪ್ರೇಮ್ ತಂದೆ ಜೈಸಿಂಗ್ ಚೌಹಾಣ ರವರ ಜೊತೆಯಲ್ಲಿ ಹೊನ್ನಿಕೇರಿ ಶಿವಾರದ ಅರಣ್ಯದಲ್ಲಿರುವ ಚೆಕಡ್ಯಾಮಿಗೆ ತಮ್ಮ ತಮ್ಮ ದನಕರು ಹಾಗು ಆಡುಗಳಿಗೆ ನೀರು ಕುಡಿಸಿ ತಾವು ನೀರು ಕುಡಿಯಲು ಹೋದಾಗ ಗಣೇಶ ಇತನು ಆಕಸ್ಮಿಕವಾಗಿ ಕಾಲು ಜ್ಯಾರಿ ಚೆಕಡ್ಯಾಮ್ ನೀರಿನಲ್ಲಿ ಬಿದ್ದು ಮುಳುಗುತ್ತಿರುವಾಗ ಅವನಿಗೆ ಹಿಡಿಯಲು ಹೊದ ಗುರುನಾಥ ಚೌಹಾಣ ಇವನು ಕೂಡಾ ಈಜು ಬಾರದೇ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುತ್ತಾರೆ, ಅವರ ಸಾವಿನಲ್ಲಿ ಯಾರ ಮೇಲೆ ಯಾವುದೆ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

ಮನ್ನಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 34/2020, ಕಲಂ. 302 ಐಪಿಸಿ :-
ದಿನಾಂಕ 02-08-2020 ರಂದು ಫಿರ್ಯಾದಿ ಬಸವರಾಜ ತಂದೆ ಝರೆಪ್ಪಾ ಬಸಗೊಂಡ ವಯ: 45 ವರ್ಷ, ಜಾತಿ: ಎಸ.ಟಿ ಗೊಂಡ, ಸಾ: ಖಾಸೆಂಪುರ(ಪಿ) ಗ್ರಾಮ ರವರ ಮಗನಾದ ಅನೀಲ ವಯ: 16 ವರ್ಷ ಈತನಿಗೆ ಯಾರೋ ಅಪರಿಚಿತ ವ್ಯಕ್ತಿಗಳು ಕೈ, ಕಾಲು, ಬಾಯಿ ಕಟ್ಟಿ ಬೀರದೇವ ಗುಡಿಯ ಹತ್ತಿರ ಇದ್ದ ಒಂದು ಸರ್ಕಾರಿ ಗಿಡದ ಟೊಂಗೆಗೆ ಹಗ್ಗದಿಂದ ಕಟ್ಟಿ ನೇಣು ಹಾಕಿ ಕೋಲೆ ಮಾಡಿ ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಗದಲ್  ಪೊಲೀಸ ಠಾಣೆ ಅಪರಾಧ ಸಂ. 46/2020, ಕಲಂ. 279, 304(ಎ) ಐಪಿಸಿ :-
ದಿನಾಂಕ 02-08-2020 ರಂದು ಫಿರ್ಯಾದಿ ರವಿ ತಂದೆ ವಿಠಲ ಮೇತ್ರೆ ವಯ: 23 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಬಗದಲ, ತಾ: ಜಿಲ್ಲಾ: ಬೀದರ ರವರ ತಂದೆಯಾದ ವಿಠಲ ತಂದೆ ಶಿವರಾಯ ಮೇತ್ರೆ ವಯ: 55 ವರ್ಷ, ಸಾ: ಬಕಚೌಡಿ ರವರು ತಮ್ಮ ಮೊಟಾರ ಸೈಕಲ ನಂ. ಕೆಎ-38/ಎಸ್-8516 ನೇದರ ಮೇಲೆ ಬಗದಲಗೆ ಬರುವಾಗ ತನ್ನ ಅತಿವೇಗ ಹಾಗು ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಬಗದಲ ಧರಿಯ ಮೇಲಿರುವ ತಿರುವು ರಸ್ತೆಯ ಮೇಲೆ ತನ್ನ ವಾಹನವನ್ನು ಕಂಟ್ರೋಲ್ ಮಾಡದೇ ತಿರುವು ರಸ್ತೆಯ ಬದಿಯಲ್ಲಿ ಹಾಕಲಾದ ರಸ್ತೆಯ ಸನ್ನೆಗಳ ಕಂಬಕ್ಕೆ ಡಿಕ್ಕಿ ಮಾಡಿ ವಾಹನ ಸಮೇತ ರಸ್ತೆಯ ಬದಿಯಲ್ಲಿ ಬಿದ್ದ ಪ್ರಯುಕ್ತ ಅವರ ತಲೆಯ ಬಲ ಭಾಗಕ್ಕೆ ಭಾರಿ ಒಳ ಪೆಟ್ಟಾಗಿ ಸಾಕಷ್ಟು ರಕ್ತ ಹೊರ ಬಂದಿರುತ್ತದೆ & ಅವರ ಎಡಗಣ್ಣಿನ ಹುಬ್ಬಿನಿಂದ ಎಡಗಡೆಯ ಕಪಾಳದವರೆಗೆ ಭಾರಿ ರಕ್ತಗಾಯ ಮತ್ತು ಡಗಡೆ ಎದೆಯ ಮೇಲೆಯು ಸಹ ರಕ್ತ ಗಾಯಗಳಾಗಿ ಸ್ಧಳದಲ್ಲಿಯೇ ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂ. 46/2020, ಕಲಂ. 32, 34 ಕರ್ನಾಟಕ ಅಬಕಾರಿ ಕಾಯ್ದೆ :-
ದಿನಾಂಕ 01-08-2020 ರಂದು 2345 ಗಂಟೆಗೆ ಯರನಳ್ಳಿ ಗ್ರಾಮದ ದಶರಥ ಪರ್ಬುನೋರ ಈತನು ತನ್ನ ಹೋಟಲ್ ಅಂಗಡಿಯಲ್ಲಿ ಸರಾಯಿ ಬಾಟಲಗಳು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾನೆಂದು ಗಂಗಮ್ಮ ಪಿ.ಎಸ್. ಜನವಾಡಾ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹೋಗಿ ದಿನಾಂಕ 02-08-2020 ರಂದು ಆರೋಪಿ ದಶರಥ ತಂದೆ ಮಾಣಿಕ ಪರ್ಬಾನೋರ ವಯ: 40 ವರ್ಷ, ಜಾತಿ: ಎಸ್.ಟಿ (ಗೊಂಡ), ಸಾ: ಯರನಳ್ಳಿ ಗ್ರಾಮ ಇತನ ಮೇಲೆ ದಾಳಿ ಮಾಡಿ ಆತನಿಗೆ ದಸ್ತಗಿರಿ ಮಾಡಿ ಅವನಿಂದ 1) 90 ಎಮ್.ಎಲ್ 60 ಓರಿಜಿನಲ್ ಚಾಯ್ಸ್ಡೀಲಕ್ಸ್ವಿಸ್ಕಿಯ ಸರಾಯಿ ತುಂಬಿದ ಫುಟ್ಟದ ಪಾಕೇಟಗಳು .ಕಿ 2107.8 ರೂ., 2) 180 ಎಮ್.ಎಲ್ 09 ಇಂಪೇರಿಯಲ್ ಬ್ಲ್ಯೂ ಸರಾಯಿ ತುಂಬಿದ ಬಾಟಲ್ಗಳು .ಕಿ 1783.89 ರೂ., ನೇದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 102/2020, ಕಲಂ. 269 ಐಪಿಸಿ ಜೊತೆ 87 ಕರ್ನಾಟಕ ಪೊಲೀಸ್ ಕಾಯ್ದೆ :-
ದಿನಾಂಕ 02-08-2020 ರಂದು ಬಸವಕಲ್ಯಾಣ ನಗರದ ಇಂದಿರಾ ಕ್ಯಾಂಟಿನ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೊರೊನಾ ಸೊಂಕು ಹರಡಬಹುದು ಎಂದು ಗೊತ್ತಿದ್ದರು ಬಗ್ಗೆ ನೀರ್ಲಕ್ಷ ವಹಿಸಿ ಕೆಲವು ಜನರು ಗುಂಪಾಗಿ ಕುಳಿತುಕೊಂಡು ಹಣ ಹಚ್ಚಿ ಪಣ ತೊಟ್ಟು ಇಸ್ಪಿಟ್ ಎಲೆಗಳ ಅಂದರ ಬಾಹರ್ ನಸಿಬಿನ ಜೂಜಾಟವನ್ನು ಆಡುತ್ತಿದ್ದಾರೆಂದು ಕರೆ ಮುಖಾಂತರ ಸುನಿಲಕುಮಾರ ಪಿ.ಎಸ್. (ಕಾ&ಸೂ) ಬಸವಕಲ್ಯಾಣ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿಯನ್ನು ತಿಳಿದು ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಸವಕಲ್ಯಾಣ ನಗರದ ಇಂದಿರಾ ಕ್ಯಾಂಟಿನ್ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಬಾತ್ಮಿಯಂತೆ ಬಸವಕಲ್ಯಾಣ ನಗರದ ಇಂದಿರಾ ಕ್ಯಾಂಟಿನ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ಮಹೆತಾಬ ತಂದೆ ಅಬ್ದುಲ್ಸಾಬ ವಯ: 32 ವರ್ಷ, ಜಾತಿ: ಮುಸ್ಲಿಂ, 2) ಅಹ್ಮೆದ ತಂದೆ ಇಸ್ಮಾಯಿಲ್ಸಾಬ ವಯ: 21 ವರ್ಷ, ಜಾತಿ: ಮುಸ್ಲಿಂ, 3) ಸೈಯದ ಮುನವರ ತಂದೆ ಸೈಯದ ಅಬ್ದುಲ್ಸಾಬ ವಯ: 30 ವರ್ಷ, ಜಾತಿ: ಮುಸ್ಲಿಂ, 3) ಸೈಯದ ಮುನವರ ತಂದೆ ಸೈಯದ ಅಬ್ದುಲ್ಸಾಬ ವಯ: 30 ವರ್ಷ, ಜಾತಿ: ಮುಸ್ಲಿಂ, ಮೂವರು ಸಾ: ರೇಣಾಗಲ್ಲಿ ಬಸವಕಲ್ಯಾಣ, 4) ಅಮ್ಜದ್ ತಂದೆ ಗುಲಾಮರಸೂಲ ವಯ: 28 ವರ್ಷ, ಜಾತಿ: ಮುಸ್ಲಿಂ, ಹಾಗು 5) ಬಬ್ಲು ತಂದೆ ಅಜಿಮೋದ್ದಿನ್ ವಯ: 24 ವರ್ಷ, ಜಾತಿ: ಮುಸ್ಲಿಂ, ಇಬನ್ಬರು ಸಾ: ಯಾಕೂಬಪೂರಾ ಬಸವಕಲ್ಯಾಣ ಇವರೆಲ್ಲರೂ ಗುಂಪಾಗಿ ಕುಳಿತುಕೊಂಡು ಕೊರೋನಾ ಸೊಂಕು ಹರಡಬಹುದು ಎಂದು ಗೊತ್ತಿದ್ದರು ಮಾಸ್ಕ್ ಧರಿಸದೆ ಮತ್ತು ಸಮಾಜಿಕ ಅಂತರ ಕಾಪಾಡದೆ ಬಗ್ಗೆ ನೀರ್ಲಕ್ಷ ವಹಿಸಿ ಇಸ್ಪಿಟ್ ಎಲೆಗಳ ಅಂದರ ಬಾಹರ ನಸೀಬಿನ ಜೂಜಾಟವನ್ನು ಹಣ ಹಚ್ಚಿ ಪಣ ತೊಟ್ಟು ಆಡುತ್ತಿರುವುದನ್ನು ನೋಡಿ ಎಲ್ಲರು ಒಮ್ಮೆಲೆ ಸದರಿ ಆರೋಪಿತರ ಮೇಲೆ ದಾಳಿ ಮಾಡಿ ಹಿಡಿದುಕೊಂಡು ಅವರಿಂದ ಒಟ್ಟು ನಗದು ಹಣ 5400/- ರೂ ಮತ್ತು 52 ಇಸ್ಪಿಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Sunday, August 2, 2020

BIDAR DISTRICT DAILY CRIME UPDATE 02-08-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 02-08-2020

ಜನವಾಡಾ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ: 44/2020 ಕಲಂ 32, 34 ಕರ್ನಾಟಕ ಅಬಕಾರಿ ಕಾಯ್ದೆ : -
ದಿನಾಂಕ 01-08-2020 ರಂದು 1800 ಗಂಟೆಗೆ ಯರನಳ್ಳಿ ಗ್ರಾಮದ ಜಗನ್ನಾಥ ಫುಲಾರಿ ರವರ ಹೊಟೇಲ್ ಕೌಂಟರ ಹತ್ತಿರ ಒಬ್ಬ ವ್ಯಕ್ತಿಯು ಯಾವುದೇ ಕಾಗದ ಪತ್ರ ಲೈಸನ್ಸ ಇಲ್ಲದೇ ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದಾನೆ. ಅಂತ ಖಚಿತ ಬಾತ್ಮಿ ಮೇರೆಗೆ. ಪಿಎಸ್ಐ ರವರು ಸಿಬ್ಬಂದಿ ಮತ್ತು ಪಂಚರೊಂದಿಗೆ ಯರನಳ್ಳಿ ಗ್ರಾಮದ ಮಾಣಿಕೇಶ್ವರ ಮಂದಿರದ ಹತ್ತಿರ ಹೋಗಿ ಜಗನ್ನಾಥ ಫೂಲಾರಿ ರವರ ಹೊಟೇಲ್ ಹತ್ತಿರ ಹೋಗಿ ನೋಡಲಾಗಿ ಒಬ್ಬ ವ್ಯಕ್ತಿಯು ಸರಾಯಿ ಮಾರಾಟ ಮಾಡುತ್ತಿದ್ದು. ಆತನ ಮೇಲೆ 1845 ಗಂಟೆಗೆ ದಾಳಿ ಮಾಡಿ ಸರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ದಸ್ತಗಿರಿ ಮಾಡಿ ಅವನ ಹೆಸರು ಮತ್ತು ವಿಳಾಸವನ್ನು ವಿಚಾರಿಸಲಾಗಿ ಆತನು ತನ್ನ ಹೆಸರು ಜಗನ್ನಾಥ ತಂದೆ ರೇವಣೆಪ್ಪಾ ಹೂಗಾರ ವಯ|| 47 ವರ್ಷ, ಜಾತಿ|| ಹೂಗಾರ ಉ|| ಹೊಟೇಲ್ ಅಂಗಡಿ ಸಾ|| ಯರನಳ್ಳಿ ಗ್ರಾಮ  ಅಂತಾ ತಿಳಿಸಿದ್ದು. ಇವನ ಹತ್ತಿರ ರಟ್ಟಿನ ಕಾಟನನಲ್ಲಿ  1) McDowells Whisky 180 ಎಮ್.ಎಲ್. 5 ಬಾಟಲ್ಗಳು ಇದ್ದು ಅವುಗಳ ಅಂದಾಜು ಕಿಮ್ಮತ್ತು ಒಂದಕ್ಕೆ ರೂ 198.23 ಯಂತೆ ಒಟ್ಟು /- 991.15/-ರೂ. 2) Officer choice Whiskey 180 ಎಮ್ ಎಲ್ 19 ಸರಾಯಿ ತುಂಬಿದ ಪುಟ್ಟದ ಪಾಕೇಟಗಳು ಇದ್ದು, ಅವುಗಳ ಅಂದಾಜು ಕಿಮ್ಮತ್ತು ಒಂದಕ್ಕೆ ರೂ 106.23 ಯಂತೆ ಒಟ್ಟು 2018.37/- 3) Original Choice Whisky  90 ಎಮ್ ಎಲ್ ನ 50 ಸಾರಾಯಿ ತುಂಬಿದ ಫುಟ್ಟದ ಪಾಕೇಟಗಳು ಇದ್ದು ಅವುಗಳ ಅಂದಾಜು ಕೀಮ್ಮತ್ತು ಒಂದಕ್ಕೆ ರೂ. 35.13 ಯಂತೆ ಒಟ್ಟು 1756.5/- ರೂ ನೇದವುಗಳನ್ನು ಜಪ್ತಿ ಮಾಡಿದ್ದು ಸದರಿ ಆರೋಪಿತನಿಗೆ ದಸ್ತಗಿರಿ ಮಾಡಿಕೊಂಡು ಜಪ್ತಿ ಪಂಚನಾಮೆ, ಹಾಗೂ ಮುದ್ದೆ ಮಾಲಿನೊಂದಿಗೆ ಮರಳಿ ಠಾಣೆಗೆ ಬಂದು ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ಜನವಾಡಾ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ: 45/2020 ಕಲಂ 32, 34 ಕರ್ನಾಟಕ ಅಬಕಾರಿ ಕಾಯ್ದೆ : -
ದಿನಾಂಕ 01-08-2020 ರಂದು 2030 ಗಂಟೆಗೆ ಯರನಳ್ಳಿ ಗ್ರಾಮದ ಸಂತೋಷ ಪಬರ್ನೋರ ಈತನು ತನ್ನ ಹೋಟಲ್ ಅಂಗಡಿಯಲ್ಲಿ ಸರಾಯಿ ಬಾಟಲಗಳು ಇಟ್ಟಿಕೊಂಡು ಮಾರಾಟ ಮಾಡುತ್ತಿದ್ದಾನೆ ಅಂತಾ ಖಚೀತ ಬಾತ್ಮಿ ಮೇರೆಗೆ ಪಿಎಸ್ಐ ರವರು ಸಿಬ್ಬಂದಿ ಮತ್ತು ಪಂಚರೊಂದಿಗೆ 2115 ಗಂಟೆಗೆ ದಾಳಿ ಮಾಡಿ. ಸರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿ ಸಂತೋಷ ತಂದೆ ಬೀರಪ್ಪ ಪಬರ್ನೋರ ವಯ|| 29 ವರ್ಷ ಉ|| ಹೋಟಲ್ ಅಂಗಡಿ ಜ್ಯಾ|| ಎಸ್.ಟಿ (ಗೊಂಡ) ಸಾ|| ಯರನಳ್ಳಿ ಗ್ರಾಮ ಈತನಿಗೆ ದಸ್ತಗಿರಿ ಮಾಡಿ. ಅವನ ಕಡೆಯಿಮದ ದಾಳಿಯಲ್ಲಿ ಒಟ್ಟು 90 ಎಮ್.ಎಲ್. ನ ಒಟ್ಟು 96 ಓರಿಜಿನಲ್ ಚೊಯ್ಸ್ ಡೀಲಕ್ಸ್ ವಿಸ್ಕೀಯ ಸರಾಯಿ ತುಂಬಿದ ಫುಟ್ಟದ ಪಾಕೇಟಗಳ ಅಂದಾಜು ಕಿಮ್ಮತ್ತು 3372.48/-ರೂ. ದಷ್ಟು ಜಪ್ತಿ ಮಾಡಿಕೊಂಡು. ದಸ್ತಿಗಿರಿ ಮಾಡಿದ ವ್ಯಕ್ತಿಗೆ ಸದರಿ ಸರಾಯಿ ಪಾಕೇಟ್ಗಳು ತಂದ ಬಗ್ಗೆ ವಿಚಾರಿಸಲಾಗಿ ಅವನು ಬೀದರದ ವೈನ್ ಶಾಪ್ ಒಂದರಿಂದ ಖರೀದಿ ಮಾಡಿಕೊಂಡು ಯರನಳ್ಳಿ ಗ್ರಾಮಕ್ಕೆ ತಂದು ಜನರಿಗೆ ಮಾರಾಟ್ ಮಾಡುತ್ತೇನೆ ಅಂತಾ ತಿಳಿಸಿದ್ದು. ಸದರಿ ಆರೋಪಿತನಿಗೆ ದಸ್ತಗಿರಿ ಮಾಡಿಕೊಂಡು. ಮರಳಿ ಠಾಣೆಗೆ ಬಂದು ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ಜನವಾಡಾ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ: 46/2020 ಕಲಂ 32, 34 ಕರ್ನಾಟಕ ಅಬಕಾರಿ ಕಾಯ್ದೆ : -
ದಿನಾಂಕ 01-08-2020 ರಂದು 2345 ಗಂಟೆಗೆ ಯರನಳ್ಳಿ ಗ್ರಾಮದ ದಶರಥ ಪಬರ್ನೋರ ಈತನು ತನ್ನ ಹೋಟಲ್ ಅಂಗಡಿಯಲ್ಲಿ ಸರಾಯಿ ಬಾಟಲಗಳು ಇಟ್ಟಿಕೊಂಡು ಮಾರಾಟ ಮಾಡುತ್ತಿದ್ದಾನೆ ಅಂತಾ ಖಚೀತ ಬಾತ್ಮಿ ಮೇರೆಗೆ  ಪಿಎಸ್ಐ ರವರು ಸಿಬ್ಬಂದಿ ಮತ್ತು ಪಂಚರೊಂದಿಗೆ ದಿನಾಂಕ 02/08/2020 ರಂದು ಅವನ ಮೇಲೆ 0030 ಗಂಟೆಗೆ ದಾಳಿ ಮಾಡಿ. ಸರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿ ದಶರಥ ತಂದೆ ಮಾಣಿಕ ಪಬರ್ನೋರ ವಯ|| 40 ವರ್ಷ || ಹೋಟಲ್ ಅಂಗಡಿ ಜ್ಯಾ|| ಎಸ್.ಟಿ (ಗೊಂಡ) ಸಾ|| ಯರನಳ್ಳಿ ಗ್ರಾಮ ಈತನಿಗೆ ದಸ್ತಗಿರಿ ಮಾಡಿ. ಅವನ ಕಡೆಯಿಂದ ದಾಳಿಯಲ್ಲಿ 90 ಎಮ್.ಎಲ್. ಒಟ್ಟು 60 ಓರಿಜಿನಲ್ ಚಾಯ್ಸ್ ಡೀಲಕ್ಸ್ ವಿಸ್ಕೀಯ ಸರಾಯಿ ತುಂಬಿದ ಫುಟ್ಟದ ಪಾಕೇಟಗಳು. ಇವುಗಳ ಅಂದಾಜು ಕಿಮ್ಮತ್ತು 2107.8/-ರೂ. ದಷ್ಟು. ಹಾಗೂ 180 ಎಮ್.ಎಲ್. ಒಟ್ಟು 09 ಇಂಪೇರಿಯಲ್ ಬ್ಲ್ಯೂ ಸರಾಯಿ ತುಂಬಿದ ಬಾಟಲ್ಗಳು  ಅಂದಾಜು ಕಿಮ್ಮತ್ತು 1.783.89/-ರೂ. ಮಾಲನ್ನು ಪಂಚರ ಸಮಕ್ಷಮ ಜಪ್ತಿ ಮಾಡಿ ಆರೋಪಯನ್ನು ಬಂಧಿಸಿ ಠಾಣೆಗೆ ಬಂದು ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಾಗಿದೆ

ಹುಮನಾಬಾದ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ : 111/2020 ಕಲಂ 427, 428 ಜೊತೆ 34 ಐಪಿಸಿ ಮತ್ತು ಕಲಂ 2 ಕೆ.ಪಿ.ಡಿ.ಎಲ್.ಪಿ ಕಾಯ್ದೆ :-
ದಿನಾಂಕ 01/08/2020 ರಂದು 1900 ಗಂಟೆಗೆ ಫಿರ್ಯಾದಿ  ಶ್ರೀಮತಿ ಸೀಮಾ ಜೈರಾಜ ಚತುರೆ ಸಾ. ಪ್ರತಾಪನಗರ ಬೀದರ ರವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದು ಸಾರಾಂಶವೆನೆಂದರೆ ನಮ್ಮ ಸಂಸ್ಥೆಯ ಅಡಿಯಲ್ಲಿ ನಡೆಸುತ್ತಿರುವ ಪೂಜ್ಯ ಶಿವಲಿಂಗ ಸ್ವತಂತ್ರ ಪದವಿ ಪೂರ್ವ ಕಾಲೇಜ ಹುಮನಾಬಾದ ಕಟ್ಟಡವನ್ನು ಸಂಪೂರ್ಣ ನೆಲಸಮಗೊಳ್ಳಿಸಿ, ಕಾಗದ ಪತ್ರಗಳು. ಪಿಠೋಪಕರಣಗಳು ಇತ್ಯಾದಿ ರಸ್ತೆಗೆ ಎಸೇದು ಹಾಗೂ ಹತ್ತಿರದ ಗುಂಡಿಗೆ ಎಸೆದು ನಾಶಪಡಿಸಿದ್ದು ಪೂಜ್ಯ ಶಿವಲಿಂಗ ಸ್ವತಂತ್ರ ಪದವಿ ಪೂರ್ವ ಕಾಲೇಜ ನಿವೇಶನವು ಅಧ್ಯಕ್ಷರು ಪೂಜ್ಯ ಶಿವಲಿಂಗ ಸ್ವತಂತ್ರ ಪದವಿ ಪೂರ್ವ ಕಾಲೇಜ ಹುಮನಾಬಾದ ರವರ ಹೆಸರಿನಲ್ಲಿ ಇರುತ್ತದೆ. ಇದು ಪುರ ಸಭೆ ಸಂಖ್ಯೆ 20-103/1 ಇದ್ದು 1994 ರಿಂದ ಸುಮಾರು ಹತ್ತು ಕೋಣೆಗಳುಳ್ಳ ಕಟ್ಟಡವನ್ನು ಹೊಂದಿದೆ. ಇದರ ಮೌಲ್ಯ ಇಂದಿಗೆ ಸುಮಾರು ಹತ್ತು ಕೋಟಿಗೂ ಅಧಿಕವಾಗಿರುತ್ತದೆ. 1989 ರಿಂದ ಸರಕಾರದಿಂದ ವೇತನಾನುದಾನವನ್ನು ಪಡೆಯುತ್ತಿರುವ ಸಾರ್ವಜನಿಕ ಶಿಕ್ಷಣ ಸಂಸ್ಥೆಯಾಗಿದೆ. ಹತ್ತು ಜನ ಸಿಬ್ಬಂದಿಗಳು ಸರಕಾರದಿಂದ ವೇತನಾನುದಾನ ಪಡೆಯುತ್ತಿದ್ದಾರೆ. ನಿನ್ನೆ ದಿವಸ ಅಂದರೆ ದಿನಾಂಕ 31/07/2020 ರ ರಾತ್ರಿ ವೇಳೆಯಲ್ಲಿ ಗಜರಾಜ, ಮಸ್ತಾನ ಅಲಿ ( ಮನ್ನಾಖೇಳ್ಳಿ ಗ್ರಾಮದ) ಹಾಗೂ ಇತರರು ಜೆ.ಸಿ.ಬಿ ಹಾಗೂ ಟ್ರ್ಯಾಕ್ಟರ ಸಹಾಯದಿಂದ ಕಾಜೀನ ಕಟ್ಟಡ ಸಂಪೂರ್ಣವಾಗಿ ನೆಲಸಮಗೊಳಿಸಿರುತ್ತಾರೆ, ಕಾಲೇಜಿನಲ್ಲಿ ಅಭ್ಯಾಸ ಮಾಡಿದ ವಿಧ್ಯಾರ್ಥಿಗಳು ಅಂಕ ಪಟ್ಟಿಗಳು, ವಗರ್ವಣಾ ಪತ್ರಗಳು, ಕಾಲೇಜ ವಾರ್ಷಿಕಾ ಲೆಕ್ಕ ಪತ್ರಗಳು, ವೇತನ ಬಟವಾಡೆ ಮುಂತಾದ ದಾಖಲಾತಿಗಳು ಮತ್ತು ಪೀಟೋಪಕರಣಗಳನ್ನು ರಸ್ತೆಗೆ ಹಾಗೂ ಗುಂಡಿಗೆ ಎಸೆದು ನಾಶ ಪಡಿಸಿರುತ್ತಾರೆ ಹಾಗೂ ಕಾಲೇಜನಲ್ಲಿ ಅಭ್ಯಾಸ ಮಾಡುವ ಮಕ್ಕಳ ಭವಿಷ್ಯದ ಜೊತೆ ಚಲ್ಲಾಟವಾಡಿದಂತಾಗಿದೆ ಸಿಬ್ಬಂದಿಗಳಿಗೂ ಕೂಡ ತುಂಬಾ ಅನ್ಯಾಯವಾಗುತ್ತದೆ. ಪ್ರಯುಕ್ತ ತಾವುಗಳು ವಿಧ್ಯಾರ್ಥಿಗಳ ಹಿತದೃಷಿಯಿಂದ, ಸಿಬ್ಬಂದಿಗಳ ಹಿತದೃಷಿಯಿಂದ, ಕಟ್ಟಡ ಹಾಗೂ ದಾಖಲಾತಿ ನಷ್ಟದಿಂದ ಸಾರ್ವಜನಿಕವಾಗಿ ಆಗಿರುವ ನಷ್ಟವನ್ನು ಗಮನದಲ್ಲಿರಿಸಿ ದೂರನ್ನು ದಾಖಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವ ಮುಖಾಂತರ ನ್ಯಾಯ ಒದಗಸಿಬೇಕೆಂದು ತಮ್ಮಲ್ಲಿ ಕಳಕಳಿಯ ಮನವಿ ಅಂತಾ ಇದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.



.