Police Bhavan Kalaburagi

Police Bhavan Kalaburagi

Monday, February 22, 2021

BIDAR DISTRICT DAILY CRIME UPDATE 22-02-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 22-02-2021

 

ಬೀದರ  ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 12/2021, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ಸಂಗೋಳಗಿ  ಗ್ರಾಮದಲ್ಲಿ ಫಿರ್ಯಾದಿ ಎಮ್.ಡಿ ಪಾಶಾ ತಂದೆ ಎಮ್.ಡಿ ಹನಿಫ ಶಾ ಸಂಗೋಳಗಿವಾಲೆ ವಯ: 50 ವರ್ಷ, ಜಾತಿ: ಮುಸ್ಲಿಂ, ಸಾ: ಹಳೆ ಮೈಲೂರ, ಬೀದರ ರವರ ಸಂಬಂಧಿಕರ ಮನೆಯಲ್ಲಿ ಮದುವೆ ಕಾರ್ಯಕ್ರಮ ಇರುವುದರಿಂದ ಫಿರ್ಯಾದಿಯವರು ದಿನಾಂಕ 20-02-2021 ರಂದು ತನ್ನ ಹೆಂಡತಿ ಅಹೆಮದಿ ಬೆಗಂ ವಯ: 45 ವರ್ಷ ಇಬ್ಬರು ತಮ್ಮ ಮೋಟಾರ ಸೈಕಲ ನಂ. ಕೆ.ಎ-17/ಎಲ್-7183 ನೇದರ ಮೇಲೆ ಹಾಗು ಫಿರ್ಯಾದಿಯ ತಮ್ಮ ಖೂರ್ಷಿದ್ ಅಲಿ ಹಾಗು ಅವನ ಮಗಳಾದ ಮಹೇಕ ವಯ: 12 ವರ್ಷ ರವರು ಮೋಟಾರ ಸೈಕಲ ನಂ. ಕೆ.ಎ-38/ಜೆ-6228 ನೇದರ ಮೇಲೆ ಸಂಗೋಳಗಿ ಗ್ರಾಮಕ್ಕೆ ಹೋಗಿ ರಾತ್ರಿ ಕಾರ್ಯಕ್ರಮ ಮುಗಿಸಿ ಅಲ್ಲಿಯೇ ವಸತಿ ಮಾಡಿ ದಿನಾಂಕ 21-02-2021 ರಂದು ತಮ್ಮ ತಮ್ಮ ಮೋಟಾರ್ ಸೈಕಲಗಳ ಮೇಲೆ ಸಂಗೋಳಗಿಯಿಂದ ಬೀದರಗೆ ಬರುತ್ತಿರುವಾಗ ಬೆಳ್ಳುರಾ ಶಿವಾರದ ಫಾರೆಸ್ಟ ತಿರುವಿನಲ್ಲಿ ಬೀದರ ಕಡೆಯಿಂದ ಸುಜುಕಿ ಸ್ವಿಫ್ಟ್ ಕಾರ ನಂ. ಕೆಎ-38/ಎಮ-3352 ನೇದರ ಚಾಲಕನಾದ ಆರೋಪಿಯು ತನ್ನ ಕಾರನ್ನು ಅತೀವೇಗ ಮತ್ತು ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋಟಾರ ಸೈಕಲಿಗೆ ಡಿಕ್ಕಿ ಮಾಡಿ ನಂತರ ಹಿಂದ ಬರುತ್ತಿದ್ದ ತಮ್ಮನ ಮೋಟಾರ ಸೈಕಲಿಗೂ ಸಹ ಡಿಕ್ಕಿ ಮಾಡಿ ತನ್ನ ಕಾರನ್ನು ನಿಲ್ಲಿಸದೇ ಓಡಿ ಹೋಗಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಯ ಎಡಗಡೆ ಬೆನ್ನ ಛೆಪ್ಪೆಗೆ, ಭುಜಕ್ಕೆ, ಎದೆಗೆ, ತಿಕ್ಕಕ್ಕೆ ಗುಪ್ತಗಾಯವಾಗಿರುತ್ತದೆ, ಫಿರ್ಯಾದಿಯ ಹೆಂಡತಿಗೆ ಎರಡು ಮೋಳಕಾಲ ಕೆಳಗಡೆ ಭಾರಿ ಪೆಟ್ಟಾಗಿ ಕಾಲು ಮುರಿದಿರುತ್ತದೆ ಮತ್ತು ಎಡಗಡೆ ಬೆನ್ನಿನ ಛೆಪ್ಪಿಗೆ, ಬಲಭುಜಕ್ಕೆ, ತಲೆಗೆ ಗುಪ್ತ ಪೆಟ್ಟಾಗಿರುತ್ತದೆ ಮತ್ತು ತಮ್ಮನ ಮಗಳಾದ ಮಹೇಕ ಇವಳಿಗೆ ಎಡಗಾಲ ಪಾದಕ್ಕೆ ತರಚಿದ ಗಾಯ, ಎಡ ಬೆನ್ನಿನ ಛಪ್ಪೆಯ ಮೇಲೆ, ಸೊಂಟಕ್ಕೆ ಗುಪ್ತಗಾಯವಾಗಿರುತ್ತದೆ, ನಂತರ ಸದರಿ ಘಟನೆ ಬಗ್ಗೆ ಫಿರ್ಯಾದಿಯವರು ತಮ್ಮ ಮಕ್ಕಳಾದ ನಾಶೇರ ಮತ್ತು ನಸೀರ ರವರಿಗೆ ತಿಳಿಸಿದಾಗ ಅವರು ಘಟನೆ ಸ್ಥಳಕ್ಕೆ ಬಂದು ಗಾಯಗೊಂಡವರಿಗೆ ಅಂಬುಲೆನ್ಸದಲ್ಲಿ ಹಾಕಿಕೊಂಡು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ನೂತನ ನಗರ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 18/2021, ಕಲಂ. ಮನುಷ್ಯ ಕಾಣೆ :-

ದಿನಾಂಕ 20-02-2021 ರಂದು ಫಿರ್ಯಾದಿ ಜಗ್ಗಯ್ಯಾ ಸ್ವಾಮಿ ತಂದೆ ಮಡಿವಾಳಯ್ಯಾ ಸ್ವಾಮಿ ಮಠಂ ವಯ: 45 ವರ್ಷ, ಜಾತಿ: ಜಂಗಮ, ಸಾ: ಮಾಧವ ನಗರ, ಬೀದರ ರವರ ಮಗ ಎಂ.ಮಹೇಶ ಇತನು ದಿನ ನಿತ್ಯದಂತೆ 0815 ಗಂಟೆ ಸುಮಾರಿಗೆ ಕಾಲೇಜಗೆ ಮನೆಯಿಂದ ಹೋಗಿ ಕಾಲೇಜದಲ್ಲಿ ಇಂಟರ್ನಲ್ ಪರೀಕ್ಷೆ ಮುಗಿಸಿಕೊಂಡು ಮರಳಿ 1200 ಗಂಟೆ ಸುಮಾರಿಗೆ ಮನೆಗೆ ಬಂದು 1500 ಗಂಟೆಯವರೆಗೆ ಮನೆಯಲ್ಲಿದ್ದು, ನಂತರ ಮನೆಯಿಂದ ಯಾರಿಗೂ ಹೇಳದೇ ಕೇಳದೇ ಮನೆಯಿಂದ 1500 ಗಂಟೆಗೆ ಹೋಗಿ ರಾತ್ರಿ 1200 ಗಂಟೆಯಾದರೂ ಮನೆಗೆ ಬಂದಿರುವುದಿಲ್ಲ, ಆತನಿಗೆ ಎಲ್ಲಾ ಕಡೆಗೆ ಹುಡುಕಿದರೂ ಪತ್ತೆಯಾಗಲಿಲ್ಲಾ, ಅಲ್ಲದೇ ತಮ್ಮ ನೆಂಟರಿಷ್ಟರುಗಳಿಗೆ ಹಾಗೂ ಅವನ ಗೆಳೆಯರೆಲ್ಲರಿಗೆ ಕರೆ ಮಾಡಿ ಮಹೇಶ ರವರ ಬಗ್ಗೆ ವಿಚಾರಿಸಲು ಅವರ ಹತ್ತಿರವು ಸಹ ಬಂದಿರುವುದಿಲ್ಲಾ ಅಂತ ತಿಳಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 21-02-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Saturday, February 20, 2021

BIDAR DISTRICT DAILY CRIME UPDATE 20-02-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 20-02-2021

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 27/2021, ಕಲಂ. 392 ಐಪಿಸಿ :-

ದಿನಾಂಕ 18-02-2021 ರಂದು 1900 ಗಂಟೆಗೆ ಫಿರ್ಯಾದಿ ನಿತಾ ಪಾಟೀಲ ಗಂಡ ಅಶೋಕ ಪಾಟೀಲ ವಯ: 48 ವರ್ಷ, ಜಾತಿ: ಲಿಂಗಾಯತ, ಸಾ: ಮನೆ ನಂ. 15-4-63/1 ಚನ್ನಬಸವ ನಗರ, ಬೀದರ ರವರು ನಿರ್ಮಲಾ ಜಾಬಶೇಟ್ಟಿ ಹಾಗೂ ಶಿವಲೀಲಾ (ಸೋನಿ) ಹೀಗೆ ಮೂವರು ಮಹಿಳೆಯರು ಕೂಡಿ ನಿರ್ಮಲಾ ಜಾಬಶೇಟ್ಟಿ ರವರ ಮನೆಗೆ ಹೋಗಿ ಮರಳಿ 1930 ಗಂಟೆಗೆ ವಾಕಿಂಗ ಮಾಡುತ್ತಾ ಬರುವಾಗ ಚನ್ನಬಸವ ನಗರ ಬಡಾವಣೆಯಲ್ಲಿ ಆಚಾರಿ ರವರ ಮನೆಯ ಹತ್ತಿರ ಬಂದಾಗ ಕರಂಟ ಹೋಗಿದ್ದು ಆ ಸಮಯದಲ್ಲಿ ಎದುರಗಡೆಯಿಂದ ಒಬ್ಬ ವ್ಯಕ್ತಿ ಅಂದಾಜು 30 ರಿಂದ 35 ವಯಸ್ಸಿನ ಕೆಂಪು ಬಣ್ಣದ ಹೊಂಡಾ ಎಕ್ಟಿವಾ ತರಹ ಕಾಣುವ ವಾಹನದ ಮೇಲೆ ಬಂದು ಫಿರ್ಯಾದಿಯವರ ಕೊರಳಿನಲ್ಲಿದ್ದ 18 ಗ್ರಾಂ ಬಂಗಾರದ ಶಾಟ ಗಂಟನ ಅ.ಕಿ 75,000/- ರೂಪಾಯಿ  ಬೆಲೆವುಳ್ಳದ್ದು ಕಿತ್ತುಕೊಂಡು ತನ್ನ ಮೋಟಾರ ಸೈಕಲ್ ಓಡಿಸಿಕೊಂಡು ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 19-02-2021 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 21/2021, ಕಲಂ. 457, 380 ಐಪಿಸಿ :-

ದಿನಾಂಕ 09-02-2021 ರಂದು ಫಿರ್ಯಾದಿ ಕಲಾವತಿ ಗಂಡ ಸಮ್ರತರಾವ ಬಿರಾದಾರ ಸಾ: ಕಳಸದಾಳ, ತಾ: ಭಾಲ್ಕಿ ರವರು ತನ್ನ ಗಂಡನಿಗೆ ಮೈಯಲ್ಲಿ ಉಷಾರ ಇಲ್ಲದ್ದರಿಂದ ಗಂಡನಿಗೆ ಚಿಕಿತ್ಸೆ ಕುರಿತು ಪೂನಾಕ್ಕೆ ಕರೆದುಕೊಂಡು ಹೋದಾಗ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿಯವರ ಮನೆಯ ಕೀಲಿ ಮುರಿದು ಮನೆಯಲ್ಲಿ ಅಲಮಾರಾದಲ್ಲಿಟ್ಟ 1) 5 ಗ್ರಾಮ ಬಂಗಾರದ ಗುಂಡಿನ ಸಮೇತ ಮಂಗಳಸೂತ್ರ, ಅ.ಕಿ 24,000/- ರೂ., 2) 5 ಗ್ರಾಮವುಳ್ಳ 3 ಬಂಗಾರದ ಲಾಕೇಟಗಳು ಹೀಗೆ ಒಟ್ಟು 15 ಗ್ರಾಮವುಳ್ಳ ಬಂಗಾರದ ಲಾಕೇಟಗಳು ಅ.ಕಿ 60,000/- ರೂ., 3) 4 ಳಿ ಗ್ರಾಮವುಳ್ಳ 3 ಬಂಗಾರದ ಉಂಗುರುಗಳು ಅ.ಕಿ 11,000/- ರೂ., 4) 5 ಗ್ರಾಮವುಳ್ಳ ಒಂದು ಬಂಗಾರದ ಉಂಗುರು ಅ.ಕಿ 20,000/- ರೂ, 6) 2 ಗ್ರಾಂ ಒಂದು ಬಂಗಾರದ ಉಂಗುರು ಅ.ಕಿ 8000/- ರೂ., 7) 3 ಗ್ರಾಂ ನ ಒಂದು ಬಂಗಾರದ ಉಂಗುರು ಅ.ಕಿ 12,000/- ರೂ., 8) 5 ಗ್ರಾಂ  ಬಂಗಾರದ 2 ಝುಮಕಾ ಅ.ಕಿ 20,000/- ರೂ., 9) 4 ತೋಲೆ ಬೆಳ್ಳಿಯ ಕಡಗಗಳು ಅ.ಕಿ 2,000/- ರೂ ಹಾಗೂ 10) ನಗದು ಹಣ 10,000/- ರೂ. ಹೀಗೆ ಎಲ್ಲಾ ಒಟ್ಟು 1,67,000/- ರೂ ಬೆಲೆ ಬಾಳುವ ಬಂಗಾರ, ಬೆಳ್ಳಿ ಮತ್ತು ನಗದು ಹಣ ಕಳವು ಮಾಡಿಕೊಂಡು ಹೊಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 19-02-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Thursday, February 18, 2021

BIDAR DISTRICT DAILY CRIME UPDATE 18-02-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 18-02-2021

 

ಬೀದರ ನಗರ ಪೊಲೀಸ್ ಠಾಣೆ ಅಪರಾಧ ಸಂ. 11/2021, ಕಲಂ. 279, 337, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 17-02-2021 ರಂದು ಫಿರ್ಯಾದಿ ರಜನಿಕಾಂತ ತಂದೆ ನರಸಿಂಗ ಮೆಲ್ದೋಡ್ಡಿ ವಯ: 25 ವರ್ಷ, ಜಾತಿ: ಕ್ರಿಶ್ಚನ್, ಸಾ: ಹಮಿಲಾಪೂರ ಗ್ರಾಮ ರವರ ಅಣ್ಣನಾದ ಶ್ರೀಕಾಂತ ವಯ: 27 ವರ್ಷ ಇತನು ತನ್ನ ನಂಬರ ಇಲ್ಲದ ಹೊಂಡಾ ಶೈನ್ ಮೋಟಾರ್ ಸೈಕಲ ಮೇಲೆ ಕುತ್ತಾಬಾದಗೆ ಹೋಗುವಾಗ ಸೈನ್ಸ್ ಸೆಂಟರ್ ಹತ್ತಿರ ಬೀದರ ಕಡೆಯಿಂದ ಮೊಟಾರ ಸೈಕಲ್ ನಂ. ಕೆಎ-38/ಡಬ್ಲೂ-4206 ನೇದರ ಚಾಲಕನಾದ ಆರೋಪಿ ಸಚೀನ ತಂದೆ ವಸಂತ ಸಾ: ಗುಮ್ಮಾ ಇತನು ತನ್ನ ಮೊಟಾರ ಸೈಕಲ ಮೇಲೆ ಇಸ್ರೇಲ್ ತಂದೆ ಯಾದವ ಸಾ: ಗುಮ್ಮಾ ಇತನಿಗೆ ಕೂಡಿಕೊಂಡು ತನ್ನ ವಾಹನವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಓಡಿಸಿಕೊಂಡು ಹೋಗಿ ಎದುರಿನಿಂದ ಬರುತ್ತಿದ್ದ ಫಿರ್ಯಾದಿಯ ಅಣ್ಣನ ಮೊಟಾರ ಸೈಕಲಗೆ ಡಿಕ್ಕಿ ಪಡಿಸಿದ್ದರಿಂದ ಅಣ್ಣ ಶ್ರೀಕಾಂತ ಇತನ ತಲೆಯ ಹಿಂಭಾಗದಲ್ಲಿ ಭಾರಿ ರಕ್ತ ಮತ್ತು ಗುಪ್ತಗಾಯವಾಗಿ ಬೆಹೊಸ ಆಗಿದ್ದರಿಂದ ಆತನಿಗೆ ಚಿಕಿತ್ಸೆ ಕುರಿತು ಜಿಲ್ಲಾ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ವೈದ್ಯರಿಗೆ ತೋರಿಸಿದಾಗ ವೈದ್ಯರು ಚಿಕಿತ್ಸೆ ನೀಡುವಾಗ ಆಸ್ಪತ್ರೆಯಲ್ಲಿ ಅಣ್ಣ ಶ್ರೀಕಾಂತ ಇತನು ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹೊಕ್ರಾಣಾ ಪೋಲಿಸ ಠಾಣೆ ಅಪರಾಧ ಸಂ. 01/2021, ಕಲಂ. ಮಹಿಳಾ ಕಾಣೆ :-

ಫಿರ್ಯಾದಿ ಮಾಧವ ತಂದೆ ಹಣಮಂತರಾವ ರುಮತಾಪೂರೆ ವಯ: 29 ವರ್ಷ, ಜಾತಿ: ಮರಾಠಾ, ಸಾ: ಹಂದೇಗಾಂವ, ತಾ: ಮುಖೇಡ, ಸದ್ಯ: ಭಂಡಾರ ಕಮಠಾ ರವರ ಹೆಂಡತಿ ರಾನುಬಾಯಿ ಗಂಡ ಮಾಧವ, ವಯ 26 ವರ್ಷ ಇಕೆಯು ದಿನಾಂಕ 14-02-2021 ರಂದು 0030 ಗಂಟೆಯಿಂದ 0100 ಗಂಟೆಯ ಅವಧಿಯಲ್ಲಿ ಮನೆಯಿಂದ ಕಾಣೆಯಾಗಿರುತ್ತಾಳೆ, ಆಕೆಯನ್ನು ಗ್ರಾಮದಲ್ಲಿ ಎಲ್ಲಾ ಕಡೆ ಹುಡಿಕಾಡಿ ನಂತರ ತಮ್ಮ ಸಂಬಂಧಿಕರಲ್ಲಿ ಕರೆ ಮಾಡಿ ರಾನುಬಾಯಿ ಬಗ್ಗೆ ವಿಚಾರಿಸಿದಾಗ ಸಂಬಂಧಿಕರು ನಮ್ಮ ಮನೆಗೆ ಬಂದಿರುವುದಿಲ್ಲಾ ಅಂತ ತಿಳಿಸಿರುತ್ತಾರೆ, ರಾನುಬಾಯಿ ಇವಳು ಗುಲಾಬಿ ಬಣ್ಣದ ಪಂಜಾಬಿ ಡ್ರೇಸ್ ಹಾಕಿರುತ್ತಾಳೆ, ಅವಳ ಚಹರೆ ಗೋಧಿ ಬಣ್ಣ, ದುಂಡು ಮುಖ, ಎತ್ತರ 5' 2 ಫೀಟ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 17-02-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಖಟಕ ಚಿಂಚೋಳಿ ಪೋಲಿಸ ಠಾಣೆ ಯು.ಡಿ.ಆರ್ ನಂ. 02/2021, ಕಲಂ. 174 ಸಿ.ಆರ್.ಪಿ.ಸಿ :-

ಫಿರ್ಯಾದಿ ಪ್ರಭು ತಂದೆ ಬಾಬುರಾವ ಉಪ್ಪಾರ ವಯ: 35 ವರ್ಷ, ಸಾ: ಚಳಕಾಪೂರ, ತಾ: ಭಾಲ್ಕಿ ರವರ ತಮ್ಮನಾದ ರಘುನಾಥ ತಂದೆ ಬಾಬುರಾವ ಉಪ್ಪಾರ, ವಯ: 30 ವರ್ಷ, ಸಾ: ಚಳಕಾಪೂರ, ತಾ: ಭಾಲ್ಕಿ ಇತನು ಸಾಲದ ಬಾಧೆ ತಾಳಲಾರದೇ ದಿನಾಂಕ 17-02-2021 ರಂದು 0700 ಗಂಟೆಯಿಂದ 1000 ಗಂಟೆಯ ಮಧ್ಯದ ಅವಧಿಯಲ್ಲಿ ತಮ್ಮ ಹೊಲ ಸರ್ವೆ ನಂ. 253 ರಲ್ಲಿರುವ ಕೆ.ಇ.ಬಿ ಕಂಬಕ್ಕೆ ಅಳವಡಿಸಿರುವ ವಿದ್ಯೂತ ತಂತಿಗೆ ಹಿಡಿದು ಆತ್ಮಹತ್ಯ ಮಾಡಿಕೊಂಡಿರುತ್ತಾನೆ, ಆತನ ಸಾವಿನ ಬಗ್ಗೆ ಯಾರ ಮೇಲೆ ಯಾವುದೆ ರೀತಿಯ ಸಂಶಯ, ವಗೈರೆ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.