Police Bhavan Kalaburagi

Police Bhavan Kalaburagi

Tuesday, February 23, 2021

BIDAR DISTRICT DAILY CRIME UPDATE 23-02-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 23-02-2021

 

ನೂತನ ನಗರ ಪೊಲೀಸ್ ಠಾಣೆ ಬೀದರ ಅಪರಾಧ ಸಂ. 20/2021, ಕಲಂ. ಮಹಿಳೆ ಕಾಣೆ :-

ಫಿರ್ಯಾದಿ ಪರಶುರಾಮ ತಂದೆ ಶಂಕರ ಹೊಟಕರ್ ಸಾ: ಗಾಂಧಿ ನಗರ ಮೈಲೂರ, ಬೀದರ ರವರ ಮಗಳಾದ ಲಕ್ಷ್ಮೀ ಇವಳ ಮಗಳಾದ ಕು. ಶ್ವೇತಾ ವಯ: 20 ವರ್ಷ ಇವಳು ಸುಮಾರು 2 ವರ್ಷಗಳಿಂದ ಫಿರ್ಯಾದಿಯವರ ಮನೆಯಲ್ಲಿ ವಾಸವಾಗಿದ್ದು, ಅವಳು ಬೀದರ ನಗರದ ಅಕ್ಕಮಹಾದೇವಿ ಕಾಲೇಜಿನಲ್ಲಿ ಬಿ.ಕಾಂ ದ್ವೀತಿಯ ವರ್ಷದಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದು, ದಿನಾಲು ಮನೆಯಿಂದ ಕಾಲೇಜಿಗೆಂದು 0900 ಗಂಟೆಗೆ ಹೋಗಿ 1400 ಗಂಟೆಗೆ ಮರಳಿ ಕಾಲೇಜಿನಿಂದ ಮನೆಗೆ ಬರುತ್ತಿದ್ದಳು, ಹೀಗಿರುವಾಗ ಎಂದಿನಂತೆ ದಿನಾಂಕ 22-02-2021 ರಂದು ಶ್ವೇತಾ ಇವಳು ಮನೆಯಿಂದ ಅಕ್ಕಮಹಾದೇವಿ ಕಾಲೇಜಿಗೆ ಹೋಗಿ ಬರುತ್ತೆನೆಂದು ಹೇಳಿ 0900 ಗಂಟೆಗೆ ಮನೆಯಿಂದ ಹೋದವಳು 1500 ಗಂಟೆಯಾದರು ಮನೆಗೆ ಬಂದಿರುವುದಿಲ್ಲಾ, ಆಗ ಫಿರ್ಯಾದಿಯು ಅವಳ ಮೊಬೈಲ್ ಸಂ. 7829972263 ನೇದಕ್ಕೆ ಕರೆ ಮಾಡಿದಾಗ ಅದು ಸ್ವಿಚ್ಡ್‌ ಆಫ್ ಅಂತ ಹೇಳಿರುತ್ತದೆ, ನಂತರ ಫಿರ್ಯಾದಿಯು ತನ್ನ ಮಕ್ಕಳಾದ ಶಂಕರ, ಸುರೇಶ ಎಲ್ಲರೂ ಕೂಡಿಕೊಂಡು ಅಕ್ಕಮಹಾದೇವಿ ಕಾಲೇಜಿಗೆ ಬಂದು ಅಲ್ಲಿರುವ ಭದ್ರತಾ ಸಿಬ್ಬಂದಿಗೆ ಶ್ವೇತಾ ಇವಳ ಭಾವಚಿತ್ರ ತೋರಿಸಿ ವಿಚಾರಿಸಲಾಗಿ ಅವನು ಗುರುತಿಸಿ ಕಾಲೇಜಿಗೆ ಬಂದ ಬಗ್ಗೆ ತಿಳಿಸಿರುತ್ತಾನೆ, ನಂತರ ಆಕೆಯನ್ನು ಎಲ್ಲಾ ಕಡೆ ಹುಡಕಾಡಿದರೂ ಸಹ ಸಿಕ್ಕಿರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 11/2021, ಕಲಂ. 504, 323, 498(ಎ), 506 ಜೊತೆ 34 ಐಪಿಸಿ ಮತ್ತು 3 & 4 ಡಿ.ಪಿ ಕಾಯ್ದೆ :-

ಫಿರ್ಯಾದಿ ಗೌಸಿಯಾ ಸುಲ್ತಾನಾ ಗಂಡ ಮುಜಮೀಲ್ ಬಡಾಡಿ ವಯ: 20 ವರ್ಷ, ಜಾತಿ: ಮುಸ್ಲಿಂ, ಸಾ: ಮಂಠಾಳ ರವರ ಮದುವೆಯು ದಿನಾಂಕ 06-08-2020 ರಂದು ಮುಸ್ಲಿಂ ಸಂಪ್ರದಾಯದಂತೆ ತಂದೆ-ತಾಯಿಯವರು ರಬ್ಬಾನಿ ಬೀ ಇವರು ಬಸವಕಲ್ಯಾಣ ಪಟ್ಟಣದಲ್ಲಿರುವ ಸೇರೆ ಸವಾರ ಫಕ್ಷನ ಹಾಲದಲ್ಲಿ ಮಂಠಾಳ ಗ್ರಾಮದ ಮುಜಮೀಲ ತಂದೆ ಮುಬಿನ ಬಡಾಡಿ ಇವರೊಂದಿಗೆ ಮಾಡಿಕೊಟ್ಟಿರುತ್ತಾರೆ, ಮದುವೆಯಲ್ಲಿ ಗಂಡನಿಗೆ ವರೋಪಚಾರ ಅಂತಾ 25,000/- ರೂಪಾಯಿ ಕೊಟ್ಟಿರುತ್ತಾರೆ ಹಾಗೂ ಮೈಮೇಲೆ ಒಂದು ವರೆ ತೊಲೆ ಬಂಗಾರದ ಆಭರಣಗಳನ್ನು ಹಾಕಿರುತ್ತಾರೆ, ಗಂಡನ ಮನೆಯಲ್ಲಿ ಫಿರ್ಯಾದಿ, ಗಂಡ ಮುಜಮೀಲ್, ಅತ್ತೆ ಹಲಿಮಾಬೀ ಮತ್ತು ನಾದಣಿಯರಾದ ಸೂರೈಯಾ ಗಂಡ ರಹಮತ ಅಲಿ ಸಾ: ಕೊಹೀನೂರ ಪಹಡ, ಹೀನಾ ಸಾ: ಕೊಹೀನೂರ ಪಹಾಡ ಇವರು ಇರುತ್ತಾರೆ, ಮದುವೆಯ ಮುಂಚಿತವಾಗಿ ಫಿರ್ಯಾದಿಯ ಎಡಗೈ ಭುಜದ ಮೇಲೆ, ಕುತ್ತಿಗೆ ಹತ್ತಿರ ಬಿಳಿ ಬಣ್ಣದ ಚಿಬ್ ಇದ್ದ ಬಗ್ಗೆ ತಿಳಿಸಿದ್ದು ಇರುತ್ತದೆ, ಗಂಡ ಮದುವೆಯಾದ ಎರಡು ದಿವಸ ಸರಿಯಾಗಿ ಇಟ್ಟಿಕೊಂಡು ನಂತರ ಮೂರನೆ ದಿವಸ ಆರೋಪಿತರಾದ ಗಂಡ, ಅತ್ತೆ ಮತ್ತು ಇಬ್ಬರು ನಾದಣಿಯವರು ನಿನ್ನ ಎಡಗೈ ಭುಜದ ಮೇಲೆ, ಕುತ್ತಿಗೆ ಹತ್ತಿರ ಬಿಳಿ ಬಣ್ಣದ ಚಿಬ್ ಇದೆ ಅಂತ ಅವಾಚ್ಯವಾಗಿ ಬೈದು ನೀನು ಮನೆ ಬಿಟ್ಟು ಹೋಗು ಇಲ್ಲವಾದರೆ ನಿನಗೆ ಜೀವ ಸಹೀತ ಬಿಡುವುದಿಲ್ಲಾ ಅಂತಾ ದಿನಾಂಕ 08-08-2020 ರಂದು ಹೊಡೆ ಬಡೆ ಮಾಡಿರುತ್ತಾರೆ ಹಾಗೂ ನೀನು ನಮ್ಮ ಮನೆಯಲ್ಲಿ ಇರಬೇಕಾದರೆ ಇನ್ನು 5 ತೊಲೆ ಬಂಗಾರ ಮತ್ತು ಒಂದು ಮೋಟಾರ ಸೈಕಲ ವರದಕ್ಷಿಣೆ ತರಬೇಕು ಅಂತಾ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿರುತ್ತಾರೆ, ಸದರಿ ಆರೋಪಿತರು ತೊಂದರೆ ಕೊಡುತ್ತಿದ್ದ ಬಗ್ಗೆ ತನ್ನ ತಂದೆ ತಾಯಿಯವರಿಗೆ ತಿಳಿಸಿದಾಗ ಅಣ್ಣನಾದ ವಹೀದ ಇತನು ಮಂಠಾಳ ಗ್ರಾಮಕ್ಕೆ ಬಂದು ಗಂಡ, ಅತ್ತೆ ಮಾವ ಮತ್ತು ನಾದಣಿ ಇವರಿಗೆ ತಿಳಿಸಿ ಹೇಳಿ ಹೋಗಿರುತ್ತಾನೆ, ನಂತರ ದಿನಾಂಕ 10-08-2020 ರಂದು ಗಂಡ ಮುಜಮೀಲ ಇತನು ಫಿರ್ಯಾದಿಗೆ ಬಸವಕಲ್ಯಾಣ ಪಟ್ಟಣದಲ್ಲಿ ಫಿರ್ಯಾದಿಯ ತಂದೆ ತಾಯಿಯವರ ಮನೆಯಲ್ಲಿ ಬಿಟ್ಟು ಸಂಬಂಧಿಕರ ಮದುವೆ ಮುಗಿಸಿಕೊಂಡು ಬರುವುದಾಗಿ ಹೇಳಿ ಹೋಗಿರುತ್ತಾನೆ, ನಂತರ ದಿನಾಂಕ 11-08-2020 ರಂದು ಫಿರ್ಯಾದಿಯವರ ಮನೆಗೆ ಸದರಿ ಆರೋಪಿತರೆಲ್ಲರೂ ಬಂದು ನಿಮ್ಮ ಮಗಳಿಗೆ ನಮ್ಮ ಮನೆಗೆ ಕಳುಹಿಸಬೇಕಾದರೆ ಇನ್ನು 5 ತೊಲೆ ಬಂಗಾರ ಮತ್ತು ಒಂದು ಮೋಟಾರ ಸೈಕಲ ವರದಕ್ಷಿಣೆ ಕೊಡಬೇಕು ಇಲ್ಲವಾದರೆ ನಿಮ್ಮ ಮಗಳಿಗೆ ನಿಮ್ಮ ಮನೆಯಲ್ಲಿಯೇ ಇಟ್ಟಿಕೊಳ್ಳಿ ಅಂತಾ ಜಗಳ ಮಾಡಿ ಹೋಗಿರುತ್ತಾರೆ, ನಂತರ ಇಲ್ಲಿಯವೆಗೆ ಕರೆಯಲು ಬಂದಿರುವುದಿಲ್ಲಾ, ಸುಮಾರು ಸಲ ಗಂಡನಿಗೆ ಬುದ್ದಿವಾದ ಹೇಳಿದರೂ ಸಹ ಕರೆದುಕೊಂಡು ಹೋಗಿರುವುದಿಲ್ಲಾ, ಗಂಡ ಇಗ ಸುಮಾರು ದಿವಸಗಳ ಹಿಂದೆ ಕೆಲಸಕ್ಕಾಗಿ ದುಬೈಗೆ ಹೋಗಿರುವುದಾಗಿ ಗೊತ್ತಾಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 22-02-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 21/2021, ಕಲಂ. 379 ಐಪಿಸಿ :-

ದಿನಾಂಕ 24-11-2020 ರಂದು 2100 ಗಂಟೆಯಿಂದ 2130 ಗಂಟೆಯ ಮದ್ಯದ ಅವಧಿಯಲ್ಲಿ ಕಮಲಾ ರೇಸಿಡೆನ್ಸ್ ಲಾಡ್ಡಿನ ಎದುರುಗಡೆ ನಿಲ್ಲಿಸಿದ ಫಿರ್ಯಾದಿ ಚನ್ನವೀರ ಶಿವಚಾರ್ಯ ಐ.ಟಿ.ಐ ಕಾಲೇಜಿನಲ್ಲಿ ಕ್ಲರ್ಕ ಸಾ: ಹಿರೇಮಠ ಕಾಲೋನಿ ಬಸವಕಲ್ಯಾಣ ರವರ ಹಿರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ಮೋಟಾರ ಸೈಕಲ್ ನಂ. ಕೆಎ-56/ಹೆಚ್-5441 ನೇದನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ, ಕಳುವಾದ ವಾಹನದ ವಿವರ 1) ಮೋಟಾರ ಸೈಕಲ್ ನಂ. ಕೆಎ-56/ಹೆಚ್-5441, 2) ಚಾಸಿಸ್ ನಂ. MBLHA10CGGHF80827, 3) ಇಂಜಿನ್ ನಂ. HA10ERGHF88262, 4) Model-2016 & 5) ಅ.ಕಿ. 20,000/- ರೂಪಾಯಿ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 22-02-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Monday, February 22, 2021

BIDAR DISTRICT DAILY CRIME UPDATE 22-02-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 22-02-2021

 

ಬೀದರ  ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 12/2021, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ಸಂಗೋಳಗಿ  ಗ್ರಾಮದಲ್ಲಿ ಫಿರ್ಯಾದಿ ಎಮ್.ಡಿ ಪಾಶಾ ತಂದೆ ಎಮ್.ಡಿ ಹನಿಫ ಶಾ ಸಂಗೋಳಗಿವಾಲೆ ವಯ: 50 ವರ್ಷ, ಜಾತಿ: ಮುಸ್ಲಿಂ, ಸಾ: ಹಳೆ ಮೈಲೂರ, ಬೀದರ ರವರ ಸಂಬಂಧಿಕರ ಮನೆಯಲ್ಲಿ ಮದುವೆ ಕಾರ್ಯಕ್ರಮ ಇರುವುದರಿಂದ ಫಿರ್ಯಾದಿಯವರು ದಿನಾಂಕ 20-02-2021 ರಂದು ತನ್ನ ಹೆಂಡತಿ ಅಹೆಮದಿ ಬೆಗಂ ವಯ: 45 ವರ್ಷ ಇಬ್ಬರು ತಮ್ಮ ಮೋಟಾರ ಸೈಕಲ ನಂ. ಕೆ.ಎ-17/ಎಲ್-7183 ನೇದರ ಮೇಲೆ ಹಾಗು ಫಿರ್ಯಾದಿಯ ತಮ್ಮ ಖೂರ್ಷಿದ್ ಅಲಿ ಹಾಗು ಅವನ ಮಗಳಾದ ಮಹೇಕ ವಯ: 12 ವರ್ಷ ರವರು ಮೋಟಾರ ಸೈಕಲ ನಂ. ಕೆ.ಎ-38/ಜೆ-6228 ನೇದರ ಮೇಲೆ ಸಂಗೋಳಗಿ ಗ್ರಾಮಕ್ಕೆ ಹೋಗಿ ರಾತ್ರಿ ಕಾರ್ಯಕ್ರಮ ಮುಗಿಸಿ ಅಲ್ಲಿಯೇ ವಸತಿ ಮಾಡಿ ದಿನಾಂಕ 21-02-2021 ರಂದು ತಮ್ಮ ತಮ್ಮ ಮೋಟಾರ್ ಸೈಕಲಗಳ ಮೇಲೆ ಸಂಗೋಳಗಿಯಿಂದ ಬೀದರಗೆ ಬರುತ್ತಿರುವಾಗ ಬೆಳ್ಳುರಾ ಶಿವಾರದ ಫಾರೆಸ್ಟ ತಿರುವಿನಲ್ಲಿ ಬೀದರ ಕಡೆಯಿಂದ ಸುಜುಕಿ ಸ್ವಿಫ್ಟ್ ಕಾರ ನಂ. ಕೆಎ-38/ಎಮ-3352 ನೇದರ ಚಾಲಕನಾದ ಆರೋಪಿಯು ತನ್ನ ಕಾರನ್ನು ಅತೀವೇಗ ಮತ್ತು ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋಟಾರ ಸೈಕಲಿಗೆ ಡಿಕ್ಕಿ ಮಾಡಿ ನಂತರ ಹಿಂದ ಬರುತ್ತಿದ್ದ ತಮ್ಮನ ಮೋಟಾರ ಸೈಕಲಿಗೂ ಸಹ ಡಿಕ್ಕಿ ಮಾಡಿ ತನ್ನ ಕಾರನ್ನು ನಿಲ್ಲಿಸದೇ ಓಡಿ ಹೋಗಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಯ ಎಡಗಡೆ ಬೆನ್ನ ಛೆಪ್ಪೆಗೆ, ಭುಜಕ್ಕೆ, ಎದೆಗೆ, ತಿಕ್ಕಕ್ಕೆ ಗುಪ್ತಗಾಯವಾಗಿರುತ್ತದೆ, ಫಿರ್ಯಾದಿಯ ಹೆಂಡತಿಗೆ ಎರಡು ಮೋಳಕಾಲ ಕೆಳಗಡೆ ಭಾರಿ ಪೆಟ್ಟಾಗಿ ಕಾಲು ಮುರಿದಿರುತ್ತದೆ ಮತ್ತು ಎಡಗಡೆ ಬೆನ್ನಿನ ಛೆಪ್ಪಿಗೆ, ಬಲಭುಜಕ್ಕೆ, ತಲೆಗೆ ಗುಪ್ತ ಪೆಟ್ಟಾಗಿರುತ್ತದೆ ಮತ್ತು ತಮ್ಮನ ಮಗಳಾದ ಮಹೇಕ ಇವಳಿಗೆ ಎಡಗಾಲ ಪಾದಕ್ಕೆ ತರಚಿದ ಗಾಯ, ಎಡ ಬೆನ್ನಿನ ಛಪ್ಪೆಯ ಮೇಲೆ, ಸೊಂಟಕ್ಕೆ ಗುಪ್ತಗಾಯವಾಗಿರುತ್ತದೆ, ನಂತರ ಸದರಿ ಘಟನೆ ಬಗ್ಗೆ ಫಿರ್ಯಾದಿಯವರು ತಮ್ಮ ಮಕ್ಕಳಾದ ನಾಶೇರ ಮತ್ತು ನಸೀರ ರವರಿಗೆ ತಿಳಿಸಿದಾಗ ಅವರು ಘಟನೆ ಸ್ಥಳಕ್ಕೆ ಬಂದು ಗಾಯಗೊಂಡವರಿಗೆ ಅಂಬುಲೆನ್ಸದಲ್ಲಿ ಹಾಕಿಕೊಂಡು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ನೂತನ ನಗರ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 18/2021, ಕಲಂ. ಮನುಷ್ಯ ಕಾಣೆ :-

ದಿನಾಂಕ 20-02-2021 ರಂದು ಫಿರ್ಯಾದಿ ಜಗ್ಗಯ್ಯಾ ಸ್ವಾಮಿ ತಂದೆ ಮಡಿವಾಳಯ್ಯಾ ಸ್ವಾಮಿ ಮಠಂ ವಯ: 45 ವರ್ಷ, ಜಾತಿ: ಜಂಗಮ, ಸಾ: ಮಾಧವ ನಗರ, ಬೀದರ ರವರ ಮಗ ಎಂ.ಮಹೇಶ ಇತನು ದಿನ ನಿತ್ಯದಂತೆ 0815 ಗಂಟೆ ಸುಮಾರಿಗೆ ಕಾಲೇಜಗೆ ಮನೆಯಿಂದ ಹೋಗಿ ಕಾಲೇಜದಲ್ಲಿ ಇಂಟರ್ನಲ್ ಪರೀಕ್ಷೆ ಮುಗಿಸಿಕೊಂಡು ಮರಳಿ 1200 ಗಂಟೆ ಸುಮಾರಿಗೆ ಮನೆಗೆ ಬಂದು 1500 ಗಂಟೆಯವರೆಗೆ ಮನೆಯಲ್ಲಿದ್ದು, ನಂತರ ಮನೆಯಿಂದ ಯಾರಿಗೂ ಹೇಳದೇ ಕೇಳದೇ ಮನೆಯಿಂದ 1500 ಗಂಟೆಗೆ ಹೋಗಿ ರಾತ್ರಿ 1200 ಗಂಟೆಯಾದರೂ ಮನೆಗೆ ಬಂದಿರುವುದಿಲ್ಲ, ಆತನಿಗೆ ಎಲ್ಲಾ ಕಡೆಗೆ ಹುಡುಕಿದರೂ ಪತ್ತೆಯಾಗಲಿಲ್ಲಾ, ಅಲ್ಲದೇ ತಮ್ಮ ನೆಂಟರಿಷ್ಟರುಗಳಿಗೆ ಹಾಗೂ ಅವನ ಗೆಳೆಯರೆಲ್ಲರಿಗೆ ಕರೆ ಮಾಡಿ ಮಹೇಶ ರವರ ಬಗ್ಗೆ ವಿಚಾರಿಸಲು ಅವರ ಹತ್ತಿರವು ಸಹ ಬಂದಿರುವುದಿಲ್ಲಾ ಅಂತ ತಿಳಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 21-02-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Saturday, February 20, 2021

BIDAR DISTRICT DAILY CRIME UPDATE 20-02-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 20-02-2021

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 27/2021, ಕಲಂ. 392 ಐಪಿಸಿ :-

ದಿನಾಂಕ 18-02-2021 ರಂದು 1900 ಗಂಟೆಗೆ ಫಿರ್ಯಾದಿ ನಿತಾ ಪಾಟೀಲ ಗಂಡ ಅಶೋಕ ಪಾಟೀಲ ವಯ: 48 ವರ್ಷ, ಜಾತಿ: ಲಿಂಗಾಯತ, ಸಾ: ಮನೆ ನಂ. 15-4-63/1 ಚನ್ನಬಸವ ನಗರ, ಬೀದರ ರವರು ನಿರ್ಮಲಾ ಜಾಬಶೇಟ್ಟಿ ಹಾಗೂ ಶಿವಲೀಲಾ (ಸೋನಿ) ಹೀಗೆ ಮೂವರು ಮಹಿಳೆಯರು ಕೂಡಿ ನಿರ್ಮಲಾ ಜಾಬಶೇಟ್ಟಿ ರವರ ಮನೆಗೆ ಹೋಗಿ ಮರಳಿ 1930 ಗಂಟೆಗೆ ವಾಕಿಂಗ ಮಾಡುತ್ತಾ ಬರುವಾಗ ಚನ್ನಬಸವ ನಗರ ಬಡಾವಣೆಯಲ್ಲಿ ಆಚಾರಿ ರವರ ಮನೆಯ ಹತ್ತಿರ ಬಂದಾಗ ಕರಂಟ ಹೋಗಿದ್ದು ಆ ಸಮಯದಲ್ಲಿ ಎದುರಗಡೆಯಿಂದ ಒಬ್ಬ ವ್ಯಕ್ತಿ ಅಂದಾಜು 30 ರಿಂದ 35 ವಯಸ್ಸಿನ ಕೆಂಪು ಬಣ್ಣದ ಹೊಂಡಾ ಎಕ್ಟಿವಾ ತರಹ ಕಾಣುವ ವಾಹನದ ಮೇಲೆ ಬಂದು ಫಿರ್ಯಾದಿಯವರ ಕೊರಳಿನಲ್ಲಿದ್ದ 18 ಗ್ರಾಂ ಬಂಗಾರದ ಶಾಟ ಗಂಟನ ಅ.ಕಿ 75,000/- ರೂಪಾಯಿ  ಬೆಲೆವುಳ್ಳದ್ದು ಕಿತ್ತುಕೊಂಡು ತನ್ನ ಮೋಟಾರ ಸೈಕಲ್ ಓಡಿಸಿಕೊಂಡು ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 19-02-2021 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 21/2021, ಕಲಂ. 457, 380 ಐಪಿಸಿ :-

ದಿನಾಂಕ 09-02-2021 ರಂದು ಫಿರ್ಯಾದಿ ಕಲಾವತಿ ಗಂಡ ಸಮ್ರತರಾವ ಬಿರಾದಾರ ಸಾ: ಕಳಸದಾಳ, ತಾ: ಭಾಲ್ಕಿ ರವರು ತನ್ನ ಗಂಡನಿಗೆ ಮೈಯಲ್ಲಿ ಉಷಾರ ಇಲ್ಲದ್ದರಿಂದ ಗಂಡನಿಗೆ ಚಿಕಿತ್ಸೆ ಕುರಿತು ಪೂನಾಕ್ಕೆ ಕರೆದುಕೊಂಡು ಹೋದಾಗ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿಯವರ ಮನೆಯ ಕೀಲಿ ಮುರಿದು ಮನೆಯಲ್ಲಿ ಅಲಮಾರಾದಲ್ಲಿಟ್ಟ 1) 5 ಗ್ರಾಮ ಬಂಗಾರದ ಗುಂಡಿನ ಸಮೇತ ಮಂಗಳಸೂತ್ರ, ಅ.ಕಿ 24,000/- ರೂ., 2) 5 ಗ್ರಾಮವುಳ್ಳ 3 ಬಂಗಾರದ ಲಾಕೇಟಗಳು ಹೀಗೆ ಒಟ್ಟು 15 ಗ್ರಾಮವುಳ್ಳ ಬಂಗಾರದ ಲಾಕೇಟಗಳು ಅ.ಕಿ 60,000/- ರೂ., 3) 4 ಳಿ ಗ್ರಾಮವುಳ್ಳ 3 ಬಂಗಾರದ ಉಂಗುರುಗಳು ಅ.ಕಿ 11,000/- ರೂ., 4) 5 ಗ್ರಾಮವುಳ್ಳ ಒಂದು ಬಂಗಾರದ ಉಂಗುರು ಅ.ಕಿ 20,000/- ರೂ, 6) 2 ಗ್ರಾಂ ಒಂದು ಬಂಗಾರದ ಉಂಗುರು ಅ.ಕಿ 8000/- ರೂ., 7) 3 ಗ್ರಾಂ ನ ಒಂದು ಬಂಗಾರದ ಉಂಗುರು ಅ.ಕಿ 12,000/- ರೂ., 8) 5 ಗ್ರಾಂ  ಬಂಗಾರದ 2 ಝುಮಕಾ ಅ.ಕಿ 20,000/- ರೂ., 9) 4 ತೋಲೆ ಬೆಳ್ಳಿಯ ಕಡಗಗಳು ಅ.ಕಿ 2,000/- ರೂ ಹಾಗೂ 10) ನಗದು ಹಣ 10,000/- ರೂ. ಹೀಗೆ ಎಲ್ಲಾ ಒಟ್ಟು 1,67,000/- ರೂ ಬೆಲೆ ಬಾಳುವ ಬಂಗಾರ, ಬೆಳ್ಳಿ ಮತ್ತು ನಗದು ಹಣ ಕಳವು ಮಾಡಿಕೊಂಡು ಹೊಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 19-02-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.