Police Bhavan Kalaburagi

Police Bhavan Kalaburagi

Sunday, April 28, 2019

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 27.04.2019 ರಂದು ರಾಘವೇಂದ್ರ ನಗರ  ಠಾಣಾ ವ್ಯಾಪ್ತಿಯ ಯಂಕವ್ವನ ಮಾರ್ಕೇಟನಲ್ಲಿ ಒಬ್ಬ ವ್ಯಕ್ತಿ ಕೂಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಯಂಕವ್ವನ ಮಾರ್ಕೇಟನಲ್ಲಿ ಹೋಗಿ ಮರೆಯಲ್ಲಿ ನಿಂತುಕೊಂಡು ನೋಡಲಾಗಿ ಒಬ್ಬ ವ್ಯಕ್ತಿ ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿರುವ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಲು, ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ರೆದುಕೊಳ್ಳುತ್ತಿದ್ದವನನ್ನು ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಹೆಸರು  ಶಿವಶರಣಪ್ಪ ತಂದೆ ಅರ್ಜುನ ಜಮಾದಾರ ಸಾ|| ತಂಬಾಕವಾಡಿ ತಾ|| ಆಳಂದ ಹಾ|||| ಐವಾನ ಶಾಹಿ ವಸತಿ ಗೃಹ ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ 1) ನಗದು ಹಣ 1200 ರೂ  2) 2 ಮಟಕಾ ಬರೇದ ಚೀಟಿಗಳು ಅ:ಕಿ: 00 ಮತ್ತು 3) ಒಂದು ಬಾಲ ಪೇನ್ ಅ:ಕಿ: 00 ದೊರೆತಿದ್ದು ಸದರಿಯವುಗಳನ್ನು ಜಪ್ತಿ ಮಾಡಿಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಪಘಾತ ಪ್ರಕರಣ :
ಸಂಚಾರಿ ಠಾಣೆ 01 : ಶ್ರೀಮತಿ  ನೀಲಮ್ಮಾ ರವರು ದಿನಾಂಕ 27.04.2019 ರಂದು ಬೆಳಿಗ್ಗೆ 8-00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಮಗನಾದ ಶಿವರುದ್ರ ಹಾಗೂ ನನ್ನ ಸೊಸೆಯಾದ ಮಂಗಲಾ ಮೂರು ಜನರು ಕಲಬುರಗಿ ಸಂಗಮೇಶ್ವರ ಆಸ್ಪತ್ರೆಯಲ್ಲಿ ಉಪಚಾರ ಕುರಿತು ಸೇರಿಕೆಯಾದ ನಮ್ಮ ಸಂಬಂದಿಕರನ್ನು ಮಾತನಾಡಿಸುವ ಸಲುವಾಗಿ ನಮ್ಮೂರಿನಿಂದ ಬಸ್ಸ ಮೂಲಕ ಕಲಬುರಗಿ ಕೇಂದ್ರ ಬಸ್ಸ ನಿಲ್ದಾಣಕ್ಕೆ ಬಂದು ಇಳಿದು ಬಸ್ಸ ನಿಲ್ದಾಣದ ಸಮೀಪ ಬರುವ ಸಂಗಮೇಶ್ವರ ಆಸ್ಪತ್ರೆ ಕಡೆಗೆ ನಡೆದುಕೊಂಡು ಹೋಗುವಾಗ ಸಂಗಮೇಶ್ವರ ಆಸ್ಪತ್ರೆಯ ಎದುರಿನ ರೋಡ ಮೇಲೆ ಮೋಟಾರ ಸೈಕಲ ನಂ ಕೆಎ-39/ಕೆ-1133 ನೇದ್ದರ ಸವಾರನು ಆರ.ಪಿ ಸರ್ಕಲ ಕಡೆಯಿಂದ ಕೇಂದ್ರ ಬಸ್ಸ ನಿಲ್ದಾಣ ಕಡೆಗೆ ಹೋಗುವ ಕುರಿತು ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಭಾರಿ ಗಾಯಗೊಳಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 01 ರಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಶೆಂಕ್ರೆಪ್ಪ ತಂದೆ ಶಾಮರಾವ ಬೋಳೆಗಾಂವ ಸಾ|| ಪ್ಲಾಟ್ ನಂ 104, ಲಕ್ಷ್ಮೀ ನಿಲಯ, ಜಾಧವ ಲೇಔಟ್, ಬಿದ್ದಾಪೂರ ಕಾಲೋನಿ, ಕಲಬುರಗಿ  ರವರು ದಿನಾಂಕ 26-04-2019 ರಂದು ತಮ್ಮ ದೈನಂದಿನ ಕೆಲಸ ಮುಗಿಸಿಕೊಂಡು ರಾತ್ರಿ 10-00 ಪಿಎಮ್ ಕ್ಕೆ ನನ್ನ ಹೀರೋ ಹಂಡಾ ಸ್ಪ್ಲೆಂಡರ್ ಪ್ಲಸ್ ಮೋಟರ್ ಸೈಕಲ್ ನಂ KA32 Y 6170  ನೆದ್ದು ನಮ್ಮ ಮನೆಯ ಕಂಪೌಂಡ ಒಳಗಡೆ ಲಾಕ್ ಮಾಡಿ ನಿಲ್ಲಿಸಿ, ಬೇಸಿಗೆ ಇದ್ದ ಕಾರಣ ಮನೆ ಛತ್ತಿನ ಮೇಲೆ ನಾನು ಮತ್ತು ನನ್ನ ಹೆಂಡತಿ ಮಲಗಿಕೊಂಡಿದ್ದು ಇರುತ್ತದೆ. ದಿನಾಂಕ 27-04-2019 ರಂದು 03-15 ಎ.ಎಮ್ ಸುಮಾರಿಗೆ ನಮ್ಮ ಮನೆಯ ಸುತ್ತ ಮುತ್ತ ಯಾರೋ ಚೀರಾಡುವುದು ಮತ್ತು ಕಳ್ಳರು ಬಂದಿದ್ದಾರೆಂದು ಗದ್ದಲ ಶಬ್ದ ಕೇಳಿ ನಾನು ಕೆಳಗೆ ಬಂದು ನೋಡಲು ನಮ್ಮ ಕಂಪೌಂಡದಲ್ಲಿದ್ದ ನನ್ನ ಹೀರೋ ಹಂಡಾ ಸ್ಪ್ಲೆಂಡರ್ ಪ್ಲಸ್ ಮೋಟರ್ ಸೈಕಲ್ ನಂ KA32 Y 6170     ನೆದ್ದು ಕಾಣಿಸಲಿಲ್ಲ ಯಾರೋ ಕಳ್ಳರು ಕಳ್ಳರನ ಮಾಡಿಕೊಂಡು ಹೋಗಿದ್ದು ಗೊತ್ತಾಯಿತು. ಮನೆಯ ಹೊರಗಡೆ ಬಂದು ವಿಚಾರ ಮಾಡಲು ನಮ್ಮ ಮನೆಯ ಹತ್ತಿರ ಇದ್ದ ಆನಂದ ಜೊಶಿ ಹಾಗೂ ನಮ್ಮ ಮನೆಯಲ್ಲಿ ಕಿರಾಯಿ ಇರುವ ಸುಧಾಕರ ಹಾಗೂ ರಾಘವೇಂದ್ರ ರವರ ಮನೆಗಳು ಕಳ್ಳತನವಾಗಿದ್ದು ಗೊತ್ತಾಯಿತು. ನನ್ನ ಕಳ್ಳತನವಾದ ಹೀರೋ ಹಂಡಾ ಸ್ಪ್ಲೆಂಡರ್ ಪ್ಲಸ್ ಮೋಟರ್ ಸೈಕಲ್ ನಂ KA32 Y 6170  ನೆದ್ದರ, ಅ.ಕಿ. 30,000/- ರೂ. ಇರುತ್ತದೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ರಾಘವೇಂದ್ರ ತಂದೆ ಮಲ್ಲಿನಾಥ ಜಮಾದಾರ  ಸಾ|| ಪ್ಲಾಟ್ ನಂ 100, ಜಾಧವ ಲೇಔಟ್, ಬಿದ್ದಾಪೂರ ಕಾಲೋನಿ, ಕಲಬುರಗಿ  ರವರು ದಿನಾಂಕ 25-04-2019 ರಂದು ನಾನು ನನ್ನ ಕಾರ್ಯಾಲಯದ ಕೆಲಸದ ನಿಮಿತ್ಯ ಬೆಂಗಳೂರಿಗೆ ಹೋಗುವ ಸಲುವಾಗಿ ತಯ್ಯಾರಾಗಿದ್ದು, ಮನೆಯಲ್ಲಿ ಹೆಣ್ಣು ಮಕ್ಕಳು ಆಗುವ ಕಾರಣ ನನ್ನ ಹೆಂಡತಿ ಹಾಗೂ ತಾಯಿಯವರು ಕೂಡಿ ಬೀಗರ ಮನೆಯಲ್ಲಿ ಬಿಟ್ಟು ನಾನು ಬೆಂಗಳೂರಿಗೆ 08-00 ಪಿಎಮ್ ಕ್ಕೆ ಹೋಗಿದ್ದು  ದಿನಾಂಕ 27-04-2019 ರಂದು ಬೆಳಿಗ್ಗೆ 09-00 ಗಂಟೆಗೆ ಬೆಂಗಳೂರಿನಿಂದ ಕಲಬುರಗಿಗೆ ಬಂದು ಮನೆಗೆ ಹೋಗಿ ನೋಡಲು ನಮ್ಮ ಮನೆಯ ಮುಖ್ಯ ದ್ವಾರಕ್ಕೆ ಹಾಕಿದ ಬಾಗಿಲ ಕೊಂಡಿ ಮುರಿದು ಬಿದ್ದುದ್ದು ನೋಡಿ ಗಾಬರಿಯಾಗಿ ಬಾಜು ಮನೆಯವರಾದ ವಿಜಯಕುಮಾರ ಪಾಟೀಲ ರವರಿಗೆ ಕರೆದುಕೊಂಡು ಮನೆಯ ಒಳಗೆ ಹೊಗಿ ನೋಡಲು ನಮ್ಮ ಬೆಡ್ ರೂಮಿನಲ್ಲಿದ್ದ ಟ್ರಜರಿ ಬಾಗಿ ಮುರಿದು ಒಳಗಡೆಯಿದ್ದ ಲಾಕರ್ ಮುರಿದು ಎಲ್ಲಾ ವಸ್ತುಗಳು ಚಲ್ಲಾಪಿಲ್ಲಿಯಾಗಿದ್ದು  ಟ್ರಜರಿಯಲ್ಲಿಟ್ಟ   ಬಂಗಾರದ ಆಭರಣಗಳು ಮತ್ತು ಬೆಳ್ಳಿಯ ಆಭರಣಗಳು ನಗದು ಹಣ ಹೀಗೆ ಒಟ್ಟು 1,13,000/- ಕಿಮ್ಮತ್ತಿನವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಗ್ರಾಮೀಣ ಠಾಣೆ : ಶ್ರೀ ಸುಧಾಕರ ತಂದೆ ನಾಗೇಂದ್ರಪ್ಪ ಹಾಗರಗಿ ಸಾ|| ಪ್ಲಾಟ್ ನಂ 104, ಲಕ್ಷ್ಮೀ ನಿಲಯ, ಜಾಧವ ಲೇಔಟ್, ಬಿದ್ದಾಪೂರ ಕಾಲೋನಿ, ಕಲಬುರಗಿ ರವರು  ದಿನಾಂಕ 26-04-2019 ರಂದು ನಮ್ಮ ಅಣ್ಣ ಮಲ್ಲಿಕಾರ್ಜುನ ಇವರ ಮನೆಯಲ್ಲಿ ಜವಳ ಕಾರ್ಯಕ್ರಮ ಇದ್ದ ಕಾರಣ ನಾನು ಮತ್ತು ನನ್ನ ಹೆಂಡತಿ ಕೂಡಿ ಬೆಳಿಗ್ಗೆ ನಮ್ಮ ಅಣ್ಣನ ಮನೆಗೆ ದತ್ತನಗರಕ್ಕೆ ಹೋಗಿದ್ದು ಇರುತ್ತದೆ. ರಾತ್ರಿ ಅಲ್ಲಿಯೇ ಉಳಿದಿರುತ್ತೇವೆ. ದಿನಾಂಕ 27-4-2019 ರಂದು 04-00 ಎ.ಎಮ್ ಕ್ಕೆ ನಮ್ಮ ಮನೆಯ ಮಾಲಿಕರಾದ ಶೆಂಕ್ರೆಪ್ಪ ತಂದೆ ಶಾಮರಾವ ಬೋಳೆಗಾಂವ ರವರು ಫೋನ್ ಮಾಡಿ ನಿಮ್ಮ ಮನೆಯ ಕೀಲಿ ಮುರಿದು ಯಾರೋ ಮನೆ ಕಳ್ಳತನ ಮಾಡಿದಂತೆ ಕಂಡು ಬರುತ್ತಿದೆ ಬೇಗ ಬನ್ನಿರಿ ಅಂತಾ ತಿಳಿಸಿದ ಮರೆಗೆ ನಾನು ಮತ್ತು ನನ್ನ ಹೆಂಡತಿ ಹಾಗೂ ನಮ್ಮಣ್ಣ ಮಲ್ಲಿಕಾರ್ಜುನ ಕೂಡಿ ಬಂದು ವಿಚಾರಿಸಲು ನಮ್ಮ ಮನೆ ಮಾಲಿಕರು ತಿಳಿಸಿದ್ದೇನೆಂದರೆ, ದಿನಾಂಕ 26-04-2019 ರಂದು ರಾತ್ರಿ 10-00 ಗಂಟೆಯವರೆಗೂ ನಾವು ಎಚ್ಚರ ಇದ್ದು, ನಿಮ್ಮ ಮನೆ ಕೀಲಿ ಹಾಕಿದ್ದು ಇರುತ್ತದೆ. ದಿನಾಂಕ 27-04-2019 ರಂದು 03-15 ಎ.ಎಮ್ ಸುಮಾರಿಗೆ ನಮ್ಮ ಮನೆಯ ಸುತ್ತ ಮುತ್ತ ಯಾರೋ ಚೀರಾಡುವುದು ಮತ್ತು ಕಳ್ಳರು ಬಂದಿದ್ದಾರೆಂದು ಗದ್ದಲ ಶಬ್ದ ಕೇಳಿ ನಾನು ಕೆಳಗೆ ಬಂದು ನೋಡಲು ನಮ್ಮ ಕಂಪೌಂಡದಲ್ಲಿದ್ದ ನನ್ನ ಹೀರೋ ಹಂಡಾ ಸ್ಪ್ಲೆಂಡರ್ ಪ್ಲಸ್ ಮೋಟರ್ ಸೈಕಲ್ ಕಳ್ಳತನವಾಗಿದ್ದು ಮತ್ತೆ ನಿಮ್ಮ ಮನೆಕಡೆ ನೋಡಲು ನಿಮ್ಮ ಮನೆಯ ಕೀಲಿ ಮುರಿದಿದ್ದು ಕಂಡು ಬಂದಿತು ಅಂತಾ ತಿಳಿಸಿದ್ದು ಇರುತ್ತದೆ. ನಾವು ಎಲ್ಲರೂ ಕೂಡಿ ಮನೆಯ ಒಳಗಡೆ ಹೋಗಿ ನೋಡಲು ನಮ್ಮ ಅಡುಗೆ ಮನೆಯಲ್ಲಿಟ್ಟ ಟ್ರಜರಿ ಲಾಕ್ ಮುರಿದು, ಅದರಲ್ಲಿಟ್ಟ ಬಂಗಾರದ ಮತ್ತು ಬೆಳ್ಳಿಯ ಆಭರಣಗಳು ಮತ್ತು ನಗದು ಹಣ ಹೀಗೆ ಒಟ್ಟು 1,71,000/- ಕಿಮ್ಮತ್ತಿನವುಗಳನ್ನು              ದಿನಾಂಕ 26-04-2019 ರಂದು ರಾತ್ರಿ  10-00 ಪಿ.ಎಮ್ ದಿಂದ ದಿನಾಂಕ 27-04-2019 ರಂದು 03-15 ಎ.ಎಮ್ ದ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಕೀಲಿ ಮುರಿದು ಮನೆಯಲ್ಲಿದ್ದ ಟ್ರಜರಿ ಲಾಕರ್ ಒಡೆದು ಕಳ್ಳತನಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಮೌನೇಶ ತಂದೆ ಶಿವಣ್ಣ ವಿಶ್ವಕರ್ಮ ಸಾ:ಮಾಣಿಕೇಶ್ವರಿ ಕಾಲೋನಿ ಕಲಬುರಗಿ ರವರು  ದಿನಾಂಕ:26/04/2019 ರಂದು  ಕೋಕಿಲಾ ಪರಮೇಶ್ವರಿ ಗುಡಿಯ ಹತ್ತಿರ ನಿಂತಿದ್ದಾಗ ನಮ್ಮ ಓಣಿಯಲ್ಲಿಯ ರಾಘು & ವಿಶಾಲ ಇವರುಗಳು ಐವೇಟರ್‌ ಎಕ್ಟೀವಾ ಮೇಲೆ ಬಂದವರೆ ಅವರಲ್ಲಿ ರಾಘು ಇತನು ನನ್ನ ಹತ್ತಿರ ಬಂದು ಮಗನೆ ನನಗೆ ಗುರಾಯಿಸಿ ನೋಡುವದು ಉಗಳುವುದು ಮಾಡುತ್ತಿಯಾ ಅಂದವನೆ ತನ್ನ ಕೈಯಲ್ಲಿದ್ದ ರಾಡಿನಿಂದ ಹೊಡೆಯಲು ಬಂದಾಗ ತಲೆ ಹೊರಳಿಸಿದ್ದು ಆಗ ನನ್ನ ತಲೆಯ ಹಿಂಬದಿಗೆ ರಾಡಿನ ಏಟು ಬಿದ್ದು ಒಳಪೆಟ್ಟಾಯಿತು. ನನ್ನ ಹಿಡಿದುಕೊಂಡು ರಾಘು ಇತನು ಗಾಡಿಯ ಮೇಲೆ ಒತ್ತಾಯ ಮಾಡಿ ಕೂಡಿಸಿ ತಾನು ನನಗೆ ಹಿಡಿದುಕೊಂಡು ನನ್ನ ಹಿಂದೆ ಕುಳಿತನು ವಿಶಾಲನು ಗಾಡಿ ನಡೆಸುತ್ತಾ ಸುಲ್ತಾನಪುರ ರಸ್ತೆಯ ಇಟ್ಟಂಗಿ ಭಟ್ಟಿಯ ಹತ್ತಿರ ನನ್ನನ್ನು ಇಳಿಸಿ ರಾಘು ಇತನು ರಾಡಿನಿಂದ ನನ್ನ ಬೆನ್ನ ಮೇಲೆ ಮೈ ಕೈಗೆ ಹೊಡೆಯ ಹತ್ತಿದ್ದು ನನಗೆ ಸುಮ್ಮನೆ ಯಾಕೆ  ಹೊಡೆಯುತ್ತಿರಿ ಬಿಡು ಅಂದರೆ ಇಲ್ಲಾ ನಿನ್ನ ಸೊಕ್ಕು ಬಹಳ ಇದೆ ನಮ್ಮ ತಂಟೆಗೆ ಬರದಂತೆ ಬುದ್ದಿ ಕಲಿಸುತ್ತೇವೆ ಅಂತಾ ಬೈಯುತ್ತಾ ರಾಡನಿಂದ ಮತ್ತೆ ಮತ್ತೆ ಹೊಡೆದನು. ವಿಶಾಲ ಇತನು ಮೈ ಕೈಗೆ ಗುದ್ದಿದನು ನಾನು ಚಿರಾಡುತ್ತಿರುವದನ್ನು ಕೇಳಿ ಇಟ್ಟಂಗಿ ಭಟ್ಟಿಯಲ್ಲಿ ಕೆಲಸ ಮಾಡುವವರು ಬಂದರು ಆಗ ಇವರಿಬ್ಬರೂ ನನಗೆ ಹೊಡೆಯುವದನ್ನು ಬಿಟ್ಟು ಗಾಡಿಯ ಮೇಲೆ ಹೋದರು. ಹೋಗುವಾಗ ಈ ಸಲ ಉಳಿದಿದಿ ಇನ್ನೊಮ್ಮೆ ನಮಗೆ ನೋಡಿದರೆ ಜೀವ ಸಹಿತ ಬಿಡುವದಿಲ್ಲಾ ಅಂತಾ ಬೈಯುತ್ತಿದ್ದರು. ನಂತರ ನಮ್ಮ ಅಣ್ಣ ದೇವರಾಜನಿಗೆ ಪೋನ ಮಾಡಿದಾಗ ನಮ್ಮ ಅಣ್ಣ ಬಂದು ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Saturday, April 27, 2019

KALABURAGI DISTRICT REPORTED C RIMES

ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಮಲ್ಲಿಕಾರ್ಜುನ ತಂದೆ ದೇವಿಂದ್ರಪ್ಪಾ ಜವರಕರ್ ಸಾ|| ತಾಜಸುಲ್ತಾನಪೂರ ತಾ||ಜಿಲ್ಲಾ|| ಕಲಬುರಗಿ ರವರು ಕಲಬುರಗಿ ತಾಲ್ಲೂಕಿನ ತಾಜಸುಲ್ತಾನಪೂರ ಗ್ರಾಮದ  ಉನ್ನೀಪೀರ ದರ್ಗಾ ಹತ್ತಿರ ನಿನ್ನೆ ರಾತ್ರಿ 10-45 ಗಂಟೆ ದಿನಾಂಕ 25-04-2019 ರಂದು ಕಲಬುರಗಿ ಯಿಂದ ತಾಜಸುಲ್ತಾನಪೂರ ಗ್ರಾಮಕೆ ಹೋಗುವ ಸಂದರ್ಭದಲ್ಲಿ ನನ್ನ ವಾಹನ ತಡೆದು ಇದೇ ಗ್ರಾಮದ ನಿವಾಸಿಗಳಾದ ಜೊತೆಗೆ ರೌಡಿ ಶೀಟರಗಳಾದ ವಿನೋದ ತಂದೆ ವಿಠಲ ಸಂಘ ಮತ್ತು ಇವನ ಗೆಳೆಯ ಮೇಲ್ವರ್ಗದ ಕಲ್ಯಾಣಿ ತಂದೆ ಅಣ್ಣಪ್ಪಾ ಬಾಗೋಡಿ ಇಬ್ಬರೂ ಕೂಡಿಕೊಂಡು ಕುಡಿತದ ಅಮಲಿನಲ್ಲಿ ಕೈಯಿಂದ ತಲೆಗೆ ಹೊಡೆದದ್ದು ಇದರಿಂದ ತಲೆಯಿಂದ ರಕ್ತ ಸೋರಿದ್ದು ಅವಾಚ್ಯ ಶಬ್ದಗಳಿಂದ ನಿಂದಿಸಿ ಮತ್ತೆ ನನ್ನಲ್ಲಿದ್ದ ಮೊಬೈಲ್ ಜೊತೆಗೆ ಜೇಬಿನಲ್ಲಿದ್ದ 3500/- ರೂ ಕಸಿದುಕೊಂಡು ಕೇಳಲು ಹೋದರೆ ನನ್ನ ಹೊಟ್ಟೆಗೆ ಹತ್ತು ಹದುನೈದು ಬಾರಿ ಹೊಡೆದು ಕಾಲಿನಿಂದ ಒದ್ದಿರುತ್ತಾರೆ. ಜೊತೆಗೆ ಕಲ್ಯಾಣಿ ಎಂಬುವವನು ಇವನ ಕಾರಿನಿಂದ ಬಡಿಗೆ ತೆಗೆದು ಹೊಡೆದಿರುತ್ತಾರೆ ಜೊತೆಗೆ ಯಾರಿಗಾದರೂ ಹೇಳಿದರೆ ನಿನ್ನ ಜೀವ ತೆಗೆಯುತ್ತೇವೆ ಎಂದು ಜೀವ ಬೆದರಿಕೆ ಹಾಕಿರುತ್ತಾರೆ ಜೊತೆಗೆ ಕಲ್ಯಾಣಿ ಎಂಬುವವನು ಜಾತಿ ನಿಂದನೆ ಮಾಡಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಸ್ವಾಭಾವಿಕ ಸಾವು ಪ್ರಕರಣಗಳು :
ದೇವಲಗಾಣಗಾಪೂರ ಠಾಣೆ : ಶ್ರೀಮತಿ ಬಸಮ್ಮ@ಪಾರ್ವತಿ ಗಂಡ ಈರಯ್ಯಾ ಗುಡ್ಡದಮಠ ಸಾ|| ಚಿಣಮಗೇರಾ ತಾ|| ಅಫಜಲಪೂರ ರವರ ಅಣ್ಣ ಕಲ್ಲಯ್ಯಾ ಇವರು ಉಪಜೀವನಕ್ಕಾಗಿ ಸೋಲಾಪೂರಕ್ಕೆ ಹೋಗಿ ವಾಸವಾಗಿದ್ದು ನನಗೆ ಚಿಣಮಗೇರಾ ಗ್ರಾಮಕ್ಕೆ ಮದುವೆ ಮಾಡಿ ಕೊಟ್ಟಿದ್ದು ಮತ್ತು ನನ್ನ ತಾಯಿ ಸುಮಾರು ಮೂರು ವರ್ಷಗಳ ಹಿಂದೆ ಮೃತಪಟ್ಟಿದ್ದು ನನ್ನ ತಂದೆ ಒಬ್ಬಂಟಿಯಾಗಿದ್ದರಿಂದ ನಮ್ಮ ಅಕ್ಕತಂಗಿಯರಲ್ಲಿ ಬಂದು ಇರುತ್ತಿದ್ದು ಅದೇ ರೀತಿ ನನ್ನ ಹತ್ತಿರ ಸಿದ್ರಾಮಯ್ಯ ಇವರು ಸುಮಾರು ನಾಲ್ಕು ತಿಂಗಳಿಂದ ನನ್ನ ಹತ್ತಿರ ಬಂದು ವಾಸವಾಗಿದ್ದು ಇರುತ್ತದೆ. ಹೀಗಿದ್ದು ನನ್ನ ತಂದೆ ಸ್ವಲ್ಪ ದಿವಸಗಳಿಂದ ತನ್ನಿಂದತಾನೆ ಮಾನಸಿಕ ಮಾಡಿಕೊಂಡಿದ್ದು ಮತ್ತು ಒಂದು ವರ್ಷದ ಹಿಂದೆ ಅವರ ಕಾಲು ಮುರಿದಿದ್ದು ಅದರ ತ್ರಾಸದಿಂದ ಮನನೊಂದು ನಾನು ಸತ್ತರ ಸರಿಯಾಗಿ ಆಗುತ್ತದೆ ಅಂತ ನನ್ನ ಮುಂದೆ ಅಂದಿದ್ದರಿಂದ ನಾವು ಅವರಿಗೆ ದೈರ್ಯ ಹೇಳಿದ್ದು ಇತ್ತು ಮತ್ತು ಇಂದು ದಿನಾಂಕ 25-04-2019 ರಂದು ನಮ್ಮೂರಲ್ಲಿ ಜಾತ್ರೆ ಇರುವುದರಿಂದ ನಾನು ಬೆಳಿಗ್ಗೆ 04-00 ಗಂಟೆಗೆ ಬೇಗನೆ ಎದ್ದು ದೇವರಿಗೆ ಹೋಗುವಾಗ ನನ್ನ ಮನೆಯಿಂದ ಉಸುಕಿನಲ್ಲಿ ನಮ್ಮ ತಂದೆ ಮಲಗಿದ್ದು ಅವರಿಗೆ ನಾನು ಎಬ್ಬಿಸಲು ಅವರು ಅರೇ ಪ್ರಜ್ಞಾ ಸ್ಥಿತಿಯಲ್ಲಿದ್ದು ನಾನು ನನ್ನ ಗಂಡ ಹಾಗೂ ನನ್ನ ತಂಗಿಯಾದ ಮಹಾನಂದ ಇವರೆಲ್ಲ ಕೂಡಿ ನೋಡಲಾಗಿ ನಮ್ಮ ತಂದೆ ಮಾತನಾಡಲಿಲ್ಲ ಅವರ ಬಾಯಿಂದ ಕ್ರಿಮಿನಾಶಕ ಔಷದಿ ವಾಸನೆ ಬಂದಿದ್ದರಿಂದ ನಾವು ಅವರನ್ನು 108 ವಾಹನದಲ್ಲಿ ಹಾಕಿಕೊಂಡು ಕಲಬುರಗಿ ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಸ್ವಲ್ಪ ಸಮಯದಲ್ಲಿ ನನ್ನ ತಂದೆ ಉಪಚಾರ ಫಲಕಾರಿಯಾಗದೆ ಇಂದು ದಿನಾಂಕ 25-04-2019 ರಂದು ಬೆಳಿಗ್ಗೆ 08-30 ಗಂಟೆ ಸುಮಾರಿಗೆ ಮೃತ ಪಟ್ಟಿರುತ್ತಾರೆ. ಕಾರಣ ನನ್ನ ತಂದೆಯ ಕಾಲು ಮುರಿದಿದ್ದರಿಂದ ದಿನನಿತ್ಯದ ಕೆಲಸ ನಿರ್ವಹಿಸಲು ತೊಂದರೆಯಾಗಿದ್ದರಿಂದ ಅದೆ ನೋವಿನಲ್ಲಿ ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ 24-04-2019 ರಾತ್ರಿ 8-00 ಗಂಟೆಯಿಂದ ದಿನಾಂಕ 25-04-2019 ರ ಬೆಳಗಿನ 04-00 ಗಂಟೆ ಮದ್ಯದ ಅವಧಿಯಲ್ಲಿ ಯಾವುದೋ ಕ್ರಿಮಿನಾಶಕ ಔಷದಿ ಸೇವನೆ ಮಾಡಿ ಮೃತ ಪಟ್ಟಿದ್ರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಶೋಕ ನಗರ ಠಾಣೆ : ದಿನಾಂಕ; 26.04.2019 ರಂದು ಶ್ರೀ ಶಿವರಾಯ ತಂದೆ ಮಲ್ಕಪ್ಪ ಶೇಳ್ಳಗಿಕರ ಸಾ: ಅಶೋಕ ನಗರ ಕಲಬುರಗಿ ರವರಿಗೆ 3 ಜನ ಗಂಡು ಮಕ್ಕಳು ಮತ್ತು 2 ಜನ ಹೆಣ್ಣು ಮಕ್ಕಳು ಇದ್ದು, ಗಂಡು ಮಕ್ಕಳ ಪೈಕಿ ಮಲ್ಲಿಕಾರ್ಜುನ ಇತನಿಗೆ ಕಳೆದ 3-4 ವರ್ಷಗಳಿಂದ ಸಕ್ಕರೆ ಕಾಯಿಲೆ ಬಂದಿದ್ದು ಇದರಿಂದ ಆತನಿಗೆ ಕಣ್ಣುಗಳು ಸರಿಯಾಗಿ ಕಾಣುತಿರಲಿಲ್ಲಾ, ಮತ್ತು ಎರಡು ಕಾಲುಗಳ ಪಾದಗಳಿಗೆ ಗಾಯವಾಗಿದರಿಂದ ಕಾಲುಗಳಿಗೆ ಹುಳಬಿದ್ದಿದ್ದು ಈ ಬಗ್ಗೆ ಆಸ್ಪತ್ರೆಯಲ್ಲಿ ಉಪಚಾರ ಮಾಡಿಸಿದರು ಕೂಡಾ ಕಾಲು ನೊವು ಕಡಿಮೆಯಾಗಿರುವುದಿಲ್ಲಾ. ದಿನಾಂಕ: 26.04.2019 ರಂದು ಮದ್ಯಾಹ್ನ 01-00 ಗಂಟೆಯ ಸುಮಾರಿಗೆ ನಾನು ನಮ್ಮ ಮಗನಿಗೆ ಮಾತ್ರೆಗಳು ತೆಗೆದುಕೊಂಡು ಬರುವ ಸಲುವಾಗಿ ಔಷದ ಅಂಗಡಿಗೆ ಹೋಗಿ ಮಾತ್ರೆಯನ್ನು ತೆಗೆದುಕೊಂಡು ಮದ್ಯಾಹ್ನ 01.30 ಗಂಟೆಗೆ ಮನೆಗೆ ಹೋದಾಗ ನಮ್ಮ ಮಗ ಮಲ್ಲಿಕಾರ್ಜುನ ಇತನು ಮೈಗೆ ಬೆಂಕಿ ಹಚ್ಚಿಕೊಂಡು ಚಿರಾಡುತ್ತಿದನು. ನಂತರ ನಾನು ಅವನಿಗೆ ಬೆಂಕಿ ಆರಿಸಲು ಪ್ರಯತ್ನಿಸಿ ಅವನನ್ನು ಉಪಚಾರ ಕುರಿತು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿ ಘಟನೆ ಬಗ್ಗೆ ವಿಚಾರಿಸಲು ಅವನು ತಿಳಿಸಿದೆನೆಂದರೆ, ಇಂದು ಮದ್ಯಾಹ್ನ 01.15 ಗಂಟೆಗೆ ನನಗೆ ಎರಡು ಕಾಲುಗಳು ವೀಪರಿತ ನೋವು ಆಗಲು ಪ್ರಾರಂಬವಾಗಿದ್ದರಿಂದ ಮನೆಯಲ್ಲಿದ್ದ ಸೀಮೆ ಎಣ್ಣೆಯನ್ನು ಕಾಲುಗಳ ಮೇಲೆ ಹಾಕಿದ್ದು ನಂತರ ನಾನು ಬೀಡಿ ಸೇದುವ ಸಲುವಾಗಿ ಕಡ್ಡಿ ಗೀಚಿದಾಗ ಆಕಸ್ಮಿಕವಾಗಿ ಬೆಂಕಿ ಹತ್ತಿದ್ದು ಇದರಿಂದ ನನ್ನ ಎರಡು ಕೈಕಾಲುಗಳಿಗೆ, ಮುಖಕ್ಕೆ ಗಾಗು ದೇಹದ ಇತರೆಡೆಗೆ ಬೆಂಕಿ ಹತ್ತಿದ್ದು ಇರುತ್ತದೆ. ಅಂತ ತಿಳಿಸಿದ್ದು ತಿಳಿಸಿರುತ್ತಾನೆ. ಇಲ್ಲಿ ಬಂದ ನಂತರ ನಮ್ಮ ಮಗ ಮಲ್ಲಿಕಾರ್ಜುನ ಇತನು ಉಪಚಾರ ಫಲಕಾರಿಯಾಗದೆ ಸಾಯಂಕಾಲ 06.00 ಗಂಟೆಗೆ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಧೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಮನೋಜಕುಮಾರ ತಂದೆ ಮೈಲಾರಿ ನಾಟಿಕರ ಸಾ:ಬಸವಣಗುಡಿ ಕಟ್ಟೆ ಹತ್ತಿರ ಬೋರಾಬಾಯಿ ನಗರ ಕಲಬುರಗಿ ರವರು 7 ತಿಂಗಳ ಹಿಂದೆ ಚಂದಮ್ಮಾ ಗಂಡ ಶಂಕರ ಹರಗೆನವರ ಇವರ ಒಬ್ಬಳೆ ಮಗಳಾದ ಶರಣಮ್ಮಳ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ನನ್ನ ಅತ್ತೆಯವರಾದ ಚಂದಮ್ಮಾ ಹಾಗೂ ಅವರ ಅಣ್ಣ ನಮ್ಮ ಜನಾಂಗದ ರಾಣಪ್ಪ ಇತನ ಮಕ್ಕಳಾದ ಅನೀಲ ಹಾಗೂ ಶಿವಕುಮಾರ ಶ್ರೀಮಂತ ಇವರ ಅಳಿಯನಾದ ಆಕಾಶ ಇವರ ನಡುವೆ ಬೋರಾಬಾಯಿ ನಗರದಲ್ಲಿ ಬರುವ 15*30 ಖುಲ್ಲಾ ಜಾಗದಲ್ಲಿ ಅಂಗಡಿಯಿದ್ದು ಈ ಜಾಗಕ್ಕಾಗಿ ಆಗಾಗ ಅವರ ಮಧ್ಯೆ ಜಗಳವಾಗುತ್ತಿತ್ತು ನಾನು ಶರಣಮ್ಮಳ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ನಂತರ ಅವರು ವಿನಾಕಾರಣ ನನಗೆ ಜೀವ ಬೆದರಿಕೆ ಹಾಕುವದು ಹಾಗೂ ಜಗಳ ತೆಗೆಯುವದು ಮಾಡುತ್ತಿದ್ದರು ದಿನಾಂಕ:26/04/2019 ರಂದು 1.30 ಪಿ.ಎಂ ಸುಮಾರಿಗೆ ನಾನು ಮನೆಯಲ್ಲಿದ್ದಾಗ ಅನೀಲ, ಆಕಾಶ ಹಾಗೂ ಶಿವಕುಮಾರ ಮೂರು ಜನ ಬಂದವರೆ ಹೊಡಿರಲೇ ಈ ರಂಡಿ ಮಗನಿಗೆ ಅಂತಾ ಅನೀಲ ಇವನು ತನ್ನ ಕೈಯಲ್ಲಿದ್ದ ರಾಡದಿಂದ ನನ್ನ ತಲೆಗೆ ಹೊಡೆದನು. ಶಿವಕುಮಾರ ಇವನು ಕೈಯಿಂದ ನನ್ನ ಭುಜಕ್ಕೆ ಬೆನ್ನಿಗೆ ಹೊಡೆದನು. ಇವರಿಂದ ನಾನು ತಪ್ಪಿಸಿಕೊಂಡು ಓಡಿ ಹೋಗುವಾಗ ಆಕಾಶ ಇತನು ನನಗೆ ಗಟ್ಟಿಯಾಗಿ ಹಿಡಿದು ಓಡಿ ಹೋಗಲು ಬಿಡದೆ ಹೊಟ್ಟೆಗೆ ಬೆನ್ನಿಗೆ ಹೊಡೆದನು. ನನಗೆ ತಲೆಗೆ ಗಾಯವಾಗಿ ಮೂರ್ಛೇ ಹೋಗಿ ಬಿದ್ದಿದ್ದರಿಂದ ಸದರಿಯವರಿಂದ ನನ್ನ ತಾಯಿಯಾದ ಶಾರದಾಬಾಯಿ ಅಣ್ಣನಾದ ಅನೀಲ ನನ್ನ ಅತ್ತಿಗೆಯಾದ ರೇಶ್ಮಾ ಇವರು ಬಿಡಿಸಿದ್ದರಿಂದ ಅನೀಲ ಆಕಾಶ ಶಿವಕುಮಾರ ಓಡಿ ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಸೇಡಂ ಠಾಣೆ : ದಿನಾಂಕ 25/04/2019 ರಂದು ಸೇಡಂ ಪಟ್ಟಣದ ಛೋಟಿಗಿರಣಿ ಭಾಗ್ಯವಂತಿ ಗುಡಿ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜೂಜಾಟ ಅಂತಾ ಬಾತ್ಮಿ ಬಂದ ಮೇರೆಗೆ ಶ್ರೀ ಸುನೀಲ್ ಕುಮಾರ ಮೂಲಿಮನಿ ಪಿ.ಎಸ.ಐ (ಕಾಸೂ) ಸೇಡಂ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ  ಒಬ್ಬನನ್ನು ಹಿಡಿದು ಅವನ ಹೆಸರು ವಿಳಾ ವಿಚಾರಿಸಲು ಸಂತೋಷ ತಂದೆ ಬಸವರಾಜ ಅಳ್ಳೊಳ್ಳಿ ಸಾ|| ಛೋಟಿಗಿರಣಿ ಸೇಡಂ ಅಂತಾ ತಿಸಿದ್ದು ಸದರಿಯವನಿಂದ ಜೂಜಾಟಕ್ಕೆ ಬಳಸಿದ ನಗರು ಹಣ 620/- ರೂ ಹಾಗು ಒಂದು ಮಟಕಾ ಚೀಟಿ , ಬಾಲಪೆನ್ನ ವಶಕ್ಕೆ ಪಡೆದು ಸದರಿಯವನೊಂದಿಗೆ  ಸೇಡಂ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ 02 : ದಿನಾಂಕ-26/04/2019 ರಂದು ರಾತ್ರಿ 10-00 ಗಂಟೆಯಿಂದ 10-15 ಗಂಟೆಯ ಸುಮಾರಿಗೆ ಶ್ರೀಮತಿ ಅಂಬಮ್ಮ ತಂದೆ ಅಂಬಪ್ಪ @ ತುಳಜಪ್ಪ ಉರಕೂನ ಸಾ : ಚಿಂಚನಸೂರ  ಮಗ ರುದ್ರಪ್ಪ ಮತ್ತು ಸುನೀಲ ಪೂಜಾರಿ ತನ್ನ ಮೋಟಾರ ಸೈಕಲ ನಂ ಕೆಎ- 32 ಇಟಿ 5248 ನೇದ್ದರ ಮೇಲೆ ಮಾಡಬೂಳ ದಿಂದ ಕಲಬುರಗಿ ಕಡೆಗೆ ಹೋಗುತ್ತಿದ್ದಾಗ ಗೀತಾ ನಗರ ಕ್ರಾಸ್ ಹತ್ತಿರ ರೋಡ ಮೇಲೆ  ಎದುರಿನಿಂದ ಯಾವುದೋ  ಒಂದು  ವಾಹನದ ಚಾಲಕ  ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮಗ ರುದ್ರಪ್ಪ ಮತ್ತು ಸನೀಲ ಪೂಜಾರಿ ಇವರು ಕುಳಿತು ಹೋಗುತ್ತಿದ್ದ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಸುನೀಲ ಪೂಜಾರಿ ಇತನಿಗೆ ಭಾರಿಗಾಯಗೊಳಿಸಿ ಫಿರ್ಯಾದಿ ಮಗನಾದ ರುದ್ರಪ್ಪ ಈತನಿಗೆ ಭಾರಿಗಾಯಗೊಳಿಸಿದರಿಂದ ಆತನು ಸ್ಥಳದಲ್ಲಿ ಮೃತ ಪಟ್ಟಿದ್ದು ವಾಹನ ಸಮೇತ ಚಾಲಕ ಓಡಿ ಹೋಗಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 02 ರಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ  02 : ದಿನಾಂಕ 26.04.2019 ರಂದು ಬೆಳಿಗ್ಗೆ ಶಶಿಕಾಂತ ಚೌಧ್ರಿ ಈತನು ಕಾರ್ ನಂಬರ ಕೆಎ 32 ಎನ್ 4604 ನೇದ್ದರಲ್ಲಿ ಶ್ರೀಮತಿ ವಿಜಯಲಕ್ಷ್ಮೀ ಕುಲಕರ್ಣಿ & ಅಶೊಕ ಕುಲಕರ್ಣಿ ಇವರಿಗೆ ಕೂಡಿಸಿಕೊಂಡು ಹುಮನಾಬಾದ ರಿಂಗ್ ರೋಡಿದಿಂದ ಮಹಾಗಾಂವ್ ರೋಡಕಡೆಗೆ ಹೋಗುವ ಕುರಿತು ಕಾರನ್ನು ಅತೀವೇಗವಾಗಿ & ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಒಮ್ಮಲೇ ಕಾರನ್ನು ಬಲಕ್ಕೆ ಚಲಾಯಿಸಿ ಅವರಾದ (ಬಿ) ಗ್ರಾಮದ ಹತ್ತಿರ ರಸ್ತೆ ಬದಿಯಲ್ಲಿ ನಿಂತಿರುವ ಲಾರಿ ನಂಬರ ಎಂಹೆಚ್ 26 ಇಡಿ 2198ನೇದ್ದಕ್ಕೆ ಡಿಕ್ಕಿಪಡಿಸಿ ಶ್ರೀಮತಿ ವಿಜಯಲಕ್ಷ್ಮೀ ಕುಲಕರ್ಣಿ & ಅಶೊಕ ಕುಲಕರ್ಣಿ ಇವರಿಗೆ ಭಾರಿಗಾಯಗೊಳಿಸಿ ತಾನೂ ಕೂಡಾ ಭಾರಿಗಾಯ ಹೊಂದಿ ಸ್ಥಳದಲ್ಲಿಯೆ ಮೃತಪಟ್ಟಿದ್ದು ಇರುತ್ತದೆ ಅಂತಾ ಶ್ರೀ ರಮೇಶ ತಂದೆ ಗೋಪಿನಾಥ ಚೌದರಿ ಸಾ : ಅರಣಕಲ್ ತಾ : ಚಿತ್ತಾಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 02 ರಲ್ಲಿ ಪ್ರಕರಣ ದಾಖಲಾಗಿದೆ.
ಸೇಡಂ ಠಾಣೆ : ಶ್ರೀ ರವೀಂದ್ರ ತಂದೆ ಸಂಗಯ್ಯ ಸ್ವಾಮಿ  ಸಾ|| ಮಳಖೇಡ ತಾ|| ಸೇಡಂ  ರವರ ತಮ್ಮನಾದ ಭೀಮರಾಯ ತಂದೆ ಬಸವರಾಜ ಕೋಲ್ಲೂರ ಸಾ|| ಮಳಖೇಡ  ಇತನು ದಿನಾಂಕ 23/04/2019 ರಂದು 5-30 ಗಂಟೆಗೆ ಲಾರಿ ನಂ ಕೆಎ-32 ಬಿ-2698 ನ್ನೇದ್ದರಲ್ಲಿ ಮಣ್ಣು ತುಂಬಿಕೊಂಡು   ಚಿಂಚೋಳಿ ಸೇಡಂ ರೋಡಿನಲ್ಲಿ ಹೊರಟಾಗ ಸುರವಾರ ಗೇಟ ಸ್ವಲ್ಪ ಮುಂದೆ ತನ್ನ ಲಾರಿ ಚಾಲಕನು ಲಾರಿಯನ್ನು ಅತೀ ವೇಗ ಹಾಗೂ ಅಲಕ್ಷತನದಿಂದ ಅಡ್ಡಾದಿಡ್ಡಿಯಾಗಿ ನಡೆಸಿ ರೋಡಿನ ತಗ್ಗಿನಲ್ಲಿ ಒಮ್ಮೆಲೆ ಅಪಘಾತ ಪಡೆಸಿ ಲಾರಿಪಲ್ಟಿ ಮಾಡಿದ್ದು ಇರುತ್ತದೆ. 
ಅತ್ಯಾಚಾರ ಮಾಡಲು ಪ್ರಯತ್ನಿಸಿದ ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ-25/04/2019 ರಂದು 6-00 ಪಿಎಮ್ ಕ್ಕೆ ಕುಮಾರಿ ಇವರು ತಮ್ಮ ಗ್ರಾಮದಲ್ಲಿ ವಾಸವಾಗಿರುವ ವೀರಭದ್ರ ತಂದೆ ರಾಚಯ್ಯಾ ಸ್ವಾಮಿ ವಯ|| 20 ಜಾ|| ಜಂಗಮ, ಈತನು ಒಂದು ವರ್ಷದ ಹಿಂದೆ ಪರಿಚಯವಾಗಿದ್ದು. ಇಬ್ಬರೂ ಫೋನಿನಲ್ಲಿ ಮಾತನಾಡುತ್ತಿದ್ದೇವು. ನಂತರ ಈಗ 10 ತಿಂಗಳಿಂದ ಇಬ್ಬರು ಪರಸ್ಪರ ಪ್ರೀತಿ ಮಾಡತೊಡಗಿದೇವು. ನಾನು ಆಗಾಗ ಫೋನಿನಲ್ಲಿ ನಮ್ಮ ಮನೆಯವರಿಗ ಗೊತ್ತಾಗದ ಹಾಗೆ ಮಾತನಾಡುತ್ತಿದ್ದೇವು. ಆತನು ನನಗೆ 21 ವರ್ಷ ನಿನಗೆ 18 ವರ್ಷ ತುಂಬಿದ ನಂತರ ಮನೆಯವರಿಗೆ ಹೇಳಿ ಮದುವೆ ಮಾಡಿಕೊಳ್ಳೋಣ ಅಂತಾ ಹೇಳಿದರಿಂದ ನಾವು ಪ್ರೀತಿಸುವ ವಿಷಯವನ್ನು ಯಾರಿಗೂ ತಿಳಿಸದೇ ಗುಪ್ತವಾಗಿಟ್ಟಿರುತ್ತೇವೆ. ಹಾಗೆ ನಾವು ಮಾತನಾಡುತ್ತಾ ಬರುತ್ತಿದ್ದೆವು. ಹೀಗಿದ್ದು, ಹೋದ ತಿಂಗಳ ದಿನಾಂಕ: 07/03/2019 ರಂದು ಸಾಯಂಕಾಲ 4;00 ಪಿ.ಎಮ್ ಕ್ಕೆ ಮೂತ್ರ ವಿಸರ್ಜನೆಗೆ ಹೋಗಿ ಮರಳಿ ನಾನು ನಮ್ಮ ಮನೆ ಕಡೆಗೆ ಬರುತ್ತಿದ್ದಾಗ ವೀರಭದ್ರಯ್ಯ ಇತನು ರಸ್ತೆಯಲ್ಲಿ ಬೇಟಿಯಾಗಿ ನನಗೆ ನಿನ್ನ ಹತ್ತಿರ ಮಾತನಾಡುವದಿದೆ ಸಾಯಂಕಾಲ 6:00 ಗಂಟೆಗೆ ನಲಂದ ಶಾಲೆಯ ಹಿಂದಿರುವ ಖುಲ್ಲಾ ಜಾಗೆಯ ಕಡೆಗೆ ಬಾ ಅಂತಾ ಹೇಳಿದನು. ನಾನು ಮನೆಯಲ್ಲಿ ನನ್ನ ಗೆಳತಿಯ ಮನೆಗೆ ಹೋಗಿ ಬರುತ್ತೇನೆ ಅಂತಾ ಹೇಳಿ ನಾನು 6:00 ಪಿ.ಎಮ್ ಕ್ಕೆ ನಲಂದ ಶಾಲೆಯ ಹಿಂದೆ ಇರುವ ಖುಲ್ಲಾ ಜಾಗದಲ್ಲಿ ಹೋದಾಗ ಅಲ್ಲಿ ವೀರಭದ್ರನು ಇದ್ದನು. ನಾವು ಮಾತನಾಡುತ್ತಿದ್ದಾಗ ವೀರಭದ್ರಯ್ಯನು ನನ್ನ ಮೈ ಕೈ ಮುಟ್ಟತೊಡಗಿದನು ಆಗ ನಾನು ಆತನಿಗೆ ಈ ರೀತಿ ಮಾಡುವುದು ಬೇಡ ಅಂತಾ ಅಂದಾಗ ಆತನು ನಾವು ಪ್ರೀತಿಸುತ್ತಿದ್ದು ಮದುವೆ ಮಾಡಿಕೊಳ್ಳುವವರಿದ್ದು ಏನಾಗುತ್ತದೆ ಅಂತಾ ಹೇಳಿ ನನ್ನ ಮೇಲೆ ಒತ್ತಾಯ ಪೂರ್ವಕವಾಗಿ ಕೈ ಹಿಡಿದು ಬಲತ್ಕಾರ ಮಾಡಲು ಪ್ರಯತ್ನಿಸಿದನು. ಆಗ ನಾನು ಜೋರಾಗಿ ಚೀರಿಕೊಂಡು, ಅವನಿಂದ ಕೈ ಬಿಡಿಸಿಕೊಂಡು ಮರಳಿ ಮನೆಗೆ ಬಂದಿರುತ್ತೇನೆ. ಈ ವಿಷಯವನ್ನು ನಾನು ನಮ್ಮ ಮನೆಯ ಮರ್ಯಾದೆಗೆ  ಅಂಜಿ ನಮ್ಮ ತಂದೆತಾಯಿ ರವರ ಮುಂದೆ ಹೇಳಿರುವದಿಲ್ಲ. ನಿನ್ನೆ ದಿನಾಂಕ 24/04/2019 ರಂದು ಸಾಯಂಕಾಲ 5-00 ಪಿಎಮ್ ಕ್ಕೆ ನಮ್ಮ ಮನೆಯ ಕಡೆಗೆ ಬರುತ್ತಿರುವಾಗ, ರಸ್ತೆಯ ಮೇಲೆ ವೀರಭದ್ರನು ಸಿಕ್ಕು, ನಿನಗೆ ನಾನು ಪ್ರೀತಿ ಮಾಡುತ್ತಾ ಬರುತ್ತಿರುತ್ತೇನೆ. ನೀನು ಹೋದ ತಿಂಗಳು ಶಾಲೆಯ ಹತ್ತಿರ ಬಂದು ಮಾತನಾಡುವಾಗ, ನನಗೆ ಸಪೋರ್ಟ ಮಾಡಿರುವುದಿಲ್ಲ, ಈಗ ಮುಂದೆ ಸಿಕ್ಕಾಗಲಾದರು ನಾನು ಹೇಳಿದಂತೆ ನನಗೆ ಸಪೋರ್ಟ ಮಾಡು, ಇಲ್ಲದಿದ್ದರೆ ನಿನಗೆ ನೋಡು ಹೇಗೆ ಮಾಡುತ್ತೇನೆ, ನಿನ್ನ ಜೀವನ ಸುಗಮವಾಗಿ ಸಾಗಲು ಬಿಡುವುದಿಲ್ಲ. ಅಲ್ಲದೆ ನಿನ್ನ ತಂದೆ, ತಾಯಿಯವರ ಮರ್ಯಾದೆಯಿಂದ ಬೇರೆಯವರಿಗೆ ಮುಖ ತೋರಿಸದಂತೆ ಮಾಡುತ್ತೇನೆ ಅಂತ ಹೆದರಿಸಿ ಹೋದನು. ನಿನ್ನೆಯಿಂದ ನಾನು ದುಃಖದಲ್ಲಿಯೆ ಇದ್ದು, ಇಂದು ನನಗೆ ದುಃಖ ತಾಳದೆ ಮನೆಯಲ್ಲಿ ಅಳುತ್ತಾ ಕುಳಿತುಕೊಂಡಾಗ, ನಮ್ಮ ತಂದೆತಾಯಿರವರು ನೋಡಿ, ಯಾಕೆ ಅಳುತ್ತಿದ್ದಿ ಅಂತಾ ಕೇಳಿದಾಗ, ನಾನು ಅಳುತ್ತಲೆ ಆದ ಘಟನೆಗಳ ವಿಷಯವನ್ನು ಅವರಿಗೆ ತಿಳಿಸಿರುತ್ತೇನೆ. ಆಗ ನಮ್ಮ ತಂದೆ-ತಾಯಿರವರು ನನಗೆ ದೈರ್ಯ ತುಂಬಿದ್ದರಿಂದ ನಾನು ಆತನ ಮೇಲೆ ಕೇಸು ಮಾಡಲು, ನಮ್ಮ ತಂದೆ ತಾಯಿಯವರೊಂದಿಗೆ ಬಂದು ದೂರು ನೀಡುತ್ತಿದ್ದು. ನನ್ನ ಮೇಲೆ ಬಲತ್ಕಾರ ಮಾಡಲು ಪ್ರಯತ್ನಿಸಿ, ಜೀವ ಬೆದರಿಕೆ ಹಾಕಿರುವ ವೀರಭದ್ರ ತಂದೆ ರಾಚಯ್ಯಾ ಸ್ವಾಮಿ ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

Friday, April 26, 2019

KALABURAGI DISTRICT REPORTED CRIMES

ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ದಿನಾಂಕ 16-04-2019 ರಂದು ರಾತ್ರಿ 10-30 ಗಂಟೆ ಸುಮಾರಿಗೆ ಶ್ರೀ ರವರ ಮಗಳು ಬೈಹಿರ ದೇಸೆಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋಗಿದ್ದಳು. ಅವಳು ಮರಳಿ ಮನೆಗೆ ಬರದ ಕಾರಣ ನನ್ನ ಹೆಂಡತಿ ಬೈಹಿರದೆಸೆಗೆ ಹೋದ ಸ್ಥಳದಲ್ಲಿ ಹೋಗಿ ಹುಡಕಾಡಿದರು ನಮ್ಮ ಮಗಳು ಸಿಗಲಿಲ್ಲಾ, ನಂತರ ನಾನು ಮತ್ತು ನನ್ನ ಹೆಂಡತಿ, ನಮ್ಮ ಅಳಿಯ ನಮ್ಮ ಅಣ್ಣತಮ್ಮಕ್ಕಿಯವರು ಲಾಲಪಟೇಲ ಕುಡಿಕೊಂಡು ಹುಡಕಾಡಿದರು ಸಿಕ್ಕಿರುವುದಿಲ್ಲಾ, ನಮ್ಮ ಸಂಬಂದಿಕರಿಗೆ ಪೋನ ಮಾಡಿದರು ನನ್ನ ಮಗಳ ಬಗ್ಗೆ ಮಾಹಿತಿ ಸಿಗಲಿಲ್ಲಾ, ನನ್ನ ಮಗಳ ಮರ್ಯಾದೇ ಹಾಗೂ ಅವಳ ಮುಂದಿನ ಭವಿಷ್ಯದ ದೃಷ್ಠೀಯಿಂದ ದೂರು ಕೊಟ್ಟಿರಲಿಲ್ಲ. ಆದರೆ ನನ್ನ ಮಗಳು ಹೋದಾಗಿನಿಂದ ನಮ್ಮ ಮನೆಗೆ ಬಡಿಗತನದ ಕೆಲಸ ಮಾಡಲು ಬರುತ್ತಿದ್ದ ಸದಾನಂದ ಪತ್ತಾರ ಇತನು ಕೆಲಸಕ್ಕೆ ಬರಲ್ಲಿಲ್ಲಾ ಅದಕ್ಕಾಗಿ ನಮಗೆ ಅವನ ಮೇಲೆ ಸಂಶಯ ಬಂದು ದಿನಾಂಕ: 24-04-2019 ರಂದು ಮದ್ಯಾಹ್ನ 3-00 ಗಂಟೆಯ ಸುಮಾರಿಗೆ ನಾನು ಅವನ ಮೊಬೈಲ ನಂಬರಗೆ ಪೋನ ಮಾಡಿದಾಗ ಸದಾನಂದ ಮತ್ತು ನನ್ನ ಮಗಳು ಇಬ್ಬರೂ ಮಾತನಾಡಿದರು. ಆಗ ಸದಾನಂದ ಇತನು ಹೇಳಿದೆನೆಂದರೆ ನೀವು ನಿಮ್ಮ ಮಗಳಿಗೆ ಬೇರೆ ಕಡೆಗೆ ಮದುವೆ ಮಾಡಿಕೊಡುತ್ತಿರಿ ಅಂತಾ ತಿಳಿದುಕೊಂಡು ನಾನೆ ಅವಳಿಗೆ  ಮದುವೆ ಆಗಬೇಕೆಂದು ಆಕೆಗೆ ಬಲವಂತವಾಗಿ ತಾಳಿಕೋಟಿ ಹತ್ತಿರ ಇರುವ ತಮ್ಮದೊಡ್ಡಿ ಗ್ರಾಮಕ್ಕೆ ಕರೆದುಕೊಂಡು ಬಂದಿರುತ್ತೇನೆ ಅಂತ ಹೇಳಿ ಪೋನ ಕಟ್ಟ ಮಾಡಿದನು. ದಿನಾಂಕ: 25-04-2019 ರಂದು ಬೆಳಗಿನ ಜಾವ ನಾನು ನನ್ನ ಹೆಂಡತಿ, ನಮ್ಮ ಅಳಿಯ ಕೂಡಿ ಒಂದು ಖಾಸಗಿ ವಾಹನದಲ್ಲಿ ತಮ್ಮದೊಡ್ಡಿ ಗ್ರಾಮಕ್ಕೆ ಹೋಗಿ ಊರಲ್ಲಿ ಜನರಿಗೆ ವಿಚಾರಿಸಿ ಅವರಿದ್ದ ಸ್ಥಳಕ್ಕೆ ಹೊದೇವು. ಆಗ ನಾವು ನನ್ನ ಮಗಳಿಗೆ ಕೇಳಲಾಗಿ ಅವಳು ನಮ್ಮ ಮುಂದೆ ಹೇಳಿದ್ದೇನಂದರೆ, ಸದಾನಂದನು ನಮ್ಮ ಮನೆಯಲ್ಲಿ ಕೆಲಸ ಮಾಡಲು ಬಂದಾಗ ಒಂದು ದಿನ ಅವನು ನನಗೆ ನಾನು ನಿನಗೆ ಮದುವೆಯಾಗುತ್ತೇನೆ ಅಂತಾ ರಂಬಿಸಿ ನಮ್ಮ ಮನೆಯ ಬಾಜು ಇರುವ ಮಾವನಾದ ನಬಿಪಟೇಲ ಇವರ ಮನೆಯಲ್ಲಿ ಕರೆದುಕೊಂಡು ಹೋಗಿ ಜಬರದಸ್ತಿಯಿಂದ ಸಂಭೋಗ ಮಾಡಿರುತ್ತಾನೆ. ನಂತರ ಕೂಡಾ ನನಗೆ ಜೀವದ ಬೆದರಿಕೆ ಹಾಕಿ ಅದೆ ಮನೆಯಲ್ಲಿ 5-6 ಸಲ ಸಂಬೋಗ ಮಾಡಿರುತ್ತಾನೆ. ದಿ: 16-04-2019 ರಂದು ನಾನು ಬಹಿರದೇಸೆಗೆ ಹೋದಾಗ ಸದಾನಂದನು ಒಂದು ಇಂಡಿಕಾ ಕಾರ ನಂಬರ ಕೆ..51-7521 ನೇದ್ದರಲ್ಲಿ ನನಗೆ ಒತ್ತಾಯಪೂರ್ವಕವಾಗಿ ಕಾರಿನಲ್ಲಿ ಕೂಡಿಸಿಕೊಂಡು ತಮದೊಡ್ಡಿ ಗ್ರಾಮಕ್ಕೆ ಕರೆದುಕೊಂಡು ಬಂದು ಇಲ್ಲಿ ಇಟ್ಟಿದ್ದು, ನಾನು ಇಲ್ಲಿದ್ದಾಗ ಕೂಡಾ ನನಗೆ ದಿನಾಲು ಬಲವಂತದಿಂದ ಲೈಗಿಂಕ ಸಂಬೋಗ ಮಾಡಿರುತ್ತಾನೆ. ಮತ್ತು ಯಾರಿಗಾದರು ಹೇಳಿದರೆ ನಿನಗೆ ಜೀವ ಸಹಿತ ಉಳಿಸುವುದಿಲ್ಲಾ ಅಂತ ಭಯ ಹಾಕಿದರಿಂದ ನಾನು ಸುಮ್ಮನಿದ್ದೆನು ಅಂತ ಹೇಳಿರುತ್ತಾಳೆ. ನಂತರ ನಾವು ಅವನಿಗೆ ತಿಳುವಳಿಕೆ ಹೇಳಿ ಅಲ್ಲಿಂದ ಇಬ್ಬರಿಗೂ ಕರೆದುಕೊಂಡು ಠಾಣೆಗೆ ಬಂದಿರುತ್ತೆವೆ. ನಮ್ಮ ಮನೆಗೆ ಬಡಿಗತನ ಕೆಲಸ ಮಾಡಲು ಬಂದ ಸದಾನಂದ ತಂದೆ ವಿಶ್ವನಾಥ ಪತ್ತಾರ ಇವನು ಅಪ್ರಾಪ್ತ ವಯಸ್ಸಿನ ನನ್ನ ಮಗಳಿಗೆ ಮದುವೆಯಾಗುವದಾಗಿ ಪುಸಲಾಯಿಸಿ ಅವಳಿಗೆ ಜೀವದ ಬೆದರಿಕೆ ಹಾಕಿ ನಮ್ಮೂರಿನಲ್ಲಿ ನಮ್ಮ ಸಂಬಂಧಿಕರ ಮನೆಯಲ್ಲಿ ಸಂಭೋಗ ಮಾಡಿದ್ದು ಅಲ್ಲದೆ ಅವಳಿಗೆ ದಿ: 16-4-19 ರಂದು ರಾತ್ರಿ ಇಂಡಿಕಾ ಕಾರಿನಲ್ಲಿ ಅಪಹರಿಸಿಕೊಂಡು ತಮದೊಡ್ಡಿ ಗ್ರಾಮಕ್ಕೆ ಕರೆದುಕೊಂಡು ಹೋಗಿ ಅಲ್ಲಿದ್ದಾಗ ಕೂಡಾ ಅವಳಿಗೆ ಜಬರದಸ್ತಿಯಿಂದ ಸಂಭೋಗ ಮಾಡಿದ್ದು ಕಾರಣ ಸದಾನಂದ ಇತನ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಸಂಚಾರಿ ಠಾಣೆ 02 : ದಿನಾಂಕ 25.04.2019 ರಂದು ಶ್ರೀ ಬಸಯ್ಯಾ ತಂದೆ ನಾಗಯ್ಯಾ ಸ್ವಾಮಿ ಸಾ : ಧರ್ಮಾಪೂರ  ರವರ ಅಣ್ಣನಾದ ಮಾಳಯ್ಯಾ ಈತನು ಬೀರಲಿಂಗ ಗುಡಿಯ ರಸ್ತೆಯ ಹತ್ತಿರ  ನಡೆದುಕೊಂಡು ರೋಡ ದಾಟುತ್ತಿದ್ದಾಗ ಶಿವಕುಮಾರ ಈತನು ತನ್ನ ಮೋಟಾರ ಸೈಕಲ್ ನಂ ಕೆಎ 32 ಇಆರ್ 0604 ನೇದ್ದರ ಮೇಲೆ ಹಿಂದೆ ಸಿದ್ದಲಿಂಗ ಈತನಿಗೆ ಕೂಡಿಸಿಕೊಂಡು ಶಹಾಬಾದ್ ರೋಡ ಕಡೆಯಿಂದ ತನ್ನ ಮೋಟಾರ ಸೈಕಲನ್ನು ಅತೀವೇಗವಾಗಿ & ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನೆಡೆದುಕೊಂಡು ರೋಡ ದಾಟುತ್ತಿದ್ದ ಫಿರ್ಯಾಧಿ ಅಣ್ಣ ಮಾಳಯ್ಯ ಈತನಿಗೆ ಡಿಕ್ಕಿಪಡಿಸಿ ಭಾರಿ ರಕ್ತಗಾಯ ಮಾಡಿದ್ದರಿಂದ ಸದರಿಯನು ಮೃತಪಟ್ಟಿದ್ದು ಸಿದ್ದಲಿಂಗ ಮತ್ತು ಆರೋಪಿ ಶಿವಕುಮಾರ ಇವರು ಕೂಡಾ ಗಾಯ ಹೊಂದಿದ್ದು ಇರುತ್ತದೆ ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 02 ರಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಸರ್ಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿದ ಪ್ರಕರಣ :
ಆಳಂದ ಠಾಣೆ : ದಿನಾಂಕ 25/04/2019 ರಂದು ಆಳಂದ ಸೇಕ್ಟರ ದಲ್ಲಿ ಸಂಚಾರ ಮಾಡುವ ಬಸ್ಸಗಳನ್ನು ಟಿಕೇಟ್ ತಪಾಸಣೆ ಮಾಡುವಂತೆ ನಮ್ಮ ಮೇಲಾಧೀಕಾರಿಗಳ ಆದೇಶದ ಮೇರೆ ನಾನು & ಸಹಾಯಕ ಸಂಚಾರ ನಿರೀಕ್ಷಕರಾದ ಶರಣಪ್ಪ ತಂದೆ ಬಲವಂತ ಬಿರಾದಾರ ರವರುಗಳು ನಮ್ಮ ಕಾರ ನಂ, ಕೆಎ32, ಬಿ,8316 ನೇದ್ದರಲ್ಲಿ ಕಾರ ಚಾಲಕ ಶರಣು ತಂದೆ ಭೀಮಶಾ ದೊಂಡಿ ಇತನು ನಮ್ಮ ಕಾರನ್ನು ಚಲಾಯಿಸಿಕೊಂಡು ಬಸ್ಸ ವಾಹನಗಳನ್ನು ಇಡೀ ದಿನ ಟಿಕೇಟ್ ಚಕಿಂಗ ಮಾಡಿದ್ದು ನಂತರ ಇಂದು 07;27 ಪಿ.ಎಂಕ್ಕೆ ಸುಮಾರಿಗೆ ಆಳಂದ ದಿಂದ ಭಾಲಖೇಡ ಗ್ರಾಮಕ್ಕೆ ಹೊಗುತ್ತಿದ್ದ ಎನ್.ಇ.ಕೆ.ಎಸ್.ಆರ್.ಟಿಸಿ ಆಳಂದ ಬಸ್ಸ ಘಟಕ ಬಸ್ಸ ನಂ, ಕೆಎ-32, ಎಫ-1717 ನೇದ್ದನ್ನು ತೇಲ್ಯಾಕುಣಿ ಗ್ರಾಮದಲ್ಲಿ ಸದರಿ ಬಸ್ಸನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಸದರಿ ಬಸ್ಸಿಗೆ ನಾನು & ಸಹಾಯಕ ಸಂಚಾರ ನಿರೀಕ್ಷಕರಾದ ಶರಣಪ್ಪ ತಂದೆ ಬಲವಂತ ಬಿರಾದಾರ ರವರಿಬ್ಬರೂ ಬಸ್ಸಿನಲ್ಲಿ ಪ್ರಯಾಣಿಕರಿಗೆ ಟಿಕೇಟ ಪಡೆದಿರುವ ಬಗ್ಗೆ ಟಿಕೇಟ ಚೆಕಿಂಗ ಮಾಡುತ್ತಿರುವಾಗ ಸದರಿ ಬಸ್ಸಿನ ನಿರ್ವಾಕರಾದ ಅನೀಲ ಬಿಲ್ಲೆ ಸಂಖ್ಯೆ 344 ನೇದ್ದವರಿಂದ ಇ.ಟಿ.ಎಂ ಯಂತ್ರವನ್ನು ತಗೆದುಕೊಂಡು ನಿರ್ವಾಹಕರಿಗೆ ಮಾರ್ಗ ಪತ್ರ ನೀಡಲು ಕೇಳಿದಾಗ ನೀಡಲು ನಿರಾಕರಿಸಿರುತ್ತಾರೆ. ವರದಿ ಪಡೆದು ಪ್ರಯಾಣಿಕರು ಟಿಕೇಟು ಪಡೆದಿದ್ದಾರೆ ಇಲ್ಲಾ ಎಂಬುವದರ ಬಗ್ಗೆ ಪರಿಶೀಲಿಸಲಾಗಿದೆ ಓರ್ವ ಪ್ರಯಾಣಿಕರು ಹಣ ನೀಡಿರುವದಿಲ್ಲ ಮತ್ತು ಟಿಕೇಟು ಪಡೆದಿರುವದಿಲ್ಲ ಸದರಿ ಟಿಕೇಟ ರಹಿತ ಪ್ರಯಾಣಿಕರಿಗೆ ದಂಡ ವಿಧಿಸಿದ್ದು ರಸೀದಿ ಸಂಖ್ಯೆ 31663 ನೆದ್ದನ್ನು ಸ್ಥಳದಲ್ಲಿಯೇ ತಯ್ಯಾರಿಸಿ ನಿರ್ವಾಹಕರ ಸಹಿ ಪಡೆಯಲು ಮುಂದಾದಾಗ ನಾನು ಸಹಿ ಮಾಡುವದಿಲ್ಲ ಅಂತಾ ನನ್ನೊಂದಿಗೆ ಅನುಚೀತ ವರ್ತನೆ ನಡೆದುಕೊಂಡಿರುವದರಿಂದ ಸದರಿ ರಸೀದಿಯನ್ನು ಟಿಕೇಟ ರಹೀತ ಪ್ರಯಾಣಿಕರಿಗೆ ಜಾರಿ ಮಾಡಿರುತ್ತೇನೆ ಸದರಿ ನ್ಯೂನ್ಯತೆಗಳ ಬಗ್ಗೆ ನಿರ್ವಾಹಕರಿಗೆ ಅಪರಾಧ ಜ್ಞಾಪನ ಪತ್ರ ತಯ್ಯಾರಿಸಲು ಮುಂದಾದಾಗ ತಯ್ಯಾರಿಸದಂತೆ ನನ್ನ ಕರ್ತವ್ಯಕ್ಕೆ ಅಡ್ಡಿ ಮಾಡಿ ನೀಮಗೆ ಯಾರು ಚಕಿಂಗ ಮಾಡಲು ಕಳಿಸಿದ್ದು, ನೀ ಯಾರು ನನಗೆ ಕೇಸು ಬರೆಯುವದಕ್ಕೆ ನೀನು ಇಲ್ಲಿಂದ ಹೊಗುತ್ತೀಯಾ ನೀನು ಹೊಗಲ್ಲ ನೀನ್ನ ಜೀಪು ಹೊಗುವದಿಲ್ಲ ನೀನ್ನ ಅಪರಾಧ ಜ್ಞಾಪನ ಪತ್ರದ ಬುಕ್ಸ ಕೋಡು ನಾನು ಅದರಲ್ಲಿ ಬರೆದು ಹರಿದುಕೊಳ್ಳುತ್ತೇನೆ ನೀನು ಇಲ್ಲೆ ಇದ್ರೆ ಹತ್ತು ನಿಮಿಷದಲ್ಲಿ ನಾನು ಏನು ಮಾಡುತ್ತೇನೆ ನೋಡಿ ಅಂತಾ ಖಾಲಿ ಅಪರಾಧ ಜ್ಞಾಪನ ಪತ್ರ ನನಗೆ ನೀಡಿದರೆ ನೀನ್ನ ನೌಕರಿಗೆ & ನನ್ನ ನೌಕರಿಗೆ ಸೇಪ್ಟಿ ಇಲ್ಲದಿದ್ದರೇ ನೀವು ಹೆಂಗೆ ನೌಕರಿ ಮಾಡುತ್ತೀ ಏ ಭೋಸಡಿ ಮಗನೇ ಅಂತಾ ಅವಾಚ್ಚ ಶಬ್ದಗಳಿಂದ ಏರು ಧ್ವನಿಯಲ್ಲಿ ಮಾತನಾಡಿ ಪ್ರಾಣ ಭಯ ಒಡ್ಡಿರುತ್ತಾರೆ, ಆಗ ಬಸ್ಸ ಚಾಲಕನಾದ ಅಜರುದ್ದಿನ ಬಿಲ್ಲೆ ಸಂಖ್ಯೆ; 810 ನೇದ್ದವನು ಚಾಲಕನ ಆಸನ ದಿಂದ ಎದ್ದು ಬಂದು ನಡೆದಿರುವ ಘಟನೆಯನ್ನು ನೋಡಿ ಅಲ್ಲಿರುವ ಪ್ರಯಾಣಿಕರಿಗೆ ಇವರು ಚಕಿಂಗ ಜಾಸ್ತಿ ಮಾಡುತ್ತಿದ್ದಾರೆ ಇವರದು ಬಹಳ ಅತೀಯಾಗಿದೆ ಎಂದು ನಮ್ಮ ಪ್ರಯಾಣಿಕರಿಗೆ ಗಲಾಟೆಗೆ ಪ್ರಚೋದನೆ ನೀಡಿರುತ್ತಾರೆ ಮತ್ತು ವಾಹನ ತಗೆಯಲು ಸೂಚಿಸಿದರೂ ಕೂಡಾ ಚಾಲಕರು ವಾಹನ ತಗೆಯದೆ ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಬಸ್ಸನಿಂದ ಕೇಳಗೆ ಇಳಿಸಿ ಅಲ್ಲೇ ಪ್ರಯಾಣಿಕರಿಗೆ ಇವರಿಗೆ ಮುಂದೆ ಬಿಡಬೇಡಿ ಅಂತಾ ಹೇಳಿ ನಮ್ ಎಲ್ಲಾ ಮೇಲಾಧೀಕಾರಿಗಳು ಬರುವವರೆಗೆ ವಾಹನ ತಗೆಯುವದಿಲ್ಲ ಎಂದು ಪ್ರಯಾಣಿಕರಿಗೆ ಹೇಳಿದ್ದರಿಂದ ಬಸ್ಸಿನಲ್ಲಿದ್ದ ಪ್ರಯಾಣಿರಾದ 1) ದತ್ತಾ ತಂದೆ ಬಂಡೇಪ್ಪ ಬಡಿಗೇರ ಎಂಬುವರು ನನಗೆ ಏ ರಂಡಿ ಮಗನೇ ನೀನಗೆ ಚಕ್ಕ ಮಾಡುವದಕ್ಕೆ ನಮ್ಮ ಬಸ್ಸ ಬೇಕೆನೋ ಅಂತಾ ನನ್ನ ಎದೆಯ ಮೇಲಿನ ಅಂಗ್ಗಿ ಹಿಡಿದು ಜೊಗ್ಗಿದ್ದು, ಆಗ ಚಂದುರಾಯ ತಂದೆ ಶಿವರಾಯ ಚಿಚಕೋಟಿ ಇತನು ನನ್ನ ಕೈ ಹಿಡಿದು ಜೋಗ್ಗಿ ಏ ಭೊಸಡಿ ಮಗನೇ ಚೆಕ್ಕ ಮಾಡಲು ನೀನು ಯಾರು ಅಂತಾ ಅವಾಚ್ಚ ಶಭ್ದಗಳಿಂದ ಬೈದಿದ್ದು ಆಗ ನನ್ನೊಂದಿಗೆ ಇದ್ದ ಸಹಾಯಕ ಸಂಚಾರ ನಿರೀಕ್ಷಕರಾದ ಶರಣಪ್ಪ ತಂದೆ ಬಲವಂತ ಬಿರಾದಾರ ಇವರಿಗೆ ಅಭೀಮನ್ಯೂ ತಂದೆ ಹಣಮಂತ ತಳಕೇರಿ ಎಂಬುವರು ಅವರ ಎದೆಯ ಮೇಲಿನ ಅಂಗ್ಗಿ ಹಿಡಿದು ಜೊಗ್ಗಿ ಏ ನೀನು ನಮಗೆ ಚೆಕ್ ಮಾಡಲು ಯಾರು ನೀನು ಏನು ನಮ್ಮ ಶೇಂಠಾ ಕಿತ್ತುಕೊಳ್ಳುತ್ತೀ ಕಿತ್ತುಕೋ ರಂಡಿ ಮಗನೇ ಸುಮ್ಮನೇ ನೀವು ಇಲ್ಲಿಂದ ಹೊದರೆ ಸರಿ ಇಲ್ರಾಂದ್ರ ನೀಮ್ಮ ಜೀವ ಸಹಿತ ಖಲಾಸ ಮಾಡುತ್ತೇವೆ ಅಂತಾ ಅವಾಚ್ಚ ಶಬ್ದಗಳಿಂದ ಬೈದು ಜೀವದ ಬೇದರಿಕೆ ಹಾಕಿದ್ದು ಅಲ್ಲದೇ ನಮ್ಮ ಕಾರನ್ನು ಅಡ್ಡ ಗಟ್ಟಿ ಅದರ ಘಾಳಿಯನ್ನು ತಗೆಯಲು ಮೇಲ್ಕಾಣಿಸಿದವರ ಪ್ರಯತ್ನ ಪಟ್ಟಿದ್ದು ಇರುತ್ತದೆ, ಕಾರಣ ನನ್ನ & ಶರಣಪ್ಪ ಬಲವಂತ ರವರಿಬ್ಬರೂ ಟಿಕೇಟ್ ಚಕಿಂಗ ಮಾಡುತ್ತಿರುವಾಗ ನಮ್ಮ ಕರ್ತವ್ಯಕ್ಕೆ ಅಡೆತಡೆ ಮಾಡಿದ ಬಸ್ಸ ನಿರ್ವಾಹಕ & ಚಾಲಕ ಹಾಗು ಪ್ರಯಾಣಿಕರಾದ ದತ್ತಾ ತಂದೆ ಬಂಡೇಪ್ಪ ಬಡಿಗೇರ, ಚಂದುರಾಯ ತಂದೆ ಶಿವರಾಯ ಚಿತಕೋಟಿ, ಸಾ: ಇಬ್ಬರೂ ಬಂಗರಗಾ, ಮತ್ತು ಅಭೀಮನ್ಯೂ ತಂದೆ ಹಣಮಂತ ತಳಕೇರಿ ಸಾ: ಜಮಗಾ(ಆರ್) ರವರೆಲ್ಲರೂ ಮೇಲೆ ಸೂಕ್ತ ಕಾನೂನು ಪ್ರಕಾರ ಕ್ರಮ ಜರುಗಸಬೇಕು ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಆಳಂದ ಠಾಣೆ : ಶ್ರೀಮತಿ ಅನೀತಾ ಗಂಡ ವಿಜಯಕುಮಾರ ಬಿರಾಜದಾರ ಸಾ|| ಕೋತನ ಹಿಪ್ಪರಗಾ ತಾ|| ಆಳಂದ ರವರಿಗೆ ಶೆಟವಾಜಿ ಅಂತಾ ಒಬ್ಬ ಗಂಡು ಮಗನಿದ್ದು 03 ಜನ ಹೆಣ್ಣು ಮಕ್ಕಳಿದ್ದು ಅವರಲ್ಲಿ ಮಂದಾಕಿನಿ ಇವಳು ಹಿರಿಯ ಮಗಳಾಗಿದ್ದು ಸದರಿಯವಳಿಗೆ ಸುಮಾರು ಒಂದು ವರ್ಷದ ಹಿಂದೆ ನಮ್ಮೂರಿನಲ್ಲಿ ನೆಂಟಸ್ಥನ ಮಾಡಿ ಮದುವೆ ಮಾಡಬೇಕು ಅಂತಾ ಮದುವೆ ತಯ್ಯಾರಿ ಮಾಡಿದಾಗ ಕಿರಣ ಇತನು ನನ್ನ ಮಗಳು ಮಂದಾಕೀನಿ ಇವಳಿಗೆ ತನ್ನನೊಂದಿಗೆ ಮದುವೆ ಮಾಡಿಕೊಡಬೇಕು ಅವಳಿಗೆ ಬೇರೆಯವರಿಗೆ ಮದುವೆ ಮಾಡಿಕೊಳ್ಳಲು ಬಿಡುವದಿಲ್ಲ, ಅವಳು ನನಗೆ ಸೇರಬೇಕು ಅಂತಾ ಅವಾಚ್ಚವಾಗಿ ಮಾತನಾಡಿ ನಾವು ನಮ್ಮೂರಿನಲ್ಲಿ ನನ್ನ ಮಗಳಿಗೆ ಮದುವೆ ನಿಶ್ಚಯಮಾಡಿದನ್ನು ಅವರ ಮನಗೆ ಹೋಗಿ ನನ್ನ ಮಗಳ ಬಗ್ಗೆ ಇಲ್ಲ ಸಲ್ಲದ ಅನೈತಿಕ ಸಂಬಂದಗಳ ಬಗ್ಗೆ ಅವರಿಗೆ ಹೇಳಿ ಮದುವೆ ನಿಶ್ಚಯವನ್ನು ನಿಲ್ಲಿಸಿರುತ್ತಾನೆ ನಂತರ ನಾವು ನನ್ನ ಮಗಳಿಗೆ ಮದುವೆ ಮಾಡಬೇಕು ಅಂತಾ  ಎರಡನೇ ಬಾರಿ ಮಹಾರಾಷ್ಟ್ರದ ಪಳಸಗಾಂವ ಗ್ರಾಮದ ನಮ್ಮ ಸಂಭಂಧಿಕರಾದ ವಿಜಯ ತಂದೆ ಮನೋಹರ್ ಕದಮ್ ಇತನೊಂದಿಗೆ ಸುಮಾರು 02 ತಿಂಗಳ ಹಿಂದೆ ನಿಶ್ಚಿತಾರ್ಥ ಕಾರ್ಯಕ್ರಮ ಮಾಡಿದ್ದು,  ದಿನಾಂಕ 14/05/2019 ರಂದು ಮದುವೆ ನಿಶ್ಚಯ ಮಾಡಿದ್ದು ಇರುತ್ತದೆ, ನಂತರ ನಮ್ಮೂರಿನ ಕಿರಣ ತಂದೆ ಅಂಕುಷ ಪಾಟೀಲ್ ಹಾಗೂ ಅವರ ಮನೆಯವರು ನನ್ನ ಮಗಳು ಮಂದಾಕಿನಿ ಇವಳಿಗೆ ಕಿರಣ ಇತನೊಂದಿಗೆ ಮದುವೆ ಮಾಡಿಕೊಡು ಅಂತಾ ಹೇಳಿದರು ಮತ್ತೇ ನೀವು ಬೇರೆ ಊರಿಗೆ ಮದುವೆ ಮಾಡಿ ಕೊಡುತ್ತಿದ್ದರಿ ನಿಮಗೆ ಒಂದು ಕೈ ನೋಡಿಯ ಬೀಡುತ್ತೇವೆ ಅಂತಾ  ನಮ್ಮೋಂದಿಗೆ ಬಾಯಿ ಮಾತಿನ ತಕರಾರು ಮಾಡಿಕೊಂಡು ದಿನಾಂಕ 21/04/2019 ರಂದು ಸಾಯಂಕಾಲ್ 05-00 ಪಿ,ಎಮ್ ಕ್ಕೆ ನಾನು ಮತ್ತು ನನ್ನ ಹೆಂಡತಿ ನನ್ನ ಮಗ ನನ್ನ ಮಗಳು ಮದುವೆ ಸಂತೆ ಮಾಡಿಕೊಂಡು ಆಳಂದ ದಿಂದ ನಮ್ಮೂರಿಗೆ ಬಂದು ನಮ್ಮ ಮನೆಯ ಮುಂದಿನ ಸಿಸಿ ರಸ್ತೆಯ ಮೇಲೆ ಮನೆಗೆ ಬರುತ್ತಿರುವಾಗ ನಮ್ಮ ಎದುರಿನಿಂದ ನಮ್ಮೂರಿನ 1) ಕಿರಣ ತಂದೆ ಅಂಕುಷ ಮಾಲಿ ಪಾಟೀಲ್, 2) ಸುನೀಲ್ ತಂದೆ ಬಾಬುರಾವ ಮಾಲಿಪಾಟೀಲ್, 3) ಅರುಣಕುಮಾರ ತಂದೆ ಕಿಶನ ಮಾಲಿಪಾಟೀಲ್, 4) ಅಮೂಲ ತಂದೆ ಅಂಕುಷ ಮಾಲಿಪಾಟೀಲ್, 5) ಅಂಕುಷ ತಂದೆ ಮಾಣಿಕರಾವ ಮಾಲಿಪಾಟೀಲ್, 6) ವಿಜಾಬಾಯಿ ಗಂಡ ಅಂಕುಷ ಮಾಲಿ ಪಾಟೀಲ್ ರವರೆಲ್ಲರೂ ಕೂಡಿಕೊಂಡು ಬಂದವರೆ ಕಿರಣ ಇತನು ನನಗೆ & ನನ್ನ ಮಗಳಿಗೆ ಕೈ ಹಿಡಿದು ಜೋಗ್ಗಿ ತಡೆದು ನಿಲ್ಲಿಸಿ ನನಗೆ ಏ ರಂಡಿ ಮಗಳಿಗೆ ನೀನ್ನ ಮಗಳಿಗೆ ನನ್ನೊಂದಿಗೆ ಮದುವೆ ಮಾಡಿ ಕೊಡು ಅಂತಾ ಏಷ್ಟು ಭಾರಿ ಹೇಳಿದರು ಮತ್ತೋಬ್ಬನೊಂದಿಗೆ ಮದುವೆ ಮಾಡುತ್ತೀರೇನು ಅಂತಾ ಅವಾಚ್ಚಶಬ್ದಗಳಿಂದ ಬೈದು ನನ್ನ ಮೈ ಮೇಲಿನ ಸೀರೆ ಹಿಡಿದು ಜೊಗ್ಗಿ ಕೈಯಿಂದ ಪಕಾಳದ ಮೇಲೆ, ಬೇನ್ನಿನ ಮೇಲೆ ಹೊಡೆದಿದ್ದು, ಆಗ ನನ್ನ ಮಗಳು ಮಂದಾಕೀನಿ ಇವಳಿಗೆ ಕಿರಣ ಇತನು ಮೈ ಮೇಲಿನ ಚೂಡಿದಾರ ಹಿಡಿದು ಜೋಗ್ಗಿ ಏ ರಂಡಿ ನೀನಗೆ ನನ್ನೊಂದಿಗೆ ಮದುವೆ ಮಾಡಿಕೋ ಅಂದರು ವಲ್ಲ ಅನ್ನುತ್ತೀ ನೀನು ಏನಿದರೂ ನನಗೆ ಸೇರಬೇಕು ಅಂತಾ ಕೈಯಿಂದ ಕಪಾಳದ ಮೇಲೆ ಹೊಡೆದಿದ್ದು, ಆಗ ಬಿಡಿಸಲು ಬಂದ ನನ್ನ ಗಂಡನಿಗೆ ಸುನೀಲ ಮಾಲಿ ಪಾಟೀಲ ಇತನು ಏ ರಂಡಿ ಮಗನೇ ನೀನಗೆ & ನೀನ್ನ ಮಗಳಿಗೆ ಬಹಳ ಸೋಕ್ಕು ಬಂದಿದೆ ನೀನ್ನ ಮಗಳಿಗೆ ಅದು ಹೇಗೆ ಬೇರೆಯವರೊಂದಿಗೆ ಮದುವೆ ಮಾಡುತ್ತೀ ರಂಡಿ ಮಗನೇ ಅಂತಾ ಬೈದು ಕೈಯಿಂದ ಬೇನ್ನಿನ ಮೇಲೆ ಹೊಡೆದಿದ್ದು, ಮತ್ತು ನನ್ನ ಮಗ ಶೇಟವಾಜಿ ಇತನಿಗೆ ಅರುಣಕುಮಾರ & ಅಮೂಲ ರವರುಗಳು ತಡೆದು ನಿಲ್ಲಿಸಿ ನೀನ್ನ ತಂಗಿಗೆ ನಾವು ರಂಡಿ ಅಂತಾ ಮಾಡಿಕೊಳ್ಳುತ್ತೇವೆ ಭೋಸಡಿ ಮಗನೇ ಅಂತಾ ಬೈದು ಕಾಲಿನಿಂದ ಹೊಟ್ಟೆಯ ಮೇಲೆ ಒದ್ದಿರುತ್ತಾರೆ, ಆಗ ಅಂಕುಷ ಮತ್ತು ಆತನ ಹೆಂಡತಿ ವಿಜಾಬಾಯಿ ಇವರುಗಳು ನಮಗೆ ಇವರಿಗೆ ಬಹಳ ಸೋಕ್ಕು ಬಂದಿದೆ ಮಂದಾಕೀನಿ ಇವಳಿಗೆ ನಮ್ಮ ಮಗನೊಂದಿಗೆ ಮದುವೆ ಮಾಡಿ ಕೊಡು ಅಂತಾ ಹೇಳಿದರು ಕೇಳುತ್ತೀಲ್ಲ ಇವತ್ತು ಸರಿಯಾಗಿ ಸಿಕ್ಕಿದ್ದಾರೆ ಇವರಿಗೆ ಬಿಡಬ್ಯಾಡಿರಿ ಖಲಾಸ ಮಾಡಿ ಅಂತಾ ಅವಾಚ್ಚಶಬ್ದಗಳಿಂದ ಬೈದು ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ಶ್ರೀ.ಶಂಕರ ತಂದೆ ವಿಠಲ್ ಚವ್ಹಾಣ್, ಸಾ:ಮಡಕಿ ತಾಂಡಾ ರವರು ಇತ್ತಿಚಿಗೆ ನಡೆದ ಲೋಕಸಭಾ ಚುನಾವಣೆ ಕಾಲಕ್ಕೆ ಕಾಂಗ್ರೆಸ್ ಪಕ್ಷದ ಪ್ರಮುಖರು  ದಿನಾಂಕ:15/04/2019 ರಂದು ಮಡಕಿತಾಂಡಾಕ್ಕೆ ಬಂದು ಗ್ರಾಮಸ್ಥರಲ್ಲಿ ಮತ್ತು ತಾಂಡಾದವರಲ್ಲಿ ಮತ ಯಾಚಿಸಿರುತ್ತಾರೆ ಈ ಕಾಲಕ್ಕೆ ನಾನು ಅವರನ್ನು ಭೇಟಿಯಾಗಿದಕ್ಕೆ ಈ ವಿಷಯ ಬೆಡಸೂರ (ಕೆ) ತಾಂಡಾದ ನಮ್ಮ ಕುಲದವರಾದ 1)ಲಕ್ಷ್ಮಣ ತಂದೆ ಶಂಕರ ಚವ್ಹಾಣ್, 2)ಸುಭಾಷ ತಂದೆ ಗೇಮು ಚವ್ಹಾಣ್, 3)ಅನೀಲ ತಂದೆ ಭೀಮಸಿಂಗ್ ಚವ್ಹಾಣ್, 4)ಗಣಪತಿ ತಂದೆ ಬಾಬುಸಿಂಗ್ ರಾಠೋಡ್, 5)ರಾಮು ಚವ್ಹಾಣ್, 6)ಎಮನಾಥ ತಂದೆ ತೊಂಡಿ ಚವ್ಹಾಣ್, 7)ಗೊವಿಂದ ಚವ್ಹಾಣ್, 8)ರಾಜು ರಾಠೋಡ್ ಇವರಿಗೆ ಗೊತ್ತಾಗಿ ನಾನು ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದೇನೆ ಅಂತಾ ತಪ್ಪು ತಿಳುವಳಿಕೆಯಿಂದ ಎಲ್ಲರೂ ಸೇರಿ ಬೆಡಸೂರ(ಕೆ)ತಾಂಡಾದ ಅಂಗನಾವಡಿ ಸ್ಕೂಲ್ ಹತ್ತಿರ ಒಂದು ಗಿಡದ ಕೆಳಗೆ ನಿಂತು ನನಗೆ ನೀನು ಲಮಾಣ್ಯಾರ ತುಣ್ಣಿಗೆ ಹುಟ್ಟಿಲ್ಲಾ, ಹೊಲ್ಯಾರ ತುಣ್ಣಿಗೆ ಹುಟ್ಟಿದಿ, ಮಾದುರ ತುಣ್ಣಿಗೆ ಹುಟ್ಟಿದಿ ನಿನ್ನ ಹೆಂಡತಿನ ಹಡಾ ನಿನ್ನ ತಾಯಿನ ಹಡಾ ಅಂತಾ ಅವಾಚ್ಯ ಶಬ್ದಗಳಿಂದ ಬೈದು ನಿನಗೆ ನಮ್ಮ ಸಮಾಜದ ಯಾವುದೇ ಕಾರ್ಯಕ್ರಮದಲ್ಲಿ ಯಾರು ಸೇರಿಸಿಕೊಳ್ಳದಂತೆ ಮಾಡುತ್ತೇವೆ ನಿನಗೆ ಬಿಡಂಗಿಲ್ಲಾ ಅಂತಾ ವಗೈರೆ ನಿಂದಿಸಿದ ಬಗ್ಗೆ ಯಾರೋ ಒಬ್ಬರಿಂದ ವಿಡಿಯೋ ಚಿತ್ರಿಕರಣ ಮಾಡಿಸಿ ಸದರಿ ವಿಡಿಯೋ ಚಿತ್ರಕರಣದ ತುಣುಕುಗಳನ್ನು ಜೈ ಸೇವಾಲಾಲ ಎಂಬ ವಾಟ್ಸಫ್ ಗುಂಪಿಗೆ ಕಳಿಸಿರುತ್ತಾರೆ. ಈ ಗುಂಪಿನ ಸದಸ್ಯನಾದ ನಮ್ಮೂರಿನ ಕಿರಣ ತಂದೆ ಭೀಮು ಚವ್ಹಾಣ್ ಇವರು ದಿನಾಂಕ:23/04/2019 ರಂದು ಸಾಯಂಕಾಲ 5-00 ಗಂಟೆಗೆ ಸದರಿ ವಿಡಿಯೋಗಳನ್ನು ನನಗೆ ತಂದು ತೋರಿಸಿರುತ್ತಾನೆ. ಆ ನಂತರ  ನಾನು ಹೇಳಿದ ಮೇರೆಗೆ ಸದರಿಯವನು ಮಡಕಿತಾಂಡಾ ವಾಟ್ಸಪ್ ಗುಂಪಿಗೆ ಸೇರ್ ಮಾಡಿರುತ್ತಾನೆ. ಮಡಕಿತಾಂಡಾ ವಾಟ್ಸಪ್ ಗುಂಪಿನಲ್ಲಿ ನಾನು ಸದಸ್ಯನಿದ್ದು ನನ್ನ ಮೊಬೈಲ್ ನಂ 7353045293 ನೇದ್ದಕ್ಕು ಕೂಡ ಸದರಿ ವಿಡಿಯೋ ಚಿತ್ರಿಕರಣಗಳು ಬಂದಿರುತ್ತವೆ.  ಇದರ ಬಗ್ಗೆ ನಾನು ನಮ್ಮ ಗ್ರಾಮದಲ್ಲಿ ನಮ್ಮ ಸಮಾಜದ ಮುಖಂಡರಿಗೆ ತಿಳಿಸಿ ಚರ್ಚಿಸಿ ದಿನಾಂಕ:25/04/2019 ರಂದು ತಡವಾಗಿ ಠಾಣೆಗೆ ಬಂದು ನನ್ನ ದೂರು ಸಲ್ಲಿಸಿರುತ್ತೇನೆ. ಕಾರಣ ನನಗೆ ಅಶ್ಲಿಲ ಪದಗಳ ಬಳಿಸಿ ಅವಾಚ್ಯವಾಗಿ ಬೈದು ಜೀವ ಬೇದರಿಕೆ ಹಾಕಿದ ವಿಡಿಯೋ ವಾಟ್ಸಪನಲ್ಲಿ ಹರಿಬಿಟ್ಟ ಈ ಮೇಲೆ ನಮೂದಿಸಿದ ಲಕ್ಷ್ಮಣ ಮತ್ತು ಆತನ ಸಂಗಡ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ದಿನಾಂಕ 18/11/2018 ರಂದು ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಗೋಗಿ ಗ್ರಾಮದಲ್ಲಿ ಸಿಕ್ಕ ನವಜಾತ ಶಿಶುವನ್ನು ಮಕ್ಕಳ ಕಲ್ಯಾಣ ಸಮೀತಿ ಯಾದಗಿರರವರು ಪಾಲನೆ ಪೊಷಣೆಗಾಗಿ ನಮ್ಮ ಅಮೂಲ್ಯ ಶಿಶುಗೃಹದಲ್ಲಿ ಸೇರಿಕೆ ಮಾಡಿದ್ದು ಮಗುವು ಕಡಿಮೆ ತೂಕ ಹೊಂದಿದ್ದು ಮಗುವಿಗೆ ಸಾತ್ವಿಕ ಅಂತಾ ಹೆಸರಿಟ್ಟಿದ್ದು ಮಗುವು 5 ತಿಂಗಳದ್ದು ಇರುತ್ತದೆ ದಿನಾಂಕ 23/04/2019 ರಂದು ಜ್ವರ ಕೆಮ್ಮು ಇತರೆ ಅನಾರೋಗ್ಯದಿಂದ ಮಗು ಬಳಲುತಿದ್ದರಿಂದ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ದಿನಾಂಕ 25/04/2019 ರಂದು 11.00 ಎಎಮ್‌‌ಕ್ಕೆ ಉಪಚಾರ ಫಲಕಾರಿಯಾಗದೆ ಅನಾರೋಗ್ಯದಿಂದ ಮಗು ಮೃತಪಟ್ಟಿರುತ್ತದೆ ಅಂತಾ ಶ್ರೀಮತಿ ಶೀಲ್ಪಾ ಗಂಡ ರಾಜಶೇಖರ ಹಲಕರ್ಣಿಮಠ ಉ: ಅಧೀಕ್ಷಕರು ಅಮೂಲ್ಯ ಶಿಶುಗೃಹ ಸಾ: ವಿಠ್ಠಲ ನಗರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಡುಗ ಕಾಣೆಯಾದ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 14/04/2019 ರಂದು  ಶ್ರೀ ದುಂಡಪ್ಪ ತಂದೆ ಬರುರಾವ ವಂಗಲಿ ಸಾ ಳ ಹಡಲಗಿ ತಾ : ಆಳಂದ ಹಾ : ವ: ರಾಮತೀರ್ಥ ಗುಡಿ ಹತ್ತಿರ ಕಲಬುರಗಿ ರವರು ಮಗ ಆಕಾಶ ತಂದೆ ದುಂಡಪ್ಪ ವಾಂಗಲಿ ಇತಬು ಮನೆಯಿಂದ ಆಟ ಆಡುತ್ತೆನೆಂದು ಹೇಳಿ ಹೊದವನು ಮರಳಿ ಮನೆಗೆ ಬಂದಿರುವುದಿಲ್ಲ,ನಾವು ಎಲ್ಲ ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Thursday, April 25, 2019

KALABURAGI DISTICT REPORTED CRIMES

ಕೊಲೆ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀಮತಿ  ಮಾನಮ್ಮ ಗಂಡ ಸದಾಶಿವ ಚಿಗರಾಳ ಸಾ|| ಹಂಗರಗಾ (ಕೆ) ರವರಿಗೆ 1] ಭೀಮರಾಯಗೌಡ, 2] ಶರಣಗೌಡ ಅಂತಾ ಮಕ್ಕಳಿದ್ದು  ನನ್ನ ಮಗ ಶರಣಗೌಡ ಇವನು ಯತಾರ್ಥನಾಗಿರುತ್ತಾನೆ, ನನ್ನ ಹಿರಿ ಮಗ ಭೀಮರಾಯನಿಗೆ ನಮ್ಮೂರ ಬಸವಂತ್ರಾಯ ನಡುವಿನಮನಿ ರವರ ಮಗಳಾದ ಪಾರ್ವತಿ ಇವಳೊಂದಿಗೆ ಮದುವೆಮಾಡಿರುತ್ತೇವೆ, ಸದ್ಯ ನನ್ನ ಮಗನಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಇರುತ್ತದೆ, ನಮ್ಮೂರ ಸಿಮಾಂತರದಲ್ಲಿ ನಮ್ಮ ಹಿರಿಯರ 11 ಎಕರೆ ಜಮೀನು ಇರುತ್ತದೆ, ನನ್ನ ಮಗ ಸದ್ಯ ನಮ್ಮೊಂದಿಗೆ ಬೇರೆಯಾಗಿ ನಮ್ಮೂರಲ್ಲೇ ಮನೆ ಕಟ್ಟಿಕೊಂಡು ಸಂಸಾರ ಮಾಡುತ್ತಿರುತ್ತಾನೆ, ಅವನ ಉಪಜೀವನ ಸಲುವಾಗಿ 3 ಎಕರೆ ಜಮೀನು ಕೊಟ್ಟಿರುತ್ತೇನೆ, ನನ್ನ ಸೊಸೆ ಪಾರ್ವತಿ ಇವಳು ಸುಮಾರು ಸಲ ನಮಗೆ ಇನ್ನು 3 ಎಕರೆ ಜಮೀನು ಬರುತ್ತದೆ ಅಂತಾ ನನ್ನೊಂದಿಗೆ ಜಗಳ ಮಾಡುತ್ತಾ ಬಂದಿರುತ್ತಾಳೆ, ಅದರಂತೆ ನನ್ನ ಮಗ ಭೀಮರಾಯನಿಗು ಸಹ ಆಸ್ತಿ ಸಲುವಾಗಿ ದಿನಾಲು ಕಿರುಕುಳ ಕೊಡುತ್ತಾ ಬಂದಿರುತ್ತಾಳೆ, ಈ ಬಗ್ಗೆ ನನ್ನ ಮಗ ಆಗಾಗಾ ನನ್ನ ಮುಂದೆ ಹೇಳುತ್ತಿದ್ದನು, ದಿನಾಂಕ; 12-04-2019 ರಂದು ಬೆಳಿಗ್ಗೆ 09;00 ಗಂಟೆಗೆ ನನ್ನ ಸೊಸೆ ಪಾರ್ವತಿ ಇವಳು ಮನೆಗೆ ಬಂದು ನನ್ನ ಗಂಡನಿಗೆ ಬರಬೇಕಾದ ಇನ್ನು 3 ಎಕರೆ ಜಮೀನು ನನಗೆ ಬಿಟ್ಟುಕೊಡು ಇಲ್ಲಾ ಅಂದರೆ ನಿನಗೆ ಮತ್ತು ನನ್ನ ಗಂಡನಿಗೆ ಖಲಾಸ ಮಾಡಿ ಆಸ್ತಿ ತೆಗೆದುಕೊಳ್ಳುತ್ತೇನೆ ಅಂತಾ ಹೇಳಿ ಹೋದಳು, ನಂತರ ರಾತ್ರಿ 8;30 ಗಂಟೆ ಸುಮಾರಿಗೆ ನನ್ನ ಮಗ ಭೀಮರಾಯನಿಗೆ ಅವಳ ಹೆಂಡತಿ ಮತ್ತು ಅವರ ಮನೆಯವರು ಹೊಡೆಯುತ್ತಿದ್ದಾರೆ ಅಂತಾ ವಿಷಯ ಗೊತ್ತಾಗಿ ನಾನು ನಮ್ಮ ಮಗನ ಮನೆಗೆ ಹೋಗಿ ನೋಡಿದಾಗ ಮನೆಯ ಮುಂದೆ ನನ್ನ ಸೊಸೆ ಪಾರ್ವತಿ ಮತ್ತು ಅವರ ತಾಯಿ ಮಹಾದೇವಿ ಗಂಡ ಬಸವಂತ್ರಾಯ ಹಾಗು ಅವರ ಅಣ್ಣ ಸುಬ್ಬಣ್ಣ ತಂದೆ ಬಸವಂತ್ರಾಯ ಹಿಗೆಲ್ಲರೂ ಕೂಡಿ ನನ್ನ ಮಗನಿಗೆ ಸುತ್ತುಗಟ್ಟಿ ತಡೆದು ಏ ರಂಡಿ ಮಗನೆ ನಿಮ್ಮ ತಾಯಿ ಕಡೆಯಿಂದ ಇನ್ನು 3 ಎಕರೆ ಆಸ್ತಿ ತೆಗೆದುಕೊಂಡು ಬಾ ಅಂತಾ ಅಂದು ಸುಬ್ಬಣ್ಣ ಇವನು ಬಡಿಗೆಯಿಂದ ನನ್ನ ಮಗನ ಬಲಗಾಲಿನ ಮೇಲೆ ಹೊಡೆದನು, ಆಗ ನನ್ನ ಮಗ ಕೆಳಗೆ ಬಿದ್ದಾಗ ಮತ್ತೆ ಅದೇ ಬಡಿಗೆಯಿಂದ ಎರಡು ಮೊಳಕೈಗಳಿಗೆ ಹೊಡೆದನು, ನಂತರ  ಪಾರ್ವತಿ ಇವಳು ಇವತ್ತ ನನ್ನ ಹಾಟ್ಯಾನ ಮಗನಿಗಿ ಹೊಡೆದು ಖಲಾಸೆ ಮಾಡುತ್ತೇನೆ ಅಂತಾ ಅಂದು ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಿಲ್ಲಿದ್ದ ಕಬ್ಬಿಣದ ಊದಗೊಳದಿಂದ ನನ್ನ ಮಗನ ಎಡ ಮೆಲಕಿನ ಹತ್ತಿರ ಜೋರಾಗಿ ಹೊಡೆದು ಭಾರಿ ಗುಪ್ತ ಪೆಟ್ಟು ಪಡಿಸಿದಳು, ಮಹಾದೇವಿ ಇವಳು ಇವನಿಗೆ ಹೊಡೆದು ಖಲಾಸ ಮಾಡಿದರೆ ಎಲ್ಲಾ ಆಸ್ತಿ ನಮಗೆ ಬರುತ್ತದೆ ಅಂತಾ ಅನ್ನುತ್ತಿದ್ದಾಗ ನಾನು ಮತ್ತು ನಮ್ಮೂರ  ರೆಹಮಾನ ತಂದೆ ಮಾಬುಸಾಬ ಚೌದರಿ, ರಾಜಶೇಖರ ತಂದೆ ಹಣಮಂತ್ರಾಯ ಪೂಜಾರಿ ರವರೆಲ್ಲರೂ ಕೂಡಿ ಬಿಡಿಸಿಕೊಂಡು ನನ್ನ ಮಗನಿಗೆ ನಮ್ಮ ಮನೆಗೆ ಕರೆದುಕೊಂಡು ಹೋಗಿರುತ್ತೇವೆ, ಅಂದು ರಾತ್ರಿಯಾಗಿದ್ದರಿಂದ ಮತ್ತು ಯಾವುದೇ ವಾಹನ ಸೌಕರ್ಯ ಇರದ ಕಾರಣ ಬೆಳಿಗ್ಗೆ ನಮ್ಮ ಅಳಿಯ ಕೃಷ್ಣಣ್ಣ ತಂದೆ ಯಂಕಪ್ಪ ಹುಜರಾತಿ ಸಾ|| ಐನಾಪೂರ ಇವರಿಗೆ ಕರೆಯಿಸಿ ನನ್ನ ಮಗನಿಗೆ ಉಪಚಾರ ಕುರಿತು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಇಲ್ಲಿಗೆ ತಂದು ಸೇರಿಕೆ ಮಾಡಿರುತ್ತೇವೆ, ನನ್ನ ಮಗ ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲಾ. ನನ್ನ ಮಗನಿಗೆ ಆಸ್ತಿ ಸಲುವಾಗಿ ನನ್ನ ಸೋಸೆ ಪಾರ್ವತಿ ಮತ್ತು ಅವರ ತಾಯಿ ಮಹಾದೇವಿ, ಹಾಗು ಅವರ ತಮ್ಮ ಸುಬ್ಬಣ್ಣ ರವರು ನನ್ನ ಮಗನಿಗೆ ಕೊಲೆ ಮಾಡಿದರೆ ಎಲ್ಲಾ ಆಸ್ತಿ ಬರುತ್ತದೆ ಎಂಬ ದುರುದ್ದೇಶದಿಂದ ನನ್ನ ಮಗನಿಗೆ ಅವಾಚ್ಯವಾಗಿ ಬೈದು, ಬಡಿಗೆಯಿಂದ, ಊದಗೊಳಿನಿಂದ ಹೊಡೆ ಬಡೆ ಮಾಡಿ ಕೊಲೆ ಮಾಡಲು ಪ್ರಯತ್ನ ಪಟ್ಟಿರುತ್ತಾರೆ, ಅಂತಾ ಈ ಮುದಲು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ದಿನಾಂಕ 24-04-2019 ರಂದು  ಭೀಮರಾಯಗೌಡ ತಂದೆ ಸದಾಶಿವ ಚಿಗರಾಳ ಸಾ|| ಹಂಗರಗಾ(ಕೆ) ಇವರು ಜಗಳದಲ್ಲಿ ಭಾರಿ ಗಾಯಹೊಂದು ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದಾಗ ಇಂದು 00;20 ಗಂಟೆಗೆ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ದಿನಾಂಕ 23-04-2019 ರಂದು ಶ್ರೀ ಹಬೀಬ ತಂದೆ ದಸ್ತಗಿರ ಪಟೇಲ ಸಾ: ಅಫಜಲಪೂರ ರವರ ಮಗ ಶಕೀಲ ಈತನು ಪ್ರತಿ ದಿನದಂತೆ ಇಂದು ದಿನಾಂಕ:23/04/2019 ರಂದು ಬೆಳಗಿನ ಜಾವ 04-00 ಜಾಗಿಂಗ ಮಾಡಲು ಮನೆಯಿಂದ ಹೋಗಿರುತ್ತಾನೆ.ನಂತರ 6-00 ,ಎಮ್.ಸುಮಾರಿಗೆ ನಮ್ಮ ಓಣಿಯ ಅಬ್ದುಲ ರಜಾಕ ತಂದೆ ಕರಿಂಸಾಬ ಆಳಂದಕರ ಈತನು ನನಗೆ ಪೊನ ಮಾಡಿ ತಿಳಿಸಿದ್ದೆನಂದರೆ ನಾನು ಮತ್ತು ಶಕೀಲ ಈಬ್ಬರು ಕೂಡಿ ಅಫಜಲಪೂರ-ಕಲಬುರ್ಗಿ ರೋಡಿಗೆ ಜಾಗಿಂಗ ಬಂದಿದ್ದು ಈಗ 5-45 ,ಎಮ್.ಸುಮಾರಿಗೆ ಖಂಡಪ್ಪ ಕಲಶೇಟ್ಟಿರವರ ಹೋಲ ದಾಟಿ ನಾವು ಬಂದಾಗ ನಮ್ಮ ಹಿಂದಿನಿಂದ ಅಫಜಲಪೂರ ಕಡೆಯಿಂದ ಎರಟೀಗಾ ವಾಹನ ನಂಬರ ಕೆ,-16 ಎನ್-2645 ನೇದ್ದರ ಚಾಲಕ ತನ್ನ ವಾಹನವನ್ನು  ಅತೀ ವೇಗವಾಗಿ ಮತ್ತು ನಿಷ್ಕಾಳಜೀತನದಿಂದ ವಾಹನ ಚಲಾಯಿಸಿ ಶಕೀಲನಿಗೆ ಗುದ್ದಿ ಅಪಘಾತಪಡಿಸಿ ವಾಹನ ನಿಲ್ಲಿಸಿ ನಮಗೆ ನೋಡಿ ನಂತರ ತನ್ನ ವಾಹನವನ್ನು ತಗೆದುಕೊಂಡು ಹೋಗಿರುತ್ತಾನೆ ಅಂತ ತಿಳಿಸಿದ ಮೇರಗೆ ನಾನು ಮತ್ತು ನನ್ನ ತಮ್ಮಂದಿರಾದ ಶಬ್ಬಿರ ಮತ್ತು ಯಾಶೀನ ಮೂರು ಜನ ಹೋಗಿ ನೋಡಲಾಗಿ ನನ್ನ ತಮ್ಮನಿಗೆ ತಲೆಗೆ ಭಾರ ರಕ್ತಗಾಯ ಮತ್ತು ಹೊಟ್ಟೆಗೆ,ಹಾಗು ಬೆನ್ನಿಗೆ ತರಚಿದಗಾಯ ಹಾಗೂ ಎಡಗೈಗೆ ತರಚಿದ ಗಾಯಗಳಾಗಿ ಸ್ಥಳದಲ್ಲಿಯೆ ಮೃತ ಪಟ್ಟಿದ್ದು ಕಂಡು ಬಂದಿರುತ್ತದೆ. ನನ್ನ ತಮ್ಮ ಶಕೀಲ ಈತನಿಗೆ ಅಪಘಾತಪಡಿಸಿದ ಎರಟೀಗಾ ವಾಹನ ನಂಬರ ಕೆ,-16 ಎನ್-2645 ನೇದ್ದರ ಚಾಲಕ ಈತನ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೆಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ 01 : ದಿನಾಂಕ 23-04-2018 ರಂದು ಲೋಕಸಭಾ ಚುನಾವಣೆ ಇರುವದರಿಂದ ನಾನು ಮತ್ತು ನನ್ನ ಹೆಂಡತಿ ಶಿವಲೀಲಾ ಹಾಗೂ ನನ್ನ ಅತ್ತಿಗೆ ಮೂರು ಜನರು ಕಲಬುರಗಿಯಿಂದ ನಮ್ಮೂರು ಕಟ್ಟಿ ಸಂಗಾವಿಗೆ ಮತದಾನ ಮಾಡಲಿಕ್ಕೆ ಬೆಳಿಗ್ಗೆ ಹೋಗಿ ಸಾಯಂಕಾಲವರೆಗೆ ಕಟ್ಟಿ ಸಂಗಾವಿಯಲ್ಲಿ ಇದ್ದು ವಾಪಸ್ಸ ಕಲಬುರಿಗೆಗೆ ಬರುವ ಸಲುವಾಗಿ ನಾನು ಚಲಾಯಿಸುತ್ತೀರುವ ನನ್ನ ಆಟೋರಿಕ್ಷಾ ನಂಬರ ಕೆಎ-32/8107 ನೇದ್ದರಲ್ಲಿ ನನ್ನ ಹೆಂಡತಿ ಶಿವಲೀಲಾ ಹಾಗೂ ನನ್ನ ತಾಯಿ ಶಕುಂತಲಾ ರವರು ಆಟೋರಿಕ್ಷಾ ವಾಹನದಲ್ಲಿ ಕುಳಿತು ಕಲಬುರಗಿಗೆ ಕಡೆಗೆ ಬರುವಾಗ ದಾರಿ ಮದ್ಯ ಸರಡಗಿ ಖಣಿ ಸಮೀಪ ರೋಡ ಮೇಲೆ ಸಾಯಂಕಾಲ 5-30 ಗಂಟೆ ಸುಮಾರಿಗೆ ಎದುರಿನಿಂದ ಜೀಪ ನಂಬರ ಕೆಎ-23/ಎಮ್-9599 ನೇದ್ದರ ಚಾಲಕನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರೋಡ ಎಡಗಡೆಯಿಂದ ನಾನು ಆಟೋರಿಕ್ಷಾ ಚಲಾಯಿಸಿಕೊಂಡು ಹೋಗುತ್ತೀರುವಾಗ ನನ್ನ ಆಟೋರಿಕ್ಷಾ ವಾಹನಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಮತ್ತು ನನ್ನ ಹೆಂಡತಿಗೆ ಭಾರಿ ಗಾಯಗೊಳಿಸಿ ಫರಹತಾಬಾದ ಖಾಸಗಿ ಆಸ್ಪತ್ರೆವರೆಗೆ ಬಂದು ಅಲ್ಲಿಂದ ನಮಗೆ ಹೇಳದೆ ಕೇಳದೆ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 01 ರಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ 01 : ದಿನಾಂಕ 23.04.2019 ರಂದು ಲೋಕಸಭಾ ಚುನಾವಣೆ ಇರುವದರಿಂದ ನಾನು ನಮ್ಮ ಮಿಣಜಗಿ ಗ್ರಾಮಕ್ಕೆ ಹೋಗಿ ಮತದಾನ ಮಾಡಿ ಸಾಯಂಕಾಲ ಕಲಬುರಗಿಯಲ್ಲಿರುವ ನಮ್ಮ ಮನೆಗೆ ಬರುವ ಸಲುವಾಗಿ ನನ್ನ ಮೋಟಾರ ಸೈಕಲ ನಂಬರ ಕೆಎ-32/ಇಜಿ-3475 ನೇದ್ದನ್ನು ಚಲಾಯಿಸಿಕೊಂಡು ಬರುವಾಗ ಕಲಬುರಗಿ ರಾಮ ಮಂದಿರ ಹತ್ತೀರ ನನಗೆ ಪರಿಚಯದವರು ಬರಲು ತಿಳಿಸಿದ್ದರಿಂದ ನಾನು ರಾಮ ಮಂದಿರ ರಿಂಗ ರೋಡ ಹತ್ತೀರ ಹೋಗಿ ಕೆಲಸ ಮುಗಿಸಿಕೊಂಡು ನಾನು ಆರ.ಪಿ ಸರ್ಕಲ ಕಡೆಗೆ ಮೋಟಾರ ಸೈಕಲ ಚಲಾಯಿಸಿಕೊಂಡು ಹೋಗುವಾಗ ಕರುಣೇಶ್ವರ ನಗರ ಕ್ರಾಸ ಹತ್ತೀರ ಇರುವ ಸಿಟಿ ಬಸ್ಸ ನಿಲ್ದಾಣದ ಎದುರಿನ ರೋಡ ಮೇಲೆ ಕೆಂಪು ಬಣ್ಣದ ಕಾರ ನಂಬರ ಎಮ್.ಹೆಚ್.-03/ಎ.ಎಮ್/8161 ನೇದ್ದರ ಚಾಲಕನು ರಾಂಗ ಸೈಡನಿಂದ ಅತಿವೇಗವಾಗಿ ಮತು ಅಲಕ್ಷತನದಿಂದ ಚಲಾಯಿಸಿಕೊಂಡು ಎದುರಿನಿಂದ ಬಂದು ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಭಾರಿಗಾಯಗೊಳಿಸಿ ತನ್ನ ಕಾರ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 01 ರಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ 01 :ಶ್ರೀ  ಯಾಸೀನ ಬಾಬಾ ತಂದೆ ಜಾಫರ ಪಟೇಲ ಸಾ : ಕೌಲಗಾ (ಬಿ) ರವರು  ದಿನಾಂಕ 22.04.2019 ರಂದು ರಾತ್ರಿ ಸಮಯದಲ್ಲಿ ನಾನು ಮನೆಯಿಂದ ಸಂಡಾಸಕ್ಕೆ ಹೋಗಿ ವಾಪಸ್ಸ  ಊರ ಪಕ್ಕದಲ್ಲಿ ಇರುವ ಕೌವಲಗಾ (ಕೆ) ಮತ್ತು ಬಸನಾಳ ಗ್ರಾಮಕ್ಕೆ ಹೋಗಿ ಬರುವ ರೋಡ ಮೇಲೆ ನಾನು ಮತ್ತು ನನ್ನಂತೆ ಸಂಡಾಸಕ್ಕೆ ಬಂದಿದ್ದ ಸಂಜೀವಕುಮಾರ ಹಾಗೂ ಶಿವಕುಮಾರ ಮೂರು ಜನರು ನಡೆದುಕೊಂಡು ಮನೆಯ ಕಡೆಗೆ ಹೋಗುವಾಗ ರುಕುಮ ಪಟೇಲ ಚನ್ನೂರ ಇವರ ಮನೆಯ ಎದುರಿನ ರೋಡ ಮೇಲೆ ರಾತ್ರಿ ಅಂದಾಜು 10-00 ಗಂಟೆ ಸುಮಾರಿಗೆ ಹಿಂದಿನಿಂದ ಮೋಟಾರ ಸೈಕಲ ನಂಬರ ಕೆಎ-37/ಇಎ-4302 ನೇದ್ದರ ಸವಾರ ಸಿದ್ರಾಮಪ್ಪಾ ಇತನು ಕೌವಲಗಾ (ಕೆ) ಗ್ರಾಮದಿಂದ ಬಸನಾಳ ಗ್ರಾಮದ ಕಡೆಗೆ ಹೋಗುವ ಕುರಿತು ತನ್ನ ಮೋಟಾರ ಸೈಕಲ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನ್ನ ಬಲಗೈ ಮುಂಗೈ ಹತ್ತೀರ ಭಾರಿ ಗುಪ್ತಪೆಟ್ಟು ಬಲಗಾಲು ಮೊಳಕಾಲ ಕೆಳೆಗೆ ರಕ್ತಗಾಯ ಹಾಗೂ ನಾಲಗಿಗೆ ರಕ್ತಗಾಯಗೊಳಿಸಿದ್ದು  ಮೋಟಾರ ಸೈಕಲ ನಂಬರ ಕೆಎ-32/ಇಎ-4302 ನೇದ್ದರ ಸವಾರ ಸಿದ್ರಾಮಪ್ಪಾ ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 01 ರಲ್ಲಿ ಪ್ರಕರಣ ದಾಖಲಾಗಿದೆ.
ಸುಲಿಗೆ ಪ್ರಕರಣ :
ಚೌಕ ಠಾಣೆ : ದಿನಾಂಕ 21.04.2019 ರಂದು ಬೆಳಿಗ್ಗೆ ಶ್ರೀಮತಿ ಸಂಗೀತಾ ಗಂಡ ಮಾಳಿಂಗರಾಯ ಮು: ಕುಸನೂರ ತಾ:ಜಿ: ಕಲಬುರಗಿ ರವರು ದಿನಾಂಕ 20.04.2019 ರಂದು ಮುಂಜಾನೆ 10.00 ಗಂಟೆಗೆ ಕಲಬುರಗಿಯಲ್ಲಿ ಹಳೇಯ ಪ್ರಕಾಶ ಚಿತ್ರಮಂದಿರದ ಹತ್ತಿರ ಇರುವ ಜನರಲ್ ಸ್ಟೋರನಲ್ಲಿ ಬೇಕಾದ ಸಾಮಾನುಗಳನ್ನು ಖರೀಧಿಸುತ್ತಿರುವಾಗ ಯಾರೋ ಒಬ್ಬ ವ್ಯಕ್ತಿ ನನಗೆ ಮೋಸದಿಂದ ನಾನು ರಾಜುಗೌಡ ಮು: ಮಲ್ಘಾಣ ಇವರ ಸಂಭಂಧಿ ಎಂದು ನಂಬಿಸಿ ನನ್ನನ್ನು ಹಾಗೂ ನನ್ನ ಮಕ್ಕಳನ್ನು ತನ್ನ ದ್ವೀಚಕ್ರ ವಾಹನದಲ್ಲಿ ಮಲ್ಘಾಣ ಗ್ರಾಮಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದು ನಂಬಿಸಿ ನನಗೆ ಹಾಗೂ ನನ್ನ ಇಬ್ಬರು ಮಕ್ಕಳಿಗೆ ಹಾಗರಗಾ ಗ್ರಾಮದ ಸಿಮಮೆಯಲ್ಲಿ ಯಾರೂ ಇಲ್ಲದ ಪ್ರದೇಶದಲ್ಲಿ ನನಗೆ ಹಾಗೂ ನನ್ನ ಮಕ್ಕಳಿಗೆ ಹೆದರಿಸಿ ಮಾರಣಾಂತಿಕ ಹಲ್ಲೆ ನಡೆಸಿ ನನ್ನ ಬಳಿ ಇರುವ 12 ಗ್ರಾಂ ದ ಲಾಕೇಟು , 10 ಗ್ರಾಂದ ತಾಳಿ ಹಾಗೂ ಗುಂಡುಗಳನ್ನು ಹಾಗೂ ರೂ 3000/-( ರೂಪಾಯಿ ಮೂರು ಸಾವಿರ ಮಾತ್ರ) ಕಿತ್ತುಕೊಂಡು ಪರಾರಿಯಾಗಿರುತ್ತಾನೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅ
ಅಸ್ವಾಭಾವಿಕ ಸಾವು ಪ್ರಕರಣ :
ಸೇಡಂ ಠಾಣೆ : ಪ್ರಕರಣದ ಸಂಕ್ಷಿಪ್ತ  ಸಾರಾಂಶ :  ಶ್ರೀಮತಿ ಇಂದಿರಾ ಗಂಡ ಭೀಮರೆಡ್ಡಿ ನಾಗರೆಡ್ಡಿ ಸಾ : ಇಂದಿರಾನಗರ ಸೇಡಂ ರವರ ಗಂಡನಾದ ಭೀಮರೆಡ್ಡಿ ಇತನು ಒಕ್ಕಲುತನ ಸಂಬಂಧವಾಗಿ ಬ್ಯಾಂಕಿನಲ್ಲಿ ಬೆಳೆ ಸಾಲ ಮತ್ತು ಇತರೆ ಸಾಲ ಮಾಡಿದ್ದು, ಇದರಿಂದ ಮಳೆ ಬೆಳೆ ಸರಿಯಾಗಿ ಆಗದೆ ನಷ್ಟವಾಗಿದ್ದರಿಂದ, ಸಾಲ ಹೇಗೆ ತೀರಿಸಬೇಕೆಂದು ಮಾನಸಿಕ ಮಾಡಿಕೊಂಡು ನಿನ್ನೆ ದಿನಾಂಕ: 23-04-2019 ರಂದು ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಬೆಳಿಗ್ಗೆ 11:30 ಎ.ಎಮ್ ದಿಂದ 04:30 ಪಿ.ಎಮ್ ಮಧ್ಯದ ಅವಧಿಯಲ್ಲಿ ಮನೆಯಲ್ಲಿ ಫ್ಯಾನಿಗೆ ಸೀರೆಯಿಂದ ಕುತ್ತಿಗೆಗೆ ಉರುಲು ಹಾಕಿಕೊಂಡು ಮೃತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಅಶೋಕನಗರ ಠಾಣೆ : ಶ್ರೀ ಸಂಜಯ ತಂದೆ ರಮೇಶ ಪಟವಾರಿ ಸಾ|| ಮ.ನಂ. 28 ಬ್ಯಾಂಕ ಕಾಲೋನಿ  ಗೋದುತಾಯಿ ನಗರ ಕಲಬುರಗಿ ರವರು ದಿನಾಂಕ: 24.04.2019 ರಂದು ಮದ್ಯಾನ್ಹ 01:00 ಗಂಟೆಗೆ ನಾನು ನನ್ನ ಹೆಂಡತಿ ಹಾಗೂ ಮಕ್ಕಳು ಕೂಡಿಕೊಂಡು ನಮ್ಮ ಮನೆಗೆ ಬೀಗ ಹಾಕಿ ಕಲಬುರಗಿ ನಗರದ ಯಾತ್ರೀಕ ನಿವಾಸದಲ್ಲಿ ನಮ್ಮ ಸಂಬಂಧಿಕರ ಉಪನಯ ಕಾರ್ಯಕ್ರಮಕ್ಕೆ ಹೋಗಿರುತ್ತೇವೆ. ನಾವು ಉಪನಯನ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ಮದ್ಯಾನ್ಹ 02:45 ಗಂಟೆಗೆ ಮರಳಿ ಮನೆಗೆ ಬಂದಾಗ ನನ್ನ ಹೆಂಡತಿ ಮನೆಯ ಬೀಗ ತೆಗೆಯಲು ಹೋದಾಗ ನಮ್ಮ ಮನೆಗೆ ಹಾಕಿದ್ದ ಬೀಗ ಮುರಿದು ಕೆಳಗೆ ಬಿದ್ದಿದ್ದು ಬಾಗಿಲು ಅರ್ಧ ಮುಚ್ಚಿದ್ದು ನೋಡಿ ನಾವಿಬ್ಬರು ಗಾಬರಿಯಾಗಿ ಒಳಗೆ ಹೋಗಿ ನೋಡಲಾಗಿ ನಮ್ಮ ಮನೆಯ ನಡುವಿನ ಕೋಣೆಯಲ್ಲಿ ನಾಲ್ಕು ಅಲ್ಮಾರಿಗಳನ್ನು ಇಟ್ಟಿದ್ದು ಅವುಗಳಲ್ಲಿ 2 ಅಲ್ಮಾರಿಗಳಲ್ಲಿ ಬಟ್ಟೆಬರೆಗಳನ್ನು ಮತ್ತು ಇನ್ನೇರಡು  ಅಲ್ಮಾರಗಳಲ್ಲಿ ಒಂದರಲ್ಲಿ ನನ್ನ ಹೆಂಡತಿಯ ಬಂಗಾರದ ಮತ್ತು ಬೆಳ್ಳಿಯ ಆಭರಣಗಳನ್ನು ಹಾಗೂ ಇನ್ನೊಂದರಲ್ಲಿ ನಮ್ಮ ತಾಯಿಯ ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ಹಾಗೂ ಇತರೆ ದಾಖಲಾತಿಗಳನ್ನು ಇಟ್ಟಿದ್ದು ಇರುತ್ತದೆ. ಒಳಗಡೆ ಬಂದಾಗ ಅಲ್ಮಾರಾದಲ್ಲಿ ಇಟ್ಟಿದ್ದ ಬಟ್ಟೆಬರೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಇರುತ್ತವೆ.  ನನ್ನ ಹೆಂಡತಿಯ ಆಭರಣಗಳನ್ನು ಇಟ್ಟಿದ್ದ ಅಲ್ಮಾರವನ್ನು ನೋಡಲಾಗಿ ಅದರ ಬೀಗ ಮುರಿದಿದ್ದು, ಅದರಲ್ಲಿ ಇಟ್ಟಿದ್ದ ಒಟ್ಟು 317 ಗ್ರಾಂ ಬಂಗಾರದ ಆಭರಣಗಳು ಕಳ್ಳತನಮಾಡಿದ್ದು ಅದರ ಅ.ಕಿ 7,92,500/- ರೂ ಕಿಮ್ಮತ್ತಿನ  ಬಂಗಾರದ ಆಭರಣಗಳು ಕಳ್ಳತನಮಾಡಿದ್ದು ಬೆಳ್ಳಿಯ  ಆಭರಣಗಳು ಒಟ್ಟು 2 ಕೆ.ಜಿ. ಬೆಳ್ಳಿ ಅ.ಕಿ. 60,000/-  ಎಲ್ಲಾ ಸೇರಿ ಒಟ್ಟು  8,52,500/-  ನೇದ್ದವುಗಳನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಗ್ರಾಮೀಣ ಠಾಣೆ : ¢£ÁAPÀ: 24/04/2019 ರಂದು ಮಧ್ಯಾಹ್ನ ಶ್ರೀ ಸಿದ್ದು ತಂದೆ ದೌಲತರಾವ ವಸ್ತಾರ ಸಾ : ಭವಾನಿ ನಗರ ಕಲಬುರಗಿ ರವರಿಗೆ ಗೋಪಾಲ, ಶಬ್ಬಿರ ಮತ್ತು ಜಬ್ಬಾರ ಕುಡಿಕೊಂಡು ನಮ್ಮ ಪಕ್ಷ ë ಗೆಲ್ಲುತ್ತದೆ ಅಂತಾ ಮಾತನಾಡುತ್ತಾ ಜಗಳವಾಗಿದ್ದು ಸಾಯಂಕಾಲ 7 ಗಂಟೆ ಸುಮಾರಿಗೆ ಆಪಾದಿತರು ಫಿರ್ಯಾದಿಗೆ ಹೊಡೆಬಡೆ ಮಾಡಿ ಜೀವದ ಭಯ  ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.