Police Bhavan Kalaburagi

Police Bhavan Kalaburagi

Wednesday, May 8, 2019

KALABURAGI DISTRICT PRESS NOTE

ಸಾರ್ವಜನಿಕರ ಗಮನಕ್ಕೆ
ಯಾವುದೇ ವ್ಯಕ್ತಿಯ ವಿರುದ್ಧ ಪ್ರಚೋದನಾತ್ಮಕ ಅವಹೇಳನಕಾರಿ, ದ್ವೇಷಪೂರಿತ ಹೇಳಿಕೆ ಹಾಗೂ ಸುಳ್ಳು ಸುದ್ದಿ ಹಬ್ಬಿಸಿ ಗುಂಪು ಹಿಂಸೆ ಮತ್ತು ಕಾನೂನನ್ನು ಕೈಗೆ ತೆಗೆದುಕೊಂಡು ಯಾವುದೇ ವ್ಯಕ್ತಿಯ ಮೇಲೆ ಗುಂಪು ಕಟ್ಟಿಕೊಂಡು ಹಲ್ಲೆ ಮಾಡುವುದನ್ನು ಸಮೀಪದ ಪೊಲೀಸ್ ಠಾಣೆಗೆ ತಿಳಿಸುವುದು. ಅಲ್ಲದೇ ನಾಗರಿಕರು ಯಾವುದೇ ತರಹದ ಸುಳ್ಳು ವದಂತಿಗೆ ಕಿವಿಗೊಡದಂತೆ ಮತ್ತು ಏನಾದರೂ ಈ ತರಹದ ಗುಂಪು ಹಲ್ಲೆಯ ಬಗ್ಗೆ ಕಂಡು ಬಂದಲ್ಲಿ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ.

KALABURAGI DISTRICT REPORTED CRIMES

ಕಳವು ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 06/05/2019 ರಂದು ಶ್ರೀಮತಿ  ಇರಫಾನಬೇಗಂ ರವರು ನಿಧಿಶಹಾ ಎಲೆಕ್ಟ್ರಿಕಲ್ ಅಂಗಡಿಗೆ ಎ.ಸಿ.  ಖರೀದಿ ಮಾಡಬೇಕೆಂದು  ನನ್ನ ಮಕ್ಕಳಾದ  ಮಹ್ಮದ ಫರದಾನ ಅಹ್ಮದ, ಫಾರಿಹಾ ಮಹೆವೇಸ, ವಾನಿಯಾ ಫಾತೀಮಾ ಮೂವರಿಗೆ ಮನೆಯಲ್ಲಿ  ಬಿಟ್ಟು  ಮೋಟಾರ ಸೈಕಲ ಮೇಲೆ ಹೋಗಿದ್ದು. ಸಂಜೆ 05-58 ಗಂಟೆ ಸುಮಾರಿಗೆ ನನ್ನ ಹಿರಿಯ ಮಗ ಮಹ್ಮದ ಫರದಾನ ಅಹ್ಮದ ಇತನು ಮನೆಯಲ್ಲಿದ್ದ ನನ್ನ ಹೆಂಡತಿ ಮೋಬಾಯಿಲನಿಂದ ನನ್ನ ಮೋಬಾಯಿಲಿಗೆ ಪೋನ ಮಾಡಿ ತಿಳಿಸಿದ್ದೆನೆಂದೆರೆ, ತಾನು ಮತ್ತು ತಂಗಿಯರಾದ ಫಾರಿಹಾ ಮಹೆವೇಸ ವಾನಿಯಾ ಫಾತೀಮಾ ಮೂವರು ಮನೆಯ ಬಾಗಿಲು ಖುಲ್ಲಾ ಇಟ್ಟುಕೊಂಡು ಮುಂದಿನ ಗೇಟ ಮುಚ್ಚಿಕೊಂಡು ಅಂಗಳದಲ್ಲಿ ಆಟವಾಡುತ್ತಿದ್ದಾಗ ಯಾರೋ ಇಬ್ಬರು ಅಪರಿಚಿತರು ಹೇಗೋ ಮನೆಯಲ್ಲಿ ಬಂದು ನಮ್ಮ ಮೂವರಿಗೆ  ಹಿಂದಿಯಲ್ಲಿ ಅಂದರ ಚಲ್ಲ್ ಅನ್ನುತ್ತಾ ಬೆಡ ರೂಮನಲ್ಲಿ ಕಳುಹಿಸಿ ಕೊಂಡಿ ಹಾಕಿದರು. ಸ್ವಲ್ಪ ಸಮಯದ ನಂತರ ನಮಗೆ ಕೊಂಡಿ ಹಾಕಿದ ಅಪರಿಚಿತರು ಕೊಂಡಿ ಹಾಕಿದ ನಮ್ಮ ಬೊಡರೂಮಿನ ಬಾಗಿಲ ತೆರೆದು ಅಲ್ಲಿಂದ ಓಡಿ ಹೋಗಿರುತ್ತಾರೆ ಅಂತಾ ತಿಳಿಸಿದ ಮೇರೆಗೆ ನಾನು ಮತ್ತು ನನ್ನ ಹೆಂಡತಿ ಇರಫಾನಬೇಗಂ ಇಬ್ಬರು ಮನೆಗೆ ಬಂದು ನೋಡಲಾಗಿ ನಮ್ಮ ಮಕ್ಕಳಿಗೆ ಕೊಂಡಿ ಹಾಕಿದ ಬೆಡರೂಮಿಗೆ ಲಗತ್ತಾಗಿರುವ ಇನ್ನೊಂದು  ಬೆಡರೂಮಿನಲ್ಲಿ ಇದ್ದ ರಾಜ ರಾಣಿ ಅಲಮಾರಿ ತೆರೆದಿದ್ದು ಅದರಲ್ಲಿ ಇಟ್ಟ ಬಂಗಾರದ ಆಭರಣಗಳ ಪಾಕೇಟಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದು ರಾಜ ರಾಣಿ ಅಲಮಾರಿ ಕೊಂಡಿ ಮುರಿದಿದ್ದು ಕಂಡು ಬರದ ಕಾರಣ ನನ್ನ ಹೆಂಡತಿ ಇರಫಾನಬೇಗಂ ಇವಳಿಗೆ ಕೀಲಿ ಹಾಕಿದ್ದೀ ಹೇಗೇ ಅಂತಾ ವಿಚಾರಿಸಿದಾಗ ಅವಳು ಬಂಗಾರದ ಇಟ್ಟ ಕಡೆ ಕೀಲಿ ಹಾಕಿರುತ್ತೇನೆ. ಬಂಗಾರದ ಇರಲಾರದ ಅಲಮಾರಿ ಕೀಲಿ ಹಾಕಿರಲಿಲ್ಲಾ ಎರಡು ಅಲಮಾರಿಗಳ ಚಾವಿಗಳು ಅಲ್ಲೇ ಬಟ್ಟೆ ಹತ್ತಿರ ಇಟ್ಟಿರುತ್ತೇನೆ ಅಂತಾ ತಿಳಿಸಿದಳು. ಅಲಮಾರಿಯಲ್ಲಿ ಇಟ್ಟ ಒಟ್ಟು 190.58 ಗ್ರಾಂ ಬಂಗಾರದ ಆಭರಣಗಳನ್ನು ಕಳ್ಳತನವಾದ ಬಗ್ಗೆ  ಕಂಡು ಬಂದಿರುತ್ತದೆ. ಈ ಮೇಲಿನ ಬಂಗಾರದ ಆಭರಣಗಳು ಬಹಳ ವರ್ಷಗಳ ಹಿಂದೆ ಖರೀದಿಸಿದ್ದು ಅವುಗಳ ಒಟ್ಟು ಬೆಲೆ 4,76,450/- ರೂ. ನಿನ್ನೆ ದಿನಾಂಕ 06/05/2019 ರಂದು ಸಂಜೆ 05-10 ಗಂಟೆಯಿಂದ ಸಂಜೆ 05-58 ಗಂಟೆಯ ಅವಧಿಯಲ್ಲಿ ಈ ಮೇಲೆ ಹೇಳಿದಂತೆ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ  ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ 
ದ್ವೀಚಕ್ರ ವಾಹನ ಕಳವು ಪ್ರಕರಣ :
ಚೌಕ ಠಾಣೆ : ದಿನಾಂಕ: 06.05.2019 ರಂದು ಶ್ರೀ ಅಶೋಕ ತಂದೆ ಭಿಮರಾವ ಪಾಟೀಲ, ಸಾ: ಖಣದಾಳ, ತಾ&ಜಿ: ಕಲಬುರಗಿ ರವರು ತಮ್ಮ ಸ್ವಂತ ಕೆಲಸಕ್ಕಾಗಿ ಸಿಡಿ ಡಿಲಕ್ಸ್ ವಾಹನ ಸಂಖ್ಯೆ KA 32 U 5534 ನೇದ್ದನ್ನು ಖರೀದಿ ಮಾಡಿದ್ದು ಆ ಮೋಟಾರ ಸೈಕಲನ್ನು ನಾನೆ ಇಲ್ಲಿಯವರೆಗೂ ಉಪಯೋಗ ಮಾಡಿಕೊಂಡು ಬಂದಿರುತ್ತೇನೆ. ಹೀಗಿದ್ದು, ದಿನಾಂಕಃ 11.04.2019 ರಂದು ಕಲಬುರಗಿ ನಗರದ ರಿಂಗ್ ರೋಡಿನ ಹತ್ತಿರ ಇರುವ ಬಾಲಾಜಿ ಕಲ್ಯಾಣ ಮಂಟಪದಲ್ಲಿ ನಮ್ಮ ಪರಿಚಯದವರ ಮದುವೆ ಇದ್ದ ಕಾರಣ ನಾನು ಅಂದು 12.15 ಪಿ.ಎಂಕ್ಕೆ ನನ್ನ HERO HONDA CD DELUXE ವಾಹನ ಸಂಖ್ಯೆ KA 32 U 5534, ಚೆಸ್ಸಿನಂ.MBLHA11EE89F21938, ಇ.ನಂ.HA11EA89F40642 ನೆದ್ದನ್ನು ನಿಲ್ಲಿಸಿ ಮದುವೆ ಕಾರ್ಯಕ್ರಮ ಮುಗಿಸಿಕೊಂಡು 1.00 ಪಿ.ಎಂಕ್ಕೆ ಮರಳಿ ಬಂದು ನೋಡಲಾಗಿ ನಾನು ನಿಲ್ಲಿಸಿದ ನನ್ನ ಮೊಟಾರ ಸೈಕಲ ಇರಲಿಲ್ಲ. ನಂತರ ಅಲ್ಲಿಯೇ ಅಕ್ಕ-ಪಕ್ಕದಲ್ಲಿ ಹುಡುಕಾಡಲಾಗಿ ಎಲ್ಲಿಯೂ ಕಾಣಲಿಲ್ಲ ಅಂದಿನಿಂದ ಇಲ್ಲಿಯವರೆಗೆ ಎಲ್ಲಾ ಕಡೆಗೆ ಹುಡುಕಾಡಿದರೂ ಕೂಡ ನನ್ನ ಮೋಟರ ಸೈಕಲ ಸಿಕ್ಕಿರುವುದಿಲ್ಲ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಚೌಕ ಠಾಣೆ : ದಿನಾಂಕ 06.05.2019 ರಂದು ರಾತ್ರಿ ಶಿವಾಜಿನಗರ ಹನುಮಾನ ದೇವಸ್ಥಾನದ ಹತ್ತಿರದ ಮುಂದಿನ ರಸ್ತೆಯ ಮೇಲೆ ಒಬ್ಬ ವ್ಯಕ್ತಿಯು ತನ್ನ ಲಾಭಗೋಸ್ಕರ ಸಾರ್ವಜನಿಕರಿಂದ ಹಣ ಪಡೆದುಕೊಂಡು 01 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಬಾಂಬೆ ಮಟಕಾ ಅಂಕಿ ಸಂಖ್ಯೆಗಳ ಚೀಟಿಗಳನ್ನು ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಚೌಕ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿಯಂತೆ ಸ್ಥಳಕ್ಕೆ ಹೋಗಿ ಶಿವಾಜಿನಗರದಲ್ಲಿರುವ ಹನುಮಾನ ಗುಡಿಯ ಹತ್ತಿರ ಮರೆಯಲ್ಲಿ ನಿಂತು ನೋಡಲಾಗಿ ಅಲ್ಲಿ ಒಬ್ಬ ವ್ಯಕ್ತಿಯು ಹನುಮಾನ ಗುಡಿಯ ಮುಂದೆ ರಸ್ತೆಯ ಮೇಲೆ ನಿಂತುಕೊಂಡು ಅಲ್ಲಿ ಹೋಗಿ ಬರುವ ಸಾರ್ವಜನಿಕರಿಂದ 01 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಬಾಂಬೆ ಮಟಕಾ ಅಂಕಿ ಸಂಖ್ಯೆಗಳ ಚೀಟಿಗಳನ್ನು ಬರೆದುಕೊಳ್ಳುವುದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದುಕೊಂಡು ಆತನ ಹೆಸರು ವಿಳಾಸ ವಿಚಾರಿಸಲಾಗಿ ಆತನು ತನ್ನ ಹೆಸರು ಸಿದ್ದಾರಾಮ @ ಸಿದ್ದು ತಂದೆ ಬಾಬುರಾವ ಜಮಾದಾರ,ಸಾ: ಶಿವಾಜಿನಗರ ಕಲಬುರಗಿ ಅಂತಾ ತಿಳಿಸಿದ್ದು ಮತ್ತು ರಾಜಶೇಖರ ಉಮಾಶೇಟ್ಟಿ ಇವರ ಅಣತೆಯಂತೆ ನಾನು ಮಟಕಾ ಜೂಜಾಟ ನಡೆಸುತ್ತಿದ್ದು, ಮಟಕಾ ಜುಜಾಟದ ಹಣವನ್ನು ರಾಜಶೇಖರ ಉಮಾಶೇಟ್ಟಿ ಇವರಿಗೆ ನೀಡುವುದಾಗಿ ತಿಳಿಸಿದನು. ಈತನ ಅಂಗ ಶೋಧನೆ ಮಾಡಲಾಗಿ ಈತನ ಹತ್ತಿರ ಮಟಕಾ ಜೂಜಾಟಕ್ಕೆ ಸಂಬಂದಿಸಿದ 1230/- ರೂ ನಗದು ಹಣ, ಒಂದು ಮಟಕಾ ಚೀಟಿ, ಒಂದು ಬಾಲಪೆನ್ನು ದೊರೆತಿದ್ದು ಅವುಗಳನ್ನು ಜಪ್ತಿ ಮಾಡಿಕೊಂಡು ಸದರಿಯವನೊಂದಿಗೆ ಚೌಕ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ಚೌಕ ಠಾಣೆ : ಶ್ರೀ ಪರಮೇಶ್ವರ ತಂದೆ ಭಿಮಶ್ಯಾ ಮಾಂಗ್, ಸಾ: ಪಟ್ಟಣ್ಣ ತಾ&ಜಿ: ಕಲಬುರಗಿ ರವರು ಕಲಬುರಗಿ ನಗರದಲ್ಲಿ ಆಟೋನಗರದ ಲಾರಿ ತಂಗುದಾಣದಲ್ಲಿ ಪಿಜಿಪಿ ಟ್ರಾನ್ಸಪೊರ್ಟ ಅಂತಾ ಹೆಸರಿನ ಟ್ರಾನ್ಸಪೊರ್ಟ ಇಟ್ಟುಕೊಂಡು ಕುಟುಂಬದೊಂದಿಗೆ ವಾಸವಾಗಿರುತ್ತೇನೆ. ನಾನು ದಿನಾಲು ಕೆಲಸಕ್ಕಾಗಿ ಪಟ್ಟಣ ಗ್ರಾಮದಿಂದ 8.00 ಎ.ಎಂಕ್ಕೆ ಬಂದು ಕೆಲಸ ಮುಗಿಸಿಕೊಂಡು ರಾತ್ರಿ 8.30 ಗಂಟೆಗೆ ವಾಪಸ್ಸು ಮನೆಗೆ ಹೊಗುತ್ತೇನೆ. ಹೀಗಿದ್ದು, ದಿನಾಂಕ. 05.05.2019 ರಂದು ಮದ್ಯಾಹ್ನ 2.30 ಪಿ.ಎಂಕ್ಕೆ ನನ್ನ ಟ್ರಾನ್ಸಪೊರ್ಟದಿಂದ ಸ್ವಲ್ಪ ದೂರದಲ್ಲಿ ಇರುವ ಆಟೋನಗರದಲ್ಲಿರುವ ಖಾನಾವಳಿ ಹತ್ತಿರ ಇದ್ದಾಗ 7-8 ಜನರು ಕೂಡಿಕೊಂಡು 3-4 ದ್ವಿ ಚಕ್ರವಾಹನಗಳ ಮೇಲೆ ಬಂದು ನನಗೆ ನಿಲ್ಲಿಸಿ “ ಏ ರಂಡಿಮಗನೆ ನಮ್ಮ ಮೊಬೈಲಿಗೆ ಮಿಸಕಾಲ್ ಮಾಡುತ್ತಿ ರಂಡಿಮಗನೆ” ಎಂದು ನನಗೆ ಒಮ್ಮೆಲೆ ಬೈಯಲು ಶುರು ಮಾಡಿದ್ದು ಅದಕ್ಕೆ ನಾನು ನಿಮಗ ಯಾಕೆ ಮಿಸಕಾಲ ಮಾಡಲಿ ನಾನು ಕಾಲ ಮಾಡಿರುವುದಿಲ್ಲ ಅಂತಾ ಹೇಳಲು ನನಗೆ ಅವರು ಯಾವುದೇ ನನ್ನ ಮಾತು ಕೇಳದೆ ನನಗೆ ಒಮ್ಮೆಲೆ ಹೊಡೆಯಲು ಪ್ರಾರಂಭಿಸಿದರು. ನಾನು ಚಿರಾಡುತ್ತಾ ಅಲ್ಲೆ ಬಿದ್ದರು ಸಹ ನನಗೆ ಸದರಿಯವರು ಬಿಡದೆ ತಾವು ತಂದಿದ್ದ ಒಂದು ಮೊಟಾರ ಸೈಕಲ ಮೇಲೆ ಜಬರದಸ್ತಿಯಿಂದ ಕೂಡಿಸಿಕೊಂಡು ಆಟೋನಗರ ದಿಂದ ರಾಮತಿರ್ಥ ಹಿಂದುಗಡೆ ಇರುವ ಡಬರಾಬಾದಿ ಕ್ರಾಸ್ ಹತ್ತಿರದ ಅಪಾರ್ಟಮೆಂಟ್ ಹೊಸದಾಗಿ ಕಟ್ಟಿದ ಸ್ಥಳದ ಹತ್ತಿರ ಕರೆದುಕೊಂಡು ಹೋಗಿ ಅಲ್ಲಿಯು ಸಹ ನನಗೆ ಕರೆದುಕೊಂಡು ಹೋದ 5-6 ಜನರು ಎಲ್ಲರೂ ಸೇರಿಕೊಂಡು ಕೈಯಿಂದ, ಕಾಲಿನಿಂದ, ಬಡಿಗೆಯಿಂದ, ಕಲ್ಲಿನಿಂದ ಹೊಡೆಬಡೆ ಮಾಡಿ ಕೊಲೆ ಮಾಡುವ ಉದ್ದೇಶದಿಂದಲೆ ಮಾರಣಾಂತಿಕವಾಗಿ ನನಗೆ ಹಲ್ಲೆ ಮಾಡಿರುತ್ತಾರೆ. ನನಗೆ ಸದರಿಯವರು ಎಲ್ಲರೂ ನಿನು ಒಂದು ವೇಳೆ ಯಾರಿಗಾದರು ಹೊಡೆಯುವ ವಿಷಯ ತಿಳಿಸಿದರೆ ರಂಡಿಮಗನೆ ಜೀವ ಸಹಿತ ಬಿಡುವುದಿಲ್ಲ ಅಂತಾ ಹೇಳಿ ಸಿಕ್ಕಾಪಟ್ಟೆಯಾಗಿ ಕೈಯಿಗೆ, ಮುಖದ ಮೇಲೆ, ಮುಗಿನ ಮೇಲೆ ಬಡಿಗೆಯಿಂದ, ಕಲ್ಲಿನಿಂದ ಹೊಡೆಬಡೆ ಮಾಡಿದ್ದು ತಲೆಯ ಮೇಲೆ ಸಹ ಬಡಿಗೆಯಿಂದ ಹೊಡೆದು ಬುಗಟ್ಟಿ ಬಂದು ಒಳಗಡೆ ಗಂಬೀರ ಗಾಯಪಡಿಸಿರುತ್ತಾರೆ ನನಗೆ ಇವರು ನನ್ನ ಟ್ರಾನ್ಸಪೊರ್ಟ ಹತ್ತಿರದಿಂದ ಅಪಹರಣ ಮಾಡಿಕೊಂಡು ಬರುವ ಕಾಲಕ್ಕೆ ನಮ್ಮ ಟ್ರಾನ್ಸಪೊರ್ಟದಲ್ಲಿ ಕೆಲಸ ಮಾಡುವ ಶಶಿಕುಮಾರ ತಂದೆ ಧರ್ಮಣ್ಣಾ, ಮರೇಪ್ಪಾ, ಬಾಬು ಇವರು ನೋಡಿದ್ದು ಅಲ್ಲದೇ ಖಾನಾವಳಿ ಹತ್ತಿರ ಕೆಲವು ಜನರು ಸಹ ನೋಡಿರುತ್ತಾರೆ. ನನಗೆ ಎತ್ತಿಕೊಂಡು ಬಂದಿದ್ದನ್ನು ನೋಡಿ ಶೆಶಿಕುಮಾರ, ಬಾಬು, ಮರೆಪ್ಪಾ ಇವರು ಬರುವುದನ್ನು ನೋಡಿ ಅವರು ನನಗೆ ಅಲ್ಲೇ ಹೊಡೆದು ಬಿಸಾಕಿ ಹೋಗಿರುತ್ತಾರೆ. ಸದರಿಯವರು ನನಗೆ ಹೊಡೆದ ವೇಳೆಯಲ್ಲಿ ನನ್ನ ಜೇಬಿನಲ್ಲಿದ್ದ ನಗದು ಹಣ ಐದುಸಾವಿರ ರೂಪಾಯಿ ಮತ್ತು ಒಂದು ಎ.ಟಿ.ಎಂ ಕಾರ್ಡ ಅಲ್ಲದೇ ನನ್ನ ಕೊರಳ್ಳಲ್ಲಿಯ ಅರ್ದತೊಲಿಯ ಒಂದು ಲಾಕೀಟ ಅ.ಕಿ: 15,000=00 ರೂ, ಒಂದು ಮೊಬೈಲ ಇದ್ದು ಕಳೆದು ಹೋಗಿರುತ್ತವೆ. ನನಗೆ ಹೊಡೆದವರ ಹೆಸರು ವಿಚಾರಿಸಲಾಗಿ ಒಬ್ಬನು ಜೈಭೀಮ, ಶ್ರೀಕಾಂತ, ಸಿದ್ರಾಮ, ಸಾಗರ ಮತ್ತು ಇತರೆ 3-4 ಜನರು ಇದ್ದರು ನಂತರ ಅವರ ಹೆಸರು ತಿಳಿದುಕೊಂಡು ಹೇಳುತ್ತೇನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.

Monday, May 6, 2019

KALABURAGI DISTRICT REPORTED CRIMES

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ:05/05/2019 ರಂದು ಅಫಜಲಪೂರ ಪಟ್ಟಣದ ರಾಜಶೇಖರ ಹಿರೇಮಠ ರವರ ಹೋಲದ ಮೇಟಗಿಯಲ್ಲಿ ಲೈಟಿನ ಬೇಳಕಿನಲ್ಲಿ ಇಸ್ಪಿಟ-ಜೂಜಾಟ ನಡೆಯುತ್ತಿದೆ ಅಂತಾ ಮಾಹಿತಿ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ರಾಜಶೇಖರ ಹೀರೆಮಠ ರವರ ಹೊಲದ ಮೇಟಗಿ ಮರೆಯಲ್ಲಿ ನಿಂತು ನೋಡಲು ಮೇಟಗಿ ಮುಂದೆ ಲೈಟಿನ ಬೆಳಕಿನಲ್ಲಿ  07 ಜನರು ದುಂಡಾಗಿ ಕುಳಿತು ಅಂದರಗೆ 50 ಬಾಹರಗೆ 50 ಅಂತ ಅಂದರ ಬಾಹರ ಇಸ್ಪಿಟ ಜೂಜಾಟ ಆಡುತ್ತಿರುವದನ್ನು ಖುದ್ದಾಗಿ ನೋಡಿ  ಮಾನ್ಯ ಡಿ,ಎಸ್.ಪಿ.ಸಾಹೇಬರು ಆಳಂದ ರವರ ಮಾರ್ಗದರ್ಶನದಲ್ಲಿ ದಾಳಿ ಮಾಡಲು ಹೋದಾಗ ಒಬ್ಬ ಓಡಿ ಹೋಗಿದ್ದು 06 ಜನ ಸಿಕ್ಕಿದ್ದು ಅವರ ಹೆಸರು ವಿಳಾಸ ವಿಚಾರಿಸಲಾಗಿ 1) ಗುರು  2)ಚಿದಾನಂದ ತಂದೆ ಈರಣ್ಣ ಬಡಿಗೇರ 3)ರಾಮಚಂದ್ರ ತಂದೆ ಧರ್ಮಣ್ಣ ಘಂಟೆ ಸಾ||ಅಫಜಲಪೂರ 4)ರುದ್ರಪ್ಪ ತಂದೆ ನಿಂಗಪ್ಪ ಯಲಗೋಡ ಸಾ||ಬ್ರಹ್ಮ ದೇವರಮಡು ತಾ||ಸಿಂದಗಿ ಹಾ||ವಾ||ಅಫಜಲಪೂರ 5)ಭಿಮರಾಯ ತಂದೆ ಅಶೋಕ ಬಬಲಾದ ಸಾ||ಅಫಜಲಪೂರ 6)ಶಿವಾನಂದ ತಂದೆ ಜಗದೇವಪ್ಪ ಅವಟೆ ಸಾ||ಅಫಜಲಪೂರ ಅಂತಾ ತಿಳಿಸಿದರು ಸದರಿಯವರನ್ನು ವಶಕ್ಕೆ ಪಡೆದು ಸದರಿಯವರಿಂದ ಜೂಜಾಟಕ್ಕೆ ಬಳಸಿದ 10,300/-ರೂ ನಗದು ಹಣ ಮತ್ತು 52 ಇಸೀಟ ಎಲೆಗಳು ಎಲ್ಲವುಗಳನ್ನು ವಶಕ್ಕೆ ಪಡೆದು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ನರೋಣಾ ಠಾಣೆ : ದಿನಾಂಕ 05/05/2019 ರಂದು ಲಾಡಚಿಂಚೋಳಿ ಹನುಮಾನ ದೇವಸ್ಥಾನದ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪಿಟ ಜೂಜಾಟಕ್ಕೆ ಹಣ ಪಣಕಿಟ್ಟು ಆಡುತ್ತಿರುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ನರೋಣಾ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ.ಎಸ್.ಪಿ ಸಾಹೇಬ ಆಳಂದ ಹಾಗೂ ಮಾನ್ಯ ಸಿಪಿಐ ಆಳಂದ ರವರ ಮಾರ್ಗದರ್ಶನದಂತೆ ಬಾತ್ಮಿ ಬಂದ ಸ್ಥಳವಾದ ಲಾಡಚಿಂಚೋಳಿದ ಹನುಮಾನ ದೇವಸ್ಥಾನದ ಕಟ್ಟೆಯ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ದೇವಸ್ಥಾನದ  ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ 11 ಜನರು ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪಿಟ ಪಣಕ್ಕೆ ಹಣ ಹಚ್ಚಿ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಅವರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲಾಗಿ 1)ಶಾಂತಪ್ಪಾತಂದೆ ಧರ್ಮಣ್ಣಾ ಪೂಜಾರಿ, 2)ಶ್ರೀಶೈಲ್ ತಂದೆ ಬಸಣ್ಣಾ ಪಡಶೆಟ್ಟಿ, 3)ಅಣ್ಣಪ್ಪಾತಂದೆ ಮುತ್ತಪ್ಪಾ ಉದ್ದನ, 4)ಶಂಭುಲಿಂಗ ತಂದೆ ಸಿದ್ದಣ್ಣಾ ಜಮಾದಾರ, 5)ಈರಣ್ಣಾ ತಂದೆ ಸಿದ್ರಾಮಪ್ಪಾ ಚಿಕ್ಕಬಸ್ತಿ 6)ನೀಲಕಂಠ ತಂದೆ ಭೀಮಶ್ಯಾ ಹವಾಣಿ, 7)ಸಿದ್ರಾಮಪ್ಪಾತಂದೆ ಭೀಮಶ್ಯಾ ಚಿಕ್ಕಬಸ್ತಿ, 8)ಯಲ್ಲಪ್ಪಾತಂದೆ ಬೀರಣ್ಣಾ ಬಾಳಿ, 9)ಬಸಯ್ಯಸ್ವಾಮಿ ತಂದೆ ಸಿದ್ದಯ್ಯ ಮಠಪತಿ, 10)ಷಡಕ್ಷರಿ ತಂದೆ ವೀರಯ್ಯ ಸ್ವಾಮಿ 11)ಸಂಗಮನಾಥ ತಂದೆ ಶರಣಬಸಪ್ಪಾಮೈಂದರ್ಗಿ, ಸಾ:ಎಲ್ಲರೂ ಲಾಡಚಿಂಚೋಳಿ ಅಂತಾ ತಿಳಿಸಿದ್ದು ಸದರಿಯವರನ್ನು ವಶಕ್ಕೆ ಪಡೆದು ಸದರಿಯವು ಜೂಜಾಟಕ್ಕೆ ಬಳಸಿದ  ನಗದು ಹಣ 4610/- ರೂಪಾಯಿ ಮತ್ತು 52 ಇಸ್ಪಿಟ ಎಲೆಗಳನ್ನು ವಶಕ್ಕೆ ಪಡೆದು ಸದರಿಯವರೊಂದಿಗೆ ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ದಿನಾಂಕ: 05/05/2019 ರಂದು ಬೇಳಿಗ್ಗೆ 10-30 ಗಂಟೆ ಸುಮಾರಿಗೆ ನನ್ನ ಗಂಡನು ಕೂಲಿ ಕೇಲಸಕ್ಕೆ ಹೋಗುತ್ತೇನೆ ಅಂತ ನಮ್ಮ ಮನೆಯಿಂದ ಹೋಗಿರುತ್ತಾನೆ. ನಂತರ ಮದ್ಯಾಹ್ನ 12-30 ಗಂಟೆಯ ಸುಮಾರಿಗೆ ರಾಜಕುಮಾರ ತಂದೆ ರಮೇಶ ಸಂಗೊಳಗಿ ರವರು ಪೊನ ಮಾಡಿ ನನಗೆ ತಿಳಿಸಿದ್ದೆನಂದರೆ ಈಗ ಮದ್ಯಾಹ್ನ 12-15 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಗೆಳೆಯನಾದ ಮಂಜುನಾಥ ತಂದೆ ಗುರಣ್ಣ ಮನ್ಮಿ ಇಬ್ಬರು ಕೂಡಿಕೊಂಡು ಊಟ ಮಾಡಲೆಂದು ರಾಜಕುಮಾರ ಮಾಡಿಯಾಳ ರವರ ದಾಬಾಕ್ಕೆ ಹೋಗಬೆಕೆಂದು ನನ್ನ ಮೋಟಾರ ಸೈಕಲ ಮೇಲೆ ಹೋಗುತ್ತೀರುವಾಗ ಅಫಜಲಪೂರ-ಕಲಬುರ್ಗಿ ರೋಡಿಗಿರುವ ನೀರಾವರಿ ಆಪೀಸ್ ಹತ್ತೀರ ಇರುವ ಕೇನಾಲ ಹತ್ತೀರ ನಿನ್ನ ಗಂಡನು ನಿರಾವರಿ ಆಪೀಸ ಕಡೆಯಿಂದ ರೊಡಿನ ದಂಡೆಯಿಂದ ನಡೆದುಕೊಂಡು ಅಫಜಲಪೂರ ಕಡೆಗೆ ಹೊರಟಿದ್ದಾಗ ಅವನ ಹಿಂದಿನಿಂದ ಟ್ರ್ಯಾಕ್ಟರ ಇಂಜಿನ್ ನಂಬರ ಕೆ.ಎ-32 ಟಿಬಿ-4117 ನೇದ್ದು ಅಫಜಲಪೂರ ಕಡೆ ಹೊರಟಿದ್ದು ಸದರಿ ಟ್ರ್ಯಾಕ್ಟರ ಇಂಜಿನನ್ನು ಚಾಲಕನು ತನ್ನ ಟ್ರ್ಯಾಕ್ಟರನ್ನು ಅತಿ ವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಬಸವರಾಜನಿಗೆ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿರುತ್ತಾನೆ ಆಗ ಬಸವರಾಜನು  ರೊಡಿನ ದಂಡೆಯಲ್ಲಿ ಬಿದ್ದಿದ್ದರಿಂದ ಸದರಿ ಟ್ರ್ಯಾಕ್ಟರನ ದೊಡ್ಡ ಟಾಯರ ಬಸವರಾಜನ ಶರಿರದ ಮೇಲೆ ಹಾಯ್ದಿರುತ್ತದೆ ಆಗ ನಾನು ಮತ್ತು ಮಂಜು ಇಬ್ಬರು ಬಸವರಾಜ ಹತ್ತೀರ ಹೋಗಿ ನೋಡಲು ಅವನ ಮುಖಕ್ಕೆ ರಕ್ತಗಾಯವಾಗಿ ಎದೆಗೆ ಮತ್ತು ಹೊಟ್ಟೆಗೆ ಭಾರಿ ಒಳಪೆಟ್ಟಾಗಿರುತ್ತದೆ.ನಾವು ಬಸವರಾಜನಿಗೆ ಒಂದು ಟಂಟಂದಲ್ಲಿ ಹಾಕಿಕೊಂಡು ಅಫಜಲಪೂರ ಸರಕಾರಿ ದವಾಖಾನೆಗೆ ಕರೆದುಕೊಂಡು ಬರುತ್ತಿದ್ದೆವೆ ಅಂತ ತಿಳಿಸಿದ ಮೇರೆಗೆ ನಾನು ಮತ್ತು ರಾಜು ನಾಗೂರ ಇಬ್ಬರು ಕೂಡಿಕೊಂಡು ಅಫಜಲಪೂರ ಸರಕಾರಿ ದವಾಖಾನೆಗೆ ಹೋಗಿ ನನ್ನ ಗಂಡನಿಗೆ ಮತ್ತು ಅವನಿಗೆ ಆಗಿರುವ ಗಾಯ ಗಳನ್ನುನೋಡಿರುತ್ತೇವೆ ನನ್ನ ಗಂಡನಿಗೆ ಪರಿಕ್ಷಿಸಿದ ವೈದ್ಯರು ಅವನನ್ನು ಹೆಚ್ಚಿನ ಚಿಕತ್ಸೆಗಾಗಿ ಕಲಬುರಗಿಗೆ ಕರೆದುಕೊಂಡು ಹೋಗಲು ತಿಳಿಸಿದ ಮೇರೆಗೆ ನಾನು ಮತ್ತು ರಾಜು ನಾಗೂರ,ರಾಜಕುಮಾರ ಸಂಗೊಳಗಿ ರವರು ಕೂಡಿಕೊಂಡು ನನ್ನ ಗಂಡನಿಗೆ 108 ವಾಹನದಲ್ಲಿ ಕಲಬುರ್ಗಿಗೆ ಕರೆದುಕೊಂಡು ಹೋಗುತ್ತಿರುವಾಗ ಮಾರ್ಗ ಮದ್ಯದಲ್ಲಿ 1-45 ಗಂಟೆ ಸುಮಾರಿಗೆ ಗೋಬ್ಬುರ(ಬಿ) ಗ್ರಾಮದ ಹತ್ತಿರ ಮೃತ ಪಟ್ಟಿರುತ್ತಾನೆ. ಅಂತಾ ಶ್ರಿಮತಿ ಜಗದೇವಿ ಗಂಡ ಬಸವರಾಜ @ ಬಸು ಕೋಳಕೂರ ಸಾ: ಅಫಜಲಪೂರ ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ 01 : ಶ್ರೀ ರಾಜೇಂದ್ರಕುಮಾರ ತಂದೆ ಪದ್ಮರಾಜ ಇಜಾರಿ ರವರು ದಿನಾಂಕ 03-05-2019 ರಂದು ರಾತ್ರಿ 9-30 ಗಂಟೆ ಸುಮಾರಿಗೆ ಆರ.ಪಿ ಸರ್ಕಲ ಮತ್ತು ರಾಮ ಮಂದಿರ ರಿಂಗ ರೋಡ ಮದ್ಯದಲ್ಲಿ ಬರುವ ಸಂತೋಷ ನಗರ ಕಾಲೋನಿ ಕ್ರಾಸ ಹತ್ತೀರ ರೋಡ ಪಕ್ಕದಲ್ಲಿ ನನ್ನ ಮೋಟಾರ ಸೈಕಲ ನಂ ಕೆಎ-32/ಇಆರ್-9092 ನೇದ್ದನ್ನು ನಿಲ್ಲಿಸಿ ದತ್ತಪ್ಪಾ ಇವರ ಪಾನ ಶಾಪ ಹತ್ತೀರ ನಾನು ಇರುವಾಗ ಮಹೀಂದ್ರಾ ಜೀಪ ನಂ ಕೆಎ-32/ಪಿ-1860 ನೇದ್ದರ ಚಾಲಕನು ರಾಮ ಮಂದಿರ ರಿಂಗ ರೋಡ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ರೋಡ ಮೇಲೆ ಜೀಪ ರೋಡ ಎಡ ಬಲ ತಿರುಗಿಸುತ್ತಾ ಬಂದು ರೋಡ ಪಕ್ಕದಲ್ಲಿ ನಿಲ್ಲಿಸಿದ ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ಹಾಗೆ ಮುಂದೆ ಹೋಗಿ ರೋಡ ಡಿವೈಡರಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ತನ್ನ ಜೀಪಿನ ಮುಂದಿನ ಗಾಲಿ ಕಟ್ ಆಗಿದ್ದರಿಂದ ಜೀಪನ್ನು ಅಲ್ಲೆ ನಿಲ್ಲಿಸಿ ಅದರ ಚಾಲಕ ಹೋಗಿದ್ದು ನನ್ನ ಮೋಟಾರ ಸೈಕಲ ಪೂರ್ತಿಯಾಗಿ ಡ್ಯಾಮೇಜ ಆಗಿತ್ತು ಅಲ್ಲಿ ನನಗೆ ತಿಳಿದು ಬಂದಿದ್ದೆನೆಂದರೆ ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿದ ಜೀಪ ಚಾಲಕನು ಮುಕ್ತಾ ಟಾಕೀಜ್ ಮತ್ತು ರೆಡ್ಡಿ ಪೆಟ್ರೊಲ ಪಂಪ ಭಾಗದಲ್ಲಿ ಬೇರೆ ವಾಹನಗಳಿಗೂ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ಅಲ್ಲಿ ಕೆಲವು ಜನರಿಗೆ ಗಾಯಗಳು ಆಗಿರುತ್ತವೆ ಅಂತಾ ಗೋತ್ತಾಗಿರುತ್ತದೆ. ಅವರ ಹೆಸರು ಅವರ ವಾಹನಗಳ ಸಂಖ್ಯೆ ಮತ್ತು ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ ಚಾಲಕನ ಹೆಸರು ನನಗೆ ಗೋತ್ತಾಗಿರುವದಿಲ್ಲ ಅಪಘಾತ ಪಡಿಸಿದ ಚಾಲಕನನ್ನು ನೋಡಿದ್ದು ಮುಂದೆ ನೋಡಿದಲ್ಲಿ ಗುರ್ತಿಸುತ್ತೆನೆ. ನನ್ನ ಮೋಟಾರ ಸೈಕಲ ನಂ ಕೆಎ-32/ಇಆರ್-9092 ನೇದ್ದಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನ್ನ ಮೋಟಾರ ಸೈಕಲ ಡ್ಯಾಮೇಜ್ ಮಾಡಿದ್ದು ಹಾಗೂ ಇತರ ವಾಹನಗಳಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಅವರಿಗೆ ಗಾಯಗೊಳಿಸಿ ತನ್ನ ವಾಹನ ಅಲ್ಲೆ ಬಿಟ್ಟು ಓಡಿ ಹೋದ ಜೀಪ ನಂಬರ ಕೆಎ-32/ಪಿ-1860 ನೇದ್ದರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sunday, May 5, 2019

KALABURAGI DISTRICT REPORTED CRIMES

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 26/04/2018 ರಂದು ಯಶರಾಜ ಮತ್ತು ಆತನ ಹೆಂಡತಿ ಅರ್ಚನಾ  ಇಬ್ಬರು ಅರ್ಚನಾ ಅಕ್ಕ ಅನೀತಾ ಇವರ ಕಮಲ ನಗರದಲ್ಲಿ ಇರುವ ಮನೆಗೆ ಹೋಗಿದ್ದು ರಾತ್ರಿ ನಮ್ಮ ಸೋಸೆ ಅರ್ಚನಾ ಇವಳು ನಮಗೆ ಅಂದಾಜು 10-30 ಗಂಟೆಯ ಸುಮಾರಿಗೆ ಫೋನ ಮಾಡಿ ಯಶರಾಜ ಇತನು ಬೆಳ್ಳಿಗೆ 11-00 ಗಂಟೆಗೆ ಬಾಂಬೆಗೆ ಹೋಗಲು ಬಸ್ ಟಿಕೇಟ ತರುತ್ತೆನೆ ಅಂತ ಹೇಳಿ ಮನೆಯಿಂದ ಹೋದವನು ಈಗಿನವರೆಗೆ ಮನೆಗೆ ಬಂದಿರುವದಿಲ್ಲ ನಿಮ್ಮ ಕಡೆ ಬಂದಿರುತ್ತಾನೆ ಹೇಗೆ ಅಂತ ಕೇಳಿದಾಗ ನಾವು ನಮ್ಮ ಮನೆಗೆ ಬಂದಿರುವುದಿಲ್ಲ ಅಂತ ತಿಳಿಸಿದೇವು. ನಮ್ಮ ಮಗನಿಗೆ ನಾವು ಎಲ್ಲಾ ಕಡೆ ಹುಡುಕಾಡಿದೇವು ಮಗನ ಬಗ್ಗೆ ಯಾವುದೆ ಮಾಹಿತಿ ದೊರೆಯದೆ ಇರುವದರಿಂದ ನಮ್ಮ ಸೋಸೆ ಅರ್ಚನಾ ಇವಳು ಗ್ರಾಮೀಣ ಪೊಲೀಸ ಠಾಣೆಗ ದಿನಾಂಕ 05/05/2018 ರಂದು ಹೋಗಿ ನಮ್ಮ ಮಗ ಕಾಣೆಯಾದ ಬಗ್ಗೆ ದೂರು ನೀಡಿದ್ದು, ನಮ್ಮ ಸೊಸೆಯ ದೂರಿನ ಆಧಾರವಾಗಿ ಗ್ರಾಮೀಣ ಪೊಲೀಸ ಠಾಣೆ ಪ್ರಕರಣ ದಾಖಲಾಗಿದ್ದು  ಕಾಣೆಯಾದ ನಮ್ಮ ಮಗ ಯಶರಾಜ ಈತನ ಪತ್ತೆ ಕಾರ್ಯಾದಲ್ಲಿ ಇರುವಾಗ 2019 ನೇ ಸಾಲಿನ ಫೆಬ್ರುವರಿ ತಿಂಗಳಲ್ಲಿ ಒಂದು ದಿವಸ ನಮ್ಮ ಅಣ್ಣನಾದ ಶಿವಾನಂದ ಮಾಳಗಿ ಇವರು ನನಗೆ ಫೋನ ಮಾಡಿ ಯಶರಾಜನಿಗೆ ಕಪನೂರ ಏರಿಯಾದವರಾದ 1] ನಿಂಗಪ್ಪ ತಂದೆ ಸಾಯಿಬಣ್ಣಾ ಕೊಳ್ಳುರು 2) ಶಿವುಕುಮಾರ @ ಶಿವಪ್ಪ ತಂದೆ ತುಳಜಪ್ಪ ಹಂಗರಗಿ 3) ಶಹಾಬೋದ್ದಿನ ತಂದೆ ಫತ್ರುಸಾಬ 4) ಸೂರ್ಯಕಾಂತ @ ಸೂರ್ಯ ತಂದೆ ಅಂಬಾರಯ ಬೆಳಕೋಟೆ 5) ಪ್ರಫುಲಕುಮಾರ @ ಪಪ್ಪು @ ದಾದಾ ತಂದೆ ಅರ್ಜುನ ಡಾಂಗೆ 6) ಶಿವಯೋಗಿ @ ಛೇ ತಂದೆ ಕುಪೇಂದ್ರ ಭಂಕೂರ 7) ಕಾಶಪ್ಪ ಹಂಗರಗಿ 8) ಪುಟ್ಯಾ 9) ಸುಭಾಷ ಹಂಗರಗಿ ಹಾಗೂ ಇತರರು ಸೇರಿ ರಾಮನಗರ ರಿಂಗ ರೋಡ ಸಮರ್ಥ ವೈನಶಾಪ ಹತ್ತಿರ ಸರಾಯಿ ಕುಡಿಯಲು ಹೋದಾಗ ಅಲ್ಲಿ ಇವರು ಯಶರಾಜ ನೊಂದಿಗೆ ಜಗಳ ತೆಗೆದು ಅವನಿಗೆ ಆಟೋದಲ್ಲಿ ಅಪಹರಿಸಿಕೊಂಡು ಹೋಗಿ ಕೊಲೆ ಮಾಡಿ ಶವ ಹೂತಿಟ್ಟಿರುವ ಬಗ್ಗೆ ಚೌಕ ಪೊಲೀಸ ಠಾಣೆಯ ಕಳ್ಳತನ ಪ್ರಕರಣದಲ್ಲಿ ದಸ್ತಗಿರಿಯಾದಾಗ ಪೊಲೀಸರ ಮುಂದೆ ಒಪ್ಪಿಕೊಂಡಿರುವ ಬಗ್ಗೆ ಮತ್ತು ಈ ಸುದ್ದಿ ದಿನ ಪತ್ರಿಕೆಯಲ್ಲಿ ಬಂದಿರುವ ಬಗ್ಗೆ ನಮಗೆ ತಿಳಿಸಿರುತ್ತಾರೆ. ನಂತರ ನಾವು ಸಹಿತ ಚೌಕ ಪೊಲೀಸ ಠಾಣೆಗೆ ಭೇಟಿ ನೀಡಿ ಪೊಲೀಸರಿಗೆ ವಿಚಾರಿಸಿದಾಗ ನಮ್ಮ  ಮಗನಿಗೆ ಇವರು ಅಪಹರಿಸಿ ಕೊಲೆ ಮಾಡಿ ಶವ ಹೂತಿಟ್ಟಿರುವ ಬಗ್ಗೆ ವಿಚಾರಣೆ ಕಾಲಕ್ಕೆ ಒಪ್ಪಿಕೊಂಡಿರುತ್ತಾರೆ ಎಂದು ತಿಳಿಸಿರುತ್ತಾರೆ . ಕಾರಣ ನಮ್ಮ ಮಗನಿಗೆ ಅಪಹರಿಸಿ ಕೊಲೆ ಮಾಡಿ ಶವವನ್ನು ಹೂತಿಟ್ಟಿರುವ ಈ ಮೇಲ್ಕಂಡವ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀಮತಿ ನಾಗಮ್ಮಾ ಗಂಡ ಭಾಸ್ಕರ ಆಳಗೇರಾ ಸಾ:ತಾರಾಪೂರ ಮುಂಬಯಿ ಹಾ:ವ:ಶಿವಶಕ್ತಿ ನಗರ ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣ :
ಚೌಕ ಠಾಣೆ : ಶ್ರೀ ಅಂಬಾರಾಯ ತಂದೆ ಶ್ರೀಮಂತರಾಯ ಕೆರೂರ ಸಿ.ಪಿ.ಸಿ 1133 ಸಾ : ಸಂಚಾರಿ ಪೊಲಿಸ್ ಠಾಣೆ-2 ಕಲಬುರಗಿ ರವರು ದಿನಾಂಕ : 04-05-2019 ರಂದು ಸಾಯಂಕಾಲ 7=00 ಗಂಟೆಯಿಂದ ರಾತ್ರಿ 10=00 ಗಂಟೆ ವರೆಗೆ ಚೌಕ ಸರ್ಕಲ್ ಸಂಚಾರಿ ಪಾಯಿಂಟ ಕರ್ತವ್ಯದ ಮೇಲೆ ಇರುವಾಗ ರಾತ್ರಿ 8=20 ಗಂಟೆ ಸುಮಾರಿಗೆ ಒಂದು ಮೋಟರ ಸೈಕಲ್ ಸವಾರ ತನ್ನ ಮೋಟರ ಸೈಕಲ್ ಮೇಲೆ ಹಿಂದೆ ಒಬ್ಬರಿಗೆ ಕೂಡಿಸಿಕೊಂಡು ಹುಮನಾಬಾದ ಬೇಸ್ ರೋಡ ಕಡೆಯಿಂದ ಚಲಾಯಿಸಿಕೊಂಡು ಬಂದು ಚೌಕ ಸರ್ಕಲ್ ಹತ್ತಿರ ಒಮ್ಮೇಲೆ ತನ್ನ  ಮೋಟರ ಸೈಕಲ್ ಅಡ್ಡ ಹಚ್ಚಿ ನಿಲ್ಲಿಸಿ ಟ್ರಾಫಿಕ್ ಚಾಮ್ ಮಾಡಿದ್ದರಿಂದ ಅದನ್ನು ನೋಡಿ ನಾನು ಸುಗಮ ಸಂಚಾರಗೊಳಿಸುವ ಕುರಿತು ಮೋಟರ ಸೈಕಲ್ ಸವಾರನ ಹತ್ತಿರ ಹೋಗಿ ಮೋಟರ ಸೈಕಲ್ ರಸ್ತೆ ಪಕ್ಕದಲ್ಲಿ ತೆಗೆದುಕೊಳ್ಳಲು ಹೇಳಿದಾಗ ನೀ ಏನು ಕೇಳುತ್ತಿ ಬೋಸಡಿ ಮಗನೆ ಅಂತಾ ಬೈದು ನನ್ನ ಕಪಾಳದ ಮೇಲೆ 3-4 ಸಲ ಹೊಡೆಯುತ್ತಿದ್ದಾಗ ಶರಣು ಪಪ್ಪು ಮತ್ತು ಶಿವಪ್ರಭು ಪಾಟೀಲ ಸಾ : ಮಹಾಗಾಂವ ಇವರು ಬಂದು ಆತನಿಗೆ ಹಿಡಿದು ಬಿಡಿಸುತ್ತಿದ್ದಾಗ ಆತನು ನೀನು ದಿನಾಲು ಇಲ್ಲಿಯೇ ನೌಕರಿ ಮಾಡಲು ಬರುತ್ತಿ ಮಗನೇ ನಿನಗೆ ಬಿಡಲ್ಲಾ  ನಿನಗೆ ಖಲಾಸ ಮಾಡಿ ಬಿಡುತ್ತಿನಿ ಅಂತಾ ನನಗೆ ಜೀವ ಬೆದರಿಕೆ ಹಾಕಿರುತ್ತಾನೆ. ಅಷ್ಠರಲ್ಲಿ ಆತನ ಜೊತೆಗೆ ಇರುವವನು  ಮೋಟರ ಸೈಕಲ್ ತೆಗೆದುಕೊಂಡು ಹೊರಟು ಹೋದನು. ನನಗೆ ಹೊಡೆದವನು ಹೆಸರು ವಿಚಾರಿಸಲು  ಆತನ ಹೆಸರು ಆನಂದ ತಂದೆ ರಾಮಚಂದ್ರ ಮೋರೆ ಸಾ : ಪುಟಾಣಿ ಗಲ್ಲಿ ಕಲಬುರಗಿ ಅಂತಾ ಹೇಳಿದನು. ಕಾರಣ ಆನಂದ ತಂದೆ ರಾಮಚಂದ್ರ ಮೋರೆ ಈತನು ಮೋಟರ ಸೈಕಲ್ ಚಲಾಯಿಸಿಕೊಂಡು ಬಂದು ಚೌಕ್ ಸರ್ಕಲ್ ಹತ್ತಿರ ಸಾರ್ವಜನಿಕ ರೋಡ ಮೇಲೆ ಮೋಟರ ಸೈಕಲ್ ಅಡ್ಡ ಹಚ್ಚಿ ನಿಂತು ಟ್ರಾಫಿಕ್ ಜಾಮ್ ಮಾಡಿ ಕರ್ತವ್ಯದ ಮೇಲೆ ಇರುವ ನನಗೆ ಅವಾಚ್ಯ ಶಬ್ದಗಳಿಂದ ಬೈದು ನನ್ನ ಕಪಾಳಕ್ಕೆ ಹೊಡೆದು ಜೀವ ತೆಗೆಯುವ ಬೇದರಿಕೆ ಹಾಕಿ ನನ್ನ ಮೇಲೆ ಹಲ್ಲೆ ಮಾಡಿ ಆನಂದ ಈತನ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.