Police Bhavan Kalaburagi

Police Bhavan Kalaburagi

Friday, May 15, 2020

BIDAR DISTRICT DAILY CRIME UPDATE 15-05-2020


  
ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 15-05-2020
ಮನ್ನಾಏಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 39/2020 ಕಲಂ 9,10,11 ಬಾಲ್ಯ ವಿವಾಹ ನಷೇಧ ಕಾಯ್ದೆ :-

ದಿನಾಂಕ: 14/05/2020 ರಂದು 1400 ಗಂಟೆಗೆ ಫಿರ್ಯಾದಿ ಶ್ರೀಮತಿ ಶೋಭಾ ಕಟ್ಟಿ ಗಂಡ ರವಿನಂದ ವಯ: 58 ವರ್ಷ ಜಾ: ಕ್ರೀಶ್ಚಿಯನ್ ಉ: ಶಿಶು ಅಭಿವೃದ್ದಿ ಅಧಿಕಾರಿ ಹುಮನಾಬಾದ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಂಶವೆನೆಂದರೆ. ಚಿಟಗುಪ್ಪ ತಾಲ್ಲೂಕಿನ ಉಡಬಾಳ ಗ್ರಾಮದ ಬಾಲಕಿಯಾದ ಕುಮಾರಿ ಸ್ವೇತಾಳ ವಯಸ್ಸು 14 ವರ್ಷ ಆಗಿದ್ದು, ಇವಳ ಮದುವೆಯು ನಿರ್ಣಾ ಗ್ರಾಮದ ನಿವಾಸಿಯಾದ ಲಾಲಪ್ಪನ ಮಗನಾದ ಕುಮಾರ ಆಕಾಶನ ಜೊತೆಯಲ್ಲಿ (ವಯಸ್ಸು 19 ವರ್ಷ) ದಿನಾಂಕಃ 13/05/2020 ರಂದು ಸಾಯಂಕಾಲ 1630 ಗಂಟೆಗೆ ಜರುಗಿರುತ್ತದೆ ಎಂಬ ಮಾಹಿತಿಯು ಮಕ್ಕಳ ಕಲ್ಯಾಣ ಸಮಿತಿ ಬೀದರರವರ ದೂರವಾಣಿ ಕರೆ ಮೂಲಕ ತಿಳಿದು ಬಂದಿರುತ್ತದೆ. ಈ ಪ್ರಯುಕ್ತ ಸದರಿ ಮಾಹಿತಿಯನ್ನು ಮನ್ನಾಎಖೇಳ್ಳಿ ಪೊಲಿಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು ಆದ ಶ್ರೀ ಶಿವರಾಜ ಪಾಟೀಲ ರವರಿಗೆ ದೂರವಾಣಿ ಮೂಲಕ ತಿಳಿಸಲಾಗಿದ್ದು, ಅಲ್ಲದೇ ಅಂದು ರಾತ್ರಿ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಕಲಾವತಿಯವರು ಸದರಿ ಸ್ಥಳಕ್ಕೆ ಭೇಟಿ ನೀಡಿ, ಈ ಬಾಲಕಿಯನ್ನು ರಕ್ಷಣೆ ಮಾಡಿ ನಿರ್ಣಾ ಗ್ರಾಮದಲ್ಲಿ ಆಕಾಶನ ಅಕ್ಕಳಾದ ಶ್ರೀಮತಿ ಮೋಹಿತಾ ಗಂಡ ಸುರೇಶ ಹಲಗೆನೋರ್ ರವರ ಮನೆಯಲ್ಲಿ ಸುರಕ್ಷಿತವಾಗಿ ಆಶ್ರಯ ನೀಡಲಾಯಿತ್ತು. ತದನಂತರ ದಿನಾಂಕಃ 14/05/2020 ರಂದು ಸದರಿ ಗ್ರಾಮಕ್ಕೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ/ಸಿಬ್ಬಂದಿ ಮತ್ತು ನಿರ್ಣಾ ವಲಯದ ಮೇಲ್ವಿಚಾರಕಿಯಾದ ಶ್ರೀಮತಿ ಕಲಾವತಿರೆಡ್ಡಿ ಹಾಗೂ ಮಕ್ಕಳ ಸಹಾಯವಾಣಿ ಔಟ್ ರೀಚ್ ವರ್ಕರೊಂದಿಗೆ ಭೇಟಿ ನೀಡಿ, ಬಾಲಕ ಮತ್ತು ಬಾಲಕಿ ಹಾಗೂ ಅವರ ಪಾಲಕರನ್ನ ಗ್ರಾಮ ಪಂಚಾಯತ ನಿರ್ಣಾಕ್ಕೆ ಕರೆಯಿಸಿ, ಬಾಲ್ಯವಿವಾಹದ ದುಷ್ಪಾರಿಣಾಮದ ಮತ್ತು ಶಿಕ್ಷೆಯ ಬಗ್ಗೆ ತಿಳಿಹೇಳಲಾಯಿತ್ತು. ಅದೇ ರೀತಿ ಪೋನ್ ಮುಖಾಂತರ ಮಕ್ಕಳ ಕಲ್ಯಾಣ ಸಮಿತಿಯವರಿಗೆ ಈ ಘಟನೆಯ ಕುರಿತು ಚರ್ಚಿಸಿದಾಗ, ಮಕ್ಕಳ ಕಲ್ಯಾಣ ಸಮಿತಿ ಬೀದರರವರು ಬಾಲಕಿಯನ್ನು ಮದುವೆ ಮಾಡಿಕೊಂಡಿರುವ ಆಕಾಶ ಎಂಬ ವ್ಯಕ್ತಿಯ ಮೇಲೆ ಹಾಗೂ ಆತನ ಪಾಲಕರು ಹಾಗೂ ಬಾಲಕಿಯರ ಪಾಲಕರ ವಿರುದ್ದ ಪ್ರಕರಣ ದಾಖಲಿಸುವಂತೆ ತಿಳಿಸಿರುತ್ತಾರೆ. ಮುಂದುವರೆದು ಸದರಿ ನೊಂದ ಬಾಲಕಿಯನ್ನು ಅವಳ ಅಜ್ಜನಾದ (ತಾಯಿಯ ತಂದೆ) ಲಕ್ಷ್ಮಣ ತಂದೆ ನಾಗಪ್ಪ ಹೊಸಳ್ಳಿಕರ್ ಸಾಃ ಬನ್ನಳ್ಳಿ ಇವರ ಆಶ್ರಯಕ್ಕೆ ಒಪ್ಪಿಸುವಂತೆ ದೂರವಾಣಿ ಮುಖಾಂತರ ಆದೇಶ ನೀಡಿರುತ್ತಾರೆ.  ಆದರಂತೆ ಸದರಿ ಬಾಲಕಿಯನ್ನು ಅವಳ ಅಜ್ಜನ ಸುಪರ್ದಿಗೆ ಒಪ್ಪಿಸಲಾಗಿರುತ್ತದೆ. ಆದ್ದರಿಂದ ಸದರಿ ಬಾಲಕಿಯನ್ನು ಮದುವೆ ಮಾಡಿಕೊಂಡಿರುವ ಆಕಾಶ ಎಂಬ ವ್ಯಕ್ತಿಯ ಮೇಲೆ ಹಾಗೂ ಆತನ ಪಾಲಕರು  ಹಾಗೂ ಬಾಲಕಿಯರ ಪಾಲಕರ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ತಿಳಿಸಿದೆ. ಅಂತಾ ಕೋಟ್ಟ ಫಿರ್ಯಾದು ದೂರು ಸಾರಂಶದ ಆಧಾರದ ಮೇಲಿಂದ ಠಾಣೆ ಗುನ್ನೆ ನಂ 39/2020 ಕಲಂ: 9,10,11 ಬಾಲ್ಯ ವಿವಾಹ ನೀಷೇಧ ಕಾಯಿದ್ದೆ ನೇದರಡಿಯಲ್ಲಿ ಪ್ರಕರಣ ದಾಖಲಿಸಿ ತನೀಖೆ ಕೈಗೊಳ್ಳಲಾಗಿದೆ.


Thursday, May 14, 2020

BIDAR DISTRICT DAILY CRIME UPDATE 14-05-2020



ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 14-05-2020

ಮಾರ್ಕೇಟ ಪೊಲೀಸ ಠಾಣೆ ಅಪರಾಧ ಸಂಖ್ಯೆ 32/2020 ಕಲಂ 3 & 7 ಇ.ಸಿ. ಕಾಯ್ದೆ :-

ದಿನಾಂಕ;13-05-2020 ರಂದು 1030 ಗಂಟೆಯ ಸುಮಾರಿಗೆ  1.ಸೈಯದ್ ಅಲ್ತಾಫ ತಂದೆ ಸೈಯದ ಪಾಶಾ ವಯ:30 ಉ:ವಾಹನ ಚಾಲಕ ಸಾ:ಮಿನಯಾರ ತಾಲೀಮ ಬೀದರ2.ಎಮಡಿ.ಖಾಲೇದ ತಂದೆ ಎಮಡಿ ಜಬ್ಬಾರ ಸಾ:ಬೀದರ ಇವರುಗಳು  ಉಚಿತ ಪಡಿತರ ಆಹಾರ ಅಕ್ಕಿ ಅಕ್ರಮವಾಗಿ ಕಾಳಸಂತೆಯಲ್ಲಿ ವಾಹನ ಸಂ:ಎಪಿ-21 ಟಿಡಬ್ಲು-8801 ನೇದ್ದರಲ್ಲಿ ಮಾರಾಟ ಮಾಡುವ ಸಲುವಾಗಿ ತೆಗೆದುಕೊಂಡು ಹೋಗುತ್ತಿರುವಾಗ ದಾಳಿ ಮಾಡಿ ಸದರಿಯವರಿಂದ 48 ಕೆ.ಜಿ ತೂಕ ಉಳ್ಳದ್ದು ಇದ್ದು 53 ಪ್ಲಾಸ್ಟಿಕ ಮತ್ತು ಗೋಣಿ ಚೀಲಗಳು ಇದ್ದು ಅದರಲ್ಲಿ ಒಟ್ಟು 25 ಕ್ವೀಂಟಲ್ 44 ಕೆಜಿ ಇರುತ್ತದೆ ಇದರ ಅಂದಾಜು ಕೀಮತ್ತು 200000/-ರೂಪಾಯಿಗಳ ಬೆಲೆಬಾಳುವದನ್ನು ಜಪ್ತಿ ಮಾಡಿಕೊಂಡು ಫಿರ್ಯಾದಿ ಶ್ರೀಮತಿ.ಶೋಭಾ ಆಹಾರ ನಿರೀಕ್ಷಕರು ಅನೌಪಚಾರಿಕ ಪಡಿತರ ಪ್ರದೇಶ ಉಪನಿರ್ದೇಶಕರ ಕಛೇರಿ ಬೀದರ ರವರು ನೀಡಿರುವ ದೂರಿನ ಮೇರೆಗೆ  ಸದರಿ ಆರೋಪಿತರ ವಿರುಧ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೋಳ್ಳಲಾಗಿದೆ.  

ಬಗದಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 30/2020 ಕಲಂ 379 ಐಪಿಸಿ :-
ದಿನಾಂಕ 13-05-2020 ರಂದು 14.00 ಗಂಟೆಗೆ ಫಿರ್ಯಾದಿ  ಶ್ರೀ ಮಹಿಪಾಲರೆಡ್ಡಿ ತಂದೆ ರಾಮರೆಡ್ಡಿ ಗಂಗ್ವಾರ ವಯಃ 43 ವರ್ಷ ಜಾಃ ರೆಡ್ಡಿ ಉಃ ಒಕ್ಕಲುತನ ಸಾಃ ಔರದ (ಎಸ್) ತಾಃ ಜಿಃ ಬೀದರ ರವರು ಠಾಣೆಗೆ ಹಾಜರಾಗಿ ದೂರು ನೀಡಿದರ ಸಾರಾಂಶವೆನೆಂದರೆ ವರ  ಹತ್ತಿರ ಒಂದು ರಾಯಲ ಎನ್ಫಿಲ್ಡ ಮೊಟರ ಸೈಕಲ ನಂ ಕೆ.ಎ-38-ಎಸ್-0868   ದಿನಾಂಕ 12-05-2020 ರಂದು ರಾತ್ರಿ 9.00 ಗಂಟೆಗೆ   ಮನೆಯ ಮುಂದೆ ನಿಲ್ಲಿಸಿ ಮನೆಯಲ್ಲಿ ಹೋಗಿ ಊಟ ಮಾಡಿ ಮಲಗಿಕೊಂಡಿರುತತ್ತಾರೆ.  ನಂತರ ದಿನಾಂಕ 13-05-2020 ರಂದು ಮುಂಜಾನೆ 05.30 ಗಂಟೆಗೆ ಮನೆಯ ಹೊರಗೆ ಬಂದು ನೋಡಿದಾಗ   ಮನೆಯ ಮುಂದೆ ಇಟ್ಟ ನನ್ನ ರಾಯಲ ಎನ್ಫಿಲ್ಡ ಮೊಟರ ಸೈಕಲ ನಂ ಕೆ.ಎ-38-ಎಸ್-0868  ಕಾಣಲಿಲ್ಲಾ ಮನೆಯ ಅಕ್ಕ ಪಕ್ಕದಲ್ಲಿ ಹುಡುಕಾಡಿದ್ದು ಎಲ್ಲಿಯು ಕಾಣಿಸಿಲ್ಲಾ,  ಯಾರೋ ಅಪರಿಚಿತ ಕಳ್ಳರು ದಿನಾಂಕ 13-05-2020 ರಂದು  ರಾತ್ರಿ 01.00 ಗಂಟೆಯಿಂದ 04.00 ಗಂಟೆಯ ವೇಳೆಯಲ್ಲಿ   ಮನೆಯ ಮುಂದೆ ನಿಲ್ಲಿಸಿದ ರಾಯಲ ಎನ್ಫಿಲ್ಡ ಮೊಟರ ಸೈಕಲ ನಂ ಕೆ.ಎ-38-ಎಸ್-0868 ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ   ಮೊಟರ ಸೈಕಲ ನಂ ಕೆ.ಎ-38-ಎಸ್-0868  ಅಂದಾಜು ಕಿಮ್ಮತ್ತು 45,000/- ರೂಪಾಯಿದು ಇರುತ್ತದೆ.   ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ಗ್ರಾಮೀಣ ಠಾಣೆ ಯು.ಡಿ.ಆರ್. ಸಂಖ್ಯೆ 4/2020 ಕಲಂ 174 ಸಿಆರ್.ಪಿ.ಸಿ :-
ದಿನಾಂಕ 13/05/2020 ರಂದು 1915 ಗಂಟೆಗೆ ಬೀದರ ಸರಕಾರಿ ಆಸ್ಪತ್ರೆಯಲಿದ್ದ ಫಿರ್ಯಾದಿ ಶ್ರೀ ನೀಲಕಂಠ ತಂದೆ ಕೊಂಡಿಬಾರಾವ ವಯ 29 ವರ್ಷ ಜಾತಿ ಮರಾಠಾ ಉ, ಬಟ್ಟೆಅಂಗಡಿಯಲ್ಲಿಕೆಲಸ ಸಾ/ ಭಗವಾನವಾಡಿರವರು ನೀಡಿರುವ ಫೀರ್ಯಾದಿನ ಸಾರಾಂಶವೆನೆಂದರೆ ಫಿರ್ಯಾದಿಯ ಅಣ್ಣ ದೇವಿದಾಸ ತಂದೆ ಕೊಂಡಿಬಾ ವಯ 40 ವರ್ಷ ಇತನು ಸರಾಯಿ ಕುಡಿಯುವ ಚಟದವನಾಗಿದ್ದು ದಿನಾಲು ಸರಾಯಿ ಕುಡಿಯುತಿದ್ದನು ದಿನಾಂಕ 13/05/2020 ರಂದು ಮುಂಜಾನೆ  ತನ್ನ ಮನೆಯಿಂದ ಹೊಲಕ್ಕೆ ಹೋಗಿ ಸರಾಯಿ ಕುಡಿದ ನಶೇಯಲ್ಲಿ ಸರಾಯಿ ಬಾಟಲ ಅಂತ ತಿಳಿದು ಕ್ರೀಮಿನಾಶಕ ಔಷಧಿ ಸೇವನೆ ಮಾಡಿದ್ದು ಬಾಯಿಯಿಂದ ವಾಸನೆ ಬರುವದನ್ನು ಕಂಡು ಚಿಕಿತ್ಸೆ ಕುರಿತು ಭಾಲ್ಕಿ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿ ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದಾಗ ಚಿಕಿತ್ಸೆಫಲಕಾರಿಯಾಗದೆ ದೇವಿದಾಸ ವಯ: 40 ವರ್ಷ ಇತನು ದಿನಾಂಕ 13/05/2020 ರಂದು 1755 ಗಂಟೆಗೆ ಬೀದರ ಸರಕಾರಿ ಆಸ್ಪತ್ರೆಯಲ್ಲಿ ಮ್ರತಪಟ್ಟಿರುತ್ತಾನೆ  ಅಂತಾ ನೀಡಿದ ಫಿರ್ಯಾದಿನ ಮೇಲೆ ಯು.ಡಿ.ಆರ್. ಪ್ರಕರಣ ದಾಖಲಿಸಿಕೊಳ್ಳಲಾಗಿದೆ.