Police Bhavan Kalaburagi

Police Bhavan Kalaburagi

Saturday, August 8, 2020

BIDAR DISTRICT DAILY CRIME UPDATE 08-08-2020

 

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 08-08-2020

 

ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಯು.ಡಿ.ಆರ್ ನಂ. 06/2020, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 07-08-02020 ರಂದು ಫಿರ್ಯಾದಿ ತುಕಾರಾಮ ತಂದೆ ನರಸಪ್ಪಾ ಮರಕುಂದಿ ವಯ: 40 ವರ್ಷ, ಜಾತಿ: ಕಬ್ಬಲಿಗ, ಸಾ: ನಿರ್ಣಾ ರವರ ತಂದೆ ಹೊಲದ ಮೇಲೆ 1,40,000/- ರೂ ಸಾಲ ಮಾಡಿದ್ದು, ಸದರಿ ಸಾಲದ ಭಾದೆ ತಾಳಲಾರದೆ ಜೀವನದಲ್ಲಿ ಜಿಗುಪ್ಸೆ ಗೋಂಡು ಮನೆಯ ಮಾಳಿಗೆ ಧಾಬಾಕ್ಕೆ ಇದ್ದ ಕೊಂಡಿಗೆ ತನ್ನ ಮೋಫಲರದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದದು ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 13/2020, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 07-08-2020 ರಂದು ಫಿರ್ಯಾದಿ ತುಕ್ಕಮ್ಮಾ ಗಂಡ ರಾಮಣ್ಣಾ ಹಳ್ಳೆನೋರ ವಯ: 45 ವರ್ಷ, ಜಾತಿ: ಎಸ್.ಟಿ ಗೊಂಡ,  ಸಾ: ಗೊಗ್ಗಾ ರವರ ಗಂಡನಾದ ರಾಮಣ್ಣಾ ತಂದೆ ತುಕ್ಕಪ್ಪಾ ಹಳ್ಳೆನೋರ ವಯ: 50 ವರ್ಷ ರವರು ತಮ್ಮೂರ ವಿಷ್ಣು ರವರ ಹೊಲದಲ್ಲಿ ಕಬ್ಬಿನ ಬೆಳೆಯಲ್ಲಿ ಬೆಳೆದ ಹುಲ್ಲಿಗೆ ಔಷಧಿ ಹೊಡೆಯುವಾಗ ಗಂಡ ಗಾಟರದಲ್ಲಿ ನೀರು ಹಾಕುತ್ತಿದ್ದು ಅದೇ ವೇಳೆಗೆ ಆಕಸ್ಮೀಕವಾಗಿ ಗಾಳಿಯ ಮುಖಾಂತರ ಬೆಳೆಗೆ ಹೋಡೆಯುವ ಔಷಧಿ ಗಂಡ ರಾಮಣ್ಣಾ ಇವರ ಮೂಗಿನ ಮತ್ತು ಬಾಯಿ ಮೂಲಕ ದೇಹದಲ್ಲಿ ಹೋಗಿ ಮೃತಪಟ್ಟಿರುತ್ತಾರೆ, ಸದರಿ ಘಟನೆ ಆಕಸ್ಮೀಕವಾಗಿ ಜರುಗಿದ್ದು, ತನ್ನ ಗಂಡನ ಮರಣದ ಬಗ್ಗೆ ಯಾರ ಮೇಲೆ ಯಾವುದೇ ದೂರು ಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಲಿಖಿತ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಗದಲ ಪೊಲೀಸ ಠಾಣೆ ಅಪರಾಧ ಸಂ. 47/2020, ಕಲಂ. 87 ಕೆ.ಪಿ ಕಾಯ್ದೆ :-

ದಿನಾಂಕ 07-08-2020 ರಂದು ಬಗದಲ ಗ್ರಾಮದ ಹನುಮಾನ ಮಂದಿರ ಹತ್ತಿರ ಸಾರ್ವಜನಿಕ ಸ್ಧಳದಲ್ಲಿ ಕೆಲವು ಜನರು ಹಣ ಪಣಕ್ಕೆ ಹಚ್ಚಿ ಪಣ ತೊಟ್ಟು ಅಂದರ ಬಾಹರ ನಸೀಬಿನ ಜೂಜಾಟ ಆಡುತ್ತಿದ್ದಾರೆಂದು ಮೇಹಬೂಬ ಪಿ.ಎಸ್. [.ವಿ] ಬಗದಲ್ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು ಠಾಣೆಯ ಸಿಬ್ಬಂದಿಯವರೊಡನೆ ಬಗದಲ ಗ್ರಾಮದ ಹನುಮಾನ ಮಂದಿರ ಹತ್ತಿರ ಮರೆಯಾಗಿ ನೋಡಲು ಹನುಮಾನ ಮಂದಿರಹತ್ತಿರ ಸಾರ್ವಜನಿಕ ಸ್ಧಳದಲ್ಲಿ ಆರೋಪಿತರಾದ ಜಗದೀಶ ತಂದೆ ಭೀಮರಾಯ ವಯ: 30 ವರ್ಷ, ಜಾತಿ: ಲಿಂಗಾಯತ, ಸಾ: ಬಗದಲ ಹಾಗೂ ಇನ್ನೂ 6 ಜನ ಆರೋಪಿತರು ದುಂಡಾಗಿ ಕುಳಿತು ಹಣ ಹಚ್ಚಿ ಪಣ ತೊಟ್ಟು ಅಂದರ ಬಾಹರ ನಸೀಬಿನ ಜೂಜಾಟ ಆಟುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಸದರಿ ಆರೋಪಿತರ ಮೇಲೆ ಎಲ್ಲರು ಸೇರಿ ಏಕ ಕಾಲಕ್ಕೆ ದಾಳಿ ಮಾಡಿ ಇಸ್ಪಿಟ್ ಆಡುತ್ತಿದ್ದ 07 ಜನ ಆರೋಪಿರನ್ನು ಹಿಡಿದು ಅವರಿಂದ ಒಟ್ಟು ನಗದು ಹಣ 31,600/- ರೂ. ಮತ್ತು 52 ಇಸ್ಪೀಟ ಎಲೆಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ.118/2020, ಕಲಂ. 447 ಐಪಿಸಿ ಮತ್ತು ಕಲಂ. 192() ಕರ್ನಾಟಕ ಭೂ ಕಂದಾಯ ಅಧಿನಿಯಮ 1964 :-

ದಿನಾಂಕ 07-08-2020 ರಂದು ಫಿರ್ಯಾದಿ ರಾಜು ಕುಲಕರ್ಣಿ ಕಂದಾಯ ನಿರೀಕ್ಷಕರು ಕಮಠಾಣಾ ಹೋಬಳಿ ರವರು ನೀಡಿದ ಸಾರಾಂಶವೆನೆಂದರೆ ಬೀದರ ತಾಲೂಕಿನ ಚಿದ್ರಿ ಗಾ್ರಮದ ಸರಕಾರಿ ಭೂಮಿ ಸರ್ವೆ ನಂ. 362 ನೇದರಲ್ಲಿ ಆರೋಪಿ ಉಮಾದೇವಿ ಗಂಡ ಪ್ರಹಲಾದ ಸಾ: ಚಿದ್ರಿ ರವರು ಅನಧಿಕೃತವಾಗಿ ಒತ್ತುವರಿ ಮಾಡಿ ಅಂದಾಜು 50*40 ಚದುರು ಅಡಿಯಲ್ಲಿ ಆರೋಪಿ ರವರು ಮನೆ ಕಟ್ಟುತ್ತಿದ್ದಾರೆ, ಈಗಾಗಲೆ ಸದರಿಯವರಿಗೆ ದಿನಾಂಕ 05-3-2020 ರಂದು ನೊಟೀಸ ನೀಡಲಾಗಿದೆ, ಆದರೆ ಸದರಿಯವರು ನೊಟೀಸನ್ ಉತ್ತರ ಕೂಡ ಸಲ್ಲಿಸಿರುವುದಿಲ್ಲಾ, ಅಂತ ನೀಡಿದ ದೂರಿನ ಮೇರೆಗೆ ಉಮಾದೇವಿ ರವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Friday, August 7, 2020

BIDAR DISTRICT DAILY CRIME UPDATE 07-08-2020

 

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 07-08-2020

 

ಮಾರ್ಕೇಟ ಪೊಲೀಸ ಠಾಣೆ ಅಪರಾಧ ಸಂಖ್ಯೆ 46/2020 ಕಲಂ 379 ಐಪಿಸಿ :-

 

ದಿನಾಂಕ 24-06-2020 ರಂದು 1215-1230 ಗಂಟೆಯ ಅವಧಿಯಲ್ಲಿ ಕೆ.ಎ-38 ಯು-6850   ಅಕಿ:30000/-ರೂಗಳ ಬೆಲೆಬಾಳುವ ಮೋ.ಸೈಕಲನ್ನು  ಎಬಿಸಿ ಹೊಟೆಲ ಎದುರುಗಡೆ ನಿಲ್ಲಿಸಿ ಮೊಬೈಲ ರಿಪೇರಿ ಮಾಡುವ ಕುರಿತು ಹೊಗಿದ್ದು ನಂತರ ಮರಳಿ ಬಂದು ನೋಡುವಷ್ಟರಲ್ಲಿ   ದ್ವೀಚಕ್ರ ವಾಹನ ಇರಲಿಲ್ಲಾ  ಎಲ್ಲಾ ಕಡೆ ಹುಡುಕಾಡಿದರೂ ಸಹ ನನ್ನ ವಾಹನ ಸಿಕ್ಕಿರುವದಿಲ್ಲಾ ಯಾರೋ ಅಪರಿಚಿತ ಕಳ್ಳರು ನನ್ನ ವಾಹನ ಕಳುವು ಮಾಡಿಕೊಂಡು ಹೋಗಿರುತ್ತಾರೆಂದು ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 68/2020 ಕಲಂ:  78(3) ಕೆ.ಪಿ. ಆಕ್ಟ್ ;-

 

ದಿನಾಂಕ 06/08/2020 ರಂದು 13-00 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿದ್ದಾಗ ಕಾಂಬಳೆವಾಡಿ ಗ್ರಾಮದ ಹನುಮಾನ ಮಂದಿರದ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಮಟಾಕಾ ಎಂಬ ನಸೀಬಿನ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆ ಎಂದು ಬಾತ್ಮಿ ಬಂದ ಮೇರೆಗೆ, ಕಾಂಬಳೆವಾಡಿ ಗ್ರಾಮಕ್ಕೆ ತಲುಪಿ ಹೋಗಿ ನೋಡಿದಾಗ ಹನುಮಾನ ಮಂದಿರದ ಹತ್ತಿರ ಒಬ್ಬ ವ್ಯಕ್ತಿ ಮಟಕಾ ಎಂಬ ಜೂಜಾಟದ ನಂಬರ ಬರೆಯಿಸಿ 1 ರೂಪಾಯಿ 80 ರೂಪಾಯಿ ಪಡೆಯಿರಿ ಅಂತಾ ಚಿರಾಡುತ್ತಾ ಸಾರ್ವಜನಿಕರಿಂದ ಹಣ ಪಡೆದು ನಂಬರ ಬರೆದುಕೊಳ್ಳುತ್ತಿದ್ದಾಗ ನಾನು ನಮ್ಮ ಪೊಲೀಸ್ ಸಿಬ್ಬಂದಿ ಕೂಡಿ ಇಂದು 14:10 ಗಂಟೆಗೆ ಪಂಚರ ಸಮಕ್ಷಮದಲ್ಲಿ ಸದರಿ ವ್ಯಕ್ತಿ ಮೇಲೆ ದಾಳಿ ಮಾಡಿ ಅವನಿಗೆ ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲು ತನ್ನ ಹೆಸರು ಗೋಪಾಳ ತಂದೆ ಪಾಂಡುರಂಗ ಪಾಶಮೆ ವಯಸ್ಸು: 30 ವರ್ಷ   ಸಾ: ಕಾಂಬಳೆವಾಡಿ  ಇವನ ಹತ್ತಿರವಿದ್ದ 1) ನಗದು ಹಣ 1230/-ರೂಪಾಯಿ, 2) ಎರಡು ಮಟಕಾ ಚೀಟಿಗಳು ಮತ್ತು ಒಂದು ಬಾಲ್ ಪೆನ್ನ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 ಧನ್ನೂರಾ ಪೊಲೀಸ್ ಠಾಣೆ  ಯು.ಡಿ.ಆರ್. ಸಂಖ್ಯೆ 12/2020 ಕಲಂ 174 ಸಿಆರ್.ಪಿ.ಸಿ:-


ದಿನಾಂಕ: 06-08-2020 ರಂದು 0800 ಗಂಟೆಗೆ ಫಿರ್ಯಾದಿ ಶ್ರೀ ಸಂತೋಷ ತಂದೆ ಗೌಡಪ್ಪಾ ನಿಲಾ ವಯ 35 ವರ್ಷ ಜಾತಿ ಲಿಂಗಾಯತ ಸಾ// ಹಾಲಹಳ್ಳಿ (ಕೆ) ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ ಇವರ ತಂದೆಯಾದ ಗೌಡಪ್ಪಾ ತಂದೆ ಸಿದ್ರಾಮಪ್ಪಾ ನಿಲಾ ವಯ: 68 ವರ್ಷ ಇವರು ನಿವೃತ ಸಂಗೀತ ಶಿಕ್ಷಕರು ಇದ್ದು ಇಗ 8 ವರ್ಷಗಳ ಹಿಂದೆ ನಿವೃತ್ತಿಯಾದ ಮೇಲೆ ಒಕ್ಕಲುತನ ಕೆಲಸವನ್ನು ಮಾಡಿಕೊಂಡಿರುತ್ತಾರೆ ಇವರು ಕುರುಡರಿದ್ದು ತಾನು ಅವರ ಜೊತೆ ಒಕ್ಕಲುತನ ಕೆಲಸವನ್ನು ಮಾಡಿಕೊಂಡಿದ್ದು ಇವರಿಗೆ ಹಾಲಹಳ್ಳಿ ಶಿವಾರದಲ್ಲಿ ಸರ್ವೆ ನಂ. 120 ರಲ್ಲಿ  7 ಎಕರೆ 31 ಗುಂಟೆ ಜಮೀನು ಇರುತ್ತದೆ. ಇದರ ಮೇಲೆ ಅವಲಿಂಬಿಸಿಕೊಂಡು ಉಪಜೀವನ ನಡೆಸುತ್ತಿದ್ದು ಈ 4-5 ವರ್ಷದಿಂದ ಜಮೀನು ಸರಿಯಾಗಿ ಬೆಳೆಯದೆ ಇರುವುದರಿಂದ   ಬ್ಯಾಲಹಳ್ಳಿ ಪಿ.ಕೆ,ಪಿ.ಎಸ ನಲ್ಲಿ 60,000/- ರೂಪಾಯಿ ಕೃಷಿ ಸಾಲ ಮತ್ತು ಪಿ.ಕೆ.ಜಿ.ಬಿ ಬ್ಯಾಲಹಳ್ಳಿ ನಲ್ಲಿ 2,50,000/- ರೂಪಾಯಿ ಸಾಲ ಪಡೆದುಕೊಂಡಿರುತ್ತಾರೆ. ಮತ್ತು 5 ಲಕ್ಷ ರೂಪಾಯಿ ಖಾಸಗಿ ಸಾಲ ಇದ್ದು ಈ ಹಿಂದೆ ಸಾಲವಾಗಿದ್ದರಿಂದ 1 ಎಕ್ಕರೆ 5 ಗುಂಟೆ ಜಮೀನು ಮಾರಾಟ ಮಾಡಿದ್ದು ಇರುತ್ತದೆ. ಇವರ ತಂದೆಯವರು ತಮಗೆ ಆದ ಸಾಲದ ಬಗ್ಗೆ ಸದಾ ಚಿಂತೆ ಮಾಡುತ್ತಿದ್ದರು  ಸಾಲವನ್ನು ಹೇಗೆ ತಿರಿಸುವುದಂತಾ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು   ನೀರು ಇಲ್ಲದ ಹಾಳು ಬಾವಿಯಲ್ಲಿ ಬಿದ್ದು ಆತ್ಮ ಹತ್ಯ ಮಾಡಿಕೊಂಡಿರುತ್ತಾರೆ.  ಅಂತ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.


Thursday, August 6, 2020

BIDAR DISTRICT DAILY CRIME UPDATE 06-08-2020

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 06-08-2020

ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 48/2020 ಕಲಂ 32, 34 ಕೆ.ಇ. ಕಾಯ್ದೆ :-

ದಿನಾಂಕ: 05-08-2020 ರಂದು 1330 ಗಂಟೆಗೆ ಚಿಮಕೋಡ ಗ್ರಾಮದಾಕಾಶ ಸಂಪೆ ತನ್ನ ಹೋಟಲ್ ಅಂಗಡಿಯಲ್ಲಿ ಸರಾಯಿ ಬಾಟಲಗಳು ಇಟ್ಟಿಕೊಂಡು ಮಾರಾಟ ಮಾಡುತ್ತಿದ್ದಾನೆ ಅಂತಾ ಖಚೀತ ಬಾತ್ಮಿ ಮೇರೆಗೆ ಪಿಎಸ್ಐ ಗಂಗಮ್ಮಾ ಮತ್ತು ರಘುನಾಥ ಪಿ.ಎಸ್.ಐ (ಅ.ವಿ) ರವರು ಸಿಬ್ಬಂದಿಯೊಂದಿಗೆ 1430 ಗಂಟೆಗೆ ದಾಳಿ ಮಾಡಿ ಸರಾಯಿ ಮಾರಾಟ ಮಾಡುತ್ತಿದ್ದ ಆಕಾಶ ತಂದೆ ಅಂಬಾದಾಸ ಸಂಪೆ ವಯ|| 25 ವರ್ಷ ಉ|| ಹೋಟಲ್ ಅಂಗಡಿ ಜ್ಯಾ|| ಎಸ್.ಸಿ. (ಹೊಲಿಯ) ಸಾ|| ಚಿಮಕೋಡ ಗ್ರಾಮ ಈತನಿಗೆ ಹಿಡಿದು ದಸ್ತಗಿರಿ ಮಾಡಿ. ಅವನ ಹತ್ತಿರವಿದ್ದ  1) 180 ಎಮ್.ಎಲ್. ಎಮ್.ಸಿ.ಡುವೆಲ್ಸ್ನ ಒಟ್ಟು 16  16 ಸರಾಯಿ ತುಂಬಿದ್ ಬಾಟಲ್ಗಳು. ಇವುಗಳ ಅ. ಕಿ. 3171.68. ರೂ. ದಷ್ಟು. 2) ಇಂಪಿರಿಯಲ್ ಬ್ಲ್ಯೂ 375 ಎಮ್.ಎಲ್. ನ ಒಟ್ಟು 7 ಸರಾಯಿ ತುಂಬಿದ ಬಾಟಲ್ಗಳು. ಇವುಗಳ ಅ. ಕಿ. 2875.81/-ರೂ. ದಷ್ಟು. 3) ಇಂಪಿರಿಯಲ್ ಬ್ಲ್ಯೂ 180 ಎಮ್.ಎಲ್. ನ ಒಟ್ಟು 7 ಸರಾಯಿ ತುಂಬಿದ ಬಾಟಲ್ ಗಳು. ಇವುಗಳ ಅ. ಕಿ. 1387.47/-ರೂ. ದಷ್ಟು. 4) ಒರಿಜಿನಲ್ ಚಾಯ್ಸ್ ಡಿಲಕ್ಸ್ ವಿಸ್ಕಿ 90 ಎಮ್.ಎಲ್. ನ ಒಟ್ಟು 38 ಸರಾಯಿ ತುಂಬಿದ ಫುಟ್ಟದ ಪಾಕೇಟಗಳು. ಅವುಗಳ ಅಂ. ಕಿ. 1334.94 ರೂ.ದಷ್ಟು. ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಬೀದರ ಗ್ರಾಮೀಣ ಠಾಣೆ ಅಪರಾಧ ಸಂಖ್ಯೆ 34/2020 ಕಲಂ 32, 34 ಕೆ.ಇ. ಕಾಯ್ದೆ :-

ದಿನಾಂಕ 05/08/2020 ರಂದು 1715 ಗಂಟೆಗೆ ರಾಜಾ ಎ.ಎಸ.ಐ ರವರು   ಹಮೀಲಾಪೂರ ಗ್ರಾಮದ ಹತ್ತಿರ ಪೆಟ್ರೊಲಿಂಗ ಕರ್ತವ್ಯದ ಮೇಲೆ ಇದ್ದಾಗ ಗೋವಿಂದ ತಂದೆ ಸಾಯಿಬಣ್ಣಾ ದೇವಾ  ವಯ-24 ಜಾ|| ಎಸ್.ಟಿ ಗೊಂಡ್ ಉ|| ಹೋಟಲ ಸಾ|| ಕಮಠಾಣಾ ಇತನು ತನ್ನ ಹೋಟಲ್ ಹತ್ತಿರ  ಅಕ್ರಮವಾಗಿ ಸರಾಯಿ ಮಾರಾಟ  ಸಾಗಾಟ ಮಾಡುತಿದ್ದಾನೆ ಅಂತ ಖಚಿತ ಬಾತ್ಮಿ ಬಂದಿದ್ದರಿಂದ ಹಮಿಲಾಪೂರಗೆ ಹೋಗಿ ಆರೋಪಿತನಾದ  ಗೋವಿಂದ ತಂದೆ ಸಾಯಿಬಣ್ಣಾ ದೇವಾ ಇತನ ವಶದಿಂದ 90 ಎಮ್ ಎಲ್ ವುಳ್ಳ 48 ಓರಿಗಜಿನಲ್ ಚೋಯಿಸ್ ವಿಸ್ಕಿ ಒಟ್ಟು ಕಿಮ್ಮತ್ತು ರೂ 1455/-ಜಪ್ತಿ ಮಾಡಿಕೊಂಡು ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

 

Wednesday, August 5, 2020

BIDAR DISTRICT DAILY CRIME UPDATE 05-08-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 05-08-2020
ನೂತನ ನಗರ ಪೊಲೀಸ ಠಾಣೆ ಅಪರಾಧ ಸಂಖ್ಯೆ 90/2020 ಕಲಂ 379 ಐಪಿಸಿ :-

ದಿನಾಂಕ 04/08/2020  ರಂದು 2030  ಗಂಟೆಗೆ ಫಿರ್ಯಾದಿ  ಶ್ರೀ. ಮಾಣಿಕರಾವ ತಂದೆ ರಾಘವೇಂದ್ರ ಕುಲಕರ್ಣಿ ವಯ:23 ವರ್ಷ ಜಾತಿ:ಬ್ರಾಹ್ಮಣ ಉ:ವೈದ್ಯರು ಸಾ/ಸಂಗಮೇಶ್ವರ ಕಾಲೋನಿ ಗುಂಪಾ ಬೀದರ.  ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದರ ಸಾರಾಂಶವೇನಂದರೆ,  ಫಿರ್ಯಾದಿಯು ಬೀದರ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ವೃತ್ತಿ   ಮಾಡಿಕೊಂಡು  ಉಪಜೀವಿಸಿಕೊಂಡಿದ್ದು ಇವರ ಹೀರೊ ಹೊಂಡಾ ಪ್ಯಾಶನ ಪ್ರೊ  ಮೋಟರ ಸೈಕಲ  ನಂ ಕೆಎ38ಕೆ4057  ನೇದನ್ನು   ದಿನಾಂಕ 25/07/2020 ರಂದು ಸಾಯಂಕಾಲ 7:15 ಪಿ.ಎಮ್. ಗಂಟೆಗೆ  ಮೊಟರ ಸೈಕಲನ್ನು ಆಸ್ಪತ್ರೆಯ ಮುಂದೆ ನಿಲ್ಲಿಸಿ   ಆಸ್ಪತ್ರೆಯಲ್ಲಿ ನನ್ನ ಕರ್ತವ್ಯದ ಸಲುವಾಗಿ ಹೋಗಿದ್ದು, 9:15 ಗಂಟೆಯ ಸಮಯಕ್ಕೆ ಮರಳಿ ಬಂದು ನೋಡಿದಾಗ   ಮೊಟರ ಸೈಕಲ ನಾನು ಇಟ್ಟಿದ್ದ ಜಾಗದಲ್ಲಿ ಇರಲಿಲ್ಲ. ಅಕ್ಕಪಕ್ಕದಲ್ಲಿ ನೋಡಿದರೂ ಎಲ್ಲಿಯೂ ಕಾಣಲಿಲ್ಲ. ಅಂದಾಜು ಕಿಮ್ಮತ್ತು ರೂ-  20,000/-ರೂ ಆಗಿರುತ್ತದೆ. ಸದರಿ ಮೋ.ಸೈಕಲ್ ದಿನಾಂಕ 25/07/2020 ರಂದು ಸಾಯಂಕಾಲ 7:15 ಪಿ.ಎಮ್. ಗಂಟೆಯಿಂದ 9:15 ಪಿ.ಎಮ. ಗಂಟೆಯ ಅವಧಿಯಲ್ಲಿ   ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರರಕಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ. 


ಮಾರ್ಕೇಟ ಪೊಲೀಸ ಠಾಣೆ  ಯು.ಡಿ.ಆರ್. ನಂ. 08/2020 ಕಲಂ 174 ಸಿಆರ್.ಪಿ.ಸಿ. :-

ದಿನಾಂಕ:04-082020 ರಂದು 1400 ಗಂಟೆಗೆ ಫಿರ್ಯಾದಿ ಶ್ರೀ.ಚಂದ್ರಶೇಕರ  ತಂದೆ ಪೋಲೆಕರ್ ವಯ:48 ವರ್ಷ ಜಾತಿ: ಸಮಗಾರ ಸಾ:ಮಂಗಲಪೇಟ  ಇವರ ಮಗ ದಿಪಕ ತಂದೆ ಚಂದ್ರಶೇಕರ್ ಪೋಲೇಕರ್ ವಯ:16 ವರ್ಷ ಜಾ:ಎಸ್.ಸಿ (ಸಮಗಾರ) ಉ:ವಿಧ್ಯಾರ್ಥಿ ಇತನು ಎಂದಿನಂತೆ  ಸಾರ್ವಜನಿಕ ಸ್ಥಳದಲ್ಲಿಟ್ಟಿದ್ದ ನೀರನ್ನು  ಮೋಟಾರ ಸಹಾಯದಿಂದ ತುಂಬಿ ಸುಮಾರು 1420 ಗಂಟೆಗೆ ಕರಟೆಂಟ ಮೋಟಾರ ಪ್ಲಗ್ ಬಂದ್ ಮಾಡುತ್ತಿರುವಾಗ  ಆಕಸ್ಮಿಕವಾಗಿ ಕರೆಂಟ ತಗುಲಿ ಮೃತ ಪಟ್ಟಿರುತ್ತಾನೆ  ನನ್ನ ಮಗನ ಮರಣದಲ್ಲಿ ಯಾವುದೇ ರೀತಿಯ ಯಾವುದೇ ಸಂಶಯ ಇರುವದಿಲ್ಲಾ ಅಂತ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಮನ್ನಾಏಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 66/2020 ಕಲಂ 73(3) ಕೆಪಿ ಕಾಯ್ದೆ :-

ದಿನಾಂಕ 04-08-2020 ರಂದು 14:30 ಗಂಟೆಗೆ ಪಿಎಸ್ಐ ರವರು  ಮನ್ನಾಎಖೇಳ್ಳಿ ಪೊಲೀಸ್ ಠಾಣೆಯಲ್ಲಿದ್ದಾಗ ಖಚಿತ ಬಾತ್ಮಿ ಬಂದಿದ್ದೆನೆಂದರೆ ತಾಳಮಡಗಿ ಗ್ರಾಮದ ಅಂಬೇಡ್ಕರ ಕಟ್ಟೆಯ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಮಟಕಾ ಎಂಬ ಜೂಜಾಟ ನಡೆಸುತ್ತಿದ್ದಾನೆ ಅಂತಾ ಮಾಹಿತಿ ಬಂದಿದರ ಮೇರೆಗೆ ತಾಳಮಡಗಿ ಗ್ರಾಮದ ಸರಕಾರಿ ಶಾಲೆಯ ಹತ್ತೀರ ಜೀಪ್ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಸ್ವಲ್ಪ ಮುಂದೆ ನಡೆದುಕೊಂಡು ಹೋಗಿ ಮರೆಯಾಗಿ ನಿಂತು ನೋಡಲು ಅಲ್ಲಿ  ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಇದು ಕಲ್ಯಾಣಿ ಮಟ್ಕಾ ಜೂಜಾಟ ಇದೆ 1 ರೂಪಾಯಿಗೆ 80 ರೂಪಾಯಿ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಮ್ಳತಿದಿದ್ದನ್ನು ಖಚಿತ ಪಡಿಸಿಕೊಂಡು ಸದರಿಯವನ ಮೇಲೆ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ 16:45 ಗಂಟೆಗೆ ದಾಳಿ ಮಾಡಿ ಮಟಕಾ ಬರೆದು ಕೊಳ್ಮ್ಳತ್ತೀದ್ದವನನ್ನು ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಗಣಪತಿ ತಂದೆ ಈಶ್ವರ ಹಡಪದ ವಯ: 46 ವರ್ಷ ಜಾತಿ: ಹಡಪದ ಉ: ಡ್ರೈವರ ಸಾ: ತಾಳಮಡಗಿ ಗ್ರಾಮ ಅಂತ ತಿಳಿಸಿದನು. ಈ ಬಗ್ಗೆ ವಿಚಾರಿಸಿದಾಗ ತಾನು ಜನರಿಂದ ಹಣ ಪಡೆದು ಮಟ್ಕಾ ಚೀಟಿಗಳನ್ನು ಬರೆದುಕೊಳ್ಳುತ್ತೇನೆ ಅಂತಾ ತಿಳಿಸಿರುತ್ತಾನೆ. ಸದರಿಯವನ ಹತ್ತಿರ ಇದ್ದ ಒಂದು ಬಾಲ ಪೆನ್ನು, 2 ಮಟಕಾ ಬರೆದ ಚೀಟಿಗಳು ಮತ್ತು ಆತನ ಅಂಗ ಜಡ್ತಿ ಮಾಡಿ ಆತನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 3740=00 ರೂಪಾಯಿಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಮಂಠಾಳ ಪೊಲೀಸ್ ಠಾಣೆ. ಅಪರಾಧ ಸಂಖ್ಯೆ 65/2020 ಕಲಂ 3 & 7 ಇ.ಸಿ. ಕಾಯ್ದೆ :- 

ದಿನಾಂಕ: 04/08/2020 ರಂದು 1830 ಗಂಟೆಗೆ ಫಿಯರ್ಾದಿ ಶ್ರೀ ರಾಜೇಂದ್ರಕುಮಾರ ಆಹಾರ ನಿರೀಕ್ಷಕರು ಬಸವಕಲ್ಯಾಣ ರವರು ಠಾಣೆಗೆ ಹಾಜರಾಗಿ ತಮ್ಮ ದೂರು ಅಜರ್ಿಯೊಂದಿಗೆ ಒಂದು ಇಚರ್ಸ್ ಗೂಡ್ಸ್ ವಾಹನ ಸಂ. ಎಮ್.ಎಚ್.-40/ ವೈ-7882 ನೆದ್ದು ಮತ್ತು ಅದರಲ್ಲಿ ಒಟ್ಟು 50 ಕೆ.ಜಿ. ತೂಕವುಳ್ಳ ಒಟ್ಟು 200 ಅಕ್ಕಿಯ ಚೀಲಗಳು ಮತ್ತು ಆಪಾದಿತ ಚಂದ್ರಕಾಂತ ತಂದೆ ಶ್ರೀಮಂತ ಬಿರಬಿಟ್ಟೆ ವಯಸ್ಸು: 48ವರ್ಷ ಸಾ: ವಿ.ಕೆ.ಸಲಗರ್ ತಾ: ಅಳಂದ ಜಿ: ಕಲಬುರಗಿ ಈತನನ್ನು ಮತ್ತು ಜಪ್ತಿ ಪಂಚನಾಮೆ ಹಾಗೂ ಶ್ಯಾಂಪಲ್ ಅಕ್ಕಿಯನ್ನು ಹಾಜರು ಪಡಿಸಿದ್ದು, ದೂರು ಮತ್ತು ಜಪ್ತಿ ಪಂಚನಾಮೆಯ  ಸಾರಂಶವೆನೆಂದರೆ,  ಉಜಳಂಬ ಗ್ರಾಮದಲ್ಲಿ ಶಿವಾಜಿ ಚೌಕ್ ಹತ್ತಿರ ಒಂದು ಇಚರ್ಸ್ ಗೂಡ್ಸ್ ವಾಹನ ಸಂ. ಎಮ್.ಎಚ್.-40/ ವೈ-7882 ನೇದ್ದರಲ್ಲಿ ಸರಕಾರದಿಂದ ವಿವಿಧ ಯೋಜನೆ ಅಡಿ ಸರಬರಾಜು ಆಗುವ ಅಕ್ಕಿ ಲೋಡ ಮಾಡಿಕೊಂಡು ಬಂದು ನಿಂತಿದ್ದು ಇರುತ್ತದೆ ಅಂತಾ ಇಂದು ಬೆಳಿಗ್ಗೆ 10-00 ಗಂಟೆಗೆ ಖಚಿತ ಮಾಹಿತಿ ಬಂದಿದ್ದು,  ಮಧ್ಯಾಹ್ನ 1200 ಗಂಟೆಗೆ ಉಜಳಂಬ ಗ್ರಾಮಕ್ಕೆ ಹೋಗಿ ಶಿವಾಜಿ ಚೌಕ್ ಹತ್ತಿರ ನೋಡಲಾಗಿ ರೋಡಿನ ಪಕ್ಕದಲ್ಲಿ ಮಾಹಿತಿಯಂತೆ ಒಂದು ಇಚರ್ ಗೂಡ್ಸ್ ವಾಹನ ನಿಂತಿದ್ದು, ನೋಡಲಾಗಿ ಅದರ ಸಂ. ಎಮ್ಹೆಚ್-40/ ವೈ-7882 ಇದ್ದು,  ಸದರಿ ಚಾಲಕನಿಗೆ ವಿಚಾರಿಸಿದಾಗ ಅಕ್ಕಿಯು ಶ್ರೀ ವಿಜಯ ಪವಾರ ಎಂಬುವವರಿಗೆ ಸಂಬಂಧ ಪಟ್ಟಿದ್ದು ಇರುತ್ತದೆ ಅಂತಾ ತಿಳಿಸಿದನು. ಮತ್ತು ಸದರಿ ಅಕ್ಕಿಯ ಬಗ್ಗೆ ಯಾವುದೇ ದಾಖಲಾತಿಗಳು ಹಾಜರು  50 ಕೆ.ಜಿ.ವುಳ್ಳ ಒಟ್ಟು 200 ಅಕ್ಕಿಯ ಚೀಲಗಳಿದ್ದು ಅವುಗಳ ಒಟ್ಟು ಅಂ.ಕಿ. 2,70,000/-ರೂ. ಇರುತ್ತವೆ. ಮತ್ತು ಸದರಿ ವಾಹನದ ಅಂ.ಕೀ 5,00,000/-ರೂ. ಇರುತ್ತದೆ. ಸದರಿ ಅಕ್ಕಿಯ ಚೀಲಗಳನ್ನು ಮರಳಿ ಅದೇ ವಾಹನದಲ್ಲಿ ಹಾಕಿ, ವಾಹನ ಸಮೇತ 200 ಅಕ್ಕಿಯ ಚೀಲಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.

ಬಸವಕಲ್ಯಾಣ ಗ್ರಾಮೀಣ ಠಾಣೆ ಅಪರಾಧ ಸಂಖ್ಯೆ  32, 34 ಕೆ.. ಕಾಯ್ದೆ  :-

ದಿನಾಂಕ 04-08-2020 ರಂದು 1700 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿ ಇದ್ದಾಗ ಯರಂಡಗಿ ಗ್ರಾಮದ ವಾಲ್ಮಿಕಿ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸರಕಾರದಿಂದ ಯಾವುದೇ ಪರವಾನಗಿ ಇಲ್ಲದೆ ಅಧೀಕೃತವಾಗಿ ಒಂದು ಚೀಲದಲ್ಲಿ ಸರಾಯಿ ಇಟ್ಟಿಕೊಂಡು ಸಾರಾಯಿ ಮಾರಾಟ ಮಾಡುತ್ತಿದ್ದಾರೆ ಅಂತಾ ಭಾತ್ಮಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಯರಂಡಗಿ ಗ್ರಾಮದ ವಾಲ್ಮಿಕಿ ಚೌಕಕ್ಕಿಂದ ಸ್ವಪ್ಪ ದೂರದಲ್ಲಿ ನಾವೆಲ್ಲರೂ ಜೀಪಿನಿಂದ ನಿಂತು ಮರೆಯಾಗಿ ನೋಡಲು ಒಬ್ಬ  ವ್ಯಕ್ತಿ ಒಂದು ಬಿಳಿ ಚೀಲದಲ್ಲಿ ಸರಾಯಿ ಇಟ್ಟಿಕೊಂಡು ಮಾರಾಟ ಮಾಡುತ್ತಿದ್ದನ್ನು ನೋಡಿ ಖಚಿತ ಪಡಿಸಿಕೊಂಡು ಸರಾಯಿ ಮಾರಾಟ ಮಾಡುವವನ ಮೇಲೆ  ದಾಳಿ ಮಾಡಿದಾಗ ಸರಾಯಿ ಖರೀದಿ ಮಾಡುವವರು ಓಡಿ ಹೋಗಿದದು ಸರಾಯಿ ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳಿಗೆ ಹಿಡಿದು ಅವರ ಹೆಸರು ವಿಚಾರಿಸಲು ಶಿವಾಜಿ ತಂದೆ ನಾಮದೇವರಾವ ಮೂಳೆ ವಯ 48 ವರ್ಷ ಜಾತಿ ಮರಾಠಾ ಉದ್ಯೋಗ ಕೂಲಿ ಕೆಲಸ ಸಾ : ಯರಂಡಗಿ ಗ್ರಾಮ ಅಂತಾ ತಿಳಿಸಿದನು. ಇವರ ವಶದಿಂದ 1] ಓರಿಜಿನಲ್ ಚಾಯಸ ಡಿಲಕ್ಸ ವಿಷ್ಕಿ ಸರಾಯಿ 90 ಎಂಎಲ್ನ 36 ಟೆಟ್ರಾ ಪ್ಯಾಕೇಟಗಳು ಒಂದರ ಬೆಲೆ 35 ರೂಪಾಯಿ 36 ಟೆಟ್ರಾಪ್ಯಾಕ ಸರಾಯಿನ ಬೆಲೆ 1260/- ರೂ ನೇದ್ದನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.