Police Bhavan Kalaburagi

Police Bhavan Kalaburagi

Thursday, May 6, 2021

BIDAR DISTRICT DAILY CRIME UPDATE 06-05-2021

 

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 06-05-2021

 

ಬೀದರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 26/2021 ಕಲಂ  15(ಎ),32(3) ಕೆ.ಈ ಎಕ್ಟ:-

 ದಿನಾಂಕ 05/05/2021 ರಂದು 1900 ಗಂಟೆಗೆ  ಪಿಎಸ್ಐ ರವರು  ಪೆಟ್ರೋಲಿಂಗ್ ಕರ್ತವ್ಯದಲ್ಲಿರುವಾಗ    ಶ್ರೀನಿವಾಸ ತಂದೆ ಅಮೃತ್ತರಾವ ಪುಲ್ಲಾರಡ್ಡಿ ಸಾ|| ಸಿಕಿಂದ್ರಾಪೂರ  ರವರು ತನ್ನ ಕಿರಾಣಿ ಅಂಗಡಿಯ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಸರಕಾರದ ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಸರಾಯಿ , ನೀರು  ಮತ್ತು ಗ್ಲಾಸ ಕೊಟ್ಟು ಸರಾಯಿ ಕುಡಿಯಲು ಅನುವು ಮಾಡಿಕೊಡುತಿದ್ದಾನೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿ ಮತ್ತು ಪಂಚರೊಂದಿಗೆ ಹೋಗಿ ನೋಡಿದಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ  ಸರಾಯಿ , ನೀರು  ಮತ್ತು ಗ್ಲಾಸ ಕೊಟ್ಟು ಸರಾಯಿ ಕುಡಿಯಲು ಅನುವು  ಮಾಡಿಕೊಡುತಿದ್ದನ್ನು ನೋಡಿ ಖಾತ್ರಿ ಪಡಿಸಿಕೊಂಡು  ದಾಳಿ ಮಾಡಿ ಸದರಿಯವನಿಗೆ  ಅಲ್ಲೆ ಹಿಡಿದು    ಅಲ್ಲಿ ಸ್ಥಳದಲ್ಲಿ ಒಂದು ಬಟ್ಟೆಯ ಬಿಳಿ ಕೈ ಚೀಲ ಇದ್ದು ಅದನ್ನು ಪರೀಶಿಲಿಸಿ ನೋಡಲಾಗಿ ಅದರಲ್ಲಿ  ಓರಿಜಿನಲ್ ಚಾಯ್ಸ್ ಅಂತ ಬರೆದಿದ್ದ ಸರಾಯಿ ತುಂಬಿದ ಟೆಟ್ರಾ ಪ್ಯಾಕೇಟಗಳು ಇರುತ್ತವೆ. ಸದರಿ ಸರಾಯಿ ಪ್ಯಾಕೇಟಗಳು  90 ಎಮ್ ಎಲ್ ವುಳ್ಳ ಇದ್ದು ಎಣಿಕೆ ಮಾಡಿ ನೋಡಲಾಗಿ ಒಟ್ಟು 18 ಟೆಟ್ರಾ ಸರಾಯಿ ತುಂಬಿದ ಪೌಚಗಳು ಇರುತ್ತವೆ. ಪ್ರತಿ ಪೌಚಗಳ  ಮೇಲೆ ರೂ 35.13 ಅಂತ ಬೆಲೆ ಬರೆದಿದು ಇದ್ದು ಅವುಗಳ ಒಟ್ಟು ಕಿಮ್ಮತ್ತು ರೂ 632/- ನೇದ್ದನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.


ಚಿಟಗುಪ್ಪಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 77/2021 ಕಲಂ 279, 337, 304 (ಎ) ಐಪಿಸಿ :-

ದಿನಾಂಕ:05/05/2021 ರಂದು 07.00 ಗಂಟೆಗೆ ಹುಮನಾಬಾದ ಸರಕಾರಿ ಆಸ್ಪತ್ರೆಯಿಂದ ಮಾಹಿತಿ ಬಂದಿದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಅಪಘಾತದಲ್ಲಿ ಗಾಯಗೊಂಡ ಗಾಯಾಳು ಉಮೇಶ ತಂದೆ ಬಸವರಾಜ ಕಟ್ಟಿಮನಿ, ವಯ: 21 ವರ್ಷ, ಜಾತಿ: ಕಬ್ಬಲಿಗ, : ಚಾಲಕ, ಸಾ/ ಆಳಂದ ಚೆಕ್ ಪೋಸ್ಟ, ಸಿದ್ದರಾಮೇಶ್ವರ ಶಾಲೆ ಹತ್ತಿರ, ಕಲಬುರ್ಗಿ ರವರ ಹೇಳಿಕೆ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ಇವರು ಕಲಬುರ್ಗಿಯಲ್ಲಿನ ಆದರ್ಶ ಸುಪರಸ್ಪೆಶಿಯಾಲಿಟಿ ಆರ್ಥೇಪೆಡಿಕ ಆಸ್ಪತ್ರೆಯ ಅಂಬುಲೆನ್ಸ ನಂ:ಕೆ..32..9608 ವಾಹನ ಮೇಲೆ   ಚಾಲಕ ಕೆಲಸ ಮಾಡಿಕೊಂಡಿದ್ದು ಸದರಿ ಅಂಬುಲೆನ್ಸನಲ್ಲಿ ಇವರ ಜೊತೆ ಮಲ್ಲಿಕಾರ್ಜುನ ತಂದೆ ಸಿದ್ರಾಮ ಮಾಲಿಪಾಟೀಲ ವಯ: 27 ವರ್ಷ ಸಾ/ ತೆಲ್ಲೂರ ತಾ/ ಆಳಂದ ಈತನು ಸಹ ಚಾಲಕ ಕೆಲಸ ಮಾಡಿಕೊಂಡಿರುತ್ತಾನೆ. ಹೀಗಿರುವಾಗ ದಿನಾಂಕ: 04/05/2021 ರಂದು  ರಾತ್ರಿ 12.00 ಗಂಟೆಗೆ ಕಲಬುರ್ಗಿಯ ಬಸವೇಶ್ವರ ಆಸ್ಪತ್ರೆಯಿಂದ ಕೋವೀಡ್-19 ರೋಗಿಗೆ ಬೀದರ ಸರಕಾರಿ ಆಸ್ಪತ್ರೆಗೆ ಬಿಟ್ಟು ಬರಲು ಬಾಡಿಗೆ ಮೇಲೆ  ದಿನಾಂಕ:05/05/2021 ರಂದು ನಸುಕಿನ ಜಾವ 01.00 .ಎಮ್. ಗಂಟೆಗೆ ಸದರಿ ರೋಗಿಯನ್ನು ಅಂಬುಲುನ್ಸನಲ್ಲಿ ತೆಗೆದುಕೊಂಡು ಹೋಗಿ ಬೀದರ ಜಿಲ್ಲಾಸ್ಪತ್ರೆಗೆ ಬಿಟ್ಟು ಮರಳಿ ಕಲಬುರ್ಗಿಗೆ ಹೋಗುವಾಗ ಅಂಬುಲೆನ್ಸನ್ನು ಮಲ್ಲಿಕಾರ್ಜುನನು ಚಲಾಯಿಸುತ್ತಿದ್ದು, ಫಿರ್ಯಾದಿಯು ಅಂಬುಲೆನ್ಸನಲ್ಲಿ ಹಿಂದೆ ಮಲಗಿದ್ದು  ದಿನಾಂಕ:05/05/2021 ರಂದು ನಸುಕಿನ ಜಾವ 05.00 .ಮ್. ಗಂಟೆ ಸುಮಾರಿಗೆ ರಾಹೆ ನಂ:50 ಹುಮನಾಬಾದ-ಕಲಬುರ್ಗಿ ರೋಡಿನ ಮೇಲೆ ಮುಸ್ತಾಪೂರ ಶಿವಾರದ ಲಾಲಧರಿ ಮಠದ ಎದುರು ಮಲ್ಲಿಕಾರ್ಜುನನು ಅಂಬುಲುನ್ಸನನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿ ರೋಡಿಬಲಕ್ಕೆ ಮಠದ ಎದುರು ಇರುವ ಅರಳೆ ಮರಕ್ಕೆ ಡಿಕ್ಕಿ ಮಾಡಿ ಅಪಘಾತ ಪಡಿಸಿರುತ್ತಾನೆ. ಅಪಘಾತದಿಂದ  ಬಲಹಣೆಗೆ ರಕ್ತಗಾಯ, ಎಡಹುಬ್ಬಿಗೆ ತರಚಿದಗಾಯ, ಎಡಮೋಳಕಾಲಿಗೆ ತರಚಿದಗಾಯಗಳಾಗಿದ್ದು, ಮಲ್ಲಿಕಾರ್ಜುನನಿಗೆ ಬಲತಲೆಗೆ ಭಾರಿ ರಕ್ತಗಾಯವಾಗಿ, ಎಡಗೈ ರಟ್ಟೆಗೆ ರಕ್ತಗಾಯಗಳಾಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.


ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 52/2021 ಕಲಂ 341, 323, 395, 504, 506 ಐಪಿಸಿ :-

ದಿನಾಂಕ 05/05/2021 ರಂದು 1800 ಗಂಟೆಗೆ ಶ್ರೀ ಟಿ.ಬಾಬು ತಂದೆ ರಾಮಯ್ಯಾ ಸಾ; ಗುಮಲದಿಬ್ಬಾ ತಾ; ಕೌರ ಜಿಲ್ಲಾ; ನೇಲ್ಲುರ (ಎ.ಪಿ.) ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೇನೆಂದರೆ,   ಲಾರಿ ನಂ ಎಪಿ-26/ಟಿ.ಡಿ-4284 ನೇದರ ಮೇಲೆ ಚಾಲಕ ಅಂತ ಕೆಲಸ ಮಾಡುತ್ತಿದ್ದು ಅದೇ ರೀತಿ ಲಾರಿ ಮೇಲೆ ಕ್ಲೀನರ ಅಂತ ವೆಂಕಟರಮನಯ್ಯಾ ತಂದೆ ಶೇನ್ಯಾ ಸಾ; ಗುಮಲದಿಬ್ಬಾ ಅಂತ ಇರುತ್ತಾನೆ. ಸುಮಾರು 5, 6 ವರ್ಷದಿಂದ ಉದಗೀರ ಸಂದೀಪ ದಾಲ ಇಂಡಸಟ್ರಿಜ ದಿಂದ  ಲಾರಿಯಲ್ಲಿ ಲೋಡ ತುಂಬಿಕೊಂಡು ಕಾವೇರಿ, ನೆಲ್ಲುರ ಅಂದ್ರಪ್ರದೇಶಕ್ಕೆ ತೆಗೆದುಕೊಂಡು ಹೋಗುವದು ಮಾಡುತ್ತಿದ್ದು    ಹೀಗಿರಲು ದಿನಾಂಕ 04/05/2021 ರಂದು  ಸಾಯಂಕಾಲ ಲಾರಿ ನಂ. ಎಪಿ-26/ಟಿ.ಡಿ-4284 ನೇದ್ದರಲ್ಲಿ ಉದಗೀರ ನಗರದಲ್ಲಿರುವ ಸಚೀನ ಅಗ್ರೋ ಫುಡ್ಡ ಎಲ್.ಎಲ್. ಪಿ. ಮೀಲದಲ್ಲಿ 30 ಕ್ವಿಂಟಲ್ ಕಡ್ಲೆ ಬ್ಯಾಳೆ ಅ;ಕಿ; 1,98,335/- ರೂ. ಲೋಡಮಾಡಿಕೊಂಡು ನಂತರ ಸಂದೀಪ ದಾಲ ಇಂಡಸಟ್ರಿಜ ಮೀಲನಲ್ಲಿ 225 ಕ್ವಿಂಟಲ ತೊಗರಿ ಬೇಳೆ ಅ;ಕಿ; 23,92,955/- ರೂ ಲೋಡಮಾಡಿಕೊಂಡು  ಸಾಯಂಕಾಲ 7;15 ಗಂಟೆಗೆ  ಲಾರಿ ಚಲಾಯಿಸುತ್ತಾ ಉದಗೀರ ದಿಂದ ಬಿಟ್ಟು ಕಾವೇರಿ, ನೇಲ್ಲುರಕ್ಕೆ ಹೋಗುತ್ತಿರುವಾಗ ದಾರಿಯಲ್ಲಿ ಅಂದರೆ ಉದಗೀರ-ಬೀದರ ರೋಡಿನ ಮೇಲೆ ವಳಸಂಗ ಕ್ರಾಸ್ ಹತ್ತಿರ ರಾತ್ರಿ 9;30 ಗಂಟೆಯ ಸುಮಾರಿಗೆ  ಲಾರಿಯ ಹಿಂದಿನಿಂದ ಯಾರೋ 05 ಮೋಟಾರ ಸೈಕಲ ಮೇಲೆ 10 ಜನರು ಕುಳಿತು   ಲಾರಿಯ ಮುಂದೆ ಎರಡು ಮೋಟಾರ ಸೈಕಲಗಳು ಬಂದು ಮತ್ತು ಪಕ್ಕದಲ್ಲಿ ಹೋಗುತಿದ್ದ 03 ಮೋಟಾರ ಸೈಕಲ ಮೇಲೆ ಇರುವ ವ್ಯಕ್ತಿಗಳು ನನಗೆ ಅರೆ ಮಾಕೆ ಲವಡೆ ಕೀದರ ಜಾರಹಾಹೈ ಲಾರಿ ರುಕಾದೇ ಅಂತ ಬೈದು ಅಡ್ಡಗಟ್ಟಿದ್ದರಿಂದ   ಲಾರಿ ನಿಲ್ಲಿಸಿದಾಗ  05 ಮೋಟಾರ ಸೈಕಲಗಳ ಮೇಲೆ ಇರುವ 10 ಜನರಲ್ಲಿ  05 ಜನರು ಲಾರಿಯ ಕ್ಯಾಬಿನದಲ್ಲಿ ಬಂದು ನನಗೆ ಮತ್ತು ಲಾರಿ ಕ್ಲೀನರ ವೆಂಕಟರಮನಯ್ಯಾ ರವರಿಗೆ ಕೈಯಿಂದ ಮುಖದ ಮೇಲೆ ಹೊಡೆದು  ಒಬ್ಬ ವ್ಯಕ್ತಿ ಲಾರಿ ಚಲಾಯಿಸುತ್ತಾ ಸ್ವಲ್ಪ ಮುಂದೆ ಒಯ್ದು ಲಾರಿ ಟರ್ನ ಮಾಡಿಸಿಕೊಂಡು ನಿಲ್ಲಿಸಿ, ಫಿರ್ಯಾದಿಗೆ ಮತ್ತು ಕ್ಲೀನರಗೆ ಲಾರಿಯ ಕೆಳಗೆ ಇಳಿಸಿಕೊಂಡು ರೋಡಿನ ಪಕ್ಕದಲ್ಲಿರುವ ತಗ್ಗಿನಲ್ಲಿ ಒಯ್ದು ನನ್ನ ಮೈಮೇಲೆ ಇರುವ ಲುಂಗಿ ಹರಿದು ನನ್ನ ಮತ್ತು ಲಾರಿ ಕ್ಲೀನರನ ಕೈಕಾಲು ಲುಂಗಿಯಿಂದ ಕಟ್ಟಿ ಸಾಲೆ ಚಿಲ್ಲಾಯೆತೋ ತುಮಕೊ ನಹಿ ಛೋಡತೆ  ಅಂತ ಹೆದರಿಸಿ ಲಾರಿಯಲ್ಲಿರುವ 30 ಕ್ವೀಂಟಲ ಕಡ್ಲೆ ಬ್ಯಾಳೆ ಮತ್ತು 225 ಕ್ವೀಂಟಲ ತೊಗರಿ ಬೇಳೆ ಹೀಗೆ ಒಟ್ಟು ಅ;ಕಿ; 25, 91,290/-ರೂ, ದಷ್ಟು ಲೋಡಿನ ಸಮೇತ ಲಾರಿ ಎಪಿ-26/ಟಿ.ಡಿ-4284 ನೇದ್ದನ್ನು ದೋಚಿಕೊಂಡು ಹೋಗಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Wednesday, May 5, 2021

BIDAR DISTRICT DAILY CRIME UPDATE 05-05-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 05-05-2021

 

ಬೀದರ ಗ್ರಾಮಿಣ ಪೊಲೀಸ್ ಠಾಣೆ ಯು.ಡಿ.ಆರ್ ನಂ. 04/2021, ಕಲಂ. 174 ಸಿ.ಆರ್.ಪಿ.ಸಿ :-

ಫಿರ್ಯಾದಿ ಮೋಹ್ಮದ ಅಲಿ ತಂದೆ ಇಬ್ರಾಹಿಂಸಾಬ ವಯ: 38 ವರ್ಷ, ಜಾತಿ: ಮುಸ್ಲಿಂ, ಸಾ: ಮಲಕಾಪೂರ, ಬೀದರ ರವರ ತಾಯಿ ಶಾದಕಬೀ ಗಂಡ ಇಬ್ರಾಹಿಂಸಾಬ ವಯ: 75 ವರ್ಷ ರವರಿಗೆ ಎರಡು  ವರ್ಷದಿಂದ ಹೊಟ್ಟೆ ನೋವು ಇದ್ದು ಖಾಸಗಿ ಚಿಕಿತ್ಸೆ ಕೋಡಿಸದರೂ ಕಡಿಮೆ ಆಗಿರುವುದಿಲ್ಲ, ಹೀಗಿರುವಾಗ ದಿನಾಂಕ 04-05-2021 ರಂದು ಫಿರ್ಯಾದಿಯವರ ತಾಯಿ ರವರು ತನ್ನ ಹೊಟ್ಟೆ ನೋವು ತಾಳಲಾರದೇ ನೇಣು ಹಾಕಿಕೊಂಡು ಮರಣ ಹೊಂದಿರುತ್ತಾರೆ, ಅವರ ಸಾವಿನ ಬಗ್ಗೆ ಯಾರ ಮೇಲೆ ಯಾವುದದೇ ದೂರು, ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳೀಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಕೆ ಕೈಗೊಳ್ಳಲಾಗಿದೆ.

 

ಧನ್ನೂರ ಪೊಲೀಸ ಠಾಣೆ ಅಪರಾಧ ಸಂ. 43/2021, ಕಲಂ. 304(ಎ) ಐಪಿಸಿ :-

ದಿನಾಂಕ 04-05-2021 ರಂದು ಫಿರ್ಯಾದಿ ಪುಲ್ಲಾಬಾಯಿ ಗಂಡ ದಿಗಂಬರ ಇರಜೊಲೆ ವಯ: 53 ವರ್ಷ ಸಾ: ನೆಲವಾಡ, ತಾ: ಭಾಲ್ಕಿ ದಿನಾಂಕ  04-05-2021 ನೆಲವಾಡ ಗ್ರಾಮದ ಬೀದಿಯಲ್ಲಿ ರಾಜೇಂದ್ರ ಕಂದಗೂಳೆ ಮನೆಯ ಎದುರಿಗೆ ರಸ್ತೆಯ ಮೇಲೆ ಊರಿಗೆ ಬಂದ ಅಳಿಯನಾದ ಪುಂಡಲೀಕ ಇವರ ಆಟೋದಲ್ಲಿ ಜೋಳಹಾಕಲು ಫಿರ್ಯಾದಿಯವರ ಮಗನಾದ ಅಂಕುಶ ತಂದೆ ದಿಗಂಬರ ಸಾ: ನೆಲವಾಡ, ತಾ: ಭಾಲ್ಕಿ ಇತನು ಹೋದಾಗ ಅಲ್ಲಿ ರಸ್ತೆಯ ಮೇಲಿಂದ ಹಾದು ಹೋದ ವಿದ್ಯುತ ತಂತಿ ಕಡಿದು ಅಂಕುಶ ಇತನ ಮೈಮೇಲೆ ಬಿದ್ದ ಪ್ರಯುಕ್ತ ಆತ ನೆಲದ ಮೇಲೆ ಬಿದ್ದಿರುತ್ತಾನೆ, ಆಗ ಅಳಿಯ ಪುಂಡಲೀಕ ಇತನು ಕಟ್ಟಿಗೆಯಿಂದ ವಿದ್ಯುತ ತಂತಿ ಸರಿಸಿ ಅಂಕುಶ ಇತನಿಗೆ ತನ್ನ ಆಟೋದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಹಳ್ಳಿಖೇಡ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದಾಗ ಚಿಕಿತ್ಸೆ ಫಲಕಾರಿಯಾಗದೇ ಅಂಕುಶ ಇತನು ಮೃತಪಟ್ಟಿರುತ್ತಾನೆ, ಕಡಿದು ರಸ್ತೆಯಲ್ಲಿ ಬಿದ್ದ ವಿದ್ಯುತ ತಂದತಿ ಬಹಳ ಹಳೆಯದಿದ್ದು, ಅದನ್ನು ದುರಸ್ತಿ ಮಾಡುವಂತೆ ಊರಿನ ಜನರು ಕೆಇಬಿ ಲೈನಮೇನ್ ಮತ್ತು ಅಧಿಕಾರಿಯವರಿಗೆ ಹೇಳಿದ್ದು, ಅವರು ದುರಸ್ತಿ ಮಾಡದೇ ನಿಷ್ಕಾಳಜಿ ಮಾಡಿರುತ್ತಾರೆ ಅವರ ನಿಷ್ಕಾಳಜಿಯಿಂದ ವಿದ್ಯುತ ತಂತಿ ಕಡಿದು ನನ್ನ ಮಗನ ಮೇಲೆ ಬಿದ್ದಿ ಪ್ರಯುಕ್ತ ಅಂಕುಶ ಇತನು ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಗಾಂಧಿ ಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 70/2021, ಕಲಮ. 379 ಐಪಿಸಿ :-

ಯಾರೋ ಅಪರಿಚಿತ ಕಳ್ಳರು ದಿನಾಂಕ 11-04-2021 ರಂದು 0700 ಗಂಟೆಯಿಂದ 1030 ಗಂಟೆಯ ಮಧ್ಯದ ಅವಧಿಯಲ್ಲಿ ಫಿರ್ಯಾದಿ ರೋಹನ ತಂದೆ ಶಿವಕುಮಾರ ಮುದ್ದಾ ವಯ: 26 ವರ್ಷ, ಜಾತಿ: ಲಿಂಗಾಯತ, ಸಾ: ಕೈಲಾಸ ನಗರ ಗುಂಪಾ, ಬೀದರ ರವರು ಬಿ.ವಿ.ಬಿ ಕಾಲೇಜ ಆವರಣದಲ್ಲಿ ನಿಲ್ಲಿಸಿದ ತನ್ನ ಹೀರೋ ಸ್ಪ್ಲೆಂಡರ್ ಪ್ರೋ ಮೋಟಾರ ಸೈಕಲ್ ನಂ. ಕೆಎ-38/ಎಲ್-7717, ಚಾಸಿಸ್ ನಂ. MBLHA10ASCHE13052, ಇಂಜಿನ್ ನಂ. HA10ELCHE15527, ಮಾಡಲ್ 2012 ಹಾಗೂ 26,000/- ರೂ. ನೇದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 04-05-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 51/2021, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 04-05-2021 ರಂದು ಫಿರ್ಯಾದಿ ಶಿವಾಜಿ ತಂದೆ ದತ್ತಾತ್ರಿ ಸಿಂದೆ ಸಾ: ಭಾತಂಬ್ರಾ, ತಾ: ಭಾಲ್ಕಿ ರವರು ತನ್ನ ಗೆಳೆಯರಾದ ರಿತೇಷ ತಂದೆ ಮಹಾದೇವ, ಆಕಾಶ ತಂದೆ ಸುಭಾಷರಾವ ಬಿರಾದಾರ ರವರು ಮೋಟಾರ ಸೈಕಲ್ ನಂ. ಎಂ.ಎಚ್.-24/ಎ.ಎನ್-6090 ನೇದರ ಮೇಲೆ ತಮ್ಮ ಹೊಲಕ್ಕೆ ಹೋಗಿ ಹೊಲದಲ್ಲಿ ಕುಳಿತು ಅದೇ ಮೋಟಾರ ಸೈಕಲ್ ಮೇಲೆ ಮೂವರು ಕುಳಿತು ಮೋಟಾರ ಸೈಕಲ್ ರಿತೇಷ ತಂದೆ ಮಹಾದೇವ ಈತನು ಚಲಾಯಿಸುತ್ತಾ ಹೊಲದಿಂದ ಭಾತಂಬ್ರಾ ಗ್ರಾಮದ ಮನೆಗೆ ಬರುವಾಗ ಭಾತಂಬ್ರಾ-ಹುಲಸೂರ ರೋಡಿನ ಮೇಲೆ ಭವಾನಿ ಮಂದಿರ ಹತ್ತಿರ ಎದುರುಗಡೆಯಿಂದ ಅಂದರೆ ಭಾತಂಬ್ರಾ ಕಡೆಯಿಂದ ಕಾರ ನಂ. ಕೆಎ-17/ಎನ್-0465 ನೇದರ ಚಾಲಕನಾದ ಆರೋಪಿ ಸಂಗಮೇಶ ತಂದೆ ರಮೇಶ ಸಾ: ಹುಲಸೂರ ಇತನು ತನ್ನ ಕಾರನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯದಿ ಕುಳಿತ ಮೋಟಾರ್ ಸೈಕಲಗೆ ಡಿಕ್ಕಿ ಮಾಡಿ ತನ್ನ ಕಾರನ್ನು ರೋಡಿನ ಬದಿಯಲ್ಲಿ ಪಲ್ಟಿ ಮಾಡಿಸಿ ಕಾರ ಬಿಟ್ಟು ಓಡಿ ಹೋಗಿರುತ್ತಾನೆ,  ಸದರಿ ಅಪಘಾತದಿಂದ ಪಿರ್ಯಾದಿಯ ಬಲಾಗಾಲ ಮೋಳಕಾಲ ಕೆಳಗೆ ಭಾರಿ ರಕ್ತಗಾಯವಾಗಿ ಕಾಲು ಮುರಿದಿರುತ್ತದೆ ಮತ್ತು  ರಿತೇಷ ಈತನ ಬಲಗಾಲ ಮೋಳಕಾಲ ಕೆಳಗೆ ಭಾರಿ ಗುಪ್ತಗಾಯವಾಗಿರುತ್ತದೆ ಮತ್ತು ಆಕಾಶ ಇವನ ಬಲಗಾಲ ಮೋಳಕಾಲ ಕೆಳಗೆ ಭಾರಿ ಗುಪ್ತಗಾಯವಾಗಿರುತ್ತದೆ, ಅದೇ ವೇಳೆಗೆ ಬಳಿರಾಮ ತಂದೆ ದತ್ತಾತ್ರಿ ಸಿಂದೆ ಮತ್ತು ದತ್ತಾತ್ರಿ ತಂದೆ ನಾಮದೇವ ಅಮದಾಬಾದೆ ರವರು ಸದರಿ ಘಟನೆ ನೋಡಿ ತಕ್ಷಣ ಒಂದು ಖಾಸಗಿ ವಾಹನದಲ್ಲಿ ಮೂವರಿಗೆ ಭಾಲ್ಕಿ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ತನಿಖೆ ಕೈಗೊಳ್ಳಲಾಗಿದೆ.

 

ಕುಶನೂರ ಪೊಲೀಸ್ ಠಾಣೆ ಅಪರಾಧ ಸಂ. 34/2021, ಕಲಂ. 32, 34 ಕೆ.ಇ ಕಾಯ್ದೆ :-

ದಿನಾಂಕ 04-05-2021 ರಂದು ಸಂಗಮ ಕ್ರಾಸ್ ಕಡೆಯಿಂದ ಒಬ್ಬ ವ್ಯಕ್ತಿ ಪ್ಲಾಸ್ಟಿಕ್ ಚೀಲದಲ್ಲಿ ಅಕ್ರಮವಾಗಿ ಸರಾಯಿ ಬಾಟಲಗಳನ್ನು ಮಾರಾಟ ಮಾಡಲು ತೆಗೆದುಕೊಂಡು ಬರುತ್ತಿದ್ದಾನೆಂದು ರೇಣುಕಾ ಪಿಎಸ್ಐ(ಅವಿ) ಕುಶನೂರ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಸಂಗಮ ಗ್ರಾಮದ ಸರಕಾರಿ ಶಾಲೆಯ ಕಂಪೌಂಡ ಮರೆಯಾಗಿ ಕಾಯುತ್ತಾ ನಿಂತುಕೊಂಡಾಗ ಆರೋಪಿ ಚಂದ್ರಪ್ಪಾ ತಂದೆ ಸಿದ್ರಾಮ ಮೇತ್ರೆ ವಯ: 60 ವರ್ಷ, ಜಾತಿ: ಕುರುಬ, ಸಾ: ಸಂಗಮ ಗ್ರಾಮ ಇತನು ತನ್ನ ತಲೆಯ ಮೇಲೆ ಒಂದು ಪ್ಲಾಸ್ಟಿಕ್ ಚೀಲ ಇಟ್ಟುಕೊಂಡು ಬಂದಿದ್ದು ಸದರಿ ಆರೋಪಿತನ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ನಂತರ ಸದರಿಯವನಿಗೆ ತನ್ನ ತಲೆಯ ಮೇಲಿರುವ ಚೀಲದಲ್ಲಿ ಏನಿದೇ ಅಂತ ವಿಚಾರಿಸಲಾಗಿ ಸಮಂಜಷವಾದ ಉತ್ತರ ನೀಡಲಿಲ್ಲ, ನಂತರ ಚೀಲ ತೆಗೆದು ನೋಡಲು ಅದರಲ್ಲಿ ಸರಾಯಿ ತುಂಬಿದ ಪ್ಲಾಸ್ಟಿಕ್ ಬಾಟಲಗಳಿದ್ದು ಹೊರಗೆ ತೆಗೆದು ನೋಡಲು ಯು.ಎಸ್ ವಿಸ್ಕಿ 90 ಎಂ.ಎಲ್110 ಬಾಟಲಗಳು ಅ.ಕಿ 3,850/- ರೂಪಾಯಿ ಇದ್ದು, ನಂತರ ಸದರಿ ಸರಾಯಿ ಬಾಟಲಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

Sunday, May 2, 2021

BIDAR DISTRICT DAILY CRIME UPDATE 02-05-2021


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 02-05-2021

ಗಾಂಧಿಗಂಜ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 68/2021 ಕಲಂ 32, 34 ಕೆ.. ಕಾಯ್ದೆ ;-

ದಿನಾಂಕ 01/05/2021 ರಂದು 2030 ಗಂಟೆಗೆ ಶ್ರೀ ಜಗದೀಶ ನಾಯ್ಕ ಪಿ.ಎಸ್.ಐ (ಕಾಸು-1) ರವರು ಪೊಲೀಸ ಠಾಣೆಯಲ್ಲಿದ್ದಾಗ, ಬೀದರ ನಗರದ ವಡ್ಡರ ಕಾಲೋನಿಯಲ್ಲಿ  ಅನಧಿಕೃತವಾಗಿ ಸರಾಯಿ ಮಾರಾಟ ಮಾಡುತ್ತಿದ್ದ ಬಗ್ಗೆ ಖಚೀತ ಮಾಹಿತಿ ಬಂದ ಮೇರೆಗೆ ಪಂಚರಾದ ಪಂಚರು ಹಾಗೂ ಸಿಬ್ಬಂದಿಯೊಂದಿಗೆ 1830 ಗಂಟೆಗೆ ಸ್ಥಳಕ್ಕೆ ಹೋಗಿ ಅಲ್ಲಿ ಅನಧಿಕೃತವಾಗಿ ಸರಾಯಿ ಮಾರಾಟ ಮಾಡುತ್ತಿದ್ದ ಜನರಾದ 1) ರವಿಕುಮಾರ ತಂದೆ ಪ್ರಭು ಚಿಟ್ಟಾದೊರ ವಯ 28 ವರ್ಷ ಉದ್ಯೋಗ: ಖಾಸಗಿ ಕಂಪನಿ ಕೆಲಸ ಜಾತಿ ಕುರುಬ ಸಾ: ಕುತ್ತಾಬಾದ 2) ಶಿವಕುಮಾರ ಪ್ರಭು ಚಿಟ್ಟಾದರ ವಯ 35 ವರ್ಷ ಜಾತಿ: ಕುರುಬ ಉದ್ಯೋಗ: ಕೂಲಿ ಸಾ: ಕುತ್ತಾಬಾದ 3) ಈರಮ್ಮಾ ಗಂಡ ಮಾಣಿಕ ವಯ 55 ವರ್ಷ ಜಾತಿ: ವಡ್ಡರ ಉದ್ಯೋಗ: ಕೂಲಿ ಕೆಲಸ ಸಾ: ವಡ್ಡರ ಕಾಲೋನಿ ಬೀದರ ರವರ ಮೇಲೆ ದಾಳಿ ಮಾಡಿ ಸದರಿಯವರ ವಶದಲ್ಲಿ ಇದ್ದ 1) 90 ಎಂ.ಎಲ್. ಉಳ್ಳ ಓರಿಜಿನಲ್ ಚಾಯಿಸ್ಸ ವಿಸ್ಕಿ ಒಟ್ಟು 79 ಪ್ಯಾಕೇಟಗಳು,  ಒಟ್ಟು ಕಿಮ್ಮತ ರೂ. 2775.25/- ಇರುತ್ತದೆ. 2) 180 ಎಂ.ಎಲ್ ಉಳ್ಳ ಓರಿಜಿನಲ್ ಚಾಯಿಸ್ಸ ವಿಸ್ಕಿ ಒಟ್ಟು 10 ಪ್ಯಾಕೇಟ ಒಟ್ಟು ಕಿಮ್ಮತ್ತ ರೂ. 702.6/- ಇರುತ್ತದೆ. 3) 180 ಎಂ.ಎಲ್. ಉಳ್ಳ ಮೇಗಡೌಲ್ ನಂ.1 ಲಕ್ಷರಿ ವಿಸ್ಕಿಯ 4 ಬಾಟಲಗಳು ಒಟ್ಟು ಕಿಮ್ಮತ್ತ ರೂ. 792.92/- ನೇದ್ದವುಗಳ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು,ಆರೋಪಿತರಿಗೆ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 40/2021 ಕಲಂ 457, 380 ಐಪಿಸಿ :-      

ದಿನಾಂಕ 01-05-2021 ರಂದು 14:30 ಗಂಟೆಗೆ ಫಿರ್ಯಾದಿ ಶ್ರೀಮತಿ ಕಲಾವತಿ ಗಂಡ ಕಾಶಿನಾಥ ಬೆಂಡೆ ವಯ 53 ವರ್ಷ   ಪ್ರಭಾರಿ ಮುಖ್ಯ ಗುರುಗಳು ಸರ್ಕಾರಿ ಉರ್ದು ಹಿರಿಯ ಪ್ರಾಥಾಮಿಕ ಶಾಲೆ ಭೋಸಗಾ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದರ ಸಾರಾಂಶವೆನೆಂದರೆ, ಕೋವಿಡ್-19 ರೋಗದ ಪ್ರಯುಕ್ತ ಶಾಲೆಗಳಿಗೆ ರಜೆ ಇದ್ದುದ್ದರಿಂದ   ದಿನಾಂಕ 26/04/2021 ರಂದು ಶಾಲೆಯ ಎಲ್ಲಾ ಬಾಗಿಲುಗಳು ಮುಚ್ಚಿ ಕೀಲಿ ಹಾಕಿದ್ದು ಇರುತ್ತದೆ. ಹೀಗಿರುವಾಗ  ದಿನಾಂಕ 01/05/2021 ರಂದು ಬೆಳಗ್ಗೆ 11 ಗಂಟೆಗೆ   ಶಾಲೆಯ ಸಹಶಿಕ್ಷಕರಾದ ಮೈನೋದ್ದಿನ ರವರು ನನಗೆ ಪೋನ್ ಮಾಡಿ ತಿಳಿಸಿದ್ದೆನೆಂದರೆ, ಯಾರೋ ಕಳ್ಳರು   ಶಾಲೆ ಅಡುಗೆ ಕೋಣೆಯ ಬಾಗಿಲಿನ ಕೊಂಡಿ ಮುರಿದು ಒಳಗಡೆ ಇದ್ದ ಅಡುಗೆ ಸಾಮಾನುಗಳು ತಗೆದುಕೊಂಡು ಹೋಗಿದ್ದಾರೆ ಅಂತಾ   ಅಂತಾ ಹೆಳಿದಾಗ  ಫಿರ್ಯಾದಿರವರು ಹೋಗಿ ನೋಡಿದಾಗ   ಕೋಣೆಯಲ್ಲಿದ್ದ ಎರಡು ಅಡುಗೆ ಸಿಲಿಂಡಗಳು ಅ: ಕಿ 15000/- ರೂಪಾಯಿ, ಒಂದು ಭೋಗೊಣಿ ಅ: ಕಿ: 5000/- ರೂಪಾಯಿ, ಒಂದು ಕುಕ್ಕರ ಅ:ಕಿ 4000/- ರೂಪಾಯಿ ಹಿಗೆ ಒಟ್ಟು 24000/- ರೂಪಾಯಷ್ಟು ವಸ್ತುಗಳು ಕಳ್ಳತನವಾಗಿದ್ದು ಕಂಡು ಬಂದಿರುತ್ತದೆ. ಯಾರೋ ಕಳ್ಳರು ದಿನಾಂಕ 26/04/2021 ರಂದು ರಾತ್ರಿ 9 ಗಂಟೆಯಿಂದ ದಿನಾಂಕ 01/05/2021 ರಂದು ಬೆಳಗಿನ ಜಾವ 4 ಗಂಟೆಯ ಮಧ್ಯ ರಾತ್ರಿ ವೇಳೆಯಲ್ಲಿ ಮೇಲೆ ತೋರಿಸಲಾದ ವಸ್ತಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.