Police Bhavan Kalaburagi

Police Bhavan Kalaburagi

Saturday, June 11, 2016

BIDAR DISTRICT DAILY CRIME UPDATE 11-06-2016




¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 11-06-2016

¨ÉêÀļÀSÉÃqÁ ¥ÉưøÀ oÁuÉ AiÀÄÄ.r.Dgï £ÀA. 03/2016, PÀ®A 174 ¹.Dgï.¦.¹ :-
¦üAiÀiÁð¢ gÀhÄgÀt¥Áà vÀAzÉ ªÀÄ®è¥Áà ºÀ«Äî¥ÀÆgÀ ¸Á: ¨ÉêÀļÀSÉÃqÁ gÀªÀgÀ »jAiÀÄ ªÀÄUÀ£ÁzÀ C¤Ã®PÀĪÀiÁgÀ vÀAzÉ gÀhÄgÀt¥Áà ºÀ«Äî¥ÀÆgÀ ªÀAiÀÄ: 23 ªÀµÀð, eÁ: ¸ÀªÀÄUÁgÀ, ¸Á: ¨ÉêÀļÀSÉÃqÁ EvÀ£ÀÄ PÀÄrvÀzÀ ZÀlPÉÌ CAnPÉÆArzÀÝ ºÁUÀÆ EªÀ¤UÉ DUÁÎUÀ ºÉÆmÉÖ £ÉÆÃªÀÅ §gÀÄwÛvÀÄ, ¸ÀĪÀiÁgÀÄ 8 wAUÀ¼À »AzÉ C¤Ã®PÀĪÀiÁgÀ EvÀ£ÀÄ PÀÄrzÀ CªÀİ£À°è vÀªÀÄä ªÀÄ£ÉAiÀÄ°è £ÉÃtÄ ºÁQPÉÆ¼Àî®Ä ¥ÀæAiÀÄvÀß ¥ÀnÖgÀÄvÁÛ£É CzÀ£ÀÄß £ÉÆÃr ¦üAiÀiÁ𢠪ÀÄvÀÄÛ ¦üAiÀiÁð¢AiÀÄ ºÉAqÀw eÉʲæÃ ©r¹PÉÆArgÀÄvÁÛgÉ, »ÃVgÀĪÁUÀ ¢£ÁAPÀ 10-06-2016 gÀAzÀÄ ¦üAiÀiÁð¢, ¦üAiÀiÁð¢AiÀÄ ºÉAqÀw ºÁUÀÆ ªÀÄUÀ ²ªÀPÀĪÀiÁgÀ Hl ªÀiÁrzÀÄÝ, C¤Ã®PÀĪÀiÁgÀ EvÀ£ÀÄ CqÀÄUÉ ªÀÄ£ÉAiÀÄ°è ªÀÄ®VPÉÆArzÀÄÝ Hl ªÀiÁqÀ®Ä J©â¹zÁUÀ £ÀAvÀgÀ ªÀiÁqÀ®Ä w½¹zÀ£ÀÄ, ¦üAiÀiÁð¢, ¦üAiÀiÁð¢AiÀÄ ºÉAqÀw ºÁUÀÆ ªÀÄUÀ ²ªÀPÀĪÀiÁgÀ ªÀÄ£ÉAiÀÄ ¥ÀqÀ¸Á¯ÉAiÀÄ°è ªÀÄ®VPÉÆAqÁUÀ NªÉÄä¯É CqÀÄUÉ ªÀģɬÄAzÀ qÀ©â ©zÀÝ ±À§Ý §A¢gÀĪÀåzÀjAzÀ ¦üAiÀiÁ𢠪ÀÄvÀÄÛ ¦üAiÀiÁð¢AiÀÄ ºÉAqÀw ºÉÆÃV ¨ÁV®Ä vÉgÉzÀÄ £ÉÆÃqÀ¯ÁV C¤Ã®PÀĪÀiÁgÀ EvÀ£ÀÄ MAzÀÄ ¹ÃgɬÄAzÀ ªÀÄ£ÉAiÀÄ vÀUÀqÀzÀ PɼÀUÉ ºÁQzÀ MAzÀÄ ¥ÉʦUÉ £ÉÃtÄ ºÁQPÉÆAqÀÄ ªÀÄÈvÀ¥ÀnÖgÀÄvÁÛ£É, CzÀ£ÀÄß £ÉÆÃr ¦üAiÀiÁð¢AiÀÄÄ aÃgÁqÀĪÀÅzÀ£ÀÄß PÉý ªÀÄ£ÉAiÀÄ CPÀÌ-¥ÀPÀÌzÀªÀgÁzÀ gÁdPÀĪÀiÁgÀ ¥ÀÄ£ÉÃPÀgÀ, UÉÆÃ¥Á® ¹AzÀ§AzÀV, ªÉÆÃºÀ£ÀgÁAiÀÄ gÀÄPÀät gÀªÀgÀÄ §AzÀÄ £ÉÆÃrgÀÄvÁÛgÉ, C¤®PÀĪÀiÁgÀ EvÀ£À ¸Á«£À §UÉÎ AiÀiÁgÀ ªÉÄÃ¯É AiÀiÁªÀÅzÉà vÀgÀºÀzÀ ¸ÀA±ÀAiÀÄ EgÀĪÀÅ¢®è CAvÀ PÉÆlÖ ¦üAiÀiÁð¢AiÀĪÀgÀ CfðAiÀÄ ¸ÁgÁA±ÀzÀ ªÉÄÃgÉUÉ UÀÄ£Éß zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ªÀÄ£ÁßJSÉÃ½î ¥ÉÆ°Ã¸ï oÁuÉ UÀÄ£Éß £ÀA. 78/2016, PÀ®A 279, 337, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 10-06-2016 ರಂದು ಫಿರ್ಯಾದಿ ಮಸ್ತಾನ ತಂದೆ ಅಕ್ಬರ ಪಟೇಲ್ ವಯ: 24 ವರ್ಷ, ಸಾ: ವಡ್ಡನಕೇರಾ ಇವರು ಮೊಟಾರ ಸೈಕಲ ನಂ. ಕೆಎ-38/ಟಿಇ-000437 ನೇದರ ಹಿಂದೆ ತನ್ನ ತಾಯಿ ತಾಹೇರಬೀ ಇವರಿಗೆ ಕೂಡಿಸಿಕೊಂಡು ತನ್ನ ಗ್ರಾಮವಾದ ವಡ್ಡನಕೇರಾ ಕಡೆಯಿಂದ ಮನ್ನಾಏಖೇಳ್ಳಿ ಕಡೆಗೆ ಬರುವಾಗ ಎನ್.ಹೆಚ್. 9 ರೋಡಿನ ಮೇಲೆ ಗಾಂಧಿನಗರ ಮತ್ತು ತಾಳಮಡಗಿ ಗ್ರಾಮದ ಮಧ್ಯ ರೋಡಿನಲ್ಲಿ ಬಂದಾಗ ಹುಮನಾಬಾದ ಕಡೆಯಿಂದ ಲಾರಿ ನಂ. ಎಮ್.ಹೆಚ್-12/ಹೆಚ್.ಡಿ-5873 ನೇದರ ಚಾಲಕನಾದ ಆರೋಪಿಯು ತನ್ನ ಲಾರಿಯನ್ನು ಅತೀವೆಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೊಟಾರ ಸೈಕಲಗೆ ಡಿಕ್ಕಿ ಮಾಡಿದ್ದರಿಮದ ಅಪಘಾತ ಸಂಭವಿಸಿದ್ದು, ಸದರಿ ಡಿಕ್ಕಿಯಿಂದ ಫಿರ್ಯಾದಿಯವರ ತಾಯಿಯ ಎಡಗಡೆ ಕೈ ಮೇಲೆ ಲಾರಿಯ ಟಯರ್ ಹಾಯ್ದು ಸಂಪೂರ್ಣ ಚಪ್ಪಟೆಯಾಗಿ ಎಡಕಪಾಳಕ್ಕೆ ಕಟ್ಟಾಗಿ ಬಲಗಡೆ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾರೆ, ಫಿರ್ಯಾದಿಯ ಬಲಹಣೆಯಿಂದ ಗಲ್ಲದವರೆಗೆ, ಎಡ ಮುಂಗೈ ಮೇಲೆ ರಕ್ತಗಾಯವಾಗಿರುತ್ತದೆ, ಈ ಘಟನೆಯನ್ನು ಅದೇ ರಸ್ತೆಯಿಂದ ಹೊಗುತ್ತಿದ್ದ ಜನರು ನೋಡಿ 108 ಅಂಬುಲೇನ್ಸ ಕರೆಯಿಸಿ ಫಿರ್ಯಾದಿಗೆ ಚಿಕಿತ್ಸೆ ಕುರಿತು ಮನ್ನಾಏಖೇಳ್ಳಿ ಆಸ್ಪತ್ರೆಗೆ ತಂದು ದಾಖಲಿಸಿರುತ್ತಾರೆ, ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಆರೋಪಿಯು ತನ್ನ ಲಾರಿ ಸಮೇತ ಓಡಿ ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 66/2016, PÀ®A 279, 337, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 10-06-2016 ರಂದು ಫಿರ್ಯಾದಿ ಪ್ರಕಾಶ ತಂದೆ ಬನ್ನೆಪ್ಪಾ ಬೇಳಕೇರಿ ವಯ 32 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ದುಬಲಗುಂಡಿ ರವರು ಹಳ್ಳಿಖೇಡ (ಬಿ) ಗ್ರಾಮದಿಂದ ದುಬಲಗುಂಡಿ ಗ್ರಾಮಕ್ಕೆ ಹೋಗುವಾಗ ಹಳ್ಳಿಖೇಡ (ಬಿ) ಗ್ರಾಮದ ಹಿಬಾರೆ ಫಾಮ್ ಹೌಸ ಹತ್ತಿರ ಹಿರೋ ಹೊಂಡಾ ಸ್ಲೇಂಡರ್ ಪ್ಲಸ್ ನಂ. ಕೆ.ಎ-39/ಜೆ-1414 ನೇದರ ಮೇಲೆ ಇಬ್ಬರು ವ್ಯಕ್ತಿಗಳು ಬೀದರ ಕಡೆಯಿಂದ ಹುಮನಾಬಾದಕ್ಕೆ ಹೋಗುವಾಗ ಎದುರುಗಡೆಯಿಂದ ಕಾರ ನಂ: ಎಂ.ಹೆಚ್-09/ಎಸ್-6626 ನೇದರ ಚಾಲಕನಾದ ಆರೊಪಿಯು ತನ್ನ ಕಾರನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಮೋಟಾರ ಸೈಕಲಿಗೆ ಡಿಕ್ಕಿ ಮಾಡಿ ಕಾರ ಅಲ್ಲಿಯೇ ನಿಲ್ಲಿಸಿ ಓಡಿ ಹೋಗಿರುತ್ತಾನೆ, ಫಿರ್ಯಾದಿಯು ತನ್ನ ಆಟೋ ನಿಲ್ಲಿಸಿ ಕೆಳಗೆ ಇಳಿದು ನೋಡಲು ಡಿಕ್ಕಿಯಿಂದ ಮೋಟಾರ ಸೈಕಲದಿಂದ ಕೆಳಗೆ ಬಿದ್ದ ವ್ಯಕ್ತಿಗಳನ್ನು ನೋಡಲು ಫಿರ್ಯಾದಿಯ ಅಣ್ಣ ತುಕಾರಾಮ ಮತ್ತು ಅವರ ಗೆಳೆಯ ಸೋಪಾನರಾವ ಇದ್ದು ಡಿಕ್ಕಿಯಿಂದ ತುಕಾರಾಮ ಇತನಿಗೆ ಬಲಗಾಲ ಮೊಳಕಾಲ ಕೆಳಗೆ ಹತ್ತಿರ ಭಾರಿ ರಕ್ತಗಾಯವಾಗಿ ಮುರಿದಿದ್ದು, ಬಲ ಪಾದಕ್ಕೆ ಭಾರಿ ರಕ್ತಗಾಯವಾಗಿರುತ್ತದೆ, ಸೋಪಾನರಾವ ಇವರಿಗೆ ನೋಡಲು ಎಡಗಾಲ ಪಾದಕ್ಕೆ ಎಡಗೈ ಮುಂಗೈ ಮೇಲೆ ಭಾರಿ ರಕ್ತಗಾಯವಾಗಿರುತ್ತದೆ, ಮೋಟಾರ ಸೈಕಲ ಸೋಪಾಲನರಾವ ಚಲಾಯಿಸುತ್ತಿದ್ದು, ಹಿಂದುಗಡೆ ತುಕಾರಾಮ ಇತನು ಕುಳಿದುಕೊಂಡು ಬೀದರದಿಂದ ಹುಮನಾಬಾದಕ್ಕೆ ಹೋಗುತ್ತಿದ್ದರು ಅಂತ ಕೊಟ್ಟ ಫಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

Kalaburagi District Reported Crimes

ಅಪಘಾತ ಪ್ರಕರಣ :
ಜೇವರಗಿ ಠಾಣೆ : ಶ್ರೀ ಕೃಷ್ಣಾಜಿ ತಂದೆ ಶಂಕರರಾವ್ ಕುಲಕರ್ಣಿ ಸಾ: ವಿವೇಕ ನಗರ ವಿದ್ಯಾಗಿರಿ ದಾರವಾಡ ಇದ್ದು ನನ್ನ ಖಾಸಗಿ ಕೆಲಸದ ಸಲುವಾಗಿ ದಾರವಾಡದಿಂದ ನಾನು ಮತ್ತು ನಮ್ಮ ತಮ್ಮ ಶ್ರೀನಿವಾಸ ಕುಲಕರ್ಣಿ ನಮ್ಮೂರ ಮೂಂಜುನಾಥ, ರಾಜು ಎಲ್ಲರೂ ಕೂಡಿಕೊಂಡು ನಮ್ಮ ಕಾರ್ ಡ್ರೈವರ್ ಜಾವೇದ್ ಸಾ: ದಾರವಾಡ ಈತನು ನಡೆಸುವ ನಮ್ಮ ಮಾರುತಿ ಓಮಿನಿ ಕಾರ ನಂ ಕೆಎ 25ಪಿ-6645 ನೇದ್ದರಲ್ಲಿ ಕುಳಿತು ಕಲಬುರಗಿಗೆ ಬಂದಿದ್ದೇವು. ನಂತರ ಸದರಿ ನಮ್ಮ ಖಾಸಗಿ ಕೆಲಸ ಮುಗಿಸಿಕೊಂಡು ಮೊನ್ನೆ ದಿನಾಂಕ: 05.06.2016 ರಂದು ಸಾಯಂಕಾಲ ಸಮಯದಲ್ಲಿ ಜೇವರಗಿ ಮುಖಾಂತರ ಮರಳಿ ದಾರವಾಡಕ್ಕೆ ಹೋಗುತ್ತಿದ್ದೇವು. ಸಾಯಂಕಾಲ 6.45 ಗಂಟೆ ಸುಮಾರಿಗೆ ಜೇವರಗಿ ಪಟ್ಟಣದ ಹೊರವಲಯದ ರೀಲಾಯನ್ಸ ಪೆಟ್ರೋಲ ಪಂಪ ಹತ್ತಿರ ಜೇವರಗಿ-ಕಲಬುರಗಿ ಮೇನ್ ರೋಡ ರೋಡಿನಲ್ಲಿ ನಮ್ಮ ಚಾಲಕನು ಕಾರ್‌ ನ್ನು  ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಹೋಗಿ ಎದುರಿಗೆ ರೋಡಿನಲ್ಲಿ ಬರುತ್ತಿದ್ದ ಒಂದು ಬುಲೇರೋ ವಾಹನಕ್ಕೆ ಡಿಕ್ಕಿ ಪಡಿಸಿದನು. ನಂತರ ನಾವು ಕಾರಿನಿಂದ ಇಳಿದು ನೋಡಲಾಗಿ ನಮ್ಮ ಕಾರಿನ ಮುಂಭಾಗ ಪೂರ್ತಿ ಜಖಂಗೊಂಡಿದ್ದು ಮತ್ತು ಬುಲೇರೋ ವಾಹನ ನಂ ನೋಡಲು ಕೆ.ಎ32ಎನ್5482 ನೇದ್ದು ಇತ್ತು ಅದರ ಚಾಲಕನ ಹೆಸರು ಕೇಳಲಾಗಿ ತನ್ನ ಹೆಸರನ್ನು ಅಂಬರೀಷ ತಂದೆ ಮರೆಪ್ಪ ಹಳ್ಳಿ ಸಾ|| ಗಾಂಧೀ ನಗರ ಜೇವರಗಿ ಅಂತ ತಿಳಿಸಿದನು. ಸದರಿ ಅಪಘಾತದಲ್ಲಿ ಯಾರಿಗೂ ಯಾವುದೆ ಗಾಯ ವಗೈರೆ ಆಗಿರುವದಿಲ್ಲ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಪ್ರಕಾಶ ತಂದೆ ಶಾಂತಪ್ಪಾ ಪಾಟೀಲ ಸಾ:ಮನೆ.ನಂ.11-184 ಅಪ್ಪರ ಲೈನ್‌ ಬ್ರಹ್ಮಪೂರ ಕಲಬುರಗಿ ಇವರು ದಿನಾಂಕ:05/05/2016 ರಂದು ರಾತ್ರಿ 8.30 ಗಂಟೆ ಸುಮಾರಿಗೆ ನನ್ನ ಟಿ.ವಿ.ಎಸ್‌‌ ಸ್ಟಾರ ಸಿಟಿ ಮೋಟಾರ ಸೈಕಲ ನಂ.ಕೆಎ-32 ಎಸ್‌‌-4796 ನೇದ್ದನ್ನು ನನ್ನ ಮನೆಯ ಮುಂದೆ ನಿಲ್ಲಿಸಿದ್ದು ಬೆಳಗ್ಗೆ ದಿನಾಂಕ: 06/05/2016 ರಂದು ಬೆಳಗ್ಗೆ 6.00 ಗಂಟೆ ಸುಮಾರಿಗೆ ನಾನು ಮನೆಯಿಂದ ಹೊರಗೆ ಬಂದಿದ್ದು ನನ್ನ ಮೋಟಾರ ಸೈಕಲ ಇರಲಿಲ್ಲ ನಾನು ಅಂದಿನಿಂದ ಎಲ್ಲಾ ಕಡೆ ಹುಡುಕಾಡಿದರು ನನ್ನ ಮೋಟಾರ ಸೈಕಲ ಸಿಕ್ಕಿರುವದಿಲ್ಲಾ ನನ್ನ ಟಿ.ವಿ.ಎಸ್‌‌ ಸ್ಟಾರ ಸಿಟಿ ಸಿಲ್ವರ್‌‌ ಬಣ್ಣದ ಮೋಟಾರ ಸೈಕಲ ನಂ.KA 32 S 4796, CHASSIS NO.MD625KF5871C55908, ENGINE NO.BF5C71126634 ಅ.ಕಿ.14000/-ರೂ ಬೆಲೆಬಾಳುವದು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಡುಗಿ ಕಾಣೆಯಾದ ಪ್ರಕರಣ :
ದೇವಲಗಾಣಗಾಪೂರ ಠಾಣೆ : ಶ್ರೀಮತಿ ಲಕ್ಷ್ಮೀಬಾಯಿ ಹಳ್ಳಿ ಸಾ : ಗೊಬ್ಬುರ (ಬಿ) ಇವರ ಇವರ ಮಗಳಾದ ಸಂಪತ ಇವಳು ದಿನಾಂಕ 09-06-2016 ರಂದು ರಾತ್ರಿ ಮಲವಿಸರ್ಜನೆ ಮಾಡಿ ಬರುತ್ತೆನೆ ಅಂತಾ ಹೇಳಿ ಹೋಗಿದ್ದು ನಂತರ ರಾತ್ರಿ 11 ಗಂಟೆಯಾದರೂ ನನ್ನ ಮಗಳು ಸಂಪತ ಇವಳು ಮನೆಗೆ ಬಾರದೆ ಇರುವುದರಿಂದ ಗಾಬರಿಯಾಗಿ ನನ್ನ ಮಗನಾದ ಜೈಬೀಮ, ಆತನ ಹೆಂಡತಿ ಪ್ರಮಾ ಮತ್ತು ನಮ್ಮೂರಿನ ಸುನಿತಾ ಎಲ್ಲರೂ ಕೂಡಿ ರಾತ್ರಿ ಊರಲ್ಲಿ ಹುಡುಕಾಡಿದರು ಸಿಗಲ್ಲಿಲ್ಲ. ನಂತರ ನಮ್ಮ ಸಂಬಂದಿಕರ ಊರಾದ ಕಲಬುರಗಿ ಬೇಲೂರ ಕಣ್ಣಿ ಸಾವಳಗಿ ಕುಮಸಿ ಗ್ರಾಮಗಳಿಗೆ ನನ್ನ ಮಗಳು ಸಂಪತಬಾಯಿ ಇವಳ ಬಗ್ಗೆ  ವಿಚಾರಿಸಲಾಗಿ ಯಾವುದೇ ಮಾಹಿತಿ ಸಿಕಿರುವುದಿಲ್ಲ.ಕಾಣೆಯಾದ ನನ್ನ ಮಗಳು ಸಂಪತಬಾಯಿ ಇವಳಿಗೆ ಹುಡುಕಾಡಿ ಬರಲು ತಡವಾಗಿರುತ್ತದೆ. ನನ್ನ ಮಗಳ ಚಹರೆ ಪಟ್ಟಿ - ಕೋಲು ಮುಖ, ನೆಟ್ಟನೆ ಮೂಗು ಸಾದಕಪ್ಪು ಮೈಬಣ್ಣ ಸಧೃಡ ಮೈಕಟ್ಟು 4.4" ಎತ್ತರ ಇದ್ದು ಕನ್ನಡ ಮಾತಾಡುತ್ತಾಳೆ. ಮನೆಯಿಂದ ಹೋಗುವಾಗ ಹಳದಿ ಬಣ್ಣದ ಚೂಡಿದಾರ ಹಾಕಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Friday, June 10, 2016

Kalaburagi District Reported Crimes

ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ವಿಜಯಕುಮಾರ ತಂದೆ ಸಿದ್ದಣ್ಣಗೌಡ ಪೊಲೀಸ್ ಪಾಟೀಲ ಸಾ : ಹವಳಗಾ ಇವರು ದಿನಾಂಕ 09-06-2016 ರಂದು ಸಾಯಂಕಾಲ ಮನೆಯಲ್ಲಿದ್ದಾಗ ನಮ್ಮೂರಿನ ಮಾಳಪ್ಪ ತಂದೆ ಸಂಗಪ್ಪ ಪೂಜಾರಿ ಈತನು ನನಗೆ ಪೋನ ಮಾಡಿ ನಮ್ಮೂರಿನ ರೇಣುಕಾ ಸಕ್ಕರೆ ಕಾರ್ಖಾನೆಯ ಹತ್ತಿರ ಬಾ ಅಂತಾ ತಿಳಿಸಿದ ಮೇರೆಗೆ, ನಾನು ಕಾರ್ಖಾನೆಯ ಮುಂದೆ ಹೋದೆನು. ಅಲ್ಲಿ ನನಗೆ ಪೋನ ಮಾಡಿ ಕರೆಸಿದ ಮಾಳಪ್ಪ ಪೂಜಾರಿ ಹಾಗೂ ಅವನ ಗೆಳೆಯನಾದ ಭಗವಂತ ನಾಟಿಕಾರ ಸಾ : ಘತ್ತರಗಾ ಈತನು ಇದ್ದನು, ನಾನು ಅವರ ಹತ್ತಿರ ಹೋಗಿ ಮಾಳಪ್ಪನಿಗೆ ಯಾಕೋ ಏನೊ ಕೆಲಸ ಇತ್ತು ಬಾಂ ಅಂತಾ ಹೇಳಿದಿ ಅಂತಾ ಕೇಳಿದೆನು, ಆಗ ಮಾಳಪ್ಪನು ಏನೋ ಬೋಸಡಿ ಮಗನೆ ಊರಲ್ಲಿ ನಿಂದು ಮತ್ತು ನಿಮ್ಮ ಅಣ್ಣ ವಕೀಲಂದು ತಿಂಡಿ ಜಾಸ್ತಿ ಆಗ್ಯದಾ, ಊರಾಗ ನೀವು ಹ್ಯಾಂಗ ಸಂಸಾರ ಮಾಡ್ತಿರಿ ನೋಡ್ತನಿ ಅಂತಾ ಹೇಳಿದನು, ಆಗ ನಾನು ಯಾಕ ಬೈತಿ ಅಂತಾ ಕೇಳಿದಕ್ಕೆ, ಸದರಿ ಮಾಳಪ್ಪ ಮತ್ತು ಅವನ ಜೋತೆಗೆ ಇದ್ದ ಭಗವಂತ ಇಬ್ಬರು ಬೋಸಡಿ ಮಗನೆ ನಿನಗೆ ಬೈಯಲ್ಲಾ ಹೊಡಿತಿವಿ ಏನು ಮಾಡ್ಕೊತಿ ಮಾಡ್ಕೊ ಅಂತಾ ಇಬ್ಬರು ಕೂಡಿ ನನಗೆ ಕೈಯಿಂದ ಹೊಡೆದನು, ಮಾಳಪ್ಪ ಈತನು ಚಪ್ಪಲಿ ಬಿಚ್ಚಿ ಚಪ್ಪಲಿಯಿಂದ ಹೊಡೆದನು. ಆಗ ನಾನು ಕೇಳಗೆ ಬಿದ್ದಾಗ ಇಬ್ಬರು ಕೂಡಿ ಕಾಲಿನಿಂದ ನನ್ನ ಹೊಟ್ಟೆಯ ಮೇಲೆ ಹಾಗೂ ಬೆನ್ನಿನ ಮೇಲೆ ಒದ್ದರು, ಸದರಿಯವರು ನನಗೆ ಒದೆಯುತ್ತಿದ್ದಾಗ ಅಲ್ಲೆ ಇದ್ದ ನಮ್ಮೂರಿನ ಅಡಿವೆಪ್ಪ ತಂದೆ ಸಿದ್ದಪ್ಪ ಪೂಜಾರಿ ಹಾಗೂ ಕಾರ್ಖಾನೆಯಲ್ಲಿ ಕೆಲಸ ಮಾಡುವ ಬಸಣ್ಣಗೌಡ ಬೋರಗಿ ಇಬ್ಬರು ಕೂಡಿ ನನಗೆ ಹೊಡೆಯುವುದನ್ನು ಬಿಡಿಸಿದರು, ಆಗ ಸದರಿಯವರು ಮಗನೆ ನಿಮ್ಮ ಅಣ್ಣನಿಗೆ ಹೇಳು ನಿನಗೂ ಮತ್ತು ನಿನ್ನ ಅಣ್ಣನಿಗೂ ಜೀವ ಸಹಿತ ಬಿಡುವುದಿಲ್ಲ ಅಂತಾ ಹೇಳಿ ಅಲ್ಲಿಂದ ಹೋದರು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಸಂಗೀತಾ ಗಂಡ ಲೋಹಿತ ಖರಟಮಲ್ ಸಾ: ಮಹಾದೇವ ನಗರ ಲೋಹಾರಗಲ್ಲಿ ಪ್ರಕಾಶ ಟಾಕೀಜ ಹಿಂದುಗಡೆ ಸುಪರ ಮಾರ್ಕೇಟ ಕಲಬುರಗಿ ಇವರನ್ನು 2011 ರಲ್ಲಿ ಕಲಬುರಗಿಗೆ ಉಶೋದಯ ಕಂಪನಿ ಪ್ಲಾಟ ನಂ 19 ಯಲ್ಲಾಲಿಂಗೇಶ್ವರ ಕಾಲೋನಿ ಕೊಟನೂರ ಮಠದ ಹಿಂದುಗಡೆ ಕೆಲಸ ಮಾಡುತ್ತಿದ್ದೆ. ಲೋಹಿತ ತಂದೆ ಸೈದಪ್ಪ ಖರಟಮಲ್ ಎನ್ನುವನೊಂದಿಗೆ ಪರಿಚಯವಾಗಿ ಪ್ರೀತಿ ಪ್ರೇಮವಾಗಿ ಹುಮನಾಬಾದ ರಿಂಗ ರೋಡಿನ ತಾಜನಗರದಲ್ಲಿ ಬಾಡಿಗೆ ಮನೆಯಲ್ಲಿ 2013 ರಲ್ಲಿ ದೇವರೆದುರಿಗೆ ತಾಳಿ ಕಟ್ಟಿಕೊಂಡು ಅಂದಿನಿಂದ ಇಂದಿನವರೆಗೂ ಗಂಡ ಹೆಂಡತಿಯಾಗಿ ಸಂಸಾರ ಮಾಡಿಕೊಂಡು ಬರುತ್ತಿದ್ದೆನೆ. ನನ್ನ ಮದುವೆಯ ವಿಷಯ ದಾವಣಗೆರೆಯ ನನ್ನ ತಂದೆ ತಾಯಿಯವರಿಗೆ ಗೊತ್ತಾಗಿ ನನಗೆ ಮನೆಗೆ ಬಾರದಂತೆ ನಿರ್ಬಂದ ವಿದಿಸಿದ್ದಾರೆ. ಮೂರು ವರ್ಷಗಳವರೆಗೆ ಚೆನ್ನಾಗಿಯೇ ಇದ್ದೆ. ನನ್ನ ಗಂಡ ಲೋಹಿತ ಮೂರು ನಾಲ್ಕು ತಿಂಗಳಿಂದ ನನಗೆ ಕಿರುಕುಳ ಕೊಡಲು ಪ್ರಾರಂಬಿಸಿ ಹಣಕ್ಕಾಗಿ ಪೀಡಿಸ ತೊಡಗಿದ್ದ ಮತ್ತು ಬಿಜನೆಸ್ ಗಾಗಿ  1 ಲಕ್ಷ ರೂಪಾಯಿ ಎಲ್ಲಿಂದಾದರು ತಂದುಕೊಡು ಎಂದು ದೈಹಿಕ ಹಲ್ಲೆ ಮಾಡಿ ವರದಕ್ಷಿಣೆ ಕಿರುಕುಳ ನೀಡತೊಡಗಿದ್ದಾನೆ, ತಂದೆ ತಾಯಿಯವರು ಇಲ್ಲ ದುಡಿಯಲು ಈಗ ಕೆಲಸವೂ ಇಲ್ಲ ಇಂಥದರಲ್ಲಿ ನಾನು ಗಂಡನಿಗೆ ದುಡ್ಡು ಕೊಡಲು ಆಗುತ್ತಿಲ್ಲ ಈ ಮೊದಲು ನಾನು ದುಡಿದಿದ್ದಲ್ಲವನ್ನು ಲೋಹಿತನೇ ತೆಗೆದುಕೊಳ್ಳೂತ್ತಿದ್ದ ತಿಂಗಳಿಗೆ 9 ಸಾವಿರ ರೂಪಾಯಿ ಸಂಬಳ ಬರುತ್ತಿತ್ತು. ಈಗ ನನಗೆ ತಿಳಿಯದ ಹಾಗೆ ದಿನಾಂಕ 22.04.2016 ರಂದು ಪ್ರಿಯಂಕಾ ಎನ್ನುವವರೊಂದಿಗೆ ಎರಡನೆಯ ಮದುವೆಯಾಗಿ ನನಗೆ ದ್ರೋಹ ಮಾಡಿದ್ದಾನೆ. ಯಾಕೆ ಹೀಗೆ ಮೋಸ ನಂಬಿಕೆ ದ್ರೋಹ ಮಾಡಿದೆ ಎಂದು ಕೇಳಿದಕ್ಕೆ ದಿನಾಂಕ 02.06.2016 ರಂದು ರಾತ್ರಿ 8-30 ಪಿ.ಎಂಕ್ಕೆ ನನಗೆ ಹೊಡೆದು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ. ದೂರು ಸಲ್ಲಿಸಿದರೆ ಕೊಂದು ಹಾಕುವದಾಗಿ ಜೀವ ಭಯ ಹಾಕಿದ್ದಾನೆ. ಈ ವಿಷಯ ಕಾವೇರಿ ಗಂಡ ಸಂಜುಕುಮಾರ ಪಾಂಚಾಳ ಮತ್ತು ಸುಹಾಸಿನಿ ತಂದೆ ರಾಜೇಂದ್ರ ಇವರಿಗೆ ಹೇಳಿದ್ದೆನೆ. ಅವರೂ ಲೋಹಿತನಿಗೆ ಬುದ್ದಿವಾದ ಹೇಳಿದ್ದಾರೆ ಅಲ್ಲದೇ ನಾಲ್ಕು ಸಲ ಗರ್ಭಪಾತ ಮಾಡಿಸಿದ್ದಾನೆ. ಕಾರಣ ನನಗೆ ದೈಹಿಕ ಕಿರುಕುಳ ನೀಡಿ ವರದಕ್ಷಿಣೆಗಾಗಿ ಮಾನಸಿಕ ಹಿಂಸೆ ನೀಡಿ ಜೀವ ಭಯ ಹಾಕುತ್ತಿರುವ ಮತ್ತು ನನಗೆ ತಿಳಿಯದಂತೆ ಎರಡನೆಯ ಮದುವೆಯಾದ ಲೋಹಿತ ತಂದೆ ಸೈದಪ್ಪ ಖರಟಮಲ್ ಸಾ: ಗಣಜಲಖೇಡ ತಾ;ಜಿ; ಗುಲಬರ್ಗಾ ಇವರ ಮೇಲೆ ಮತ್ತು ಲೋಹಿತನ ಅಣ್ಣ ಶ್ರೀಶೈಲ ಇತನು ಹೋಗಲಿ ಬಿಡಮ್ಮ ನಿನಗೆ ಮತ್ತೊಂದು ಮದುವೆ ಮಾಡುತ್ತೇವೆ. ಎಂದು ಹೆದರಿಸಿದ್ದು ಅವರಿಬ್ಬರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಚತ್ರೇಪ್ಪ ತಂದೆ ರಾಣಪ್ಪ ಬೌದ ಸಾ: ಪ್ಲಾಟ ನಂ. ಎಫ್-2 ದರ್ಶನ ಅಪಾರ್ಟಮೆಂಟ ಹಳೆ ಜೇವರ್ಗಿ ರಸ್ತೆ ಕಲಬುರಗಿ ರವರು ದಿನಾಂಕ. 08/06/2016  ರಂದು 9.00 ಎ.ಎಂ ಸುಮಾರಿಗೆ ನಾನು ನನ್ನ ಸ್ಯಾಮಸಾಂಗ ಜೆ-2 ಮೋಬೈಲ್  ಐ.ಎಮ್.ಇ.ಐ ನಂ. 359268071895783 ವಡಾಪೋನ್ ಸೀಮ್ ನಂ. 9513242568 ಬಿ.ಎಸ್.ಎನ್.ಎಲ್ ಸೀಮ್ ನಂ. 9448586152 ಅ.ಕಿ. 7590/- ರೂ ನೇದ್ದು ನಮ್ಮ ಮನೆಯ ಟೇಬಲ ಮೇಲೆ ಇಟ್ಟು ನಾನು ಕಟಿಂಗ ಮಾಡಿಸಿಕೊಂಡು ಮರಳಿ 10 ಎ.ಎಂ.ಕ್ಕೆ ಮರಳಿ ಬಂದು ನೋಡಲಾಗಿ ನನ್ನ ಮೋಬೈಲ್ ಇರಲಿಲ್ಲಾ. ಮನೆಯಲ್ಲಿ ಎಲ್ಲಾ ಕಡೆ ಹುಡಿಕಾಡಿದರೂ ಸಿಕ್ಕಿರುವುದಿಲ್ಲಾ. ಯಾರೋ ಕಳ್ಳರು ನನ್ನ ಮೋಬೈಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.    

Thursday, June 9, 2016

Kalaburagi District Reported Crimes

ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ನಿತ್ಯಾನಂದ ಮತ್ತು ಪಾಶಾಮಿಯ್ಯಾ @ ಪಾಶಾಪಟೇಲ ಇಬ್ಬರು ಕೆಸರಟಗಿ ಅಯ್ಯಪ್ಪ ಗುಡಿಯಿಂದ ತಮ್ಮೂರಾದ ಇಲ್ಲಾಳ ಗ್ರಾಮಕ್ಕೆ ಹೋಗುವ ಕುರಿತು ನಿತ್ಯಾನಂದ ಇತನು ತನ್ನ ಬಜಾಜ ಡಿಸ್ಕವರಿ ಮೋಟಾರ ಸೈಕಲ  KA 56 E 6031 ನೇದ್ದರ ಹಿಂದೆ ಪಾಶಾಮಿಯ್ಯಾ@ ಪಾಶಾಪಟೇಲ ಇತನಿಗೆ ಕೂಡಿಸಿಕೊಂಡು ಅತಿವೇಗದಿಂದ ನಡೆಸುತ್ತಾ ರಾತ್ರಿ 08-00 ಗಂಟೆ ಸುಮಾರಿಗೆ  ಆಲಗೂಡ ಕ್ರಾಸ ದಾಟಿ ಸ್ವಲ್ಪ ಮುಂದೆ ಬಂದಾಗ ಎದುರುನಿಂದ  ಬರುತ್ತಿದ್ದ ಯಾವುದೋ ವಾಹನ ಲೈಟ ಮುಖದ ಮೇಲೆ ಬೀಳಲುವೇಗದ ನಿಯಂತ್ರಣ ತಪ್ಪಿದಾಗ, ಮೋಟಾರ ಸೈಕಲ ಎಡಕ್ಕೆ ತಿರುಗಿಸಿದಾಗ ರೋಡಿನ ಎಡಭಾಗದಲ್ಲಿ ಇರುವ ತೆಗ್ಗಿನಲ್ಲಿ ನಾವಿಬ್ಬರು ಮೋಟಾರ ಸೈಕಲದೊಂದಿಗೆ ಬಿದ್ದೇವು. ಪಾಶಾಮಿಯ್ಯಾ ಇತನಿಗೆ ತಲೆಗೆ, ಬಲಕಿವಿಗೆ ಭಾರಿ ರಕ್ತಗಾಯವಾಗಿ ಮೂಗಿನಿಂದ ರಕ್ತಸೋರಿ ಸ್ಥಳದಲ್ಲಿ ಮೃಪಟ್ಟಿದ್ದು ಇರುತ್ತದೆ. ನಿತ್ಯಾನಂದ ಇತನಿಗೂ ಕೂಡಾ ಹಣೆಗೆ ಮತ್ತು ಬಲಭುಜದ ಮೇಲೆ ಭಾರಿ ರಕ್ತಗಾಯಗಳಾಗಿರುತ್ತವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ : ದಿನಾಂಕ: 08-06-2016 ರಂದು ನನ್ನ ಮಗನಾದ ಲಕ್ಕಪ್ಪ ಪೂಜಾರಿ ಮತ್ತು ಅವನ ಗೆಳೆಯ ಸಿದ್ದಪ್ಪ ತಂದೆ ಕಾಳಪ್ಪ ಮಾಂಗ ಸಾ: ಕಟ್ಟಿ ಸಂಗಾವಿ ಇವರಿಬ್ಬರು ಕೂಡಿ ಮೊಟಾರ ಸೈಕಲ ನಂ ಕೆಎ-32, ಕ್ಯೂ-7927 ನೇದ್ದರ ಮೇಲೆ ಕುಳಿತು ತಮ್ಮ ಕೆಲಸದ ಸಲುವಾಗಿ ಜೇವರಗಿಗೆ ಹೋಗಿ ಬರುತ್ತೇನೆ ಅಂತ ಹೇಳಿ ಹೋಗಿರುತ್ತಾರೆ. ನಾನು ಮತ್ತು ನನ್ನ ಮಗ ರಾಜಕುಮಾರ ಇಬ್ಬರು ಮನೆಯಲ್ಲಿದ್ದಾಗ ರಾತ್ರಿ 9 ಗಂಟೆ ಸುಮಾರಿಗೆ ನಮ್ಮೂರ ಚಾಂದಪಾಶಾ ತಂದೆ ಅಬ್ದುಲರಹಿಮಾನ ಕೊಳಕೂರ ಇತನು ಫೋನ ಮಾಡಿ ನಿಮ್ಮ ಮಗ ಲಕ್ಕಪ್ಪ ಮತ್ತು ಸಿದ್ದಪ್ಪ ಮಾಂಗ ಇವರಿಗೆ ಬೀಮಾ ಬ್ರೀಡ್ಜ ಚಕ್ ಪೋಸ್ಟ ಹತ್ತಿರ ರೋಡಿನಲ್ಲಿ ಎಕ್ಸ್ಸಿಡೆಂಟ ಆಗಿ ನಿಮ್ಮ ಮಗ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದ ಕೂಡಲೇ ನಾನು ಮತ್ತು ನನ್ನ ಮಗ ರಾಜಕುಮಾರ ಇಬ್ಬರು ಸ್ಥಳಕ್ಕೆ ಬಂದು ನೋಡಲು ನನ್ನ ಮಗ ಲಕ್ಕಪ್ಪ ಇತನಿಗೆ ನೋಡಲು ಅವನ ತಲೆಯ ಎಡಭಾಗದಲ್ಲಿ ಭಾರಿ ರಕ್ತಗಾಯ, ಎಡಗದ್ದಕ್ಕೆ, ಬಲಭಾಗ ಎದೆಯಿಂದ ರಟ್ಟೆ ವರೆಗೆ ಪೂರ್ತಿ ಜಜ್ಜಿ ಭಾರಿ ರಕ್ತಗಾಯವಾಗಿ ಮಾಂಸ ಹೊರಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದು ಸಿದ್ದಪ್ಪನಿಗೂ ಕೂಡಾ ಬಾರಿ ಗಾಯಗಳಾಗಿದ್ದವು. ಅಲ್ಲಿಯೇ ಒಂದು ಲಾರಿ ನಿಂತಿದ್ದು ಅದರ ನಂಬರ ನೋಡಲು ಎಪಿ-02-ಎಕ್ಸ್-6099 ನೇದ್ದು ಇತ್ತು. ಮತ್ತು ಮೊಟಾರ ಸೈಕಲ ನಂಬರ ನೋಡಲು ಕೆಎ-32-ಕ್ಯೂ-7927 ಇತ್ತು. ಅಲ್ಲಿ ಜನರು ಸಹ ನರೆದಿದ್ದು, ಈ ಘಟನೆ ಬಗ್ಗೆ ಚಾಂದಪಾಶಾ ಇತನಿಗೆ ಕೇಳಲು ಅವನು ಹೇಳಿದೆನಂದರೆ ನಾನು ಬೀಮಾ ಬ್ರೀಡ್ಜ ಚಕ್ ಪೊಸ್ಟ ಹತ್ತಿರ ಇದ್ದಾಗ ರಾತ್ರಿ ನಿಮ್ಮ ಮಗ ಲಕ್ಕಪ್ಪ ಇತನು ತನ್ನ ಮೊಟಾರ ಸೈಕಲದ ಮೇಲೆ ಸಿದ್ದಪ್ಪ ಮಾಂಗ ಇತನಿಗೆ ಕೂಡಿಸಿಕೊಂಡು ರೋಡಿನ ಸೈಡಿನಿಂದ ಬರುತ್ತಿದ್ದಾಗ ಅದೆ ಸಮಯಕ್ಕೆ ಕಲಬುರಗಿ ಕಡೆಯಿಂದ ಲಾರಿಯನ್ನು ಅದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಿಮ್ಮ ಮಗನು ನಡೆಯಿಸುತ್ತಿದ್ದ ಮೊಟಾರ ಸೈಕಲಕ್ಕೆ ಎದುರಾಗಿ ಡಿಕ್ಕಿ ಪಡಿಸಿದರಿಂದ ಅವರು ತಮ್ಮ ಮೊಟಾರ ಸೈಕಲದೊಂದಿಗೆ ಬಿದ್ದರು. ನಂತರ ನಾನು ಓಡಿ ಹೋಗಿ ಎಬ್ಬಿಸಲು ನಿಮ್ಮ ಮಗನು ಮೃತಪಟ್ಟಿದ್ದನು ಅಂತಾ ತಿಳಿಸಿರುತ್ತಾನೆ ಅಂತಾ ಶ್ರೀ ಭೀಮರಾಯ ತಂದೆ ಯಲ್ಲಪ್ಪ ಹಚಗೇರಿ ಸಾಃ ಹಸನಾಪೂರ ತಾಃಜಿಃ ಕಲಬುರಗಿ ಹಾಃವಃ ಕಟ್ಟಿಸಂಗಾವಿ ಬೀಮಾ ಬ್ರೀಡ್ಜ್ ತಾಃ ಜೇವರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಮೈಹಿಬೂಬ ತಂದೆ ಸೈಪನಸಾಬ ನದಾಫ ಸಾ : ಗೌರ (ಕೆ) ರವರು ತಮ್ಮ ಗ್ರಾಮದಲ್ಲಿ ಮದರಸಾ ಶಾಲೆಯಲ್ಲಿ ತರಕಾರಿ ತರುವುದು ಹಾಗೂ ಶಾಲೆಯಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿರುತ್ತೇನೆ. ಸದರಿ ಶಾಲೆಯನ್ನು ನಮ್ಮ ಅಣ್ಣನಾದ ಮೋಹಿದ್ದಿನ ಈತನು ನಡೆಸಿಕೊಂಡು ಹೋಗುತ್ತಾನೆ. ಸದರಿ ಶಾಲೆಯ ವಿಚಾರವಾಗಿ ನಮಗೂ ಮತ್ತು ನಮ್ಮ ದೂರದ ಅಣ್ಣ ತಮ್ಮಕಿಯವರಾದ ಅಕ್ರಮ ತಂದೆ ಜಾಫರಸಾಬ ನದಾಫ ಹಾಗೂ ಅವನ ಅಣ್ಣ ತಮ್ಮರು ನಮ್ಮ ಮೇಲೆ ಜಗಳ ಮಾಡುತ್ತಾ ಬಂದಿದ್ದು, ನಮ್ಮ ಮೇಲೆ ದ್ವೇಷ ಸಾದಿಸುತ್ತಿರುತ್ತಾರೆ. ದಿನಾಂಕ 08-06-2016 ರಂದು ಬೆಳಿಗ್ಗೆ 09:00 ಗಂಟೆ ಸುಮಾರಿಗೆ ನಮ್ಮ ಮನೆಯ ಮುಂದೆ ನೀರು ತಗೆದುಕೊಂಡು ಬರಲು ಕೊಡ ತಗೆದುಕೊಂಡು ಹೊಗುತ್ತಿದ್ದಾಗ ಸದರಿ ನಮ್ಮ ಮೇಲೆ ದ್ವೇಷ ಸಾದಿಸುತ್ತಿದ್ದ ಅಕ್ರಮ ನದಾಫ ಈತನ ಮನೆಯ ಮುಂದೆ ನಾನು ತಗೆದುಕೊಂಡು ಹೊದ ಕೊಡದಲ್ಲಿ ಸ್ವಲ್ಪ ನೀರು ಇದ್ದು ಅವನ್ನು ಚೆಲ್ಲಿದೆನು, ಆಗ ಮನೆಯ ಮುಂದೆ ನಿಂತಿದ್ದ ಆರೀಫ್ ಈತನು ಬೋಸಡಿ ಮಗನೆ ನಮಗೆ ನೋಡಿ ನಮ್ಮ ಮನೆಯ ಮುಂದೆ ನೀರು ಚೆಲ್ಲುತ್ತಿ ಅಂತಾ ಜಗಳ ಮಾಡಿರುತ್ತಾನೆ. ಮದ್ಯಾಹ್ನ 3:00 ಗಂಟೆ ಸುಮಾರಿಗೆ ನಾನು ಮತ್ತು ಸೋಲ್ಲಾಪೂರದಿಂದ ಬಂದು ನಮ್ಮ ಸಂಭಂದಿಕರಾದ 1) ಹಸನ ತಂದೆ ಬಾಬು ನದಾಪ 2) ಆರೀಫ್ ತಂದೆ ಆದಮ್ಮ ಶೇಖ 3) ಬಾಬಾ ತಂದೆ ಸೈಯದ ಶೇಖ 4) ಅಲ್ತಾಫ ತಂದೆ ಸಲೀಂ ನದಾಫ 5) ರಿಯಾಜ ತಂದೆ ರಸೂಲ ನಧಾಪ ಸಾ|| ಎಲ್ಲರೂ ಸೋಲ್ಲಾಪೂರ ಇವರು ಬಂದಿದ್ದು, ಎಲ್ಲರೂ ಕೂಡಿ ನಮ್ಮ ಮನೆಯ ಮುಂದೆ ಮಾತಾಡುತ್ತಾ ನಿಂತಿದ್ದಾಗ, ನಮ್ಮ ಜೋತೆಗೆ ಜಗಳ ಮಾಡುತ್ತಿದ್ದ 1) ಅಕ್ರಮ ತಂದೆ ಜಾಫರಸಾಬ ನಧಾಪ 2) ಸಾದಿಕ ತಂದೆ ಜಾಫರಸಾಬ ನಧಾಫ 3) ಮನ್ನೂರಸಾಬ ತಂದೆ ಜಾಫರಸಾಬ ನಧಾಫ 4) ಬಾಕರ ತಂದೆ ಜಾಫರಸಾಬ ನಧಾಫ 5) ಮಲಂಗ ತಂದೆ ಮುಲ್ಕಾಸಾಬ ನಧಾಫ 6) ಇರ್ಫಾನ ತಂದೆ ಮುಬಾರಕ್ ನಧಾಪ ಸಾ|| ಎಲ್ಲರೂ ಗೌರ (ಕೆ) ಇವರೆಲ್ಲರೂ ಮತ್ತು ಇನ್ನು ಕೆಲವು ಜನರು ಕೂಡಿ ಗುಂಪುಕಟ್ಟಿಕೊಂಡು ಬಡಿಗೆ ಮತ್ತು ಕಲ್ಲು ಹಿಡಿಸಿಕೊಂಡು ನಮ್ಮ ಹತ್ತಿರ ಬಂದು ನನಗೆ ಏನೊ ಸೂಳೆ ಮಗನೆ ನಮ್ಮ ಜೋತೆಗೆನೆ ಜಗಳ ಮಾಡ್ತಿ ಅಂತಾ ಬೈದರು, ಆಗ ನನ್ನ ಜೋತೆಗೆ ಇದ್ದ ನನ್ನ ಸಂಭಂದಿಕರು ಯಾಕ ಇವರ ಜೋತೆಗೆ ಜಗಳ ಮಾಡ್ತಿರಿ ಅಂತಾ ಕೇಳಿದಕ್ಕೆ, ಅವರಿಗೆ ಬೋಸಡಿ ಮಕ್ಕಳ್ಯಾ ಅವರ ಪರವಾಗಿ ನಮ್ಮ ಮೇಲೆ ಗುಂಡಾಗಿರಿ ಮಾಡಕಾ ಬಂದಿರಿ ಅಂತಾ ಎಲ್ಲರೂ ಕೂಡಿ ನನ್ನ ಜೋತೆಗೆ ಇದ್ದ ಹಸನ ನದಾಫ, ಆರೀಫ್ ಶೇಖ, ಬಾಬಾ ಶೇಖ್, ಅಲ್ತಾಫ್ ನಧಾಪ, ರಿಯಾಜ ನಧಾಫ್ ಇವರಿಗೆ ಅವಾಚ್ಯ ಶಬ್ದಳಿಂದ ಬೈಯುತ್ತಾ ಕೈಯಿಂದ ಹಾಗೂ ಕಲ್ಲಿನಿಂದ ಮತ್ತು ಬಡಿಗೆಯಿಂದ ಹೊಡೆಯುವುದು, ಕಾಲಿನಿಂದ ಒದೆಯುವುದು ಮಾಡುತ್ತಿದ್ದರು, ಹಾಗೂ ನಮ್ಮ ಮೂರು ಮೋಟರ ಸೈಕಲಗಳ ಮೇಲೆ ಕಲ್ಲಿನಿಂದ ಮತ್ತು ಬಡಿಗೆಯಿಂದ ಹೊಡೆದು ಮೂರು ಮೋಟರ ಸೈಕಲಗಳನ್ನು ಜಕಂ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಉಸ್ಮಾನಲಿ ತಂದೆ ಜಾಫರಸಾಬ ನಧಾಪ ಸಾ : ಗೌರ (ಕೆ) ಇವರ ಊರಿನಲ್ಲಿ ಮೋಹಿದ್ದಿನ ತಂದೆ ಸೈಫನಸಾಬ ನದಾಫ ಈತನು ಮದರಸಾ ಶಾಲೆ ನಡೆಸುತ್ತಿರುತ್ತಾನೆ. ಸದರಿ ಮೋಹಿದ್ದಿನ ಈತನು ತನ್ನ ಶಾಲೆಯ ಹುಡಗರಿಗೆ ಸ್ಮಶಾನದಲ್ಲಿ ಬರ್ಹಿರದೆಸೆಗೆ ಕಳುಹಿಸುತ್ತಿರುತ್ತಾನೆ. ಇದರಿಂದ ನಾನು ಮತ್ತು ನನ್ನ ಅಣ್ಣನಾದ ಅಕ್ರಮ ಇಬ್ಬರು ಮೋಹಿದ್ದಿನ ಈತನಿಗೆ ಇಲ್ಲಿ ಹುಡುಗರಿಗೆ ಬರ್ಹಿರದೆಸೆಗೆ ಕಳುಹಿಸಬೇಡ ಅಂತಾ ಹೇಳೀದಕ್ಕೆ ಸದರಿ ಮೋಹಿದ್ದಿನ ಈತನು ನಮ್ ಮೇಲೆ ದ್ವೇಷ ಮಾಡಿಕೊಂಡು ದಿನಾಂಕ 08-06-2016 ರಂದು ಬೆಳಿಗ್ಗೆ 09:00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಅಣ್ಣನಾದ ಅಕ್ರಮ ಇಬ್ಬರು ನಮ್ಮ ಮನೆಯ ಮುಂದೆ ನಿಂತಿದ್ದಾಗ ಸದರಿ ಮೋಹಿದ್ದಿನ ಈತನ ತಮ್ಮನಾದ ಮೈಹಿಬೂಬ ಈತನು ಕೊಡದಲ್ಲಿ ನೀರು ತಗೆದುಕೊಂಡು ಬಂದು ನಮ್ಮ ಮನೆಯ ಮುಂದೆ ನೀರು ಚೆಲ್ಲಿದನು ಅದಕ್ಕೆ ನಾನು ಮತ್ತು ನನ್ನ ಅಣ್ಣ ಇಬ್ಬರು ಮೈಹಿಬೂಬನಿಗೆ ಯಾಕ ನೀರು ಚೆಲ್ಲುತ್ತಿ ಕೆಸರು ಆಗುತ್ತದೆ ಅಂತ ಹೇಳಿದಕ್ಕೆ ಮೈಹಿಬೂಬನು ನಮ್ಮ ಜೋತೆಗೆ ಜಗಳ ಮಾಡಿರುತ್ತಾನೆ. ಮದ್ಯಾಹ್ನ 3:00 ಗಂಟೆ ಸುಮಾರಿಗೆ ನಮ್ಮ ಮನೆಯ ಹತ್ತಿರ ನಾನು ಮತ್ತು ನನ್ನ ಅಣ್ಣ ತಮ್ಮರಾದ 1) ಸಾದಿಕ ತಂದೆ ಜಾಫರಸಾಬ ನಧಾಫ 2) ಮನ್ಸೂರಅಲಿ ತಂದೆ ಜಾಫರಸಾಬ ನದಾಫ 3) ಅಕ್ರಮ ತಂದೆ ಜಾಫರಸಾಬ ನದಾಫ ನಾಲ್ಕು ಜನರು ನಿಂತಿದ್ದಾಗ ನಮ್ಮ ಜೋತೆಗೆ ಜಗಳ ಮಾಡುತ್ತಿದ್ದ 1) ಮೋಹಿದ್ದಿನ ತಂದೆ ಸೈಫನಸಾಬ ನದಾಫ ಅವನ ತಮ್ಮನಾದ 2) ಮೈಹಿಬೂಬ ತಂದೆ ಸೈಫನಸಾಬ ನದಾಫ ಸಾ|| ಇಬ್ಬರು ಗೌರ (ಕೆ) ಹಾಗೂ ಇವರ ಸಂಭಂದಿಕರಾದ 3) ಹಸನ ತಂದೆ ಬಾಬು ನದಾಪ 4) ಆರೀಫ್ ತಂದೆ ಆದಮ್ಮ ಶೇಖ 5) ಬಾಬಾ ತಂದೆ ಸೈಯದ ಶೇಖ 6) ಅಲ್ತಾಫ ತಂದೆ ಸಲೀಂ ನದಾಫ 7) ರಿಯಾಜ ತಂದೆ ರಸೂಲ ನಧಾಪ ಸಾ|| ಎಲ್ಲರೂ ಸೋಲ್ಲಾಪೂರ ಇವರೆಲ್ಲರೂ ಕೂಡಿ ಕೈಯಲ್ಲಿ ಬಡಿಗೆ ಮತ್ತು ಕಲ್ಲು ಹಿಡಿದುಕೊಂಡು ನಮ್ಮ ಹತ್ತಿರ ಬಂದು ನಮಗೆ ಏನ್ರೊ ಬೋಸಡಿ ಮಕ್ಕಳೆ ಮನೆಯ ಮುಂದೆ ನೀರು ಚೆಲ್ಲಿದರೆ ಏನು ಆಯ್ತು, ನಮ್ಮ ಜೋತೆನೆ ಜಗಳ ಮಾಡ್ತಿರಿ ಅಂತಾ ಎಲ್ಲರೂ ಕೂಡಿ ನನಗೆ ಮತ್ತು ನನ್ನ ಅಣ್ಣಂದಿರಾದ ಸಾದಿಕ ಹಾಗೂ ಮನ್ಸುರಲಿ ಮೂರು ಜನರಿಗೂ ಕೈಯಿಂದ ಹಾಗೂ ಬಡಿಗೆಯಿಂದ ಮತ್ತು ಕಲ್ಲಿನಿಂದ ಹೊಡೆಯುವುದ ಕಾಲಿನಿಂದ ಒದೆಯುವುದು ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 08-06-2016 ರಂದು ಮಣೂರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮೂರು ಜನರು ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ, ಜನರನ್ನು ವಂಚಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು ಮಟಕಾ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ  ಪಿ.ಎಸ್.ಐ. ಅಫಜಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿ ಬಂದ ಸ್ಥಳಕ್ಕೆ ಹೋಗಿ ಮರೆಯಾಗಿ ನಿಂತು ನೋಡಲು, ಬಸ್ ನಿಲ್ದಾಣದ ಆವರಣದ ಸಾರ್ವಜನಿಕ ಸ್ಥಳದಲ್ಲಿ ಮೂರು ಜನರು ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೆನೆ ಅಂತಾ ಕರೆದು, ಅವರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯ ಬರೆದುಕೊಟ್ಟು ಮಟಕಾ ಬರೆದುಕೊಳ್ಳುತ್ತಿದ್ದುದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ ಎರಡು ಜನರನ್ನು ಹಿಡಿದು ಕೊಂಡಿದ್ದು ಒಬ್ಬನು ಓಡಿ ಹೋಗಿದ್ದು ಸದರಿಯವರ ಹೆಸರು ವಿಳಾಸ ವಿಚಾರಿಸಲಾಗಿ 1) ನಾಗಪ್ಪ ತಂದೆ ಶಾಂತಪ್ಪ ಪಾಟೀಲ ಸಾ|| ಮಣೂರ ಗ್ರಾಮ 2) ಮಲ್ಲಪ್ಪ @ ಮಲ್ಲು ತಂದೆ ಶಿವರಾಯ ದುಧನಿ ಸಾ|| ಮಾಶಾಳ ಗ್ರಾಮ ಅಂತಾ ತಿಳಿಸಿದರು. ಸದರಿಯವರನ್ನು ಮಟಕಾ ಬರೆದುಕೊಂಡು ಎಲ್ಲಿ ಕೊಡುತ್ತಿರಿ, ಯಾರಿಗೆ ಕೊಡುತ್ತಿರಿ ಎಂಬುದರ ಬಗ್ಗೆ ವಿಚಾರಿಸಿದ್ದು, ಸದರಿಯವರು ಇಲ್ಲಿ ಜನರಿಂದ ಹಣ ಪಡೆದು ಮಟಕಾ ಬರೆದುಕೊಂಡು ಈಗ ಓಡಿ ಹೋದ ರಾಜಕುಮಾರ @ ರಾಜು ತಂದೆ ಶಾಂತಪ್ಪ ಎಮ್ಮಿ ಸಾ|| ಮಣೂರ ಈತನಿಗೆ ಕೊಡುತ್ತೇವೆ ಅಂತಾ ತಿಳಿಸಿದರು.. ನಂತರ ಸದರಿಯವರ ಅಂಗ ಶೋದನೆ ಮಾಡಲಾಗಿ ನಾಗಪ್ಪ ಪಾಟೀಲ ಈತನಿಂದ ಮಟಕಾ ಜೂಜಾಟಕ್ಕೆ ಸಂಬಂದ ಪಟ್ಟ 950/- ರೂ ನಗದು ಹಣ, ಒಂದು ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ, ಒಂದು ಪೇನ್ನ ದೋರೆತವು. ಮಲ್ಲಪ್ಪ ದುಧನಿ ಈತನಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 840/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ದೊರೆತವು, ಹೀಗೆ ಒಟ್ಟು 1790/- ರೂ ನಗದು ಹಣ, 2 ಮಟಕಾ ಚೀಟಿ, 2 ಪೆನ್ನ ದೊರೆತವು. ಸದರಿಯವರನ್ನು ವಶಕ್ಕೆ ತೆಗೆದುಕೊಂಡು ಅಫಜಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.