Police Bhavan Kalaburagi

Police Bhavan Kalaburagi

Saturday, October 5, 2019

KALABURAGI DISTRICT REPORTED CRIMES

ಆಕ್ರಮವಾಗಿ ಶಶ್ತ್ರಾಸ್ತ್ರ ಹೊಂದಿದವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ : 04-10-2019 ರಂದು ಸೋನ್ನ ಕ್ರಾಸ್  ಹತ್ತೀರ  ಒಬ್ಬ ವ್ಯಕ್ತಿ  ಪಿಸ್ತೂಲು ಇಟ್ಟುಕೊಂಡು ನಿಂತಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ  ಶ್ರೀ ಮಂಜುನಾಥ ಹೂಗಾರ ಪಿ.ಎಸ್.ಐ. ಅಫಜಲಪೂರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಸೊನ್ನ ಕಾಸ್ರ ಹತ್ತೀರ ಹೋಗುತ್ತಿದಂತೆ ನಮ್ಮ ಪೊಲೀಸ್ ವಾಹನವನ್ನು ನೋಡಿ  ಒಬ್ಬ ವ್ಯಕ್ತಿ ನಮ್ಮನ್ನು ನೋಡಿ ಓಡ ಹತ್ತೀದನು ಆಗ ಸದರಿಯವನನ್ನು ಬೆನ್ನಟ್ಟಿ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ಆತನು ತನ್ನ ಹೆಸರು ಶರಣಗೌಡ ತಂದೆ ಗಂಗಪ್ಪ ಪಾಟೀಲ ಸಾ||ಗುಂದಗಿ ತಾ||ಸಿಂದಗಿ  ಅಂತ ತಿಳಿಸಿದನು. ನಂತರ ಸದರಿಯವನನ್ನು ಪಂಚರ ಸಮಕ್ಷಮ ಚೆಕ್ ಮಾಡಲಾಗಿ ಸದರಿಯವನ ಸೋಂಟದಲ್ಲಿ ಒಂದು ಪಿಸ್ತೂಲು ದೊರೆಯಿತು. ಪಿಸ್ತೂಲನ್ನು ಚೆಕ್ ಮಾಡಲಾಗಿ ಅದರ ಮ್ಯಾಗ್ಜಿನ್ ದಲ್ಲಿ 02 ಜಿವಂತ ಗುಂಡುಗಳು ಇದ್ದವು. ಸದರಿಯವನಿಗೆ ಪಿಸ್ತೂಲು ಮತ್ತು ಗುಂಡುಗಳ ಬಗ್ಗೆ ವಿಚಾರಿಸಲು, ಸದರಿ ಪಿಸ್ತೂಲನ್ನು ಮತ್ತು 02 ಜೀವಂತ ಗುಂಡುಗಳನ್ನು ಕರಜಗಿ ಗ್ರಾಮದ ಈರಪ್ಪ ತಂದೆ ಗಂಗಾದರ ನಾಯಕೊಡಿ ಈತನ ಹತ್ತಿರ ಪಿಸ್ತೂಲಅನ್ನು 30,000/- ರೂ ಮತ್ತು 02 ಜೀವಂತ ಗುಂಡುಗಳನ್ನು ನೂರು ಪಾಯಿಗೆ ಒಂದರಂತೆ 200/-ರೂ ಗೆ ಖರಿದಿ ಮಾಡಿರುತ್ತೇನೆ. ನಾನು ಪಿಸ್ತೂಲನ್ನು ಕಡಿಮೆ ರೇಟಿಗೆ ಖರೀದಿ ಮಾಡಿ, ಹೆಚ್ಚಿನ ರೇಟಿಗೆ ಮಾರಾಟ ಮಾಡಲು ತಗೆದುಕೊಂಡಿರುತ್ತೇನೆ. ಇಂದು ಅಫಜಲಪೂರಕ್ಕೆ ಹೋಗಿ ಯಾರಿಗಾದರೂ ಮಾರಾಟ ಮಾಡಬೇಕು ಎಂದು ಇಲ್ಲಿನಿಂತಿರುವದಾಗಿ ತಿಳಿಸಿದನು. ಸದರಿ ಪಿಸ್ತೂಲು ನಾಡ ಪಿಸ್ತೂಲು ಇದ್ದು, ಇದಕ್ಕೆ ಯಾವುದೆ ಪರವಾನಿಗೆ ಇರುವುದಿಲ್ಲ ಅಂತಾ ತಿಳಿಸಿದನು. ಸದರಿ ಆರೋಪಿತನು ಅಕ್ರಮವಾಗಿ ಇಟ್ಟುಕೊಂಡ ಒಂದು ನಾಡ ಪಿಸ್ತೂಲು ಅ||ಕಿ|| 30,000/- ರೂ ಮತ್ತು 02 ಜೀವಂತ ಗುಂಡುಗಳನ್ನು ಅ||ಕಿ|| 200/- ರೂ ನೇದ್ದವುಗಳನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ:04-10-2019 ರಂದು ಅಫಜಲಪೂರ ವೃತ್ತ ಕಾರ್ಯಾಲಯದಲ್ಲಿದ್ದಾಗ ಖಚಿತ ಮಾಹಿತಿ ಬಂದಿದ್ದೆನಂದರೆ ಮಲ್ಲಬಾದ ಗ್ರಾಮದ ವಿಜಯಲಕ್ಷೀ ದೇವರ ಗುಡಿಯ ಮುಂದೆ ಒಬ್ಬ ವ್ಯಕ್ತಿ ಪಿಸ್ತೂಲು ಇಟ್ಟುಕೊಂಡು ನಿಂತಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಶ್ರೀ ತುಳಜಪ್ಪ ತಂದೆ ಶಂಕ್ರೆಪ್ಪ ಸುಲ್ಫಿ ಡಿ,ಎಸ್,ಪಿ. ಆಳಂದ ಉಪ ವಿಭಾಗ ಆಳಂದ  ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಲ್ಲಬಾದ ಗ್ರಾಮದ ವಿಜಯಲಕ್ಷೀ ದೇವಸ್ಥಾನದ ಹತ್ತೀರ ಹೋಗುತ್ತಿದ್ದಂತೆ ನಮ್ಮ ಪೊಲೀಸ್ ಜೀಪನ್ನು ನೋಡಿ ಒಬ್ಬ ವ್ಯಕ್ತಿ ನಮ್ಮನ್ನು ನೋಡಿ ಓಡ ಹತ್ತೀದನು ಆಗ ಸದರಿಯವನನ್ನು ಬೆನ್ನಟ್ಟಿ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ರಮೇಶ ತಂದೆ ಬಾಬುರಾವ ಹಡಪದ ಸಾ||ತಡಕಲ ತಾ||ಆಳಂದ ತಿಳಿಸಿದನು. ನಂತರ ಸದರಿಯವನನ್ನು ಪಂಚರ ಸಮಕ್ಷಮ ಚೆಕ್ ಮಾಡಲಾಗಿ ಸದರಿಯವನ ಹತ್ತಿರ ಪ್ಯಾಂಟಿನ ಜೇಬಿನಲ್ಲಿ ಒಂದು ನಾಡ ಪಿಸ್ತೂಲು ದೊರೆಯಿತು. ಪಿಸ್ತೂಲನ್ನು ಚೆಕ್ ಮಾಡಲಾಗಿ ಅದರ ಮ್ಯಾಗ್ಜಿನ್ ದಲ್ಲಿ 01 ಜಿವಂತ ಗುಂಡು ಇದ್ದು. ಸದರಿಯವನಿಗೆ ಪಿಸ್ತೂಲು ಮತ್ತು ಗುಂಡುಗಳ ಬಗ್ಗೆ ವಿಚಾರಿಸಲು, ನಾನು ಈ ಹಿಂದೆ ಭಾಗಪ್ಪ ಹರಿಜನ ಈತನಿಗೆ ವಿಜಯಪೂರದ ಕೋರ್ಟಿನಲ್ಲಿ ಗುಂಡು ಹಾರಿಸಿ ಕೊಲೆ ಮಾಡಲು ಗುಂಡು ಹಾರಿಸಿರುತ್ತೇನೆ. ಭಾಗಪ್ಪ ನನಗೆ ಏನಾದರೂ ಮಾಡಿಯಾನು ಎಂದು ಭಯಕ್ಕಾಗಿ  ಸದರಿ ಪಿಸ್ತೂಲನ್ನು ಕರಜಗಿ ಗ್ರಾಮದ ಈರಪ್ಪ ತಂದೆ ಗಂಗಾಧರ ನಾಯ್ಕೋಡಿ ಈತನ ಹತ್ತಿರ ನಮ್ಮೂರಿನಲ್ಲಿ 30,000/- ರೂಪಾಯಿ ಕೊಟ್ಟು ಖರಿದಿ ಮಾಡಿರುತ್ತೇನೆ ಎಂದು ತಿಳಿಸಿದನು. ಸದರಿ ಪಿಸ್ತೂಲು ನಾಡ ಪಿಸ್ತೂಲು ಇದ್ದು, ಇದಕ್ಕೆ ಯಾವುದೆ ಪರವಾನಿಗೆ ಇರುವುದಿಲ್ಲ ಅಂತಾ ತಿಳಿಸಿದನು. ಸದರಿ ಆರೋಪಿತನು ಅಕ್ರಮವಾಗಿ ಇಟ್ಟುಕೊಂಡ ಒಂದು ನಾಡ ಪಿಸ್ತೂಲು ಅ||ಕಿ|| 30,000/- ರೂ ಹಾಗೂ 01 ಜಿವಂತ ಗುಂಡು ಅ||ಕಿ|| 100/- ರೂ ಕಿಮ್ಮತ್ತಿನದು ಇದ್ದು, ಸದರಿ ಪಿಸ್ತೂಲನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

Friday, October 4, 2019

BIDAR DISTRICT DAILY CRIME UPDATE 04-10-2019


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 04-10-2019

ಧನ್ನೂರಾ ಪೊಲೀಸ್ ಠಾಣೆ ಯು.ಡಿ.ಆರ್ ನಂ. 17/2019, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಅನವರ ತಂದೆ ಅಹ್ಮದ ಮೊಜನ ವಯ: 45 ವರ್ಷ, ಸಾ: ಕೊಸಮ ರವರ ತಮ್ಮನಾದ ಸುಲ್ತಾನ ವಯ: 35 ವರ್ಷ ಇತನು ಒಂದು ವರ್ಷದಿಂದ ಹುಚ್ಚನಂತೆ ತಿರುಗಾಡುತ್ತಿದ್ದು, ಹಿಗಿರುವಲ್ಲಿ 03-10-2019 ರಂದು 0600 ಗಂಟೆಗೆ ಸುಲ್ತಾನ ಇವನು ಮನೆಯಿಂದ ಹೊಗುವಾಗ ತಾಯಿ ಸುಲ್ತಾನ ಇವನಿಗೆ ಎಲ್ಲಿಗೆ ಅಂತ ವಿಚಾರಿಸಿದಾಗ ಸುಲ್ತಾನ ಇವನು ಹೊಟಲಕ್ಕೆ ಹೊಗಿ ಚಹಾ ಕುಡಿದು ಬರುತ್ತೇನೆ ಎಂದು ಹೇಳಿ ಹೊಗಿ ತಮ್ಮ ಹೊಲದ ಕಟ್ಟೆಗೆ ಇರುವ ಬೇವಿನ ಗಿಡಕ್ಕೆ ಬಿಳಿ ಹಗ್ಗದಿಂದ ನೇಣು ಹಾಕಿ ಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುತ್ತಾನೆ, ಫಿರ್ಯಾದಿಯ ತಮ್ಮನಾದ ಸುಲ್ತಾನ ತಂದೆ ಅಹ್ಮದ ಮೊಜನ್ ವಯ: 35 ವರ್ಷ, ಸಾ: ಕೊಸಮ ಇತನು ಹುಚ್ಚತನದಿಂದ ನೇಣು ಹಾಕಿಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದು ಆತನ ಮರಣದ ಬಗ್ಗೆ ಯಾರ ಮೇಲೆ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 108/2019, ಕಲಂ. 279, 338, ಐ.ಪಿ.ಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 03-10-2019 ರಂದು ಫಿರ್ಯಾದಿ ನವಾಜ ತಂದೆ ನಬೀಸಾಬ್ ಶೇಖ್, ವಯ: 26 ವರ್ಷ, ಜಾತಿ: ಮುಸ್ಲಿಂ, ಸಾ: ಯಾಖಬಪೂರಾ ಬಸವಕಲ್ಯಾಣ ರವರ ಅಣ್ಣನಾದ ಹಾಜಿ ತಂದೆ ನಬೀಸಾಬ್ ಶೇಖ್, ವಯ: 28 ವರ್ಷ ರವರ ಇತನು ಮೋಟಾರ ಸೈಕಲ ನಂ. ಕೆಎ-39/ಜೆ-2311 ನೇದನ್ನು ಚಲಾಯಿಸಿಕೊಂಡು ಗದಗಿ ಮಠ ಕಡೆಯಿಂದ ಗಾಂಧಿ ಚೌಕ ಕಡೆಗೆ ಹೋಗುತ್ತಿರುವಾಗ ಸ್ಮಶಾನ್ ಭೂಮಿ ಹತ್ತಿರ ಯಾವುದೋ ಒಂದು ವಾಹನ ನೇದ್ದರ ಚಾಲಕನು ತನ್ನ ವಾಹನನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಹಾಜಿ ಇತನಿಗೆ ಡಿಕ್ಕಿ ಮಾಡಿ ತನ್ನ ವಾಹನ ಸಮೇತ ಓಡಿ ಹೋಗಿರುತ್ತಾನೆ, ಅದರ ನಂಬರ ಮತ್ತು ಚಾಲಕನ ಬಗ್ಗೆ ಗೊತ್ತಾಗಿರುವದಿಲ್ಲ, ಸದರಿ ಡಿಕ್ಕಿಯಿಂದ ಫಿರ್ಯಾದಿಯ ಅಣ್ಣನ ಎಡಗಣ್ಣಿಗೆ, ಎಡಹಣೆಗೆ ಭಾರಿ ರಕ್ತಗಾಯ ಹಾಗೂ ತಲೆಗೆ ಗುಪ್ತಗಾಯ ಮತ್ತು ಮೂಗಿಗೆ, ತುಟಿಗೆ ಗಟಾಯಿಗೆ ತರಚಿದ ರಕ್ತಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ, ನಂತರ ಅವರಿಗೆ ಆಟೋರಿಕ್ಷಾದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.