Police Bhavan Kalaburagi

Police Bhavan Kalaburagi

Tuesday, May 19, 2020

BIDAR DISTRICT DAILY CRIME UPDATE 19-05-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 19-05-2020


ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 67/2020 ಕಲಂ 379 ಐಪಿಸಿ :-

ದಿನಾಂಕ 18/05/2020 ರಂದು 12:30 ಗಂಟೆಗೆ ಅರ್ಜಿದಾರರಾದ ಶ್ರೀ ಮಹ್ಮದ ಯಾಸೀನ ತಂದೆ ಮಹ್ಮದ ದಸ್ತೆಗೀರ ಖಾದಿವಾಲೆ ವಯ 29 ವರ್ಷ ಜಾತಿ ಮುಸ್ಲಿಂ ಉ// ಅಟೊ ಮೊಬೈಲ್ಸ್ ಅಂಗಡಿ ವ್ಯಾಪಾರ ಸಾ// ಮಹೇಬೂಬನಗರ ಬಸವಕಲ್ಯಾಣ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶ ಎನೆಂದರೆ ಇವರ ಹತ್ತಿರ ಒಂದು ಹೊಂಡಾ ಸಿಡಿ-110 ಡ್ರೀಮ್ ಮೋಟಾರ ಸೈಕಲ್ ನಂ ಕೆಎ-56/ಜೆ-2115 ಅದರ ಚೆಸ್ಸಿ ನಂ ಎಮ್.ಇ.4ಜೆಸಿ677ಸಿಜೆ8139918 ಮತ್ತು ಇಂಜಿನ್ ನಂ ಜೆಸಿ67ಇ84145073 ಅದರ ಮಾಡಲ್ 2018 ಇರುತ್ತದೆ.  ಬೈಕಿನ ಮೌಲ್ಯ ಅ.ಕಿ. 40,000/- ರೂಪಾಯಿ ಇರುತ್ತದೆ.   ದಿನಾಂಕ 16/03/2020 ರಂದು ರಾತ್ರಿ 9 ಗಂಟೆಗೆ ಕಿರಾಣಿ ಸಾಮಾನುಗಳು ತರುವಗೋಸ್ಕರ ನನ್ನ ಮೋಟಾರ ಸೈಕಲ್ ಕೆಎ-56/ಜೆ-2115 ನೆದ್ದರ ಮೇಲೆ ಹೋಗಿ  ಬಸವಕಲ್ಯಾಣ ನಗರದ ಬಸ್ ನಿಲ್ದಾಣ ಹತ್ತಿರ ಇರುವ ಕಿರಾಣಿ ಅಂಗಡಿಯ ಎದುರುಗಡೆ   ಮೋಟಾರ ಸೈಕಲ್ ನಿಲ್ಲಿಸಿ ಕಿರಾಣಿ ಸಾಮಾನುಗಳನ್ನು ತೆಗೆದುಕೊಂಡು ಮರಳಿ ಬಂದು ನೋಡಿದಾಗ ಮೋಟಾರ ಸೈಕಲ್ ಇರುವುದಿಲ್ಲ. ಎಲ್ಲಾ ಕಡೆ ಹುಡಿಕಾಡಿದರು ಮೋ.ಸೈ. ಸಿಕ್ಕಿರುವುದಿಲ್ಲ ಯಾರೋ ಅಪರಿಚಿತರು ಮೋ.ಸೈಕಲ್ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಮುಡುಬಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 37/2020 ಕಲಂ 32, 34 ಕೆ.ಇ. ಕಾಯ್ದೆ :-

ದಿನಾಂಕ 18/05/2020 ರಂದು 1130 ಗಂಟೆಯ ಸುಮಾರಿಗೆ ಪಿಎಸ್ಐ ರವರು ಠಾಣೆಯಲ್ಲಿದ್ದಾಗ ಫೋನ್ ಮುಖಾಂತರ ಮಾಹಿತಿ ಬಂದಿದ್ದೇನೆಂದರೆ ಕಲಖೋರಾ ಗ್ರಾಮದಲ್ಲಿ ಮರಗೆಮ್ಮ ಮಂದೀರದ ಮುಂದೆ ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸರಾಯಿ ಮಾರಾಟ ಮಾಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ   ಸಿಬ್ಬಂದಿಯೊಂದಿಗೆ ಕಲಖೋರಾ ಗ್ರಾಮಕ್ಕೆ ಹೋಗಿ ಬಾಗಹಿಪ್ಪರಗಾ ರೋಡಿನ ಮೇಲೆ ಮರಗೆಮ್ಮ ಮಂದೀರದ ಇಚೆಗೆ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ಮುಂದೆ ನಡೆದುಕೊಂಡು ಹೋಗಿ ಮರೆಯಾಗಿ ನಿಂತು ನೋಡಲು ಬಾಗಹಿಪ್ಪರಗಾ ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಒಂದು ಚೀಲ ಇಟ್ಟುಕೊಂಡಿದ್ದು, ಸಂಶಯ ಬಂದು ಸದರಿ ವ್ಯಕ್ತಿಯ ಮೇಲೆ  ದಾಳಿ ಮಾಡಿ ಅವನಿಗೆ ಹಿಡಿದು ಅವನ ಹತ್ತೀರ ಇದ್ದ ಬಿಳಿ ಚೀಲ ಪರಿಶೀಲಿಸಿ ನೋಡಲಾಗಿ ಅದರಲ್ಲಿ 180 ಎಮ್ ಎಲ್ ನ 20 ಯು ಎಸ್ ಸರಾಯಿ ಬಾಟಲಗಳಿರುತ್ತವೆ. ಮತ್ತು 90 ಎಮ್ ಎಲ್ ನ 10 ಯು ಎಸ್ ವಿಸ್ಕಿ ಬಾಟಲ್ ಗಳಿದ್ದು, ಅವನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಸಂಜುಕುಮಾರ ತಂದೆ ಬಸವಣಪ್ಪ ಹುಳಗೇರಿ ವಯ 35 ವರ್ಷ ಉ: ಒಕ್ಕಲುತನ ಜಾ; ಲಿಂಗಾಯತ ಸಾ: ಕಲಖೋರಾ ಅಂತ ತಿಳಿಸಿದನು ಅವನ ಹತ್ತೀರ ಚೀಲದಲ್ಲಿದ್ದ 180 ಎಮ್ ಎಲ್ ನ 20 ಯು ಎಸ್ ಸರಾಯಿ ಬಾಟಲಗಳ ಒಟ್ಟು ಕ್ಕಿಮ್ಮತ್ತು 1212 ರೂ ಮತ್ತು 90 ಎಮ್ ಎಲ್ ನ 10 ಯು ಎಸ್ ವಿಸ್ಕಿ ಬಾಟಲ್ಗಳು ಅದರ ಕ್ಕಿಮ್ಮತ್ತು 303.20 ರೂ ಒಟ್ಟು 1515.20 ರೂಗಳಷ್ಟು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.        

Monday, May 18, 2020

BIDAR DISTRICT DAILY CRIME UPDATE 18-05-2020



ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 18-05-2020
ಬೀದರ ನೂತನ ನಗರ ಠಾಣೆ ಅಪರಾಧ ಸಂಖ್ಯೆ 55/2020 ಕಲಂ 457, 380 ಐಪಿಸಿ :-
ದಿನಾಂಕ 17/05/2020  ರಂದು 1315 ಗಂಟೆಗೆ ಫಿರ್ಯಾದಿ ಶ್ರೀ. ಶ್ರೀಮಂತ ತಂದೆ ಜಗನ್ನಾಥ ವಯ:25 ವರ್ಷ ಜಾತಿ:ಎಸ್.ಟಿ.ಗೊಂಡ ಉ:ವ್ಯಾಪಾರ ಸಾ/ಹಾಲಹಿಪ್ಪರಗಾ ತಾ/ಭಾಲ್ಕಿ. ಜಿಲ್ಲಾ/ಬೀದರ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದರ ಸಾರಾಂಶ ಏನೆಂದರೆ  ಫಿರ್ಯಾದಿಯು ಗಣೇಶ ಮೈದಾನದ ಹತ್ತೀರ ಶ್ರೀ. ಕೃಷ್ಣ ನಂದಿ ಎಂಬ ಹೆಸರಿನ ಮೊಬೈಲ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡು  ಉಪ ಜೀವಿಸಿಕೊಂಡಿದ್ದು ದಿನಾಲು   ಗ್ರಾಮದಿಂದ ಅಂಗಡಿಗೆ ಹೋಗಿ ಬರುತ್ತಿರುತ್ತಾರೆ.   ಹೀಗಿರುವಾದ ದಿನಾಂಕ 12/05/2020 ರಂದು ಸಾಯಂಕಾಲ 1800 ಗಂಟೆಗೆ  ಫಿರ್ಯಾದಿಯು ಅಂಗಡಿಯನ್ನು ಮುಚ್ಚಿ ಅಂಗಡಿಗೆ ಬೀಗ ಹಾಕಿ   ಗ್ರಾಮಕ್ಕೆ ಹೋಗಿದ್ದು ಇರುತ್ತದೆ.  ದಿನಾಂಕ 13/05/2020 ರಂದು ಮುಂಜಾನೆ 1000 ಗಂಟೆಯ ಸುಮಾರಿಗೆ ಅಂಗಡಿಗೆ ಬಂದು ನೋಡಿದಾಗ ಅಂಗಡಿಯ ಮೆಲೆ ಹಾಕಿದ ತಗಡದ ಬೋಲ್ಟ ಹಾಗು   ಅಂಗಡಿಯ ಮೇಲಿನ ತಗಡ ತೆಗೆದಿದ್ದು, ಅಂಗಡಿಯಲ್ಲಿ ಹೋಗಿ ನೋಡಿದಾಗ ಅಂಗಡಿಯಲ್ಲಿ ಕ್ಯಾಶ ಕೌಂಟರ ಮುರಿದಿದ್ದು, ಕ್ಯಾಶ ಕೌಂಟರನಲ್ಲಿ ಇಟ್ಟಿದ್ದ  5,000/- ರೂಪಾಯಿ ನಗದು ಹಣ ಇರಲಿಲ್ಲ.  ಕಾರಣ  ಮೊಬೈಲ ಅಂಗಡಿಯ ತಗಡನ್ನು ತೆಗೆದು ಅಂಗಡಿಯ ಕ್ಯಾಶ ಕೌಂಟರಿನ ಬೀಗ ಮುರಿದು, ಅದರಲ್ಲಿ ಇಟ್ಟಿದ್ದ 5000/- ರೂ. ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋದ ಅಪರಿಚಿತ ಕಳ್ಳರ ವಿರುದ್ಧ ಕಾನೂನು ಕ್ರಮ ಕೈಗೋಳ್ಳುವಂತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಗಾಂಧಿಗಂಜ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 80/2020 ಕಲಂ 454, 457, 380 ಐ.ಪಿ.ಸಿ. :-
ದಿನಾಂಕ 17/05/2020 ರಂದು 1230 ಗಂಟೆಗೆ ಫಿರ್ಯಾದಿ ಶ್ರೀಮತಿ ನಿಖತ್ ಅಫ್ ಶಾನ ಹೇಡ್ ಮಾಸ್ತರ ಸರಕಾರಿ ಉರ್ದ ಹೈಸ್ಕೂಲ್ ಆರ್.ಎಮ್.ಎಸ್.ಎ ಅಮಲಾಪೂರ  ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ. ಲಾಕಡೌನ ಇದ್ದ ಪ್ರಯುಕ್ತ ದಿನಾಂಕ 31/03/2020 ರಿಂದ ಶಾಲೆ ಬಂದ ಇದ್ದು  ದಿನಾಂಕ 15/05/2020 ರಂದು ನಮ್ಮ ಶಾಲೆಗೆ ಹೋಸ ಹೆಡ್ ಮಾಸ್ಟ್ತರ ಬರುತಿರುವದರಿಂದ ಫಿರ್ಯಾದಿಯು ಶಾಲೆಗೆ ಹೋಗಿ ಹೋಸದಾಗಿ ಬಂದ ಹೆಡ್ ಮಾಸ್ತ ರವರಿಗೆ ಪ್ರಭಾರ ಕೊಡುವ ಗೋಸ್ಕರ ಕಂಪ್ಯೂಟರ ಅಳವಡಿಸಿದ ಕೊಣೆಯಲ್ಲಿ ನೋಡಲು ಕಂಪ್ಯೂಟರ ಕೊಣೆಯ ಬಾಗಿಲಿಗೆ ಹಾಕಿದ ಕೀಲಿ ಮುರಿದಿದ್ದು, ಒಳಗೆ ಹೋಗಿ ನೋಡಲು   ಶಾಲೆಗೆ ಸರಬರಾಜ ಆದ ಕಂಪ್ಯೂಟರ ಅಳವಡಿಸಿದ 8 ಎಕ್ಷಿಡ್ ಬ್ಯಾಟರಿ  ಕಳುವಾಗಿದ್ದು  ಕಂಡು ಬರುತ್ತದೆ. ಕಳುವಾದ ಬ್ಯಾಟರಿಯ ಒಂದರ ಬೆಲೆ 7650/ ರೂಪಾಯಿ ಇದ್ದು ಒಟ್ಟು 8 ಬ್ಯಾಟರಿಗಳ ಅ||ಕಿ|| 61,200/ ರೂಪಾಯಿ ಬೇಲೆ ಬಾಳುವ ಬ್ಯಾಟರಿಗಳು ದಿನಾಂಕ 31/03/2020 ರಂದು 15-30 ಗಂಟೆಯಿಂದ  ದಿನಾಂಕ 15/05/2020 ಬೆಳ್ಳಿಗೆ 9 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತ ಕೊಟ್ಟ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಗಾಂಧಿಗಂಜ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 82/2020 ಕಲಂ 87 ಕೆಪಿ ಕಾಯ್ದೆ :-

ದಿನಾಂಕಃ 17/05/2020 ರಂದು 2245 ಗಂಟೆಗೆ  ಪಿಎಸ್ಐ ರವರು ಠಾಣೆಯಲ್ಲಿದ್ದಾಗ ಬೀದರ ಗಾಂಧಿಗಂಜದಲ್ಲಿರುವ ಎಪಿಎಮ್ಸಿ ಯಾರ್ಡನಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪೀಟ ಜೂಜಾಟ ಆಡುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಗಾಂಧಿಗಂಜದೆಲ್ಲಿರುವ ಎಪಿಎಮ್ಸಿ ಯಾರ್ಡಗೆ ಹೋಗಿ ಜೀಪನಿಂದ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲಾಗಿ ಬಾತ್ಮಿಯನ್ನು ಖಚಿತಪಡಿಸಿಕೊಂಡು 2130 ಗಂಟೆಗೆ ದಾಳಿ ಮಾಡಿ 10 ಜನರನ್ನು ಹಿಡಿದುಕೊಂಡು ಅವರಿಗೆ ವಿಚಾರಣೆ ಮಾಡಲಾಗಿ ಅವರುಗಳು 1) ರಮೇಶ ತಂದೆ ಬಸಪ್ಪ ಮಗರ್ೆ ವಯ: 51,  ಇವರ ಅಂಗ ಜಡ್ತಿ ಮಾಡಲಾಗಿ   ಹತ್ತಿರ 350/- ರೂ. 02) ಅಶೋಕ ತಂದೆ ಸಿದ್ರಾಮ ಬಿರಾದಾರ ವಯ: 50, ಜಾತಿ: ಲಿಂಗಾಯತ,  ಅಂಗ ಜಡ್ತಿ ಮಾಡಲಾಗಿ ಇವನ ಹತ್ತಿರ 480/- ರೂ. 03) ಹಾವಪ್ಪಾ ತಂದೆ ಮಾಣಿಕ್ಪಪಾ ವಯ: 46, ಇವನ ಅಂಗ ಜಡ್ತಿ ಮಾಡಲಾಗಿ ಇವನ ಹತ್ತಿರ 320/- ರೂ. 04) ನಾರಾಯಣ ತಂದೆ ಮಾಣಿಕಪ್ಪಾ ಶಟಕಾರ ವಯ: 50,  ಇವನ ಅಂಗ ಜಡ್ತಿ ಮಾಡಲಾಗಿ ಇವನ ಹತ್ತಿರ 500/- ರೂ. 05) ರವಿ ತಂದೆ ಪಂಡರಿ ನುದನೂರೆ ವಯ: 30, ಜಾತಿ:ಗೊಂಡ, ಉಃಒಕ್ಕಲುತನ ಸಾಃ ವಲ್ಲೆಪೂರ ಗ್ರಾಮ ಇವನ ಅಂಗ ಜಡ್ತಿ ಮಾಡಲಾಗಿ ಇವನ ಹತ್ತಿರ 490/- ರೂ. 06) ನಾಗಶೆಟ್ಟಿ ತಂದೆ ಶಿವರಾಜ ವಯ: 33,   ಇವನ ಅಂಗ ಜಡ್ತಿ ಮಾಡಲಾಗಿ ಇವನ ಹತ್ತಿರ 320/- ರೂ. 07) ಸಂತೋಷ ತಂದೆ ವಿಶ್ವನಾಥ ಬೆಳಕೇರೆ ವಯಃ 42, ಇವನ ಅಂಗ ಜಡ್ತಿ ಮಾಡಲಾಗಿ ಇವನ ಹತ್ತಿರ 300/- ರೂ. 08) ಓಂಕಾರ ತಂದೆ ಸಂಗಪ್ಪಾ ಸುಲ್ತಾನಪೂರ ವಯಃ 31, ಇವನ ಅಂಗ ಜಡ್ತಿ ಮಾಡಲಾಗಿ ಇವನ ಹತ್ತಿರ 290/- ರೂ. 09) ಮೊಗಲಪ್ಪ ತಂದೆ ಬಂಡೆಪ್ಪಾ ಚಿಲ್ಲಗರ್ೆ ವಯಃ 48,   ಇವನ ಅಂಗ ಜಡ್ತಿ ಮಾಡಲಾಗಿ ಇವನ ಹತ್ತಿರ 410/- ರೂ. 10) ರಾಜಕುಮಾರ ತಂದೆ ನಾಗಶೆಟ್ಟಿ ಉಜ್ಜಣಗಿ ವಯಃ 40,  ಇವನ ಅಂಗ ಜಡ್ತಿ ಮಾಡಲಾಗಿ ಇವನ ಹತ್ತಿರ 380/- ರೂ. ಹಾಗು ಇವರುಗಳೆಲ್ಲರ ಮಧ್ಯದಲ್ಲಿ ಇದ್ದ 52 ಇಸ್ಪೀಟ್ ಎಲೆಗಳು ಮತ್ತು ನಗದು ಹಣ 1510/- ರೂ. ಹೀಗೆ ಒಟ್ಟು 52 ಇಸ್ಪೀಟ್ ಎಲೆಗಳು ಮತ್ತು ಒಟ್ಟು ರೂ. 5350/- ರೂ. ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಹುಲಸೂರ ಠಾಣೆ  ಅಪರಾಧ ಸಂಖ್ಯೆ 33/2020 ಕಲಂ 279, 337, 338, 304(ಎ) ಐಪಿಸಿ :-
ದಿನಾಂಕ 17/05/2020 ರಂದು 1245 ಗಂಟೆಗೆ ಫಿರ್ಯಾದಿ ಸತೀಷ ತಂದೆ ಪ್ರಭುರಾವ ಬಿರಾದಾರ ವಯ: 41 ವರ್ಷ ಜಾತಿ: ಮರಾಠಾ ಉ: ವ್ಯಾಪಾರ ಸಾ|| ಜಾಮಖಂಡಿ ತಾ|| ಭಾಲ್ಕಿ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದರ ಸಾರಾಂಶವೇನೆಂದರೆ ಫಿರ್ಯಾದಿಯು ವ್ಯಾಪಾರ ಮಾಡಿಕೊಂಡು ಉಪಜೀವಿಸುತ್ತಿದ್ದು ಜಾಮಖಂಡಿಯಲ್ಲಿ ಮತ್ತು ಭಾಲ್ಕಿಯಲ್ಲಿಯೂ ಸಹ   ಮನೆ ಇರುತ್ತದೆ.    ಕೆಲವು ದಿನಗಳ ಹಿಂದೆ ನನ್ನ ತಂದೆಯಾದ ಪ್ರಭುರಾವ ರವರು ಮೃತಪಟ್ಟಿದ್ದು  ು ದಿನಾಂಕ 17/05/2020 ರಂದು ಭಾಲ್ಕಿಯ  ಮನೆಯಲ್ಲಿ  ಇವರ ತಂದೆ ತೀರಿಕೊಂಡ 11 ನೇ ದಿನದ ಕಾರ್ಯಕ್ರಮವಿದ್ದ ಕಾರಣ   ಕಾಕನಾದ ಹಣಮಂತರಾವ ತಂದೆ ನರಸಿಂಗರಾವ ಬಿರಾದಾರ ವಯ: 60 ವರ್ಷ  ಮತ್ತು   ಭಾಗವತ ತಂದೆ ಶಹಾಜಿರಾವ ತಾಂಬೋಳೆ ವಯ: 40 ವರ್ಷ   ರಾಜೇಂದ್ರ ತಂದೆ ಪಂಡರಿನಾಥ ಬಿರಾದಾರ, ರಾಜೇಂದ್ರ ತಂದೆ ಶಂಕರಾವ ಬಿರಾದಾರ ರವರು ಭಾಲ್ಕಿಯಲ್ಲಿರುವ ತಮ್ಮ ಮನೆಗೆ  ಮುಂಜಾನೆ ಬಂದಿರುತ್ತಾರೆ. ಕಾರ್ಯಕ್ರಮ ಮುಗಿಸಿಕೊಂಡು ಎಲ್ಲರೂ ಜಾಮಖಂಡಿಗೆ ಹೋಗುತ್ತೆವೆಂದು  ಹೇಳಿ ಅವರವರ ಮೋಟಾರ್ ಸೈಕಲಗಳ ಮೇಲೆ   ಮನೆಯಿಂದ ಹೋಗಿರುತ್ತಾರೆ.  ದಿನಾಂಕ 17/05/2020 ರಂದು 1135 ಗಂಟೆಗೆ   ರಾಜೇಂದ್ರ ತಂದೆ ಶಂಕರಾವ ಬಿರಾದಾರ ರವರು  ಪೋನ್ ಮಾಡಿ ತಿಳಿಸಿದ್ದೆನೆಂದರೆ ನಾನು ಮತ್ತು ರಾಜೇಂದ್ರ ತಂದೆ ಪಂಡರಿನಾಥ ಬಿರಾದಾರ ಇಬ್ಬರು  ನನ್ನ ಮೋಟಾರ್ ಸೈಕಲ್ ಮೇಲೆ ಮತ್ತು ನಮ್ಮೂರ ಭಾಗವತ ಮತ್ತು ಹಣಮಂತರಾವ ರವರು ಭಾಗವತ ರವರ ಮೋಟಾರ್ ಸೈಕಲ್ ನಂ ಕೆಎ39 ಹೆಚ್ 7178 ನೇದರ ಮೇಲೆ ಜಾಮಖಂಡಿಗೆ ಹೋಗುತ್ತಿದೆವು. ಭಾಗವತ ರವರು ಮೋಟಾರ್ ಸೈಕಲ್ ನಂ ಕೆಎ39 ಹೆಚ್ 7178 ನೇದರ ಹಿಂದೆ ಹಣಮಂತರಾವ ರವರಿಗೆ ಕೂಡಿಸಿಕೊಂಡು ಮೋಟಾರ್ ಸೈಕಲ್ ಚಲಾಯಿಸಿಕೊಂಡು ನಮಗಿಂತ ಸ್ವಲ್ಪ ಮುಂದೆ ಹೋಗುತ್ತಿದ್ದರು. ಸೋಲದಾಪಕಾ ಗ್ರಾಮ ದಾಟಿದ ನಂತರ ಸೋಲದಾಪಕಾ ಶಿವಾರದ ಮನೋಹರ ಮಸಾಳೆ ರವರ ಹೊಲದ ಹತ್ತಿರ ಭಾಲ್ಕಿ- ಹುಲಸೂರ ರಸ್ತೆಯ ಮೇಲೆ   1130 ಗಂಟೆಯ ಸುಮಾರಿಗೆ ಭಾಗವತ ರವರು ಮೋಟಾರ್ ಸೈಕಲ್ ನಂ ಕೆಎ39 ಹೆಚ್ 7178 ನೇದನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗಿ ಎಮ್ಮೆಗೆ ಡಿಕ್ಕಿ ಮಾಡಿದರಿಂದ ಭಾಗವತ ಮತ್ತು ಹಣಮಂತರಾವ ಇಬ್ಬರು ಮೋಟಾರ್ ಸೈಕಲ್ ಸಮೇತ ಕೆಳಗೆ ಬಿದ್ದು ಇಬ್ಬರು ಗಾಯಗೊಂಡಿರುತ್ತಾರೆ. ಭಾಗವತ ಈತನು ಮೋಟಾರ್ ಸೈಕಲ್ ನಂ ಕೆಎ39 ಹೆಚ್ 7178 ನೇದರ ಮೇಲೆ   ಕಾಕನಾದ ಹಣಮಂತರಾವ ಈತನಿಗೆ ಕೂಡಿಸಿಕೊಂಡು ಜಾಮಖಂಡಿಗೆ ಹೋಗುವಾಗ ಸೋಲದಾಪಕಾ ಶಿವಾರದ ಮನೋಹರ ಮಸಾಳೆ ರವರ ಹೊಲದ ಹತ್ತಿರ ಭಾಲ್ಕಿ- ಹುಲಸೂರ ರಸ್ತೆಯ ಮೇಲೆ ತಾನು ಚಲಾಯಿಸುತ್ತಿರುವ ಮೋಟಾರ್ ಸೈಕಲ್ ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ಎಮ್ಮೆಗೆ ಡಿಕ್ಕಿ ಮಾಡಿದರಿಂದ ಇಬ್ಬರು ಕೆಳಗೆ ಬಿದ್ದು ಗಾಯಗೊಂಡು ಹಣಮಂತರಾವ ರವರ ತಲೆಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯವಾಗಿ ಮೃತಪಟ್ಟಿರುತ್ತಾನೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.             

Sunday, May 17, 2020

BIDAR DISTRICT DAILY CRIME UPDATE 17-05-2020



ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 17-05-2020

ಜನವಾಡಾ ಪೊಲೀಸ್ ಠಾಣೆ ಯು.ಡಿ.ಆರ್. ಸಂ. 07/2020 ಕಲಂ 174 ಸಿಆರ್.ಪಿ.ಸಿ. :-
ದಿನಾಂಕ 16/05/2020 ರಂದು 0810 ಗಂಟೆಗೆ ಫಿರ್ಯಾದಿ ವೈಜಿನಾಥ ರೂಪನರ ಸಾ|| ಶ್ರೀಮಂಡಲ ಗ್ರಾಮ ತಾ|| ಜಿ|| ಬೀದರ ರವರು ಖುದ್ದಾಗಿ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದರ ಸಾರಾಂಶವೆನೆಂದರೆ  ಫಿರ್ಯಾದಿಯ ಮಗನಾದ ಬಾಲಾಜಿ ವಯ|| 24 ವರ್ಷ  ಇವನಿಗೆ ಅಂದಾಜು 4 ವರ್ಷದ ಹಿಂದೆ ಮದುವೆಯಾಗಿದ್ದು ಅವನಿಗೆ ಒಬ್ಬಳು ಮಗಳು ಶ್ರದ್ದಾ ಇರುತ್ತಾಳೆ. ಇವರ ಸೋಸೆ ಮೀರಾ ಇವಳು ಒಂದು ತಿಂಗಳ ಹಿಂದೆ ತವರು ಮನೆಗೆ ಹೊಗಿರುತ್ತಾಳೆ. ಲಾಕಡೌನ್ ಇದ್ದ ಪ್ರಯುಕ್ತ ವಜ್ಜರ (ಮಹಾರಾಷ್ಟ್ರ) ದಿಂದ ವಾಪಸ್ಸು ಬಂದಿರುವುದಿಲ್ಲ. ನಮಗೆ ನಮ್ಮೂರ ಶಿವಾರದಲ್ಲಿ ಸರ್ವೆ ನಂ 19 ರಲ್ಲಿ ನನ್ನ ಹೆಸರಿನಲ್ಲಿ 3 ಎಕರೆ 12 ಗುಂಟೆ ಜಮೀನು ಇದ್ದು ಆ ಜಮೀನು ನನ್ನ ಮಗ ಬಾಲಾಜಿ ಇತ ಇವನೆ ನೋಡಿಕೊಳ್ಳುತ್ತಾನೆ. ಇವರ ಹೆಸರಿನ ಮೇಲೆ ಇರುವ ಜಮೀನಿನ ಮೇಲೆ ಕೃಷ್ಣ ಗ್ರಾಮೀಣ ಬ್ಯಾಂಕ್ ಬೀದರನಲ್ಲಿ ಅಂದಾಜು 65,000/- ರೂ ನಷ್ಟು ಹಾಗು ನೇಮತಾಬಾದ ಪಿಕೆಪಿಎಸ್ ನಲ್ಲಿ 60,000/- ರೂ ನಷ್ಟು ಬೇಳೆ ಸಾಲ ಪಡೆದಿರುತ್ತೆವೆ. 2-3 ವರ್ಷಗಳಿಂದ ಮಳೆ ಸರಿಯಾಗಿ ಬಿಳದೆ ಹೊಲದಲ್ಲಿ ಬೇಳೆ ಬೆಳೆದಿರುವುದಿಲ್ಲ. ಬಾಲಾಜಿ ಈತನು ಆವಾಗ ಆವಾಗ ನಮಗೆ ಸಾಲ ಬಹಳ ಆಗಿದೆ ಹೆಗೆ ತಿರಿಸುವುದು ಎಂದು ಚಿಂತೆ ಮಾಡುತ್ತಿದ್ದು, ನಾನು ಸಾಯುತ್ತೆನೆ ಅಂತಾ ಅವಾಗ ಅವಾಗ ಹೆಳುತ್ತಿದ್ದಾಗ ನಾನು ಅವನಿಗೆ ಹೆಗಾದರು ಮಾಡಿ ಸಾಲ ತಿರಿಸೋಣಾ ಅಂತಾ ಸಮಾಧಾನ ಹೆಳುತ್ತಿದ್ದೆವು. ಹಿಗಿರುವಲ್ಲಿ ದಿನಾಂಕ 15/05/2020 ರಂದು ಫಿರ್ಯಾದಿ ಮತ್ತು ಇವರ ಹೆಂಡತಿ ಕಲಾವತಿ,   ಮಗ ಅಮೂಲ, ಆಶಾರಾಣಿ, ರವರು ಅಂದಾಜು ರಾತ್ರಿ 10 ಗಂಟೆಯ ಸುಮಾರಿಗೆ ಊಟ ಮಾಡಿ ಮನೆಯ ಪಡಸಾಲೆಯಲ್ಲಿ ಮಲಗಿಕೊಂಡಾಗ ಬಾಲಾಜಿ  ಊಟ ತೆಗೆದುಕೊಂಡು ಮನೆಯ ಬೆಡರೂಮಿನಲ್ಲಿ ಓಳಗೆ ಹೊಗಿ ನಾನು ಊಟ ಮಾಡುತ್ತೆನೆ ನೀವು ಮಲಗಿ ಅಂತಾ ಹೇಳಿ ಬೆಡರೂಮಿನ ಕೊಂಡಿ ಹಾಕಿಕೊಂಡಿರುತ್ತಾನೆ. ಅಂದಾಜು ರಾತ್ರಿ 12 ಗಂಟೆಯ ಸುಮಾರಿಗೆ ಫಿರ್ಯಾದಿ ಸಣ್ಣ ಮಗ ಅಮೂಲ ಇವನು ಫಿರ್ಯಾದಿಗೆ ಎಬ್ಬಿಸಿ ಅಣ್ಣ ಬಾಲಾಜಿ ತನ್ನ ವಾಟ್ಸ್ ಅಪ್ ಸ್ಟೇಟಸ್ ನಲ್ಲಿ ಬೈ ಬೈ ದೂನಿಯಾ ಅಂತಾ ಸ್ಟೆಟಸ್ ಇಕ್ಕಿರುತ್ತಾನೆ. ಅಂತಾ ತಿಳಿಸಿದ್ದು ಕೂಡಲೆ  ಬೇಡ್ ರೂಮಿನ ಬಾಗಿಲ ತಟ್ಟೆ ಮುರಿದು ಓಳಗೆ ಹೊಗಿ ನೋಡಲು   ಬಾಲಾಜಿ ಈತನು ಫ್ಯಾನಿನ ಕೊಂಡಿಗೆ ಝುಕಾಲಿ ಹಾಕುವ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಗಾಂಧಿಗಂಜ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 79/2020 ಕಲಂ 379 ಐಪಿಸಿ :-
ದಿನಾಂಕ 16/05/2020 ರಂದು 18-00 ಗಂಟೆಗೆ ಗಣಪತರಾವ ತಂದೆ ಬಸವಂತರಾವ ಕೊಟೆ  ಸಾ|| ನ್ಯೂ ಆದರ್ಶ ಕಾಲೋನಿ ಬೀದರ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ ದಿನಾಂಕ 10/05/2020 ರಂದು ಎಂದಿನಾಂತೆ ತನ್ನ ಕಿರಾಣ ಅಂಗಡಿಯ ವ್ಯಾಪರ ಬಂದ್ ಮಾಡಿ ರಾತ್ರಿ ಅಂದಾಜು 9 ಗಂಟೆಗೆ  ನ್ಯೂ ಆದರ್ಶ ಕಾಲೋನಿಯಲ್ಲಿರುವ ಮನೆಗೆ   ಮೋಟಾರ ಸೈಕಲ್ ನಂ ಕೆ.ಎ.38 ಕೆ-9243 ನೇದ್ದರ ಮೇಲೆ ಬಂದು ಮೊಟಾರ ಸೈಕಲ್ ಮನೆಯ ಮುಂದೆ ನಿಲ್ಲಿಸಿದ್ದು ಇರುತ್ತದೆ. ದಿನಾಂಕ 11/05/2020 ರಂದು ಮುಂಜಾಣೆ 7 ಗಂಟೆಯ ಸುಮಾರಿಗೆ   ಎದ್ದು ನೋಡಲು ರಾತ್ರಿ ಮನೆಯ ಮುಂದೆ ನಿಲ್ಲಿಸಿದ್ದ ಮೋಟಾರ ಸೈಕಲ ನಂ ಕೆ.ಎ.38 ಕೆ-9243 ನೇದ್ದು ಕಾಣದೆ ಇರವದರಿಂದ ಅಕ್ಕ ಪಕ್ಕದಲ್ಲಿ ಹುಡುಕಾಡಲಾಗಿ ನನ್ನ ಮೋಟಾರ ಸೈಕಲ್ ಸಿಕ್ಕಿರುವದಿಲ್ಲಾ. ಕಾರಣ   ಮೋಟಾರ ಸೈಕಲ್ ನಂ ಕೆ.ಎ.38 ಕೆ-9243  ನೇದ್ದು ದಿನಾಂಕ 10/05/2020 ರ ರಾತ್ರಿ 9 ಗಂಟೆಯಿಂದ ದಿನಾಂಕ 11/05/2020 ರ ಬೆಳ್ಳಿಗೆ 7 ಗಂಟೆಯ ಅವಧಿಯಲ್ಲಿ ಯಾರೋ ಅಪರಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ನೂತನ ನಗರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 09/20 ಕಲಂ 174(ಸಿ) ಸಿ.ಆರ್.ಪಿ.ಸಿ. :-

ದಿನಾಂಕ 16/05/2020 ರಂದು 2000 ಗಂಟೆಗೆ ಬೀದರ ಸರ್ಕಾರಿ ಆಸ್ಪತ್ರೆಯಿಂದ ಮಾಹಿತಿ ಬಂದ ಮೇರೆಗೆ 2030 ಗಂಟೆಗೆ ಬೀದರ ಸಕರ್ಾರಿ ಆಸ್ಪತ್ರೆಗೆ ಭೇಟ್ಟಿ ನೀಡಿ ಸಂಗಮ್ಮಾ ಗಂಡ ಕಾಶಿನಾಥ ಬೋಳಶೆಟ್ಟೆ, 63 ವರ್ಷ,  ರವರ ಹೇಳಿಕೆ ಪಡೆದುಕೊಂಡಿದ್ದು ಸಾರಾಂಶವೇನಂದರೇ, ಇವರ ಮಗಳಾದ ಲಕ್ಷ್ಮಿ ಇವಳಿಗೆ ಸುಮಾರು 15 ವರ್ಷಗಳ ಹಿಂದೆ ಹುಮನಾಬಾದ ನಗರದ ಶರಣಪ್ಪಾ ಬಶೇಟ್ಟಿ ರವರ ಮಗನಾದ ಪ್ರಭು ಈತನೊಂದಿಗೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ.   ಅಳಿಯನಾದ ಪ್ರಭು ಈತನು ಸುಮಾರು 10 ವರ್ಷಗಳಿಂದ ಕೊಳಾರ ಕೈಗಾರಿಕಾ ಪ್ರದೇಶದಲ್ಲಿರುವ ಎಸ್.ಎನ್-2 ಕಂಪನಿಯಲ್ಲಿ ಕೆಲಸ ಮಾಡಿಕೊಂಡು ತನ್ನ ಹೆಂಡತಿ ಮಕ್ಕಳೊಂದಿಗೆ ಕೊಳಾರ(ಕೆ) ಗ್ರಾಮದಲ್ಲಿಯೇ ವಾಸವಾಗಿರುತ್ತಾರೆ. ಹೀಗಿರುವಲ್ಲಿ  ದಿನಾಂಕ 16/02/2020 ರಂದು ಫಿರ್ಯಾದಿಯು ಮನೆಯಲ್ಲಿದ್ದಾಗ ಅಂದಾಜು 1130 ಗಂಟೆಯ ಸುಮಾರಿಗೆ   ಅಳಿಯನಾದ ಪ್ರಭು ಈತನು ನನಗೆ ಫೋನ ಮಾಡಿ ಲಕ್ಷ್ಮಿ ಇವಳಿಗೆ ಆರಾಮ ಇಲ್ಲ ಬೇಗ ಬನ್ನಿ ಎಂದು ತಿಳಿಸಿದಾಗ ಫಿರ್ಯಾದಿ ಮತ್ತು ಮಗನಾದ ಸಂಗಮೇಶ ರವರುಗಳು ಕೂಡಿಕೊಂಡು ಅಂದಾಜು 2 ಪಿ.ಎಮ್. ಗಂಟೆಗೆ ಕೊಳಾರ(ಕೆ) ಗ್ರಾಮಕ್ಕೆ ಹೋಗಿ ಹಾಜರಿದ್ದ ನನ್ನ ಮಗಳಾದ ಲಕ್ಷ್ಮಿ ಇವಳಿಗೆ ಏನಾಗಿದೆ ಅಂತ ಕೇಳಿದಾಗ ಇವರ ಮಗಳು ತಿಳಿಸಿದ್ದೇನಂದರೇ, ಸುಮಾರು 10-15 ದಿನಗಳಿಂದ ತನಗೆ  ತಲೆನೋವು ಹಾಗು ವಾಂತಿಯಾಗುತ್ತಿದ್ದರಿಂದ ಈ ಬಗ್ಗೆ ಕೊಳಾರ(ಕೆ) ಗ್ರಾಮದಲ್ಲಿ ಆಸ್ಪತ್ರೆಯಲ್ಲಿ ತೋರಿಸಿಕೊಂಡಿದ್ದು ಇರುತ್ತದೆ. ಹೀಗಿರುವಲ್ಲಿ  ದಿನಾಂಕ 16/05/2020 ರಂದು ಮುಂಜಾನೆಯಿಂದ ನನಗೆ ಬಹಳ ತಲೆನೋವು ಹಾಗು ವಾಂತಿಯಾಗುತ್ತಿದ್ದರಿಂದ ಮನೆಯಲ್ಲಿದ್ದ ಗುಳಿಗೆಗಳು ಸೇವಿಸಿದರೂ ಕೂಡ   ತಲೆನೋವು ಕಡಿಮೆ ಆಗುತ್ತಿಲ್ಲ ಅಂತ ತಿಳಿಸಿರುತ್ತಾಳೆ.   ಮಗಳಾದ ಲಕ್ಷ್ಮಿ ಗಂಡ ಪ್ರಭು ವಯಸ್ಸು-35 ವರ್ಷ ಇವಳಿಗೆ ಬೀದರ ಸಕರ್ಾರಿ ಆಸ್ಪತ್ರೆಯಲ್ಲಿ 1530 ಗಂಟೆಯ ಸುಮಾರಿಗೆ ದಾಖಲಿಸಿದ್ದು ಇರುತ್ತದೆ.  ಲಕ್ಷ್ಮಿ ಇವಳು ಚಿಕಿತ್ಸೆ ಕಾಲಕ್ಕೆ ಚಿಕಿತ್ಸೆ ಫಲಕಾರಿಯಾಗದೇ 1730 ಗಂಟೆಯ ಸುಮಾರಿಗೆ ಬೀದರ ಸಕರ್ಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾಳೆ. ಅಂತಾ ನೀಡಿದ ದೂರಿನ ಮೇರೆಗೆ ಯು.ಡಿ.ಆರ್. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಔರಾದ(ಬಿ) ಪೊಲೀಸ್ ಠಾಣೆ ಅಪರಾಧ ಸಂಖ್ಯೆ 45/2020 ಕಲಂ 78(3) ಕೆಪಿ ಕಾಯ್ದೆ :-
ದಿನಾಂಕ 16-05-2020 ರಂದು 1140 ಗಂಟೆಗೆ ಠಾಣೆಯಲ್ಲಿದ್ದಾಗ ಔರಾದ(ಬಿ) ಪಟ್ಟಣದ ರಾಮನಗರದ ಸರಕಾರಿ ಶಾಲೆಯ  ಹತ್ತಿರ ರೋಡಿನ ಮೇಲೆ ಒಬ್ಬ ವ್ಯೆಕ್ತಿ ಅಕ್ರಮ ಚಟುವಟಿಕೆಯಲ್ಲಿ ತೊಡಗಿರುತ್ತಾನೆ ಎಂದು  ಮಾಹಿತಿ ಮೇರೆಗೆ ಪಿಎಸ್ಐ ರವರು ಸಿಬ್ಬಂದಿಯೊಂದಿಗೆ ಹೋಗಿ ನೋಡಿದಾಗ ಒಬ್ಬ ವಕ್ತಿಯು ಹೋಗಿ ಬರುವ ಸಾರ್ವಜನಿಕರಿಗೆ ಕೂಗಿ ಕೂಗಿ ಕರೆದು ಅದೃಷ್ಟ ಸಂಖ್ಯೆಗೆ ಹಣ ಹಚ್ಚ್ಚಿದರೆ 1/-ರೂ ಗೆ 80/-ರೂ 10 ರೂ ಗೆ 800/-ರೂ ಕೊಡುತ್ತೇವೆ ಎಂದು ಹೇಳಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಅನ್ನುವ ಅಂಕಿ ಸಂಖ್ಯೆಯ ಚೀಟಿಗಳು ಬರೆದುಕೊಳ್ಳುತ್ತಿದ್ದನ್ನು ನೋಡಿ  ದಾಳಿ ಮಾಡಿದಾಗ ಸಮವಸ್ತ್ರದ ನೋಡಿ ಅದೃಷ್ಟ ಸಂಖ್ಯೆಗೆ ಹಣ ಕೊಡುತ್ತಿದ್ದ ಜನರು ಅಲ್ಲಿಂದ ಓಡಿ ಹೋಗಿರುತ್ತಾರೆ. ಸದರಿ ಹಣ ಪಡೆದುಕೊಳ್ಳುತ್ತಿದ್ದ ವ್ಯಕ್ತಿಗೆ ಹಿಡಿದುಕೊಂಡು ಹೆಸರು ವಿಳಾಸ ವಿಚಾರಿಸಿ ಅಂಗ ಪರಿಶೀಲನೆ ಮಾಡಿ ನೋಡಲು ತನ್ನ ಹೆಸರು ನಾರಾಯಣ ತಂದೆ ಪಾಂಡುರಂಗ ಅಜ್ಜನಸೊಂಡೆ ವಯ 60 ವರ್ಷ ಜಾತಿ ಮರಾಠಾ ಸಾ: ಹೊಕ್ರಾಣಾ ಈತನ ಹತ್ತಿರ ನಗದು ಹಣ 2100/-ರೂ ,ಜಪ್ತಿ  ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.                                                             

Saturday, May 16, 2020

BIDAR DISTRICT DAILY CRIME UPDATE 16-05-2020



ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 16-05-2020

ಬೇಮಳಖೇಡಾ  ಪೊಲೀಸ ಠಾಣೆ ಅಪರಾಧ ಸಂಖ್ಯೆ 16/2020 279.304(ಎ) ಐಪಿಸಿ ಜೊತೆ 187 ಐಎಮ.ವಿ ಎಕ್ಟ್  :-

ದಿನಾಂಕ: 16-05-2020 ರಂದು 0100 ಗಂಟೆಗೆ ಫಿರ್ಯಾದಿ ಎಮ್.ಡಿ. ಮುಸ್ತಾಫ್ ತಂದೆ ಮೊಹ್ಮದ್ ಮದಾರ ಪಟೆಲ ತಾದಲಾಪೂರವಾಲೆ  ವಯ 27 ವರ್ಷ  ಸಾ: ಮೊಗದಾಳ ಗ್ರಾಮ. ರವರು ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ 15-05-2020 ರಂದು ಫಿರ್ಯಾದಿ ಅಣ್ಣ ಮೌಲಾನಾ ತಂದೆ ಮದರ   ಪಟೇಲ ತಾದಲಾಪೂರವಾಲೆ  ವಯ 35 ವರ್ಷ  ತನ್ನ  ಮೋಟಾರ ಸೈಕಲ ನಂ ಕೆಎ-38 ಇ -5561 ನೇದರ ಮೇಲೆ ಮನ್ನಾಎಖೆಳ್ಳಿ ಗ್ರಾಮದ ಅವನ ಗೆಳೆಯನಾದ ಜಾವಿದ ಟ್ರಾಕ್ಟರ ಮೆಕ್ಯಾನಿಕ ಇವನ ಹತ್ತಿರ ಹೋಗಿ ಭೇಟಿಯಾಗಿ 15-05-2020  ರಾತ್ರಿ 23:00   ಗಂಟೆಗೆ ಮರಳಿ  ರಾ.ಹೆ.ನಂ 65 ರ ಮೇಲೆ ನಿಜಾಮೋದ್ದಿನ ರವರ ಹೊಲದ ಹತ್ತಿರ ಬರುತ್ತಿರುವಾಗ ಎದುರಿನಿಂದ ಅಂದರೆ ಮರಕುಂದಾ ಕಡೆಯಿಂದ ಯಾವುದೋ ಅಪರಿಚಿತ ವಾಹನ ಚಾಲಕನು ರೋಡಿನ ರಾಂಗ್ ಸೈಡಿನ ಬಲಭಾಗಕ್ಕೆ ಬಂದು ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಅಣ್ಣನ ಮೋಟಾರ ಸೈಕಲಗೆ ಡಿಕ್ಕಿ ಮಾಡಿ ವಾಹನ ಸಮೇತ ಓಡಿ ಹೋಗಿರುತ್ತಾನೆ. ಇದರಿಂದ ಫಿರ್ಯಾದಿ ಅಣ್ಣ ಭಾರಿ ಗಾಯಗಳಾಗಿ ಸ್ಥಳದಲ್ಲಿಯೆ ಮೃತ ಪಟ್ಟಿರುತ್ತಾನೆ.  ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಾಗಿದೆ.

Friday, May 15, 2020

BIDAR DISTRICT DAILY CRIME UPDATE 15-05-2020


  
ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 15-05-2020
ಮನ್ನಾಏಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 39/2020 ಕಲಂ 9,10,11 ಬಾಲ್ಯ ವಿವಾಹ ನಷೇಧ ಕಾಯ್ದೆ :-

ದಿನಾಂಕ: 14/05/2020 ರಂದು 1400 ಗಂಟೆಗೆ ಫಿರ್ಯಾದಿ ಶ್ರೀಮತಿ ಶೋಭಾ ಕಟ್ಟಿ ಗಂಡ ರವಿನಂದ ವಯ: 58 ವರ್ಷ ಜಾ: ಕ್ರೀಶ್ಚಿಯನ್ ಉ: ಶಿಶು ಅಭಿವೃದ್ದಿ ಅಧಿಕಾರಿ ಹುಮನಾಬಾದ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಂಶವೆನೆಂದರೆ. ಚಿಟಗುಪ್ಪ ತಾಲ್ಲೂಕಿನ ಉಡಬಾಳ ಗ್ರಾಮದ ಬಾಲಕಿಯಾದ ಕುಮಾರಿ ಸ್ವೇತಾಳ ವಯಸ್ಸು 14 ವರ್ಷ ಆಗಿದ್ದು, ಇವಳ ಮದುವೆಯು ನಿರ್ಣಾ ಗ್ರಾಮದ ನಿವಾಸಿಯಾದ ಲಾಲಪ್ಪನ ಮಗನಾದ ಕುಮಾರ ಆಕಾಶನ ಜೊತೆಯಲ್ಲಿ (ವಯಸ್ಸು 19 ವರ್ಷ) ದಿನಾಂಕಃ 13/05/2020 ರಂದು ಸಾಯಂಕಾಲ 1630 ಗಂಟೆಗೆ ಜರುಗಿರುತ್ತದೆ ಎಂಬ ಮಾಹಿತಿಯು ಮಕ್ಕಳ ಕಲ್ಯಾಣ ಸಮಿತಿ ಬೀದರರವರ ದೂರವಾಣಿ ಕರೆ ಮೂಲಕ ತಿಳಿದು ಬಂದಿರುತ್ತದೆ. ಈ ಪ್ರಯುಕ್ತ ಸದರಿ ಮಾಹಿತಿಯನ್ನು ಮನ್ನಾಎಖೇಳ್ಳಿ ಪೊಲಿಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು ಆದ ಶ್ರೀ ಶಿವರಾಜ ಪಾಟೀಲ ರವರಿಗೆ ದೂರವಾಣಿ ಮೂಲಕ ತಿಳಿಸಲಾಗಿದ್ದು, ಅಲ್ಲದೇ ಅಂದು ರಾತ್ರಿ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಕಲಾವತಿಯವರು ಸದರಿ ಸ್ಥಳಕ್ಕೆ ಭೇಟಿ ನೀಡಿ, ಈ ಬಾಲಕಿಯನ್ನು ರಕ್ಷಣೆ ಮಾಡಿ ನಿರ್ಣಾ ಗ್ರಾಮದಲ್ಲಿ ಆಕಾಶನ ಅಕ್ಕಳಾದ ಶ್ರೀಮತಿ ಮೋಹಿತಾ ಗಂಡ ಸುರೇಶ ಹಲಗೆನೋರ್ ರವರ ಮನೆಯಲ್ಲಿ ಸುರಕ್ಷಿತವಾಗಿ ಆಶ್ರಯ ನೀಡಲಾಯಿತ್ತು. ತದನಂತರ ದಿನಾಂಕಃ 14/05/2020 ರಂದು ಸದರಿ ಗ್ರಾಮಕ್ಕೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ/ಸಿಬ್ಬಂದಿ ಮತ್ತು ನಿರ್ಣಾ ವಲಯದ ಮೇಲ್ವಿಚಾರಕಿಯಾದ ಶ್ರೀಮತಿ ಕಲಾವತಿರೆಡ್ಡಿ ಹಾಗೂ ಮಕ್ಕಳ ಸಹಾಯವಾಣಿ ಔಟ್ ರೀಚ್ ವರ್ಕರೊಂದಿಗೆ ಭೇಟಿ ನೀಡಿ, ಬಾಲಕ ಮತ್ತು ಬಾಲಕಿ ಹಾಗೂ ಅವರ ಪಾಲಕರನ್ನ ಗ್ರಾಮ ಪಂಚಾಯತ ನಿರ್ಣಾಕ್ಕೆ ಕರೆಯಿಸಿ, ಬಾಲ್ಯವಿವಾಹದ ದುಷ್ಪಾರಿಣಾಮದ ಮತ್ತು ಶಿಕ್ಷೆಯ ಬಗ್ಗೆ ತಿಳಿಹೇಳಲಾಯಿತ್ತು. ಅದೇ ರೀತಿ ಪೋನ್ ಮುಖಾಂತರ ಮಕ್ಕಳ ಕಲ್ಯಾಣ ಸಮಿತಿಯವರಿಗೆ ಈ ಘಟನೆಯ ಕುರಿತು ಚರ್ಚಿಸಿದಾಗ, ಮಕ್ಕಳ ಕಲ್ಯಾಣ ಸಮಿತಿ ಬೀದರರವರು ಬಾಲಕಿಯನ್ನು ಮದುವೆ ಮಾಡಿಕೊಂಡಿರುವ ಆಕಾಶ ಎಂಬ ವ್ಯಕ್ತಿಯ ಮೇಲೆ ಹಾಗೂ ಆತನ ಪಾಲಕರು ಹಾಗೂ ಬಾಲಕಿಯರ ಪಾಲಕರ ವಿರುದ್ದ ಪ್ರಕರಣ ದಾಖಲಿಸುವಂತೆ ತಿಳಿಸಿರುತ್ತಾರೆ. ಮುಂದುವರೆದು ಸದರಿ ನೊಂದ ಬಾಲಕಿಯನ್ನು ಅವಳ ಅಜ್ಜನಾದ (ತಾಯಿಯ ತಂದೆ) ಲಕ್ಷ್ಮಣ ತಂದೆ ನಾಗಪ್ಪ ಹೊಸಳ್ಳಿಕರ್ ಸಾಃ ಬನ್ನಳ್ಳಿ ಇವರ ಆಶ್ರಯಕ್ಕೆ ಒಪ್ಪಿಸುವಂತೆ ದೂರವಾಣಿ ಮುಖಾಂತರ ಆದೇಶ ನೀಡಿರುತ್ತಾರೆ.  ಆದರಂತೆ ಸದರಿ ಬಾಲಕಿಯನ್ನು ಅವಳ ಅಜ್ಜನ ಸುಪರ್ದಿಗೆ ಒಪ್ಪಿಸಲಾಗಿರುತ್ತದೆ. ಆದ್ದರಿಂದ ಸದರಿ ಬಾಲಕಿಯನ್ನು ಮದುವೆ ಮಾಡಿಕೊಂಡಿರುವ ಆಕಾಶ ಎಂಬ ವ್ಯಕ್ತಿಯ ಮೇಲೆ ಹಾಗೂ ಆತನ ಪಾಲಕರು  ಹಾಗೂ ಬಾಲಕಿಯರ ಪಾಲಕರ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ತಿಳಿಸಿದೆ. ಅಂತಾ ಕೋಟ್ಟ ಫಿರ್ಯಾದು ದೂರು ಸಾರಂಶದ ಆಧಾರದ ಮೇಲಿಂದ ಠಾಣೆ ಗುನ್ನೆ ನಂ 39/2020 ಕಲಂ: 9,10,11 ಬಾಲ್ಯ ವಿವಾಹ ನೀಷೇಧ ಕಾಯಿದ್ದೆ ನೇದರಡಿಯಲ್ಲಿ ಪ್ರಕರಣ ದಾಖಲಿಸಿ ತನೀಖೆ ಕೈಗೊಳ್ಳಲಾಗಿದೆ.