Police Bhavan Kalaburagi

Police Bhavan Kalaburagi

Sunday, July 12, 2020

BIDAR DISTRICT DAILY CRIME UPDATE 12-07-2020



ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 12-07-2020.

ಬೀದರ ನಗರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 07/2020 ಕಲಂ 174 ಸಿಆರ್.ಪಿ.ಸಿ. :-

 ದಿನಾಂಕ 11/07/2020 ರಂದು 12:30 ಗಂಟೆಗೆ ಫಿರ್ಯಾದಿ  ಶ್ರೀ ಶೇಖ ಅಬ್ರಾರ್ ತಂದೆ ಮುಕ್ತಾರ ಪಟೇಲ್ ವಯ:50 ವರ್ಷ ಜಾ:ಮುಸ್ಲಿಂ   ಸಾ:ಮನೆ ನಂ 10-2-127 ಖಾಜಾ ಅಬ್ದುಲ್ ಫೈಜ ಕಾಲೂನಿ ಬೀದರ ರವರು ಠಾಣೆಗೆ ಹಾಜರಾಗಿ ಬಾಯಿ ಮಾತಿನ ಹೇಳಿಕೆ ನೀಡಿದ್ದು ಸದರಿ ಹೇಳಿಕೆ ಸಾರಾಂಶವೆನೆಂದರೆ    ಶೇಖ ಅಹ್ಮದ ತಂದೆ ಶೇಖ ಹನೀಫ್ ವಯ:70 ವರ್ಷ ಸಾ: ತಾಂಡೂರ   ಸುಮಾರು 5-6 ವರ್ಷಗಳು ಫಿರ್ಯಾದಿ ಮನೆಯಲ್ಲಿ ವಾಸವಿದ್ದು ನಂತರ ಒಂದು ದಿನ ನಾನು ತಾಮ್ರದ ಉಂಗುರು ಮತ್ತು ತಾವಿತು ಮಾರಾಟ ಮಾಡಿಕೊಂಡು ಬರುತ್ತೇನೆ ಅಂತ ಹೇಳಿ ಹೊದವರು ಮರಳಿ ಬಂದಿರುವುದ್ದಿಲ್ಲಾ,       ದಿನಾಂಕ 11/07/2020 ರಂದು ಮುಂಜಾನೆ 11:00 ಗಂಟೆ ಸುಮಾರಿಗೆ ಫಿರ್ಯಾದಿಗೆ ಪರಿಚಯ ಇದ್ದ ರಾವ ತಾಲೀಮ ಓಣಿಯ ಹನ್ನಾನ ತಂದೆ ಎಂ.ಎ ಜಹುರ ಬೇಗ್ ರವರು ನನ್ನ ಮೊಬೈಲಗೆ ಫೋನ ಮಾಡಿ ತಿಳಿಸಿದೇನೆಂದರೆ ನಿಮ್ಮ ಮನೆಯಲ್ಲಿ ವಾಸವಾಗಿದ್ದ ಶೇಖ ಅಹ್ಮದ ತಂದೆ ಶೇಖ ಹನಿಫ್ ಇವರು ನಿನ್ನೆ ರಾತ್ರಿ 9:30 ಗಂಟೆಗೆ ನಾನು ಮನೆಗೆ ಹೊಗುವಾಗ ನಯಾ ಕಮಾನ ಹತ್ತಿರ ನಿಂತಿದರು. ಈಗ ಅಲ್ಲಂ ದುಲ್ಲಾ ಹೊಟಲ ಹತ್ತಿರ ಮಲಗಿದ ಸ್ಥಳದಲ್ಲಿಯೆ ಮೃತ ಪಟ್ಟಿರುತ್ತಾರೆ. ನೀವು ಕೂಡಲೆ ಇಲ್ಲಿಗೆ ಬನ್ನಿರಿ ಅಂತ ತಿಳಿಸಿದಾಗ ಫಿರ್ಯಾದಿಯು ಹೊಗಿ ನೋಡಲು ಸದರಿ ಘಟನೆ ನಿಜ ಇದ್ದು ಸದರಿ ಶೇಖ ಅಹ್ಮದ ತಂದೆ ಶೇಖ ಹನೀಫ್ ರವರು ವಯಸ್ಸಾಗಿದರಿಂದ ಯಾವುದೋ ಕಾಯಿಲೆಯಿಂದ ಬಳಲಿ ಮಲಗಿದ ಸ್ಥಳದಲ್ಲಿಯೆ   ದಿನಾಂಕ 10/07/2020 ರಂದು ರಾತ್ರಿ 9:30 ಗಂಟೆಯಿಂದ ಇಂದು ದಿನಾಂಕ 11/07/2020 ರಂದು 11:00 ಗಂಟೆಯ ಅವಧಿಯಲ್ಲಿ ಮೃತ ಪಟ್ಟಿದ್ದು ಇರುತ್ತದೆ ಅಂತಾ ನೀಡಿದ ದೂರಿನ ಮೇರೆಗೆ ಯು.ಡಿ.ಆರ್. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 94/2020 ಕಲಂ 498(ಎ), 302, 304(ಬಿ) ಜೊತೆ 34 ಐಪಿಸಿ :-

ದಿನಾಂಕ 11/07/2020 ರಂದು 1500 ಗಂಟೆಗೆ ಶ್ರೀ ಅಮ್ರುತ ತಂದೆ ಪುಂಡಲಿಕ ಮಾಳಗೆ ಗ್ರಾಮ ನಾಗೂರೆ (ಕೆ) ತಾ; ಭಾಲ್ಕಿ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದರ ಸಾರಾಂಶವೆನೆಂದರೆ ಇವರ ಮಗಳಾದ ಶೀಲ್ಪಾ ಗಂಡ ಅರ್ಜುನ  ಸಾ; ಶೇಮಶಾಪೂರವಾಡಿ ತಾ; ಭಾಲ್ಕಿ ಇವರಿಗೆ  ಅಳಿಯನಾದ ಅರ್ಜುನ ತಂದೆ ರಾಮಣ್ಣಾ ಇವರು  ಮಗಳಿಗೆ ಪ್ರೀತಿಸಿ ಮದುವೆ ಮಾಡಿಕೊಂಡು ಮದುವೆ ದಿನಾಂಕ 11/03/2019 ರಂದು ಮದುವೆ ಮಾಢಿಕೊಂಡು ಒಂದು ವರ್ಷವಾಗಿದ್ದು    ಸ್ವಲ್ಪ ದಿವಸ ರಿಯಾಗಿ ಇದ್ದು ಇವಾಗ ವಿನಾಕಾರಣ ಮನೆಯಲ್ಲಿ  ಮಗಳಿಗೆ ಜಗಳ ಮಾಡಿ ದಿನಾಲು ಹೊಡೆದು ಬಡೆದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಇವಳನ್ನು ಈ ತರಹದ ತುಂಬಾ ತೊಂದರೆ ಕೊಡುತಿದ್ದು ಇವಾಗ ಅರ್ಜುನ ತಂದೆ ರಾಮಣ್ಣಾ ಇವನು ಸರಾಯಿ ಕುಡಿದುಕೊಂಡು, ಕುಡಿದ ಅಮಲಿನಲ್ಲಿ ಮನೆಗೆ ಬಂದು ರಾತ್ರಿ ಜಗಳ ಮಾಡಿ ದಿನಾಂಕ 11/07/2020 ರಂದು ನಸುಕೀನ ಜಾವಾ ಸಮಯ 0400 ಗಂಟೆಯ ಸುಮಯದಲ್ಲಿ ಮನೆಯಲ್ಲಿ ಹೊಡೆದು ಕೊಂದು ಅವಳನ್ನು ಮನೆಯಲ್ಲಿ ನೇಣು ಹಾಕಿರುತ್ತಾನೆ. ಅಲ್ಲದೆ ಇವರ ಅಂದರೆ ಅರ್ಜುನ ತಂದೆ ರಾಮಣ್ಣಾ ಇವರ ಅತ್ತಿಗೆಯರಾದ ಶ್ರೀಮತಿ ಸುವರ್ಣಾ  ಗಂಡ ಭೀಮಣ್ಣಾ ಇವಳು ಸಹ ಫಿರ್ಯಾದಿ ಮಗಳಿಗೆ ತುಂಬಾ ತೊಂದರೆ ಕೊಡುತಿದ್ದರು. ಮತ್ತು ದಿನಾಲು ಇವಳನ್ನು ಬೈಯುತಿದ್ದಳು.   ಅರ್ಜುನ ಮತ್ತು ಇವನ ಅತ್ತಿಗೆಯಾದ ಸುವರ್ಣಾ ಇಬ್ಬರು ಕೂಡಿ ಫಿರ್ಯಾದಿ ಮಗಳಿಗೆ ಕೊಲೆ ಮಾಡಿ ನೇಣು ಹಾಕಿರುತ್ತಾರೆ.  ಇವರು ಇಬ್ಬರು ನನ್ನ ಮಗಳ ಜಿವವನ್ನು ತೊಗೆದುಕೊಂಡಿದ್ದಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Saturday, July 11, 2020

BIDAR DISTRICT DAILY CRIME UPDATE 11-07-2020




ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 11-07-2020

ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 79/2020 ಕಲಂ 379 ಐಪಿಸಿ :-

ದಿನಾಂಕ 10/07/2020  ರಂದು 1145  ಗಂಟೆಗೆ ಫಿರ್ಯಾದಿ  ಶ್ರೀ. ದತ್ತಾತ್ರೆಯ ತಂದೆ ಮಾರುತಿರಾವ ವಯ:30 ವರ್ಷ ಜಾತಿ:ಮರಾಠ ಉ:ಫೀಲ್ಡ ಎಕ್ಸಿಕೇಟಿವ ಸಾ/ಚಿಟಗುಪ್ಪ ಸಧ್ಯ ಸಾಯಿಬಾಬಾ ಮಂದಿರದ ಹತ್ತೀರ ಆದರ್ಶ ಕಾಲೋನಿ ಬೀದರ.  ರವರು ಠಾಣೆಗೆ ಹಾಜರಾಗಿ ತನ್ನದೊಂದು ಕನ್ನಡದಲ್ಲಿ ಲಿಖಿತ  ದೂರನ್ನು ನೀಡಿದರ ಸಾರಾಂಶವೇನಂದರೇ, ಇವರ ಹೊಂಡಾ ಶೈನ  ಮೋಟರ ಸೈಕಲ  ನಂ. ಕೆ.ಎ.39ಆರ್3157  ದಿನಾಂಕ 27/06/2020  ರಂದು  ಮದ್ಯಾಹ್ನ 1230  ಗಂಟೆಗೆ   ಬೀದರ ನೆಹರು ಕ್ರಿಡಾಂಗಣ ಹತ್ತೀರ ಇರುವ ಶ್ರೀರಾಮ ಟ್ರಾನ್ಸಪೋರ್ಟ ಫೈನಾನ್ಸ್ ಕಂಪನಿ ಲಿಮಿಟೆಡ ಕಛೇರಿಯ ಮುಂದೆ ನಿಲ್ಲಿಸಿ ಕಛೇರಿಯಲ್ಲಿ ಹೋಗಿ 1300 ಗಂಟೆಗೆ ಕಛೇರಿಯಿಂದ ಹೊರಗೆ ಬಂದು ನೋಡಿದಾಗ ತನ್ನ ಮೊಟರ ಸೈಕಲ ಇರಲಿಲ್ಲ  ಕಳುವಾದ ಮೊಟರ ಸೈಕಲನ್ನು ಎಲ್ಲಾ ಕಡೆಗೆ ಹುಡುಕಾಡಿ  ಠಾಣೆಗೆ ಬಂದು ದೂರು ನೀಡಲು ತಡವಾಗಿರುತ್ತದೆ.  ಮೋ.ಸೈಕಲ್ನ  ಅಂ.ಕಿ. ರೂ-  35,000/-ರೂ ಆಗಿರುತ್ತದೆ.  ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 151/2020 ಕಲಂ 457, 380 ಐಪಿಸಿ :-

ದಿನಾಂಕ 10/07/2020 ರಂದು 13:00 ಗಂಟೆಗೆ ದೂರುದಾರ ಶೇಕ್ ಮಧಾರ ತಂದೆ ಶೇಕ್ ಮೌಲಾನಸಾಬ ಸಾ:ಮಾಸುಮ ಪಾಶಾ ಕಾಲೋನಿ ಭಾಲ್ಕಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಫಿರ್ಯಾದಿಯು ಹಣ್ಣಿನ ವ್ಯಾಪಾರ ಮಾಡಿಕೊಂಡು ಉಪಜಿವಿಸುತ್ತಿದ್ದು ಭಾಲ್ಕಿ ಗಾಂಧಿ ಚೌಕ ಬದಿಯಲ್ಲಿ ಇರುವ ಗಣೇಶ ಮಂದಿರದ ಹತ್ತಿರ ತನ್ನ ಹಣ್ಣೀನ ಅಂಗಡಿ ಇರುತ್ತದೆ.   ದಿನಾಲು ಮುಂಜಾನೆ 7 ಗಂಟೆಗೆ ಅಂಗಡಿ ತೆರೆದು ರಾತ್ರಿ 8 ಗಂಟೆಗೆ ಮುಚ್ಚಿ ಹೋಗುತ್ತಿದ್ದು ಅದರಂತೆ   ದಿನಾಂಕ 09/07/2020 ರಂದು ಕೂಡಾ ಮುಂಜಾನೆ 7 ಗಂಟೆಗೆ ಅಂಗಡಿ ತೆರೆದು ಹಗಲೇಲ್ಲಾ ವ್ಯಾಪಾರ ಮಾಡಿದ್ದು ಸಧ್ಯ ಕರೋನಾ-ವೈರಸ ಹರಡಿರುವದರಿಂದ ರಾತ್ರಿ 7 ಗಂಟೆಗೆ  ಅಂಗಡಿ ಬಂದ ಮಾಡಿ ಅವಸರದಲ್ಲಿ   3100 ರೂ ನಗದು ಹಣ ಅದರಲ್ಲಿ 1000 ಚಿಲ್ಲರೆ ಮತ್ತು 2100 ರೂಪಾಯಿಯ ನೋಟುಗಳು ಅಂಗಡಿಯಲ್ಲೆ ಇಟ್ಟು ಹೋಗಿದ್ದು   ಹಿಗೀರಲು  ಮುಂಜಾನೆ ಯಥಾ ಪ್ರಕಾರ ಮುಂಜಾನೆ 7 ಗಂಟೆಗೆ ನಾನು ಅಂಗಡಿಗೆ ಬಂದಾಗ ಅಂಗಡಿಯ ಮುಂದೆ ಹಾಕಿದ ಕಬ್ಬೀಣದ ಜಾಲಿ ಸರಿದಿದ್ದು ಅಲ್ಲದೆ ಅಂಗಡಿಯ ಶೇಟರ ಎತ್ತಿದ್ದು ಇರುವದರಿಂದ ಅಂಗಡಿಯಲ್ಲಿ ಪರಿಶೀಲಿಸಿ ನೋಡಲು ಅಂಗಡಿಯಲ್ಲಿ ಇಟ್ಟಿದ ನಗದು ಹಣ 3100 ರೂಪಾಯಿ ಇರಲಿಲ್ಲದ ಕಾರಣ ಅಂಗಡಿಯಲ್ಲಿ ಕೂಡಿಸಿದ ಸಿಸಿ ಕ್ಯಾಮೇರಾ ಪರಿಶೀಲಸಿ ನೋಡಲು ಅದರಲ್ಲಿ ಇಬ್ಬರು ಸಣ್ಣ ಮಕ್ಕಳ ದ್ರಶಾವಳಿಗಳು ಸೆರೆಯಾಗಿರುವದರಿಂದ ಅವುಗಳನ್ನು ಪರಿಶೀಲಿಸಿ ನೋಡಲು ಮಲ್ಲಿಕಾಜರ್ುನ ತಂದೆ ಸಂತೊಷ ಬುಳ್ಳಾ ಮತ್ತು ಮಹೇಶ ತಂದೆ ಸಂತೋಷ ಬುಳ್ಳಾ ಸಾ: ಇಬ್ಬರು ಪಾಪವ್ವಾ ನಗರದ ಮಕ್ಕಳ ಫೋಟೋಗಳು ಇರುತ್ತವೆ.   ದಿನಾಂಕ 09/07/2020 ರಂದು ರಾತ್ರಿ 7 ಗಂಟೆಗೆ ನಾವು ಅಂಗಡಿ ಬಂದ ಮಾಡಿ ಹೋಗಿರುವದನ್ನು ನೋಡಿ ರಾತ್ರಿ ಸಮಯದಲ್ಲಿ ಇಬ್ಬರು ನಮ್ಮ ಅಂಗಡಿಗೆ ಬಂದು ಅಂಗಡಿಯ ಜಾಲಿ ಸರಿಸಿ ಒಳಗೆ ಹೋಗಿ ಸೇಟರ ಕೀಲಿ ಮುರಿದು ಸೇಟರ ಎತ್ತಿ ಅಂಗಡಿಯಲ್ಲಿ ಪ್ರವೇಶ ಮಾಡಿ ಅಂಗಡಿಯಲ್ಲಿ ಇಟ್ಟಿದ ನಗದು ಹಣ 3100 ರೂಪಾಯಿ ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಅಂತಾ ನೀಡಿದ ದೂರಿನ ಮೆರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 106/2020 ಕಲಂ 32, 34 ಕೆ.ಇ. ಕಾಯ್ದೆ :-

ದಿನಾಂಕ 10-07-2020 ರಂದು ಪಿ.ಸ್.ರವರು  ಸಿಬ್ಬಂದಿಯೊಂದಿಗೆ ಪೇಟ್ರೊಲಿಂಗ ಕರ್ತವ್ಯ ನಿರ್ವಹಿಸುತ್ತಾ ನೇಳಗಿ ಗ್ರಾಮದ ಹನುಮಾನ ಮಂದಿರದ ಹತ್ತಿರ ಹೊದಾಗ ಅಲ್ಲಿ ಪಿ.ಎಸ.ರವರಿಗೆ ಒಬ್ಬ ವ್ಯಕ್ತಿಯು ಹಲಬರ್ಗಾ ಕಡೆಯಿಂದ ನೇಳಗಿ ಕಡೆಗೆ ಆಕ್ರಮವಾಗಿ ಸರಾಯಿ ಬಾಟಲಗಳು ತೆಗೆದುಕೊಂಡು ಬರುತ್ತಿದ್ದಾನೆ ಅಂತ ಖಚಿತ ಬಾತ್ಮಿ ಮೇರೆಗೆ  ನೇಳಗಿ ಗ್ರಾಮದ ಹಲಬರ್ಗಾ ಜ್ಯಾಂತಿ ರೋಡಿಗೆ ಬಸವೇಶ್ವರ ವೃತ್ತದ ಹತ್ತಿರ ಹೊಗಿ ಅಲ್ಲಿ ಎಲ್ಲರು ಮರೆಯಾಗಿ ನಿಂತು ನೊಡಿ 1630 ಗಂಟೆಯ ಸುಮಾರಿಗೆ ಹಲಬರ್ಗಾ ಕಡೆಯಿಂದ ಒಬ್ಬ ವ್ಯಕ್ತಿ ತಲೆಯ ಮೇಲೆ ಕಾಟನ ಇಟ್ಟುಕೊಂಡು ಬರುತ್ತಿದ್ದಾಗ ಆತನ ಮೇಲೆ ದಾಳಿ ಮಾಡಿ ಆತನಿಗೆ ಹಿಡಿದು ಆತನ ಹೆಸರು ವಿಳಾಸವನ್ನು ವಿಚಾರಣೆ ಮಾಡಲು ಆತನು ತನ್ನ ಹೆಸರು ರಾಘವೇಂದ್ರ ತಂದೆ ಜಗನಾಥ ವಯ 27 ವರ್ಷ ಜಾತಿ ಲಿಂಗಾಯತ ಉದ್ಯೋಗ ಖಾಸಗಿ ಕೆಲಸ ಸಾ// ನೇಳಗಿ ಅಂತ ತಿಳಿಸಿದ್ದು ಕಾಟನವನ್ನು ತೆಗೆದು ಪರಿಶೀಲಿಸಿ ನೊಡಲು ಕಾಟನದಲ್ಲಿ ಯು.ಎಸ. ವಿಸ್ಕಿ 90 ಎಮ.ಎಲ ದ 96 ಸರಾಯಿ ಬಾಟಲಗಳು ಇದ್ದು ಒಂದರ ಕಿಮತ್ತು 35/- ರೂಪಾಯಿ 13 ಪೈಸೆ ಇದ್ದು ಹಿಗೆ ಒಟ್ಟು 96 ಸರಾಯಿ ಬಾಟಲಗಳು 3372/- ರೂಪಾಯಿ 48 ಪೈಸೆ ಕಿಮತ್ತಿನದ್ದು ಜಪ್ತಿಮಾಡಿಕೊಂಡು ಪ್ರಕರಣ ದಾಖಲಿಸಿ ತನಿಖೆಕೈಗೊಳ್ಳಲಾಗಿದೆ.

Thursday, July 9, 2020

BIDAR DISTRICT DAILY CRIME UPDATE 09-07-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 09-07-2020

ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 78/2020 ಕಲಂ 471, 420 ಐಪಿಸಿ :-

ದಿನಾಂಕ 08/07/2020 ರಂದು 1330 ಗಂಟೆಗೆ ಮಾನ್ಯ ಪೊಲೀಸ ಅಧೀಕ್ಷಕರು ಬೀದರ ರವರು ನೀಡಿದ ಜ್ಞಾಪನ ಪತ್ರ ಸಂ.ಅಪರಾಧ-1/ಇತರೆ/ಬೀ/2020 ದಿನಾಂಕ 10/06/2020 ನೇದ್ದರಲ್ಲಿ ಸದಸ್ಯ ಕಾರ್ಯದರ್ಶಿಗಳು ಹಾಗೂ ಮುಖ್ಯ ಆಡಳಿತಾಧಿಕಾರಿಗಳು , ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಆನಂದರಾವ ವೃತ್ತ ಬೆಂಗಳೂರು, ರವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಶುಶ್ರುಕರ ನೇಮಕಾತಿ ಕುರಿತು ಭ್ಯರ್ಥಿಯಾದ ಮಂಜುನಾಥ ತಂದೆ ರೆವಣಪ್ಪ ಪ್ಲಾಟ ನಂ. 42, ಸಾಯಿ ನಗರ ಕಾಲೋನಿ ನೌಬಾದ ಈತನು ಅಂಗವಿಕಲತೆಯ ಬಗ್ಗೆ ಸುಳ್ಳು ವೈದ್ಯಕೀಯ ದಾಖಲಾತಿ ಸಲ್ಲಿಸಿ ಅಂಗವಿಕಲ ಮೀಸಲಾತಿ ಅಡಿಯಲ್ಲಿ ಶುಶ್ರುಕರ ಹುದ್ದೆಗೆ ಆಯ್ಕೆಯಾಗಿದ್ದು ಇರುತ್ತದೆ. ಸದರಿಯವನ ಮೇಲೆ ಕಾನೂನು ಕ್ರಮ ಕೈಕೊಳ್ಳುವಂತೆ ಸದಸ್ಯ ಕಾರ್ಯದರ್ಶಿಗಳು ಹಾಗೂ ಮುಖ್ಯ ಆಡಳಿತಾಧಿಕಾರಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಬೇಂಗಳೂರು ರವರು ಕೋರಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ. 

ಜನವಾಡ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 40/2020 ಕಲಂ 454, 457, 380 ಐಪಿಸಿ :-

ದಿನಾಂಕ 08/07/2020 ರಂದು 1500 ಗಂಟೆಗೆ ಶ್ರೀಮತಿ  ಮಂಜುರಾಣಿ ಗಂಡ ಪ್ರಫೂಲ ಕ್ರೀಷ್ಣಫರ್ ಮುಖ್ಯೋಪದ್ಯಾಯರು ಸರಕಾರಿ ಹಿರಿಯ ಪ್ರಾಥಮೀಕ ಶಾಲೆ ಚಿಮಕೋಡ ತಾ|| ಜಿ|| ಬೀದರ ರವರು ಖುದ್ದಾಗಿ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದರ ಸಾರಾಂಶವೆನೆಂದರೆ ದಿನಾಂಕ 27/06/2020 ರಂದು ಶಾಲೆ ಮುಗಿಸಿಕೊಂಡು ದಿನಾಂಕ 29/6/2020 ರಂದು ಸೊಮವಾರ ಬೆಳಿಗ್ಗೆ 9: 45 ಗಂಟೆಯ ಸುಮಾರಿಗೆ   ಶಾಲೆಯ ಸಹ ಶೀಕ್ಷಕರಾದ ಶ್ರೀ ರಾಮಲು ಹಾಗು ಫಿರ್ಯಾದಿಯು ಶಾಲೆಗೆ ಹೊಗಿದ್ದಾಗ ಶಾಲೆಯ ಕಂಪ್ಯುಟರ ಕೋಣೆಯ ಬಾಗಿಲಿಗೆ ಹಾಕಿದ್ದ ಬೀಗ ಒಡೆದು   ಕೋಣೆಯಲ್ಲಿದ್ದ ಸಿ.ಎನ್.ಟಿ.206ಬಿಓಎನಎಮ್ ಮತ್ತು ಸಿ.ಎನ್.ಟಿ.205ಬಿಒಆರ್.ಸಿ. ಸಂಖ್ಯೆಯ 18’ 5” ಮಾನಿಟರ್ ಗಳು ಒಂದು ಬ್ಯಾಟರಿ ಮತ್ತು ಒಂದು ಪ್ಲಾಸ್ಟಿಕ್ ಚೆರ್ ಕಳುವಾಗಿರುತ್ತವೆ.   ಸದರಿ ಕಂಪ್ಯೂಟರಗಳು ಸಿದ್ದಾರ್ಥ ಇನಫೋಟೆಕ್ ಪೈ.ಲಿ. ಬೆಂಗಳೂರು ರವರಿಂದ ದಿನಾಂಕ 17/04/2012 ರಂದು  ನಮ್ಮ ಶಾಲೆಗೆ ಸರಬರಾಜು ಆಗಿರುತ್ತವೆ. ಸರಬರಾಜು ಆದ ಕಂಪ್ಯೂಟರ ಮಾನಿಟರ್  ಸಿಪಿಯು  ಬ್ಯಾಟರಿ ಸೇರಿ ಅಂದಿನ ಬೇಲೆ  26,444.75/- ರೂ ಗಳು ಆಗುತ್ತವೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.



Wednesday, July 8, 2020

BIDAR DISTRICT DAILY CRIME UPDATE 08-07-2020



ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 08-07-2020

ಗಾಂಧಿಗಂಜ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 103/2020 ಕಲಂ 379 ಐಪಿಸಿ :-

ದಿನಾಂಕ 07/07/2020 ರಂದು 1300 ಗಂಟೆಗೆ ಫಿರ್ಯಾದಿ ಶ್ರೀ ಅನಿಲಕುಮಾರ ತಂದೆ ಬಸವರಾಜ ಬಿರಾದಾರ ವಯ 44 ವರ್ಷ,  ಉ-ಜೆಸ್ಕಾಂ ಶಾಖಾಧಿಕಾರಿ  ಯುನಿಟ ನಂ 03 ಬೀದರ ಉಪ ವಿಭಾಗ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆದರೆ ಬೀದರ ತಾಲುಕಿನ ಚಿಟ್ಟಾವಾಡಿ ಗ್ರಾಮ ಶಿವಾರದಲ್ಲಿ ಇರುವ ಚಿಟ್ಟಾವಾಡಿ ಹೌಸಿಂಗ ಬೊರ್ಡ ಖಾಲಿ ನಿವೆಶನ ಬಡಾವಣೆಯಲ್ಲಿ ಜೆಸಕಾಂ ಇಲಾಖೆಗೆ ಸೇರಿದ ವಿದ್ಯುತ ಸರಬರಾಜು ಕುರಿತು ಟ್ರಾಂಸಫಾರಂಗಳು ಅಳವಡಿಸಿದ್ದು ಇರುತ್ತದೆ. ದಿನಾಂಕ 28/06/2020 ರಂದು ಪಿರ್ಯಾದಿಯವರು ಸದರಿ ಎರಿಯಾದಲ್ಲಿ ವಿದ್ಯುತ ಸರಬರಾಜು ಪರಿಶಿಲನೆ ಹಾಗು ಲೈನ ಫಾಲ್ಟ ಪರಿಶಿಲಿಸಲು  ಹೊಗಿದ್ದು ಸದರಿ ಟ್ರಾಂಸಫಾರಂ ಗಳ ರಿಡಿಂಗ ಚೇಕ ಮಾಡಿರುತ್ತಾರೆ.  ಪುನಃ ದಿನಾಂಕ 06/07/2020 ರಂದು  ಮುಂಜಾನೆ 1000 ಗಂಟೆಯ ಸುಮಾರಿಗೆ ಪರಿಶೀಲನೆ ಹಾಗು ರಿಡಿಂಗ ಚೇಕ ಮಾಡಲು ಹೊದಾಗ ಅಲ್ಲಿ ಸದರಿ ಟ್ರಾಂಸಫಾರಂಗಳು ಕೇಳಗೆ ಬಿದ್ದಿದು ನೊಡಿ ಪರಿಶಿಲಿಸಿದಾಗ  ಟ್ರಾಂಸಫಾರಂ ಗಳಲ್ಲಿನ ಅಲುಮಿನಿಯಮ ಕಾಯಿಲ ಹಾಗು ಆಯಿಲ ಕಳವು ಆಗಿದ ಬಗ್ಗೆ ತಿಳಿದು   ಮೇಲಾಧೀಕಾರಿಗಳಿಗೆ ಈ ವಿಷಯ ತಿಳಿಸಿರುತ್ತೆನೆ,  ಅಂದಾಜು 90300=00 ರೂಪಾಯಿ ಬೆಲೆ ಬಾಳುವ ಆಯಿಲ ಮತ್ತು ಅಲುಮಿನಿಯಮ ಕಾಯಿಲ ಯಾರೊ ಕಳ್ಳರು ದಿನಾಂಕ.28-06-2020 ರಂದು 1800 ಗಂಟೆಯಿಂದ ದಿ, 06/07/2020 ರಂದು 1000 ಗಂಟೆಯ ಅವಧಿಯಲ್ಲಿ ಕಳವು ಮಾಡಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಗಾಂಧಿಗಂಜ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 104/2020 ಕಲಂ 78(3) ಕೆ.ಪಿ. ಕಾಯ್ದೆ :-
ದಿನಾಂಕ 07/07/2020 ರಂದು  ಬೀದರ ಜಹಿರಾಬಾದ ರೋಡಿಗೆ ಇರುವ ಶಹಾರ  ಹನುಮಾನ ಮಂದಿರದ ಹತ್ತಿರ   ಒಬ್ಬ ವ್ಯಕ್ತಿ 1ರೂಪಾಯಿಗೆ  100ರೂಪಾಯಿ ಕೊಡವುದಾಗಿ ಕುಗುತ್ತಾ ಮಟಕಾ ಚಿಟಿ ಬರೆದುಕೊಳ್ಳೂತ್ತಿದ್ದುದನ್ನು ದೃಡಪಡಿಸಿಕೊಂಡು ಪಿಎಸ್ಐ ರವರು ಸಿಬ್ಬಂದಿಯೊಂದಿಗೆ ಮಟಕಾ ಚಿಟಿ ಬರೆದುಕೊಳ್ಳುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ನಡೆಯಿಸಿ  ಅವನ ಹೆಸರು ವಿಚಾರಿಸಲು ಅವನು ತನ್ನ ಹೆಸರು ಬಸವರಾಜ ತಂದೆ ಶರಣಪ್ಪಾ ಮಂಡಪ್ಪನೋರ ವಯ 28 ವರ್ಷ ಸಾ: ಲಾಡಗೇರಿ ಅಂತಾ ತಿಳಿಸಿದಾಗ ಅವನ ಆಂಗ ಝಡ್ತಿ ಮಾಡಲು ಅವನ ಬಳಿ ನಗದು ಹಣ 2,200/- ಮತ್ತು 3 ಮಟಕ ಚೀಟಿಗಳು ಹಾಗೂ ಒಂದು ಬಾಲ ಪೆನ್ನು ಅವನಿಂದ ವಶ ಪಡಿಸಿಕೊಂಡಿದ್ದು ಇರುತ್ತದೆ ನಂತರ ಅವನಿಗೆ ವಿಚಾರಿಸಲು ಅವನು ತಾನು ಬರೆದುಕೊಂಡು ಮಟಕಾ ಚಿಟಿ ಮತ್ತು ಹಣವನ್ನು ಬೀದರ ನಗರದ  ಲಾಡಗೇರಿ ಓಣಿಯ ರಮೇಶ ತಂದೆ ಮೊಹನರಾವ ಜಮಾದಾರ 30 ವರ್ಷ ಜಾತಿ ಕಬ್ಬಲಿಗೆರ ಉ: ಕೂಲಿ ಕೆಲಸ ಸಾ: ಲಾಡಗೇರಿ ಇತನಿಗೆ ನಿಡುತ್ತೇನೆ ಅಂತಾ ತಿಳಿಸಿದ ಇರುತ್ತದೆ. ಅವನ ಬಳಿ ಇದ್ದ ನಗದು ಹಣ ಮತ್ತು ಮಟಕಾ ಚೀಟಿ ಹಾಗೂ ಬಾಲ ಪೆನ್ನನ್ನು  ನಗದು ಹಣ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ. 


ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 89/2020 ಕಲಂ 78(3) ಕೆಪಿ ಕಾಯ್ದೆ :-
ದಿನಾಂಕ:07/07/2020 ರಂದು 10:30 ಗಂಟೆಗೆ ನಾನು ಸುನೀಲ್ ಕುಮಾರ ಪಿ.ಎಸ. [ಕಾ&ಸು] ಪೊಲೀಸ್ ಠಾಣೆಯಲ್ಲಿರುವಾಗ ಬಸವ ಕಲ್ಯಾಣ ನಗರದ ಸದಾನಂದ ಮಠದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 80/-ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣಪಡೆದು ನಸಿಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಗುಪ್ತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಬಸವಕಲ್ಯಾಣ ನಗರದ ಸದಾನಂದ ಮಠದಿಂದ ದಿಂದ 50 ಅಡಿ ಅಂತರದಲ್ಲಿ ಜೀಪ್ ನಿಲ್ಲಿಸಿ ಮರೆಯಾಗಿ ನಿಂತು ನೋಡಲು ಭಾತ್ಮಿಯಂತೆ ಸದಾನಂದ ಮಠದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಗೆ 1 ರೂಪಾಯಿಗೆ 80/-ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದು ಕೊಳ್ಳುವುದನ್ನು ನೋಡಿ ಸಮಯ 12:30 ಗಂಟೆಗೆ ಎಲ್ಲರು ಒಮ್ಮಲೆ ದಾಳಿಮಾಡಿದಾಗ ಮಲ್ಲಿಕಾರ್ಜುನ ಸಿಪಿಸಿ-1043 ರವರು ಹಿಡಿದು ಕೊಂಡಿದಾಗ  ಪಿ.ಎಸ್. [ಕಾ&ಸು] ಸದರಿ ವ್ಯಕ್ತಿಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಮಹ್ಮದ ಸಾಕೀಬ ತಂದೆ ಸಲಿಮೋದ್ದಿನ ಮಠವಾಲೆ ವಯಸ್ಸು//26 ವರ್ಷ ಜಾತಿ//ಮುಸ್ಲಿಂ //ಗೋಲ್ಡಸ್ಮಿತ್ ಸಾ//ಖಿಲ್ಲಾಗಲ್ಲಿ ಬಸವಕಲ್ಯಾಣ ಎಂದು ತಿಳಿಸಿದಾಗ ಅವನ ಅಂಗ ಶೋಧನೆ ಮಾಡಲು ಅವನ ಹತ್ತಿರ ನಗದು ಹಣ 102500/-ರೂ,ಮತ್ತು 02 ಮಟಕಾ ಚೀಟಿ ಹಾಗು ಒಂದು ಬಾಲ್ ಪೆನ್ ನೇದವುಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.