Police Bhavan Kalaburagi

Police Bhavan Kalaburagi

Friday, July 24, 2020

BIDAR DISTRICT DAILY CRIME UPDATE 24-07-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 24-07-2020

ಚಿಟಗುಪ್ಪಾ ಪೊಲೀಸ ಠಾಣೆ ಯು.ಡಿ.ಆರ್ ನಂ. 17/2020, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಚಿತ್ರಮ್ಮಾ ಗಂಡ ಝೇರೆಪ್ಪಾ ಭಂಗಿ, ವಯ: 38 ವರ್ಷ, ಜಾತಿ: ಎಸ್.ಟಿ ಟೊಕರಿ ಕೊಳಿ, ಸಾ: ಉಡಬಾಳ ರವರ ಗಂಡನಾದ ಝೇರೆಪ್ಪಾ ತಂದೆ ಭೀಮಣ್ಣಾ @ ನರಸಪ್ಪಾ ಭಂಗಿ, ವಯ: 43 ವರ್ಷ ರವರು ಸುಮಾರು 2 ತಿಂಗಳಿನಿಂದ ಸ್ವಲ್ಪ ಮಾನಸೀಕವಾಗಿ ವರ್ತನೆ ಮಾಡುತ್ತಿದ್ದರು, ಹೀಗಿರುವಾಗ ದಿನಾಂಕ 23-07-2020 ರಂದು 19:30 ಗಂಟೆಯ ಸುಮಾರಿಗೆ ಗಂಡ ಮನೆಯಿಂದ ಹೊರಗೆ ಹೋಗಿ ಬರುತ್ತೇನೆಂದು ಹೇಳಿ ತಮ್ಮ ಹಳೆಯ ಮನೆಯಲ್ಲಿ ಹೋಗಿ ತಗಡದ ಕೆಳಗಿರುವ ಕಟ್ಟಿಗೆ ದಂಟಕ್ಕೆ ಓಡನಿಯಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ, ಗಂಡನು ಮಾನಸೀಕವಾಗಿ ವರ್ತನೆ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ, ತನ್ನ ಗಂಡನ ಸಾವಿನ ಬಗ್ಗೆ ಯಾರ ಮೇಲೂ ಯಾವುದೇ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 24-07-2020 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 87/2020, ಕಲಂ. 379 ಐಪಿಸಿ :-
ದಿನಾಂಕ 29-06-2020 ರಂದು ರಾತ್ರಿ 00:30 ಗಂಟೆಯಿಂದ ಮುಂಜಾನೆ 07:00 ಗಂಟೆಯ ಮದ್ಯದ ಅವಧಿಯಲ್ಲಿ ಬೀದರ ರಾಘವೇಂದ್ರ ಕಾಲೋನಿಯಲ್ಲಿರುವ ಫಿರ್ಯಾದಿ ರಾಜೇಶ ತಂದೆ ಸೂರ್ಯಕಾಂತ ಮೇಟಿ ವಯ: 28 ವರ್ಷ, ಜಾತಿ: ಎಸ್.ಸಿ ಹೊಲೆಯ, ಸಾ: ಬ್ಯಾಂಕ ಕಾಲೋನಿ ಕುಂಬಾರವಡಾ ರೋಡ ಬೀದರ ರವರು ತನ್ನ ಗೆಳೆಯನಾದ ಪ್ರವೀಣ ರವರ ಮನೆಯ ಮುಂದೆ ನಿಲ್ಲಿಸಿದ ತಮ್ಮ ಯಾಮಹಾ ಎಫ್.ಝಡ್ ಮೋಟರ ಸೈಕಲ ನಂ. ಕೆಎ-38/ವಿ-7878, ಚಾಸಿಸ್ ನಂ. ಎಮ್.ಇ.1.ಆರ್.ಜಿ.4477.ಜೆ.0011418, ಇಂಜಿನ್ ನಂ. ಜಿ.3.ಜೆ.3.ಇ.0318300, ಮಾಡಲ್ 2018, ಬಣ್ಣ ಬೂದು ಬಣ್ಣ ಹಾಗೂ ಅ.ಕಿ 49,000/- ರೂ. ನೇದನ್ನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 23-07-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೇಮಳಖೇಡಾ ಪೊಲೀಸ್ ಠಾಣೆ ಅಪರಾಧ ಸಂ. 34/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 23-07-2020 ರಂದು ಚಾಂಗಲೇರಾ ಗ್ರಾಮದಲ್ಲಿನ ಬಸ್ ನಿಲ್ದಾಣದ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಎಂಬ ಜೂಜಾಟ ನಡೆಸುತ್ತಿದ್ದಾನೆಂದು ಗಂಗಮ್ಮ ಪಿ.ಎಸ.ಐ ಬೇಮಳಖೇಡಾ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಚಾಂಗಲೇರಾ ಗ್ರಾಮಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲು ಅಲ್ಲಿ ಆರೋಪಿ ನಾಗಪ್ಪಾ ತಂದೆ ಬಸಪ್ಪಾ ಮುಚ್ಚಳಂಬಿ ವಯ: 40 ವರ್ಷ, ಜಾತಿ: ಕಬ್ಬಲಿಗ, ಸಾ: ಪೊಲಕಪಳ್ಳಿ ಇತನು ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಒಂದು ರೂಪಾಯಿಗೆ 100/- ರೂಪಾಯಿಗಳು ಕೊಡುತ್ತೇನೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿರುವುದನ್ನು ಖಚಿತ ಪಡಿಸಿಕೊಂಡು ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಹಿಡಿದು ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 2330/- ರೂಪಾಯಿಗಳು ಮತ್ತು ಮಟಕಾ ನಂಬರ್ ಬರೆದ 2 ಮಟಕಾ ಚೀಟಿ ಹಾಗು ಒಂದು ಬಾಲ ಪೆನ್ನ ಜಪ್ತಿ ಮಾಡಿಕೊಂಡು ಸದರಿ ಆರೋಪಿತನ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 98/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 23-07-2020 ರಂದು ಭಾತಂಬ್ರಾ ಗ್ರಾಮದ ಗ್ರಾಮ ಪಂಚಾಯತ ಕಛೇರಿಯ ಹತ್ತಿರ ಒಬ್ಬ ವ್ಯಕ್ತಿ ಒಂದು ರೂಪಾಯಿಗೆ 90/- ರೂಪಾಯಿ ಅಂತಾ ಜನರಿಂದ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆಂದು ಮಹೇಂದ್ರಕುಮಾರ ಪಿಎಸ್ಐ (ಕಾ&ಸು) ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಭಾತಂಬ್ರಾ ಗ್ರಾಮದ ಗ್ರಾಮ ಪಂಚಾಯತ ಹತ್ತಿರ ಹೋಗಿ ಮರೆಯಾಗಿ ನೋಡಲು ಒಬ್ಬ ವ್ಯಕ್ತಿ ಒಂದು ರೂಪಾಯಿಗೆ 90/- ರೂಪಾಯಿ ಅಂತಾ ಜೋರಾಗಿ ಕೂಗುತ್ತಾ ಜನರಿಂದ ಮಟಕಾ ಚೀಟಿ ಬರೆದುಕೊಳ್ಳುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸದರಿ ವ್ಯಕ್ತಿಯ ಮೇಲೆ ದಾಳಿ ಮಾಡಿದಾಗ ಜನರು ಓಡಿ ಹೋಗಿದ್ದು ಮಟಕಾ ಬರೆದುಕೊಳ್ಳುತ್ತಿದ್ದ ವ್ಯಕ್ತಿಗೆ ಹಿಡಿದು ಆತನ ಹೆಸರು ವಿಚಾರಿಸಲು ಧನರಾಜ ತಂದೆ ಮಲ್ಲಿಕಾರ್ಜುನ ಬಿರಾದಾರ ವಯ: 37 ವರ್ಷ, ಜಾತಿ: ಲಿಂಗಾಯತ, ಸಾ: ಭಾತಂಬ್ರಾ, ತಾ: ಭಾಲ್ಕಿ ಅಂತಾ ತಿಳಿಸಿದನು, ನಂತರ ಧನರಾಜ ಇತನ ಅಂಗ ಝಡ್ತಿ ಮಾಡಲು ಆತನ ಹತ್ತಿರ 4900/- ರೂಪಾಯಿ ಹಾಗೂ ನಾಲ್ಕು ಬಿಳಿ ಹಾಳೆಯಲ್ಲಿ ಮಟಕಾ ಬರೆದ ನಂಬರವುಳ್ಳ ಚೀಟಿ ಮತ್ತು ಒಂದು ಬಾಲ ಪೆನ್ನ ಮತ್ತು ಸ್ಯಾಮಸಂಗ್ ಮೋಬೈಲ್ ಮೋಬೈಲ್ ಅ.ಕಿ 5000/- ರೂ.ಗಳು ಸಿಕ್ಕಿದ್ದು, ಮಟಕಾ ಚೀಟಿ, ಬಾಲ ಪೆನ್ನ, ಹಣ ಮತ್ತು ಮೋಬೈಲ್ ತಾಬೆಗೆ ತೆಗೆದುಕೊಂಡು, ಆರೋಪಿ ಧನರಾಜ ಈತನಿಗೆ ಮಟಕಾ ಚೀಟಿ ಬರೆದುಕೊಂಡು ಬುಕ್ಕಿ ಹಣ ಯಾರಿಗೆ ಕೊಡುತ್ತಿ ಅಂತ ವಿಚಾರಿಸಿದಾಗ ಕಾಳಿದಾಸ ಸಾ: ಶಾಹಾಜಾನಿ ಔರಾದ  (ಎಂ.ಎಸ್.) ರವರಿಗೆ ಕೊಡುತ್ತೇನೆ ಅಂತ ತಿಳಿಸಿರುತ್ತಾನೆ, ನಂತರ ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 108/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 23-07-2020 ರಂದು ಹುಮನಾಬಾದ ಪಟ್ಟಣದ ಬಾಲಾಜಿ ಮಂದಿರ ಹತ್ತಿರ ರೊಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ರೋಡಿನ ಮೇಲೆ ಹೊಗಿ ಬರುವ ಜನರಿಗೆ ಒಂದು ರೂಪಾಯಿಗೆ 80/- ರೂಪಾಯಿ ಬರುತ್ತವೆ ಅಂತಾ ಅವರಿಂದ ಹಣ ಪಡೆದು ಅವರಿಗೆ ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಡುತ್ತಿದ್ದಾನೆಂದು ಮಲ್ಲಿಕಾರ್ಜುನ ಯಾತನೂರ ಸಿಪಿಐ ಹುಮನಾಬಾದ ವೃತ್ತ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಸಿಪಿಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಹೋಗಿ ಮಟಕಾ ಚೀಟಿ ಬರೆದುಕೊಡುತ್ತಿದ್ದ ಆರೋಪಿ ಗಣೇಶ ತಂದೆ ಅಶೋಕ ಪ್ರಸಾದ, ವಯ: 31 ವರ್ಷ, ಜಾತಿ: ರಜಪೂತ, ಸಾ: ಬಾಲಾಜಿ ಮಂದಿರ ಹತ್ತಿರ ಹುಮನಾಬಾದ ಇತನ ಮೇಲೆ ದಾಳಿ ಮಾಡಿ ಹಿಡಿದು ಅವನಿಗೆ ಚೇಕ ಮಾಡಲು ಮಟಕಾ ಜೂಜಾಟಕ್ಕೆ ಸಂಬಂಧಪಟ್ಟ 1) ನಗದು ಹಣ 4500/- ರೂ. ಹಾಗೂ 2) ಒಂದು ಬಾಲ ಪೇನ್ನ, 3) 27 ಮಟಟಾ ಅಂಕಿ ಸಂಖ್ಯೆಗಳು ಬರೆದ ಚೀಟಿಗಳು ಸಿಕ್ಕಿದ್ದು, ನೇದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Thursday, July 23, 2020

BIDAR DISTRICT DAILY CRIME UPDATE 23-07-2020



ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 23-07-2020

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ನಂ. 10/2020, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಮಹೇಶ ತಂದೆ ನಾಗರಾಜ ಜಾನಾಪುರೆ ವಯ: 29 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಕಿಟ್ಟಾ ಗ್ರಾಮ ರವರ ತಮ್ಮನಾದ ಸಾಗರ ತಂದೆ ನಾಗರಾಜ ಜಾನಾಪುರೆ ವಯ: 23 ವರ್ಷ ಇತನು ಸ್ವಲ್ಪ ಮಾನಸಿಕ ಅಸ್ವಸ್ಥನಾಗಿದ್ದು ಆಗಾಗ ಮನೆಯಲ್ಲಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಅಂತಾ ಹೇಳುತ್ತಿದ್ದ, ಹೀಗಿರುವಾಗ ದಿನಾಂಕ 22-07-2020 ರಂದು ಸಾಗರ ಇತನು ಶೌಚಾಲಯಕ್ಕೆ ಹೊರಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೋಗಿ ಕಿಟ್ಟಾ ಶಿವಾರದಲ್ಲಿರುವ ಹಳ್ಳದ ಹತ್ತಿರ ಇರುವ ಹುಣಚಿನ ಗಿಡಕ್ಕೆ ಹಗ್ಗದಿಂದ ನೇಣು ಹಾಕಿಕೊಂಡಿರುವುದನ್ನು ನೋಡಿ ಸಾಗರ ಇತನಿಗೆ ಗಿಡದಿಂದ ಕೆಳಗೆ ಇಳಿಸಿ ನೋಡಲು ಜೀವ ಇದ್ದು ಆತನಿಗೆ ಖಾಸಗಿ ವಾಹನದಲ್ಲಿ ಹಾಕಿಕೊಂಡು ಬಸವಕಲ್ಯಾಣ ಪಟ್ಟಣದ ಪಾಟೀಲ ಆಸ್ಪತ್ರೆಯಲ್ಲಿ ತೊರಿಸಿದಾಗ ವೈದ್ಯರು ಸಾಗರ ಇತನಿಗೆ ನೋಡಿ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿರುತ್ತಾರೆ, ತಮ್ಮ ಸಾಗರ ಮಾನಸಿಕ ಆಸ್ವಸ್ಥನಾಗಿದ್ದು ಆತನ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ಮತ್ತು ದೂರು ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹಳ್ಳಿಖೇಡ (ಬಿ) ಪೊಲೀಸ ಠಾಣೆ ಯು.ಡಿ.ಆರ್ ನಂ. 11/2020, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಆಶಾರಾಣಿ ಗಂಡ ಸಿದ್ದಪ್ಪಾ ಹಂದಿಕೇರಿ ವಯ: 20 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಕಬೀರಾಬಾದ ವಾಡಿ, ತಾ: ಹುಮನಾಬಾದ ರವರ ಗಂಡನಾದ ಸಿದ್ದಪ್ಪಾ ತಂದೆ ರಾಜಪ್ಪಾ ಹಂದಿಕೇರಿ ವಯ: 28 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಕಬೀರಾಬಾದ ವಾಡಿ ಇತನು ಆಗಾಗ ಸರಾಯಿ ಕುಡಿಯುವ ಚಟದವನಿದ್ದು, ಸರಾಯಿ ಕುಡಿದ ಸಮಯದಲ್ಲಿ ಹುಚ್ಚರಂತೆ ವರ್ತಿಸುವ ಸ್ವಭಾವದರಿದ್ದು, ಹೀಗಾಗಿ ಗಂಡ ದಿನಾಂಕ 21-07-2020 ರಂದು ಅಂದಾಜು 2300 ಗಂಟೆಯಿಂದ 2330 ಗಂಟೆಯ ಮದ್ಯಾವಧಿಯಲ್ಲಿ ಸರಾಯಿ ಕುಡಿದ ನಶೆಯಲ್ಲಿ ತಮ್ಮ ಮನೆಯ ಬೆಡ್ ರೂಮಿನಲ್ಲಿರುವ ಸೀಲಿಂಗ್ ಫ್ಯಾನಿಗೆ ಬಿಳಿ ಲುಂಗಿಯಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ, ತನ್ನ ಗಂಡನ ಸಾವಿನ ಬಗ್ಗೆ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 22-07-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಮನಾಬಾದ ಪೊಲೀಸ್ ಠಾಣೆ ಯು.ಡಿ.ಆರ್ ನಂ. 13/2020, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಶಾಂತಮ್ಮಾ ಗಂಡ ನಾಗಯ್ಯಾ ಮಠಪತಿ ವಯ: 28 ವರ್ಷ, ಜಾತಿ: ಸ್ವಾಮಿ, ಸಾ: ಜನತಾ ನಗರ ಹುಡಗಿ, ತಾ: ಹುಮನಾಬಾದ ರವರ ಗಂಡನಾದ ಸಿದ್ದಯ್ಯಾ ತಂದೆ ಶರಣಯ್ಯಾ ಮಠಪತಿ ವಯ: 32 ವರ್ಷ, ಜಾತಿ: ಸ್ವಾಮಿ, ಸಾ: ಜನತಾ ನಗರ ಹುಡಗಿ ಇತನು ಸರಾಯಿ ಕುಡಿಯವ ಚಟದವನಾಗಿದ್ದು, ತನ್ನ ಗಂಡನಿಗೆ ಸರಾಯಿ ಕುಡಿಯುವದು ಬಿಡು ಅಂತಾ ಆಗಾಗ ಹೇಳುತ್ತಿದ್ದು ಆದರೂ ಸಹ ಅವರು ಸರಾಯಿ ಕುಡಿಯುವದು ಬಿಟ್ಟಿರುವುದಿಲ್ಲಾ, ಹೀಗಿರುವಾಗ ದಿನಾಂಕ 22-07-2020 ರಂದು 0830 ಗಂಟೆಗೆ ಗಂಡ ಸರಾಯಿ ಕುಡಿದು ಬಂದಾಗ ಯಾಕೆ ಮುಂಜಾನೆ ಸರಾಯಿ ಕುಡಿದು ಬಂದಿದ್ದಿ ಅಂತಾ ಅಂದು ತಾನು ರೊಡ್ಡಿ ಮಾಡುತ್ತಾ ಕುಳಿತಿರುವಾಗ ಗಂಡ ಪಕ್ಕದ ಕೋಣೆಯಲ್ಲಿ ಹೋಗಿ ಹಗ್ಗದಿಂದ ಫ್ಯಾನಿಗೆ ನೇಣು ಹಾಕಿಕೊಂಡಿರುವದನ್ನು ಫಿರ್ಯಾದಿಯವರ ಮಗ ನೋಡಿ ಮಮ್ಮಿ ಪಪ್ಪ ಯಾಕೋ ಈ ರೀತಿ ಮಾಡುತ್ತಿದ್ದಾನೆ ಅಂತಾ ತಿಳಿಸಿದ ಕೂಡಲೆ ಫಿರ್ಯಾದಿಯು ಹೋಗಿ ನೋಡಲು ಗಂಡ ಪ್ಯಾನಿಗೆ ಹಗ್ಗದಿಂದ ನೇಣು ಹಾಕಿಕೊಂಡಿರುವದನ್ನು ನೋಡಿ ಚೀರಿ ಅಳುವಾಗ ಮನೆಯ ಎದುರಿಗೆ ಇರುವ ಕಲಾವತಿ ಇವರು ಬಂದು ನೋಡಿ ಒಂದು ಕುಡಗೊಲಿನಿಂದ ಹಗ್ಗ ಕತ್ತರಿಸಿ ಇಳಿಸಿ ಇನ್ನೂ ಜೀವ ಇರಬೇಕು ಅಂತಾ ಒಂದು ಆಟೋದಲ್ಲಿ ಹಾಕಿಕೊಂಡು ಆಸ್ಪತ್ರೆಗೆ ತಂದಾಗ ವೈದ್ಯರು ನೋಡಿ ಮೃತಪಟ್ಟಿರುತ್ತಾರೆಂದು ತಿಳಿಸಿರುತ್ತಾರೆ, ಗಂಡ ಸರಾಯಿ ಕುಡಿದ ನಶೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ, ತನ್ನ ಗಂಡನ ಸಾವಿನಲ್ಲಿ ಯಾರ ಮೇಲೆ ಯಾವುದೇ ತರಹದ ಸಂಶಯ ಇರುವದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮುಡಬಿ ಪೊಲೀಸ್ ಠಾಣೆ ಅಪರಾಧ ಸಂ. 56/2020, ಕಂ. 279, 337, 338 ಐಪಿಸಿ :-
ದಿನಾಂಕ 22-07-2020 ರಂದು ಫಿರ್ಯಾದಿ ಅಂಕುಶ ತಂದೆ ಅಪ್ಪಾರಾವ ಹಣಕುಣೆ ಸಾ: ಹಿರನಾಗಾಂವ ರವರ ತಮ್ಮನಾದ ಲೋಕೇಶ ತಂದೆ ಅಪ್ಪಾರಾವ ಹಣಕುಣೆ ಇತನು ತಮ್ಮೂರ ಸುದೀಪ ತಂದೆ ವಿಜಯಕುಮಾರ ಭಂಡಾರಿ ಇತನ ಜೊತೆಯಲ್ಲಿ ಇಬ್ಬರು ಮೋಟಾರ್ ಸೈಕಲ ನಂ. ಕೆಎ-56/ಎಚ್-7210 ನೇದರ ಮೇಲೆ ತಮ್ಮೂರಿಂದ ಬಟ್ಟೆ ತರಲು ಮುಡಬಿ ಗ್ರಾಮಕ್ಕೆ ಹೋಗುವಾಗ ಮೋಟಾರ್ ಸೈಕಲ್ ಲೋಕೇಶ ಇತನು ಚಲಾಯಿಸುತ್ತಿದ್ದ ಆತ ತಮ್ಮೂರ ರಾಯಪ್ಪ ತಂದೆ ಶಿವಶರಣಪ್ಪ ಬಾಬನೋರ ಇವರ ಹೊಲದ ಹತ್ತಿರ ಮಡಬಿ ಕಡೆಯಿಂದ ಪ್ಯಾಶನ ಪ್ರೋ ಮೋಟಾರ್ ಸೈಕಲ್ ಕೆಎ-56/ಈ-4402 ನೇದರ ಚಾಲಕನಾದ ಆರೋಪಿ ಆಕಾಶ ತಂದೆ ದೇವಿದಾಸ ಜಾಧವ ಸಾ: ಕಾರಿಗುಂಡಿ ತಾಂಡಾ ಇತನು ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದಾಗ ಎರಡೂ ವಾಹನಗಳು ಮುಖಾ ಮುಖಿ ಡಿಕ್ಕಿಯಾಗಿರುತ್ತವೆ, ಸದರಿ ಅಪಘಾತದಿಂದ ಲೋಕೇಶ ಇತನಿಗೆ ಹಣೆ ಮೇಲೆ ರಕ್ತಗಾಯ, ಮೂಗಿನ ಮೇಲೆ ಎಡಗಡೆ ಗಲ್ಲದ ಮೇಲೆ ತರಚಿದ ರಕ್ತಗಾಯ, ಬಲಗಾಲು ಹೆಬ್ಬೆರಳಿಗೆ ರಕ್ತಗಾಯ, ಬಲಗಾಲು ಮೊಳಕಾಲಿನಿಂದ ಕೆಳಗೆ ರಕ್ತಗಾಯವಾಗಿರುತ್ತದೆ ಹಾಗೂ ಸುದಿಪ ಇತನಿಗೆ ಯಾವುದೇ ಗಾಯಗಳಾಗಿರುವದಿಲ್ಲ ಮತ್ತು ಆಕಾಶ ಇತನಿಗೆ ಬಲಗೈ ತೋರಬೆರಳಿಗೆ, ಮಧ್ಯದ ಬೆರಳಿಗೆ ರಕ್ತಗಾಯ, ಬಲಗಾಲು ಹೆಬ್ಬರಳಿಗೆ ರಕ್ತಗಾಯ, ಬಲಗಾಲು ಪಾದದ ಮೇಲೆ ಜಾಯಿಂಟನಲ್ಲಿ ಭಾರಿ ಗುಪ್ತಗಾಯವಾಗಿರುತ್ತದೆ, ನಂತರ ಅಪ್ಪಿ ಆಟೋದಲ್ಲಿ ಸುದೀಪ ಇಬ್ಬರಿಗೂ ಮುಡಬಿ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 99/2020, ಕಲಂ. 269 ಐಪಿಸಿ ಜೊತೆ 87 ಕೆ.ಪಿ ಕಾಯ್ದೆ :-
ದಿನಾಂಕ 22-07-2020 ರಂದು ಬಸವಕಲ್ಯಾಣ ನಗರದ ಆಟೋನಗರದಲ್ಲಿರುವ ಮಸಿದಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೊರೊನಾ ಸೊಂಕು ಹರಡಬಹುದು ಎಂದು ಗೊತ್ತಿದ್ದರು ಈ ಬಗ್ಗೆ ನೀರ್ಲಕ್ಷ ವಹಿಸಿ ಕೆಲವು ಜನರು ಗುಂಪಾಗಿ ಕುಳಿತುಕೊಂಡು ಹಣ ಹಚ್ಚಿ ಪಣ ತೊಟ್ಟು ಇಸ್ಪಿಟ್ ಎಲೆಗಳ ಅಂದರ ಬಾಹರ್ ನಸಿಬಿನ ಜೂಜಾಟವನ್ನು ಆಡುತ್ತಿದ್ದಾರೆಂದು ಕರೆ ಮುಖಾಂತರ ಸುನೀಲಕುಮಾರ ಪಿ.ಎಸ್.ಐ (ಕಾ&ಸೂ) ಬಸವಕಲ್ಯಾಣ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಸವಕಲ್ಯಾಣ ನಗರದ ಆಟೋನಗರದಲ್ಲಿರುವ ಮಸಿದಿ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಅಲ್ಲಿ ಆರೋಪಿತರಾದ 1) ಯುಸುಫ್ ತಂದೆ  ಫತ್ರುಮಿಯ್ಯಾ ವಯ: 55 ವರ್ಷ, ಜಾತಿ: ಮುಸ್ಲಿಂ, ಸಾ: ರಾಜಪೂತ ಗಲ್ಲಿ ಬಸವಕಲ್ಯಾಣ, 2) ರಾಜೆಸಾಬ ತಂದೆ ಮಿರಾಸಾಬ ವಯ: 50 ವರ್ಷ, ಜಾತಿ: ಮುಸ್ಲಿಂ, 3) ಸೈಯದ ಕರಿಮ ತಂದೆ ಸೈಯದ ರಹಿಮಸಾಬ ವಯ: 44 ವರ್ಷ, ಜಾತಿ: ಮುಸ್ಲಿಂ, 4) ಇಸ್ಮಾಯಿಲ್ ತಂದೆ ಅಹ್ಮದಖಾನ ಉಂಟವಾಲೆ ವಯ: 55 ವರ್ಷ, ಜಾತಿ: ಮುಸ್ಲಿಂ, ಮೂವರು ಸಾ: ಬಬರಬಾಗ ಬಸವಕಲ್ಯಾಣ ಹಾಗೂ 5) ಖಾಜಾಮಿಯಾ ತಂದೆ ರಹಿಮಸಾಬ ವಯ: 55 ವರ್ಷ, ಜಾತಿ: ಮುಸ್ಲಿಂ, ಸಾ: ಛೀಲ್ಲಾಗಲ್ಲಿ ಬಸವಕಲ್ಯಾಣ ಇವರೆಲ್ಲರೂ ಗುಂಪಾಗಿ ಕುಳಿತುಕೊಂಡು ಕೊರೋನಾ ಸೊಂಕು ಹರಡಬಹುದು ಎಂದು ಗೊತ್ತಿದ್ದರು ಮಾಸ್ಕ್ ಧರಿಸದೇ ಮತ್ತು ಸಮಾಜಿಕ ಅಂತರ ಕಾಪಾಡದೆ ಈ ಬಗ್ಗೆ ನೀರ್ಲಕ್ಷ ವಹಿಸಿ ಇಸ್ಪಿಟ್ ಎಲೆಗಳ ಅಂದರ ಬಾಹರ ನಸೀಬಿನ ಜೂಜಾಟವನ್ನು ಹಣ ಹಚ್ಚಿ ಪಣ ತೊಟ್ಟು ಆಡುತ್ತಿರುವುದನ್ನು ನೋಡಿ ಎಲ್ಲರು ಒಮ್ಮೆಲೆ ಸದರಿ ಆರೋಪಿತರ ಮೇಲೆ ದಾಳಿ ಮಾಡಿ ಹಿಡಿದುಕೊಂಡು ಅವರಿಂದ ನಗದು ಹಣ 9600/- ರೂ ಮತ್ತು 52 ಇಸ್ಪಿಟ್ ಎಲೆಗಳನ್ನು ತಾಬೆಗೆ ತೆಗೆದುಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.