Police Bhavan Kalaburagi

Police Bhavan Kalaburagi

Wednesday, December 9, 2020

BIDAR DISTRICT DAILY CRIME UPDATE 09-12-2020

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 09-12-2020

 

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 102/2020, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 08-12-2020 ರಂದು ಫಿರ್ಯಾದಿ ಅಜಯ ತಂದೆ ವಿಲಾಸ ಜಾಧವ ವಯ: 19 ವರ್ಷ, ಸಾ: ನೀರಗುಡಿ ರವರು ಮತ್ತು ಬಾಲಾಜಿ ತಂದೆ ಲಕ್ಷ್ಮಣ ಜಾಧವ ಇಬ್ಬರು ಅವರ ಹೋಲಕ್ಕೆ ಕೆಲಸಕ್ಕೆಂದು ತಮ್ಮೂರ ರೋಡಿನ ಬದಿಯಿಂದ ನಡೆದುಕೊಂಡು ಬಾಲಾಜಿ ಜಾಧವ ಇವರ ಹೋಲದ ಹತ್ತಿರ ಹೋಗುತ್ತಿರುವಾಗ ಹಿಂದಿನಿಂದ ಬುಲೆರೋ ವಾಹನ ಸಂ. ಕೆಎ-33/ಎಂ-4343 ನೇದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮತ್ತು ಬಾಲಜಿ ಇಬ್ಬರಿಗೂ ಡಿಕ್ಕಿ ಮಾಡಿ ತನ್ನ ವಾಹನವನ್ನು ನಿಲ್ಲಸದೇ ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಬಾಲಾಜಿಗೆ ಬಲಗಾಲ ತೊಡೆಯಲ್ಲಿ ಭಾರಿಗಾಯವಾಗಿ ಕಾಲು ಮುರಿದಿದ್ದು, ಫಿರ್ಯಾದಿಗೆ ಬಲಗಾಲ ಪಿಂಡ್ರಿಯಲ್ಲಿ ಗುಪ್ತಗಾಯ ಮತ್ತು ಪಾದದ ಮೇಲೆ ತರಚಿದ ಗಾಯಗಳು ಆಗಿದ್ದು ಇರುತ್ತದೆ, ಭಾರಿಗಾಯಗೊಂಡು ಸ್ಥಳದಲ್ಲಿ ಬಿದ್ದ ಬಾಲಾಜಿಗೆ ಫಿರ್ಯಾದಿಯು ರೋಳಾ ಗ್ರಾಮದ ಕಡೆಯಿಂದ ಬರುತ್ತಿದ್ದ ಒಂದು ವಾಹನಕ್ಕೆ ಕೈ ಮಾಡಿ ಅದರಲ್ಲಿ ಹಾಕಿಕೊಂಡು ಚಿಕಿತ್ಸೆ ಕರಿತು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 155/2020, ಕಲಂ. 279, 337, 338 ಐಪಿಸಿ :-

ದಿನಾಂಕ 08-12-2020 ರಂದು ಫಿರ್ಯಾದಿ ಶೋಭಾಬಾಯಿ ಗಂಡ ಭರತ ಭಾಲ್ಕೆ ಸಾ: ಕೊಟಗ್ಯಾಳವಾಡಿ ರವರು ತನ್ನ ಗಂಡ ಭರತ ವಯ: 56 ವರ್ಷ ಇಬ್ಬರೂ ಕೂಡಿ ತಮ್ಮ ಟಿ.ವಿ.ಎಸ ಮೋಟಾರ ಸೈಕಲ್ ನಂ. ಕೆಎ-39/ಆರ್-9879 ನೇದರ ಮೇಲೆ ಖಾಸೆಂಪೂರ ಗ್ರಾಮಕ್ಕೆ ತಮ್ಮ ಸಂಬಂಧಿಕರ ಮನೆಗೆ ಹೋಗಿ ಮರಳಿ ತಮ್ಮೂರಿಗೆ ಬರುವಾಗ ಬೀರಿ(ಕೆ)-ಒಳಸಂಗ ಗ್ರಾಮ ರೋಡಿನ ಮೇಲೆ ಕೆನಾಲ ಹತ್ತಿರ ಗಂಡ ಸದರಿ ಮೋಟಾರ ಸೈಕಲನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗುವಾಗ ಎದುರುಗಡೆಯಿಂದ ಅಂದರೆ ಭಾಲ್ಕಿ ಕಡೆಯಿಂದ ಮೊಟಾರ ಸೈಕಲ ನಂ. ಕೆಎ-32/ಕ್ಯೂ-3278 ನೇದರ ಚಾಲಕನಾದ ಆರೋಪಿ ವಿಲಾಸ ತಂದೆ ರಾಮಚಂದ್ರ ಶರಮಂಗಲೆ ಸಾ: ಬೀರಿ(ಕೆ) ಇತನೂ ಕೂಡ ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಇಬ್ಬರು ಮುಖಾಮುಖಿ ಡಿಕ್ಕಿ ಮಾಡಿಕೊಂಡಿರುತ್ತಾರೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯ ಎಡಗಾಲ ಮೊಣಕಾಲ ಮೇಲೆ ಗುಪ್ತಗಾಯ ಮತ್ತು ಮುಖಕ್ಕೆ ಗುಪ್ತಗಾಯವಾಗಿರುತ್ತದೆ ಮತ್ತು ಗಂಡನಿಗೆ ಎಡಗಾಲ ಮೊಣಕಾಲ ಕೆಳಗೆ ಭಾರಿ ಗುಪ್ತಗಾಯವಾಗಿರುತ್ತದೆ ಮತ್ತು ನಂತರ ಪರಿಚಯದ ಕೊಟಗ್ಯಾಳ ವಾಡಿಯ ಅಂಕುಶ ತಂದೆ ರಾಮಚಂದ್ರ ಬಿರಾದಾರ ರವರಿಗೆ ಗಂಡ ಕರೆ ಮಾಡಿ ಬೀರಿ (ಕೆ) ಗ್ರಾಮದ ಹತ್ತಿರ ರಸ್ತೆ ಅಪಘಾತವಾಗಿದೆ ಅಂತ ತಿಳಿಸಿ ಬರಲು ಹೇಳಿದ್ದರಿಂದ ಅಂಕುಶ ಮತ್ತು ಅನಿಲ ತಂದೆ ಶ್ರೀಪತರಾವ ರವರು ಕೂಡಲೆ ಬಂದು 108 ಅಂಬುಲೆನ್ಸಗೆ ಕರೆ ಮಾಡಿ ಕರೆಸಿ ಗಾಯಗೊಂಡ ಫಿರ್ಯಾದಿಗೆ ಮತ್ತು ಗಂಡನಿಗೆ ಹಾಗೂ ವಿಲಾಸ ಎಲ್ಲರಿಗೂ ಚಿಕಿತ್ಸೆ ಕುರಿತು ಭಾಲ್ಕಿ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸರಾಂಶದ ಮೇರಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 103/2020, ಕಲಂ. 87 ಕೆ.ಪಿ ಕಾಯ್ದೆ :-

ದಿನಾಂಕ 08-12-2020 ರಂದು ಇಸ್ಲಾಂಪೂರ ಗ್ರಾಮದ ಕನಕದಾಸ ಚೌಕ ಹತ್ತಿರ ಕೆಲವು ಜನರು ಸಾರ್ವಜನಿಕ ಸ್ಥಳದಲ್ಲಿ ಗೋಲಾಕಾರವಾಗಿ ಕುಳಿತು ಹಣವನ್ನು ಪಣಕ್ಕೆ ಇಟ್ಟು ಅಂದರ ಬಾಹರ ಇಸ್ಪಿಟ್ ಜೂಜಾಟ ಆಡುತ್ತಿದ್ದಾರೆಂದು ವಸೀಮ ಪಟೇಲ್ ಪಿಎಸಐ (ಕಾಸು) ಬಸವಕಲ್ಯಾಣ ಗ್ರಾಮೀಣ ಠಾಣೆ ರವರಿಗೆ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಇಸ್ಲಾಮಪೂರ ಗ್ರಾಮದ ಕನಕದಾಸ ಚೌಕ ಹತ್ತಿರದಿಂದ ಮರೆಯಲ್ಲಿ ನಿಂತು ನೋಡಲು ಕನಕದಾಸ ಚೌಕ ಹತ್ತಿರ ಆರೋಪಿತರಾದ ಸಂತೋಷ ರೆಡ್ಡಿ ತಂದೆ ಈರಪ್ಪಾ ಗಡವಂತಿ ವಯ: 47 ವರ್ಷ, ಜಾತಿ: ರೆಡ್ಡಿ, ಸಾ: ಇಸ್ಲಾಮಪೂರ ಇತನು ಹಾಗೂ ಇನ್ನೂ 8 ಜನ ಎಲ್ಲರೂ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು ಹಣವನ್ನು ಪಣಕ್ಕೆ ಇಟ್ಟು ಅಂದರ ಬಾಹರ ಎಂಬ ನಶಿಬಿನ ಇಸ್ಪಿಟ ಜೂಜಾಟ ಆಡುತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ಸದರಿ ಆರೋಪಿತರ ಮೇಲೆ ದಾಳಿ ಮಾಡಿ ಹಿಡಿದು ಅವರಿಂದ ಒಟ್ಟು ನಗದು ಹಣ 9,600/- ರೂ. ಹಾಗು 52 ಇಸ್ಪಿಟ ಎಲೆಗಳು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Tuesday, December 8, 2020

BIDAR DISTRICT DAILY CRIME UPDATE 08-12-2020

 

 

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 08-12-2020

ಜನವಾಡಾ ಪೊಲೀಸ್ ಠಾಣೆ ಗುನ್ನೆ ನಂ 80/2020 ಕಲಂ 87 ಕೆ ಪಿ ಕಾಯ್ದೆ :-

ದಿನಾಂಕ 07/12/2020 ರಂದು 15:30 ಗಂಟೆಗೆ ಚಾಂಬೋಳ ಗ್ರಾಮದ ವೀರಭದೇಶ್ವರ ಪ್ರೌಢ ಶಾಲೆಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಖುಲ್ಲಾ ಜಾಗದಲ್ಲಿ ಕೆಲವು ಜನರು ಅಂದರ ಬಾಹರ ಇಸ್ಪಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಮೇರೆಗೆ ಪಿಎಸ್ಐ ರವರು ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ ಅಪಾದಿತರಾದ 1) ಮಹಾದೇವ ತಂದೆ ಸುಭಾಷ ಪಾಟೀಲ್ ಸಾ || ಕಂದಗೂಳ 2) ಅಜಯ ತಂದೆ ಭೀಮಣ್ಣಾ ಕೋಳಿ ಸಾ || ಚಾಂಬೋಳ 3) ದೌಲತ ತಂದೆ ಪಾಂಡುರಂಗ್ ಕೋಳೆಕರ ಸಾ|| ಚಾಂಬೋಳ 4) ಲಾಲಚಂದ ತಂದೆ ಶೀವಕುಮಾರ ಕೋಳಿ ಸಾ|| ಚಾಂಬೋಳ 5) ಸುರೇಶ ತಂದೆ ವೀರಶೆಟ್ಟಿ ಹೂಗಾರ ಸಾ|| ಚಾಂಬೋಳ 6) ಅನೀಲ ತಂದೆ ಅಂಬಪ್ಪಾ ವಗ್ಗೆ ಸಾ|| ಕಂದಗೂಳ 7) ಸಂತೋಷ ತಂದೆ ಗೋಪಾಳರಾವ ಮಾಲಿಪಾಟೀಲ್ ಸಾ|| ಕಂದಗೂಳ 8) ವಿನಾಯಕ ತಂದೆ ನರಸಿಂಗರಾವ ಕಾಳೆ ಸಾ|| ಚಾಂಬೋಳ ರವರ ಜೂಜಾಟದ ಮೇಲೆ 17:50 ಗಂಟೆಗೆ ದಾಳಿ ಮಾಡಿ ಅವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ತೋಡಗಿಸಿದ ಒಟ್ಟು ನಗದು ಹಣ 29,150/- ರೂ ಹಾಗು 52 ಇಸ್ಪೀಟ್ ಎಲೆಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಖಟಕಚಿಂಚೊಳ್ಳಿ ಪೊಲೀಸ್ ಠಾಣೆ ಅಪರಾಧ ನಂ. 90/2020 ಕಲಂ 87 ಕೆ.ಪಿ. ಕಾಯ್ದೆ :-

 

 ದಿನಾಂಕ:06/12/2020 ರಂದು 22:00 ಗಂಟೆಗೆ ಪಿಎಸ್ಐ ರವರು  ಠಾಣೆಯಲ್ಲಿರುವಾಗ ಬಾಜೋಳಗಾ ಕ್ರಾಸ್ ಹತ್ತಿರ ಇರುವ ಲೊಕೇಶ ತಂದೆ ಅಶೋಕರಾವ ಭಾಲ್ಕೆ ಸಾ-ಮದಕಟ್ಟಿ ರವರ ಪೈನಾನ್ಸ್ ಅಂಗಡಿಯ ಮುಂದುಗಡೆ ಸಾರ್ವಜನಿಕ ರಸ್ತೆಯ ಮೇಲೆ ಕೆಲವು ಜನರು ಪರೇಲ್ ಎಂಬ ಮೂರು ಎಲೆಯ ಇಸ್ಪೀಟ ಜೂಜಾಟ ಆಡುತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದಿದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ  ಅವರಿಗೆ ಹಿಡಿದುಕೊಂಡು ಅವರ ಹೆಸರು ಮತ್ತು ವಿಳಾಸ ವಿಚಾರಿಸಲು 1) ಅಭಿಶೇಕ ತಂದೆ ಚಂದ್ರಕಾಂತ ಮೀರಜದಾರ ಸಾ-ಮದಕಟ್ಟಿ  2) ಪರಮೇಶ್ವರ ತಂದೆ ಶ್ರೀಧರ ಬಿರಾದಾರ ಸಾ-ಮಾವಿನಹಳ್ಳಿ 3) ಸಂಗಮೇಶ ತಂದೆ ವಿಶ್ವನಾಥ ಮೂಗನುರೆ ಸಾ-ಮದಕಟ್ಟಿ 4) ಸಂತೋಷ ತಂದೆ ಕಾಶಿನಾಥ ಹೂಗಾರ ಸಾ-ಮದಕಟ್ಟಿ 5) ಕ್ರೀಷ್ಣಾ ತಂದೆ ರಮೇಶ ಪಾಂಡೆ ಸಾ-ಜನವಾಡ 6) ಅಮೀರೊದ್ದಿನ ತಂದೆ ಪಾಷಾಮೀಯಾ ಮೌಜಲ ಸಾ-ಮದಕಟ್ಟಿ 7) ಅಶೋಕ ತಂದೆ ಮಾರುತಿ ಮಾಣೆ ಸಾ-ಮದಕಟ್ಟಿ 8) ಮಸ್ತಾನ ತಂದೆ ಮೈನೊದ್ದಿನ ಭಂಡಾರಿ ಸಾ-ಮದಕಟ್ಟಿ 9) ಆಶೀಶ ತಂದೆ ಪಾಂಡುರಂಗ ಮೀರಜದಾರ ಸಾ-ಮದಕಟ್ಟಿ 10) ಅಸ್ಲಂ ತಂದೆ ಗುಲಾಬ ಷಾ ಫಕೀರ ಸಾ-ಮಾವಿನಹಳ್ಳಿ ಅಂತ ತಿಳಿಸಿದ್ದು, ನಂತರ ಸದರಿ ಪಂಚರ ಸಮಕ್ಷಮ ಆಟದಲ್ಲಿದ್ದ ಒಟ್ಟು ಹಣ 35,300/- ರೂಪಾಯಿ ಮತ್ತು 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 150/2020 ಕಲಂ 379 ಐಪಿಸಿ :-

ದಿನಾಂಕ 07/12/2020 ರಂದು 18:00 ಗಂಟೆಗೆ ಅರ್ಜಿದಾರರಾದ ಶ್ರೀ ರಮೇಶ ತಂದೆ ಗುರುನಾಥ ಪೊಲೀಸ್ ಪಾಟೀಲ್ ವಯ 52 ವರ್ಷ ಜಾತಿ ಲಿಂಗಾಯತ // ಲಾರಿ ಚಾಲಕ ಸಾ// ಕಲ್ಲೂರ ತಾ// ಹುಮನಾಬಾದ ರವರು ಠಾಣೆಗೆ ಹಾಜರಾಗಿ ನೀಡಿದರ ದೂರಿನ ಸಾರಾಂಶವೆನೆಂದರೆ ಇವರ ತಮ್ಮನಾದ ಮಲ್ಲಿಕಾರ್ಜುನ ತಂದೆ ಗುರುನಾಥ ಪೊಲೀಸ್ ಪಾಟೀಲ್ ರವರ ಹತ್ತಿರ ಒಂದು ಲಾರಿ ನಂ ಕೆಎ-39/5254 ಇರುತ್ತದೆ. ಅದರ ಚೆಸ್ಸಿ ನಂ UFR235419 ಮತ್ತು ಅದರ ಇಂಜಿನ್ ನಂ UFH411237 ಅದರ ಮಾಡಲ್ 2006 ಇರುತ್ತದೆ. ಅದರ .ಕಿ. 4 (ನಾಲ್ಕು) ಲಕ್ಷ ರೂಪಾಯಿ ಇರುತ್ತದೆ.  ಹೀಗಿರುವಲ್ಲಿ ದಿನಾಂಕ 27/11/2020 ರಂದು ಮದ್ಯಾಹ್ನ 2:00 ಗಂಟೆಯ ಸುಮಾರಿಗೆ ಲಾರಿಯ ಬಾಡಿ ಕೆಲಸ ಮಾಡಿಸುವಗೋಸ್ಕರ ಸಸ್ತಾಪೂರ ಬಂಗ್ಲಾ ಹತ್ತಿರ ಇರುವ ಆಟೋ ನಗರದಲ್ಲಿ ಚಾಂದ ತಂದೆ ಮಹೇಬೂಬಸಾಬ ಬಾಡಿ ಬಿಲ್ಡರ್ ಈತನ ಗ್ಯಾರೇಜ್ ಅಂಗಡಿಯಲ್ಲಿ ಲಾರಿ ತಂದು ನಿಲ್ಲಿಸಿರುತ್ತೇನೆ ಮೆಕಾನಿಕ ಚಾಂದ ರವರ ನನಗೆ ತಿಳಿಸಿದ್ದೆನೆಂದರೆ ನಿಮ್ಮ ಲಾರಿ ನಮ್ಮ ಗ್ಯಾರೇಜದಲ್ಲಿ ಬಿಟ್ಟು ಲಾರಿಯ ಚಾವಿ ನನ್ನ ಕೈಯಲ್ಲಿ ಕೊಟ್ಟು ತಾನು ಲಾರಿಯ ಕೆಲಸ ಮಾಡಿಕೊಡುವದಾಗಿ ತಿಳಿಸಿರುತ್ತಾರೆ ನಂತರ ನನ್ನ ಲಾರಿ ಗ್ಯಾರೇಜದಲ್ಲಿ ಬಿಟ್ಟು ರಾತ್ರಿ 8 ಗಂಟೆಯ ಸುಮಾರಿಗೆ ಊರಿಗೆ ಹೋಗಿರುತ್ತಾರೆ.  ಹೀಗಿರುವಲ್ಲಿ ದಿನಾಂಕ 28/11/2020 ರಂದು ಮುಂಜಾನೆ 08:00 ಗಂಟೆಗೆ ಲಾರಿಯ ಕೆಲಸ ಮಾಡುವ ಚಾಂದ ಇತನು ನನಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ ನಿಮ್ಮ ಲಾರಿ ಗ್ಯಾರೇಜ್ ಹತ್ತಿರ ಇರುವುದಿಲ್ಲಾ ಅಂತಾ ತಿಳಿಸಿದನು. ಹೋಗಿ ನೋಡಿದಾಗ ಲಾರಿ ಇರುವುದಿಲ್ಲ ದಿನಾಂಕ 27/11/2020 ರಂದು ರಾತ್ರಿ 8 ಗಂಟೆಯಿಂದ ದಿನಾಂಕ 28/11/2020 ರಂದು ಮುಂಜಾನೆ 08:00 ಗಂಟೆಯ ಮಧ್ಯೆದ ಅವಧಿಯಲ್ಲಿ ಲಾರಿ ನಂ ಕೆಎ-39/5254 ನೆದ್ದು ಚಾಂದ ಗ್ಯಾರೇಜನ ಹತ್ತಿರ ಖುಲ್ಲಾ ಜಾಗೆಯಲ್ಲಿ ನಿಲ್ಲಿಸಿದ ಲಾರಿಯನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವುಮಾಡಿಕೊಂಡು ಹೋದ ನನ್ನ ಲಾರಿ ಎಲ್ಲಾ ಕಡೆ ಹುಡುಕಾಡಿ ನನ್ನ ತಮ್ಮನಿಗೆ ವಿಚಾರಿಸಿಕೊಂಡು ಠಾಣೆಗೆ ಬರಲು ತಡವಾಗಿರುತ್ತದೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.                                        

Monday, December 7, 2020

BIDAR DISTRICT DAILY CRIME UPDATE 07-12-2020

 

 

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 07-12-2020

ಬೀದರ  ಸಂಚಾರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 107/2020 ಕಲಂ 279, 304(ಎ) ಐಪಿಸಿ ಜೊತೆ 187 ಐಎಮ್.ವಿ. ಕಾಯ್ದೆ :-

ದಿನಾಂಕ: 06-12-2020 ರಂದು ಫಿರ್ಯಾದಿ ಶ್ರೀ  ಮಹ್ಮದ ಫಿರೋಜ  ತಂದೆ ಮಹ್ಮದ ಇಸಾಕ, ವಯ 33 ವರ್ಷ, ಜ್ಯಾತಿ ಮುಸ್ಲಿಂ, ಉ: ಕೂಲಿ ಕೆಲಸ  ಸಾ: ಅಬ್ದುಲ ಪೈಜ ದರ್ಗಾ ಹತ್ತಿರ  ಇವರ ತಂದೆ ಮಹ್ಮದ ಇಸಾಕ ರವರು ಶಹಾಪೂರ ಗೇಟ ಕಡೆಯಿಂದ ಮನೆಗೆ ಸೈಕಲ ಚಲಾಯಿಸಿಕೊಂಡು ಬರುತ್ತಿದ್ದರು. ಸಾಯಂಕಾಲ ಸುಮಾರು 6:45 ಗಂಟೆಗೆ ಶಹಾಪೂರ ರಿಂಗ್ ರೋಡ ಕ್ರಾಸ ಹತ್ತಿರ ಬಂದಾಗ, ಎದುರಿನಿಂದ ಅಂದರೆ ಬೀದರ ಕಡೆಯಿಂದ ಶಹಾಪೂರ ಗೇಟ ಕಡೆಗೆ ಒಂದು ಮೊಟಾರ ಸೈಕಲ ನಂ. ಕೆಎ38ವಿ8912 ನೇದ್ದರ ಸವಾರ ಅತೀ ವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಶಹಾಪೂರ ರಿಂಗ್ ರೋಡ ಕ್ರಾಸ ಹತ್ತಿರ ಡಿಕ್ಕಿ ಮಾಡಿ ಮೊಟಾರ ಸೈಕಲ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಪರಿಣಾಮ ಮಹ್ಮದ ಇಸಾಕ ರವರಿಗೆ ತಲೆಗೆ ಭಾರಿ ಗುಪ್ತಗಾಯವಾಗಿ ಮೂಗಿನಿಂದ ರಕ್ತ ಬಂದು ಆಸ್ಪತ್ರೆಗೆ ತಂದಾಗ ವೈದ್ಯಾಧಿಕಾರಿಗಳು ಪರೀಕ್ಷಿಸಿ ಮೃತಪಟ್ಟಿರುವದಾಗಿ ತಿಳಿಸಿರುತ್ತಾರೆ ಅಂತ ತಿಳಿಸಿದರು. ಕಾರಣ ಮೊಟಾರ ಸೈಕಲ ನಂ. ಕೆಎ38ವಿ8912 ನೇದ್ದರ ಸವಾರನ ವಿರುದ್ಧ ಕಾನೂನು ಕ್ರಮ ಕೈಕೊಳ್ಳಲು ವಿನಂತಿ. ಅಂತ ನೀಡಿದ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

ಹಳ್ಳಿಖೇಡ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 148/2020 ಕಲಂ 3 & 7 ಈ.ಸಿ. ಕಾಯ್ದೆ :-

 

ದಿನಾಂಕ : 06/12/2020 ರಂದು ಮದ್ಯಾಹ್ನ 1230 ಗಂಟೆಗೆ ಫಿರ್ಯಾದಿ  ಶ್ರೀ ಮಿಲನಕುಮಾರ ತಂದೆ ಅಮೃತರಾವ ಗಾಯಕವಾಡ ವಯ-48 ವರ್ಷ ಜಾತಿ ಎಸ್.ಸಿ ಹೊಲಿಯಾ ಉ-ಆಹಾರ ಶಿರಸ್ತೆದಾರರು ಹುಮನಾಬಾದ ಸಾ-ಬಸವ ಕಲ್ಯಾಣ ರವರು ಠಾಣೆಗೆ ಹಾಜರಾಗಿ ದೂರು ನೀಡಿದರ ಸಾರಂಶವೆನೆಂದರೆ, ಹಳ್ಳಿಖೇಡ(ಬಿ) ಪಟ್ಟಣದಿಂದ ಒಂದು ಮಿನಿ ಐಚರ್ ವಾಹನ ನಂ: ಕೆಎ-39/ಎ-0007 ನೇದ್ದರಲ್ಲಿ ಅನಧಿಕೃತವಾಗಿ ಸಾರ್ವಜನಿಕ ವಿತರಾಣ ವ್ಯವಸ್ಥೆ ಅಡಿಯಲ್ಲಿ ವಿತರಿಸುವ ಅಕ್ಕಿಯನ್ನು ಸಾಗಿಸಲು ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ಮಾಹಿತಿ ತಿಳಿದುಕೊಂಡು ಮಿಲನಕುಮಾರ ಆಹಾರ ಶಿರಸ್ತೆದಾರ ತಹಶೀಲ ಕಛೇರಿ ಹುಮನಾಬಾದ ಮತ್ತು ಜೊತೆಯಲ್ಲಿ ಶ್ರೀಮತಿ ಬಿಂದುಕುಮಾರಿ ಆಹಾರ ನಿರೀಕ್ಷಕರು ಹುಮನಾಬಾದ ರವರನ್ನು ಕರೆದುಕೊಂಡು ಹಾಗೂ ಪೊಲೀಸ್ ಸಿಬ್ಬಂದಿಯೊಂದಿಗೆ ಹಳ್ಳಿಖೇಡ(ಬಿ) ಪಟ್ಟಣದ ಶ್ರೀ ಸೀಮಿ ನಾಗನಾಥ ಕ್ರಾಸ್ ರೋಡಿನ ಹತ್ತಿರ  0945 ಗಂಟೆಗೆ ಮಿನಿ ಐಚರ್ ವಾಹನ ನಂ: ಕೆಎ-39/ಎ-0007 ನೇದ್ದರಲ್ಲಿ ಸಾರ್ವಜನಿಕರಿಗೆ ಮತ್ತು ವಿವಿಧ ಇಲಾಖೆಗೆ ವಿತರಿಸುವ ಅಕ್ಕಿ ಸಾಗಿಸುವಾಗ ಪಂಚರ ಸಮಕ್ಷಮ ಶ್ರೀಮತಿ ಬಿಂದುಕುಮಾರಿ ಆಹಾರ ಶಿರಸ್ತೆದಾರರು ಹುಮನಾಬಾದ ಮತ್ತು ಇಬ್ಬರು ಪೊಲಿಸರಾದ ಸುನೀಲಕುಮಾರ ಸಿಪಿಸಿ-1389 ಹಾಗೂ ಶರಣಪ್ಪಾ ಸಿಪಿಸಿ-1909 ರವರ ಸಹಾಯದಿಂದ ದಾಳಿ ಮಾಡಿ ಸದರಿ ಚಾಲಕನನ್ನು ಹಿಡಿದುಕೊಂಡು ಪಂಚರ ಸಮಕ್ಷಮ ಪಂಚನಾಮೆ ಅಡಿಯಲ್ಲಿ ಸದರಿ ವಾಹನದಲ್ಲಿದ್ದ 96 ಚೀಲಗಳನ್ನು ತೆಗೆದು ನೋಡಲು ಅದರಲ್ಲಿ ಸಾರ್ವಜನಿಕರಿಗೆ ಮತ್ತು ವಿವಿಧ ಇಲಾಖೆಗೆ ವಿತರಣಾ ವ್ಯವಸ್ಥೆ ಅಡಿಯಲ್ಲಿ ವಿತರಿಸುವ ಅಕ್ಕಿ ಇದ್ದು, ಒಂದು ಚೀಲದಲ್ಲಿ 50 ಕೆ.ಜಿ ಯಂತೆ ಒಟ್ಟು 96 ಚೀಲದಲ್ಲಿ 48 ಕ್ವಿಂಟಲ್ ಅಕ್ಕಿ ಇರುತ್ತವೆ. ಅದೇ ಸಮಯಕ್ಕೆ ಹಳ್ಳಿಖೇಡ(ಬಿ) ಪಟ್ಟಣದ ಕಡೆಯಿಂದ ಮತ್ತೊಂದು ಮಹೀಂದ್ರಾ ಪಿಕಪ್ ಗೂಡ್ಸ್ ವಾಹನ ಬಂದಿದ್ದು, ಅದನ್ನು ನಾವು ಪಂಚರ ಸಮಕ್ಷಮ ಕೈಮಾಡಿ ನಿಲ್ಲಿಸಲು ಸದರಿ ವಾಹನದ ಚಾಲಕ ವಾಹನವನ್ನು ನಿಲ್ಲಿಸಿ ಓಡಿ ಹೋಗಿರುತ್ತಾನೆ. ಸದರಿ ವಾಹನ ನೋಡಲು ಮಹೀಂದ್ರಾ ಬುಲೇರೋ ಗೂಡ್ಸ್ ಪಿಕಪ್ ವಾಹನವಿದ್ದು, ಇದರ ನಂಬರ ಕೆಎ-32/ಸಿ-7058 ಇರುತ್ತದೆ. ಸದರಿ ವಾಹನದಲ್ಲಿ ಹಿಂದುಗಡೆ ನೋಡಲು ಒಟ್ಟು 86 ಚೀಲಗಳಿದ್ದು, ಅವುಗಳನ್ನು ತೆಗೆದು ನೋಡಲು ಅದರಲ್ಲಿ ಸಾರ್ವಜನಿಕರಿಗೆ ಮತ್ತು ವಿವಿಧ ಇಲಾಖೆಗೆ ವಿತರಣಾ ವ್ಯವಸ್ಥೆ ಅಡಿಯಲ್ಲಿ ವಿತರಿಸುವ ಅಕ್ಕಿ ಇದ್ದು, ಒಂದು ಚೀಲದಲ್ಲಿ 50 ಕೆ.ಜಿ ಯಂತೆ ಒಟ್ಟು 86 ಚೀಲದಲ್ಲಿ 43 ಕ್ವಿಂಟಲ್ ಅಕ್ಕಿ ಇರುತ್ತವೆ. ಒಂದು ಕ್ವೀಂಟಲ್ ಅಕ್ಕಿಯ ಅ.ಕಿ-3,000/- ರೂಪಾಯಿ ಹೀಗೆ ಎರಡು ವಾಹನಗಳಲ್ಲಿದ್ದ ಒಟ್ಟು 91 ಕ್ವೀಂಟಲ್ ಅಕ್ಕಿಯ ಅ.ಕಿ-2,73,000/- ರೂ. ಬೆಲೆ ಬಾಳುವುದು ಇರುತ್ತದೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.