Police Bhavan Kalaburagi

Police Bhavan Kalaburagi

Tuesday, April 13, 2021

BIDAR DISTRICT DAILY CRIME UPDATE 13-04-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 13-04-2021

 

ಮಾರ್ಕೆಟ ಪೊಲೀಸ ಠಾಣೆ ಬೀದರ ಯು.ಡಿ.ಆರ್ ಸಂ. 04/2021, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 12-04-2021 ರಂದು 0900 ಗಂಟೆಯಿಂದ 1000 ಗಂಟೆಯ ಅವಧಿಯಲ್ಲಿ ಪ್ರಕಾಶ, ಅಂದಾಜು 55 ವರ್ಷದ ಗಂಡು ವ್ಯಕ್ತಿ ಸಾ: ರೇಲ್ವೇ ಸ್ಟೇಷನ್ ಹತ್ತಿರ ಬೀದರ ಇತನು ಯಾವುದೋ ರೋಗದಿಂದ ಬಳಲುತ್ತಾ ಮಲಗಿದ ಸ್ಥಳದಲ್ಲಿಯೇ ಮ್ರತಪಟ್ಟಿರುತ್ತಾನೆ, ಸದರಿಯವನ ಮರಣದ ಬಗ್ಗೆ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲಾ ಅಂತ ಫಿರ್ಯಾದಿ ತಾಜೋದ್ದಿನ ತಂದೆ ಸೈಯದ ಖಾಜಾಮಿಜ್ಯಾ ಸಾ: ಚಿಂತಲಗೇರಾ, ತಾ: & ಜಿ: ಬೀದರ ರವರು ನೀಡಿದ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಸಂಚಾರ ಪೊಲೀಸ್ ಅಪರಾಧ ಸಂ. 35/2021, ಕಲಂ. 279, 304(ಎ) ಐಪಿಸಿ :-

ದಿನಾಂಕ 12-04-2021 ರಂದು ಫಿರ್ಯಾದಿ ರಾಜಕುಮಾರ ತಂದೆ ಚಂದರ ಜಾಧವ ವಯ: 26 ವರ್ಷ, ಜಾತಿ: ಲಮಾಣಿ, ಸಾ; ಖಿಂಡಿತಾಂಡಾ, ತಾ: ಕಾಳಗಿ, ಜಿ: ಕಲಬುರ್ಗಿ ರವರ ತಂದೆಯಾದ ಚಂದರ ತಂದೆ ಪ್ರೇಮಸಿಂಗ್ ಜಾಧವ ವಯ: 46 ವರ್ಷ ರವರು ಖಾಸಗಿ ಕೆಲಸ ಕುರಿತು ಬಸವಕಲ್ಯಾಣಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಮನೆಯಿಂದ ತನ್ನ ಮೋಟಾರ ಸೈಕಲ ನಂ. ಕೆಎ-32/ಇ.ಆರ್-2320 ನೇದರ ಮೇಲೆ ಹೋಗುವಾಗ ಅತಲಾಪೂರ ಕ್ರಾಸ್ ಹತ್ತಿರವಿರುವ ರಿಲಾಯನ್ಸ್ ಪೆಟ್ರೊಲ್ ಬಂಕ್ ಪಕ್ಕದಲ್ಲಿರುವ ಕಚ್ಚಾ ರೋಡಿನ ಕಡೆಯಿಂದ ಚಲಾಯಿಸಿಕೊಂಡು ರಾ.ಹೆದ್ದಾರಿ ನಂ. 65 ರೋಡಿಗೆ ಬಂದು ಬಂಗ್ಲಾ ಕಡೆಗೆ ಹೋಗಲು ತನ್ನ ಮೋಟರ ಸೈಕಲನ ಎಡಭಾಗದ ಇಂಡಿಕೇಟರ್ ಹಾಕಿ ಎಡಕ್ಕೆ ತಿರುಗಿಸಿಕೊಳ್ಳುತ್ತಿರುವಾಗ ಉಮರ್ಗಾ ಕಡೆಯಿಂದ ಲಾರಿ ನಂ. ಎಮ್.ಹೆಚ್-25/ಬಿ-9182 ನೇದರ ಚಾಲಕನಾದ ಆರೋಪಿ ಯಾಸೀನ್ ತಂದೆ ಅಲ್ಲಾಭಕ್ಷ ಚಿಂಚೋಳಿವಾಲೆ ಸಾ: ಕಪ್ಪರಗಾಂವ ಇತನು ತನ್ನ ಲಾರಿಯನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಅವರ ಮೋಟರ ಸೈಕಲಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ತಂದೆಯವರು ಮೋಟಾರ ಸೈಕಲ ಸಮೇತ ರೋಡಿನ ಮೇಲೆ ಬಿದ್ದಾಗ ಲಾರಿಯ ಎಡಭಾಗದ ಹಿಂದಿನ ಟೈರ ಅವರ ತಲೆಯ ಮೇಲಿಂದ ಹಾದು ಹೋಗಿದ್ದರಿಂದ ತಲೆಗೆ ಭಾರಿ ರಕ್ತಗಾಯವಾಗಿ ಸಂಪೂರ್ಣ ತಲೆ ಒಡೆದು ಚಿದಿಯಾಗಿರುತ್ತದೆ ಮತ್ತು ಎಡಗೈ ಮುಂಗೈಗೆ ಭಾರಿ ರಕ್ತಗಾಯ, ಬಲಗೈ ಮೊಳಕೈಗೆ ಭಾರಿ ರಕ್ತಗಾಯ ಮತ್ತು ರಟ್ಟೆಗೆ ತರಚಿದ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 40/2021, ಕಲಂ. 379 ಐಪಿಸಿ :-

ದಿನಾಂಕ  26-03-2021 ರಂದು 0915 ಗಂಟೆಯಿಂದ 2100 ಗಂಟೆಯ ಅವಧಿಯಲ್ಲಿ ದೇವಿ ಕಾಲೋನಿಯಲ್ಲಿರುವ ಭವಾನಿ ದೇವಿ ಮಂದಿರದ ಹತ್ತಿರ ಫಿರ್ಯಾದಿ ಪ್ರಕಾಶ ತಂದೆ ಶರಣಪ್ಪ ಶಿಂದೆ ಸಾ: ಚನ್ನಬಸವೇಶ್ವರ ನಗರ ಕುಂಬಾರವಾಡಾ ರೋಡ ಬೀದರ ರವರು ನಿಲ್ಲಿಸಿದನ್ನ ಹೀರೊ ಹೊಂಡಾ ಸ್ಪ್ಲೆಂಡರ ಮೊಟರ ಸೈಕಲ ನಂ. KA-38/H-8607,  ಚಾಸಿಸ್ ನಂ. 03H20C02201, ಇಂಜಿನ್ ನಂ. 03H18M11932, ಮಾಡಲ್: 2003, ಬಣ್ಣ: ಕಪ್ಪು ಬಣ್ಣ ಹಾಗೂ ಅ.ಕಿ 15,000/- ರೂ. ನೇದನ್ನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 12-04-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Monday, April 12, 2021

BIDAR DISTRICT DAILY CRIME UPDATE 12-04-2021

 ದಿನಂಪ್ರತಿ ಅಪರಾಧಗಳ ಮಾಹಿತ ದಿನಾಂಕ 12-04-2021

 

ನೂತನ ನಗರ ಪೊಲೀಸ್ ಠಾಣೆ, ಬೀದರ ಯು.ಡಿ.ಆರ್ ಸಂ. 09/2021, ಕಲಂ. 174 ಸಿ.ಆರ್.ಪಿ.ಸಿ :-

ಫಿರ್ಯಾದಿ ಸುರೇಖಾ ಗಂಡ ಮಲ್ಲಿಕಾರ್ಜುನ ವಯ: 45 ವರ್ಷ, ಸಾ: ಅಷ್ಟೂರ ಗ್ರಾಮ, ತಾ: & ಜಿ: ಬೀದರ, ಸದ್ಯ:  ಅಬ್ದುಲ ಫೈಜ್ ದರ್ಗಾ ಪೊಲೀಸ ವಸತಿ ಗೃಹ ಬೀದರ ರವರ ಗಂಡನಾದ ಮಲಿ್ಲಕಾರ್ಜುನ ತಂದೆ ಪ್ರಭಣ್ಣಾ ವಯ: 54 ವರ್ಷ, ಜಾತಿ: ಕುರುಬ, : ಮುಖ್ಯ ಪೊಲೀಸ ಪೇದೆ ಡಿಎಆರ್ ಬೀದರ ರವರು ದಿನಾಂಕ 11-04-2021 ರಂದು 1200 ಗಂಟೆಯ ಸುಮಾರಿಗೆ ಬೀದರ ಪ್ರತಾಪನಗರ ರೋಡ ಆರ.ಟಿ.. ಕಛೇರಿ ಎದುರಿಗೆ ತಮ್ಮ ಕಾರಿನಿಂದ ಇಳಿಯುವಾಗ ಆಕಸ್ಮಿಕವಾಗಿ ಚಕ್ಕರ ಬಂದು ಒಮ್ಮೇಲೆ ನೆಲದ ಮೇಲೆ ಬಿದ್ದು, ಹೃದಯಘಾತವಾಗಿ ಮೃತ್ತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 21/2021, ಕಲಂ. 457, 380 ಐಪಿಸಿ :-

ಯಾರೋ ಅಪರಿಚಿತ ಕಳ್ಳರು ದಿನಾಂಕ 03, 04-04-2021  ರ ರಾತ್ರಿ ವೇಳೆಯಲ್ಲಿ ಫಿರ್ಯಾದಿ ಮೀನಾಜ ತಂದೆ ಸೈಯದ ದಸ್ತಗಿರ ಚಿಮಕೋಡವಾಲೆ ವಯ: 28 ವರ್ಷ, ಜಾತಿ: ಮುಸ್ಲಿಂ, ಸಾ: ಹಮೀಲಾಪೂರ, ತಾ: & ಜಿ: ಬೀದರ ರವರ ಬಿರ್ಯಾನಿ ಹೋಟಲ ಬಾಗಿಲಿನ ಬೀಗ ಮುರಿದು ಹೋಟಲದಲ್ಲಿ ಹೋಗಿ ಕೌಂಟರದಲ್ಲಿದ್ದ ನಗದು ಹಣ 10,000/- ರೂ. ನೇದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 11-04-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ನಗರ ಪೊಲೀಸ ಠಾಣೆ ಅಪರಾಧ ಸಂ. 29/2021, ಕಲಂ. 279, 337, 338 ಐಪಿಸಿ :-

ದಿನಾಂಕ 11-04-2021 ರಂದು ಫಿರ್ಯಾದಿ ಅರುಣಕುಮಾರ ತಂದೆ ಸಿದ್ರಾಮ ವಯ: 14 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಅಷ್ಟೂರ ಗ್ರಾಮ ರವರು ತನ್ನ ದೋಡ್ಡಪನ ಮಗನಾದ ಕಾಳಿದಾಸ ಇಬ್ಬರು ಮೋಟಾರ ಸೈಕಲ್ ನಂ ಕೆಎ-38/ಎಸ್-9700 ನೇದರ ಮೇಲೆ ತಾಜಲಾಪೂರ ಮಾರ್ಗವಾಗಿ ಬೀದರಗೆ ಬರುವಾಗ ತಾಜಲಾಪೂರ ಗ್ರಾಮದಲ್ಲಿ ಚಡಾವಿಗೆ ಹೋಗುವಾಗ ಅಣ್ಣ ಆರೋಪಿ ನಂ. 1 ಕಾಳಿದಾಸ ತಂದೆ ಮಾಣಿಕಪ್ಪಾ ಸಾ: ಅಷ್ಟೂರ ಗ್ರಾಮ ಇತನು ಮೋಟಾರ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಓಡಿಕೊಂಡು ಹೋಗುತ್ತಿರುವಾಗ ಬೀದರ ಕಡೆಯಿಂದ ಮೋಟಾರ ಸೈಕಲ್ ನಂ ಕೆಎ-38/ಎಕ್ಸ್- 5146 ನೇದರ ಚಾಲಕನಾದ ಆರೋಪಿ ನಂ. 2 ಎಂ.ಡಿ ಸಮೀರ ತಂದೆ ಎಂ.ಡಿ ನಸೀರ ವಯ: 19 ವರ್ಷ, ಸಾ: ಗೋಲೆಖಾನಾ ಬೀದರ ಇತನು ತನ್ನ ಮೋಟಾರ ಸೈಕಲ ಮೇಲೆ ಶಾದಾಬ ತಂದೆ ಅಬ್ದುಲ್ ಕರೀಮ್ ಸಾ: ಗೋಲೆಖಾನಾ ಬೀದರ ಇತನಿಗೆ ಹಿಂದುಗಡೆ ಕೂಡಿಸಿಕೊಂಡು ತನ್ನ ವಾಹನವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಓಡಿಸಿಕೊಂಡು ಬಂದು ಮುಖಾಮುಖಿ ಡಿಕ್ಕಿಯಾಗಿರುತ್ತದೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ಬಲಗಡೆ ತಲೆಯಲ್ಲಿ ರಕ್ತಗಾಯ, ಬಲಗಡೆ ಬುಜದ ಮೇಲೆ, ಕುತ್ತಿಗೆಯ ಮೇಲೆ ತರಚಿದ ಗಾಯ ಹಾಗೂ ಬಲಗಾಲ ತೋಡೆಯ ಮೆಲೆ ಗುಪ್ತಗಾಯವಾಗಿರುತ್ತದೆ, ಅಣ್ಣನಿಗೆ ಯಾವುದೆ ಗಾಯ ಆಗಿರುವುದಿಲ್ಲಾ, ಆರೋಒಪಿ ಎಂ.ಡಿ ಸಮೀರ ಇತನಿಗೆ ಬಲಗಡೆ ಮುಖದ ಮೇಲೆ ತರಚಿದ ಗಾಯ, ಬಲಗಡೆ ಮೋಳಕಾಲ ಮೇಲೆ ಗುಪ್ತಗಾಯವಾಗಿ ಬಾವು ಬಂದಿದ್ದು, ಬಲಗಾಲ ಮೋಳಕಾಲ ಕೆಳಗಡೆ ತರಚಿದ ಗಾಯ, ಬಲಗಾಲ ಕಿರುಬೇರಳಿಗೆ ಹಾಗೂ ನಡು ಬೇರಳಿಗೆ ರಕ್ತಗಾಯವಾಗಿರುತ್ತದೆ, ಎಂ.ಡಿ ಸಮೀರ ಇತನು ತನ್ನ ವಾಹನದ ಹಿಂದುಗಡೆ ಕುಳಿತ ಶಾದಾಬ ಇತನಿಗೆ ಯಾವುದೆ ಗಾಯ ಆಗಿರುವುದಿಲ್ಲಾ, ನಂತರ ಅಲ್ಲಿಯ ಜನರು 108 ಗೆ ಕರೆ ಮಾಡಿ ಗಾಯಗೊಂಡವರಿಗೆ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂ. 27/2021, ಕಲಂ. 87 ಕೆ.ಪಿ ಕಾಯ್ದೆ :-

ದಿನಾಂಕ 11-04-2021 ರಂದು ಮರಖಲ ಗ್ರಾಮ ಶಿವಾರದ ಸಾಯಿ ಬಾಬಾ ಮಂದಿರದ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಅಂದರ-ಬಾಹರ ಇಸ್ಪಿಟ್ ಜೂಜಾಟ ಆಡುತ್ತಿದ್ದಾರೆ ಅಂತ ರವಿಕುಮಾರ ಪೊಲೀಸ್ ಉಪ ನಿರೀಕ್ಷಕರು ಜನವಾಡಾ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡ, ಠಾಣೆಯ ಸಿಬ್ಬಂದಿವಯರೊಡನೆ ಮರಖಲ-ಬೀದರ ರೋಡಿನ ಮರಖಲ ಗ್ರಾಮದ ಸಾಯಿ ಬಾಬಾ ಮಂದಿರದ ಹಿಂದುಗಡೆ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಆರೋಪಿತರಾದ 1) ನೀಲಕಂಟ ತಂದೆ ಅಡೆಪ್ಪ ಭುಯ್ಯ 2) ರಮೇಶ ತಂದೆ ಸೈದಪ್ಪ ಕನ್ಹೇರಿ, 3) ಶಂಕರ ತಂದೆ ಕಾಮಶೆಟ್ಟಿ ಝಿಳ್ಳೆ, 4) ಶಿವಕುಮಾರ ತಂದೆ ಲಕ್ಷ್ಮಣ ಪಾರಾ, 5) ಕಾಮಶೆಟ್ಟಿ ತಂದೆ ಮಾಣಿಕಪ್ಪ ಹಾಗೂ 6) ಸಂಗಪ್ಪ ಎಲ್ಲರೂ ಸಾ: ಮರಖಲ ಗ್ರಾಮ ಇವರೆಲ್ಲರೂ ದುಂಡಾಗಿ ಕಳಿತು ಹಣ ಹಚ್ಚಿ ಪಣ ತೊಟ್ಟು ಅಂದರ ಬಾಹರ ಎಂಬ ನಸೀಬಿನ ಇಸ್ಪಿಟ್ ಜೂಜಾಟ ಆಡುತ್ತಿರುವಾಗ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿಯುವಷ್ಟರಲ್ಲಿ ಆರೋಪಿ ನಂ. 3 ರಿಂದ 6 ನಾಲ್ಕು ಜನರು ಓಡಿ ಹೋಗಿರುತ್ತಾರೆ, ಉಳಿದ ಇಬ್ಬರಿಗೆ ಹಿಡಿದು ಅವರಿಂದ ನಗದು ಹಣ 2680/- ರೂ. ಹಾಗೂ ಒಟ್ಟು 52 ಇಸ್ಪಿಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

BIDAR DISTRICT DAILY CRIME UPDATE 11-04-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 11-04-2021

 

ಹಳ್ಳಿಖೇಡ (ಬಿ) ಪೊಲೀಸ ಠಾಣೆ ಯು.ಡಿ.ಆರ್ ಸಂ. 04/2021, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 10-04-2021 ರಂದು 1600 ಗಂಟೆ ಸುಮಾರಿಗೆ ಫಿರ್ಯಾದಿ ಜರೀನಾ ಗಂಡ ನಸಿರೋದ್ದಿನ ಮರಪಳ್ಳಿ ವಯ: 45 ವರ್ಷ, ಜಾತಿ: ಮುಸ್ಲಿಂ, ಸಾ: ಡಾಕುಳಗಿ ರವರು ತನ್ನ ಗಂಡ ನಸಿರೋದ್ದಿನ ಮರಪಳ್ಳಿ ಇಬ್ಬರು ತಮ್ಮ ಹೊಲದಲ್ಲಿ ಕಳಕಿ ಭಣಮಿ ಟ್ಟುವಾಗ ಫಿರ್ಯಾದಿಯ ಗಂಡನಿಗೆ ಯಾವುದೋ ಒಂದು ವಿಷಪುರಿತ ಹಾವು ಬಲಗಾಲ ಪಾದಕ್ಕೆ ಕಚ್ಚಿದ ಪ್ರಯುಕ್ತ ಅವರಿಗೆ ಚಿಕಿತ್ಸೆ ಕುರಿತು ಒಂದು ಖಾಸಗಿ ವಾಹನಲ್ಲಿ ಹಾಕಿಕೊಂಡು ಹಳ್ಳಿಖೇಡ(ಬಿ) ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡುವಷ್ಟರಲ್ಲಿ 1730 ಗಂಟೆ ಸುಮಾರಿಗೆ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ಪರಿಶೀಲಿಸಿ ನಸಿರೋದ್ದಿನ ರವರು ಮೃತಪಟ್ಟಿರುತ್ತಾರೆಂದು ತಿಳಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮುಡಬಿ ಪೊಲೀಸ್ ಠಾಣೆ ಅಪರಾಧ ಸಂ. 26/2021, ಕಲಂ. 279, 304(ಎ) ಐಪಿಸಿ :-

ದಿನಾಂಕ 10-04-2021 ರಂದು ಫಿರ್ಯಾದಿ ಶಾಂತಾಬಾಯಿ ಗಂಡ ವೆಂಕಟ ಚವ್ಹಾಣ ಸಾ: ಹನುಮಾನ ನಗರ ತಾಂಡಾ ರವರ ಗಂಡನಾದ ವೆಂಕಟ ತಂದೆ ಕಿಶನ ಚವ್ಹಾಣ ಸಾ: ಹನುಮಾನ ನಗರ ತಾಂಡಾ ಇವರು ಕೂಲಿ ಕೆಲಸಕ್ಕಾಗಿ ಕಮಲಾಪೂರಕ್ಕೆ ಹೋಗಿ ಬರುವುದಾಗಿ ಹೇಳಿ ತನ್ನ ಮೋಟಾರ ಸೈಕಲ ನಂ. ಕೆ.ಎ-32/ಈವ್ಹಿ-5311 ನೇದನ್ನು ಚಲಾಯಿಸಿಕೊಂಡು ಹೋಗಿ ಚಿಕ್ಕನಾಗಾಂವ ಶಿವಾರದ ಚಿಕ್ಕನಾಗಾಂವ ಕಲ್ಲಖೋರಾ ಮದ್ಯ ಇಳಿಜಾರಿನಲ್ಲಿ ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ರೋಡಿನಿಂದ ಕೆಳಗೆ ಖಡ್ಡಾದಲ್ಲಿ ಬಿದ್ದ ಪ್ರಯುಕ್ತ ಅವರಿಗೆ ತಲೆಗೆ ರಕ್ತಗಾಯವಾಗಿ ಬಾಯಿಯಿಂದ, ಮೂಗಿನಿಂದ ಹಾಗೂ ಕಿವಿಯಿಂದ ರಕ್ತ ಬಂದಿದ್ದು, ಅಲ್ಲಲ್ಲಿ ಕೈಗಳಿಗೆ ತರಚಿದ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.