Police Bhavan Kalaburagi

Police Bhavan Kalaburagi

Wednesday, April 14, 2021

BIDAR DISTRICT DAILY CRIME UPDATE 14-04-2021


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 14-04-2021.

 

ಮಾರ್ಕೇಟ  ಪೊಲೀಸ್ ಠಾಣೆ ಯು.ಡಿ.ಆರ್. ಸಂಖ್ಯೆ 4/2021 ಕಲಂ 174(ಸಿ) ಸಿಆರ್.ಪಿ.ಸಿ :-

ದಿನಾಂಕ: 12/4/2021 ರಂದು 0900 ಗಂಟೆಯಿಂದ 1000 ಗಂಟೆಯ ಅವಧಿಯಲ್ಲಿ ರೇಲ್ವೇ ಸ್ಟೇಷನ್ ಹತ್ತಿರ ಯಾವುದೋ ರೋಗದಿಂದ ಬಳಲುತ್ತಾ ಮಲಗಿದ ವ್ಯಕ್ತಿ ಸ್ಥಳದಲ್ಲಿಯೇ  ಮೃತಪಟ್ಟಿರುತ್ತಾನೆ ಮೃತನ ಹೆಸರು ಪ್ರಕಾಶ, ಅಂದಾಜು 55 ವರ್ಷದ ಗಂಡು ವ್ಯಕ್ತಿ  ಬೀದರ ಇವನ ಮರಣದ ಬಗ್ಗೆ ನನಗೆ ಯಾರ ಮೇಲೆ ಯಾವುದೇ ಸಂಶಯ ಇರುವದಿಲ್ಲಾ ಅಂತಾ ಫಿರ್ಯಾದಿ ಶ್ರೀ. ತಾಜೊದ್ದಿನ್ ತಂದೆ ಸೈಯದ ಖಾಜಾಮಿಯ್ಯಾ ಸಾ: ಚಿಂತಲಗೆರಾ ರವರು ನೀಡಿದ ಫಿರ್ಯಾದಿ ಮೆರೆಗೆ ಪ್ರಕರಣ ದಾಖಲಿಸಿಕೊಂಡು  ತನಿಖೆ ಕೈಕೊಂಡಿದ್ದು ಇರುತ್ತದೆ.

 

ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 40/2021 ಕಲಂ 379 ಐಪಿಸಿ :-

 

ದಿನಾಂಕ 12/04/2021  ರಂದು 1945  ಗಂಟೆಗೆ ಫಿರ್ಯಾದಿ   ಶ್ರೀ. ಪ್ರಕಾಶ ತಂದೆ ಶರಣಪ್ಪ ಶಿಂಧೆ ವಯ:46 ವರ್ಷ  ಉ:ಎಫ್.ಡಿ.ಸಿ. ಸಾ/ಚೆನ್ನಬಸವ ನಗರ ಕುಂಬಾರವಾಡಾ ರೋಡ ಬೀದರ  ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ ಫಿರ್ಯಾದಿಯ ಒಂದು  ಹೀರೊ ಹೊಂಡಾ ಸ್ಪ್ಲೆಂಡರ ಮೊಟರ  ಸೈಕಲ  ನಂ ಕೆಎ38ಎಚ್8607  ನೇದನ್ನು  2003 ನೇ ಸಾಲಿನಲ್ಲಿ  ಖರಿದಿಸಿದ್ದು ಇರುತ್ತದೆ.   ಪ್ರತಿದಿನದಂತೆ ದಿನಾಂಕ 26/03/2021 ರಂದು ಮುಂಜಾನೆ 9:15 ಗಂಟೆಗೆ  ದೇವಿ ಕಾಲೋನಿಯಲ್ಲಿರುವ ಭವಾನಿ ದೇವಿ ಮಂದಿರದ ಪಕ್ಕದಲ್ಲಿ  ಮೊಟಾರ ಸೈಕಲನ್ನು  ನಿಲ್ಲಿಸಿ,   ಕೆಲಸಕ್ಕಾಗಿ ಹುಮನಾಬಾದ ನ್ಯಾಯಾಲಯಕ್ಕೆ ಹೋಗಿದ್ದು ಇರುತ್ತದೆ.  ಸಾಯಂಕಾಲ 9:00 ಪಿ.ಎಮ್.  ಗಂಟೆಗೆ  ಮರಳಿ ಬಂದು ನೋಡಿದಾಗ    ಮೊಟರ ಸೈಕಲ ನಾನು ಇಟ್ಟಿದ್ದ ಜಾಗದಲ್ಲಿ ಇದ್ದಿರುವದಿಲ್ಲ. ಮೊಟರ ಸೈಕಲ ಕಳುವಾದ ಬಗ್ಗೆ ನಮ್ಮ  ಶಿವರಾಜ ಸಾ/ಮಂಗಲಪೇಟ ಬೀದರ ಹಾಗು ದಿಲಿಪ ಸಾ/ಗೊರನಳ್ಳಿ    ಇವರಿಗೆ   ತಿಳಿಸಿದೆನು.   ನಾನು ಮತ್ತು ಅವರು ಕೂಡಿಕೊಂಡು ನಮ್ಮ  ಕಳುವಾದ ಮೊಟರ ಸೈಕಲನ್ನು ಎಲ್ಲಾ ಕಡೆಗೆ ಹುಡುಕಾಡಿದೆವು ಎಲ್ಲಿಯೂ ಪತ್ತೆ ಯಾಗಿರುವದಿಲ್ಲ.    ನಾನು   ಕಳುವಾದ ಮೊಟರ ಸೈಕಲನ್ನು ಎಲ್ಲಾ ಕಡೆಗೆ ಹುಡುಕಾಡಿ ಸಿಗದಿದ್ದಾಗ ಠಾಣೆಗೆ ಬಂದು ದೂರು ನೀಡಲು ತಡವಾಗಿರುತ್ತದೆ.  ಕಳ್ಳತನವಾದ ಮೋಟಾರ್ ಸೈಕಲ್ ವಿವರ ಹೀರೊ ಹೊಂಡಾ ಸ್ಪ್ಲೆಂಡರ ಮೊಟರ  ಸೈಕಲ  ನಂ ಕೆಎ38ಎಚ್8607   ಚಾ.ನಂ. 03ಎಚ್20ಸಿ02201  ಇಂ. ನಂ. 03ಎಚ್18ಎಮ್11932  ಮಾಡಲ್: 2003,  ಬಣ್ಣ:  ಕಪ್ಪು ಬಣ್ಣ  ಇದ್ದು ಅಂದಾಜು ಕಿಮ್ಮತ್ತು ರೂ- 15,000/-ರೂ ಆಗಿರುತ್ತದೆ ಕಾರಣ  ದಿನಾಂಕ  26/03/2021 ರಂದು ಮುಂಜಾನೆ 9:15 ಎಎಮ್.  ಗಂಟೆಯಿಂದ 9:00 ಪಿ.ಎಮ. ಗಂಟೆಯ ಅವಧಿಯಲಿ  ದೇವಿ ಕಾಲೋನಿಯಲ್ಲಿ ಇರುವ ಭವಾನಿದೇವಿ ಮಂದಿರದ ಹತ್ತೀರ  ನಿಲ್ಲಿಸಿದ     ಹೀರೊ ಹೊಂಡಾ ಸ್ಪ್ಲೆಂಡರ ಮೊಟರ  ಸೈಕಲ  ನಂ ಕೆಎ38ಎಚ್8607  ನೇದನ್ನು ಕಳ್ಳತನ ಮಾಡಿಕೊಂಡು  ಹೋಗಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

ಬಸವ ಕಲ್ಯಾಣ  ಸಂಚಾರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 35/2021 ಕಲಂ 279, 304 (ಎ) ಐಪಿಸಿ :-

ದಿನಾಂಕ 12/04/2021 ರಂದು ಮಧ್ಯಾಹ್ನ 1445 ಗಂಟೆಗೆ ಫಿರ್ಯಾದಿ ಶ್ರೀ ರಾಜಕುಮಾರ ತಂದೆ ಚಂದರ ಜಾಧವ ವಯ: 26 ವರ್ಷ, ಜಾತಿ,: ಲಮಾಣಿ, ಉ: ವಿದ್ಯಾರ್ಥಿ, ಸಾ; ಖಿಂಡಿತಾಂಡಾ ತಾ; ಕಾಳಗಿ, ಜಿ: ಕಲಬುರ್ಗಿ ಈತನ ಹೇಳಿಕೆಯನ್ನು ಪಡೆದುಕೊಂಡು ಅದರ ಸಾರಾಂಶವೆನೆಂದರೆ, ಇವರ ತಂದೆಯಾದ ಚಂದರ ತಂದೆ ಪ್ರೇಮಸಿಂಗ್ ಜಾಧವ ವಯ: 46 ವರ್ಷ, ರವರು ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ. ಹಿಗಿರುವಾಗ ದಿನಾಂಕ 12/04/2021 ರಂದು 07:00 ಎ.ಎಮ್ ಗಂಟೆಗೆ  ತಂದೆಯಾದ  ಚಂದರ ರವರು ಖಾಸಗಿ ಕೆಲಸ ಕುರಿತು ಬಸವಕಲ್ಯಾಣಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಮನೆಯಿಂದ ತನ್ನ ಮೋಟಾರ ಸೈಕಲ ನಂ ಕೆಎ32ಇಆರ್2320 ನೇದರ ಮೇಲೆ ಹೋಗಿರುತ್ತಾರೆ.   ರಾ.ಹೇ.ನಂ-65 ರೋಡಿನ ಮೇಲೆ ಅತಲಾಪುರ ಕ್ರಾಸ್ ಹತ್ತಿರ ರಸ್ತೆ ಅಪಘಾತವಾಗಿ  ತೆಲೆಗೆ ಭಾರಿ ರಕ್ತಗಾಯವಾಗಿ ಸಂಪೂರ್ಣ ತಲೆ ಒಡೆದು ಚಿದಿಯಾಗಿರುತ್ತದೆ ಮತ್ತು ಎಡಗೈ ಮುಂಗೈಗೆ ಭಾರಿ ರಕ್ತಗಾಯ ಮತ್ತು ಬಲಗೈ ಮೊಳಕೈ, ರಟ್ಟೆಗೆ ಭಾರಿ ರಕ್ತಗಾಯ ಮತ್ತು ತರಚಿದ ರಕ್ತಗಾಯವಾಗಿ ಮೃತಟ್ಟಿದ್ದರು. ನಂತರ  ಅಲ್ಲಿಯೇ ಹಾಜರಿದ್ದ ನಮ್ಮೂರ ಅಜಯ ಈತನಿಗೆ ವಿಚಾರಿಸಲು ತಿಳಿಸಿದ್ದೆನಂದರೆ, ನಿಮ್ಮ ತಂದೆಯವರಾದ ಚಂದರ ರವರು ತನ್ನ ಮೋಟರ ಸೈಕಲ ನಂ ಕೆಎ32ಇಆರ್2320 ನೇದ್ದನ್ನು ಅತಲಾಪೂರ ಕ್ರಾಸ್ ಹತ್ತಿರವಿರುವ ರಿಲಾಯನ್ಸ್ ಪೆಟ್ರೊಲ್ ಬಂಕ್ ಪಕ್ಕದಲ್ಲಿರುವ ಕಚ್ಚಾ ರೋಡಿನ ಕಡೆಯಿಂದ ಚಲಾಯಿಸಿಕೊಂಡು ರಾ.ಹೇ.ನಂ-65 ರೋಡಿಗೆ ಬಂದು ಬಂಗ್ಲಾ ಕಡೆಗೆ ಹೋಗಲು ತನ್ನ ಮೋಟರ ಸೈಕಲನ ಎಡಭಾಗದ ಇಂಡಿಕೇಟರ್ ಹಾಕಿ ಎಡಕ್ಕೆ ತಿರುಗಿಸಿಕೊಳ್ಳುತ್ತಿರುವಾಗ ಸಮಯ 02:15 ಪಿ.ಎಮ್. ಗಂಟೆಗೆ ಉಮರ್ಗಾ ಕಡೆಯಿಂದ ಒಂದು ಲಾರಿ ಚಾಲಕನು ತನ್ನ ಲಾರಿಯನ್ನು ಅತೀ ವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು   ಮೋಟರ ಸೈಕಲಗೆ ಡಿಕ್ಕಿ ಮಾಡಿರುತ್ತಾನೆ.  ಪರಿಣಾಮ ಭಾರಿ ರಕ್ತಗಾಯ ಮತ್ತು ರಟ್ಟೆಗೆ ತರಚಿದ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ.  ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 


Tuesday, April 13, 2021

BIDAR DISTRICT DAILY CRIME UPDATE 13-04-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 13-04-2021

 

ಮಾರ್ಕೆಟ ಪೊಲೀಸ ಠಾಣೆ ಬೀದರ ಯು.ಡಿ.ಆರ್ ಸಂ. 04/2021, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 12-04-2021 ರಂದು 0900 ಗಂಟೆಯಿಂದ 1000 ಗಂಟೆಯ ಅವಧಿಯಲ್ಲಿ ಪ್ರಕಾಶ, ಅಂದಾಜು 55 ವರ್ಷದ ಗಂಡು ವ್ಯಕ್ತಿ ಸಾ: ರೇಲ್ವೇ ಸ್ಟೇಷನ್ ಹತ್ತಿರ ಬೀದರ ಇತನು ಯಾವುದೋ ರೋಗದಿಂದ ಬಳಲುತ್ತಾ ಮಲಗಿದ ಸ್ಥಳದಲ್ಲಿಯೇ ಮ್ರತಪಟ್ಟಿರುತ್ತಾನೆ, ಸದರಿಯವನ ಮರಣದ ಬಗ್ಗೆ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲಾ ಅಂತ ಫಿರ್ಯಾದಿ ತಾಜೋದ್ದಿನ ತಂದೆ ಸೈಯದ ಖಾಜಾಮಿಜ್ಯಾ ಸಾ: ಚಿಂತಲಗೇರಾ, ತಾ: & ಜಿ: ಬೀದರ ರವರು ನೀಡಿದ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಸಂಚಾರ ಪೊಲೀಸ್ ಅಪರಾಧ ಸಂ. 35/2021, ಕಲಂ. 279, 304(ಎ) ಐಪಿಸಿ :-

ದಿನಾಂಕ 12-04-2021 ರಂದು ಫಿರ್ಯಾದಿ ರಾಜಕುಮಾರ ತಂದೆ ಚಂದರ ಜಾಧವ ವಯ: 26 ವರ್ಷ, ಜಾತಿ: ಲಮಾಣಿ, ಸಾ; ಖಿಂಡಿತಾಂಡಾ, ತಾ: ಕಾಳಗಿ, ಜಿ: ಕಲಬುರ್ಗಿ ರವರ ತಂದೆಯಾದ ಚಂದರ ತಂದೆ ಪ್ರೇಮಸಿಂಗ್ ಜಾಧವ ವಯ: 46 ವರ್ಷ ರವರು ಖಾಸಗಿ ಕೆಲಸ ಕುರಿತು ಬಸವಕಲ್ಯಾಣಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಮನೆಯಿಂದ ತನ್ನ ಮೋಟಾರ ಸೈಕಲ ನಂ. ಕೆಎ-32/ಇ.ಆರ್-2320 ನೇದರ ಮೇಲೆ ಹೋಗುವಾಗ ಅತಲಾಪೂರ ಕ್ರಾಸ್ ಹತ್ತಿರವಿರುವ ರಿಲಾಯನ್ಸ್ ಪೆಟ್ರೊಲ್ ಬಂಕ್ ಪಕ್ಕದಲ್ಲಿರುವ ಕಚ್ಚಾ ರೋಡಿನ ಕಡೆಯಿಂದ ಚಲಾಯಿಸಿಕೊಂಡು ರಾ.ಹೆದ್ದಾರಿ ನಂ. 65 ರೋಡಿಗೆ ಬಂದು ಬಂಗ್ಲಾ ಕಡೆಗೆ ಹೋಗಲು ತನ್ನ ಮೋಟರ ಸೈಕಲನ ಎಡಭಾಗದ ಇಂಡಿಕೇಟರ್ ಹಾಕಿ ಎಡಕ್ಕೆ ತಿರುಗಿಸಿಕೊಳ್ಳುತ್ತಿರುವಾಗ ಉಮರ್ಗಾ ಕಡೆಯಿಂದ ಲಾರಿ ನಂ. ಎಮ್.ಹೆಚ್-25/ಬಿ-9182 ನೇದರ ಚಾಲಕನಾದ ಆರೋಪಿ ಯಾಸೀನ್ ತಂದೆ ಅಲ್ಲಾಭಕ್ಷ ಚಿಂಚೋಳಿವಾಲೆ ಸಾ: ಕಪ್ಪರಗಾಂವ ಇತನು ತನ್ನ ಲಾರಿಯನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಅವರ ಮೋಟರ ಸೈಕಲಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ತಂದೆಯವರು ಮೋಟಾರ ಸೈಕಲ ಸಮೇತ ರೋಡಿನ ಮೇಲೆ ಬಿದ್ದಾಗ ಲಾರಿಯ ಎಡಭಾಗದ ಹಿಂದಿನ ಟೈರ ಅವರ ತಲೆಯ ಮೇಲಿಂದ ಹಾದು ಹೋಗಿದ್ದರಿಂದ ತಲೆಗೆ ಭಾರಿ ರಕ್ತಗಾಯವಾಗಿ ಸಂಪೂರ್ಣ ತಲೆ ಒಡೆದು ಚಿದಿಯಾಗಿರುತ್ತದೆ ಮತ್ತು ಎಡಗೈ ಮುಂಗೈಗೆ ಭಾರಿ ರಕ್ತಗಾಯ, ಬಲಗೈ ಮೊಳಕೈಗೆ ಭಾರಿ ರಕ್ತಗಾಯ ಮತ್ತು ರಟ್ಟೆಗೆ ತರಚಿದ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 40/2021, ಕಲಂ. 379 ಐಪಿಸಿ :-

ದಿನಾಂಕ  26-03-2021 ರಂದು 0915 ಗಂಟೆಯಿಂದ 2100 ಗಂಟೆಯ ಅವಧಿಯಲ್ಲಿ ದೇವಿ ಕಾಲೋನಿಯಲ್ಲಿರುವ ಭವಾನಿ ದೇವಿ ಮಂದಿರದ ಹತ್ತಿರ ಫಿರ್ಯಾದಿ ಪ್ರಕಾಶ ತಂದೆ ಶರಣಪ್ಪ ಶಿಂದೆ ಸಾ: ಚನ್ನಬಸವೇಶ್ವರ ನಗರ ಕುಂಬಾರವಾಡಾ ರೋಡ ಬೀದರ ರವರು ನಿಲ್ಲಿಸಿದ ತನ್ನ ಹೀರೊ ಹೊಂಡಾ ಸ್ಪ್ಲೆಂಡರ ಮೊಟರ ಸೈಕಲ ನಂ. KA-38/H-8607,  ಚಾಸಿಸ್ ನಂ. 03H20C02201, ಇಂಜಿನ್ ನಂ. 03H18M11932, ಮಾಡಲ್: 2003, ಬಣ್ಣ: ಕಪ್ಪು ಬಣ್ಣ ಹಾಗೂ ಅ.ಕಿ 15,000/- ರೂ. ನೇದನ್ನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 12-04-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Monday, April 12, 2021

BIDAR DISTRICT DAILY CRIME UPDATE 12-04-2021

 ದಿನಂಪ್ರತಿ ಅಪರಾಧಗಳ ಮಾಹಿತ ದಿನಾಂಕ 12-04-2021

 

ನೂತನ ನಗರ ಪೊಲೀಸ್ ಠಾಣೆ, ಬೀದರ ಯು.ಡಿ.ಆರ್ ಸಂ. 09/2021, ಕಲಂ. 174 ಸಿ.ಆರ್.ಪಿ.ಸಿ :-

ಫಿರ್ಯಾದಿ ಸುರೇಖಾ ಗಂಡ ಮಲ್ಲಿಕಾರ್ಜುನ ವಯ: 45 ವರ್ಷ, ಸಾ: ಅಷ್ಟೂರ ಗ್ರಾಮ, ತಾ: & ಜಿ: ಬೀದರ, ಸದ್ಯ:  ಅಬ್ದುಲ ಫೈಜ್ ದರ್ಗಾ ಪೊಲೀಸ ವಸತಿ ಗೃಹ ಬೀದರ ರವರ ಗಂಡನಾದ ಮಲಿ್ಲಕಾರ್ಜುನ ತಂದೆ ಪ್ರಭಣ್ಣಾ ವಯ: 54 ವರ್ಷ, ಜಾತಿ: ಕುರುಬ, ಉ: ಮುಖ್ಯ ಪೊಲೀಸ ಪೇದೆ ಡಿಎಆರ್ ಬೀದರ ರವರು ದಿನಾಂಕ 11-04-2021 ರಂದು 1200 ಗಂಟೆಯ ಸುಮಾರಿಗೆ ಬೀದರ ಪ್ರತಾಪನಗರ ರೋಡ ಆರ.ಟಿ.ಓ. ಕಛೇರಿ ಎದುರಿಗೆ ತಮ್ಮ ಕಾರಿನಿಂದ ಇಳಿಯುವಾಗ ಆಕಸ್ಮಿಕವಾಗಿ ಚಕ್ಕರ ಬಂದು ಒಮ್ಮೇಲೆ ನೆಲದ ಮೇಲೆ ಬಿದ್ದು, ಹೃದಯಘಾತವಾಗಿ ಮೃತ್ತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 21/2021, ಕಲಂ. 457, 380 ಐಪಿಸಿ :-

ಯಾರೋ ಅಪರಿಚಿತ ಕಳ್ಳರು ದಿನಾಂಕ 03, 04-04-2021  ರ ರಾತ್ರಿ ವೇಳೆಯಲ್ಲಿ ಫಿರ್ಯಾದಿ ಮೀನಾಜ ತಂದೆ ಸೈಯದ ದಸ್ತಗಿರ ಚಿಮಕೋಡವಾಲೆ ವಯ: 28 ವರ್ಷ, ಜಾತಿ: ಮುಸ್ಲಿಂ, ಸಾ: ಹಮೀಲಾಪೂರ, ತಾ: & ಜಿ: ಬೀದರ ರವರ ಬಿರ್ಯಾನಿ ಹೋಟಲ ಬಾಗಿಲಿನ ಬೀಗ ಮುರಿದು ಹೋಟಲದಲ್ಲಿ ಹೋಗಿ ಕೌಂಟರದಲ್ಲಿದ್ದ ನಗದು ಹಣ 10,000/- ರೂ. ನೇದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 11-04-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ನಗರ ಪೊಲೀಸ ಠಾಣೆ ಅಪರಾಧ ಸಂ. 29/2021, ಕಲಂ. 279, 337, 338 ಐಪಿಸಿ :-

ದಿನಾಂಕ 11-04-2021 ರಂದು ಫಿರ್ಯಾದಿ ಅರುಣಕುಮಾರ ತಂದೆ ಸಿದ್ರಾಮ ವಯ: 14 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಅಷ್ಟೂರ ಗ್ರಾಮ ರವರು ತನ್ನ ದೋಡ್ಡಪನ ಮಗನಾದ ಕಾಳಿದಾಸ ಇಬ್ಬರು ಮೋಟಾರ ಸೈಕಲ್ ನಂ ಕೆಎ-38/ಎಸ್-9700 ನೇದರ ಮೇಲೆ ತಾಜಲಾಪೂರ ಮಾರ್ಗವಾಗಿ ಬೀದರಗೆ ಬರುವಾಗ ತಾಜಲಾಪೂರ ಗ್ರಾಮದಲ್ಲಿ ಚಡಾವಿಗೆ ಹೋಗುವಾಗ ಅಣ್ಣ ಆರೋಪಿ ನಂ. 1 ಕಾಳಿದಾಸ ತಂದೆ ಮಾಣಿಕಪ್ಪಾ ಸಾ: ಅಷ್ಟೂರ ಗ್ರಾಮ ಇತನು ಮೋಟಾರ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಓಡಿಕೊಂಡು ಹೋಗುತ್ತಿರುವಾಗ ಬೀದರ ಕಡೆಯಿಂದ ಮೋಟಾರ ಸೈಕಲ್ ನಂ ಕೆಎ-38/ಎಕ್ಸ್- 5146 ನೇದರ ಚಾಲಕನಾದ ಆರೋಪಿ ನಂ. 2 ಎಂ.ಡಿ ಸಮೀರ ತಂದೆ ಎಂ.ಡಿ ನಸೀರ ವಯ: 19 ವರ್ಷ, ಸಾ: ಗೋಲೆಖಾನಾ ಬೀದರ ಇತನು ತನ್ನ ಮೋಟಾರ ಸೈಕಲ ಮೇಲೆ ಶಾದಾಬ ತಂದೆ ಅಬ್ದುಲ್ ಕರೀಮ್ ಸಾ: ಗೋಲೆಖಾನಾ ಬೀದರ ಇತನಿಗೆ ಹಿಂದುಗಡೆ ಕೂಡಿಸಿಕೊಂಡು ತನ್ನ ವಾಹನವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಓಡಿಸಿಕೊಂಡು ಬಂದು ಮುಖಾಮುಖಿ ಡಿಕ್ಕಿಯಾಗಿರುತ್ತದೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ಬಲಗಡೆ ತಲೆಯಲ್ಲಿ ರಕ್ತಗಾಯ, ಬಲಗಡೆ ಬುಜದ ಮೇಲೆ, ಕುತ್ತಿಗೆಯ ಮೇಲೆ ತರಚಿದ ಗಾಯ ಹಾಗೂ ಬಲಗಾಲ ತೋಡೆಯ ಮೆಲೆ ಗುಪ್ತಗಾಯವಾಗಿರುತ್ತದೆ, ಅಣ್ಣನಿಗೆ ಯಾವುದೆ ಗಾಯ ಆಗಿರುವುದಿಲ್ಲಾ, ಆರೋಒಪಿ ಎಂ.ಡಿ ಸಮೀರ ಇತನಿಗೆ ಬಲಗಡೆ ಮುಖದ ಮೇಲೆ ತರಚಿದ ಗಾಯ, ಬಲಗಡೆ ಮೋಳಕಾಲ ಮೇಲೆ ಗುಪ್ತಗಾಯವಾಗಿ ಬಾವು ಬಂದಿದ್ದು, ಬಲಗಾಲ ಮೋಳಕಾಲ ಕೆಳಗಡೆ ತರಚಿದ ಗಾಯ, ಬಲಗಾಲ ಕಿರುಬೇರಳಿಗೆ ಹಾಗೂ ನಡು ಬೇರಳಿಗೆ ರಕ್ತಗಾಯವಾಗಿರುತ್ತದೆ, ಎಂ.ಡಿ ಸಮೀರ ಇತನು ತನ್ನ ವಾಹನದ ಹಿಂದುಗಡೆ ಕುಳಿತ ಶಾದಾಬ ಇತನಿಗೆ ಯಾವುದೆ ಗಾಯ ಆಗಿರುವುದಿಲ್ಲಾ, ನಂತರ ಅಲ್ಲಿಯ ಜನರು 108 ಗೆ ಕರೆ ಮಾಡಿ ಗಾಯಗೊಂಡವರಿಗೆ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂ. 27/2021, ಕಲಂ. 87 ಕೆ.ಪಿ ಕಾಯ್ದೆ :-

ದಿನಾಂಕ 11-04-2021 ರಂದು ಮರಖಲ ಗ್ರಾಮ ಶಿವಾರದ ಸಾಯಿ ಬಾಬಾ ಮಂದಿರದ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಅಂದರ-ಬಾಹರ ಇಸ್ಪಿಟ್ ಜೂಜಾಟ ಆಡುತ್ತಿದ್ದಾರೆ ಅಂತ ರವಿಕುಮಾರ ಪೊಲೀಸ್ ಉಪ ನಿರೀಕ್ಷಕರು ಜನವಾಡಾ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡ, ಠಾಣೆಯ ಸಿಬ್ಬಂದಿವಯರೊಡನೆ ಮರಖಲ-ಬೀದರ ರೋಡಿನ ಮರಖಲ ಗ್ರಾಮದ ಸಾಯಿ ಬಾಬಾ ಮಂದಿರದ ಹಿಂದುಗಡೆ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಆರೋಪಿತರಾದ 1) ನೀಲಕಂಟ ತಂದೆ ಅಡೆಪ್ಪ ಭುಯ್ಯ 2) ರಮೇಶ ತಂದೆ ಸೈದಪ್ಪ ಕನ್ಹೇರಿ, 3) ಶಂಕರ ತಂದೆ ಕಾಮಶೆಟ್ಟಿ ಝಿಳ್ಳೆ, 4) ಶಿವಕುಮಾರ ತಂದೆ ಲಕ್ಷ್ಮಣ ಪಾರಾ, 5) ಕಾಮಶೆಟ್ಟಿ ತಂದೆ ಮಾಣಿಕಪ್ಪ ಹಾಗೂ 6) ಸಂಗಪ್ಪ ಎಲ್ಲರೂ ಸಾ: ಮರಖಲ ಗ್ರಾಮ ಇವರೆಲ್ಲರೂ ದುಂಡಾಗಿ ಕಳಿತು ಹಣ ಹಚ್ಚಿ ಪಣ ತೊಟ್ಟು ಅಂದರ ಬಾಹರ ಎಂಬ ನಸೀಬಿನ ಇಸ್ಪಿಟ್ ಜೂಜಾಟ ಆಡುತ್ತಿರುವಾಗ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿಯುವಷ್ಟರಲ್ಲಿ ಆರೋಪಿ ನಂ. 3 ರಿಂದ 6 ನಾಲ್ಕು ಜನರು ಓಡಿ ಹೋಗಿರುತ್ತಾರೆ, ಉಳಿದ ಇಬ್ಬರಿಗೆ ಹಿಡಿದು ಅವರಿಂದ ನಗದು ಹಣ 2680/- ರೂ. ಹಾಗೂ ಒಟ್ಟು 52 ಇಸ್ಪಿಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.