Police Bhavan Kalaburagi

Police Bhavan Kalaburagi

Thursday, April 22, 2021

BIDAR DISTRICT DAILY CRIME UPDATE 22-04-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 22-04-2021

 

ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂ.37/2021, ಕಲಂ. 379 ಐಪಿಸಿ :-

ಫಿರ್ಯಾದಿ ಮಾರುತಿ ತಂದೆ ಗ್ಯಾನೋಬಾ ಪವಾರ ವಯ: 52 ವರ್ಷ, ಜಾತಿ: ಲಮಾಣಿ, ಸಾ: ಇರಕಪಳ್ಳಿ, ಮಂಡಲ: ನಾಗಲಗಿದ್ದಾ, ತಾ: ನಾರಾಯಣಖೇಡ, ಜಿಲ್ಲಾ: ಸಂಗಾರಡ್ಡಿ ತೆಲಂಗಾಣಾ ಶಿವಪೂರ ತಾಂಡಾದ ಮಲ್ಕು ತಂದೆ ಟೊಗಾ ರಾಠೋಡ ರವರ ತಾಯಿ ವರು ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಅವರ ಮನೆಗೆ ಮಾತನಾಡಲು ದಿನಾಂಕ 12-09-2020 ರಂದು 1700 ಗಂಟೆಯ ಸುಮಾರಿಗೆ ಬಂದು ಅವರ ಮನೆಯ ಮುಂದೆ ತನ್ನ ದ್ವಿಚಕ್ರ ವಾಹನ ಸಂ. ಟಿ.ಎಸ್-15/ಇ.ಪಿ-3026 ನೇದನ್ನು 2200 ಗಂಟೆಯ ಸುಮಾರಿಗೆ ಹ್ಯಾಂಡ ಲಾಕ ಮಾಡಿ ಮಲಗಿಕೊಂಡು ದಿನಾಂಕ 13-09-2020 ರಂದು 0500 ಗಂಟೆಗೆ ಹೊರಗೆ ಬಂದು ನೋಡಲು ಸದರಿ ದ್ವಿಚಕ್ರ ವಾಹನ ಇರಲಿಲ್ಲ, ಸದರಿ ವಾಹನವನ್ನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಫಿರ್ಯಾದಿಯವರ ಅನುಮಾನದ ಪ್ರಕಾರ ಹಂದಿಕೇರಾ ತಾಂಡಾದ ರಮೇಶ ತಂದೆ ಗುರುನಾಥ ಆಡೆ ಇತನು ಸದರಿ ದ್ವಿಚಕ್ರ ವಾಹನ ಕಳವು ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿರುತ್ತದೆ, ಕಳುವಾದ ವಾಹನದ ವಿವರ 1) ಟಿ.ಎಸ್-15/ಇ.ಪಿ-3026, 2) ಚಾಸಿಸ್ ನಂ. MIBLIARO22HGD16343, 3) ಇಂಜಿನ್ ನಂ. JA06ERHGD62273 ಇರುತ್ತದೆ ಹಾಗೂ ಸದರಿ ವಾಹನವನ್ನು ಎಲ್ಲಾ ಕಡೆಗೆ ಹುಡುಕಾಡಿದರೂ ಸಹ ಸಿಕ್ಕಿರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 21-04-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 47/2021, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 21-04-2021 ರಂದು ಒಬ್ಬ ವ್ಯಕ್ತಿ ಭಾತಂಬ್ರಾ - ಲಖನಗಾಂವ ರೋಡಿಗೆ ಇರುವ ರೂದ್ರಭೂಮಿ ಹತ್ತಿರ ಸಾರ್ವಜನಿಕರಿಂದ ಒಂದು ರೂಪಾಯಿಗೆ 90/- ರೂಪಾಯ ಕೊಡುತ್ತೇನೆ ಅಂತ ಹೇಳಿ ಸಾರ್ವಜನಿಕರಿಂದ ಮಟಕಾ ಚೀಟಿ ಬರೆದುಕೊಳ್ಳುತಿದ್ದಾನೆ ಅಂತ ಮಹೇಂದ್ರಕುಮಾರ ಪಿಎಸ್ಐ (ಕಾ.ಸೂ) ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಭಾತಂಬ್ರಾ ಗ್ರಾಮದ ಲಖನಗಾಂವ ರೋಡಿಗೆ ಇರುವ ಭವಾನಿ ಗುಡಿಯ ಹತ್ತಿರ ಇರುವ ಗೋರಕ ವಡ್ಡರ ರವರ ಹೊಟಲ ಹತ್ತಿರ ಹೋಗಿ ಮರೆಯಾಗಿ ನೋಡಲು ಅಲ್ಲಿ ಆರೋಪಿ ಗಣೇಶ ತಂದೆ ಭಾಗ್ಯವಾನ ಸ್ವಾಮಿ ವಯ: 36 ವರ್ಷ, ಜಾತಿ: ಸ್ವಾಮಿ, ಸಾ: ಭಾತಂಬ್ರಾ, ತಾ: ಭಾಲ್ಕಿ ಇತನು ಒಂದು ರೂಪಾಯಿಗೆ 90/- ರೂಪಾಯಿ ಅಂತಾ ಜೋರಾಗಿ ಕೂಗುತ್ತಾ ಜನರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಳ್ಳುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸದರಿ ಆರೋಪಿತನ ಮೇಲೆ ದಾಳಿ ಮಾಡಿದಾಗ ಜನರು ಓಡಿ ಹೋಗಿದ್ದು ನಂತರ ಆರೋಪಿಗೆ ಹಿಡಿದು ಆತನ ಅಂಗ ಜಡತಿ ಮಾಡಿ ನೋಡಲು ಆತನ ಹತ್ತಿರ 1) ನಗದು ಹಣ 6570/- ರೂ 2) 4 ಮಟಕಾ ನಂಬರ ಬರೆದು ಚೀಟಿಗಳು, 3) ಒಂದು ಬಾಲ ಪೇನ್ ಹಾಗೂ 4) ಒಂದು ಶಾಮಸಂಗ ಮೋಬೈಲ್ ಅ.ಕಿ 500/- ರೂ. ಸಿಕ್ಕಿದ್ದು, ನಂತರ ಆತನ ಹತ್ತಿರ ಸಿಕ್ಕಿರುವುದನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಆರೋಪಿತನಿಗೆ ಮಟಕಾ ಚೀಟಿ ಬರೆದುಕೊಂಡು ಬುಕ್ಕಿ ಹಣ ಯಾರಿಗೆ ಕೊಡುತ್ತಿ ಅಂತ ವಿಚಾರಿಸಿದಾಗ ಆತನು ಸಂಜೀವಕುಮಾರ ಕಾರಬಾರಿ ಸಾ: ನಿಡೇಬನ ಇವರಿಗೆ ಕೊಡುತ್ತೇನೆ ಅಂತ ಹೇಳಿರುತ್ತಾನೆ ನಂತರ ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Wednesday, April 21, 2021

BIDAR DISTRICT DAILY CRIME UPDATE 21-04-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 21-04-2021

 

ಬಗದಲ ಪೊಲೀಸ ಠಾಣೆ ಬೀದರ ಅಪರಾಧ ಸಂ. 23/2021, ಕಲಂ. 302, 201 ಜೊತೆ 34 ಐಪಿಸಿ :-

ಫಿರ್ಯಾದಿ ಅನೀಲಕುಮಾರ ತಂದೆ ಕಲ್ಯಾಣರಾವ ಬಿರಾದರ ವಯ: 45 ವರ್ಷ, ಜಾತಿ:  ಲಿಂಗಾಯತ, ಸಾ: ಕೊನ ಮೇಳಕುಂದಾ ಗ್ರಾಮ, ತಾ: ಭಾಲ್ಕಿ, ಜಿ: ಬೀದರ ರವರ ಅಕ್ಕಳಾದ ಶೋಭಾವತಿ ರವರ ಮಗನಾದ ಆನಂದ ಇತನು ಹುಣಜಿ ಗ್ರಾಮದ ಧೂಳಪ್ಪಾ ಎಂಬುವವರ ಸಡುಕನ ಮಗಳಾದ ಅನುಸೇವಿ@ಅನುಸುಯಾ ವಯ: 19 ವರ್ಷ ಇವಳಿಗೆ ಪ್ರಿತಿ ಮಾಡುತ್ತಿದ್ದ ವಿಷಯ ಗೊತ್ತಿದ್ದು, ದಿನಾಂಕ 17-04-2021 ರಂದು 1100 ಗಂಟೆಗೆ ಆನಂದ ಇತನು ತಾನು ಪ್ರಿತಿ ಮಾಡುತ್ತಿರುವ ಅನುಸೇವಿ@ಅನುಸುಯಾ ಇವಳಿಗೆ ಕರೆದುಕೊಂಡು ಮನೆ ಬಿಟ್ಟು ಹೊಗಿರುತ್ತಾನೆಂದು ಅಕ್ಕಳಾದ ಶೋಭಾವತಿ ರವರು ಕರೆ ಮಾಡಿ ವಿಷಯ ತಿಳಿಸಿದ್ದರಿಂದ ಫಿರ್ಯಾದಿಯು ಕುಡಲೇ ಹುಣಜಿ ಗ್ರಾಮಕ್ಕೆ ಹೊಗಿ ಅವರನ್ನು ಎಲ್ಲಾ ಕಡೆ ಹುಡುಕಾಡಿರೂ ಎಲ್ಲಿಯೂ ಸಿಕ್ಕಿರುವುದಿಲ್ಲಾ,  ನಂತರ ಅನುಸೇವಿ@ಅನುಸುಯಾ ರವರ ಕುಟುಂಬದವರಿಗೆ ದಿನಾಂಕ 18-04-2021 ರಂದು ಹುಡುಗ ಹುಡುಗಿ  ಚಿಂಚೋಳ್ಳಿ ತಾಲೂಕಿನ ಐನೋಳ್ಳಿ ಗ್ರಾಮದಲ್ಲಿರುತ್ತಾರೆ ಅಂತ ವಿಷಯ ತಿಳಿದು ಅನುಸುಯಾ ಇವಳ ಚಿಕ್ಕಪ್ಪನಾದ ಧೂಳಪ್ಪಾ ತಂದೆ ಬಸಪ್ಪಾ ಮಚಕೂರಿ ವಯ: 50 ವರ್ಷ ರವರು ತನ್ನ ಮಕ್ಕಳಾದ 1) ಓಂಕಾರ ವಯ: 28 ವರ್ಷ, 2) ದತ್ತು ವಯ: 26 ವರ್ಷ, 3) ದಿಗಂಬರ ವಯ: 24 ವರ್ಷ ಹಾಗೂ 4) ಸಂತೋಷ ತಂದೆ ನರಸಿಂಗ ಮಚಕೂರಿ ವಯ: 25 ವರ್ಷ ರವರೆಲ್ಲರೂ ಹೋಗಿ ಹುಡುಗಿಗೆ ಮನೆಗೆ ಕರೆದುಕೊಂಡು ಬಂದಿರುತ್ತಾರೆ, ನಂತರ ಆನಂತ ಇತನು ಅನುಸೇವಿ ಇವಳಿಗೆ ಪ್ರೀತಿ ಮಾಡುತ್ತಿದ್ದ ಕಾರಣದಿಂದಾಗಿ ಆರೋಪಿತರಾದ 1) ಧೂಳಪ್ಪಾ ತಂದೆ ಬಸಪ್ಪಾ ಮಚಕೂರಿ ವಯ: 50 ವರ್ಷ, 2) ಓಂಕಾರ ವಯ: 28 ವರ್ಷ, 3) ದತ್ತು ವಯ: 26 ವರ್ಷ, 4) ದಿಗಂಬರ ವಯ: 24 ವರ್ಷ ಹಾಗೂ 5) ಸಂತೋಷ ತಂದೆ ನರಸಿಂಗ ಮಚಕೂರಿ ವಯ: 25 ವರ್ಷ ಇವರೆಲ್ಲರೂ ಸೇರಿ ಆನಂದನಿಗೆ ಹೊಡೆ ಬಡೆ ಮಾಡಿ ಹೊಡೆದು ಸಾಯಿಸಿ ಸಾಕ್ಷಿ ಪುರಾವೆ ಸಿಗಬಾರದೆಂದು, ರಂಜೋಳ ಬ್ರೀಡ್ಜನಲ್ಲಿ ಹಾಕಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 20-04-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 38/2021, ಕಲಂ. 279, 338 ಐಪಿಸಿ :-

ದಿನಾಂಕ 20-04-2021 ರಂದು ಫಿರ್ಯಾದಿ ಮಲ್ಲಿಕಾರ್ಜುನ ತಂದೆ ಶಂಕರ ಬಿರಾದರ, ವಯ: 26 ವರ್ಷ, ಜಾತಿ: ಲಿಂಗಾಯತ, ಸಾ: ತ್ರಿಪೂರಾಂತ ಬಸವಕಲ್ಯಾಣ ರವರ ಭಾವ ಧರ್ಮರಾಜ ರವರು ತನ್ನ ಮೋಟರ ಸೈಕಲ ನಂ. ಕೆಎ-56/ಹೆಚ್-7933 ನೇದನ್ನು ಚಲಾಯಿಸಿಕೊಂಡು ಬಸವಕಲ್ಯಾಣ ಕಡೆಯಿಂದ ಬಂಗ್ಲಾ ಕಡೆಗೆ ಹೋಗುವಾಗ ತ್ರಿಪೂರಾಂತ ಐ.ಬಿ ಎದುರಿಗೆ ಅವರ ಹಿಂದಿನಿಂದ ಅಂದರೆ ಬಸವಕಲ್ಯಾಣ ಕಡೆಯಿಂದ ಮೋಟರ ಸೈಕಲ ನಂ. ಎಮ್.ಹೆಚ್-14/ಸಿ.ಕ್ಯೂ-2909 ನೇದರ ಚಾಲಕನಾದ ಆರೋಪಿಯು ತನ್ನ ಮೋಟರ ಸೈಕಲನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಭಾವನ ಮೋಟರ ಸೈಕಲ ಹಿಂಭಾಗಕ್ಕೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಭಾವನ ತಲೆಗೆ ಭಾರಿ ಗುಪ್ತಗಾಯ, ಬಲಗಣ್ಣಿಗೆ, ಮೂಗಿಗೆ ರಕ್ತಗಾಯ ಹಾಗೂ ಎರಡು ಮೊಳಕಾಲಿಗೆ ಮತ್ತು ಬೆರಳುಗಳಿಗೆ ತರಚಿದ ರಕ್ತಗಾಯವಾಗಿರುತ್ತದೆ, ಆರೋಪಿಯು ತನ್ನ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ನಂತರ ಗಾಯಗೊಂಡ ಭಾವ ಧರ್ಮರಾಜ ರವರಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬಸವಕಲ್ಯಾಣ ಸರ್ಕಾರಿ ಆಸ್ಪತ್ರಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 70/2021, ಕಲಂ. 419, 420, 468 ಐಪಿಸಿ :-  

ದಿನಾಂಕ 04-08-2016 ರಿಂದ 05-03-2021 ರ ಅವಧಿಯಲ್ಲಿ ಆರೋಪಿ ಸೈಯದ ಜುಬೇರ ತಂದೆ ಸೈಯದ ಸಲ್ಲಾವೋದ್ದಿನ ದಂತ ವೈಧ್ಯಾಧಿಕಾರಿಗಳು ಸರಕಾರಿ ಆಸ್ಪತ್ರೆ ಚಿಟಗುಪ್ಪಾ, ಸಾ: ಬೀಬಿ ಗಲ್ಲಿ ಹುಮನಾಬಾದ ಇತನು ಅಂಗವಿಕಲತೆಯ ನಕಲಿ ಪ್ರಮಾಣ ಪತ್ರವನ್ನು ಸೃಷ್ಠಿಸಿ ದಂತ ವೈದ್ಯ ಅಧಿಕಾರಿ ಅಂತಾ ನೇಮಕಗೊಂಡು ಚಿಟಗುಪ್ಪಾ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಿರುತ್ತಾನೆ, ಆರೋಪಿತನು ನಕಲಿ ಪ್ರಮಾಣ ಪತ್ರ ಸೃಷ್ಠಿಸಿ ಮೋಸದಿಂದ ನೇಮಕಗೊಂಡಿರುತ್ತಾನೆಂದು ಫಿರ್ಯಾದಿ ಸಕರಾಮ ತಂದೆ ಮಾಣಿಕರಾವ ಚವ್ಹಾಣ, ವಯ: 65 ವರ್ಷ, ಸಾ: ಹುಮನಾಬಾದ ರವರು ನೀಡಿದ ದೂರಿನ ಸಾರಾಂಶದ ಮೇರೆಗೆ ದಿನಾಂಕ 20-04-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

Tuesday, April 20, 2021

BIDAR DISTRICT DAILY CRIME UPDATE 20-04-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 20-04-2021

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 60/2021, ಕಲಂ. 379 ಐಪಿಸಿ :-

ಫಿರ್ಯಾದಿ ದಿ ತಂದೆ ಅಶೋಕ ಗಾದಗೆ ವಯ: 25 ವರ್ಷ, ಜಾತಿ: ಲಿಂಗಾಯತ, ಸಾ: ಮನೆ ನಂ. 14-8-419 ಜೇರುಸಲೇಂ ಕಾಲೋನಿ, ಬೀದರ ರವರು ತನ್ನ ಅಪಾಚಿ ಆರ.ಟಿ.ಆರ ದ್ವಿಚಕ್ರ ವಾಹನ ಸಂ. KA-50/EE-5740, Engine No. DE5CL2X01318, Chessis No. MD637DE53L2C01299, ಮಾದರಿ 2020, ಬಣ್ಣ: ಬೀಳಿ/ಕಪ್ಪು ಬಣ್ಣದು ಹಾಗೂ .ಕಿ 1,00,000/- ರೂ. ನೇದನ್ನು ತನ್ನ ಮನೆಯ ಮುಂದೆ ನಿಲ್ಲಸಿರುವುದನ್ನು ದಿನಾಂಕ 23-03-2021 ರಂದು 2230 ಗಂಟೆಯಿಂದ ದಿನಾಂಕ 24-03-2021 ರಂದು 1000 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 19-04-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 43/2021, ಕಲಂ. 279, 338 ಐಪಿಸಿ :-

ದಿನಾಂಕ 19-04-2021 ರಂದು ಫಿರ್ಯಾದಿ ಮಹೇಶ ತಂದೆ ಗೋಪಿಚಂದ ಉಪಾಧ್ಯಾಯ ವಯ: 25 ವರ್ಷ, ಜಾತಿ: ಮಾಂಗರವಾಡಿ, ಸಾ: ದಿನದಯಾಳ ನಗರ, ಬೀದರ ರವರ ಸಂಬಂಧಿಕರಾದ ಟೈಗರ ತಂದೆ ಮಂಗಲ ಉಪಾಧ್ಯಾಯ ವಯ: 21 ವರ್ಷ, ಜಾತಿ: ಮಾಂಗರವಾಡಿ, ಸಾ: ಬಾಪುನಗರ ಕಲಬುರಗಿ ಇತನು ತನ್ನ ಮೋಟಾರ ಸೈಕಲ ನಂ. ಕೆಎ-32/ಇವೈ-1187 ನೇದನ್ನು ಚಲಾಯಿಸಿಕೊಂಡು ನಯಾಕಮಾನ ಒಳಗಿನಿಂದ ಸಿದ್ದಿ ತಾಲೀಮ ಮುಖಾಂತರ ದಿನದಯಾಳ ನಗರ ಬೀದರ ಕಡೆ ಹೋಗಲು ಕಸಬವಾಡಾ ಕ್ರಾಸ್ ಹತ್ತಿರ ತನ್ನ ಮೋಟಾರ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ವೇಗ ಹತೋಟಿಯಲ್ಲಿಟ್ಟುಕೊಳ್ಳದೇ ಸ್ಕೀಡ್ ಆಗಿ ಬಿದ್ದಿ ಪ್ರಯುಕ್ತ ಟೈಗರ ಇತನ ಬಲಗಾಲ ಮೊಳಕಾಲ ಕೆಳಗೆ ಭಾರಿ ರಕ್ತಗಾಯವಾಗಿದ್ದರಿಂದ ಆತನಿಗೆ ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.