ಬ್ರಹ್ಮಪೂರ ಪೊಲಿಸ ಠಾಣೆ ಗುಲ್ಬರ್ಗಾ : ದಿನಾಂಕ:28/05/2010 ರಂದು 1100 ಗಂಟೆಗೆ ಪಿರ್ಯಾಧಿದಾರಾದ ಶ್ರೀ ಅಮೀತ ತಂದೆ ಬಾಭುರಾವ ಸಾ: ಲೋಹಾರಗಲ್ಲಿ ಮಹಾದೇವ ನಗರ ಗುಲ್ಬರ್ಗಾ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದ್ದು ಸಾರಾಂಶವೆನೆಂದರೆ, ದಿನಾಂಕ: 19/05/2011 ರಂದು ಮದ್ಯಾಹ್ಮ 12-30 ರಿಂದ 13-00 ಗಂಟೆಯ ವೇಳೆಯಲ್ಲಿ ತಮ್ಮ ಹಿರೋಹೊಂಡಾ ಸ್ಪೆಂಡರ್ ಪ್ಲಸ್ ನಂ: ಕೆಎ-32 ವಿ 7728 , ಬಣ್ಣ: ಸಿಲ್ವರ್ ಅ.ಕಿ. 36,000/- ನೇದ್ದನ್ನು ವೀರಶೈವ ಕಲ್ಯಾಣ ಮಂಟಪ ಎದುರುಗಡೆ ನಿಲ್ಲಿಸಿದಾಗ ಯಾರೋ ಕಳ್ಳರು ಕಲ್ಲತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಇತ್ಯಾತದಿ ಕೊಟ್ಟ ದೂರಿನ ಸಾರಾಂಶ ಮೇಲಿಂದ ಬ್ರಹ್ಮಪೂರ ಪೊಲೀಸ ಠಾಣೆ ಗುನ್ನೆ ನಂ: 106/11 ಕಲಂ: 379 ಐ.ಪಿ.ಐ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ನಿಂಬರ್ಗಾ ಪೊಲೀಸ ಠಾಣೆ: ದಿ: 28/052011 ರಂದು 12:00 ಪಿಎಂ ಕ್ಕೆ ಮಲ್ಲಿಕಾರ್ಜುನ ಪಿ.ಸಿ 1228 ರವರು ರಮಾಬಾಯಿ ಗಂಡ ಪ್ರಭುರಾಯ ಕವಲಗಿವಾಸ: ಮಡಿಯಾಳ ಗ್ರಾಮ ಹೇಳಿಕೆ ದೂರನ್ನು ಠಾಣೆಯಲ್ಲಿ ಹಾಜರು ಪಡಿಸಿದ್ದು ಸದರಿ ದೂರಿನ ಸಂಕ್ಷಿಪ್ತ ವಿವರವೇನೆಂದರೇ ಪಿರ್ಯಾದಿದಾರಳ ಗಂಡನಾದ ಮೃತ ಪ್ರಭುರಾಯನು ತಾನು ಕರ್ತವ್ಯ ನಿರ್ವಹಿಸುತ್ತಿರುವ ಶಾಲೆಯಲ್ಲಿ ಬಿಸಿಊಟದ ಅಡಿಗೆ ಮಾಡುವವಳಾದ ಮಂಗಲ ಇವಳೊಂದಿಗೆ ಮೃತನು ಅನೈತಿಕ ಸಂಬಂಧ ಇಟ್ಟು ಕೊಂಡಿರುತ್ತಾನೆಂದು ಮೇಲೆ ನಮೂದಿಸಿದ ಆರೋಪಿತರು ಸಂಶಯ ಪಟ್ಟು ಒಂದು ತಿಂಗಳ ಹಿಂದೆ ಮೃತನನ್ನು ಬಲವಂತವಾಗಿ ಸೋಲಾಪುರಕ್ಕೆ ಕರದುಕೊಂಡು ಹೊಗಿ ಅಕ್ರಮವಾಗಿ ಕೂಡಿ ಹಾಕಿ ಪ್ರಾಣ ಬೆದರಿಕೆ ಹಾಕಿ ಮೃತನನ್ನು ನಿನ್ನನ್ನು ಕೊಲೆ ಮಾಡುತ್ತೇವೆ ಅಂತಾ ಕೊಲೆ ಬೆದರಿಕೆ ಹಾಕಿದ್ದು ಅಲ್ಲದೇ ನೀನಾಗಿಯೇ ಸಾಯಿ ಅಂತಾ ಆತ್ಮ ಹತ್ಯೆಗೆ ಪ್ರಚೋದನೆ ನಿಡಿದ್ದಂದ ಮೃತನು ಆರೋಪಿತರನ್ನು ಹೆದರಿ ದಿ:28/05/2011 ರಂದು ಮುಂಜಾನೆ 9.300 ಗಂಟೆಗೆ ಮಾಡಿಯಾಳಸಿಮಾಂತರದಲ್ಲಿರುವ ಕಾಶಿನಾಥ ಸುತಾರ ಇವರ ಹೊಲದಲ್ಲಿರುವ ಬೇವಿನ ಗಿಡದ ಟೊಂಗೆಗೆ ಹಗ್ಗದಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾನೆ ವಗೈರೆ ನೀಡಿರುವ ಸೂರಿನ ಸಾರಾಂಶದ ಮೇರೆಗೆ ಈ ಮೇಳಿನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ.
ಅಶೋಕ ನಗರ ಪೊಲೀಸ್ ಠಾಣೆ : ಇಂದು ದಿನಾಂಕ 28/05/2011 ರಂದು 10-52 ಪಿ.ಎಮ್.ಕ್ಕೆ ಶ್ರೀ.ಫಕೀರಪ್ಪಾ ತಂದೆ ನಿಂಗಪ್ಪಾ ಗುಡಿಕಟ್ಟಿ ಕೆ.ಎಲ್.ಇ ಸಂಸ್ಠೆಯ ಪಿ.ಯು ಕಾಲೇಜ ಪ್ರಾಚಾರ್ಯರು ಅಂಕಲಿ ತಾ:ಚಿಕ್ಕೊಡಿ ಜಿ: ಬೆಳಗಾಂವಿ ವಿಳಾಸ: ಮನೆ ನಂ. 173 ಆಶಿರ್ವಾದ ನಿಲಯ ಸಿ.ಐ.ಬಿ ಕಾಲೋನಿ ಗುಲಬರ್ಗಾದ ರವರು ಸಲ್ಲಿಸಿದ ಲಿಖಿತ ಪಿರ್ಯಾದಿ ಅರ್ಜಿ ಸಾರಾಂಶವೆನೆಂದರೆ ಇಂದು ದಿನಾಂಕ 28/05/2011 ರಂದು ಶನಿವಾರ ಇರುವುದ್ದರಿಂದ ಕಾಲೇಜ ಕೆಲಸ ಮುಗಿಸಿಕೊಂಡು ಚಿಕ್ಕೊಡಿಯಿಂದ ಬಿಜಾಪೂರ ಮಾರ್ಗವಾಗಿ ಕೆ.ಎಸ್.ಆರ್.ಟಿಸಿ ಬಸ್ಸಿನಲ್ಲಿ ಗುಲಬರ್ಗಾ ಬಸ ನಿಲ್ದಾಣಕ್ಕೆ ಬಂದು ಇಳಿದು ಅಲ್ಲಿಂದ ಮನೆಗೆ ಹೊಗಲು ಕಬಿನಿ ಲಾಡ್ಜ ಹತ್ತಿರ ರಸ್ತೆಯಲ್ಲಿ ನಡೆದುಕೊಂಡು ಹೊಗುತ್ತಿರುವಾಗ ನನ್ನ ಹಿಂದೆ 4 ಜನ ಅಪರಿಚಿತ ಹುಡುಗರು ಫಾಲೋ ಮಾಡುತ್ತಾ ಬಂದು ಕತ್ತಲಲ್ಲಿ ಒಮ್ಮೇಲೆ ಮೈಮೇಲೆ ಹಲ್ಲೆ ಮಾಡಿ ಜಬರದಸ್ತಿಯಿಂದ ಕೈಯಲ್ಲಿದ್ದ ಈ ಕಳಕಂಡ ವಸ್ತು ಹಾಗು ಬಂಗಾರದ ಉಂಗುರುಗಳನ್ನು ಕಸಿದುಕೊಂಡು ಹೊಗಿರುತ್ತಾರೆ. ಇದರಿಂದ ನನ್ನ ಬಲಗೈ ತೊರಬೆರಳಿಗೆ ತರಚಿದ ಗಾಯ ಆಗಿರುತ್ತದೆ. ಹಾಗು ಬಾಯಿ ತುಟಿಗೆ ಸಣ್ಣ ಗಾಯವಾಗಿರುತ್ತದೆ. ಆಗ ರಾತ್ರಿ 9 ಗಂಟೆ ಆಗಿರಬಹುದು. ಅವರು ಅಂದಾಜು 20-25 ವಯಸ್ಸಿನವರಿದ್ದರು. ನೊಡಿದರೇ ಗುರ್ತಿಸುತ್ತೆನೆ. ಕಸಿದುಕೊಂಡು ಹೊಗಿದ್ದ ವಸ್ತುಗಳು ಈ ರೀತಿ ಇರುತ್ತವೆ. 1)ಒಂದು ಸ್ಯಾಮಸಂಗ ಎಸ್-5620 ಹ್ಯಾಂಡಸೇಟ ಅದರಲ್ಲಿ ಬಿ.ಎಸ್.ಎನ್.ಎಲ್ ಸೀಮ ಕಾರ್ಡ ನಂ. 9448301557 ಐ.ಎಂ.ಇ.ಐ ನಂ. 352053042490139 ಇರುತ್ತದೆ. ಇದರ ಅಂದಾಜು ಕಿಮ್ಮತ್ತು 9500/- ರೂಪಾಯಿ 2) ಬಲಗೈ ತೊರಬೆರಳಿನಲ್ಲಿದ್ದ ನವರತ್ನ ಹರಳುಗಳುಳ್ಳ 12 ಗ್ರಾಂ ಬಂಗಾರದ ಉಂಗುರು ಇದರ ಅಂದಾಜು ಕಿಮ್ಮತ್ತು 20,000/- ರೂಪಾಯಿ 3)ಎಡಗೈ ತೊರಬೇರಳಿನಲ್ಲಿದ್ದ 4 ಗ್ರಾಂ ಬಂಗಾರದ ಉಂಗುರು ಇದರ ಅಂದಾಜು ಕಿಮ್ಮತ್ತು 8000/- ರೂಪಾಯಿ
ಹೀಗೆ ಒಟ್ಟು ಅಂದಾಜು 37,500/- ರೂಪಾಯಿ ಬೆಲೆವುಳ್ಳ ಮೋಬೈಲ ಹಾಗು ಬಂಗಾರದ ಉಂಗುರುಗಳನ್ನು ಜಬರದಸ್ತಿಯಿಂದ ಕಸಿದುಕೊಂಡು ಹೊಗಿದ್ದ ಅಪರಿಚಿತ ಹುಡುಗರನ್ನು ಪತ್ತೆ ಹಚ್ಚಿ ಕಾನೂನು ರೀತಿ ಕ್ರಮ ಕೈಕೊಳ್ಳಬೇಕೆಂದು ವಿನಂತಿ.ಅಂತಾ ಪಿರ್ಯಾದಿ ಅರ್ಜಿಯ ಸಾರಾಂಶ ಮೇಲಿಂದ ಅಶೋಕ ನಗರ ಪೊಲೀಸ್ ಠಾಣೆಯ ಗುನ್ನೆ ನಂ. 58/2011 ಕಲಂ. 397 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.
No comments:
Post a Comment