ಅಪಹರಣ ಪ್ರಕರಣ :-
ಗ್ರಾಮೀಣ ಠಾಣೆ : ಶ್ರೀ ಸುಬಾಷ ತಂದೆ ಲಾಲು ಜಾಧವ ಸಾ|| ಶರಣಸಿರಸಗಿ ತಾಂಡಾ ತಾ: ಜಿ: ಗುಲಬರ್ಗಾ ರವರು, ನಮ್ಮ ಮನೆಯಲ್ಲಿ ಬಾಡಿಗೆಯಿಂದ ಇರುವ ಶರಣಪ್ಪ ಜಮಾದಾರ ಇತನ ಮಗನಾದ ಸಂತೋಷನು ಮನೆಗೆ ನುಗ್ಗಿ ನನ್ನ ಮಗಳಾದ ಅಂಬಿಕಾಳಿಗೆ ಪುಸಲಾಯಿಸಿ ಅಲಮಾರಿಯಲ್ಲಿರುವ 5 ತೋಲೆಯ ಬಂಗಾರದ ಮಂಗಳಸೂತ್ರ ½ ತೋಲೆಯ ಕಿವಿಯ ಜುಮಕಿ 1 ತೋಲೆ ಲಾಕೇಟ ½ ತೋಲೆ ಉಂಗುರ 1 ತೋಲೆಯ ಬ್ರಾಸ್ಲೇಟ ಹಾಗೂ ನಗದು ಹಣ 10000/- ರೂ ಹೀಗೆ ಒಟ್ಟು ರೂ. 1,70,000/- ಮೌಲ್ಯದ್ದು ಮನೆಯಲ್ಲಿರುವ ಬಂಗಾರದ ಒಡವೆಗಳನ್ನು ಅಲಮಾರಿಯಲ್ಲಿಂದ ಕಳುವು ಮಾಡಿಕೊಂಡು ಮಗಳನ್ನು ಜಬರದಸ್ತಿಯಿಂದ ಅಪಹರಿಸಿಕೊಂಡು ಹೋಗಿರುತ್ತಾನೆ. ಇದಕ್ಕೆ ಸಂತೋಷನ ತಂದೆ ಶರಣಪ್ಪ ತಾಯಿ ಶರಣಮ್ಮ ತಂಗಿಯಾದ ಸೌಭಾಗ್ಯಶ್ರೀ ಹಗೂ ಹಣಮಂತ ತಂದೆ ಭೀಮಶ್ಯಾ ಚಂದ್ರಶೇಖರ ತಂದೆ ಭೀಮಶ್ಯಾ ಶೀಲವಂತಿ ಗಂಡ ಚಂದ್ರಶೇಖರ ಜಮಾದಾರ ಇವರೆಲ್ಲರು ಕುಮ್ಮಕ್ಕು ನೀಡಿರುತ್ತಾರೆ. ಕಾರಣ ನಮ್ಮ ಮಗಳನ್ನು ಅಪಹರಣ ಮಾಡಿ ಮನೆಯಲ್ಲಿಯ ಒಡವೆ ಬಂಗಾರದ ಆಭರಣ ಹಾಗೂ ನಗದು ಹಣವನ್ನು ಕಳುವು ಮಾಡಿದ ಸಂತೋಷನ ಮೇಲೆ ಹಾಗೂ ಇತರರ ಮೇಲೆ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಹಾಗೂ ನಮ್ಮ ಮಗಳನ್ನು ಹಾಗೂ ನಮ್ಮ ಒಡವೆಯನ್ನು ಪತ್ತೆ ಮಾಡಿ ಕೊಡಬೇಕಾಗಿ ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Police Bhavan Kalaburagi
Wednesday, May 4, 2011
GULBARGA DIST REPORTED CRIMES
Subscribe to:
Post Comments (Atom)
No comments:
Post a Comment