Police Bhavan Kalaburagi

Police Bhavan Kalaburagi

Tuesday, May 10, 2011

GULBARGA DIST REPORTED CRIMES

ಕೊಲೆ ಪ್ರಯತ್ನ :-

ಚಿಂಚೋಳಿ ಠಾಣೆ :ಶ್ರೀಮತಿ ಘಾಳಮ್ಮ ಗಂಡ ಶರಣಪ್ಪಾ ಕಾಶಿಬಾಯಿ ಸಾ|| ದೇಗಲಮಡಿ ತಾ:ಚಿಂಚೋಳಿ ರವರು, ದಿ 07-05-11  ರಂದು ಯಾರೋ ಅಪರಿಚಿತರು ಫೋನ ಮುಖಾಂತರ ನನ್ನ ಮಗ ರಾಜೇಂದ್ರನಿಗೆ ಕರೆಯಿಸಿಕೊಂಡು ಹೊಡೆಬಡೆ ಮಾಡಿ ಕೊಲೆ ಪ್ರಯತ್ನ ಮಾಡಿದ್ದು ಅಲ್ಲದೇ ಮಾರಾಣಾಂತಿಕ ಹಲ್ಲೆ ಮಾಡಿರುತ್ತಾರೆ. ಕಾರಣ ನನ್ನ ಮಗನಿಗೆ ಹೊಡೆದು ಮಾರಾಣಾಂತಿಕ ಹಲ್ಲೆ ಮಾಡಿದವರನ್ನು ಪತ್ತೆ ಹಚ್ಚಿ ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಅಪಘಾತ ಪ್ರಕರಣ :-
ಗ್ರಾಮೀಣ ಠಾಣೆ :
ಶ್ರೀ ಮಹ್ಮದ ಅಲಿ ತಂದೆ ಶ್ಯಾವರ ಮಿಯ್ಯಾ ಗುರಮಿಟಕಲ್ ಸಾ|| ಅವರಾದ (ಬಿ) ತಾಃ ಜಿಃ ಗುಲಬರ್ಗಾ ರವರು, ನನ್ನ ತಂದೆ ಶಾವರ ಮಿಯ್ಯಾರವರು ದಿನನಿತ್ಯದಂತೆ ಊಟ ಮಾಡಿಕೊಂಡು ತೋಟದ ಹೊಲಕ್ಕೆ ಮಲಗಲು ಹೋಗುತ್ತಿದ್ದಾಗ ಮುದುಕಿ ಫೂಲಿನ ಹತ್ತಿರ ಯಾವುದೊ ಅಪರಿಚಿತ ಲಾರಿ ಚಾಲಕನು ತತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಅಪಘಾತಪಡಿಸಿ ತನ್ನ ವಾಹನ ಸಮೇತ ಓಡಿ ಹೋಗಿರುತ್ತಾನೆ. ಕಾರಣ ಆತನನ್ನು ಮತ್ತು ಲಾರಿಯನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಣ್ಣು ಮಗಳು ಕಾಣೆಯಾದ ಪ್ರಕರಣ :-
ಸುಲೇಪೇಟ ಠಾಣೆ :
ಶ್ರೀ ಯಕಬಾಲ ಮಾಸೀಲದಾರ ಸಾ|| ನಿಡಗುಂದಾ ರವರು, ನನ್ನ ಹೆಂಡತಿಯಾದ ಶಹೀನಾ ಬೇಗಂ ಮತ್ತು ಒಂದು ವರ್ಷದ ಮಗನಾದ ಇರ್ಫಾನ ಇವರು ಕಾಣೆಯಾಗಿದ್ದು, ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಕಾರಣ ಪತ್ತೆ ಹಚ್ಚಿ ಕೊಡಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸುಲೇಪೇಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: