Police Bhavan Kalaburagi

Police Bhavan Kalaburagi

Wednesday, May 11, 2011

GULBARGA DIST REPORTED CRIMES

ಹೆಣ್ಣು ಮಗಳು ಕಾಣೆಯಾದ ಪ್ರಕರಣ :-
ಸುಲೇಪೇಟ ಠಾಣೆ :
ಶ್ರೀ ರವಿಂದ್ರ ತಂದೆ ಬಸವಂತರಾವ ಮಾಲಿಪಾಟೀಲ ಸಾ|| ರಾಮತೀರ್ಥ ರವರು, ನನ್ನ ತಮ್ಮನ ಹೆಂಡತಿಯಾದ ಪ್ರೀಯದರ್ಶೀನಿ ಗಂಡ ದಯಾನಂದ ಮಾಲಿಪಾಟೀಲ ದಿ:12-03-11 ರಂದು ಮಧ್ಯಾಹ್ನ 02:00 ಗಂಟೆಯ ಸುಮಾರಿಗೆ ಬಹಿರ್ದೆಸೆಗೆ ಹೋಗಿ ಬರವುದಾಗಿ ಹೇಳಿ ಹೋದವಳು ವಾಪಸ್ ಮನೆಗೆ ಬರದೇ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗದೇ ಇರುವದರಿಂದ ಇಂದು ತಡವಾಗಿ ಬಂದು ಫಿರ್ಯಾಧಿ ಕೊಟ್ಟಿರುತ್ತೆನೆ. ಕಾರಣ ಕಾಣೆಯಾದ ಪ್ರೀಯದರ್ಶಿನಿ ಇವಳಿಗೆ ಪತ್ತೆಮಾಡಿಕೊಡಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸುಲೇಪೇಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :-
ಮುಧೋಳ ಠಾಣೆ :
ಶ್ರೀ ನಾಗಪ್ಪಾ ತಂದೆ ಕಾಶಪ್ಪಾ ಸಾ|| ಇಂಮಡಾಪುರ ತಾ|| ಸೇಡಂ ರವರು, ನಾನು ಮತ್ತು ಸತೀಶ ದಿ:10-5-11 ರಂದು 4-00 ಪಿಎಮ್ ಸುಮಾರಿಗೆ ಹೊಲದಲ್ಲಿದ್ದಾಗ ಒಂದು ಟ್ರ್ಯಾಕ್ಟರ ಉಸುಕು ತುಂಬಿಕೊಂಡು ನಮ್ಮ ಹೊಲದ ಮಧ್ಯ ಭಾಗದಿಂದ ಹೋಗುತ್ತಿದ್ದಾಗ ಇದರ ಬಗ್ಗೆ ಕೇಳಲು ನಾಗಪ್ಪನು ಟ್ರ್ಯಾಕ್ಟರ ನಿಲ್ಲಿಸುವಂತೆ ಕೈ ಮಾಡಿದಾಗ ಸದರಿ ಟ್ರ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತಿ ವೇಗ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಸತೀಶನಿಗೆ ಅಪಘಾತಪಡಿಸಿದ್ದು ಸತೀಶನಿಗೆ ಭಾರಿ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಕಾರಣ ಸದರಿ ಟ್ರ್ಯಾಕ್ಟರ ಚಾಲಕನನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಠಂಶದ ಮೇಲಿಂದ ಮೂಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: