Police Bhavan Kalaburagi

Police Bhavan Kalaburagi

Friday, May 6, 2011

GULBARGA DIST REPORTED CRIMES

ಹಲ್ಲೆ ಮಾಡಿ, ಕೊಲೆಗೆ ಯತ್ನಿಸಿದ ಪ್ರಕರಣ :-
ಶಹಾಬಾದ ನಗರ ಠಾಣೆ :
ಶ್ರೀ ಮೊಹ್ಮದ ಹನೀಪ್ ತಂದೆ ಸುಲ್ತಾನ ಶೇಖ ಸಾ|| ರಾಮಮೊಹಲ್ಲಾ ಶಹಾಬಾದ ರವರು, ದಿ:04/05/11 ರಂದು ರಾತ್ರಿ 10 ಪಿಎಂ ಕ್ಕೆ ನಾನು ಸಾರಾಯಿ ಕುಡಿಯಲು ಬಸಸ್ಟಾಂಡ ಎದುರುಗಡೆ ಇರುವ ವೈನ ಶಾಪಗೆ ಹೋಗಿ ಮರಳಿ ಮನೆಗೆ ಬರುವಾಗ ಬಸಸ್ಟಾಂಡ ಎದುರುಗಡೆ ಹೋಗುತ್ತಿರುವಾಗ ಆರೋಪಿತರಾದ 1. ರಾಜು ತಂದೆ ಭೀಮರಾವ ಜೀನಕೇರಿ 2. ಮಾರುತಿ 3. ಸುನೀಲ ಹಾಗೂ ಇನ್ನೂ ಇಬ್ಬರೂ ಕೂಡಿಕೊಂಡು ಬಂದು ನನಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ನಾವು ಕಳ್ಳತನದ ಸಾಮಾನುಗಳನ್ನು ತೆಗೆದು ಕೊಂಡರೆ ಅದನ್ನು ಪೊಲೀಸರಿಗೆ ಮಾಹಿತಿ ತಿಳಿಸುತ್ತಿಯಾ ಅಂತಾ ಹೊಡೆಬಡೆ ಮಾಡಿ, ನಂತರ ಸದರಿಯವರೆಲ್ಲರೂ ಕೂಡಿಕೊಂಡು ನನ್ನನ್ನು ಮುಗಿಸಿಯೇ ಬಿಡೋಣ ಅಂತಾ ಎತ್ತಿಕೊಂಡು ರೇಲ್ವೇ ಪಟ್ರೀಯಲ್ಲಿ ಹಾಕಲು ಹೋಗುತ್ತಿರುವಾಗ ಕೆಲವು ಜನರು ಬರುತ್ತಿರುವದನ್ನು ನೋಡಿ ಬಿಟ್ಟು ಹೋದರು. ಸದರಿಯವರ ವಿರುದ್ದ ಕ್ರಮ ಜರುಗಿಸಬೇಂಕೆದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: