ದರೋಡೆ ಪ್ರಕರಣ :
ಎಂ ಬಿ ನಗರ ಠಾಣೆ : ಶ್ರೀಮತಿ. ಸುಮಾ ಗಂಡ ಅಮೀತಕುಮಾರ ಜೀವಣಗಿ ಸಾ|| ಪ್ಲಾಟ ನಂ.112 ಪ್ರಗತಿ ಕಾಲೂನಿ ಗುಲಬರ್ಗಾ ರವರು ದಿನಾಂಕ. 16-05-2011 ರಂದು ರಾತ್ರಿ ಬಡೆಪೂರದಲ್ಲಿರುವ ನಮ್ಮ ತಾಯಿ ಮನೆಗೆ ಹೋಗಿ ಮರಳಿ ಮನೆಗೆ ಬರುವಾಗ ಪ್ರಗತಿ ಕಾಲೂನಿ ಗಾರ್ಡನ ಹತ್ತಿರ 8-00 ಪಿ.ಎಂ.ಕ್ಕೆ ಒಬ್ಬ ಹೀರೊಹಾಂಡಾ ಮೋಟರ ಸೈಕಲ ಸವಾರನು ಮೈಮೇಲೆ ಬಂದಂತೆ ಮಾಡಿ ನನ್ನ ಕೊರಳಿಗೆ ಕೈ ಹಾಕಿ 4 ತೊಲೆ ಬಂಗಾರ ಮಂಗಳ ಸೂತ್ರ ಅಕಿ. 85,800/- ರೂ ಬೆಲೆಬಾಳುವದು ಕಿತ್ತುಕೊಂಡು ಹೊಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದರೋಡೆ ಮತ್ತು ಹಲ್ಲೆ ಪ್ರಕರಣ
ಬ್ರಹ್ಮಪೂರ ಠಾಣೆ : ರಾಹುಲ್ ತಂದೆ ಅಶೋಕ ಹೇರೂರ ಸಾ|| ಸತ್ಯ ಕಾಮ್ ಪ್ರೇಸ್ ಮೇನ ರೋಡ ಗುಲಬರ್ಗಾ ರವರು ನನಗೆ ದಿನಾಂಕ 16-05-2011 ರಂದು ವಿನೋದ ತಂದೆ ಆನಂದ ಸಗರ ಈತನು ಮಚ್ಚಿನಿಂದ ಹೊಡೆದು ಗಾಯ ಪಡಿಸಿ ನನ್ನ ಹತ್ತಿರ ಇದ್ದ ಬಂಗಾರದ ಲಾಕೇಟ ಅಕಿ|| 20,000-00 ಮತ್ತು ನಗದು ಹಣ 3,000-00 ಹೀಗೆ ಒಟ್ಟು 23,000-00 ಮ್ಔಲಯದ್ದು ಜಬರದಸ್ತಿಯಿಂದ ಕಸಿದುಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಮಾದನ ಹಿಪ್ಪರಗಾ ಠಾಣೆ : ಶ್ರೀ ಅಲ್ತಪ್ ತಂದೆ ಯೂಸುಪ್ ಖಾನ ಸಾ|| ಪಡಸಾವಳಗಿ ರವರು ಸರಸಂಭಾ ಗ್ರಾಮದ ಪಾಟಿ ಹತ್ತಿರ ಇದ್ದಾಗ ಚಾಂದಬಿ ಗಂಡ ಅಲ್ತಪ್ ಖಾನ ಮತ್ತು ಮಹಮದ ಹನಿಪ್ ಇಬ್ಬರು ಬಂದು ಬಾಯಿಯಲ್ಲಿ ದಸ್ತಿ ತುರಕಿ ಜೀಪಿನಲ್ಲಿ ಹಾಕಿಕೊಂಡು ಹೋಗಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಕಲ್ಲಿನಿಂದ ಹೊಡೆದು ಜೀವದ ಭಯ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment