ಕಳ್ಳತನ ಪ್ರಕರಣ :
ದೇವಲಗಾಣಗಾಪುರ ಠಾಣೆ : ಶ್ರೀಮತಿ. ಕವಿತಾ ಗಂಡ ಜ್ಞಾನೇಶ್ವರ ಅನಂತಯ್ಯ ಸಾ|| ಗೋಸಾ ಮಹಾಲ ಬಾಲಯ್ಯ ಬಾಡಾ ಹೈದ್ರಾಬಾದ ರವರು, ನಾನು ದಿನಾಂಕ: 17-05-2011 ರಂದು ಅಕ್ಕ ಗನಕಮ್ಮ ಕೂಡಿಕೊಂಡು ದೇವಲಗಾಣಗಾಪುರ ಗ್ರಾಮಕ್ಕೆ ಬಂದು ಶ್ರೀ ದತ್ತತ್ರೇಯ ದೇವರ ದರ್ಶನ ಪಡೆದು ಮಂದಿರ ಹತ್ತಿರ ಪ್ರಸಾದ ತೆಗೆದುಕೊಳ್ಳುವಾಗ ಅಕ್ಕಳಾದ ಗನಕಮ್ಮಳ ಕೊರಳಲ್ಲಿನ ಮಂಗಳ ಸೂತ್ರ ಹಾಗೂ ಬಂಗಾರದ ಚೈನ್ ಒಟ್ಟು 2 ತೊಲೆ ಅಂದಾಜು ಕಿಮ್ಮತ್ತು 40,000=00 ರೂ. ಯಾರೂ ಅಪರಚಿತ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ್ದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳ್ಳತನ ಪ್ರಕರಣ :
ದೇವಲಗಾಣಗಾಪುರ ಠಾಣೆ : ಶ್ರೀ, ಪಿ.ರಾಮಕೃಷ್ಣ ತಂದೆ ಪೋಚಯ್ಯ ಪಂಪರಿ ಸಾ|| ಟೆಂಪಲ್ ಅಲ್ವಾಲ್ ಸಿಕಿಂದ್ರಾಬಾದ ರವರು, ನಾನು ದಿನಾಂಕ: 18-04-2011 ರಂದು ಹೆಂಡತಿ ಪಿ.ಶಕುಂತಲಾ ಹಾಗೂ ಅವಳ ತಂಗಿ ಭುಜಮ್ಮಾ ಕೂಡಿಕೊಂಡು ದೇವಲಗಾಣಗಾಪುರ ಗ್ರಾಮಕ್ಕೆ ಬಂದು ಶ್ರೀ ದತ್ತಾತ್ರೇಯ ದೇವರ ದರ್ಶನ ಪಡೆದು ಮಂದಿರ ಹತ್ತಿರ ಪ್ರಸಾದ ತೆಗೆದುಕೊಳ್ಳುವಾಗ ನನ್ನ ಹೆಂಡತಿಯ ಕೊರಳಲ್ಲಿನ ಮಂಗಳ ಸೂತ್ರ ಹಾಗೂ ಬಂಗಾರದ ಚೈನ್ ಒಟ್ಟು 4 ತೊಲೆ ಅಂದಾಜು ಕಿಮ್ಮತ್ತು 80,000=00 ರೂ. ಯಾರೂ ಅಪರಚಿತ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ್ದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ:
ಅಪಜಲಪೂರ ಠಾಣೆ :
ಲಕ್ಷ್ಮಿಪುತ್ರ ತಂದೆ ಮಲ್ಲಣ್ಣ ಕಲಶೇ್ಟಿ ಸಾ|| ನಿಗಡಿ ಏರಿಯಾ ಪುಣೆ ಮಹಾರಾಷ್ಟ್ರ ರಾಜ್ಯ ರವರು ನಾನು ಮತ್ತು ನನ್ನ ಅಣ್ಣ ಸಂತೋಷ ಇತನು ಕೂಡಿಕೊಂಡು ಮಣ್ಣೂರ ಗ್ರಾಮದ ದೇವರ ದರ್ಶನಕ್ಕೆ ಬಂದು ದೇವರ ದರ್ಶನ ಪಡೆದು ಊಟಕ್ಕೆ ಕುಳಿತಾಗ 407 ವಾನಹ ಕೆಎ 32- 5900 ನೇದ್ದರೆ ಚಾಲಕ ತನ್ನ ವಾಹನವನ್ನು ಅಲಕ್ಷತನದಿಂದ ನಡೆಯಿಸಿ ಸಂತೋಷ ಇತನ ತಲೆಗೆ ಟಾಯರ ಹರಿದು ಸ್ಥಳದಲ್ಲಿಯೇ ಮರಣ ಹೊಂದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
No comments:
Post a Comment