Police Bhavan Kalaburagi

Police Bhavan Kalaburagi

Sunday, May 22, 2011

GULBARGA DISTRICT REPORTED CRIMES

ಕಳ್ಳತನ ಪ್ರಕರಣ

ರೋಜಾ ಠಾಣೆ : ಶ್ರೀ ನಾಗರಾಜ ತಂದೆ ಶಾಂತಲಿಂಗಪ್ಪಾ ದುಕಾನಂದಾರ ಸಾ:ಗಾಂದಿ ನಗರ ಗುಲಬರ್ಗಾ ರವರು ನಾನು ಗಂಜ ಬಸ್ ಸ್ಟಾಂಡ ಹತ್ತಿರ ಒಂದು ದುಕಾನ ಇಟ್ಟುಕೊಂಡಿದ್ದ ಅಂಗಡಿಯ ಶೇಟ್ಟರ ಪಟ್ಟಿ ಬೆಂಡಮಾಡಿ ಅಂಗಡಿಯಲ್ಲಿದ್ದ ಗೋಲ್ಡಪ್ಲಾಕ್, ಬ್ರಿಸ್ಟಲ್,  ಕಿಂಗಸೈಜ್ ಗೋಲ್ಡ ಪ್ಲಾಕ್, ವೀಲ್ಸ್ ಸಿಗರೆಟ ಮತ್ತು ಮಾಣಿಕಚಂದ ಗುಟಕಾ ಹೀಗೆ ಒಟ್ಟು 24,060-00 ರೂಪಾಯಿ ಬೆಲೆಬಾಳುವದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಳಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಣೆಯಾದ ಪ್ರಕರಣ :

ಮಹಿಳಾ ಠಾಣೆ : ಶ್ರೀಮತಿ ಶರಣಮ್ಮಾ ತಂದೆ ಸಾಯಿಬಣ್ಣ ಪ್ರಭಾರಿ ಅಧೀಕ್ಷಕರು ರಾಜ್ಯ ಮಹಿಳಾ ನಿಲಯ ಆಳಂದ ರೋಡ ಗುಲಬರ್ಗಾ ರವರು ನಮ್ಮ ಮಹಿಳಾ ನಿಲಯಕ್ಕೆ ಮಾನ್ಯ ಜೆ.ಎಮ್.ಎಫ.ಸಿ. ನ್ಯಾಯಾಲಯ ಗುಲಬರ್ಗಾ ರವರು ಇಂದುಮತಿ ತಂದೆ ಶಂಕರ ಪಟ್ಟೆದಾರ ಸಾ|| ಕೂಡಿ ರವರು ದಾಖಲಾಗುವದಕ್ಕೆ ಆದೇಶ ನೀಡಿದ್ದರಿಂದ ಮಹಿಳಾ ನಿಲಯದಲ್ಲಿದ್ದು ದಿನಾಂಕ: 17-05-2011 ರಂದು ಮಹಿಳಾ ನಿಲಯದ ಇತರರೊಂದಿಗೆ ಸೇರಿ ಕೆಲಸ ಮಾಡುತ್ತಿದ್ದಾಗ ಎಲ್ಲರ ಕಣ್ಣು ತಪ್ಪಿಸಿ ಓಡಿ ಹೋಗಿರುತ್ತಾಳೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: