ಕೊಲೆ ಪ್ರಕರಣ ;
ಅಫಜಲಪೂರ ಠಾಣೆ ;ಶ್ರೀಮತಿ ಮಹಾದೇವಿ ಗಂಡ ಚಂದ್ರಶಾ ಪಾಟೀಲ ಸಾ|| ಬಳೂಂಡಗಿ ಇವರ ಗಂಡನಾದ ಚಂದ್ರಶಾ ಇವನು ದಿನಾಂಕ 22-05-2011 ರಂದು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಅಫಜಲಪೂರದಲ್ಲಿರುವ ರುದ್ರಗೌಡನಿಗೆ ಹಣ ಕೇಳಿ ಬರುತ್ತೆನೆ ಅಂತಾ ಹೋಗಿದ್ದು ದಿನಾಂಕ 23-05-2011 ರಂದು ಯಾರೋ ದುಷ್ಕರ್ಮಿಗಳು ಚಂದ್ರಶಾನಿಗೆ ಗುಂಡು ಹೊಡೆದು ಕಲ್ಲಿನಿಂದ ಜಜ್ಜಿ ಶವವನ್ನು ಖಾಜಾಬಿ ಇವಳ ಹೊಲದ ಬಾವಿಯಲ್ಲಿ ಎಸೆದು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಣಕಸಿದುಕೊಂಡು ಕೊಲೆ ಮಾಡಿದ ಪ್ರಕರಣ ;
ಸುಲೇಪೆಟ ಠಾಣೆ ;ಶ್ರೀ ಸಾಬಣ್ಣಾ ತಂದೆ ಬಸಪ್ಪಾ ಕೋಡ್ಲಿ ಇವರ ಮಗನಾದ ಸಿದ್ದಪ್ಪಾ ಕೋಡ್ಲಿ ಇವನಿಗೆ ಮಾಳಪ್ಪಾ ತಂದೆ ನರಸಪ್ಪಾ ಕೋಡ್ಲಿ ಇವನು ದಿನಾಂಕ 22-05-2011 ರಂದು ರಾತ್ರಿ ಕೋಳಿಯ ಅಡಿಗೆ ಮಾಡಿಸಿದ್ದನೆ ಊಟ ಮಾಡಿ ಅಲ್ಲಿಯೇ ಮಲಗೋಣ ಅಂತಾ ಹೇಳಿ ಸಿದ್ದಪ್ಪನಿಗೆ ಕುಡಹಳ್ಳಿ ಗ್ರಾಮದ ಮಲ್ಲಿನಾಥ ಪೊಲೀಸ ಪಾಟೀಲರವರ ಹೊಲಕ್ಕೆ ಕರೆದುಕೊಂಡು ಹೋಗಿ ಹೊಡೆಬಡೆ ಮಾಡಿ ಗಾಯಗೊಳಿಸಿ ಅವನ ಹತ್ತಿರ ಇದ್ದ ಹಣವನ್ನು ಕಸಿದುಕೊಂಡು ಹೋಗಿದ್ದು ಹೊಡೆಬಡೆ ಗಾಯದಿಂದ ನರಳುತ್ತಿದ್ದ ಸಿದ್ದಪ್ಪನನ್ನು ಉಪಚಾರ ಕುರಿತು ಗುಲಬರ್ಗಾಕ್ಕೆ ಸಾಗಿಸುತ್ತಿದ್ದಾಗ ಮಾರ್ಗಮಧ್ಯದಲ್ಲಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸುಲೇಪೆಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂರು ಕಡೆ ಪ್ರತ್ಯೇಕ ಅಪಘಾತ 3 ಜನರ ಸಾವು ;
ನಲೋಗಿ ಠಾಣೆ ;ಶ್ರೀ ಅರವಿಂದ ತಂದೆ ರುಕ್ಕಯ್ಯಾ ಗುತ್ತೇದಾರ ಸಾ; ವಿದ್ಯಾನಗರ ಗುಲಬರ್ಗಾ ಇವರು ಮನೆಯವರೊಂದಿಗೆ ಗುಡ್ಡಾಪೂರಕ್ಕೆ ಹೋಗಿ ವಾಪಸ ಬರುತ್ತಿರುವಾಗ ದಿನಾಂಕ 22-05-2011 ರಂದು ರಾತ್ರಿ 9 ಗಂಟೆಯ ಸುಮಾರಿಗೆ ಮಂದೇವಾಲ ಜೋಗುರ ಪೆಟ್ರೋಲ ಪಂಪನಲ್ಲಿ ಡಿಜೆಲ್ ಹಾಕಿಸುತ್ತಿರುವಾಗ ಹೆಣ್ಣುಮಕ್ಕಳು ನಿಸರ್ಗಕರೆಗೆ ಹೋಗಿ ರಸ್ತೆ ದಾಟುತ್ತಿರುವಾಗ ಸಿಂದಗಿ ಕಡೆಯಿಂದ ಯಾವುದೋ ಒಂದು ವಾಹನ ಚಾಲಕ ಅತೀ ವೇಗವಾಗಿ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಅಚ್ಚಮ್ಮಳಿಗೆ ಡಿಕ್ಕಿ ಪಡಿಸಿದ್ದರಿಂದ ಸ್ಠಳದಲ್ಲೆ ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ಠಾಣೆ ;ಶ್ರೀ ದೀಪಕ ತಂದೆ ಗುರಪ್ಪಾ ಸಾ; ಖಂಡಾಳ ಇವರ ಹೊಲಕ್ಕೆ ಖಜೂರಿಯ ಶಿವಪ್ಪ @ ಶಿವಾನಂದ ತಂದೆ ಕುಪೆಂದ್ರ ತುಪ್ಪದೊಡ್ಡಿ ಇವರಿಗೆ ಸೇರಿದ ಹೊಸ ಟ್ರ್ಯಾಕ್ಟರ ಇಂಜಿನ ನಂ ಎಸ್ ಜೆ 32714939 ಚಿಸ್ಸಿ ನಂ ಓಎ 27-gÀhÄಡ್ 512 ಸಿ 23701 ನೆದ್ದರಲ್ಲಿ ನಾನು ಮತ್ತು ನಮ್ಮ ಅಣ್ಣ ಬಾಳಾಸಾಬ ನೇಗಿಲು ಹೊಡೆಯಲು ಹೋಗಿದ್ದು ದಿನಾಂಕ 22-05-2011 ರ ರಾತ್ರಿ 11 ಗಂಟೆಯ ಸುಮಾರಿಗೆ ಬಾಲಚಂದ್ರ ಸುರ್ಯವಂಶಿ ಇವರ ಹೊಲದ ಹತ್ತಿರ ಟ್ರ್ಯಾಕ್ಟರ qÉæöÊವರನು ನಿಸ್ಕಾಳಜಿತನದಿಂದ ಹಿಂದಕ್ಕೆ ತಂದಿದು ಪಲ್ಟಿಮಾಡಿದ್ದು ಹಿಂದೆ ಇದ್ದ ನಮ್ಮ ಅಣ್ಣ ಬಾಳಾಸಾಬ ಇವನು ಟ್ರ್ಯಾಕ್ಟರನ ಅಡಿಯಲ್ಲಿ ಸಿಕ್ಕು ಸ್ಠಳದಲ್ಲೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೇವೂರ ಠಾಣೆ ;ದಿನಾಂಕ 23-05-2011 ರಂದು ಟ್ರ್ಯಾಕ್ಟರ ನಂ ಕೆ.ಎ. 38- ಟಿ- 1297 ನೇದ್ದರ ಚಾಲಕ ರವಿ ತಂದೆ ಕಲ್ಲಪ್ಪ ನಾವಿ ಸಾ; ಹಾವಿನ ಹಾಳ ತಾ; ಇಂಡಿ ಜಿ; ಬಿಜಾಪೂರ ಮತ್ತು ವಿಶ್ವನಾಥ ತಂದೆ ಶಿವಣ್ಣ ನಾಮುಜಾನೆ ಇಬ್ಬರು ಕೊಡಿಕೊಂಡು ಟ್ರ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ಆಳಂದ ಕಡೆಗೆ ಹೊಗುತ್ತಿರುವಾಗ ರೇವುರದಿಂದ 1 ಕಿಲೋ ಮೀ ದೂರದಲ್ಲಿ ಟ್ರ್ಯಾಕ್ಟರ ಚಾಲಕನು ತನ್ನ ವಾಹನವನ್ನು ನಿಸ್ಕಾಳಜಿ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ರಸ್ಟೆ ಬದಿ ತೆಗ್ಗಿನಲ್ಲಿ ಪಲ್ಟಿ ಮಾಡಿ ಟ್ರ್ಯಕ್ಟರ ಅಡಿಯಲ್ಲಿ ಚಾಲಕ ಮತ್ತು ವಿಶ್ವನಾಥ ಸಿಲುಕಿ ಭಾರಿ ಗಾಯಗಳಾಗಿ ಅಫಜಲಪೂರ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ವಿಶ್ವನಾಥ ಇವನಿಗೆ ಉಪಚಾರ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ ;
ಶಾಹಾಬಾದ ನಗರ ಠಾಣೆ ;ಶ್ರೀ ದತ್ತಾತ್ರೇಯ ತಂದೆ ನರಸಿಂಹ ಹೊನ್ನಾವರ ಸಾ:ಶರಣನಗರ ಶಹಾಬಾದ. ಇವರ ಮಗಳಾದ ಅರ್ಚನಾ ವ:32 ಇವಳು ನೌಕರಿ ಪಾರಂ ತುಂಬಿ ಬರುತ್ತೇನೆ ಅಂತಾ ಹೇಳಿ ನಿನ್ನ ದಿನಾಂಕ 22-05-11 ರಂದು ಮುಂಜಾನೆ 8 ಎಎಮ್ ಕ್ಕೆ ಸುಮಾರಿಗೆ ಗುಲಬರ್ಗಾಕ್ಕೆ ಹೋಗಿಬರುತ್ತೇನೆ ಅಂದವಳು ಹೊದವಳು ಇಲ್ಲಿಯವರೆಗೆ ಬಂದಿರುವುದಿಲ್ಲಾ. ನಾನು ಮತ್ತು ನನ್ನ ಹೆಂಡತಿ ನಮ್ಮ ಸಂಭಂದಿಕರ ಮನೆ ಹಾಗೂ ಎಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ. ಮತ್ತೆ ಮರಳಿ ಶಹಾಬಾಧಕ್ಕೆ ಬಂದಾಗ ಗೊತ್ತಾಗಿದ್ದೇನೆಂದರೆ, ನನ್ನ ಮಗಳೂ ಅರ್ಚನಾ ಇವಳು ಶಹಾಭಾದ ದಿಂದ ಗುಲಬರ್ಗಾಕ್ಕೆ ಹೋಗುವ ಕುರಿಗು ನಹರು ಚೌಕ ಶಹಾಬಾಧ ದಲ್ಲಿ ಬಂದು ನಿಂತಾಗ ಶಹಾಬಾದದ ಪೀರಪ್ಪಾ @ ರಾಜು ತಂದೆ ಸಾಯಬಣ್ಣಾ ಕೂಲಿ ಸಾ: ಬಸವೇಶ್ವರ ನಗರ ಶಹಾಬಾದ. ಇವನು ನನ್ನ ಮಗಳೀಗೆ ಪುಸಲಾಯಿಸಿ ಮದುವೆ ಮಾಡಿಕೊಳ್ಳೂತ್ತೇನೆ ಅಂತಾ ಒತ್ತಾಯದಿಂದ ಅಪಹರಿಸಿಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment