Police Bhavan Kalaburagi

Police Bhavan Kalaburagi

Tuesday, June 7, 2011

GULBARGA DIST REPORTED CRIMES

ಕಿರುಕುಳ ಪ್ರಕರಣ :-
ಶಹಾಬಾದ ನಗರ ಠಾಣೆ :
ಶ್ರೀಮತಿ ಅಂಬಿಕಾ ಗಂಡ ಮಲ್ಲಿಕಾರ್ಜುನ ತಳವಾರ ಸಾ|| ಮುತ್ತಗಾ ರವರು, ನನ್ನ ಮದುವೆಯಾಗಿ 2 ವರ್ಷಗಳಾಗಿದ್ದು, ಮದುವೆಯಾಗಿ 1 ವರ್ಷದವರೆಗೆ ನನ್ನ ಗಂಡ,ಅತ್ತೆ,ಮಾವಂದಿರೊಂದಿಗೆ ಮುತ್ತಗಾ ಗ್ರಾಮದಲ್ಲಿದ್ದೇವು. ನನ್ನ ಗಂಡ ಮಲ್ಲಿಕಾರ್ಜುನ ಅತ್ತೆ ನಿಂಗಮ್ಮಾ ಮಾವ ನಾಗಣ್ಣಾ ಮಾವನ ತಮ್ಮ ನಿಂಗಣ್ಣಾ ಇವರು ಆಗಾಗ ನನಗೆ ಕೆಲಸ ಸರಿಯಾಗಿ ಮಾಡುವದಿಲ್ಲ ಅಡಿಗೆ ಮಾಡುವದಿಲ್ಲ ಅಂತಾ ಕಿರುಕುಳ ಕೊಡುತ್ತಿದ್ದರು ಹೀಗಿರುವಾಗ ದಿ:20-05-11 ರಂದು ಸಾಯಂಕಾಲ ನನ್ನ ಗಂಡ, ಅತ್ತೆ, ಮಾವ, ಮಾವನ ತಮ್ಮ ಕೂಡಿ ನನಗೆ ಅವಾಚ್ಯ ಶಬ್ದಗಳಿಂದ ಬೈಯ್ದು, ನಿನಗೆ ಅಡಿಗೆ ಮಾಡಲು ಬರುವದಿಲ್ಲ ಕೆಲಸ ಸರಿಯಾಗಿ ಮಾಡಲು ಬರುವದಿಲ್ಲ ಅಂತಾ ಕಿರುಕುಳ ಕೊಟ್ಟಿದ್ದು ಮತ್ತು ನನ್ನ ಗಂಡನು ಕೈಯಿಂದ ಹೊಡೆದಿರುತ್ತಾನೆ. ಕಾರಣ ನನ್ನ ಗಂಡ ಅತ್ತೆ, ಮಾವ, ಮಾವನ ತಮ್ಮ ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸರಗಳ್ಳತನ ಪ್ರಕರಣ :-
ಎಂ.ಬಿ.ನಗರ ಠಾಣೆ :
ಶ್ರೀಮತಿ ಪುಷ್ಪಾ ಗಂಡ ಶಂಕರ ಗಾಜರೆ ಸಾ: ತಿಲಕ ನಗರ ಕಾಲೋನಿ ಕುಸನೂರ ರೋಡ ಗುಲಬರ್ಗಾ ರವರು, ದಿ: 06-06-11 ರಂದು ನಾನು ಮತ್ತು ನನ್ನ ಮಗಳು ನಿವೇದಿತ ಇಬ್ಬರು ಕೂಡಿಕೊಂಡು ಜಯನಗರದಲ್ಲಿರುವ ಕೇತಕಿ ಆಸ್ಪತ್ರೆಗೆ ಹೋಗು ಮರಳಿ ಮನೆಗೆ ಬರುವಾಗ 8-20 ಪಿ.ಎಂ.ಕ್ಕೆ ಡಾಕ್ಟರ ಕಾಲೂನಿಯ ಆಲದ ಮರದ ಸಮೀಪ ನಡೆದುಕೊಂಡು ಹೋಗುತ್ತಿರುವಾಗ, ಎದುರಿನಿಂದ ಬಂದ ಹೀರೋ ಹೊಂಡಾ ಮೋಟಾರ ಸೈಕಲ್ ಸವಾರನು ನನ್ನ ಕೊರಳಿಗೆ ಕೈಹಾಕಿ ಕೊರಳಲ್ಲಿ ಇದ್ದ 3 1/2 ತೊಲೆ ಮಂಗಳ ಸೂತ್ರ ಅಂದಾಜು 72,000/- ರೂ. ಬೆಲೆಬಾಳುವದನ್ನು ದೋಚಿಕೊಂಡು ಹೋಗಿರುತ್ತಾನೆ. ಕಾರಣ ಸದರ ಕಳ್ಳನನ್ನು ಪತ್ತೆ ಹಚ್ಚಿ, ಕಳುವಾದ ಬಂಗಾರದ ಮಂಗಳ ಸೂತ್ರ ಪತ್ತೆ ಮಾಡುವ ಕಾನೂನು ಕ್ರಮ ಜರುಗಿಸಬೇಕು. ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಎಂ.ಬಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :-
ಆಳಂದ ಠಾಣೆ :
ಶ್ರೀಮತಿ ಶಾಂತಾಬಾಯಿ ಗಂಡ ಗುರಲಿಂಗಪ್ಪಾ ಸಾ: ತಂಬಾಕವಾಡಿ ರವರು, ದಿ: 06-06-11 ರಂದು ನನ್ನ ಗಂಡ ಗುರುಲಿಂಗಪ್ಪಾ ಇತನು ಮತ್ತಿತರ ಜನರ ಜೊತೆ ಆಳಂದದಿಂದ ತಂಬಾಕವಾಡಿಗೆ ಆಟೋ ನಂ. ಕೆ.ಎ 32 ಎ 5152 ರಲ್ಲಿ ಕುಳಿತು ತಡಕಲ್ ಮಾರ್ಗವಾಗಿ ಹೋಗುವಾಗ ಚಾಲಕ ಲಕ್ಷ್ಮಣ ತಂದೆ ಸಾಯಬಣ್ಣ ಸನಗುಂದಿ ಇತನು ತನ್ನ ಆಟೋವನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿ ಪಲ್ಟಿ ಮಾಡಿದ್ದರಿಂದ ನನ್ನ ಗಂಡನಿಗೆ ಭಾರಿ ಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಮತ್ತು ಉಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅಪಘಾತದ ನಂತರ ಚಾಲಕನು ಓಡಿಹೋಗಿರುತ್ತಾನೆ. ಕಾರಣ ಸದರಿ ಚಾಲಕನ ಮೇಲೆ ಕಾನೂನು ಸೂಕ್ತ ಕ್ರಮ ಕೈಕೊಳ್ಳಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :-
ಸಂಚಾರಿ ಠಾಣೆ :
ಶ್ರೀ ಅಂಬಣ್ಣಾ ತಂದೆ ವಿಠೋಬಾ ಅಂಕಲಗಿ ಸಾ : ಜೇವರ್ಗಿ ಕಾಲೋನಿ ಗುಲಬರ್ಗಾ ರವರು, ನಾನು ದಿ: 5-6-11 ರಂದು ಮಧ್ಯಾಹ್ನ ನನ್ನ ಮೋಟಾರ ಸೈಕಲ್ ಸಂ. ಕೆಎ 32 ಎಲ್ 9340 ನೇದ್ದರ ಮೇಲೆ ಕುಳಿತು ಹನುಮಾನ ಗುಡಿ ಹತ್ತಿರ ಬರುತ್ತಿರುವಾಗ, ಜಿಜಿಎಚ್ ಕಡೆಯಿಂದ ಬಂದ ಆಟೋ ನಂ. ಕೆಎ 32 ಬಿ 4260 ನೇದ್ದರ ಚಾಲಕ ತನ್ನ ಆಟೋವನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನನ್ನ ಮೋಟಾರ ಸೈಕಲ್ ಗೆ ಅಪಘಾತಪಡಿಸಿ ಆಟೋ ಸಮೇತ ಓಡಿ ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: