ಅವಾಚ್ಯ ಶಬ್ದಗಳಿಂದ ಬೈಯ್ದು ಜೀವದ ಬೆದರಿಕೆ ಹಾಕಿದ ಪ್ರಕರಣ :-
ಬ್ರಹ್ಮಪುರ ಠಾಣೆ : ಶ್ರೀಮತಿ ರಮಾದೇವಿ ಮಾಡಗಿ ಸಾ|| ಜಗತ್ ಗುಲಬರ್ಗಾ ರವರು, ಮಹ್ಮದ ಹಾರುನ ಖಾದರ ಮತ್ತು ಇಮ್ರಾನ್ ತಂದೆ ಜಾವಿದ ಇವರು ಸುಮಾರು ವರ್ಷಗಳಿಂದ ನಮ್ಮ ಕಾಂಪ್ಲೆಕ್ಸನಲ್ಲಿ ಅನಧಿಕೃತವಾಗಿ ಬಾಡಿಗೆ ಇರುತ್ತಾರೆ. ನಾನು ಬಾಡಿಗೆ ಕೇಳಿದಾಗ ಅವಾಚ್ಯ ಶಬ್ದಗಳಿಂದ ಬೈಯ್ದು ಬಾಡಿಗೆ ಕೊಡುವುದಿಲ್ಲ. ಈ ವಿಷಯದ ಬಗ್ಗೆ ನಮ್ಮ ವಿರುದ್ದ ದೂರು ಕೊಟ್ಟಲ್ಲಿ ನನಗೆ ಹಾಗೂ ನನ್ನ ಮಕ್ಕಳಿಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆ. ಕಾರಣ ಸದರಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ಮದ್ಯ ವಶ ಇಬ್ಬರ ಬಂಧನ :-
ರೋಜಾ ಠಾಣೆ :ರಾಮಜಿ ನಗರದ ಬುದ್ದ ಮಂದಿರದ ಗಲ್ಲಿಯಲ್ಲಿ ಯಾವುದೇ ದಾಖಲಾತಿ ಇಲ್ಲದೇ ಅನಧಿಕೃತವಾಗಿ ಕ್ವಾಟರ ಬಾಟಲ್ ಗಳನ್ನು ಮಾರಾಟ ಮಾಡುತ್ತಿದ್ದ ಅರ್ಜುನ್ ತಂದೆ ಮಲಕಪ್ಪ ಕುಂಟೆ ಮತ್ತು ನೀಲಕಂಠ ತಂದೆ ಹಣಮಂತರಾಯ ಇಬ್ಬರೂ ಸಾ|| ರಾಮಜಿ ನಗೆರ ಗುಲಬರ್ಗಾ ರವರನ್ನು ಬಂಧಿಸಿದ್ದು, ಬಂಧಿತರಿಂದ ಯು.ಎಸ್ ವಿಸ್ಕಿಯ 180 ಎಮ್ಎಲ್ ದ ಬಾಟಲ್ ಗಳನ್ನು ಮತ್ತು ನಗದು ಹಣ 1075/- ರೂ. ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೈದ್ಯರ ನಿರ್ಲಕ್ಷತನದಿಂದ ಸಾವು ಸಂಭವಿಸಿದ ಪ್ರಕರಣ :-
ಅಶೋಕ ನಗರ ಠಾಣೆ :ಶ್ರೀ ಅಮೃತ ತಂದೆ ಬಾಪಣ್ಣ ಸಿಂಧೆ ಸಾ|| ರಾಮನಗರ ರಿಂಗ ರೋಡ ಗುಲಬರ್ಗಾ ರವರು ತಮ್ಮ ಹೆಂಡತಿ ಸರಸ್ವತಿ ಇವರಿಗೆ ಹೆರಿಗೆ ಕುರಿತು ಸಂಗಮೇಶ್ವರ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿಸಿ ನಂತರ ಅದೇ ಆಸ್ಪತ್ರೆಯಲ್ಲಿ ದಿ: 16/03/2011 ರಂದು ಡಾ|| ಇಂದಿರಾ ಹಾಗೂ ಸಹ ವೈದ್ಯಾದಿಕಾರಿಗಳು ಪ್ಯಾಮಿಲಿ ಪ್ಲಾನಿಂಗ ಆಫರೆಶನ್ ಮಾಡಿ ಡಿಚಾರ್ಜ ಮಾಡಿದ ನಂತರ ಆಫರೆಶನ್ ಮಾಡಿದ ಸ್ಥಳದಲ್ಲಿ ಹೊಲಿಗೆ ಬಿಚ್ಚಿದ್ದರಿಂದ ಪುನಃ ಸಂಗಮೇಶ್ವರ ಆಸ್ಪತ್ರೆಗೆ ದಾಖಲು ಮಾಡಲಾಗಿ ಮತ್ತೊಮ್ಮೆ ಆಫರೆಶನ್ ಮಾಡಿದ್ದು ನಂತರ ಐದಾರು ದಿವಸಗಳ ನಂತರ ಎದೆ ಕೆಳಗಡೆ ಗುಳ್ಳಿ ಆಗಿದ್ದು ಅದು ಬೆಳೆಯುತ್ತಾ ದೊಡ್ಡದಾಗಿ ಅದಕ್ಕೂ ಸಹ ಆಫರೆಶನ್ ಮಾಡಬೆಕಾಗಿದೆ ಎಂದು ದಿ:05- 04-11 ರಂದು ಮತ್ತೊಮ್ಮೆ ಆಫರೆಶನ್ ಮಾಡಿದ್ದು ಹೀಗೆ 3 ಭಾರಿ ಆಫರೆಶನ್ ಮಾಡಿದ್ದರಿಂದ ನನ್ನ ಹೆಂಡತಿ ಸರಸ್ವತಿ ಪರಸ್ಥಿತಿ ತುಂಬಾ ಕೆಟ್ಟು ಹೊಗಿದ್ದು ಗುಣಮುಖ ಆಗದೆ ಇರುವದರಿಂದ ದಿ:11/04/2011 ರಂದು ಡಾ||ಇಂದಿರಾರವರು ಬಸವೇಶ್ವರ ಆಸ್ಪತ್ರೆಗೆ ಪತ್ರ ಬರೆದು ಕಳುಹಿಸಿಕೊಟ್ಟಿದ್ದು ಬಸವೇಶ್ವರ ಆಸ್ಪತ್ರೆಯಲ್ಲಿ ಡಾ|| ಸುರೇಶ ಚಿಂಚೋಳಿಕರ ಮತ್ತು ಅವರ ಸಹಾಯಕರು ನನಗೆ ಪೆಸೆಂಟಗೆ ಎನಾಗಿದೆ ಅಂತಾ ಯಾವುದೆ ವಿಷಯ ಅಲ್ಲಿಯೂ ಸಹ ತಿಳಿಸದೆ ಐ.ಸಿ.ಯು ರೂಂನಲ್ಲಿ 2 ದಿವಸ ಉಪಚಾರ ಮಾಡಿ ಮತ್ತೆ ಪರಸ್ಥೀತಿ ಬಿಗಡಾಯಿದ್ದರಿಂದ ಹೆಚ್ಚಿನ ಉಪಚಾರಕ್ಕಾಗಿ ದಿ:13/04/2011 ರಂದು ಬಸವೇಶ್ವರ ಆಸ್ಪತ್ರೆಯಿಂದ ನನ್ನ ಹೆಂಡತಿಗೆ ಸೊಲ್ಲಾಪೂರದ ಯಶೋಧರಾ ಆಸ್ಪತ್ರೆಗೆ ತೆಗೆದುಕೊಂಡು ಹೊಗಿದ್ದು ಅಲ್ಲಿಯ ವೈದ್ಯಾಧಿಕಾರಿಗಳು ನನ್ನ ಹೆಂಡತಿಗೆ ಪರಿಕ್ಷಿಸಿ ನಿಮ್ಮ ಹೆಂಡತಿಗೆ 3 ಬಾರಿ ಆಫರೆಶನ ಮಾಡಿದ್ದರಿಂದ ಬಾಡಿ ತುಂಬಾ ಇನ್ ಪೆಕ್ಷನ್ ಆಗಿದೆ ಪೆಸೆಂಟ ತುಂಬಾ ಸಿರಿಯಸ್ ಆಗಿದೆ ಅಂತಾ ತಿಳಿಸಿ ತಮ್ಮ ಆಸ್ಪತ್ರೆಯಲ್ಲಿ 2 ದಿವಸಗಳ ಕಾಲ ಉಪಚಾರ ಮಾಡಿದರೂ ಸಹ ಸರಸ್ವತಿಗೆ ಉಪಚಾರ ಪಲಕಾರಿಯಾಗದೆ ದಿ:15/04/2011 ರಂದು ಮೃತಪಟ್ಟಿರುತ್ತಾಳೆ. ನನ್ನ ಹೆಂಡತಿಗೆ 3 ಬಾರಿ ಆಫರೆಶನ್ ಮಾಡಿ ಯಾವುದೆ ವಿಷಯವನ್ನು ಸರಿಯಾಗಿ ತಿಳಿಸದೆ ಅಲಕ್ಷತನದಿಂದ ಮತ್ತು ನಿಸ್ಕಾಳಜಿತನದಿಂದ ಆಫರೆಶನ ಮಾಡಿದ ಡಾ||ಇಂದಿರಾ ಮತ್ತು ಪೆಸೆಂಟಗೆ ಎನಾಗಿರುತ್ತದೆ ಎನ್ನುವ ವಿಷಯ ತಿಳಿಸದೆ 2 ದಿವಸ ನಿಸ್ಕಾಳಜಿತನದಿಂದ ಉಪಚಾರ ಮಾಡಿದ ಬಸವೇಶ್ವರ ಆಸ್ಪತ್ರೆಯ ಡಾ|| ಸುರೇಶ ಚಿಂಚೋಳಿಕರ ರವರ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment