ಜಾತಿ ನಿಂದನೆ ಮಾಡಿ, ಹಲ್ಲೆ ಮಾಡಿದ ಪ್ರಕರಣ :-
ಸ್ಟೇಷನ ಬಜಾರ ಠಾಣೆ :ಶ್ರೀ ಶ್ರಿಮಂತ ತಂದೆ ಸೈಬಣ್ಣ ಪಟ್ಟೇದಾರ ಹಾವ|| ಪಿ.ಡಬ್ಲು.ಡಿ ಕ್ವಾಟರ್ಸ ಹಳೇ ಜೇವರ್ಗಿ ರಸ್ತೆ ಗುಲಬರ್ಗಾ ರವರು, ದಿ: 08-06-11 ರಂದು ಅಮರನಾಥ.ಎನ್.ಪಾಟೀಲ ಅಧ್ಯಕ್ಷರು (ಹೆಚ್.ಕೆ.ಎ.ಡಿ.ಬಿ) ಕಛೇರಿ ಗುಲಬರ್ಗಾ ಸಂಗಡ 15-20 ಜನರು ನನಗೆ ಮನೆಗೆ ಕರೆದು ಅವಾಚ್ಯ ಶಬ್ದಗಳಿಂದ ಬೈಯ್ದು ನಿನಗೆ ಎಷ್ಟು ಸೊಕ್ಕು, ಕರೆದರು ಬರುತ್ತಿಲ್ಲಾ ಮೇಡಂ ಇವರಿಗೆ ನಾನು ಬಂದಿದ್ದು ತಿಳಿಸು ಅಂತಾ ಹೇಳಿದರೂ ನೀನು ಯಾಕೆ ತಿಳಿಸಲಿಲ್ಲಾ ಅಂದಾಗ ನಿವೇನು ನನಗೆ ಹೇಳಿಲ್ಲಾ ಸರ್ ಆದ್ದರಿಂದ ತಿಳಿಸಿಲ್ಲಾ ಅಂತಾ ನಾನು ಹೇಳಿದ್ದು, ಆಗ ಅದ್ಯಕ್ಷರು ಮತ್ತೆ ಅವಾಚ್ಯ ಶಬ್ದಗಳಿಂದ ಬೈಯ್ದು, ಜಾತಿ ನಿಂದನೆ ಮಾಡಿ ಹೊಡೆ-ಬಡೆ ಮಾಡಿದ್ದು ಅಲ್ಲದೇ, ಕೆಳಗಡೆ ನಿಂತ 15-20 ಜನರಿಗೆ ಕರೆಯಿಸಿ ಹೊಡೆಬಡೆ ಮಾಡಿಸಿದ್ದಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ ಪ್ರಕರಣ :-
ಚಿಂಚೋಳಿ ಠಾಣೆ :ಶ್ರೀ ಶಂಕರ ತಂದೆ ಕುಮ್ಲಾನಾಯಕ ರಾಠೋಡ ಸಾ|| ಕುಮ್ಲಾನಾಯಕ ತಾಂಡಾ ಚೆನ್ನೂರ ರವರು, ನಾನು ಮತ್ತು ನನ್ನ ತಾಯಿ ಪುನಿಬಾಯಿ ಮತ್ತು ತಂದೆ ಕುಮ್ಲಾನಾಯಕ ರಾಠೋಡ, ಮೂರು ಜನ ನಮ್ಮ ಹೊಲದಲ್ಲಿ ಬಿತ್ತುದ್ದಿದ್ದಾಗ ಬಾಜು ಹೋಲದವರಾದ ಚನ್ನೂರ ಗ್ರಾಮದ ರಾಜೇಪ್ಪಾ ತಂದೆ ವಿಠ್ಠಲ್ ಮುಸ್ತರಿ , ಹಣಮಂತ ತಂದೆ ವೀಠ್ಠಲ್ ಮುಸ್ತರಿ, ಶಾಂತಪ್ಪಾ ತಂದೆ ವೀಠ್ಠಲ್ ಮುಸ್ತರಿ, ಪ್ರಭಾವತಿ ಗಂಡ ರಾಜೇಪ್ಪಾ ಮುಸ್ತರಿ, ಜಗದೇವಿ ಗಂಡ ಪುಂಡಲೀಕ ಮುಸ್ತರಿ, ಹಾಗೂ ರೇಣುಖಾ ಗಂಡ ವೈಜೇಪ್ಪಾ ಮುಸ್ತರಿ ಈ ಆರು ಜನರು ಕೂಡಿಕೊಂಡು ನಮ್ಮ ಹೊಲದೊಳಗೆ ಅತೀಕ್ರಮ ಪ್ರವೇಶ ಮಾಡಿ ನಿನ್ನ ಎತ್ತುಗಳು ನನ್ನ ಹೋಲದಲ್ಲಿ ಯಾಕೇ ಬಂದಿವೆ? ಅಂತಾ ಅವಾಚ್ಯ ಶಬ್ದಗಳಿಂದ ಜಾತಿ ಎತ್ತಿ ಬೈದು, ಹೊಡೆ ಬಡೆ ಮಾಡಿದ್ದು, ಬಿಡಿಸಲು ಬಂದ ನಮ್ಮ ತಂಗಿಯಾದ ಅಂಜುನಾಬಾಯಿ ಇವಳಿಗೂ ಹೊಡೆ ಬಡೆ ಮಾಡಿರುತ್ತಾರೆ. ಅಲ್ಲದೇ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿತುತ್ತಾರೆ. ಕಾರಣ ನಮಗೆ ಹೊಡೆಬಡೆ ಮಾಡಿ ಜೀವ ಬೆದರಿಕೆ ಹಾಕಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :-
ಎಂ.ಬಿ.ನಗರ ಠಾಣೆ :ಶ್ರೀ.ಮಾಬುಸಾಬ ತಂದೆ ಗೋಕುಲಸಾಬ ಅರಗಂಜಿ ಸಾ|| ಮುದುಗಲ್ ತಾ;ಲಿಂಗಸೂರ ಜಿ:ರಾಯಚೂರ ಹಾವ. ಜಾಗೃತಿ ಕಾಲೋನಿ ಗುಲಬರ್ಗಾ.ರವರು, ದಿ: 28-05-11 ರಂದು ಸ್ಪಂದನ ಸ್ಪೂರ್ತಿ ಫೈನಾನ್ಸ ಗುಲಬರ್ಗಾ-3 ನೆದ್ದರ ಬ್ರ್ಯಾಂಚಗೆ ಸಿಬಾಜಿ ಅನಿಮಿ ಎಂಬುವವರು ಮುಖ್ಯ ಕಛೇರಿಯಿಂದ ( ಹೆಚ.ಓ) ಬ್ಯ್ರಾಂಚ ಮ್ಯಾನೇಜರ ಆಗಿ ತರಬೇತಿಗಾಗಿ ಬಂದಿದ್ದು ರಾತ್ರಿ ನನ್ನೊಂದಿಗೆ ಇರುತ್ತಿದ್ದು . ಹೀಗಿದ್ದು ದಿನಾಂಕ.8-6-2011 ರಂದು ರಾತ್ರಿ 12-00 ಗಂಟೆಯ ಸುಮಾರಿಗೆ ನಮ್ಮ ಬ್ಯಾಂಕನಲ್ಲಿ ಸಿಬ್ಬಂದಿಯವರಾದ ಅನೀಲ್ , ಪ್ರಕಾಶ , ಬನದೇಶ್ವರ ಎಲ್ಲರೂ ಒಂದು ರೂಮಿನಲ್ಲಿ ಮಲಗಿಕೊಂಡರು ನಾನು ಮತ್ತು ಸಿಬಾಜಿ ಅನಿಮಿ ಇಬ್ಬರು ಲಾಕರ ರೂಮಿನಲ್ಲಿ ಮಲಗಿಕೊಂಡಾಗ ರಾತ್ರಿ ವೇಳೆ ನನ್ನ ತಲೆದಿಂಬಿನ ಕೆಳಗೆ ಇದ್ದ ಲಾಕರ ಚಾವಿಯನ್ನು ಸಿಬಾಜಿ ಅನಿಮಿ ತೆಗೆದುಕೊಂಡು, ಲಾಕರದಲ್ಲಿ ಇದ್ದ 2,32,360=50/- ರೂ ಮತ್ತು ನನ್ನ ಮೋಬಾಲ ಅಕಿ.1000/- ರೂ ಬೆಲೆಬಾಳುವದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾನೆ. ಕಾರಣ ಅವನನ್ನು ಪತ್ತೆ ಹಚ್ಚಿ ಅವನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಎಂ.ಬಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :-
ಚೌಕ ಠಾಣೆ :ಶ್ರೀ ಶಿವಪುತ್ರಪ್ಪಾ ತಂದೆ ಚೆನ್ನಪ್ಪ ಚಿಂಚೋಳಿ ಸಾ: ಮಹಾಂತ ನಗರ ಗುಲಬರ್ಗಾ ರವರು, ನಾನು ದಿ: 09-06-11 ರಂದು ನೆಹರು ಗಂಜದ ಹೆಚ್ ಬಿ & ಕಂಪನಿಯ ಮಾಲಿಕರಿಗೆ ಭೇಟಿಯಾಗಲು ನನ್ನ ಕಾರಿನಲ್ಲಿ ಹೋಗಿದ್ದು, ಭೇಟಿಯಾಗಿ ಮರಳಿ ಬರುವಷ್ಟರಲ್ಲಿ ಯಾರೋ ಅಪರಿಚಿತ ಕಳ್ಳರು ನನ್ನ ಕಾರಿನ ಗ್ಲಾಸನ್ನು ಒಡೆದು ಕಾರನಲ್ಲಿದ್ದ ನಗದು ಹಣ 61,550/- ರೂ. ಇದ್ದ ಬ್ಯಾಗನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ಶವ ಪತ್ತೆ :-
ಜೇವರ್ಗಿ ಠಾಣೆ :ಶ್ರೀ ಮಲ್ಲಯ್ಯ ತಂದೆ ಸೈದಪ್ಪಾ ಗುತ್ತೆದಾರ ಸಾ: ಇಜೇರಿ ತಾ: ಜೇವರ್ಗಿ ರವರು, ಜೇವರ್ಗಿ – ಶಹಾಪುರ ರೋಡಿನ ಪೂರ್ವಕ್ಕೆ ಚಿಗರಳ್ಳಿ ಸೀಮೇಯಲ್ಲಿರುವ ಅರಣ್ಯ ಇಲಾಖೆಯ ಜಮೀನಿನಲ್ಲಿ ಯಾರೋ ಅಪರಿಚಿತ ವ್ಯಕ್ತಿಗಳು ಅಪರಿಚಿತ ಹೆಣ್ಣು ಮಗಳನ್ನು ಕೊಲೆ ಮಾಡಿ ಶವವನ್ನು ತಂದು ಹಾಕಿದ್ದು, ಮೈಮೇಲೆ ಹಸಿರು ಬಣ್ಣದ ಒಳಗೆ ಕಪ್ಪು ಚೌಕಡಿಯ ಗೆರೆಯಿದ್ದ ಪಾಲಿಸ್ಟರ ಸೀರೆ, ಬಿಳಿ ಬಣ್ಣದ ಜಂಪರ, ಬಿಳಿ ಬಣ್ಣದ ಲಂಗಾ ಧರಿಸಿದ್ದು, ಅಂದಾಜು 40 ರಿಂದ 45 ವರ್ಷ ವಯಸ್ಸಿನವಳಿರಬಹುದು. ಕಾರಣ ಕೊಲೆ ಮಾಡಿದವರನ್ನು ಪತ್ತೆ ಹಚ್ಚಿ ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment