:: ಪತ್ರಿಕಾ ಪ್ರಕಟಣೆ ::
ದಿನಾಂಕ: 9-6-11 ರಂದು ಶ್ರೀ ಮಲ್ಲಯ್ಯ ತಂದೆ ಸೈದಪ್ಪ ಗುತ್ತೇದಾರ ಸಾ: ಇಜೇರಿ ಇವರು ಜೇವರಗಿ ಠಾಣೆಗೆ ಹಾಜರಾಗಿ ಲಿಖಿತ ಅರ್ಜಿ ಸಲ್ಲಿಸಿದ್ದರ ಸಾರಾಂಶವೇನೆಂದರೆ ಈಗ 2-3 ದಿವಸಗಳ ಹಿಂದೆ ಜೇವರಗಿ-ಶಹಾಪೂರ ರೋಡಿನ ಪಕ್ಕದಲ್ಲಿ ಚಿಗರಳ್ಳಿ ಸೀಮೆಯಲ್ಲಿರುವ ಅರಣ್ಯ ಇಲಾಖೆ ಜಮೀನಿನಲ್ಲಿ ಯಾರೋ ದುಷ್ಕರ್ಮಿಗಳು ಯಾವುದೋ ಒಂದು ಬಲವಾದ ಕಾರಣಕ್ಕಾಗಿ ಅಂದಾಜು 40 ರಿಂದ 45 ವರ್ಷ ವಯಸ್ಸಿನ ಅಪರಿಚಿತ ಹೆಣ್ಣು ಮಗಳಿಗೆ ಅವಳು ಉಟ್ಟುಕೊಂಡ ಸಿರೇಯಿಂದಲೆ ಕುತ್ತಿಗೆಗೆ ಉರಲು ಹಾಕಿ ಕೊಲೆ ಮಾಡಿ ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಹೆಣವನ್ನು ಸ್ಥಳದಿಂದ ಸ್ವಲ್ಪ ದೂರ ಎಳೆದು ಕಂಠಿಯ ಕೆಳಗಡೆ ಬಿಸಾಕಿ ಹೋಗಿರುತ್ತಾರೆ. ಅಂತಾ ಕೊಟ್ಟ ಅರ್ಜಿಯ ಮೇಲಿಂದ ಜೇವರಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ತನಿಖೆ ಕಾಲಕ್ಕೆ ಮೃತ ದೇಹವು ಬಸಮ್ಮ ಗಂಡ ಬೈಲಪ್ಪ ಮ್ಯಾಳಗಿ ವಯ: 46 ವರ್ಷ ಸಾ: ಶಹಾಪೂರ ಇವಳದು ಅಂತಾ ಅವರ ಸಂಬಂಧಿಕರು ಗುರುತಿಸಿ ಅವಳಿಗೆ
ದಿ:7-6-11 ರಂದು ಶಹಾಪೂರ ಪಟ್ಟಣದ ಆಯೇಶಾ ಗಂಡ ಸಲೀಂ ಪಾಶಾ ಸಗರ ಇವಳು ತನ್ನ ಸಂಗಡ ಮನೆಯಿಂದ ಕರೆದುಕೊಂಡು ಹೋಗಿದ್ದು ಅವಳೆ ಬಸಮ್ಮಳಿಗೆ ಕೊಲೆ ಮಾಡಿಸಿರಬಹುದು ಅಂತಾ ಹೇಳಿಕೆ ನೀಡಿದ್ದರಿಂದ ಅಂದಿನಿಂದ ಸಂಶಯಾಸ್ಪದ ಆಯೇಶಾ ಇವಳಿಗೆ ವಿಚಾರಣೆಗೊಳಪಡಿಸಿದಾಗ ಅವಳು ಹೇಳಿದ್ದೇನೆಂದರೆ, ನಾನು ಬೇರೆಯವರ ಸಂಗಡ ಅನೈತಿಕ ಸಂಬಂಧ ಇಟ್ಟುಕೊಂಡ ವಿಷಯ ಬಸಮ್ಮ ಇವಳು ಹೊರ ದೇಶದಲ್ಲಿರುವ ನನ್ನ ಗಂಡನಿಗೆ ಮಾಹಿತಿ ತಿಳಿಸುತ್ತಿರುವದರಿಂದ ಗುಲಬರ್ಗಾ ನಗರದ 1. ಅರವಿಂದ ತಂದೆ ಕಾಂತಪ್ಪ ಕೂಡಿ 2. ಖಾಸಿಂಸಾಬ ತಂದೆ ಭಕ್ತರಸಾಬ ಮುಲ್ಲಾ 3. ರಮೇಶ ತಂದೆ ಮಹೇಶ ರಾಠೋಡ 4. ಯಲ್ಲಪ್ಪ ತಂದೆ ಮಾರುತಿ ದೊಡ್ಡಮನಿ ಇವರಿಗೆ ಬಸಮ್ಮಳಿಗೆ ಕೊಲೆ ಮಾಡಲು 15000/- ರೂ. ಕೊಡುವದಾಗಿ ಹೇಳಿದಕ್ಕೆ ಅವರು ಒಪ್ಪಿಕೊಂಡಿದ್ದರಿಂದ ಎಲ್ಲರೂ ಕೂಡಿ ಅವಳಿಗೆ ಕೊಲೆ ಮಾಡಿರುತ್ತೇವೆ. ಅಂತಾ ಹೇಳಿದಕ್ಕೆ ಇನ್ನೂಳಿದ 4 ಜನ ಆರೋಪಿತರನ್ನು ದಸ್ತಗೀರಿ ಮಾಡಿಕೊಂಡು ಬಂದು ವಿಚಾರಣೆ ಮಾಡಿದ್ದು, ದಿ: 7-6-11 ರಂದು ಆಯೇಶಾ ಇವಳು ನನ್ನ ಗಂಡ ಹೊರದೇಶದಿಂದ ಜೇವರಗಿಗೆ ಪಾರ್ಸಲ ಕಳುಹಿಸುತ್ತಿದ್ದಾನೆ ಜೇವರಗಿಗೆ ಹೋಗಿ ತೆಗೆದುಕೊಂಡು ಬರೋಣ ನಡಿ ಅಂತಾ ನಂಬಿಸಿ ಬಸಮ್ಮಳಿಗೆ ತನ್ನ ಸಂಗಡ ಜೇವರಗಿಗೆ ಕರೆದುಕೊಂಡು ಬಂದಾಗ ಮೇಲ್ಕಂಡ ಆರೋಪಿತರು ಗುಲಬರ್ಗಾದಿಂದ ಅಟೋ ನಂ, ಕೆಎ-32-ಬಿ-2851 ರಲ್ಲಿ ಚಿಗರಳ್ಳಿ ಕ್ರಾಸಿಗೆ ಬಂದು ಇಳಿದು ನಂತರ ಆರೋಪಿ ಖಾಸೀಂಸಾಬನು ಮರಳಿ ಜೇವರಗಿಗೆ ಬಂದು ಬಸಮ್ಮ ಮತ್ತು ಆಯೇಶಾ ಇಬ್ಬರಿಗೆ ಅದೆ ಅಟೋದಲ್ಲಿ ಶಹಾಪೂರಕ್ಕೆ ಹೋಗುವ ನೆಪ ಮಾಡಿಕೊಂಡು ಚಿಗರಳ್ಳಿ ಸಿಮೇಯ ಅರಣ್ಯ ಇಲಾಖೆಯ ಜಮೀನಿನವರೆಗೆ ಕರೆದುಕೊಂಡು ಹೋಗಿ ಅಲ್ಲಿ ಅಟೋ ನಿಲ್ಲಿಸಿ ಎಲ್ಲರೂ ಕೂಡಿ ಬಸಮ್ಮಳಿಗೆ ರೋಡಿನ ಪಕ್ಕದ ಕಂಠಿಯ ಹತ್ತಿರ ಕರೆದುಕೊಂಡು ಹೋಗಿ ಕುತ್ತಿಗೆ ಒತ್ತಿ ಕೊಲೆ ಮಾಡಿ ಶವ ಯಾರಿಗೂ ಕಾಣಬಾರದೆಂದು ಕಂಠಿಯ ಕೆಳಗೆ ಎಳೆದು ಹಾಕಿರುವದಾಗಿ ಒಪ್ಪಿಕೊಂಡಿರುತ್ತಾರೆ. ತನಿಖೆ ನಂತರ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
No comments:
Post a Comment