ಶಹಾಬಾದ ನಗರ ಠಾಣೆ :ಶ್ರೀ ಬಸವರಾಜ ತಂದೆ ಶರಣಯ್ಯಾ ಮಠಪತಿ ರವರು, ನನ್ನ ಹಳೆ ಗೆಳೆಯ ಶಿಗ್ಗಾಂವ ತಾಲ್ಲೂಕಿನ ಪಾಣೆಗಟ್ಟಿ ಗ್ರಾಮದ ಮಂಜುನಾಥ ತಂದೆ ಶಿವಲಿಂಗಯ್ಯ ಹಿರೇಮಠ ಈತನು ನನಗೆ ಸುಮಾರು ದಿನಗಳಿಂದ ತನ್ನ ಮೊಬೈಲ ನಂಬರದಿಂದ ನನ್ನ ಮೊಬೈಲ ನಂಬರಿಗೆ ನೇದ್ದಕ್ಕೆ ಕರೆಮಾಡಿ ಅವಾಚ್ಯ ಶಬ್ದಗಳಿಂದ ಬೈಯ್ದು, ಪೋನ ಯಾಕೆ ರಿಸೀವ ಮಾಡುತ್ತಿಲ್ಲಾ ಅಂತಾ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾನೆ. ಕಳುಹಿಸಬೇಡ ಅಂತಾ ಹೇಳಿದರೂ ಅವಾಚ್ಯ ಶಬ್ದಗಳಿಂದ ಬೈಯ್ದು, ಜೀವದ ಬೆದರಿಕೆ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವಲಘಾಣಗಾಪುರ ಠಾಣೆ :ಶ್ರೀ ಲಕ್ಷ್ಮಣ ತಂದೆ ಕಾಮಣ್ಣಾ ಕಾಂಬಳೆ ಸಾ: ಸಂಗಾಪುರ ರವರು, ದಿ: 11-06-11 ರಂದು ಮಧ್ಯಾಹ್ನ ನಾನು ಹೊಲಕ್ಕೆ ಹೋಗುವಾಗ ನಮ್ಮೂರಿನ ಯಲ್ಲಾಲಿಂಗ ತಂದೆ ಮಲ್ಲೇಶಿ ಪೂಜಾರಿ ಇತನು ನನ್ನನು ತಡೆದು ಜಾತಿ ನಿಂದನೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲಘಾಣಗಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಪುರ ಠಾಣೆ :ಶ್ರೀ ಶಮಶೋದ್ದೀನ್ ತಂದೆ ಎಸ್ ಹಸನ ಹುಸೇನ್ ಸಾ|| ಪಾಚಾಪುರ ಎರಿಯಾ ರೋಜಾ ಗುಲಬರ್ಗಾ ರವರು, ದಿ:30-05-11 ರಂದು ಸಾಯಂಕಾಲ ಸುಪರಮಾರ್ಕೇಟದ ಮಹಾರಾಜ ಹೋಟಲ್ ಬಳಿ ನಿಲ್ಲಿಸಿದ್ದ ನನ್ನ ಹಿರೋ ಹೋಂಡಾ ಸ್ಪ್ಲೆಂಡರ ಪ್ಲಸ್ ನಂ. ಕೆಎ 32 ಕೆ 1671 ಅಂದಾಜು ರೂ. 23,000/- ಮೌಲ್ಯದ್ದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment