Police Bhavan Kalaburagi

Police Bhavan Kalaburagi

Wednesday, June 15, 2011

GULBARGA DISTIRCT REPORTED CRIMES

ದರೋಡೆ ಪ್ರಕರಣ :

ಚೌಕ ಠಾಣೆ :ಶ್ರೀ ಅಪ್ಪಾರಾವ ತಂದೆ ಸಿದ್ರಾಮಪ್ಪ ಪಾಟೀಲ ಸಾಃ ಸಿರಗಾಪೂರ ಹಾಃವಃ ಭವಾನಿ ನಗರ ಗುಲಬರ್ಗಾ ರವರು ನಾನು ಮತ್ತು ನನ್ನ ಹೆಂಡತಿ ಮತ್ತು ಮಗಳು ಕೂಡಿಕೊಂಡು ಇಂದು ದಿನಾಂಕ: 14-06-2011 ರಂದು ರಾತ್ರಿ 09-30 ಗಂಟೆಯ ಸುಮಾರಿಗೆ ರಾಮನಗರದಿಂದ ಭವಾನಿ ನಗರದ ನಮ್ಮ ಮನೆಯ ಕಡೆಗೆ ನಡೆದುಕೊಂಡು ಬರುತಿದ್ದಾಗ ಭವಾನಿ ನಗರದ ರಸ್ತೆಯ ಮೇಲೆ ಎದುರಿನಿಂದ ಯಾರೋ ಇಬ್ಬರು ಮೊಟಾರ ಸೈಕಲ ಮೇಲೆ ಬಂದು ನನ್ನ ಮಗಳ ಕೊರಳಲ್ಲಿದ್ದ 4 ತೋಲೆ ಬಂಗಾರದ ಚೈನ ಮತ್ತು ಅರ್ಧಾ ತೊಲೆ ಬಂಗಾರದ ತಾಳಿ ಹೀಗೆ ಒಟ್ಟು ಅ||ಕಿ|| 90,000/- ರೂ. ಬೆಲೆಬಾಳುವ ಬಂಗಾರದ ಆಭರಣಗಳನ್ನು ಕಿತ್ತಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆಗೆ ಪ್ರಯತ್ನ :

ಚೌಕ ಠಾಣೆ :ಶ್ರೀ ಬಾಬು ತಂದೆ ಮೈಲಾರಿ ಹುಲಿ ಸಾ|| ಸಂಜೀವ ನಗರ ಗುಲಬರ್ಗ ರವರು ನಾನು ಮತ್ತು ಶಂಕರ ಜಮಾದಾರ ಮತ್ತು ಪವಣ್ಣ ದಯಣ್ಣನವರ ಕೂಡಿಕೊಂಡು ಸಂಗಮ ಟಾಕೀಜ ಹತ್ತಿರ ಬಟ್ಟೆ ಖರೀದಿಸಲು ಬಂದಾಗ ನನಗೆ ಸತೀಶ ತಂದೆ ವೆಂಕಟಸ್ವಾಮಿ ಇತನು ಅವಾಚ್ಯವಾಗಿ ಬೈದು ಎಲ್.ಐ.ಸಿ ಆಫೀಸ ಹತ್ತಿರ ಇರುವ ನೈಸ ಕ್ಲಬ್ ಕಂಪೌಂಡ ಒಳಗಡೆ ಕರೆದುಕೊಂಡು ಹೋಗಿ ಸತೀಶ, ಹೀರಾ ಬಸವನಗರ, ಪಿಂಟು ಇಂದ್ರಾನಗರ , ಶರಣು ಗಾಜಿಪೂರ ಮತ್ತು ಇತರ ಇಬ್ಬರು ಕೂಡಿ ಕೈಯಲ್ಲಿ ಮಚ್ಚು, ಬಡಿಗೆ ಹಿಡಿದುಕೊಂಡು ನನಗೆ ಜಾತಿ ಎತ್ತಿ ಬೈದು ಪಿಂಟು ಇತನು ಮಚ್ಚಿನಿಂದ ಬಲಗೈಗೆ ಹೊಡೆದು ರಕ್ತಗಾಯ ಪಡಿಸಿದ್ದು ಮತ್ತು ಶಂಕರ ಇತನಿಗೆ ಹಿರಾ ಬಸವನಗರ ಮಚ್ಚಿನಿಂದ ಹೊಡೆದು ರಕ್ತ ಗಾಯ ಪಡಿಸಿರುತ್ತಾರೆ ಎಲ್ಲರೂ ಕೂಡಿಕೊಂಡು ಮಚ್ಚನಿಂದ ಮತ್ತು ಕಲ್ಲಿನಿಂದ ಮತ್ತು ಕಾಲಿನಿಂದ ಒದ್ದು ಜೀವದ ಭಯ ಹಾಕಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಲಕ್ಷತನ ಪ್ರಕರಣ :

ಬ್ರಹ್ಮಪೂರ ಠಾಣೆ :ಶ್ರೀ ಏಡುಕೊಂಡಲ ತಂದೆ ವೆಂಕಟೇಶರಾವ ಸಾ|| ಪದಲಿ ಜಿಲ್ಲೆ || ಓಂಗಲ್ ಆಂದ್ರ ಪ್ರದೇಶ ರವರು ನಾನು ಹಾಗು ಶೇಖನಾಗು ಇಂದು ದಿನಾಂಕ: 14-06-2011 ರಂದು ಬೆಳಿಗ್ಗೆ ಸರ್ಕಾರಿ ಆಸ್ಪತ್ರೆಯ ಹತ್ತಿರ ಹೊಸದಾಗಿ ನಿರ್ಮಿಸುತ್ತಿರುವ ಆಸ್ಪತ್ರೆಯ ಗೋಡೆಗೆ ಪ್ಲಾಸ್ಟರ ಮಾಡುವ ಸಲುವಾಗಿ ಹೋಗಿದ್ದು ಶೇಖನಾಗು ಇತನು ಉಸುಕು ಮತ್ತು ಸಿಮೆಂಟ ತುಂಬಿದ ರಾಮಟೆರಿಯಲ್ ಬುಟ್ಟಿಯಲ್ಲಿ ಹಾಕಿಕೊಂಡು ತಲೆಯ ಮೇಲೆ ಹೊತ್ತಿಕೊಂಡು ಮೇಲೆ ಏರುತ್ತಿರುವಾಗ ಕಾಲು ಜಾರಿ ಬೇಸಮೆಂಟ ಪ್ಲೋರ ಮೇಲೆ ಬಿದ್ದು ರಕ್ತಗಾಯ ಆಗಿದ್ದು ಮತ್ತು ಎಡಗಾಲಿಗೆ ಗಾಯವಾಗಿ ಪ್ರಕ್ಚರ್ ಆದಂತೆ ಕಂಡು ಬಂದಿದ್ದರಿಂದ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾರಣಾಂತಿಕ ಹಲ್ಲೆ :
ಅಶೋಕ ನಗರ ಠಾಣೆ :
ಶ್ರೀ ಬಸವರಾಜ ತಂದೆ ಕುಪೇಂದ್ರ ದಂಡ್ರಾ ಕ್ರೂಶರ ಗಾಡಿ ನಂ:ಕೆಎ-49 6416 ನೇದ್ದರ ಮಾಲೀಕ ಹಾಗೂ ಚಾಲಕ ಸಾ: ಜೋಗುರು ರವರು ನಾನು ಜೋಗುರುದಿಂದ ಗುಲಬರ್ಗಾಕ್ಕೆ ಪ್ಯಾಸೆಂಜರ ತುಂಬಿಕೊಂಡು ಹೋಗಿ ಬರುವದು ಮಾಡುತ್ತೆನೆ. ಇಂದು ಸಾಯಂಕಾಲ ಸಹ ಜೋಗುರದಿಂದ ಗುಲಬರ್ಗಾಕ್ಕೆ ಬಂದು ಪ್ಯಾಂಸೇಜರ ಕೂಡಿಸಿಕೊಂಡು ಜೋಗುರಗೆ ಹೋಗಬೇಕೆಂದು ಗಾಡಿ ಚಾಲು ಮಾಡುವಷ್ಠರಲ್ಲಿಯೆ ತ್ರಿಶೂಲ್ ಬಾರ ಕಡೆಯಿಂದ ಇಬ್ಬರೂ ಹುಡುಗರು ಬಂದವರೇ ಗಾಡಿ ನಿಲ್ಲಿಸಲೇ ಅಂತಾ ಅವಾಚ್ಯಚಾಗಿ ಬೈದು ಇಬ್ಬರೂ ಒಮ್ಮಿದೊಮ್ಮೇಲೆ ಕೈಯಿಂದ ಮುಖದ ಮೇಲೆ ಎದೆಯ ಮೆಲೆ ಹೊಡೆಯಲು ಪ್ರಾರಂಭಿಸಿದರು. ನನಗೆ ಯಾಕೆ ಹೊಡೆಯುತ್ತಿರಿ ಅಂತಾ ಕೇಳಿದರೂ ನನ್ನ ಮಾತು ಕೇಳದೇ ಅವಾಚ್ಯವಾಗಿ ಬೈದು ಇನ್ನೂ ಇಬ್ಬರೂ ಕೂಡಿಕೊಂಡು ಗಾಡಿಯಿಂದ ಇಳಿಸಿ ಏಳೆದುಕೊಂಡು ಹೋಗಿ ಎಲ್ಲರೂ ಸೇರಿಕೊಂಡು ಗುಪ್ತಾಂಗಕ್ಕೆ ಹೊಡೆದು ರಕ್ತಗಾಯ ಪಡಿಸಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: