Police Bhavan Kalaburagi

Police Bhavan Kalaburagi

Monday, June 20, 2011

GULBARGA DISTIRCT REPORTED CRIMES

ಅಪಘಾತ ಪ್ರಕರಣ

ಶಹಾಬಾದ ನಗರ ಠಾಣೆ : ಶ್ರೀ ಪರಶುರಾಮ ತಂದೆ ಹಣಮಂತ ಅರಸಣಗಿ ಸಾ|| ಜಾಂಬವಿ ನಗರ ವಾಡಿ ತಾ|| ಚಿತ್ತಾಪೂರ. ರವರು ನಾಣು ಜೇವರ್ಗಿಯಿಂದ ಮದುವೆ ಮುಗಿಸಿಕೊಂಡು ನನ್ನ ಮೊಟಾರ ಸೈಕಲ ನಂ:ಕೆಎ-33 ಹೆಚ್-1120 ಪ್ಯಾಶನ್ ಪ್ಲಸ್ ನೇದ್ದರ ಮೇಲೆ ಶಹಾಬಾದ ಇ.ಎಸ.ಐ ಆಸ್ಪತ್ರೆ ಹತ್ತಿರ ಬರುತ್ತಿರುವಾಗ ಎದರುಗಡೆಯಿಂದ ಲಾರಿ ನಂ:ಕೆಎ-32/ಬಿ-4159[54] ನೇದ್ದು ಅತೀವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ನನ್ನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ನನಗೆ ರಕ್ತ ಗಾಯ ಪಡಿಸಿ ಲಾರಿ ಚಾಲಕನು ತನ್ನ ಲಾರಿಯನ್ನು ನಿಲ್ಲಿಸಿದೇ ಹಾಗೇ ಒಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿತ ಮಹಿಳೆ ಕೊಲೆ ಪ್ರಕರಣ :

ಶಹಾಬಾದ ನಗರ ಠಾಣೆ :ಶ್ರೀ ವಿರೇಶ ತಂದೆ ಗುರುಲಿಂಗಪ್ಪಾ ಗೊಳೆದ ಸಾ:|| ತೊನಸಹಳ್ಳಿ (ಎಸ್) ರವರು ನಾನು ಮನೆಯಲ್ಲಿದ್ದಾಗ ನಮ್ಮೂರ ಮಲ್ಲಣ್ಣಾ ಮುತ್ತಾ ಗುಡಿಯ ಪಕ್ಕದಲ್ಲಿ ಒಬ್ಬ ಹೆಣ್ಣು ಮಗಳು ಕೊಲೆಯಾಗಿದೆ ಅಂತಾ ಗೊತ್ತಾಗಿ ನಾನು ಹೋಗಿ ನೋಡಲಾಗಿ ಸದರಿ ಹೆಣ್ಣು ಮಗಳ ಮೈಮೇಲೆ ಕಪ್ಪು ಬಣ್ಣದ ಬುರಕ ಇದ್ದು ಹೊಟ್ಟೆ ಮೇಲೆ ರಕ್ತ ಹತ್ತಿದ್ದ ಕಲ್ಲು ಇದ್ದ ಕುತ್ತಿಗೆಯು ಮಣ್ಣಲ್ಲಿ ಮುಚ್ಚಿದ್ದು ಇರುತ್ತದೆ. ಸದರಿ ಹೆಣ್ಣು ಮಗಳ ಗುರುತು ಸಿಗದ ಹಾಗೆ ಕಂಡು ಬರುತ್ತದೆ. ಸದರಿಯವಳು ಅಪರಿಚಿತಳಿರುತ್ತಾಳೆ, ತಲೆಗೆ ಮುಖಕ್ಕೆ ರಕ್ತಗಾಯವಾಗಿದ್ದು ಕಂಡು ಬಂದ್ದಿದ್ದು ಸದರಿಯವಳ ವಯಸ್ಸು 20-30 ಇರಬಹುದು. ಯಾರೋ ದುಷ್ಕರ್ಮಿಗಳು ಯಾವುದೋ ಉದ್ದೇಶದಿಂದ ಕಲ್ಲಿನಿಂದ ತಲೆಗೆ ಹೊಡೆದು ಭಾರಿ ರಕ್ತಗಾಯಮಾಡಿ ಕೊಲೆಮಾಡಿ ತಲೆ ಮುಖದ ಮೇಲೆ ಮಣ್ಣು ಹಾಕಿ ಹೊಟ್ಟೆಯ ಮೇಲೆ ಕಲ್ಲಿಟ್ಟು ಹೊಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: