ಅಲಕ್ಷತನ ಪ್ರಕರಣ :
ಸೇಡಂ ಠಾಣೆ:
ಶ್ರೀ ಸುಭಾಷಚಂದ್ರ ತಂದೆ ವೀರಪ್ಪಾ ಕಾಳಗಿ ಸಾ|| ಬ್ರಾಹ್ಮಣ ಗಲ್ಲಿ ಸೇಡಂ ರವರು ನನಗೆ ಶಾಂತಾಬಾಯಿ ಅಂತಾ ಅಕ್ಕ ಇದ್ದು, ಸೇಡಂ ಪಟ್ಟಣದ ವಿಠಲ ತಂದೆ ವಿಶ್ವಾನಾಥ ಐನಾಪೂರ ರವರ ಪಾಂಡುರಂಗ ದಾಲಮೀಲದಲ್ಲಿ ಕುಲಿ ಕೆಲಸ ಮಾಡಿಕೊಂಡು ಹೋಗುತ್ತಿದ್ದಳು ಎಂದಿನಂತೆ ದಿನಾಂಕ: 20-06-2011 ರಂದು ಮುಂಜಾನೆ ಪಾಂಡುರಂಗ ಹೆಸರಿನ ದಾಲಮಿಲಕ್ಕೆ ಕೆಲಸಕ್ಕೆ ಹೊಗಿ ದಾಲಮೀಲದಲ್ಲಿ ಕೆಲಸ ಮಾಡುವಾಗ ದಾಲ ಮಿಲ್ ದ ಬೇಲ್ಟನಲ್ಲಿ ಸಿಕ್ಕಿಬಿದ್ದು ಮೃತ ಪಟ್ಟಿರುತ್ತಾಳೆ. ಪಾಂಡುರಂಗ ದಾಲಮೀಲದ ಮಾಲಿಕರಾದ ವಿಠಲ ತಂದೆ ವಿಶ್ವಾನಾಥ ಐನಾಪೂರ, ಅನೀಲಕುಮಾರ ತಂದೆ ಸುರೇಶ ಐನಾಪೂರ ಸೇಡಂ ರವರು, ದಾಲಮೀಲದಲ್ಲಿ ಕೆಲಸ ಮಾಡುವ ಲೇಬರಗಳಿಗೆ ಯಾವುದೆ ಸುರಕ್ಷಿತ ಸಲಕರಣೆಗಳನ್ನು ನೀಡದೇ ಅಲಕ್ಷತನ ತೋರಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment