Police Bhavan Kalaburagi

Police Bhavan Kalaburagi

Wednesday, June 22, 2011

GULBARGA DISTRICT REPORTED CRIME






ಕೊಲೆ ಆರೋಪಿ ಬಂದನ :




ಶಹಾಬಾದ ನಗರ ಠಾಣೆ : ಶ್ರೀ ವಿರೇಶ ತಂದೆ ಗುರಲಿಂಗಪ್ಪಾ ಗುಳೇದ ದಳಪತಿ ಸಾ: ತೊನಸಳ್ಳಿ [ಎಸ್] ರವರು ದಿನಾಂಕ:20/06/2011 ರಂದು ತೊನಸಳ್ಳಿ [ಎಸ್] ಗ್ರಾಮದ ಮಲ್ಲಣ್ಣಾ ಮುತ್ತಾ ಗುಡಿಯ ಪಕ್ಕದಲ್ಲಿ ಮುಸ್ಲಿಂ ಅಪರಿಚಿತ ಹೆಣ್ಣು ಮಗಳನ್ನು ಯಾರೋ ದುಷ್ಕರ್ಮಿಗಳು ಯಾವುದೋ ಉದ್ದೇಶದಿಂದ ಕಲ್ಲಿನಿಂದ ತಲೆಗೆ, ಹಣೆಗೆ , ಬಲಕಪಾಳಕ್ಕೆ, ಬಲಕಣ್ಣಿನ ಮೇಲೆ ಹೊಡೆದು ಬಾರಿ ರಕ್ತಗಾಯ ಪಡಿಸಿ ಕೊಲೆಮಾಡಿ ಮುಖದ ಮೇಲೆ , ತಲೆಯ ಮೇಲೆ ಮಣ್ಣು ಹಾಕಿ ಹೊಟ್ಟೆಯ ಮೇಲೆ ಕಲ್ಲು ಇಟ್ಟು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಸದ ಮೇಲಿಂದ ತನಿಖೆ ಕೈಕೊಂಡು ಇರುತ್ತದೆ.




ಮೃತಳ ಶವವನ್ನು ಶ್ರೀ ಲಾಲ ಅಹ್ಮದ ತಂದೆ ಮಹೇಬೂಬ ಸಾಬ ಶಿರಸಗಿ ಸಾ:ಮದರಿ ತಾ:ಜೇವರ್ಗಿ ಇತನು ಗುರುತಿಸಿ ಮೃತಳು ನನ್ನ ತಂಗಿ ಬಾಬನಬಿ ಗಂಡ ಅಲ್ಲಾ ಪಟೇಲ ಸಾ:ಭೋಸಗಾ ಹಾ:ವ:ಮದರಿ ಅಂತಾ ಹೇಳಿ ಮೃತ ಬಾಬನಬಿ ಇವಳಿಗೆ 3 ವರ್ಷದೊಳಗೆ 2 ಮದುವೆ ಮಾಡಿದರೂ ಕೂಡಾ ತೌವರು ಮನಗೆ ಬಂದು ತೌವರು ಮನೆಯಲ್ಲಿಯೂ ಯಾರಿಗೂ ಹೇಳದೇ ಕೇಳದೆ ಮನೆಯಿಂದ ಹೋಗುತ್ತಿದ್ದರಿಂದ ತಂದೆಯಾದ ಮಹಿಬೂಬಸಾಬ ಇತನು ನಮ್ಮ ಮನೆತನದ ಮರ್ಯಾದೆ ಕಳೆಯುತ್ತಿದ್ದಾಳೆ ಇವಳಿಗೆ ಮುಗಿಸಿಯೇ ಬಿಡಬೇಕು. ಅಂತಾ ನಿರ್ಧಾರ ಮಾಡಿಕೊಂಡು ಹೈದ್ರಾಬಾದಕ್ಕೆ ಮಗನ ಹತ್ತಿರ ಒಯ್ದು ಬಿಡುತ್ತೇನೆ ಅಂತಾ ಕರೆದುಕೊಂಡು ಹೋಗಿ ತೊನಸಳ್ಳಿ [ಎಸ್] ಗ್ರಾಮದ ಮಲ್ಲಣ್ಣಾ ಮುತ್ಯಾ ಗುಡಿಯ ಹತ್ತಿರ ದಿನಾಂಕ:19-20/06/2011 ರಂದು ರಾತ್ರಿ ಕಲ್ಲಿನಿಂದ ತಲೆಗೆ ಮುಖಕ್ಕೆ ಹೊಡೆದು ಬಾರಿ ರಕ್ತಗಾಯ ಪಡಿಸಿ ಕೊಲೆ ಮಾಡಿ ಮುಖವು ಗುರ್ತಿಸಲಾರದಂತೆ ಮುಖದ ಮೇಲೆ ಮಣ್ಣು ಹಾಕಿ ಹೊಟ್ಟೆಯ ಮೇಲೆ ಕಲ್ಲು ಇಟ್ಟು ಮುಖಕ್ಕೆ ಗುರ್ತಿಸಲಾರದಂತೆ ಹೋಗಿದ್ದ ಮಹಿಬೂಬಸಾಬ ಇತನನ್ನು ಇಂದು ದಿನಾಂಕ: 22-06-2011 ರಂದು ಶಹಾಬಾದ ನಗರ ಠಾಣೆಯ ಪೊಲೀಸ್ ಇನ್ಸಪೇಕ್ಟರ ಮತ್ತು ಠಾಣೆಯ ಸಿಬ್ಬಂದಿಯವರು ಕಟ್ಟಿ ಸಂಗಾಯಿಯ ಭೀಮಾ ಬ್ರಿಡ್ಜ್ ಹತ್ತಿರ ದಸ್ತಗಿರಿ ಮಾಡಿಕೊಂಡು ನ್ಯಾಯಾಂಗ ಬಂದನಕ್ಕೆ ಕಳುಹಿಸಿ ಕೊಡಲಾಗಿದೆ.

No comments: