Police Bhavan Kalaburagi

Police Bhavan Kalaburagi

Thursday, June 2, 2011

GULBARGA DISTRICT REPORTED CRIMES

ಕಳವು ಪ್ರಕರಣಗಳು ;
ಅಶೋಕ ನಗರ ಠಾಣೆ;
ಶ್ರೀ ಚಂದ್ರಕಾಂತ ತಂದೆ ನಾಮದೇವ ಸಾ; ಕೊಣ ಸಿರಸಗಿ ತಾ; ಜೇವರ್ಗಿ ರವರು ಶ್ರೀ ಶ್ರೀಮಂತ ಮಂಡಲ ಸಾ; ಅಶೋಕ ನಗರ ರವರ ಮನೆಯಲ್ಲಿ ಬಾಡಿಗೆ ಇದ್ದು ದಿನಾಂಕ 31-05-2011 ರಂದು ಬೆಳಗ್ಗೆ ಕೆಲಸಕ್ಕೆ ಹೋಗಿದ್ದು ಮಧ್ಯಹ್ನ ಯಾರೋ ಕಳ್ಳರು ಯಾರು ಇಲ್ಲದ್ದನ್ನು ನೋಡಿ ಮನಗೆ ಹಾಕಿದ ಬೀಗ ಮುರಿದು ಒಳಗೆ ಪ್ರವೇಶ ಮಾಡಿ ಅಲಮಾರಾದಲ್ಲಿ ಇಟ್ಟಿದ್ದ ನಗದು ಹಣ 7000/- ಮತ್ತು ನಬಂಗಾರದ ಆಭರಣ ಹಾಗೂ ಬೆಳ್ಳಿಯ ಆಭರಣ ಹೀಗೆ ಒಟ್ಟು 1,05,600/- ರೂ ಕಿಮ್ಮತ್ತಿನವುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೋಜಾ ಠಾಣೆ ;ಶ್ರೀ ಮಹಮ್ಮದ ಫಯಾಜುದ್ದಿನ ತಂದೆ ಬರಾನುದ್ದನ್ ಸಾ; ಪಾಚಾಪೂರ ರೋಜಾ ಕೆ. ಗುಲಬರ್ಗಾ ರವರು ತಮ್ಮ ತಂಗಿಯ ಮದುವೆ ಕಾರ್ಯಕ್ರಮಕ್ಕೆ ಮಾಹಾರಾಷ್ಟ್ರದ ನಾಂದೇಡಕ್ಕೆ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದು ದಿನಾಂಕ 01-06-2011 ರಂದು ಬೆಳಗ್ಗೆ ಬಂದು ನೋಡಲು ಯಾರೋ ಕಳ್ಳರು ಮನೆಯ ಕೀಲಿ ಮುರಿದು ಅಲಮಾರಾದಲ್ಲಿ ಇಟ್ಟಿದ್ದ ನಗದು ಹಣ 30,000/- ಮತ್ತು 10 ತೋಲೆ ಬಂಗಾರದ ಆಭರಣಗಳು ಹೀಗೆ ಒಟ್ಟು 1,80,000/- ರೂ ಕಿಮ್ಮತ್ತಿವುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣಗಳು ;

ಮುಧೋಳ ಠಾಣೆ ;ದಿನಾಂಕ 01-06-2011 ರಂದು ಅಡಕಿ ಗ್ರಾಮದಿಂದ ಸೇಡಂ ಕಡೆಗೆ ಹೋಗುವ ರಸ್ತೆಯಲ್ಲಿ ಲಾರಿ ನಂ ಎಮ್.ಎಚ್. 25 ಯು 1299 ನೇದ್ದರ ಚಾಲಕನಾದ ವಿಜಯ ತಂದೆ ಲಕ್ಷ್ಮಣ ಇತನು ತನ್ನ ಲಾರಿಯನ್ನು ಅತೀ ವೇಗ ಮತ್ತು ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ರಸ್ತೆಯ ಬಲಭಾಗಕ್ಕೆ ನಿಂತಿದ್ದ ಟಿಪ್ಪರ ನಂ ಕೆಎ 32 ಬಿ 3745 ನೇದ್ದಕ್ಕೆ  ಗುದ್ದಿ ಅಪಘಾತ ಪಡಿಸಿದ್ದರಿಂದ ಲಾರಿ ಚಾಲಕನಾದ ವಿಜಯ ಇತನಿಗೆ ಭಾರಿ ಗಾಯಗಳಾಗಿ ಸೇಡಂ ಆಸ್ಪತ್ರೆಯಲ್ಲಿ ಉಪಚಾರ ಹೋದುತ್ತಾ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾಮೀಣ ಠಾಣೆ ;ಶ್ರೀ ಅಬ್ದುಲ ಶಹಾ ತಂದೆ ಮೈನೋದ್ದಿನ ಶಹಾ ಫಕೀರ ಇವರು ಠಾಣೆಗೆ ದಿನಾಂಕ 31-05-2011 ರಂದು ಪರಿಚಯದ ರೀಯಾಜ ಡ್ರೈವರ ಇವರು ಲಾರಿ ನಂ ಎಪಿ 9-ಯು-7952 ನೇದ್ದರ ಮೇಲೆ ಮೇಲೆ ತನ್ನ ಗೆಳೆಯ ಕಂಟು ಇತನು ಕ್ಲೀನರ್ ಇದ್ದು ಶಹಾಪೂರಕ್ಕೆ ಹೋಗಿ ಉಸುಕು ತರೋಣವೆಂದು ಹೇಳಿದಕ್ಕೆ ಮೂವರು ಕೂಡಿ ಶಹಾಪೂರಕ್ಕೆ ಹೋಗಿ ರಾತ್ರಿ ಉಸುಕು ತುಂಬಿಕೊಂಡು ಮರಳಿ ಊರಿಗೆ ಬರುವ ಕುರಿತು ಬರುವಾಗ ರೀಯಾಜ ಇತನು ತನ್ನ ಲಾರಿಯನ್ನು ಅತೀವೇಗ ದಿಂದ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬರುತ್ತಿದ್ದನು ನಿಧಾನವಾಗಿ ನಡೆಸುವಂತೆ ಹೇಳಿದರು ಹಾಗೆಯೇ ನಡೆಸುತ್ತಾ ಬರುವಕಾಲಕ್ಕೆ ದಿನಾಂಕ 01-06-2011 ರಂದು ಬೆಳಗ್ಗಿನ ಜಾವ 5 ಗಂಟೆಯ ಸುಮಾರಿಗೆ ಹುಮನಾಬಾದ ರೋಡಿನ ಅವರಾದ ಕ್ರಾಸಿನ ಸಮೀಪ ಸಣ್ಣ ಬ್ರಿಜ್ಡಿನ ಬದಿಯಲ್ಲಿ ಹೋಗುವಾಗ ಎದುರುಗಡೆಯಿಂದ ಲಾರಿ ನಂ< ಕೆಎ-24 3060 ನೇದ್ದರ ಚಾಲಕ ನೂರೋದ್ದಿನ ಇತನು ತನ್ನ ಲಾರಿಯನ್ನು ಅತೀವೇಗ ದಿಂದ ಅಲಕ್ಷತನದಿಂದ ನಡೆಸಿಕೊಂಡು ಪರಸ್ಪರ ಎರಡು ಲಾರಿಯ ಚಾಲಕರು ಮುಖ ಮುಖಿಯಾಗಿ ಡಿಕ್ಕಿ ಹೊಡೆದುಕೊಂಡ ಪರಿಣಾಮ ಕಂಟು ಇತನು ಲಾರಿಯಿಂದ ಹಾರಿ ಬಿದ್ದಾಗ ಲಾರಿಯ ಕ್ಯಾಬೀನ್ ಮುರಿದು ಆತನ ಮೇಲೆ ಬಿದ್ದು ಭಾರಿಗಾಯಗೊಂಡು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: