Police Bhavan Kalaburagi

Police Bhavan Kalaburagi

Sunday, June 5, 2011

GULBARGA DISTRICT REPORTED CRIMES

ಅಕ್ರಮ ಗಾಂಜಾ ಸಂಗ್ರಹಿಸಿಟ್ಟು ಮಾರುತ್ತಿದ್ದವರ ಬಂಧನ ;

ರಾಘವೇಂದ್ರ ನಗರ ಠಾಣೆ ;
ದಿನಾಂಕ 04-06-2011 ರಂದು ಸಾಯಂಕಾಲ ಬ್ರಹ್ಮಪೂರ ಬಡಾವಣೆಯ ಆಜಾದ ಚೌಕದಲ್ಲಿರುವ ಭೀಮಶ್ಯಾ ತಂದೆ ಶಂಕ್ರಪ್ಪ ಭೀಮಳ್ಳಿ ಇವರ ಮನೆಯಲ್ಲಿ ಗಾಂಜಾ ಮಾರಾಟ ಮಾಡ ಮಾಡಲು ಮನೆಯಲ್ಲಿ ಅಕ್ರಮವಾಗಿ ಗಾಂಝಾ ಸಂ್ರಹಿಸಿಟ್ಟಿದ್ದ ಬಗ್ಗೆ ಬಾತ್ಮಿ ಮೇರೆಗೆ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಸದರಿಯನನ್ನು ದಸ್ತಗೀರ ಮಾಡಿ ಮನೆಯಲ್ಲಿಟ್ಟ 4375/- ರೂ ಕಿಮ್ಮತ್ತಿನ 1 ಕೆಜಿ 700 ಗ್ರಾಂ ಗಾಂಜಾ ಜಪ್ತಮಾಡಿಕೊಂಡಿದ್ದು ಈ ಬಗ್ಗೆ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚೌಕ ಠಾಣೆ ;ದಿನಾಂಕ 04-06-2011 ರಂದು ಸಾಯಂಕಾಲ ಪ್ರಕಾಶ ಟಾಕೀಜದ ಕಿಲ್ಲಾ ಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿ ಒಬ್ಬನು ಗಾಂಜಾ ಮಾರುತ್ತಿದ್ದ ಬಗ್ಗೆ ಬಾತ್ಮಿ ಮೇರೆಗೆ ಮಾನ್ಯ ಎ.ಎಸ್.ಪಿ. ಸಾಹೆಬರು ಮತ್ತು ಸಿಬ್ಬಂದಿಯವರು ಸ್ಥಳಕ್ಕೆ ಹೋಗಿ ದಾಳಿ ಮಾಡಿ ಒಬ್ಬ ವ್ಯಕ್ತಿಯನ್ನು ಹಿಡಿದು ವಿಚಾರಿಸಲು ಅವನು ತನ್ನ ಹೆಸರು ಯೂನುಸ ತಂದೆ ಬಾಬುಮಿಯಾ ಬ್ಯಾಂಡವಾಲೆ ಸಾ;ಖಾರಿಬಾವಡಿ ಮೋಮಿನಪುರ ಗುಲಬರ್ಗಾ ಅಂತಾ ತಿಳಿಸಿದ್ದು ಸದರಿಯವನಿಂದ 150/- ರೂ ನಗದು ಹಣ ಮತ್ತು 1 1/2 ಕೆಜಿ ಗಾಂಜಾ ವಶಪಡಿಸಿಕೊಂಡು ಮುಂದುವರೆದು ಗಾಂಜಾ ಬಗ್ಗೆ ವಿಚಾರಿಸಲು ಸದರಿಯವನು ತನಗೆ ರಾಜು ತಂದೆ ಸಿದ್ದಣ್ಣ ನಾಟೀಕಾರ ಸಾ;ರಾಣೆಶ್ವರ ಪೀರ ದರ್ಗಾ ಆಶ್ರಯ ಕಾಲನಿ ಗುಲಬರ್ಗಾ ಮತ್ತು ಭೀಮಶ್ಯಾ ತಂದೆ ಶಂಕ್ರೆಪ್ಪಾ ಭೀಮಳ್ಳಿ ಸಾ; ಬ್ರಹ್ಮಪೂರ ಅಪ್ಪರ ಲೈನ ಗುಲಬರ್ಗಾ ಇವರು ಗಾಂಜಾ ತಂದು ಜೊಡುತ್ತಿದ್ದು ನಾನು ಮಾರಾಟ ಮಾಡುತ್ತೆನೆ ಅಂತಾ ತಿಳಿಸಿದ್ದು ಸದರಿಯವರ ವಿರುದ್ಧ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕಳವು ಪ್ರಕರಣಗಳು ;
ಆಳಂದ ಠಾಣೆ ;
ಶ್ರೀ ಬಸವರಾಜ ತಂದೆ ರೇವಣಸಿದ್ದಪ್ಪ ಚೌವಲ ಸಾ; ಸಂಗೋಳಗಿ (ಜೆ) ರವರು ದಿನಾಂಕ 03-06-2011 ಸಾಯಂಕಾಲ ಮನೆಗೆ ಬೀಗ ಹಾಕಿಕೊಂಡು ಮತ್ತೂರಾದ ಕೊರಳ್ಳಿಗೆ ಹೋಗಿದ್ದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಮನೆಯ ಕೊಂಡಿ ಮುರಿದು ಒಳಗೆ ಪ್ರವೇಶ ಮಾಡ ಅಲಮಾರಾ ತೆರೆದು ಅಲಮಾರದಲ್ಲಿ ಇಟ್ಟಿದ್ದ ನಗದು ಹಣ 20,000/- ಮತ್ತು 30 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರ ಒಂದು ನೋಕಿಯಾ ಮೊಬೈಲ್ ಫೋನ ಹೀಗೆ ಒಟ್ಟು 80,500/- ರೂ ಕಿಮ್ಮತ್ತಿನವುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಂಬರ್ಗಾ ಠಾಣೆ ;ಶ್ರೀ ಜಗದೀಶ ತಂದೆ ಕಲ್ಯಾಣರಾವ ಮದರಿ ಸಾ; ಭೂಸನೂರ ಗ್ರಾಮ ಹಾವಃ ಶಹಾಬಜಾರ ಗುಲಬರ್ಗಾ ರವರ ಹೋಲದಲ್ಲಿ ಇರುವ ಮನೆಯಲ್ಲಿ ದಿನಾಂಕ 19-05-2011 ರಿಂದ 20-05-2011 ರ ಬೆಳಗ್ಗೆ 9 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಬೀಗ ಮುರಿದು ಒಳಗೆ ಪ್ರವೇಶ ಮಾಡಿ ಮನೆಯಲ್ಲಿಟ್ಟಿದ್ದ ಒಂದು ಟೇಬಲ್ ಪ್ಯಾನ ಮತ್ತು ಒಂದು ವಾಟರ ಹೀಟರ ಕಾಯಿಲ್ ಅ.ಕಿ. 1900/- ರೂ ಕಿಮ್ಮತ್ತಿನವುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಹರಣ ಪ್ರಕರಣ ;
ಯಡ್ರಾಮಿ ಠಾಣೆ ;
ದಿನಾಂಕ 29-05-2011 ರಂದು ರಾತ್ರಿ 10 ಗಂಟೆಯ ಸುಮಾರಿಗೆ ಶ್ರೀ ಜಗನ್ನಾಥ ತಂದೆ ನಾಗಪ್ಪಾ ಪಡಶೆಟ್ಟಿ ಸಾ; ಮಳ್ಳಿ ತಾ;ಜೇವರ್ಗಿ ಇವರ ಮಗಳಾದ ಲಕ್ಷ್ಮೀ ಗಂಡ ಭೀಮಾಶಂಕರ ಅಕಸ್ತಿ ಇವಳಿಗೆ ಮೆಲಪ್ಪಾ ತಂದೆ ನಾಗಪ್ಪಾ ಮಾಣಗೇರಿ ಮತ್ತು ಮಲ್ಲಪ್ಪ ತಂದೆ ಸಂಗಣ್ಣ ಮಾಣಗೇರಿ ಸಾ; ಮಳ್ಳಿ ಇವರು ಕುಡಿಕೊಂಡು ಲಕ್ಷ್ಮಿ ಇವಳಿಗೆ ಯಡ್ರಾಮಿ ಸರಕಾರಿ ಬಾಲಕಿಯರ ಶಾಲೆ ಹಿಂದುಗಡೆ ನಿಸರ್ಗಕರೆಗೆ ಹೋದಾಗ ಕಾರಿನಲ್ಲಿ ಬಂದು ಅಪಹರಿಸಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ;
ಆತ್ಮ ಹತ್ಯೆಗೆ ಪ್ರಚೋದನೆ ನಿಡಿದ ಪ್ರಕರಣ ;
ನಿಂಬರ್ಗಾ ಠಾಣೆ ;
ಸಾಗರ ತಂದೆ ಸೊಮೇಶ ಬೂದಿ ಇತನು ಈರಮ್ಮ ತಂದೆ ನವೀರಯ್ಯ ಗಣೆಚಾರಿ ಇವಳಿಗೆ ವಿನಾಕಾರಣ ಮಾತನಾಡುವುದು, ಕೆಣುಕುವುದು, ಹಿಂಬಾಲಿಸುವುದು ಮಾಡುತ್ತಿದ್ದು ಹೀಗಿದ್ದು ದಿನಾಂಕಃ 03-06-2011 ರಂದು ರಾತ್ರಿ 9 ಗಂಟೆಯ ಸುಮಾರಿಗೆ ಶ್ರೀ ಶರಣಬಸವೇಶ್ವರ ಗುಡಿಯ ಪಕ್ಕದಲ್ಲಿ ಈರಮ್ಮಳೊಂದಿಗೆ ಬಲವಂತನಾಗಿ ಮಾತನಾಡಿ ನೀನು ನನ್ನೊಂದಿಗೆ ಮಲಗು ಇಲ್ಲದಿದ್ದರೆ ಸಾಯಿ, ನೀನು ನನ್ನೊಂದಿಗೆ ಮಲಗುವವರೆಗೆ ನಿನಗೆ ಬಿಡುವುದಿಲ್ಲ ಎಂದು ಜೀವದ ಭಯಹಾಕಿ ಅವಳು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ್ದರಿಂದ ಮಗಳಾದ ಈರಮ್ಮ ವಯಃ 18 ವರ್ಷ ಇವಳು ಮನೆಯ ಅಡುಗೆ ಕೋಣೆಯಲ್ಲಿ ಇಟ್ಟಿದ್ದ ಸೀಮೆಎಣ್ಣೆ ಮೈಮೇಲೆ ಸುರಿದುಕೊಂಡು ಮೈಗೆ ಬೆಂಕಿ ಹಚ್ಚಿಕೊಂಡಿದ್ದು ನಂತರ ಉಪಚಾರ ಪಡೆಯುತ್ತಾ ಗುಲಬರ್ಗಾ ಸರಕಾರಿ ಆಸ್ಪತ್ರೆಯಲ್ಲಿ ರಾತ್ರಿ 02:20 ಗಂಟೆಗೆ ಮೃತಪಟ್ಟಿರುತ್ತಾಳೆ. ಅಂತ ಶ್ರೀ ವೀರಯ್ಯಾ ತಂದೆ ಮಾಹಾದೇವಯ್ಯಾ ಗಣೆಚಾರಿ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಲಿಗೆ ಪ್ರಕರಣ ;

ಬ್ರಹ್ಮಪೂರ ಠಾಣೆ ;ದಿನಾಂಕ 03-06-2011 ರಂದು ರಾತ್ರಿ ಶ್ರೀ ಮೈಲಾರಿ ತಂದೆ ಯಶವಂತ ಶಳ್ಳಗಿ ಸಾ;ಭೂಪಾಲ ತೆಗನೂರ ಸಧ್ಯ ವಿರೇಂದರ ಪಾಟೀಲ ಬಡಾವಣೆ ಗುಲಬರ್ಗಾ ರವರು ಕೆರೆಯ ರಸ್ತೆ ಡಿಸಿಸಿ ಬ್ಯಾಂಕ ಹಿಂದುಗಡೆಯಿಂದ ಹೋಗುತ್ತಿದ್ದಾಗ 1.ಹಣಮಂತ ತಂದೆ ರಾಣಪ್ಪಾ 2.ರಾಜು ತಂದೆ ಹಣಮಂತ 3.ಭೀಮಣ್ಣಾ ತಂದೆ ಹಣಮಂತ 4.ವಿಜಯಕುಮಾರ ತಂದೆ ಸಾತಪ್ಪಾ 5.ವಿನೋದ ತಂದೆ ಸಾತಪ್ಪಾ ಸಾ; ಎಲ್ಲರು ಭೂಪಾಲ ತೆಗನೂರ ಇವರು ಕುಡಿಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದು ನಿನ್ನ ಮಗನಿಗೆ ಹಚ್ಚಿ ಕೇಸ ಮಾಡಿಸಿದ್ದಿಯಾ ಅಂತಾ ಅಂದು ಹೊಡೆಬಡೆ ಮಾಡಿ ಕೊರಳಲ್ಲಿದ್ದ ಬಂಗಾದ ಲಾಕೆಟ ಮತ್ತು ನಗದು ಹಣ 5000/- ರೂ ಕಸಿದುಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: