Police Bhavan Kalaburagi

Police Bhavan Kalaburagi

Monday, June 6, 2011

GULBARGA DISTRICT REPORTED CRIMES

ಅಪಹರಣ ಪ್ರಕರಣ :
ಯಡ್ರಾಮಿ ಠಾಣೆ :
ಜಗನಾಥ ತಂದೆ ನಾಗಪ್ಪಾ ಪಡಶೆಟ್ಟಿ ಸಾ|| ಮಳ್ಳಿ ರವರು ನನ್ನ ಮಗಳಾದ ಲಕ್ಷ್ಮಿ ಇವಳಿಗೆ ದಿನಾಂಕ: 24-05-2001 ರಂದು ಸಿಂದಗಿ ಗ್ರಾಮದ ಭೀಮಾಶಂಕರ ಇವರ ಸಂಗಡ ಮದುವೆ ಮಾಡಿಕೊಟ್ಟಿದ್ದು, ದಿನಾಂಕ: 29-05-2011 ರಂದು ಉಡೆಕ್ಕಿ ಹಾಕುವ ಸಂಬಂಧ ಯಡ್ರಾಮಿ ಗ್ರಾಮಕ್ಕೆ ಬಂದಿದ್ದು, ರಾತ್ರಿ 10-00 ಗಂಟೆ ಸುಮಾರಿಗೆ ಪರಿಚಯವರಾದ ಮೆಲಪ್ಪಾ ಮತ್ತು ಮಲ್ಲಪ್ ಮಾಗಣಗೇರಿ ರವರ ಪೋನ ಬಂದಿದ್ದೆ ಅಂತಾ ಮಾತನಾಡುತ್ತಿರುವಾಗ ಇಬ್ಬರು ಕಾರಿನಲ್ಲಿ ಬಂದು ಲಕ್ಷ್ಮಿ ಇವಳಿಗೆ ಅಪಹರಿಸಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆತ್ಮಹತ್ಯೆಗೆ ಪ್ರಚೊದನೆ ಪ್ರಕರಣ :

ನಿಂಬರ್ಗಾ ಠಾಣೆ : ವೀರಯ್ಯ ತಂದೆ ಮಹಾದೇವಯ್ಯ ಗಣೆಚಾರಿ ಸಾ|| ನಿಂಬರ್ಗಾ ಗ್ರಾಮ ರವರು ನನ್ನ ಮಗಳಾದ ಈರಮ್ಮ ಇವಳಿಗೆ ಸಾಗರ ತಂದೆ ಸೋಮೇಶ ಬೂದಿಗುಂಪಿಮಠ ಸಾ|| ಹೊಸಪೇಟ ಹಾ||ವ|| ಶಾಂತಿ ನಗರ ಗುಲಬರ್ಗಾ ಇತನು ಈರಮ್ಮ ಇವಳಿಗೆ ವಿನಾಃಕಾರಣ ಮಾತನಾಡಿಸುವದು ಚುಡಾಯಿಸುವದು ಮಾಡಿ ಅನೈತಿಕವಾಗಿ ಇರುವಂತೆ ಒತ್ತಾಯ ಮಾಡಿ ಜೀವದ ಬೇದರಿಕೆ ಹಾಕಿದ್ದರಿಂದ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿರುತ್ತಾಳೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.     

ದರೋಡೆ ಪ್ರರಕಣ :

ಫರಹತಾಬಾದ ಠಾಣೆ :
ಶ್ರೀ
ಮಾರುತಿ ತಂದೆ ನಿಂಗಪ್ಪಾ ಹಳ್ಳಾಳ ಸಾ:ರೇವಡಿ ಹಾಳ, ತಾ:ಹುಬ್ಬಳಿ, ಜಿ:ದಾರವಾಡ ರವರು ದಿನಾಂಕ 3-6-11 ರಂದು ಅರುಣ ಐಸಕ್ರೀಂ ಫ್ಯಾಕ್ಟರಿಯಿಂದ ಐಸ್‌ಕ್ರೀಂ ಟ್ರೇ ಬಾಕ್ಸಗಳನ್ನು ಎ.ಸಿ ಕಂಟೇನರ ವಾಹನ ನಂ. ಕೆ.ಎ-03/ಬಿ-5671 ನೇದ್ದರಲ್ಲಿ ಲೋಡ ಮಾಡಿಕೊಂಡು ನಾನು ಮತ್ತು
ವಾಹನ ಚಾಲಕ ಅಡವಯ್ಯ ತಂದೆ ಚೆನ್ನವಿರಯ್ಯ ಕುಂಟನೂರ ಇಬ್ಬರೂ ಕೂಡಿಕೊಂಡು ಬರುತ್ತಿರುವಾಗ ದಿನಾಂಕ 4-6-11 ರಂದು ಶಹಾಪೂರ, ಯಾದಗೀರಕ್ಕೆ ಬಂದು ಐಸಕ್ರೀಂಗಳನ್ನು ವಿತರಣೆ ಮಾಡಿ ದಿನಾಂಕ 5-6-11 ರಂದು ಗುರಮಟಕಲ್‌ ಸೇಡಂ, ಚಿತ್ತಾಪೂರ, ಗುಲಬರ್ಗಾಕ್ಕೆ ಬಂದು ಅಲ್ಲಿಯ ಅಂಗಡಿಗಳಿಗೆ ಐಸ್‌ಕ್ರೀಂ ವಿತರಣೆ ಮಾಡಿ ಗುಲಬರ್ಗಾದಿಂದ 10-30 ಪಿ.ಎಂ..ಕ್ಕೆಅಫಜಲಪೂರಕ್ಕೆ ಹೊರಟಿದ್ದು, ನಾಗದೇವತಿಯ ಗುಡಿಯಿಂದ ಸುಮಾರು 2 ಕಿ.ಮೀ ಮುಂದೆ ಹೋಗುತ್ತಿದ್ದಾಗ ರಾತ್ರಿ 11-00 ಗಂಟೆಯ ಸುಮಾರಿಗೆ ಎರಡು ಮೋಟಾರ ಸೈಕಲ್‌ಗಳ ಮೇಲೆ 6 ಜನರು, ನಮ್ಮ ವಾಹನದ ಮುಂದೆ ಬಂದು ನಿಲ್ಲಿಸಿ, ನನಗೆ ಮತ್ತು
ಡ್ರೈವರನಿಗೆ ಬಡಿಗೆಯಿಂದ ಕಾಲಿಗೆ ಮತ್ತು ತೊಡೆಗೆ ಹೊಡೆದು ಗುಪ್ತಗಾಯಪಡಿಸಿದ,  ಕ್ಯಾಶ ಬ್ಯಾಗ್‌ದಲ್ಲಿದ್ದ ಅಂದಾಜು 1,10,000/- ರೂ. ಬ್ಯಾಗನ್ನು ಕಸಿದುಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: