ಕಳವು ಪ್ರಕರಣ :
ಬ್ರಹ್ಮಪೂರ ಠಾಣೆ : ಶ್ರೀ ಶರಣಬಸಪ್ಪಾ ತಂದೆ ಚಂದ್ರಶೇಖರ ಕೋಬಾಳ ಸಾ|| ಶಹಾಬಾದ ತಾ|| ಚಿತ್ತಾಪೂರ ಗುಲಬರ್ಗಾ ರವರು, ದಿನಾಂಕ: 14-04-2011 ರಂದು ಮದ್ಯಾಹ್ನ ತಮ್ಮ ಹಿರೋ ಹೊಂಡಾ ಕೆಎ 32 ಜೆ 8851 ಅಂದಾಜು ಕಿಮ್ಮತ್ತು 20,000-00 ನೇದ್ದು, ಜವಳಿ ಕಾಂಪ್ಲೇಕ್ಸ ಎದುರುಗಡೆ ನಿಲ್ಲಿದಾಗ, ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ, ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಪ್ರಕರಣ :
ವಾಡಿ ಠಾಣೆ : ಶ್ರೀಮತಿ ಸುಭದ್ರಭಾಯಿ ಗಂಡ ಗೋವಿಂದ ಕೈತಾಪೂರಕರ ಸಾ|| ಮರಗಮ್ಮ ಗುಡಿ ಹತ್ತಿರ ವಾಡಿ ಗುಲಬರ್ಗಾ ರವರು ನನ್ನ ಮಗನಾದ ಹಣಮಂತ @ ಪಾಪ್ಯಾ ಇತನು ತಾನು ಪ್ರೀತಿಸಿದ ಹುಡುಗಿಗೆ ಮದುವೆಯಾಗುದಕ್ಕೆ ಬೇಡ ಅಂದಿದಕ್ಕೆ, ತಾನು ಕೊರ್ಟ ಮದುವೆಯಾಗಿ ಬೇರೆ ಕಡೆ ಮನೆ ಮಾಡಿಕೊಂಡು ವಾಸವಾಗಿದ್ದು ನಾನು ನನ್ನ ಮಗಳ ಮದುವೆ ಪ್ರಯುಕ್ತ ಮದುವೆಗೆ ಬರಲು ಹೇಳಿ ಬಂದಿರುತ್ತೆನೆ. ದಿನಾಂಕ : 17-06-2011 ರಂದು ಹಣಮಂತ ಇತನು ತನ್ನ ಹೆಂಡಿತ ಭಾರತಿ, ಅತ್ತೆ ಸುಶೀಲಭಾಯಿ ರವರೊಂದಿಗೆ ನಾವಿರುವ ಮನೆಗೆ ಬಂದು ನಮಗೆ ಮನೆಯಿಂದ ಹೊರಗಡೆ ಹಾಕಿ ಮತ್ತೆ ಮದುವೆಗೆ ಕರೆಯುವದಕ್ಕೆ ಬಂದಿದ್ದಿಯಾ ಅಂತಾ ನನಗೆ ಅವಾಚ್ಯವಾಗಿ ಬೈದು ನನಗೆ ಕೆಳಗೆ ಕೆಡವಿದಾಗ ನನ್ನ ಮತ್ತೊಬ್ಬ ಮಗ ಲಕ್ಷ್ಮಣ ಇತನು ಯಾಕೊ ತಾಯಿಗೆ ಹೊಡೆತಿಯಾ ಅಂದಿದಕ್ಕೆ ಹಣಮಂತ ಇತನು ಹೆಂಡತಿ ಮತ್ತು ಅತ್ತೆ ಪ್ರಚೋದನೆಯಿಂದ ಲಕ್ಷ್ಮಣನ ಕುತ್ತಿಗಿಗೆ ಹಿಡಿದು ಎದೆಗೆ ಜೋರಾಗಿ ಗುದ್ದಿದರಿಂದ ಲಕ್ಷ್ಮಣ ಇತನು ಸ್ಥಳದಲ್ಲಿಯೇ ಮರಣ ಹೊಂದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಮಾದನ ಹಿಪ್ಪರಗಾ ಠಾಣೆ: ಶ್ರೀಮಂತ ತಂದೆ ಶಾಂತಪ್ಪಾ ಹೊಸಳ್ಳಿ ಸಾ|| ಝಳಕಿ (ಬಿ) ರವರು ನಾನು ದಿನಾಂಕ: 15-06-2011 ರಂದು ಮನೆಯಲ್ಲಿದ್ದಾಗ ಚಿದಾನಂದ ಹೊಸಳಿ, ಮದುಕರನ, ಸುದಾಕರ, ಪ್ರಭಾಕರ, ಮಹಾದೇವಿ ಸಾ|| ಎಲ್ಲರೂ ಝಳಕಿ ರವರು ನನ್ನ ತಂದೆಗೆ ಮತ್ತು ನನ್ನ ಹೆಂಡತಿಗೆ ಜಗಳ ತೆಗೆದು ಕೈಯಿಂದ ಬಡಿಗೆಯಿಂದ ಹೊಡೆದು ಅವಾಚ್ಯವಾಗಿ ಬೈದು ಜೀವದ ಭಯ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment