Police Bhavan Kalaburagi

Police Bhavan Kalaburagi

Saturday, June 25, 2011

GULBARGA DISTRICT REPORTED CRIMES

ಇಸ್ಪೀಟ ಜೂಜಾಟ ಪ್ರಕರಣ :

ಶಹಾಬಾದ ನಗರ ಠಾಣೆ :
ದಿನಾಂಕ:24/06/2011 ರಂದು ಮದ್ಯಾಹ್ನ ನಾನು ಶ್ರೀ ವಿ.ಹೆಚ್. ವಿಜಯಕುಮಾರ ಪಿ.ಐ ಶಹಾಬಾದ ನಗರ ಠಾಣೆ ಮುತ್ತಗಾ ಗ್ರಾಮದಲ್ಲಿ ಅಂಬಿಗರ ಚೌಡಯ್ಯ ಚೌಕ ಹತ್ತಿರ ಕೆಲವು ಜನರು ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತಾ ಮಾಹಿತಿ ಬಂದೆ ಮೇರೆಗೆ ನಾನು ಮತ್ತು ಸಿಬ್ಬಂದಿಯವರು ಠಾಣೆಯಿಂದ ಹೊರಟು ಇಸ್ಪೀಟ ಆಡುತ್ತಿರುವ ಸ್ಥಳಕ್ಕೆ ಹೋಗಿ ನೋಡಲಾಗಿ ಕೆಲವು ಜನರು ಅಂದರ-ಬಾಹರ ಜೂಜಾಟ ಆಡುತ್ತಿರುವದು ಖಚಿತ ಪಡಿಸಿಕೊಂಡು ಇಸ್ಪೀಟ ಆಡುತ್ತಿರುವ ಮಾರುತಿ ತಂದೆ ಮಹಾದೇವ ಸಂಗಡ ಇನ್ನೂ 3 ಜನರನ್ನು ವಶಕ್ಕೆ ತೆಗದುಕೊಂಡು ಅವರಿಂದ ಇಸ್ಪೇಟ ಎಲೆಗಳು ಮತ್ತು ಒಟ್ಟು ನಗದು ಹಣ 1400/- ರೂಪಾಯಿಯನ್ನು ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ

ಶಹಾಬಾದ ನಗರ ಠಾಣೆ :
ಶ್ರೀ ಚಂದ್ರಾಯ ತಂದೆ ನಾಗಪ್ಪಾ ಬಡಿಗೇರ ಸಾ|| ನಾಲವಡಗಿ ತಾ|| ಶಹಾಪೂರ ರವರು ನಾನು ಮತ್ತು ಸುಬ್ಬಣ್ಣಾ, ಸುಮಂಗಲಾ, ಭಿಮಬಾಯಿ, ಮಂಜುನಾಥ, ಮಲ್ಲಮ್ಮಾ ಎಲ್ಲರೂ ಕೂಡಿಕೊಂಡು ನಾಲವಾಡಗಿ ಗ್ರಾಮದಿಂದ ಹೊನಗುಂಟಾ ಗ್ರಾಮದ ಕಡೆಗೆ ಹೊರಟಿದ್ದು ಶಹಾಬಾದದ ಜಗಜೀವನ ರಾಮ ಚೌಕ ಹತ್ತಿರ ಬರುತ್ತಿರುವಾಗ ಟಂ.ಟಂ. ಚಾಲಕನ ತನ್ನ ವಾಹನವನ್ನು ಅತೀವೇಗ ಮತ್ತು ನಿಷ್ಕಾಳಜಿತದಿಂದ ನಡೆಸುತ್ತಾ ಪಲ್ಟಿ ಮಾಡಿದ್ದರಿಂದ ನನಗೆ ಮತ್ತು ನನ್ನ ಜೋತೆಯಿದ್ದವರಿಗೆ ಸಣ್ಣ ಪುಟ್ಟ ರಕ್ತಗಾಯವಾಗಿದ್ದು ಇರುತ್ತದೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ:
ಬ್ರಹ್ಮಪೂರ ಠಾಣೆ :
ಶ್ರೀ ಯಶವಂತ ತಂದೆ ರುಕ್ಕಪ್ಪಾ ಗೋಳಾ ಸಾ|| ಭೀಮನಗರ ಜಗತ್ ಗುಲಬರ್ಗಾ ರವರು ನಾನು ರಾಜಕುಮಾರ ಮಾಡಗಿ ಇವರ ಅಂಗಡಿ ಸಂಖ್ಯೆ 2-481 ನೇದ್ದನ್ನು ಬಾಡಿಗೆಯಿಂದ ಪಡೆದುಕೊಂಡು ದಿನಾಂಕ: 31/05/2011 ರಂದು ಮುಕ್ತಾಯವಾಗುವದಿದ್ದು ದಿನಾಂಕ: 29/05/2011 ರಂದು ಸದರಿ ಅಂಗಡಿಯ ಅವಧಿಯನ್ನು ಮತ್ತೆ 11 ತಿಂಗಳ ವರೆಗೆ ಅಂಗಡಿಯ ಮಾಲಿಕ ರಾಜಕುಮಾರ ಮಾಡಗಿ ಇವರು ಮೃತಪಟ್ಟಿರುವದರಿಂದ ಅವರ ಹೆಂಡತಿಯವರಾದ ರಮಾದೇವಿಯವರು ಕರಾರು ನಂತೆ 11 ತಿಂಗಳ ವರೆಗೆ ಬಾಡಿಗೆಗೆ ಕೊಟ್ಟಿದ್ದು 10,000/- ರೂ ಮುಂಗಡವಾಗಿ ತಗೆದುಕೊಂಡು ಪ್ರತಿ ತಿಂಗಳ 1600/- ರೂಪಾಯಿಯಂತೆ ಬಾಡಿಗೆ ನಿಗದಿಪಡಿಸಿದ್ದು ಇರುತ್ತದೆ. ಬಾಡಿಗೆ ಅವಧಿ 30/04/2012 ರ ವರೆಗೆ ಇರುತ್ತದೆ. ಆದರೆ ದಿನಾಂಕ: 21/06/2011 ರಂದು ಮದ್ಯಾಹ್ನ ನಾನು ನನ್ನ ಅಂಗಡಿಯಲ್ಲಿ ಇರುವಾಗ ರಮಾದೇವಿ ಮಾಡಗಿ ಮತ್ತು ಅವರ ತಮ್ಮನಾದ ವಿನೋದಕುಮಾರ ಬಂದು ವಿನೋದಕುಮಾರ ಇತನು ನನ್ನನ್ನೂ ಅಂಗಡಿಯಿಂದ ಹೊರಗೆ ಕರೆದು ಏ ಯಶ್ವಂತ ನೀನು ನಮ್ಮ ಅಕ್ಕನ ಅಂಗಡಿ ಖಾಲಿ ಮಾಡು ನೀನು ಕೊಡುತ್ತಿರುವ ಬಾಡಿಗೆ ಬಹಳ ಕಡಿಮೆ ಇರುತ್ತದೆ ಅಂತಾ ಅಂದಾಗ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: