ಅಪಘಾತ ಪ್ರಕರಣ :
ಕಮಲಾಪೂರ ಠಾಣೆ : ಶ್ರೀಮತಿ ಮಲ್ಲಮ್ಮ ಗಂಡ ಹನಮಂತರಾಯ ಪಂಡರಗೆರಿ ಸಾಃ ಉಪಳಾಂವ ಗುಲಬರ್ಗಾ ರವರು ನಾನು, ನನ್ನ ಮಕ್ಕಳಾದ ಶಾಂತಬಾಯಿ, ನಾಗಮ್ಮ, ಸಚಿನ, ಹಾಗು ಸಂಬಂಧಿಕರಾದ ಮಲ್ಲಮ್ಮ ಎಲ್ಲರೊ ಕೊಡಿಕೊಂಡು ಡೊಂಗರಗಾಂವ ಗ್ರಾಮಕ್ಕೆ ಬಂದು ಪುನಃ ನಮ್ಮೂರಿಗೆ ಕ್ರೋಜರ ಜೀಪ ನಂ. ಎಪಿ- 27, ಎಕ್ಸ: 6467 ನೇದ್ದರಲ್ಲಿ ಕುಳಿತುಕೊಂಡು ಬರುತ್ತಿರುವಾಗ ಕಮಲಾಪೂರದ ಸಮೀಪ ಜೀಪ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ಜೀಪ ಅಪಘಾತ ಪಡಿಸಿದ್ದರಿಂದ ನಮ್ಮೆಲರಿಗೆ ರಕ್ತಗಾಯ ಮತ್ತು ಗುಪ್ತಗಾಯಗಳಾಗಿರುತ್ತೆವೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರರಕಣ :
ಶಹಾಬಾದ ನಗರ ಠಾಣೆ : ಶ್ರೀ ಹಾಜಿ ಕರೀಮ ತಂದೆ ಮೊಹ್ಮದ ಸಾಲರ ಸಾ|| ಎ.ಬಿ.ಎಲ್. ಕಾಲೋನಿ ಶಹಾಬಾದ ರವರು ನನ್ನ ಅಣ್ಣನ ಮಗ ಅಸ್ಲಾಮ ತಂದೆ ಮಹಿಬೂಬಸಾಬ ಮತ್ತು ಯಕಬಾಲ ತಂದೆ ಶೇಖ ಸೈಯದ ಇವರು ಮೊಟಾರ ಸೈಕಲ ನಂ:ಕೆಎ/32/ಉ-9845 ನೇದ್ದರ ಮೇಲೆ ಕಚಗಡದಿಂದ ಶಹಾಬಾದ ಕ್ಕೆ ವೇರಹೌಸ ಹತ್ತಿರ ಬರುತ್ತಿರುವಾಗ ಎದುರುಗಡೆಯಿಂದ ಒಂದು ಜೀಪ ನಂ: ಎಮ್.ಹೆಚ್.14/ಜಿ-3832 ನೇದ್ದರ ಚಾಲಕನು ತನ್ನ ಜೀಪನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಡಿಕ್ಕಿ ಹೊಡೆದು ಅಸ್ಲಾಮನಿಗೆ ಮತ್ತು ಇಕಬಾಲನಿಗೆ ರಕ್ತಗಾಯವಾಗಿರುತ್ತೆವೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳ್ಳತನ ಪ್ರಕರಣ :
ಚಿತ್ತಾಪೂರ ಠಾಣೆ : ಶ್ರೀ ಎಮ್. ನರೇಂದ್ರ ಕುಮಾರ ತಂದೆ ಮಾರಯ್ಯಾ ಸಹಾಯಕ ಇಂಜನೀಯರ ಸಣ್ಣ ನೀರಾವರಿ ಉಪವಿಭಾಗ ಗುಲಬರ್ಗಾ ರವರು ಚಿತ್ತಾಫುರ ತಾಲೂಕಿನ ಕದ್ದರಗಿ ಗ್ರಾಮದ ಹತ್ತಿರ ಸಣ್ಣ ನೀರಾವರಿ ಇಲಾಖೆಯ ಗೋದಾಮಿನಲ್ಲಿ ಶೇಖರಿಸಿ ಇಟ್ಟಿದ್ದ ಬ್ಯಾರೇಜುಗಳ ಗೇಟುಗಳು ಮತ್ತು ಇತರೆ ಸಾಮಾನುಗಳು ಒಟ್ಟು 5,06,704/-ರೂ ಕಿಮ್ಮತ್ತಿನ ಮಾಲು ಯಾರೋ ಅಪರಿಚಿತ ಕಳ್ಳರು ಶೆಟರ ಬಾಗಿಲು ತೆಗೆದು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಶಹಾಬಾದ ನಗರ ಠಾಣೆ :: ಶ್ರೀ ಶೇಖ ರಫಿಕ ತಂದೆ ಇಮಾಮಸಾಬ ಸಾ|| ಎ.ಬಿ.ಎಲ್. ಕಾಲೋನಿ ಹೌಸಿಂಗ ಸೂಸೈಟಿ ಶಾಂತನಗರ ಭಂಕೂರ ರವರು ನಾನು ಕ್ರಾಸ ಹತ್ತಿರವಿರುವಾಗ ಚಿತ್ತಾಪೂರ ಕಡೆಯಿಂದ ಸಿಮೆಂಟ ತುಂಬಿದ ಲಾರಿ ಕೆ.ಎ-28/ಬಿ-7554 ನೇದ್ದು ತಂದು ರೋಡಿನ ಪಕ್ಕದಲ್ಲಿ ನಿಂದರಿಸಿ ಗುರಲಿಂಗಪ್ಪಾ ಇವರ ಹೊಟೆಲದಲ್ಲಿ ಚಹಾ ಕುಡಿದರು. ಆಗ ಲಾರಿಯ ಕ್ಲಿನರನಾದ ಮೊಹ್ಮದ ಸಾ|| ಮಳಖೆಡ್ ಇತನು ಲಾರಿಯ ಹಿಂದಿನ ಟೈರುಗಳ ಹವಾ ಇದ್ದ ಬಗ್ಗೆ ನೊಡುತ್ತಿದ್ದು, ಲಾರಿಯ ಚಾಲಕನು ಹಿಂದೆ ಮುಂದೆ ನೋಡದೆ ಲಾರಿ ಚಾಲು ಮಾಡಿ ನಿಷ್ಕಾಳಜಿತನದಿಂದ ಚಲಾಯಿಸಿದ್ದರಿಂದ ಲಾರಿ ಕ್ಲಿನರ್ ನ ತಲೆಯ ಮೇಲೆ ಹಾಯ್ದು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಜಾಹೀದ ತಂದೆ ಮಕಬುಲ್ ಹಾಸಮಿಯಾ ಸಾಃ ಅಮಸೀನ ಜಿಲ್ಲಾಃ ಅಕ್ಬಾರಪೋಡಾ ರಾಜ್ಯ : ಉತ್ತರ ಪ್ರದೇಶ ಸದ್ಯ ಕಾಂದಿವಾಲಿ , ಲೋಕಂಡವಾಲೆ ಬಿಸ್ಮಿಲ್ಲಾ ಚಾಳ ಮುಂಬೈ ಮಹಾರಾಷ್ಟ್ರ ರವರು ಗೆಳೆಯರಾದ ಪಿರೋಜ ಸಾ|| ಬಬಲಾದ (ಎಸ್) ಗ್ರಾಮದಲ್ಲಿ ದಿ|| 25/6/11 ರಂದು ಮದುವೆ ಇದ್ದ ಪ್ರಯುಕ್ತ ನಾನು ಮತ್ತು ನನ್ನ ಗೆಳೆಯರಾದ ದೀಪಕ ತಂದೆ ದಗಡುಖರಾತ ಮತ್ತು ಅತ್ತರ ತಂದೆ ಅಕ್ಬರ ಶೇಖ ಕೂಡಿಕೊಂಡು ಗುಲಬರ್ಗಾಕ್ಕೆ ಬಂದು ದಿನಾಂಕ: 25/6/11 ರಂದು 12:30 ಪಿಎಮಕ್ಕೆ ನಾನು & ದೀಪಕ ಮತ್ತು ಅತ್ತರ ಕೂಡಿಕೊಂಡು ಗುಲಬರ್ಗಾ ಕೇಂದ್ರ ಬಸ್ಸ ಸ್ಟ್ಯಾಂಡದ ಎದುರು ಆಟೋ ನಂ ಕೆಎ 32 ಎ- 8147 ನೇದ್ದರಲ್ಲಿ ಕುಳಿತುಕೊಂಡು ಬಬಲಾದ (ಎಸ್) ಗ್ರಾಮಕ್ಕೆ ಲಗ್ನಕ್ಕೆ ಹೋರಟಾಗ ಹೀರಾಪೂರ ರೇಲ್ವೆ ಗೇಟ ಸ್ವಲ್ಪ ಮುಂದೆ ಹೋಗುತ್ತಿದ್ದಾಗ ಎದುರಿನಿಂದ ಟಂ ಟಂ ನಂಬರ ಕೆಎ 32 ಬಿ 974 ನೇದ್ದರ ಚಾಲಕ ನಿಂಗಣ್ಣ ಸಾ|| ಹಿತ್ತಲಸಿರೂರ ಇತನು ತನ್ನ ವಾಹನವನ್ನು ಅತೀವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಅಪಘಾತ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಗ್ರಾಮೀಣ ಠಾಣೆ :
ಶ್ರೀ ಕಲ್ಯಾಣಿ ತಂದೆ ಶಿವಪ್ಪಾ ಪೂಜಾರಿ ಸಾಃ ಗುಳೋಳ್ಳಿ ಸದ್ಯ ಸಾವಳಗಿ (ಬಿ) ರವರು ನನ್ನ ಸ್ವಂತ ಊರು ಗುಳೋಳ್ಳಿ ಗ್ರಾಮ ವಿದ್ದು ಅಲ್ಲಿ ನಾವು 5 ಜನರು ಅಣ್ಣ ತಮ್ಮಂದಿರಿದ್ದು ಸುಮಾರು 25 ವರ್ಷದ ಹಿಂದೆ ಎಲ್ಲರೂ ಆಸ್ತಿಯನ್ನು ಪಾಲುಕೊಂಡಿದ್ದು . ನನ್ನ ಆಸ್ತಿಯನ್ನು ಮಾರಿ ಸಾವಳಗಿ ಗ್ರಾಮದಲ್ಲಿ 15 ಎಕ್ಕರೆ , 8 ಗುಂಟೆ ಜಮೀನನ್ನು ಖರೀದಿ ಮಾಡಿದ್ದು, ಇದರಲ್ಲಿ ಪಾಲು ಕೊಡುವಂತೆ ನನ್ನ ತಮ್ಮಂದಿರು ಹಾಗೂ ತಮ್ಮನ ಮಕ್ಕಳು ತಕರಾರು ಮಾಡುತ್ತ ಬರುತ್ತಿದ್ದು ದಿನಾಂಕ 26/6/2011 ರಂದು ರಾತ್ರಿ ಮನೆಯ ಅಂಗಳದಲ್ಲಿ ಮಲಗಿಕೊಂಡಾಗ ಮಾಳಪ್ಪಾ , ಸೀನಪ್ಪಾ , ಸಾಯಿಬಣ್ಣ , ಅಂಬಾರಾಯ , ಗಂಗಪ್ಪಾ , ಕಾಶಿನಾಥ , ಶಂಕರ , ಹಾಗೂ ಬಾಬು ವಚನೆಗೋಳ , ಸುಂದರ ಕಾಂತ ರವರ ಮಗ ಎಲ್ಲರೂ ಕೂಡಿ ಜೀಪ ನಂ; ಕೆಎ 32 ಎಮ 856 ನೇದ್ದರಲ್ಲಿ ಬಂದವರೆ ಅವಾಚ್ಯ ಶಬ್ದಗಳಿಂದ ಬೈದು ಆಸ್ತಿಯಲ್ಲಿ ಭಾಗ ಕೊಡು ಅಂತಾ ನನ್ನನ್ನು ಜೀಪಿನಲ್ಲಿ ಕುಡಿಸಿಕೊಂಡು ಅಪಹರಣ ಮಾಡಿ ಹೊಡೆಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment