Police Bhavan Kalaburagi

Police Bhavan Kalaburagi

Tuesday, June 28, 2011

GULBARGA DISTRICT REPORTED CRIMES

ಅಪಹರಣ ಪ್ರಕರಣ :
ಮಹಿಳಾ ಠಾಣೆ :
ಶ್ರೀ ರಾಮರಾವ ತಂದೆ ನಾರಯಣರಾವ ಬಿರಾದಾರ ಸಾ|| ಶಕ್ತಿ ನಗರ ಗುಲಬರ್ಗಾ ರವರು ನನ್ನ ಮನೆಯಲ್ಲಿ ಕಾರ ಡೈವರ ಅಂತಾ ಕೇಲಸ ಮಾಡುತ್ತಿದ್ದ ಸಂಜುಕುಮಾರ ತಂದೆ ಬಾಬುರಾವ ನಂದೂರ ದಿನಾಂಕ: 03-05-2011 ರಂದು ನಾವು ಮನೆಯಲ್ಲಿ ಇರದೆ ಇದ್ದಾಗ ಮಗಳಾದ ಕು|| ರೇಖಾ ಇವಳನ್ನು ಜಬರ ದಸ್ತಿಯಿಂದ ಹೆದರಿಸಿ ಅಪಹರಣ ಮಾಡಿಕೊಂಡು ಹೋಗಿದ್ದು ಈ ವಿಷಯಕ್ಕೆ ಸಂಬಂದಿಸಿದಂತೆ ಅವರ ಅಣ್ಣನಾದ ರಾಜು ಇತನಿಗೆ ವಿಚಾರಿಸಿಸುವದಕ್ಕೆ ಹೋದಾಗ ಅವಾಚ್ಯ ಶಬ್ದಗಳಿಂದ ಬೈದು ಪೊಲೀಸ್ ಠಾಣೆಗೆ ಹೋಗಿ ಎನಾದರು ಅರ್ಜಿ ಅಥವಾ ದೂರು ಕೊಟ್ಟರೆ ನಿಮ್ಮ ಮಗಳ ಜೀವಕ್ಕೆ ಅಪಾಯ ಮಾಡುತ್ತೆನೆ ಅಂತಾ ಹೇದರಿಕೆ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾತಿ ನಿಂದೆನ ಪ್ರರಕಣ :

ಚಿಂಚೋಳಿ ಠಾಣೆ :
ಶ್ರೀ.  ಕೃಷ್ಣಪ್ಪಾ ತಂದೆ ರಾಮಣ್ಣಾ ದಂಡಿನ್ ಸಾಃ ತುಮಕುಂಟಾ ರವರು ನಾನು ನಿನ್ನೆ ಹೊರಡಗೆಯಿಂದ ಮನೆಯ ಕಡೆಗೆ ಹೊರಟಾಗ ಜಹೀರ ಪಟೇಲ ಇತನು ನನಗೆ ರಸ್ತೆಯಲ್ಲಿ ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆ ಮಾಡುತ್ತಿದ್ದಾಗ ಬಿಡಿಸಲು ಬಂದ ನನ್ನ ಅಳಿಯನಾದ ಬಸವರಾಜನಿಗೆ ಜಹೀರ ಪಟೆಲ್ ತಮ್ಮನಾದ ಶರೀಪ ಪಟೇಲ್ ಹೊಡೆದು ರಕ್ತಗಾಯ ಮಾಡಿರುತ್ತಾನೆ ಮತ್ತು ನನಗೆ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರರಕಣ ದಾಖಲಾಗಿದೆ

No comments: