Police Bhavan Kalaburagi

Police Bhavan Kalaburagi

Wednesday, June 29, 2011

GULBARGA DISTRICT REPORTED CRIMES

ಹಲ್ಲೆ ಪ್ರಕರಣ :

ಗ್ರಾಮೀಣ ಠಾಣೆ : ಶ್ರೀಮತಿ ಗುಂಡಮ್ಮಾ ಗಂಡ ಅಂಬಾರಾಯ ಟೆಂಗಳಿ ಸಾಃ ಹಮಾಲವಾಡಿ ಗುಲಬರ್ಗಾರವರು ನಮ್ಮ ಓಣಿಯಲ್ಲಿಯ ವಿದ್ಯತ್ ಸರಭರಾಜಿನಲ್ಲಿ ತೊಂದರೆಯಾಗಿದ್ದರಿಂದ ಓಣಿಯಲ್ಲಿರುವ ಮನೆ ಮನೆಗೆ 10 ರೂ. ಅಂತೆ ಸಂಗ್ರಹಿಸುವಾಗ ನಮ್ಮ ಪಾಲಿನ ಹಣ ತೆಗೆದುಕೊಳ್ಳಿರಿ ಅಂತ ಹೇಳಿದಕ್ಕೆ ಸಿದ್ದು ಗೌಡ ಇತನು ಅವಾಚ್ಯ ಶಬ್ದಗಳಿಂದ ಬೈಯುತ್ತ ಮಾನಭಂಗ ಮಾಡಲು ಪ್ರಯತ್ನಿಸಿದ್ದು, ಬಿಡಿಸಲು ಬಂದ ನನ್ನ ಗಂಡನನ್ನು ಮತ್ತು ನನಗೆ ನಿಂಗಮ್ಮ ಜಮಾದಾರ ಮತ್ತು ಸುರೇಶ ಇವರು ಹೊಡೆಬಡೆ ಮಾಡಿರುತ್ತರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರರಕಣ ದಾಖಲಾಗಿದೆ.

ಅಪಘಾತ ಪ್ರಕರಣ :

ಮುದೋಳ ಠಾಣೆ : ಶ್ರೀಮತಿ ಮೊಗಲಮ್ಮ ಗಂಡ ದಸ್ತಪ್ಪಾ ಹಯ್ಯಾಳ ರವರು ನನ್ನ ಮಗನಾದ ಹುಸನೆಪ್ಪಾ ಇತನು ಮತ್ತು ಸಂಗಡ ಇನ್ನೂ 3 ಜನರು ಕೂಡಿಕೊಂಡು ಟ್ರಾಕ್ಟರ ನಂ: ಕೆಎ 32 ಟಿ-9104 ನೇದ್ದರಲ್ಲಿ ಕಳವಿ ಹುಲ್ಲು ತುಂಬಿಕೊಂಡು ಬುರಂಪೂರ ಗ್ರಾಮದಿಂದ ದಿಂದಮಾದ್ವಾರ ಗ್ರಾಮದ ಕಡೆಗೆ ಹೊರಟಿದ್ದಾಗ ಅಡಕಿ ಗ್ರಾಮದ ರಸ್ತೆಯಲ್ಲಿ ಟ್ರಾಕ್ಟರ ಚಾಲಕನು ತನ್ನ ವಾಹನವನ್ನು ನಿಷ್ಕಾಳಜಿತನದಿಂದ ನಡೆಸುತ್ತಾ ಬರುತ್ತಿರುವಾಗ ಹುಸೆನಪ್ಪಾ ಇತನು ಟ್ರಾಕ್ಟರದಿಂದ ಬಿದ್ದಿದ್ದು ಉಪಚಾರ ಪಳಕಾರಿಯಾಗದೇ ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಲಿಗೆ ಪ್ರಕರಣ :

ಬ್ರಹ್ಮಪೂರ ಠಾಣೆ :
ಶ್ರೀ
ಅಮರಮೋದಿ ತಂದೆ ಪರಮೇಶ್ವರ ಮೋದಿ ಸಾ|| ಮಹಾಲಕ್ಷ್ಮಿ ಲೇಔಠ ಗುಲಬರ್ಗಾ ರವರು ನಾನು ಮತ್ತು ನನ್ನ ಸ್ನೇಹಿತರು ಕೂಡಿಕೊಂಡು ಎನ.ವಿ ಕಾಲೇಜು ಎದುರುಗಡೆ ನಿಲ್ಲಿಸಿದ ಪಾನಪೂರಿ ಬಂಡಿಯಲ್ಲಿ ಪಾನಿಪೂರಿ ತಿನ್ನುತ್ತಿರುವಾಗ ಯಾರೋ ಒಬ್ಬನು ಬಂದು ನಮ್ಮ ತಂಗಿಗೆ ಚುಡಾಯಿಸುತ್ತಿಯಾ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ ನನ್ನ ಕೊರಳಿಗೆ ಕೈ ಹಾಕಿ ಕೊರಳಿದ್ದ 60,000-00 ಮೌಲ್ಯದ ಬಂಗಾರದ ಲಾಕೇಟ ಜಬರದಸ್ತಿಯಿಮದ ಕಸಿದುಕೊಂಡು ಕೆಎ 32 ಡಬ್ಲೂ 9436 ಅಥವಾ ಕೆಎ 32 ವಿ- 9436 ದ್ವಿ ಚಕ್ರ ವಾಹನದ ಮೇಲೆ ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

No comments: