Police Bhavan Kalaburagi

Police Bhavan Kalaburagi

Friday, June 24, 2011

GULBARGA DISTRICT REPORTED CRIMES

ಆಯುಧ ಪ್ರಕರಣ :

ನರೋಣಾ ಠಾಣೆ:
ಶ್ರೀ ಅನೀಲ ತಂದೆ ಹಣಮಂತ ರಂಜಾರೇ ಸಾ|| ಕಡಗಂಚಿ ರವರು ನಾನು ದಿನಾಂಕ: 23-06-2011 ರಂದು ಸಾಯಂಕಾಲ 07-30 ಗಂಟೆಗೆ ಕಡಗಂಚಿಯ ಕ್ರಾಸ ಹತ್ತಿರ ರೋಡಿನ ಹತ್ತಿರ ಇದ್ದಾಗ ಶ್ರೀಶೈಲ್ ತಂದೆ ಬಸವರಾಜ ಅಲ್ದಿ ಸಾ|| ಕಡಗಂಚಿ ಇತನು ತನ್ನ ಕೈಯಲ್ಲಿ ಒಂದು ಪಿಸ್ತೂಲ ಹಿಡಿದು ಕೊಂಡು ಹೋಗಿ ಬರುವ ಜನರಿಗೆ ಕೊಲೆ ಮಾಡುವ ಬೇದರಿಕೆ ಹಾಕುತ್ತಿದ್ದು, ಇದನ್ನು ಕಂಡು ಅಲ್ಲೆ ಇರುವ 10 ರಿಂದ 15 ಜನರು ಗುಂಪುವೊಂದು ಶ್ರೀಶೈಲ್ ನ ಹತ್ತಿರ ಬಂದವರೆ ಅವನಿಗೆ ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ :

ಆಳಂದ ಠಾಣೆ :ಶ್ರೀ ದಯಾನಂದ ತಂದೆ ಶ್ರೀಪತರಾವ ಸಾ|| ರೇವಣಸಿದ್ದೇಶವರ ಕಾಲೋನಿ ಆಳಂದ ರವರು ನಾನು ದಿನಾಂಕ:23-06-20111 ರಂದು ಬೆಳಿಗ್ಗೆ 09-00 ಗಂಟೆಯ ಸುಮಾರಿಗೆ ನನ್ನ ಬಂಗಾರದ ಅಂಗಡಿಗೆ ಬಂದು ಬಂಗಾರದ ಅಂಗಡಿಯ ಶೇಟ್ಟರ ಕೀಲಿ ತೆಗೆಯುವ ಕುರಿತು ನನ್ನ ಜೋತೆಯಲ್ಲಿ ತಂದಿರುವ ಹಸಿರು ಬಣ್ಣದ ಬ್ಯಾಗನಲ್ಲಿ 92 ಗ್ರಾಂ ಬಂಗಾರದ ಆಭರಣಗಳು ಮತ್ತು ನಗದು ಹಣ 9400-00 ರೂಪಾಯಿಗಳು ಹೀಗೆ ಒಟ್ಟು 221000-00 ಮೌಲ್ಯದ್ದು ಇರುವ ಬ್ಯಾಗನ್ನು ಕೆಳಗಡೆ ಇಟ್ಟು ಶೇಟ್ಟರ ತೆಗೆಯುತ್ತಿರುವಾಗ ಯಾರೋ ಇಬ್ಬರು ಕಳ್ಳರು ಬ್ಯಾಗ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: