ಹಲ್ಲೆ ಪ್ರಕರಣ :
ಆಳಂದ ಠಾಣೆ :
ಶ್ರೀಮತಿ, ಭೀಮಭಾಯಿ ಗಂಡ ಗುರುಬಸಪ್ಪಾ ನಡಗೇರಿ ರವರು ದಿನಾಂಕ: 09-06-2011 ರಂದು ನನ್ನ ಮನೆ ಸಮೀಪ ರಮೇಶ ಭದ್ರೆ ಶರಣಪ್ಪಾ ನಡಗೇರಿ ಮತ್ತು ತುಳಜರಾಮ ರವರು ಬಂದು ಹಳೆ ದ್ವೇಶದ ಸಂಬಂದ ಅವಾಚ್ಯ ಶಬ್ದಗಳಿಂದ ಬೈದು ಚಾಕುವಿನಿಂದ ಹೊಟ್ಟೆಗೆ ಚುಚ್ಚಿ ರಕ್ತಗೊಳಿಸಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ಪ್ರಕರಣ :
ಚೌಕ ಠಾಣೆ :
ಶ್ರೀ
ಮಹಮದ ನವೀದ ತಂದೆ ಮಹಮದ ನಿಜಾಮೊದ್ದಿನ ಬಂದೂಕವಾಲ ಸಾ|| ಗುಲಬರ್ಗಾ ರವರು ನನ್ನ ತಮ್ಮನಾದ
ಸಾಜೀದ ಇತನು ದಿನಾಂಕ: 10-06-2011 ರಂದು ನಾವೆಲ್ಲರೂ ಮನೆಯಲ್ಲಿದ್ದಾಗ
ನೆಹರು ಗಂಜನಲ್ಲಿರುವ ವರ್ಕ ಶಾಪ್ಗೆ ಹೋಗಿ ಬರುತ್ತೆನೆಂದು ಹೇಳಿ ಹೋದವನು ಇಲ್ಲಿಯವರೆಗೆ ಮನೆಗೆ ಬಂದಿರುವದಿಲ್ಲ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment