Police Bhavan Kalaburagi

Police Bhavan Kalaburagi

Wednesday, July 13, 2011

GULBARGA DIST. MURDER CASE ACCUSED PERSONS ARRESTED


ಕಳೆದ ಮೂರು ತಿಂಗಳ ಹಿಂದೆ ಬರ್ಬರ ಹತ್ಯೆ ಮಾಡಿ ನಾಪತ್ತೆಯಾದ ಆರೋಪಿಗಳ ಬಂದನ

ಶ್ರೀ ಗುರಯ್ಯ ತಂದೆ ಪಂಚಯ್ಯ ಹಿರೇಮಠ ರವರು ಸಾ|| ಅಫಜಲಪೂರ ರವರು ನನ್ನ ಮಗನಾದ ವೀರಭದ್ರಯ್ಯ ಇತನಿಗೆ ಕೆಲವು ರೌಡಿ ಜನರು ಗುಂಪು ಕಟ್ಟಿಕೊಂಡು ಹರಿತವಾದ ಅಯುಧದಿಂದ ಹೊಡೆದು ಕೊಲೆ ಮಾಡಿ ರಮೇಶ ಪದಕಿ ಹೊಲದ ಬಾಂದಾರಿಯ ರೋಡ ಎಡಭಾಗದ ಮುಳ್ಳಿನಲ್ಲಿ ಬಿಸಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು . ಮಾನ್ಯ ಎಸ.ಪಿ ಸಾಹೇಬ ಗುಲಬರ್ಗಾ ರವರ ಮತ್ತು ಮಾನ್ಯ ಹೆಚ್ಚುವರಿ ಎಸ.ಪಿ ಸಾಹೇಬರ ಮಾರ್ಗದರ್ಶನ ಮೇರೆಗೆ ಮತ್ತು ಎಸ.ಬಿ ಸಾಂಬಾ ಆಳಂದ ಡಿ.ಎಸ.ಪಿ ರವರ ನೇತ್ರತ್ವದಲ್ಲಿ ಅಪಜಲಪೂರ ವೃತ್ತ ನಿರೀಕ್ಷಕರಾದ ಕೆ. ರಾಜೇಂದ್ರ ರವರು ತನಿಖೆ ವಹಿಸಿಕೊಂಡು ಕೊಲೆ ಮಾಡಿದ ಆರೋಪಿಗಳಾದ ಶಿವ @ ಶಿವಾನಂದ ತಂದೆ ಕಲ್ಲಪ್ಪಾ ಪಾಟೀಲ್ ಸಾ|| ಗುಟ್ಯಾಳ ತಾ|| ಇಂಡಿ ಹಾ||ವ|| ಅಫಜಲಪೂರ,ಸಿದ್ದರಾಮ @ ಸಿದ್ದು ತಂದೆ ನಾಗಣ್ಣ ನಿಂಬಾಳ ಸಾ|| ಕಾರ ಬೋಸಗಾ ಹಾ|| ವ|| ಅಫಜಲಪೂರ, ಗಣೇಶ ತಂದೆ ಬಸವರಾಜ ರಾಂಪೂರೆ ಸಾ|| ಅಫಜಲಪೂರ, ನಾಗೇಶ ತಂದೆ ಹಣಮಂತ ಬಾಗೆವಾಡಿ ಸಾ|| ಅಫಜಲಪೂರ, ಪ್ರೇಮಕುಮಾರ ತಂದೆ ಸುಭಾಶ ಕಡಣಿ ಸಾ|| ಅಫಜಲಪೂರ ಸಂಜಯಕುಮಾರ ತಂದೆ ಅವಣ್ಣ ಬಂಗಿ ಸಾ|| ಅಫಜಲಪೂರ, ಭೀಮು @ ಭೀಮಾಶಂಕರ ತಂದೆ ಮಹಾದೇವ ಈರಶೇಟ್ಟಿ ಸಾ|| ಕಾಸಲಿಂಗ ಜೇವೂರ ಹಾ|| ವ|| ಅಫಜಲಪೂರ ಇಲ್ಲರೆಲ್ಲರೂ ಇರುವಿಕೆಯ ಮಾಹಿತಿ ಪಡೆದುಕೊಂಡು ಕೊಲೆ ಮಾಡಿದವರನ್ನು ವಶಕ್ಕೆ ತೆಗೆದಕೊಂಡಿದ್ದು ಇರುತ್ತದೆ. ಪತ್ತೆ ಕಾರ್ಯದಲ್ಲಿ ತೊಡಿಗದ್ದ ಅಫಜಲಪೂರ ವೃತ್ತ ನಿರೀಕ್ಷಕರಾದ ಕೆ. ರಾಜೇಂದ್ರ , ಪಿ.ಎಸ.ಐ ಶ್ರೀ ಮಂಜುನಾಥ ಎಸ. ಹಾಗು ಸಿಬ್ಬಂದಿಯವರಾದ ರಾಮಚಂದ್ರ ಹೆಚ.ಸಿ, ಮಾರುತಿ ಹೆಚಸಿ, ಸಾಯಿಬಣ್ಣ , ನರಸರೆಡ್ಡಿ ಮತ್ತು ಅರವಿಂದ ಎಲ್ಲರಿಗೂ ಮಾನ್ಯ ಎಸ.ಪಿ ಸಾಹೇಬ ಗುಲಬರ್ಗಾ ರವರು ಪತ್ತೆ ಕಾರ್ಯ ಮಾಡಿದಕ್ಕೆ ಪ್ರಶಂಸಿರುತ್ತಾರೆ . ತನಿಖೆ ಮುಂದುವರೆದಿರುತ್ತದೆ .

No comments: