Police Bhavan Kalaburagi

Police Bhavan Kalaburagi

Friday, July 15, 2011

GULBARGA DIST REPORTED CRIMES

ಆಕಸ್ಮಿಕ ಸಾವು :

ಗ್ರಾಮೀಣ ಪೊಲೀಸ ಠಾಣೆ: ಶ್ರೀ ಸಂತೋಷ ತಂದೆ ರುಕ್ಕಯ್ಯಾ ಕಲಾಲ ಸಾಃ ಸಿಂದಗಿ ತಾಃ ಜಿಃ ಗುಲಬರ್ಗಾ ರವರು ನನ್ನ ತಂಗಿಯಾದ ಸುಶಿಲಾಬಾಯಿ ದಿನಾಂಕ 13/7/2011 ರಂದು 10 ಎಎಮ್ ಕ್ಕೆ ಹೊಲಕ್ಕೆ ಕಾಯಿಪಲ್ಲೆ ತರಲು ಹೋಗಿದ್ದು ಸಾಯಾಂಕಾಲ ಆದರು ಮನೆಗೆ ಬರದೆ ಇರುವದರಿಂದ ನಮ್ಮ ತಂದೆ ತಾಯಿ ಹಾಗೂ ತಮ್ಮ ಇವರೆಲ್ಲರೂ ಹುಡುಕಾಡಿದರು ಸಿಕ್ಕಿರುವದಿಲ್ಲ ದಿನಾಂಕ 14/7/2011 ರಂದು ಮುಂಜಾನೆ ನಮ್ಮ ತಮ್ಮನಾದ ರವಿ ಇತನು ನಮ್ಮ ಹೊಲಕ್ಕೆ ಹೋಗಿದ್ದು ಹೊಲದಲ್ಲಿಯ ಭಾವಿಯ ಹತ್ತಿರ ಹೋಗಿ ನೋಡಲಾಗಿ ಭಾವಿಯಲ್ಲಿ ಸುಶಿಲಾಬಾಯಿ ಇವಳ ಶವ ತೆಲುತ್ತಿರುವದನ್ನು ನೋಡಿ ನನಗೆ ಹಾಗೂ ನಮ್ಮ ತಂದೆ ತಾಯಿಗೆ ಫೋನ ಮಾಡಿ ತಿಳಿಸಿದ್ದು ನಾವು ಹೋಗಿ ನೋಡಲಾಗಿ ಸದರಿ ಶವವು ನಮ್ಮ ತಂಗೆಯಾದ ಸುಶಿಲಾಬಾಯಿ ಇವಳದ್ದು ಭಾವಿಯಲ್ಲಿ ನೀರು ತರಲು ಹೋಗಿದ್ದು ಕಾಲು ಜಾರಿ ಆಕಸ್ಮಿಕವಾಗಿ ಭಾವಿಯಲ್ಲಿ ಬಿದ್ದು ನೀರು ಕುಡಿದು ಉಸಿರು ಗಟ್ಟಿ ಮೃತ ಪಟ್ಟಿರಬಹುದು ಅವಳ ಸಾವಿನಲ್ಲಿ ನಮಗೆ ಯಾರೆ ಮೇಲೆ ಸಂಶಯವಿರುವದಿಲ್ಲ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: